ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

janasanghaಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಭಾರತದ ಮೊದಲ ಕೈಗಾರಿಕೆ ಮತ್ತು ಪೂರೈಕೆ ಸಚಿವರಾಗಿ ಸೇವೆ ಸಲ್ಲಿಸಿದ ಪಶ್ಚಿಮ ಬಂಗಾಳದ ಮೂಲದವರಾದ ನ್ಯಾಯವಾದಿಗಳು, ಶಿಕ್ಷಣತಜ್ಞರು ಮತ್ತು ಹಿರಿಯ ರಾಜಕಾರಣಿಗಳಾಗಿದ್ದ ಶ್ರೀ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಲಿಯಾಕತ್-ನೆಹರೂ ಒಪ್ಪಂದದ ವಿರುದ್ಧ ಪ್ರತಿಭಟಿಸಿ ಅಂದಿನ ಪ್ರಧಾನಿ ನೆಹರು ಅವರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ ಕಾರಣ, ನೆಹರೂ ಅವರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಲ್ಲದೇ, ದೇಶದಲ್ಲಿದ್ದ ಏಕ ಪಕ್ಷೀಯ ಕಾಂಗ್ರೆಸ್ ವಿರುದ್ಧ ರಾಜಕೀಯವಾಗಿ ಮಣಿಸುವ ಸಲುವಾಗಿ ಮತ್ತು ದೇಶದ ಬಹುಸಂಖ್ಯಾತ ಹಿಂದೂಗಳ ಪರವಾದ ಬಲಪಂಥೀಯ ಧೋರಣೆಯನ್ನು ಹೊಂದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಯೋಗದೊಂದಿಗೆ ಅಕ್ಟೋಬರ್ 21, 1951 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಪರ್ಯಾಯವಾಗಿ ಭಾರತೀಯ ಜನಸಂಘ ಎಂಬ ಪಕ್ಷವನ್ನು ಸ್ಥಾಪಿಸಿದರು. ಪಕ್ಷದ ಸಂಘಟನೆಗಾಗಿ ಆಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ಬಾನಿ ಮುಂತಾದ ಸಂಘದ ಹಿರಿಯ ಕಾರ್ಯಕರ್ತರನ್ನು ಜನಸಂಘಕ್ಕೆ ಕಳುಹಿಸಿಕೊಡಲಾಯಿತು.

BJPಉಳಿದ ಪಕ್ಷಗಳಿಗಿಂತಲೂ ವಿಭಿನ್ನವಾಗಿ ಸ್ವಲ್ಪ ಶಿಸ್ತಿನ ಕಡೆ ಹೆಚ್ಚಿನ ಗಮನ ಹರಿಸಿದ್ದಲ್ಲದೇ, ಈ ಪಕ್ಷದಲ್ಲಿ ವ್ಯಕ್ತಿಗಿಂತಲೂ ಪಕ್ಷ ಮತ್ತು ಸಿದ್ಧಾಂತಕ್ಕೆ ಬೆಲೆ ನೀಡುವಂತಾದ ಕಾರಣ, ಸಹಜವಾಗಿ ಜನರೇ A party with different ideology ಎಂದು ಜನರು ಪಕ್ಷವನ್ನು ಒಪ್ಪಿಕೊಂಡು ಅಪ್ಪಿಕೊಂಡು ಬೆಳಸಿದರು. 1975ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಸ್ವಾರ್ಥಕ್ಕಾಗಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದಾಗ, ದೇಶದ ವಿರೋಧ ಪಕ್ಷಗಳನ್ನೆಲ್ಲಾ ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಸಾರಥ್ಯದಲ್ಲಿ ಕಾಂಗ್ರಸ್ಸಿಗೆ ಪರ್ಯಾಯವಾಗಿ ಜನತಾಪಕ್ಷವನ್ನು ಆರಂಭಿಸಿದಾಗ, ಜೂನ್ 23 1977 ರಲ್ಲಿ ಜನಸಂಘ ಜನತಾಪಕ್ಷದೊಂದಿಗೆ ವಿಲೀನವಾಯಿತಲ್ಲದೇ, 1977ರ ಮೊರಾರ್ಜಿ ದೇಸಾಯಿ ಅವರ ಪ್ರಪ್ರಥಮ ಕಾಂಗ್ರೇಸ್ಸೇತರ ಸರ್ಕಾರದಲ್ಲಿ ವಾಜಪೇಯಿ ಮತ್ತು ಅಡ್ವಾಣಿ ಅವರು ಸಂಪುಟದ ಸದಸ್ಯರಾಗಿದರು. ನಂತರ ಜನತಾಪಕ್ಷದಲ್ಲಿರುವವರು RSSನಲ್ಲಿ ಇರಬಾರದು ಎಂಬ ನಿಯಮವನ್ನು ತಂದ್ದದ್ದನ್ನು ಪ್ರತಿಭಟಿಸಿ ಜನತಾಪಕ್ಷದಿಂದ ಹೊರಬಂದು ಏಪ್ರಿಲ್ 6 1980ರಂದು ವಾಜಪೇಯಿ ಮತ್ತು ಅಡ್ವಾಣಿಯವರ ಸಾರಥ್ಯದಲ್ಲಿ ಭಾರತೀಯ ಜನತಾಪಕ್ಷ ಉದಯವಾಗಿ ಹಂತ ಹಂತವಾಗಿ ಒಂದೊಂದೇ ಸ್ಥಾನಗಳನ್ನು ಗಳಿಸಿಕೊಂಡು ಪ್ರಸ್ತುತ ಪ್ರಸ್ತುತ ಭಾರತ ಸರ್ಕಾರ ಮತ್ತು 15ಕ್ಕೂ ಹೆಚ್ಚಿನ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿ ಇದೆ.

