ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?

ಸದ್ಯಕ್ಕೆ ಇಡೀ ದೇಶದ ಗಮನ ಮುಂದಿನ ತಿಂಗಳು ಪಂಚರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯತ್ತವೇ ಹರಿದಿದೆ ಚಿತ್ತ. 2017ರ ಚುನವಣೆಯಲ್ಲಿ ಯಾವುದೇ ಮುಖ್ಯಾಮಂತ್ರಿಯನ್ನು ಘೋಷಿಸದೇ ಮೋದಿಯವರ ಹೆಸರಿನಲ್ಲಿ ಚುನಾವಣೆಯನ್ನು ಎದುರಿಸಿ, 325 ಸ್ಥಾನಗಳ ಅಭೂತವ ಪೂರ್ವ ಯಶಸ್ಸನ್ನು ಗಳಿಸಿ ಗೋರಖ್ ಪುರದ ಸಾಂದರಾಗಿದ್ದ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು.

ಕಳೆದ ಐದು ವರ್ಷಗಳಲ್ಲಿ ಗಂಗಾ ನದಿಯಲ್ಲಿ ಸಾಕಷ್ಟು ನೀರು ಹರಿದಿದ್ದು, ಚುನಾವಣಾ ಪೂರ್ವದಲ್ಲಿ ಕಳೆದ ಒಂದು ವಾರದಿಂದ ಯೋಗಿಯವರ ಸರ್ಕಾರದಲ್ಲಿ ಅಧಿಕಾರವನ್ನು ಸವಿದಿದ್ದ ಕೆಲವು ಮಂತ್ರಿಗಳು ತಮ್ಮ ಕೆಲ ಶಾಸಕರೊಂದಿಗೆ ಪಕ್ಷದಲ್ಲಿ ಉಸಿರುಗಟ್ಟುವ ವ್ಯವಸ್ಥೆ ಇದೆ ಎಂದೋ ದಲಿತರಿಗೆ ಈ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ಕುಂಟು ನೆಪ ಕೊಟ್ಟು ಬಿಜೆಪಿಯನ್ನು ತೊರೆದು ಹೋಗುತ್ತಿರುವುದನ್ನು ಮಾಧ್ಯಮಗಳು ರಂಗು ರಂಗಾಗಿ ವರದಿ ಮಾಡುತ್ತಿರುವಾಗ ಎಲ್ಲರ ಮನದಲ್ಲಿ ಮೂಡುತ್ತಿರುವ ಪ್ರಶ್ನೆಯೇ, ಯೋಗಿಗೆ ಮತ್ತೊಮ್ಮೆಒಲಿಯುವುದೇ ಉತ್ತರ ಪ್ರದೇಶ?

upಮಾಧ್ಯಮಗಳು ಬೊಬ್ಬಿರಿಯುತ್ತಿರುವುದನ್ನು ಸ್ವಲ್ಪ ಪಕ್ಕಕ್ಕಿಟ್ಟು ಸೂಕ್ಶ್ಮವಾಗಿ ಗಮನಿಸಿದಲ್ಲಿ ಈಗ ಪಕ್ಷವನ್ನು ಬಿಟ್ಟು ಹೋದ ಅಥವಾ ಬಿಡಲು ತುದಿಗಾಲಿನಲ್ಲಿ ನಿಂತಿರುವ ಬಹುತೇಕರು ಕಳೆದ ಚುನಾವಣೆಯ ಮುನ್ನಾ ವಿವಿಧ ಪಕ್ಷಗಳಲ್ಲಿ ಸಾಕಷ್ಟು ಅಧಿಕಾರವನ್ನು ಅನುಭವಿಸಿ ಬಿಜೆಪಿ ಪಕ್ಷ ಗೆಲ್ಲುತ್ತದೆ ಎಂಬುದನ್ನು ಗ್ರಹಿಸಿ ಗೆದ್ದೆತ್ತಿನ ಬಾಲ ಹಿಡಿದವರೇ ಹೆಚ್ಚಾಗಿದ್ದಾರೆ. ಅಂದಿನ ಪರಿಸ್ಥಿತಿಯಲ್ಲಿ ಉತ್ತರ ಪ್ರದೇಶದಲ್ಲಿ ಬಹಳ ವರ್ಷಗಳ ಕಾಲ ಅಧಿಕಾರವಿಲ್ಲದೇ, ಕಲ್ಯಾಣ್ ಸಿಂಗ್ ಅವರಂತಹ ನಾಯಕರಿಗೆ ವಯಸ್ಸಾಗಿದ್ದ ಕಾರಣ ಅವರಂತಹ ಸೂಕ್ತವಾದ ನಾಯಕರಿಲ್ಲದಿದ್ದ ಬಿಜೆಪಿ ಪಕ್ಷಕ್ಕೂ ಈ ರೀತಿಯ ಆಯಾರಾಂ ಗಯಾರಾಂ ನಂತಹ ವ್ಯಕ್ತಿಗಳ ಅವಶ್ಯಕತೆ ಇತ್ತು. ಆದರೆ ಒಮ್ಮೆ ಅಭೂತ ಪೂರ್ವವಾದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಯೋಗಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ ನಂತರ ಉತ್ತರ ಪ್ರದೇಶದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಹೋಗಿದ್ದಂತೂ ಸತ್ಯ.

