ಮಸಾನ್ ಹೋಲಿ (ಸ್ಮಶಾನ/ಭಸ್ಮ ಹೋಲಿ)

ಫಾಲ್ಗುಣ ಮಾಸದ ಪೌರ್ಣಿಮೆಯಂದು ಅಚರಿಸುವ ಹೋಲಿ ಹಬ್ಬಕ್ಕೂ ನಾಲ್ಕು ದಿನಗಳ ಮಂಚೆಯೇ, ಮೋಕ್ಷನಗರ ಎಂದೇ ಖ್ಯಾತವಾಗಿರುವ ದೇಶದ ಆಧ್ಯಾತ್ಮಿಕ ರಾಜಧಾನಿ ಕಾಶಿಯಲ್ಲಿ ರಂಗ್ ಭರಿ ಏಕಾದಶಿಯಂದು ಆರಂಭವಾಗಿ ನಾಲ್ಕೈದು ದಿನಗಳ ಕಾಲ ಅತ್ಯಂತ ವಿಶಿಷ್ಟವಾಗಿ ಮಣಿಕರ್ಣಿಕಾ ಘಾಟ್ ನಲ್ಲಿ ಆಚರಿಸಲ್ಪಡುವ ಸ್ಮಶಾನ (ಮಸಾನ್) ಹೋಲಿ/ಭಸ್ಮ ಹೋಲಿಯ ಸವಿವರಗಳು ಇದೋ ನಿಮಗಾಗಿ… Read More ಮಸಾನ್ ಹೋಲಿ (ಸ್ಮಶಾನ/ಭಸ್ಮ ಹೋಲಿ)

ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವಷ್ಟೇ ಅಲ್ಲದೇ, ಸುಮಂಗಲಿಯರು ವೇಣಿದಾನ ಮಾಡುವ ಸಂಪ್ರದಾಯವೂ ಇದೆ. ವೇಣಿದಾನ ಎಂದರೆ ಏನು? ಅದನ್ನು ಯಾರು? ಹೇಗೇ? ಮತ್ತು ಏಕಾಗಿ ಮಾಡುತ್ತಾರೆ? ಹಿಂದೊಮ್ಮೆ ವೇಣಿದಾನದ ಸಮಯದಲ್ಲಾದ ಕಸಿವಿಸಿಯ ಕುರಿತಾದ ರೋಚಕತೆ ಇದೋ ನಿಮಗಾಗಿ… Read More ಪ್ರಯಾಗದ ತ್ರಿವೇಣಿ ಸಂಗಮದಲ್ಲಿ ವೇಣಿದಾನ

ಕಾಶೀ ಶ್ರೀ ವಿಶ್ವನಾಥ

ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಕಾಶಿ, ವಾರಣಾಸಿ, ಬನಾರಸ್ ಎಂಬೆಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಈ ಶ್ರೀಕ್ಷೇತ್ರ ಹಿಂದೂಗಳ ಆಧ್ಯಾತ್ಮ ಕೇಂದ್ರವಲ್ಲದೇ ಮೋಕ್ಷದ ಹಾದಿಯೂ ಆಗಿದೆ. ಕಾಶಿಗೆ ಹೋಗಿ ಬಂದವರಿಗೆ ಮೋಕ್ಷ ಸಿಗುವುದಲ್ಲದೇ ಕಾಶೀಯಲ್ಲಿ ದೇಹತ್ಯಾಗ ಮಾಡುವರಿಗೆ ಶಾಶ್ವತವಾದ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಗಂಗಾನದಿಯ ತಟದಲ್ಲಿ ೬೪ ಘಾಟ್ ಗಳಿರುವ ಈ ಶ್ರೀಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯವಿದ್ದು ಶಿವರಾತ್ರಿಯ ಈ ಪವಿತ್ರದಿನದಂದು ಶ್ರೀಕ್ಷೇತ್ರದ ದರ್ಶನವನ್ನು ಪಡೆಯೋಣ ಬನ್ನಿ. ಕಾಶಿಯ… Read More ಕಾಶೀ ಶ್ರೀ ವಿಶ್ವನಾಥ

ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?

ಸದ್ಯಕ್ಕೆ ಇಡೀ ದೇಶದ ಗಮನ ಮುಂದಿನ ತಿಂಗಳು ಪಂಚರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯತ್ತವೇ ಹರಿದಿದೆ ಚಿತ್ತ. 2017ರ ಚುನವಣೆಯಲ್ಲಿ ಯಾವುದೇ ಮುಖ್ಯಾಮಂತ್ರಿಯನ್ನು ಘೋಷಿಸದೇ ಮೋದಿಯವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿ, 325 ಸ್ಥಾನಗಳ ಅಭೂತವ ಪೂರ್ವ ಯಶಸ್ಸನ್ನು ಗಳಿಸಿ ಗೋರಖ್ ಪುರದ ಸಾಂದರಾಗಿದ್ದ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಗಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದಿದ್ದು, ಚುನಾವಣಾ ಪೂರ್ವದಲ್ಲಿ ಕಳೆದ ಒಂದು ವಾರದಿಂದ ಯೋಗಿಯವರ ಸರ್ಕಾರದಲ್ಲಿ ಅಧಿಕಾರವನ್ನು ಸವಿದಿದ್ದ ಕೆಲವು… Read More ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?