jana2ಇಂತಹ ಶಿಸ್ತಿನ ಮತ್ತು ತಳ ಮಟ್ಟದಿಂದಲೂ ಕಾರ್ಯಕರ್ತರನ್ನು ಹೊಂದಿದ ಪಕ್ಷವಾದ ಬಿಜೆಪಿಯಲ್ಲಿ ನಾಯಕರುಗಳಿಗಿಂತಲೂ ಕಾರ್ಯಕರ್ತರಿಗೇ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎನ್ನುವ ಸಲುವಾಗಿ ಆಗ್ಗಾಗ್ಗೇ ಪಕ್ಷದಲ್ಲಿ ಆಂತರಿಕವಾಗಿ ಭಾರೀ ಮಟ್ಟದ ಬದಲಾವಣೆಗಳು ಮಾಡುವ ಮೂಲಕ ಸಬ್ ಕಾ ಸಾಥ್, ಸಬ್ ಕೇ ವಿಶ್ವಾಸ್ ಮತ್ತು ಸಬ್ ಕಾ ವಿಕಾಸ್ ತರುಪುದರಲ್ಲಿ ಸಫಲವಾಗಿದೆ. ಅದೇ ರೀತಿಯಲ್ಲೇ ಇತ್ತೀಚಿಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿಯೂ ಸಹಾ ಆಡಳಿತ ವಿರೋಧವನ್ನು ಹೊಂದಿರುವ ಇಲ್ಲವೇ ವಯಸ್ಸಾಗಿರುವ ನಾಯಕರ ಬದಲಾಗಿ ಹೊಸಾ ಹೊಸಾ ಯುವಕರಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಅಪ್ಪಾ ಹಾಕಿದ ಆಲದ ಮರಕ್ಖೇ ಜೋತು ಬೀಳದ ಆದಷ್ಟೂ ಬದಲಾವಣೆ ತರಲು ಪ್ರಯತ್ನಿಸುತ್ತಿದೆ.

ಇದೇ ಮಾರ್ಗಸೂಚಿಯಂತೆಯೇ ಮುಂಬರುವ ಚುನಾವಣೆಯಲ್ಲಿ ಈಗಾಗಲೇ ಐದಾರು ಬಾರಿ ಪಕ್ಷದಿಂದ ಅಯ್ಕೆಯಾಗಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡದೇ ಸುಮಾರು 60ಕ್ಕೂ ಹೆಚ್ಚಿನ ಹೊಸಬರಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯದಲ್ಲಿ ಹೊಸತನವನ್ನು ತರುವ ಮೂಲಕ ಉಳಿದ ಪಕ್ಷಗಳಿಗಿಂತಲೂ ತಾನು ಹೇಗೆ ವಿಭಿನ್ನ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದೆ. ಪಕ್ಷ ಅಧಿಕಾರಕ್ಕೆ ಬರುವುದೊಂದೇ ಮುಖ್ಯವಾಗಿರದೇ, ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರುವ ಜನ ಸಾಮಾನ್ಯರಿಗೂ ಸಹಾ ಜನಪ್ರತಿನಿಧಿಗಳು ಸ್ಪಂದಿದುವಂತಿರಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಂದು ಈ ರೀತಿಯ ನಿರ್ಧಾರ ತಂದಿರುವುದು ಸಹಜವಾಗಿ ಹತ್ತಾರು ವರ್ಷಗಳಿಂದಲೂ ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ವಿವಿಧ ಅಧಿಕಾರವನ್ನು ಸವಿದನಂತರವೂ ನಮಗೂ ಬೇಕು ನಮ್ಮ ಮಕ್ಕಳಿಗೂ ಬೇಕು ಎನ್ನುವರಿಂದ ಪ್ರತಿರೋಧ ವ್ಯಕ್ತವಾಗಿದೆಯಲ್ಲದೇ, ಕೇವಲ ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಥಿಸಲು ಟಿಕೆಟ್ ಸಿಕ್ಕಿಲ್ಲವೆಂವ ಏಕೈಕ ಕಾರಣದಿಂದ ಇದುವರೆವಿಗೂ ಪಕ್ಷ ತನಗೆ ನೀಡಿದ್ದ ಎಲ್ಲಾ ಸಹಕಾರ ಮತ್ತು ಸೌಲಭ್ಯಗಳನ್ನು ಮರೆತು ಪಕ್ಷಕ್ಕೆ ರಾಜೀನಾಮೆ ನೀಡಿ ವಿವಿಧ ರಾಜಕೀಯ ಪಕ್ಷ ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದು ನೋಡಿದಾಗ ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ ಎನ್ನುವಂತಾಗಿದೆ.