ಮಾಯಾವತಿಯ ಬಿ.ಎಸ್.ಪಿ, ಅಖಿಲೇಶನ ಸಮಾಜವಾದಿ ಪಕ್ಷಗಳೆರಡೂ ಅಕ್ಷರಶಃ ಗೂಂಡಾಗಳ ಕೈವಶವಾಗಿ ರಾಜ್ಯ ಗೂಂಡಾ ರಾಜ್ಯವಾಗಿತ್ತು. ಅತೀಕ್ ಅಹಮದ್, ಮುಖ್ತಾರ್ ಅನ್ಸಾರಿ ಅಜಂ ಖಾನ್ ದುಬೆಯವರಂತಹ ನೂರಾರು ಗೂಂಡಗಳ ಕೈಗಳಲ್ಲಿ ಅಧಿಕಾರವಿದ್ದು ಅವರು ಹೇಳಿದ ಹಾಗೇ ಸರ್ಕಾರ ನಡೆಯಬೇಕಾಗಿದ್ದ ಕಾರಣ ರಾಜ್ಯದ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿತ್ತು. ಯೋಗಿಜಿ ಎಂಬ ಸನ್ಯಾಸಿ ಏನು ತಾನೇ ಮಾಡಿಯಾನು? ಎಂದೆಣಿಸಿದ್ದ ಬಹುತೇಕರಿಗೆ ಕೆಲವೇ ಕೆಲವು ದಿನಗಳಲ್ಲಿ ಯೋಗಿಯವರ ನಿಜವಾದ ಬಣ್ಣ ತಿಳಿದು ಹೌಹಾರಿದರು. ಚುನಾವಣಾ ಪೂರ್ವದಲ್ಲಿ ಪ್ರಧಾನಿಗಳೇ ಹೇಳಿದಂತ ನಾನು ತಿನ್ನುವುದಿಲ್ಲಾ, ತಿನ್ನುವುದಕ್ಕೂ ಬಿಡುವುದಿಲ್ಲ ಎನ್ನುವುದನ್ನು ಅಕ್ಷರಶಃ ಜಾರಿಗೆ ತಂದಾಗ, ಅಧಿಕಾರಕ್ಕೆ ಬಂದರೆ ಆಯಕಟ್ಟಿನ ಜಾಗಗಳನ್ನು ಆಕ್ರಮಿಸಿ ಮನಸೋ ಇಚ್ಚೆ ತಿನ್ನಬಹುದು ಎಂದೆಣಿಸಿ, ಬೇರೆ ಬೇರೆ ಪಕ್ಷಗಳನ್ನು ಬಿಟ್ಟು ಬಿಜೆಪಿಗೆ ಬಂದಿದ್ದಂತಹ ನಾಯಕರುಗಳಿಗೆ ಯೋಗಿಯ ಆಡಳಿತದ ಶೈಲಿಯನ್ನು ನೋಡಿ ನಡುಕ ಬಂದಿದ್ದಂತೂ ಸುಳ್ಳಲ್ಲ. ಹೇಗೂ ಬಂದಿದ್ದಾಗಿದೆ ಐದು ವರ್ಷಗಳ ಕಾಲ ಹಾಗೂ ಹೀಗೂ ದೂಡಿಕೊಂಡು, ಯಾವುದಾದರೂ ನೆಪವೊಂದನ್ನು ಹೇಳಿಕೊಂಡು ಪಕ್ಷ ಬಿಡೋಣ ಎಂದು ಹಲ್ಲು ಕಚ್ಚಿ ಕುಳುತಿದ್ದವರೇ ಇಂದು ಪಕ್ಷವನ್ನು ಬಿಡುತ್ತಿದ್ದಾರೆಯೇ ಹೊರತು, ಪಕ್ಷದ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ನಿಷ್ಠಾವಂತರಾಗಿ ದುಡಿಯುತ್ತಿರುವ ನಾಯಕರಾರು ಪಕ್ಷದಿಂದ ದೂರವಾಗದಿರುವುದನ್ನು ಖಂಡಿತವಾಗಿಯೂ ಜನರು ಗಮನಿಸುವ ಕಾರಣ, ಯೋಗಿಯವರ ಬೆಂಬಲಕ್ಕೆ ಖಂಡಿತವಾಗಿ ನಿಲ್ಲುತ್ತಾರೆ ಎಂಬ ಭರವಸೆ ಇದೆ.

