ಅತಿಥಿ ದೇವೋಭವ

ನಮ್ಮ ಸನಾತನ ಧರ್ಮದಲ್ಲಿ ಜನ್ಮ ಕೊಟ್ಟ ತಂದೆ ತಾಯಿಯರನ್ನೇ ಪ್ರತ್ಯಕ್ಷದೇವರು ಎಂದು ಭಾವಿಸುವ ಕಾರಣ ನಾವು ಮೊದಲು ಮಾತೃದೇವೋ ಭವ, ಪಿತೃದೇವೋಭವ ಎಂದು ಅವರಿಗೆ ಗೌರವವನ್ನು ಸೂಚಿಸಿದರೆ, ಅದರ ನಂತರದ ಸ್ಥಾನವನ್ನು ನಮಗೆ ವಿದ್ಯಾಬುದ್ಧಿಯನ್ನು ಕಲಿಸಿಕೊಡುವ ಗುರುಗಳಿಗೆ ಆಚಾರ್ಯದೇವೋಭವ ಎಂದು ನಮಿಸಿದ ನಂತರ ನಾಲ್ಕನೇಯದಾಗಿ ನಾವು ಗೌರವಿಸುವುದೇ ಅತಿಧಿದೇವೋಭವ ಎಂದು. ಅದರಲ್ಲೂ ಹೇಳೀ ಕೇಳೀ ಕರ್ನಾಟಕದವರಂತೂ ಅತಿಧಿ ಸತ್ಕಾರಕ್ಕೆ ಎತ್ತಿದ ಕೈ. ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನು ಕೊಡುವಷ್ಟು ವಿಶಾಲ ಹೃದಯದವರು. ವಿಳಾಸ ಕೇಳಿದರೆ, ಸುಮ್ಮನೇ… Read More ಅತಿಥಿ ದೇವೋಭವ

ಕಛೇರಿಯ ಮೊದಲ ದಿನದ ಅನುಭವ

ಮಾರ್ಚ್ 11, 2020 ಬುಧವಾರ ಸಂಜೆ ಸುಮಾರು5:30ರ ಸಮಯ ಕಛೇರಿಯ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಂತಹ ಸಮಯ. ನಾವು ನಾಲ್ಕೈದು ಜನ ಒಟ್ಟಿಗೆ ಒಂದೇ ಕಾರಿನಲ್ಲಿ (car pool) ಮಾಡುತ್ತಿದ್ದಾಗ ಮೊಬೈಲಿನಲ್ಲಿ ಈ-ಮೇಲ್ ಬಂದ ಶಬ್ಧ ಕೇಳಿ ಯಾರಪ್ಪಾ ಈಗ ಮೇಲ್ ಕಳುಹಿಹಿರುವವರು? ಎಂದು ಮೋಬೈಲ್ ನೋಡುತ್ತಲೇ ಒಂದು ಕ್ಷಣ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಕಛೇರಿಯ ಹತ್ತಿರವೇ ಇದ್ದ ಕೆಲವು ಸಹೋದ್ಯೋಗಿಗಳು ವಾಸಿಸುತ್ತಿದ್ದಂತಹ ಅಪಾರ್ಟ್ಮೆಂಟಿನ ಕೆಲವರಿಗೆ ಕೊರೋನಾ ಸೋಂಕು ಧೃಢ ಪಟ್ಟಿರುವ ವಿಷಯ ತಿಳಿದು… Read More ಕಛೇರಿಯ ಮೊದಲ ದಿನದ ಅನುಭವ