ಕೆಲವರು ಪಕ್ಷದಿಂದ ತಾನು ಎಂಬುದನ್ನು ಮರೆತು ತಮ್ಮಿಂದಲೇ ಪಕ್ಷ ಎಂದು ಬಿಂಬಿಸಿ ಸಾಮ್ರಾಟರಂತೆ ಮೆರೆಯುತ್ತಿರುವವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ವೇದಿಕೆಯನ್ನು ಹಾಕಿಕೊಟ್ಟಿರುವಂತಿದೆ. ಒಕ್ಕಲಿಗರ ಮತ್ತು ಲಿಂಗಾಯಿತರ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದ ಆರ್ ಆಶೋಕ್ ಮತ್ತು ವಿ ಸೋಮಣ್ಣನವರಿಗೆ ಈ ಬಾರಿ ಎರೆಡೆರಡು ಕಡೆ ಅದರಲ್ಲೂ ಪ್ರಭಲರಾದ ಡಿಕೆಶಿ ಮತ್ತು ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಥಿಸಿ ವಿಜಯಿಗಳಾಗುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರಚುರಪಡಿಸಲು ಹೇಳಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

savadi2ದುರದೃಷ್ಟವಷಾತ್ ಪಕ್ಷದಿಂದ ಎಲ್ಲಾ ರೀತಿಯ ಅನುಕೂಲಗಳನ್ನು ಪಡೆದು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಪದವಿಯನ್ನು ಏರಿದ್ದ ಲಕ್ಷಣ ಸವದಿ ಮತ್ತು ಜಗದೀಶ್ ಶೆಟ್ಟರ್ ಅವರು ಪಕ್ಷದ ಸಿದ್ಧಾಂತ ಮತ್ತು ತತ್ವಗಳನ್ನು ಗಾಳಿಗೆ ತೂರಿ ಪಕ್ಷದ ವಿರುದ್ಧ ಸೆಟೆದೆದ್ದು ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂದು ಕಾಂಗ್ರೇಸ್ ಪಕ್ಷಕ್ಕೆ ಸೇರಿರುವುದು ಒಂದು ರೀತಿ ಸ್ವಯಂ ಆತ್ಮಹತ್ಯೆಮಾಡಿಕೊಳ್ಳಲು ಹೊರಟಿರುವಂತಿದೆ. ಎಲ್ಲರಿಗೂ ಗೊತ್ತಿರುವಂತೆ ಕಾಂಗ್ರೇಸ್ ಪಕ್ಷದದಲ್ಲಿ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಮತ್ತು ಸಿದ್ದು ಟವಲ್ ಹಾಕಿ ಕುಳಿತಿದ್ದರೆ, ಹಿಂದಿನಿಂದ ವಿವಿಧ ಕೋಟಾದ ಅಡಿಯಲ್ಲಿ ಪರಮೇಶ್ವರ್, ಎಂ.ಬಿ.ಪಾಟೀಲ್, ಮಲ್ಲಿಕಾರ್ಜುನ ಖರ್ಗೆ ಮತ್ತು ಶ್ಯಾಮನೂರು ಶಿವಶಂಕರಪ್ಪ ರಂತಹ ಘಟಾನು ಘಟಿಗಳು ಲಾಭಿ ನಡೆಸುತ್ತಿದ್ದಾರೆ. ಇಂತಹವರ ಮಧ್ಯೆ ಸವದಿ ಮತ್ತು ಶೆಟ್ಟರ್ ಅವರಿಗೆ ಯಾವ ಅಧಿಕಾರ ಕೊಡುತ್ತಾರೆ ಎಂಬ ಸಾಮಾನ್ಯ ಅರಿವೂ ಸಹಾ ಆ ಮಹಾನ್ ಮುತ್ಸದ್ದಿಗಳಿಗೆ ಇಲ್ಲವಾಯಿತೇ ಎಂಬುದು ಜನಸಾಮಾನ್ಯರ ಪಶ್ನೆಯಾಗಿದೆ.