a party with difference ಎಂಬ ಹಣೆಪಟ್ಟಿ ಹೊತ್ತಿರುವ ಬಿಜೆಪಿ ಪಕ್ಷ, ಗೃಹಮಂತ್ರಿ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ನಡ್ಡಾರವರ ನೇತೃತ್ವದಲ್ಲಿ ಚುನಾವಣೆಗೆ ಸುಮಾರು ಒಂದು ವರ್ಷದ ಮುಂಚೆಯೇ ಆಂತರಿಕ ಸಮೀಕ್ಷೆ ನಡೆಸಿ, ವಯಸ್ಸಾದ, ಕೆಲಸ ಮಾಡದ, ಪಕ್ಷದ ವಿರುದ್ಧ ಮಾತಾಡಿದ, ಪಕ್ಷ ಸಂಘಟನೆ ಮಾಡದ, ಜನರೊಂದಿಗೆ ಬೆರೆಯದ, ಎಂದೂ ಸ್ವಕ್ಷೇತ್ರದ ಒಡನಾಟ ಇಟ್ಟುಕೊಳ್ಳದ, ಬೇರೆ ಪಕ್ಷದಿಂದ ಅಧಿಕಾರಕ್ಕಾಗಿ ಬಂದವರ ಪಟ್ಟಿಯನ್ನುಸಿದ್ಧ ಪಡಿಸಿ ಆಂತಹವರಿಗೆ ಸೂಕ್ತ ಮಾರ್ಗದರ್ಶನ ಮಾಡಿ, ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಸೂಚನೆಯನ್ನು ನೀಡಲಾಗಿತ್ತು. ಅಂತಹ ಎಚ್ಚರಿಕೆಯನ್ನು ತಳ್ಳಿ ಹಾಕಿ, ನೀವು ಎಷ್ಟೇ ಬೊಬ್ಬಿರಿದರು ನಾವು ಮಾಡುವುದೇ ಹೀಗೆ ಎಂದು ಮೆರೆದಾಡುತ್ತಿರುವ ಕ್ಷೇತ್ರಗಳಲ್ಲಿ ಅವರ ಸರಿಸಮನಾಗಿ ನಿಲ್ಲಬಲ್ಲಂತಹ ಯುವ ನಾಯಕರನ್ನು ಗುರುತಿಸಿ ಯಾರು ಪಕ್ಷಕ್ಕೆ ನಿಷ್ಠರಾಗಿ ಪಕ್ಷದ ಬೆಳವಣಿಗೆಯಲ್ಲಿ ಭಾಗವಹಿಸಿರುವ ಹೊಸಾ ಮುಖಗಳಿಗೆ ಮಣೆ ಹಾಕಲು ಈ ಬಾರಿ ಪಕ್ಷ ನಿರ್ಧರಿಸಿರುವ ಕಾರಣ, ಹೇಗೂ ನಮಗೆ ಈ ಬಾರಿ ಪಕ್ಷದಿಂದ ಸ್ಪರ್ಧಿಸಲು ಸಾಥವಿಲ್ಲ ಎಂದು ಅರಿತವರಿಂದಲೇ ಈ ಸಾಮೂಹಿಕ ರಾಜಿನಾಮೆ ನಡೆಯುತ್ತಿದೆ. ಹೀಗೆ ರಾಜಿನಾಮೆ ಕೊಟ್ಟ ನಾಯಕರುಗಳ ಹಿಂದೆ ಕೇವಲ ಬೆರಳೆಣಿಕೆಯ ಬೆಂಬಲಿಗರು ಪಕ್ಷದಿಂದ ಹೊರ ಹೋಗುತ್ತಿದ್ದಾರೆಯೇ ಹೊರತು ಜನರು ಇನ್ನು ಯೋಗಿಯವರ ಪರ ಇರುವುದು ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ನಗರಪಾಲಿಕೆ ಚುನಾವಣೆಯ ಅಭೂತಪೂರ್ವ ಫಲಿತಾಂಶ ಸೂಚಿಸುತ್ತದೆ.

