ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಸಿನಿಮಾ ಎನ್ನುವುದು ಮನೋರಂಜನೆಯೋ ಇಲ್ಲವೇ ಹಗಲು ದರೋಡೆಯೋ?

ಮನುಷ್ಯ ಸಂಘ ಜೀವಿಯ ಜೊತೆಗೆ ಭಾವುಕ ಜೀವಿಯೂ ಸಹಾ ಹೌದು.  ಅವನು ತನ್ನ ಸುಖಃ ಮತ್ತು ದುಃಖಗಳನ್ನು  ಸಂಭ್ರಮಿಸಲು ಮತ್ತು ಮರೆಯಲು ಯಾವುದಾದರು ಹವ್ಯಾಸಕ್ಕೆ ಮೊರೆ ಹೋಗುತ್ತಾನೆ. ಅದೇ ರೀತಿ ದಿನವಿಡೀ  ಕಷ್ಟ ಪಟ್ಟು ದುಡಿದು ಸಂಜೆ ಮನೆಗೆ ಹಿಂದಿರುಗಿ ವಿಶ್ರಾಂತಿ ಮಾಡುತ್ತಿದ್ದಾಗ ಆತನ ಮನಸ್ಸಿಗೆ ಹಿಡಿಸುವಂತಹ ಸಂಗೀತ, ಸಾಹಿತ್ಯ,  ನೃತ್ಯ, ನಾಟಕ, ಯಕ್ಷಗಾನ ಮುಂತಾದವುಗಳನ್ನು ಕೇಳಿ, ನೋಡಿ ಮನಸ್ಸನ್ನು ಹಗುರು ಮಾಡಿಕೊಳ್ಳುತ್ತಿದ್ದರು. ತಂತ್ರಜ್ಞಾನ ಮುಂದುವರೆದಂತೆಲ್ಲಾ ಮೂಕಿ ಚಲನ ಚಿತ್ರಗಳು, ಟಾಕಿ ಚಲನ ಚಿತ್ರಳು, 3-ಡಿ ಚಲಚಿತ್ರಗಳು… Read More ಸಿನಿಮಾ ಎನ್ನುವುದು ಮನೋರಂಜನೆಯೋ ಇಲ್ಲವೇ ಹಗಲು ದರೋಡೆಯೋ?