begarಇವರಿಬ್ಬರ ಪರಿಸ್ಥಿತಿಯನ್ನು ಗಮನಿಸಿದಾಗ ಬಹಳ ಹಿಂದೆ ಓದಿದ್ದ ಕತೆಯೊಂದು ನೆನಪಾಗುತ್ತದೆ. ಅದೊಂದು ಊರಿನಲ್ಲಿದ್ದ ಭಿಕ್ಷುಕನೊಬ್ಬನಿಗೆ ಪ್ರತೀದಿನವೂ ಒಂದು ಮನೆಯಲ್ಲಿ ತಾವು ಮಾಡಿದ ಮತ್ತು ತಾವು ತಿನ್ನುತ್ತಿದ್ದಂತಹ ಅಡುಗೆಯನ್ನೇ ಹಾಕುತ್ತಿದ್ದರಿಂದ ಆ ಭಿಕ್ಷುಕ ಬೇರೆ ಮನೆಗೆ ಭಿಕ್ಷೆಗೆ ಹೋಗದೆ ನೆಮ್ಮದಿಯಾಗಿ ಇದ್ದನಂತೆ. ಅದೊಂದು ದಿನ ಆವರ ಮನೆಯ ಒಡತಿಗೆ ಹುಷಾರಿಲ್ಲದಿದ್ದಾಗ ಇವತ್ತು ನಮ್ಮ ಮನೆಯಲ್ಲಿ ಆಡುಗೆ ಮಾಡಿಲ್ಲ ಹಾಗಾಗಿ ಇವತ್ತು ನಿನಗೆ ಕೊಡಲು ಏನೂ ಇಲ್ಲಾ ಎಂದಾಗ. ಇದ್ದಕ್ಕಿದ್ದಂತೆಯೇ ಆ ಭಿಕ್ಷುಕನಿಗೆ ಕೋಪ ಬಂದು ವಾಚಾಮಗೋಚರವಾಗಿ ಜೋರು ಹೋರಾಗಿ ಬೈಯತೊಡಗಿದನಂತೆ. ಶತ್ರುವಿನ ಶತ್ರು ತನ್ನ ಮಿತ್ರ ಎನ್ನುವ ಗಾದೆಯಂತೆ ನೆರೆಮನೆಯವರಲ್ಲಿ ಆ ಭಿಕ್ಷುಕ ಬೈಯುತ್ತಿದ್ದದ್ದನ್ನು ಕೇಳಿಸಿಕೊಂಡು ಸಂತಸಗೊಂಡ ಪಕ್ಕದ ಮನೆಯವರು, ಅಯ್ಯೋ ಅವರು ಹಾಗದೇ ಹೋದರೇನಂತೆ ನಾನು ಹಾಕುತ್ತೀನಿ ಬಾ ಎಂದದ್ದನ್ನು ಕೇಳಿದ ಕೂಡಲೇ ಅಷ್ಟು ದಿನಗಳಕಾಲ ತಪ್ಪದೇ ಭಿಕ್ಷೆಹಾಕಿದವರನ್ನು ಮರೆತು ಅವರ ಪಕ್ಕದ ಮನೆಯವರನ್ನು ಇಂದ್ರ ಚಂದ್ರ ದೇವೇಂದ್ರ ಎಂದು ಹಾಡಿ ಹೊಗಳಿ ಭಿಕ್ಷೆ ಹಾಕಿಸಿಕೊಂಡು ಹೋದ ಭಿಕ್ಷುಕ ಮನೆಗೆ ಹೋಗಿ ಅದನ್ನು ತಿನ್ನಲು ಹೋದಾಗ ಅದು ಮೂರು ದಿನದ ಹಿಂದಿನ ಹಳದಲು ಅಡುಗೆಯಾಗಿತ್ತಂತೆ. ಅಯ್ಯೋ ಇಂತಹ ಹಳಸಲು ಅಡುಗೆಯನ್ನು ತಿಂದು ಆರೋಗ್ಯ ಕೆಡೆಸಿಕೊಳ್ಳುವ ಬದಲು ಒಂದು ದಿನ ಉಪವಾಸವಿದ್ದು ಎಂದಿನಂತೆ ಮೊದಲ ಮನೆಯಲ್ಲಿಯೇ ತಾಜಾ ಆಹಾರವನ್ಣೇ ಸೇವಿಸಬಹುದಾಗಿತ್ತಲ್ಲವೇ? ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಂಡನಲ್ಲಾ ಎಂದು ಪರಿತಪಿಸಿದನಂತೆ.