ayothyaಯಾರು ಏನೇ ಹೇಳಿದರು ಜನರು ಬಿಜೆಪಿಯನ್ನು ಗುರುತಿಸುವುದೇ ಹಿಂದೂಗಳ ಪಕ್ಷ ಎಂದೇ. ಅದಕ್ಕೆ ತಕ್ಕಂತೆ ಮೋದಿಯವರು ವಾರಣಾಸಿಯಿಂದ ಸಾಂಸದರಾಗಿ ಆಯ್ಕೆಯಾಗಿ ಪ್ರಧಾನಿಗಳಾದ ಮೇಲಂತೂ ದೇಶದ್ಯಂತ ಹಿಂದುತ್ವ ಗಟ್ಟಿಯಾಗಿ ಬೇರು ಊರುವಂತೆ ಮಾಡುವುದರಲ್ಲಿ ಸಫಲರಾಗಿದ್ದಾರೆ. ಮೊದಲ ಬಾರಿಯ ಅಧಿಕಾರಕ್ಕೆ ಬಂದಾಗ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದೆ ನೀಡದೇ ನ್ಯಾಯಾಲಯದ ಮೂಲಕ ಅಯೋಧ್ಯೆಯ ಸಮಸ್ಯೆಯನ್ನು ಬಗಹರಿಸಿದ ನಂತರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಕೂಡಲೇ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅಡಿಪಾಯವನ್ನು ಹಾಕಿದ್ದಲ್ಲದೇ, ಭವ್ಯವಾಗಿ ರಾಮಮಂದಿರವನ್ನು 2024ರ ಒಳಗೆ ನಿರ್ಮಿಸುವ ಭರವಸೆಯನ್ನು ಮೂಡಿಸಿರುವುದು ಜನರ ಮನದಲ್ಲಿ ಅಚ್ಚೊತ್ತಿದೆ. ಅದೇ ರೀತಿಯಲ್ಲಿ ನಮಾಮಿ ಗಂಗೆ ಕಾರ್ಯಕ್ರಮದ ಮೂಲಕ ಇಡೀ ಕಾಶಿಯ ಗಂಗೆಯನ್ನು ಸ್ವಚ್ಚಗೊಳಿಸಿದ್ದಲ್ಲದೇ ಸದ್ದಿಲ್ಲದೇ ಸಣ್ಣ ಗಲ್ಲಿಯಲ್ಲಿದ್ದ ಕಾಶೀ ವಿಶ್ವನಾಥನ ಮಂದಿರದ ಸುತ್ತಮುತ್ತಲಿನ ಪ್ರದೇಶಗಳನ್ನು ತೆರವುಗೊಳಿಸಿದಾಗಲೇ ನೂರಾರು ದೇವಸ್ಥಾನಗಾನ್ನು ಒತ್ತುವರಿ ಮಾಡಿಕೊಂಡಿದ್ದು ಜನರಿಗೆ ಗೊತ್ತಾಗಿದ್ದಲ್ಲದೇ, ಧಾಖಲೆಯ ಸಮಯದಲ್ಲಿ ಕಾಶೀ ವಿಶ್ವನಾಥನ ಭವ್ಯವಾದ ಸಂಕೀರ್ಣ ನಿರ್ಮಾಣಗೊಂಡ ಕೂಡಲೇ ಜನರಿಗೆ ಯೋಗಿ ಮತ್ತು ಬಿಜೆಪಿಯ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿರುವುದಂತೂ ಸುಳ್ಳಲ್ಲ.

yogi22017ರಲ್ಲಿ ಯೋಗಿ ಆದಿತ್ಯನಾಥ್ ಅವರು ಅಧಿಕಾರ ವಹಿಸಿಕೊಂಡ ಸಂದರ್ಭಕ್ಕಿಂತಲೂ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರು ಸಾಕಷ್ಟು ಪ್ರಭಲರಾಗಿರುವುದಲ್ಲದೇ ಗೂಂಡಾ ರಾಜ್ಯವಾಗಿದ್ದ ಉತ್ತರ ಪ್ರದೇಶವನ್ನು ಸಂಪೂರ್ಣ ಚಹರೆಯನ್ನು ಬದಲಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಲ್ಲಂತೂ ಬಾರೀ ಹಿಡಿತವನ್ನು ತರಲಾಗಿದೆ. ಇನ್ನು ಪುಂಡರು, ರೌಡಿಗಳು, ದೊಂಬಿ ಮಾಡುವವರಿಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಹಿಂದೇ ಮುಂದೇ ನೋಡದೇ ಎನ್ಜೌಂಟರ್ ಮಾಡಿ ಮುಗಿಸಿದ ಕಾರಣ ಮೂಲಕ ಕಳೆದ ಐದು ವರ್ಷಗಳಲ್ಲಿ ಬಹುತೇಕ ಶಾಂತಿಯುತವಾದ ಉತ್ತರಪ್ರದೇಶವನ್ನು ಕಾಣುವಂತಾಯಿತು. ಇನ್ನು ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಹಾಳು ಮಾಡಿದವರನ್ನು ಕೂಡಲೇ ಬಂಧಿಸಿ ಹಾಗೆ ಆದ ನಷ್ಟಗಳನ್ನು ಅವರಿಂದಲೇ ಕಕ್ಕಿಸಲು ಆರಂಭಿಸುತ್ತಿದ್ದಂತೆಯೇ ದೊಂಬಿ ಎಬ್ಬಿಸುವವರ ಸಂಖ್ಯೆ ಸದ್ದಿಲ್ಲದೇ ತಣ್ಣಗಾಯಿತು.

kashiರಾಜ್ಯವನ್ನು ಆರ್ಥಿಕವಾಗಿ ಬಲ ಪಡಿಸುವ ಸಲುವಾಗಿ ರಾಜ್ಯದಲ್ಲಿ ಅನೇಕ ಹೊಸ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದಾರೆ. ನೋಯ್ಡಾದಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಉತ್ಪಾದನಾ ಕೇಂದ್ರವನ್ನು ಆರಂಭಿಸಿದ್ದಲ್ಲದೇ, ಲಕ್ನೋದಲ್ಲಿ ಕ್ಷಿಪಣಿ ತಯಾರಿಕೆ ಮತ್ತು ಝಾನ್ಸಿಯಲ್ಲಿ ರಕ್ಷಣಾ ಕಾರಿಡಾರ್‌ನಂತಹ ಅನೇಕ ರಕ್ಷಣಾ ಸಂಸ್ಥೆಗಳು ಸಾವಿರಾರು ಜನರಿಗೆ ಉದ್ಯೋಗವನ್ನು ಒದಗಿಸಿದ್ದಾರೆ. ಇದಲ್ಲದೇ ರಾಜ್ಯದ ವಿವಿಧೆಡೆ 1400ಕ್ಕೂ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಲು ಯೋಗಿ ಅನುವು ಮಾಡಿಕೊಟ್ಟಿದ್ದಾರೆ. ನಿರ್ಮಾಣ ಹಂತದಲ್ಲಿರುವ ಅಥವಾ ಪೂರ್ಣಗೊಂಡಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ, ಘೋರಕ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇ, ಗಂಗಾ ಎಕ್ಸ್‌ಪ್ರೆಸ್‌ವೇ, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮುಂತಾದ ಹಲವು ಎಕ್ಸ್‌ಪ್ರೆಸ್‌ವೇಗಳ ಮೂಲಕ ಜನರು ಯೋಗಿಯವರನ್ನು ಅಭಿವೃದ್ಧಿ ಪುರುಷ ಎಂದು ಕರೆಯಲಾರಂಭಿಸಿದ್ದಾರೆ. ಕುಶಿನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಜೇವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬನಾರಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಆರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೂ ಒತ್ತು ನೀಡಿರುವುದು ಜನರಿಗೆ ಮನವರಿಕೆಯಾಗಿದೆ.