ಇಂದು ಬಿಜಿಪಿಯ ಬಂಡಾಯದ ಮಧ್ಯೆ ತಮ್ಮ ರಾಜಕೀಯ ಬೇಳೆಯನ್ನು ಬೆಳಸಿಕೊಳ್ಳುವ ಸಲುವಾಗಿ ಇಂದ್ರ ಚಂದ್ರ ದೇವೇಂದ್ರ ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್ ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಕಾಲ ಕಸದಂತೆ ಕಾಣುವುದು ನಿಶ್ಚಯವಾಗಿಯೂ ಸತ್ಯ. ತಾನು ಸತ್ತನಂತರ ತನ್ನ ಹೆಣವೂ ಸಹಾ ಬಿಜೆಪಿ ಪಕ್ಷದ ಕಛೇರಿಯತ್ತ ತಿರುಗಿ ನೋಡದು ಎಂದ ಸವದಿ ಮತ್ತು ಶೆಟ್ಟರ್ ನಿಸ್ಸಂದೇಹವಾಗಿಯೂ ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಭಮನಿರಸನ ಗೊಂಡಾಗ ಯಾವ ಪಕ್ಷಕ್ಕೆ ಹೋಗುತ್ತಾರೋ?

savadiಬೆಳಗಾವಿ ಜೆಲ್ಲೆಯ ಸಾಮಾನ್ಯ ನಾಯಕನಾಗಿದ್ದ ಲಕ್ಷಣ್ ಸವದಿಯನ್ನು ಮಂತ್ರಿಮಾಡಿದ್ದರೂ, ವಿಧಾನಸೌಧದ ಅಧಿವೇದಿಶನದ ಸಮಯದಲ್ಲೇ, ಸದನದಲ್ಲಿ ಮೊಬೈಲ್ ನಲ್ಲಿ ನೀಲಿ ಚಿತ್ರ ನೋಡಿ ಪಕ್ಷಕ್ಕೂ ತಮ್ಮನ್ನು ಆಯ್ಕೆಮಾಡಿಕಳುಹಿಸಿದ್ದ ಕ್ಷೇತ್ರದ ಜನರಿಗೆ ಮುಜುಗೊರ ತಂದರೂ, ಕಾಂಗ್ರೇಸ್ ಪಕ್ಷ ಬ್ಲೂಜೇಪಿ ಎಂದು ಸಾರ್ವತ್ರಿಕವಾಗಿ ಅವಮಾನ ಪಡಿಸುತ್ತಿದ್ದರೂ. ಪಕ್ಷ ಮತ್ತೆ ಸವದಿಅವರಿಗೆ ಟಿಕೆಟ್ ನೀಡಿತ್ತು. ಅಂದಿನ ಚುನಾವಣೆಯಲ್ಲಿ ಅವರ ಕ್ಷೇತ್ರದ ಜನ ತಿರಸ್ಕರಿಸಿ ಮಹೇಶ್ ಕುಮಟಳ್ಳಿಯವರನ್ನು ಗೆಲ್ಲಿಸಿದ್ದರು. ನಂತರ ಬದಲಾದ ರಾಜಕೀಯ ಪರಿಸ್ಥಿಯಲ್ಲಿ ಮಹೇಶ್ ಕುಮಟಳ್ಳಿ ಕಾಂಗ್ರೇಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನು ಸೇರಿಕೊಂಡು ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಗೆದ್ದರೂ, ಅವರಿಗೆ ಮಂತ್ರಿಸ್ಥಾನವನ್ನು ನೀಡದೇ, ಸೋತಿದ್ದ ಸವದಿಯವರನ್ನು ಉಪಮುಖ್ಯಮಂತ್ರಿಯಂತ ಉನ್ನತ ಸ್ಥಾನವನ್ನು ನೀಡಿದ್ದಲ್ಲದೇ, ವಿಧಾನಪರಿಷತ್ತಿಗೆ ಆಯ್ಕೆಮಾಡಿತ್ತು.