ಯೋಗಿಯರನ್ನು ವಯಕ್ತಿಕವಾಗಿ ಗಮನಿಸಿದಲ್ಲಿ ರಾಜಕೀಯಕ್ಕೆ ಬರುವ ಮೊದಲು ಗೋರಖಪುರದ ಗೋರಖನಾಥ್ ಗೋರಕ್ಷನಾಥ ದೇವಸ್ಥಾನದ ಪೀಠಾಧೀಶ್ವರರಾಗಿದ್ದವರು. ಹೇಳಿ ಕೇಳಿ ಎಲ್ಲವನ್ನು ಬಿಟ್ಟ ಸನ್ಯಾಸಿಗಳು. ಇಂದಿಗೂ ಅವರ ಅಣ್ಣ ಸೈನ್ಯದಲ್ಲಿ ಸೈನಿಕನಾಗಿದ್ದರೆ, ಅವರ ಅಕ್ಕ ಭಾವ ಸಣ್ಣದಾದ ಟೀ ಅಂಗಡಿಯಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ ಅವರ ತಂದೆಯವರು ಸಹಾ ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿದ್ದಾರೆಯೇ ಹೊರತು, ಮಗನ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪವಾಗಲೀ ವಯಕ್ತಿಕ ಹಿತಾಸಕ್ತಿಯನ್ನು ತೋರಿಸಿಲ್ಲ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯೋಗಿ ಅವರ ಸಂಪುಟದಲ್ಲಿರುವ ಯಾವುದೇ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲ. ಒಂದೇ ಒಂದು ಕೋಮು ದಳ್ಳುರಿ ನಡೆದಿಲ್ಲ. ಅಪರಾಧ ಪೀಡಿತ ರಾಜ್ಯವನ್ನು ತಕ್ಕ ಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು.

up_oppositeಇನ್ನು ಯೋಗಿಯವರ ವಿರೋಧಿಗಳನ್ನು ಗಮನಿಸಿದಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಕಾಲ ಸಂಪೂರ್ಣವಾಗಿ ರಾಜಕೀಯದಿಂದ ಒಂದು ರೀತಿಯಾಗಿ ನಿವೃತ್ತರಾಗಿದ್ದವರು ಚುನಾವಣಾ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಗರಿ ಗೆದರಿ ನಿಂತು ಹೂಂ ಗುಟ್ಟುತ್ತಿರುವರಾದರೂ ಕಳ್ಳನ ಮನಸ್ಸು ಹುಳ್ಳಗೇ ಎನ್ನುವಂತೆ ಅವರಿಗೆ ಒಳಗೊಳಗೆ ಭಯ ಇದೇ ಎನ್ನುವುದಕ್ಕೆ ಅಖಿಲೇಶ್ ಯಾದವ್, ಮಾಯಾವತಿ ಮತ್ತು ಪ್ರಿಯಾಂಕ ಗಾಂಧಿಯವರು ಚುನಾವಣೆಗೆ ಸ್ಪರ್ಥಿಸದೇ ಇರುವುದೇ ಸಾಕ್ಷಿಯಗಿದೆ. ಅಖಿಲೇಶ್ ಮತ್ತು ಅವರ ಅಪ್ಪ ಮುಖ್ಯಮಂತ್ರಿ ಆದ್ದವರು, ಮಾಯಾವತಿ ಎರಡು ಬಾರಿಗೆ ಮುಖ್ಯಮಂತ್ರಿಗಳಾಗಿದ್ದವರು ಇನ್ನು ಪ್ರಿಯಾಂಕಾಲ ಮುತ್ತಾತ, ಅಜ್ಜಿ, ಅಪ್ಪಾ ದೇಶದ ಪ್ರಧಾನ ಮಂತ್ರಿಗಳಾಗಿದ್ದವರು, ಅಮ್ಮಾ ಮತ್ತು ಅಣ್ಣ ಉತ್ತರ ಪ್ರದೇಶದಿಂದಲಲೇ ಬಹಳ ಕಾಲ ಸಾಂಸದರಾಗಿದ್ದವರು ಇಂತಹವರು ತಾವು ಚುನಾವಣೆಗೆ ನಿಂತಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಸಾಧ್ಯವಿಲ್ಲದ ಕಾರಣ ಚುನಾವಣೆಯಲ್ಲಿ ಸ್ಪರ್ಥಿಸುತ್ತಿಲ್ಲ ಎಂದು ಹೇಳುವ ಹಸೀ ಸುಳ್ಳನ್ನು ಯಾರಾದರೂ ನಂಬಲು ಸಾಧ್ಯವೇ?

WhatsApp Image 2022-01-18 at 1.42.00 PMಅಖಿಲೇಶ ಆಡಳಿತದ ಸಮಯದಲ್ಲಿ ರಾಜ್ಯಾದ್ಯಂತ ಮುಸಲ್ಮಾನರು ನಮಾಜ್ ಮಾಡುವ ಸಮಯದಲ್ಲಿ ಹಿಂದೂ ದೇವಸ್ಥಾನಗಳ ಗಂಟೆಗಳ ಶಬ್ದ ಕೇಳಬಾರದು ಎಂದು ಆ ಸಮಯದಲ್ಲಿ ಯಾವುದೇ ಹಿಂದೂ ಭಕ್ತರು ದೇವಸ್ಥಾನಗಳಿಗೆ ಪ್ರವೇಶಿ ಗಂಟೆಯನ್ನು ಬಾರಿಸದಂತೆ ತಡೆಯುವ ಸಲುವಾಗಿ ಪೊಲೀಸರ ಕಾವಲನ್ನು ಹಾಕಿದ್ದನ್ನು ಹಿಂದೂಗಳು ಮರೆಯಲು ಸಾಧ್ಯವೇ? ಅದೇ ರೀತಿ 2015ರ ಮಾರ್ಚ್ 6 ಶುಕ್ರವಾರದಂದು ಉತ್ತರ ಪ್ರದೇಶದ ಹಿಂದೂ ಹೋಳಿ ಆಡುವುದರಲ್ಲಿ ನಿರತನಾಗಿದ್ದರೆ, ಇದ್ದಕ್ಕಿದ್ದಂತೆಯೇ, ಬೆಳಗ್ಗೆ ಸರಿ ಸುಮಾರು 10 ಗಂಟೆಯ ಹೊತ್ತಿಗೆ ಸಮಾಜವಾದಿ ಪಕ್ಷದ ಅಖಿಲೇಶ್ ಸರ್ಕಾರದಲ್ಲಿ ಪ್ರಭಾವಿ ಸಚಿವನಾಗಿದ್ದ ಆಜಂ ಖಾನ್ ಇಂದು ಶುಕ್ರವಾರದ ನಮಾಜು ನಡೆಯುವಾಗ ಹಿಂದೂಗಳು ಹೋಲಿ ಆಡುವುದು ಮುಸಲ್ಮಾನರಿಗೆ ಮುಜುಗರ ತರುವ ಕಾರಣ, ರಾಜ್ಯದಲ್ಲಿ ಈ ತಕ್ಷಣವೇ ತಪ್ ಹೋಳಿ ಆಡುವುದನ್ನು ನಿಲ್ಲಿಸ ಬೇಕು ಎಂದು ಸರ್ಕಾರೀ ಆಜ್ಣೇಯನ್ನು ಹೊರಡಿಸಿದ್ದಲ್ಲದೇ, ಹೋಲಿ ಆಡುತ್ತಿದ್ದ ಹಿಂದೂಗಳ ಮೇಲೆ ಬಲವಂತವಾಗಿ ಲಾಠಿ ಪ್ರಹಾರವನ್ನು ಮಾಡಲಾಗಿದ್ದನ್ನು ಹಿಂದೂಗಳು ಮರೆಯಲು ಸಾಧ್ಯವೇ? ಈ ಪರಿಯಾಗಿ ಮುಸಲ್ಮಾನರ ತುಷ್ಟೀಕರಣ ಮಾಡುತ್ತಿದ್ದ ಅಖಿಲೇಶನಿಗೆ ಇದ್ದಕ್ಕಿದ್ದಂತೆಯೇ ಶ್ರೀಕೃಷ್ಣ ಆತನ ಕನಸಿನಲ್ಲಿ ಬಂದು ಈ ಬಾರಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ ಎಂದರೆ ಯಾರು ತಾನೇ ನಂಬಲು ಸಾಥ್ಯ?