shettar2ಇನ್ನು ಜಗದೀಶ್ ಶೆಟ್ಟರ್ ಅವರ ತಂದೆಯವರು ಜನಸಂಘದ ಕಾಲದಿಂದಲೂ ಪಕ್ಷದ ಜೊತೆಗಿದ್ದದಲ್ಲದೇ ಜನಸಂಘದಿಂದಲೇ ಹುಬ್ಬಳ್ಳಿಯ ಮೇಯರ್ ಕೂಡಾ ಆಗಿದ್ದ ಪರಿಣಾಮ ಸಹಜವಾಗಿಯೇ ಜಗದೀಶ್ ಶೆಟ್ಟರ್ ವಿದ್ಯಾರ್ಥಿ ದಸೆಯಿಂದಲೇ ಅಭಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿ ಸಂಘಪರಿವಾರದವರಾಗಿದ್ದರು. 1994 ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 1999ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ 40+ ಸ್ಥಾನಗಳನ್ನು ಗಳಿಸಿದ್ದರೂ, ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಿಂದ ಸೋಲನ್ನು ಅನುಭವಿಸಿದ್ದ ಕಾರಣ, ಬಿಜೆಪಿ ಆರಂಭವಾದಾಗಲಿಂದಲೂ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮತ್ತೊಬ್ಬ ಪ್ರಭಲ ಲಿಂಗಾಯಿತ ನಾಯಕರಾಗಿದ್ದ ಸಕಲೇಶಪುರದ ಶ್ರೀ ಬಿ.ಬಿ.ಶಿವಪ್ಪನವರು ಸಹಜವಾಗಿ ವಿರೋಧ ಪಕ್ಷದ ನಾಯಕನಾಗುವುದನ್ನು ತಪ್ಪಿಸುವ ಸಲುವಾಗಿ ಯಡೆಯೂರಪ್ಪನವರು ಲಿಂಗಾಯಿತ ಬಣಜಿಗ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನು ಮುನ್ನೆಲೆಗೆ ತಂದರು. 2008-2009ರ ಅವಧಿಯಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಕೆಲ ಕಾಲ ಸೇವೆ ಸಲ್ಲಿಸಿದ ನಂತರ ಯಡೆಯೂರಪ್ಪನವರ ಸಂಪುಟದಲ್ಲಿ ಮಂತ್ರಿಗಳಾಗಿ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2012 ರಿಂದ 2013 ರವರೆಗೆ ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿರುವ ಅಧಿಕಾರವನ್ನು ಪಕ್ಷ ಕೊಟ್ಟಿತ್ತು. 2020ರಲ್ಲಿ ಮತ್ತೆ ಯಡೆಯೂರಪ್ಪನವರ ಮಂತ್ರಿ ಮಂಡಲದಲ್ಲಿ ಮಂತ್ರಿಗಳಾಗಿದ್ದರು. ಹೀಗೆ ಸಾಮಾನ್ಯ ಶಾಸಕರಾಗಿದ್ದವರು ಯಡೆಯೂರಪ್ಪನವರ ಬೆಂಬಲದಿಂದ ವಿರೋಧ ಪಕ್ಷದ ನಾಯಕ, ಸಭಾಪತಿ, ಮಂತ್ರಿ, ಮುಖ್ಯಮಂತ್ರಿ ಹೀಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ಗಳಿಸಿದ್ದರು. ಇಷ್ಟರ ಮಧ್ಯೆ ಕಳೆದ ಚುನಾವಣೆಯಲ್ಲಿ ಅವರ ತಮ್ಮನಿಗೂ ಸಹಾ ವಿಧಾನಸಭಾ ಟಿಕೆಟ್ ಕೊಡಿಸಿ ಆ ಚುನಾವಣೆಯಲ್ಲಿ ಅವರ ತಮ್ಮ ಸೋತ ನಂತರ ಅವರನ್ನು ವಿಧಾನಪರಿಷತ್ತಿನ ಸದಸ್ಯರನ್ನಾಗಿ ಮಾಡಿತ್ತು. ಹೀಗೆ ಪಕ್ಷ ಅವರಿಗೆ ಮತ್ತು ಅವರ ಕುಟುಂಬದವರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರೂ ಈಗ ಅದೇ ಪಕ್ಷವನ್ನು ಧಿಕ್ಕರಿಸಿ ಅವರೇ ಹೇಳುತ್ತಿದ್ದ ಮುಳುಗುವ ಹಡಗು ಕಾಂಗ್ರೆಸ್‌ ಪಕ್ಷವನ್ನು ತಮ್ಮ ಬೀಗರಾದ ಶಾಮನೂರು ಕುಟುಂಬದ ಮೂಲಕ ಸೇರಿಕೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಎರಡನೇ ಪುತ್ರ ಗಣೇಶ್‌ ಅವರ ಮಗಳು ಅಂಚನಾ ಶಾಮನೂರು ಮತ್ತು ಜಗದೀಶ್ ಶೆಟ್ಟರ್ ಅವರ ಮೊದಲನೇ ಪುತ್ರ ಪ್ರಶಾಂತ್ ಶೆಟ್ಟರ್ 2014ರಲ್ಲಿ ವಿವಾಹವಾಗಿದ್ದಾರೆ. ಈಗ ಆ ನೆಂಟಸ್ತಿಕೆಯನ್ನು ಬಳಸಿಕೊಂಡು ಕಾಂಗ್ರೆಸ್‌ ಸೇರಿಕೊಂಡಿರುವುದು ನಿಜಕ್ಕೂ ಅವರ ಅಧಿಕಾರದ ದುರಾಸೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

shettarನಾನು ಮಂತ್ರಿ, ಮುಖ್ಯಮಂತ್ರಿ ಆಗಿದ್ದೇನೆ. ಯಡೆಯೂರಪ್ಪನವರ ನಂತರ ಲಿಂಗಾಯತ ನಾಯಕರಲ್ಲಿ ನಾನೇ ಹಿರಿಯ ನನಗೆ ಅಧಿಕಾರ ಬೇಕಿಲ್ಲ. ರಾಜ್ಯ ಬಿಜೆಪಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್​ ತತ್ವ, ಸಿದ್ಧಾಂತ ಒಪ್ಪಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದಿದ್ದಾರೆ. ಹಿರಿಯ ಬಿ.ಬಿ.ಶಿವಪ್ಪನವರಿಗೆ ಸಿಗಬೇಕಿದ್ದ ವಿರೋಧಪಕ್ಷದ ನಾಯಕ ಸ್ಥಾನವನ್ನು ಆವರಿಂದ ಕಿತ್ತುಕೊಂಡು ಅವರನ್ನು ಪಕ್ಷವಿರೋಧಿ ಚಟುವಟಿಕೆಯ ಕಾರಣ ನೀಡಿ ಪಕ್ಷದಿಂದಲೇ ಹೊರಹಾಕಿ ಶೆಟ್ಟರ್ ಅವರಿಗೆ ವಿರೋಧ ಪಕ್ಷ ಸ್ಥಾನ ನೀಡಿದಾಗ, ಅದೇ ರೀತಿ ಡಿ.ವಿ.ಸದಾನಂದ ಗೌಡರನ್ನು ಮುಖ್ಯಮಂತ್ರಿಸ್ಥಾನದಿಂದ ಇಳಿಸಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ ಇಲ್ಲದ ಮನಸಾಕ್ಷಿ ಮತ್ತು ಅಂತರಸಾಕ್ಷಿ ಈಗ ಟಿಕೆಟ್ ತಪ್ಪಿದ ತಕ್ಷಣ ಬಂದಿತೇ?

ರಾಜ್ಯದ ನಾಯಕರು ಕರೆ ಮಾಡಿ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಲ್ಲದೇ, ಪಕ್ಷದ ಅಧ್ಯಕ್ಷರೇ ದೆಹಲಿಗೆ ಕರೆಸಿಕೊಂಡು ಶೆಟ್ಟರ್ ಅವರ ಮುಂದಿನ ರಾಜಕೀಯ ಜೀವನ ಹೇಗೆ ಇರುತ್ತದೆ ಎಂದು ಸವಿರವಾಗಿ ವಿವರಿಸಿದರೂ, ಈಗ ಲಿಂಗಾಯಿತ ಜಾತಿ ರಾಜಕಾರಣವನ್ನು ಮುಂದೆ ಮಾಡಿ ಪಕ್ಷ ತನನ್ನು ಗೌರವಯುತವಾಗಿ ನೋಡಿಕೊಂಡಿಲ್ಲಾ ಎನ್ನುತ್ತಿರುವುದು ಅವರ ಹೇಳೋದೊಂದು ಮಾಡುವುದು ಮತ್ತೊಂದು ಎನ್ನುವಂತಿದೆ.

ಹೀಗೆ ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ದೆಹಲಿಯ ಮುಖ್ಯಮಂತ್ರಿ ಖುರಾನಾ, ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಕಲ್ಯಾಣ್ ಸಿಂಗ್, ಜಾರ್ಖಂಡಿನ ಬಾಬುಲಾಲ್ ಮರಾಂಡಿ, ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಉಮಾ ಭಾರತಿ ಅಷ್ಟೇ ಏಕೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಯಡೆಯೂರಪ್ಪನವರೇ ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ. ಗೋವಿಂದಾಚಾರ್ಯರಂತಹ ಹಿರಿಯರು ಸಹಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದರೇ ಹೊರತು ಸಿದ್ಧಾಂತವನ್ನು ಬಿಡಲಿಲ್ಲ.