ಪೆಟ್ರೋಲಿಯಂ ಉತ್ಪನ್ನಗಳು, ಅಡುಗೆ ಎಣ್ಣೆಗಳು, ಕೆಲ ದಿನನಿತ್ಯದ ಉಪಕರಣಗಳ ಬೆಲೆ ಹೆಚ್ಚಾಗಿರುವುದು ಮತ್ತು ನಿರುದ್ಯೋಗ ಸಮಸ್ಯೆ ಮತ್ತು ಎಲ್ಲದ್ದಕ್ಕೂ ಹೆಚ್ಚಾಗಿ ದಲಿತ ವಿರೋಧಿ ಎಂಬುದನ್ನು ಪ್ರಮುಖವಾಗಿ ಈ ಬಾರಿಯ ಚುನಾವಣೆಯಲ್ಲಿ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಯೋಗಿಯವರ ವಿರೋಧಿಗಳು ನಿರ್ಧರಿಸಿದ್ದರೂ, ಅಪರಾಧಕ್ಕೆ ಧರ್ಮವಿಲ್ಲ. ಅಪರಾಧ ಮಾಡಿದವರು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂಬುದನ್ನು ವಿಕಾಸ್ ದುಬೆಯಂತಹ ಕ್ರಿಮಿನಲ್‌ಗಳ ಎನ್‌ಕೌಂಟರ್‌ನಿಂದ ಸಾಬೀತು ಮಾಡಿರುವ ಕಾರಣ, ಯಾರು ಎಷ್ಟೇ ಜಾತಿಯ ರಾಜರಾರಣ ಮಾಡಲು ಮುಂದಾದರೂ, ಉತ್ತರ ಪ್ರದೇಶದ ಮತದಾರರು ಧರ್ಮ, ಜಾತಿ ಹೊರತಾಗಿ ಯೋಗಿಯವರ ವ್ಯಕ್ತಿತ್ವ ಮತ್ತು ರಾಜ್ಯದ ಅಭಿವೃದ್ಧಿಯ ಪರ ಅವರ ದಿಟ್ಟ ನಿಲುವು ಮತ್ತು ಅಪರಾಧಿ ಮುಕ್ತ ಮಾಡಿರುವುದನ್ನು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇಷ್ಟೆಲ್ಲದರ ನಡುವೆ ಅಚ್ಚರಿಯ ಸಂಗತಿ ಎಂಬಂತೆ ಮುಲಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಲು ಮುಂದಾಗಿರುವುದು ಯೋಗಿಯವರಿಗೆ ಆನೆ ಬಲವನ್ನು ತಂದಿದೆ.

yogi12017ರಲ್ಲಿ ಮೋದಿಯವರ ಹೆಸರಿನಲ್ಲಿ ಬಿಜೆಪಿ ವಿಧಾನಸಭಾ ಚುನಾವಣೆಯನ್ನು ಎದುರಿಸಿತ್ತು. ಈ ಬಾರಿ ಮೋದಿಯವರ ಜೊತೆಗೆ ಯೋಗಿಯವರ ಸಾರಥ್ಯದಲ್ಲಿ ಚುನಾವಣೆ ಎದುರಿಸುತ್ತಿರುವ ಕಾರಣ, ಎಲ್ಲಾ ಅಡಳಿತ ವಿರೋಧದ ನಡುವೆ ಕಳೆದ ಬಾರಿಗಿಂತ ಕೆಲವು ಸ್ಥಾನಗಳು ಹೆಚ್ಚು ಕಡಿಮೆಯಾದರೂ ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಯೋಗಿ ಮತ್ತು ದೆಹಲಿಯಲ್ಲಿ ಮಗದೊಮ್ಮೆ ಮೋದಿ ಬರುವುದು ನಿಚ್ಚಳವಾಗಿದ್ದು ಈ ಇಬ್ಬರು ಮಹಾನ್ ನಾಯಕರ ನೇತೃತ್ವದಲ್ಲಿಯೇ ಅಯೋಧ್ಯೆಯ ರಾಮ ಮಂದಿರದ ಜೊತೆ ಕಾಶೀ ವಿಶ್ವನಾಥನ ಭವ್ಯವಾದ ಕಾರಿಡಾರ್ ಅದಂತೆ, ಮಥುರಾದಲ್ಲಿಯೂ ಭವ್ಯವಾದ ಶ್ರೀಕೃಷ್ಣನ ಮಂದಿರ ಅತಿ ಶೀಘ್ರದಲ್ಲಿ ತಲೆ ಎತ್ತಲಿ ಎನ್ನುವುದೇ ಸಕಲ ಆಸ್ತಿಕರ ಅಸೆಯಾಗಿದೆ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s