ನಂತರದ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಹೊರ ಹೋದವರಿಗೆ ತಮ್ಮ ತಪ್ಪಿನ ಅರಿವಾದಾಗ ಪಕ್ಷ ಮತ್ತೆ ಅವರನ್ನು ಸ್ವಾಗತಮಾಡಿತಲ್ಲದೇ ಅವರ ಹಿರಿತನಕ್ಕೆ ಅನುಗುಣವಾಗಿ ಸೂಕ್ತವಾದ ಸ್ಥಾನಮಾನವನ್ನು ನೀಡಿ ಗೌರವಿಸಿತ್ತು. ಹೀಗೆ ಅಷ್ಟೆಲ್ಲಾ ವಿಶೇಷವಾದ ಸವಲತ್ತುಗಳು ಮತ್ತು ಅಧಿಕಾರವನ್ನು ಅನುಭವಿಸಿ ಪಕ್ಷದ ಸಿದ್ಧಾಂತದ ವಿರುದ್ಧವಾಗಿ ನಡೆದುಕೊಂಡಂತಹವರನ್ನು ಪಕ್ಷ, ಪಕ್ಷದ ಕಾರ್ಯಕರ್ತರು ಬಿಡಿ ಜನಸಾಮಾನ್ಯರೇ ಸಹಿಸಿಕೊಳ್ಳುವುದಿಲ್ಲ ಎನ್ನುವುದು ಇನ್ನು ಕೆಲವೇ ವಾರಗಳಲ್ಲಿ ತಿಳಿಯಲಿದೆ. ಮಿಂಚಿಹೋದಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಅವರವರ ಭಾವಕ್ಕೆ ಅವರವರ ಭಕುತಿ ಎಂದು ಸುಮ್ಮನಾಗುವುದೇ ಲೇಸು. ಕಾಲ ಹೀಗೇ ಇರುವುದಿಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

  1. ಅಧಿಕಾರ ಆಸೆ ಮನುಷ್ಯನನ್ನು ಹೇಗೆ ಅಧಃಪತಿಸುತ್ತದೆ ಎಂಬುದಕ್ಕೆ ಸವದಿ ಮತ್ತು ಶೆಟ್ಟರ್ ಅತೀ ಕೆಟ್ಟ ಉದಾಹರಣೆ.ಸಮಾಜಸೇವೆ ಮಾಡಲು ಅಧಿಕಾರ ಬೇಕಾಗಿಲ್ಲ.ಕೇವಲ ಒಂದು ಸಾರಿ ಮಾತ್ರ ಕರ್ನಾಟಕ ದಲ್ಲಿ ಅಧಿಕಾರ ಪಡೆದ B J P ಯನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚಳ್ಳೆಹಣ್ಣು ತಿನ್ನಿಸಿದ ಗೋಸುಂಬೆ ಗಳನ್ನು ಇಷ್ಟು ದಿನ ನಂಬಿ ಜಿಂದಾಬಾದ್ ಹೇಳಿದೇವಲ್ಲ.ನಾಚಿಕೆ ಯಾಗುತ್ತದೆ.
    ನೈತಿಕತೆ ಇಲ್ಲದ ಮೇಲೆ ಎನಿದ್ದೂ ಪ್ರಯೋಜನ ಇಲ್ಲ.
    ಈಶ್ವರಪ್ಪ ಎನ್ನುವ ಬಾಯಿ ಹರಕ ಸನ್ಯಾಸ ಘೋಷಿಸಿದ್ದು ಬಿಜೆಪಿ ಭಾಗ್ಯ.ಹಾಗೇನೇ ಮಾತಿನ ಮೇಲೆ ನಳಿನಕುಮಾ ರರೂ ನಿಯಂತ್ರಣ ಸಾಧಿಸಬೇಕು.ಚಪ್ಪಾಳೆ ತಟ್ಟುತ್ತಾರೆ ಅಂತ ತೂಕ ತಪ್ಪಿ ಮಾತನಾಡಬಾರದು.
    ಕಾಂಗ್ರೆಸ್ ಇಂತಹ ಬೆಳವಣಿಗೆ ಗಳ ಲಾಭ ಪಡೆದು ಬೆಳೆಯುತ್ತದೆ.
    ಕುಮಾರಸ್ವಾಮಿ ಇಂತಹ ದೊಡ್ಡ ಕುಳಗಳು ಬೇಡ ಅಂತ ಜನ ನಡಿಗೆ ನಡೆಸಿದ್ದಾರೆ.
    ಉತ್ತರ ಕರ್ನಾಟಕದ ಜನ ದಡ್ಡರೂ,ಹರಕು ಬಾಯಿಯವರೂ ಅಂತ ಪುನಃ ಸಾಬೀತು ಆಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s