ಲಕ್ಷದ್ವೀಪ

ಕಳೆದ ವಾರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಲಕ್ಷದ್ವೀಪ ಪ್ರವಾಸದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಪ್ರಪಂಚಾದ್ಯಂತ ಪ್ರವಾಸೀತಾಣಗಳು ಅಲ್ಲೋಲಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಲಕ್ಷದ್ವೀಪದ ಕುರಿತಾದ ಪ್ರಧಾನಿಗಳ ಪ್ರೇಮ ಕೇವಲ ನೆನ್ನೆಯ ಮೊನ್ನೆಯದ್ದಾಗಿರದೇ, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ಕುರಿತಾಗಿ ತಮ್ಮ ದೂರದೃಷ್ಟಿತನದಿಂದ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ, ಲಕ್ಷದ್ವೀಪದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಲಕ್ಷದ್ವೀಪ

ವಿರೋಧ ಪಕ್ಷಗಳು

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಹುಮತ ಪಡೆದವರು ಆಡಳಿತ ನಡೆಸುವ ಅಥಿಕಾರ ಪಡೆದರೆ, . ಬಹುಮತ ಪಡೆಯದವರು ವಿರೋಧ ಪಕ್ಷವಾಗುತ್ತಾರೆ.  ದೇಶದ ಹಿತದೃಷ್ಟಿಯಿಂದ ದೇಶದ ಆಗು ಹೋಗುಗಳ ಬಗ್ಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲು ಆಡಳಿತ ಪಕ್ಷದಷ್ಟೇ ಜವಾಬ್ಧಾರಿ ವಿರೋಧಪಕ್ಷಕ್ಕೂ ಇರುತ್ತದೆ. ಹಾಗಾಗಿಯೇ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳನ್ನು ಕಾವಲು ನಾಯಿಗಳಿಗೆ ಹೋಲಿಸಲಾಗುತ್ತದೆ,  ವಿರೋಧ ಪಕ್ಷ ಎಂದ ಮಾತ್ರಕ್ಕೆ ಆಡಳಿತ ಪಕ್ಷ ಮಾಡುವ ಎಲ್ಲಾ ಕೆಲಸಗಳನ್ನೂ ವಿರೋಧಿಸಲೇ ಬೇಕೆಂಬ ನಿಯಮವೇನಿಲ್ಲ. ವಿರೋಧ ಪಕ್ಷವು ರಚನಾತ್ಮಕವಾಗಿ ಕಾರ್ಯನಿಭಾಯಿಸುವ ಮೂಲಕ ಆಡಳಿತ ಪಕ್ಷ ದೇಶವನ್ನು ಸರಿಯಾದ… Read More ವಿರೋಧ ಪಕ್ಷಗಳು

ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು… Read More ಪ್ರಧಾನಿಗಳ ಇಂದಿನ ಲೇಹ್ ಭೇಟಿಯ ಹಿಂದಿರುವ ಕೂತಹಲಕಾರಿ ಸಂಗತಿಗಳು

ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಅನಕ್ಷರಸ್ಥ ಕುರಿ ಕಾಯುವ ವೃತ್ತಿಯನ್ನು ಮಾಡುವ 84 ವರ್ಷ ಕುರುಬ ಕಲ್ಮನೆ ಕಾಮೇಗೌಡ ಎಂಬ ಹೆಸರು ಬಹುಶಃ ಅವರ ಊರು ಅಥವಾ ಅವರ ತಾಲ್ಲೂಕಿನ ಹೊರತಾಗಿ ಹೊರಗಿನವರಿಗೆ ಹೆಚ್ಚಾಗಿ ಪರಿಚಯವೇ ಇರಲಿಲ್ಲ. ಆದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್  ನಲ್ಲಿ ಈ ವ್ಯಕ್ತಿಯ ಬಗ್ಗೆ  ಯಾವಾಗ ಮಾತನಾಡಿದರೋ ಆ ಕೂಡಲೇ ಅವರ ಹೆಸರು ದೇಶಾದ್ಯಂತ ಪರಿಚಿತವಾಗಿ ಗೂಗಲ್ಲಿನಲ್ಲಿ… Read More ಕರ್ನಾಟಕದ ಭಗೀರಥ ಶ್ರೀ ಕಲ್ಮನೆ ಕಾಮೇಗೌಡರು

ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ನಮ್ಮ ದೇಶದಲ್ಲಿ ಅತ್ಯಂತ ಹಿಂದುಳಿದ ಕೆಲವೇ ಕೆಲವೂ ರಾಜ್ಯಗಳಲ್ಲಿ ಒರಿಸ್ಸಾ ರಾಜ್ಯವೂ ಒಂದು. ಇಂದೂ ಸಹ ದೇಶಾದ್ಯಂತ ಅದರಲ್ಲೂ ಬೆಂಗಳೂರಿನ ಅನೇಕ ಸಾಪ್ಘ್ವೇರ್ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್ ಗಳಲ್ಲಿ ಹೆಚ್ಚಿನವರು ಒರಿಸ್ಸಾದವರೇ ಆಗಿರುತ್ತಾರೆ ತಮ್ಮ SSLC ಅಥವಾ PUC ಎಲ್ಲೋ ಕೆಲವರು Degree ಮುಗಿಸಿ ತಕ್ಕ ಮಟ್ಟಿಗಿನ English ಕಲಿತರೆಂದರೆ ಅಲ್ಲಿಂದ ಬೆಂಗಳೂರು, ಹೈದ್ರಾರಾಬಾದ್ ಇಲ್ಲವೇ ಕಲ್ಕತ್ತಾದ ಕಡೆ ಉದ್ಯೋಗ ಅರಸಿಕೊಂಡು ಹೋಗುತ್ತಾರೆ. ಕ್ರಮವಾಗಿ 2004, 2009, 2014 ಮತ್ತು 2019 ರ ಅಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ… Read More ಕರ್ತವ್ಯ  ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ 

ಜನತಾ ಕರ್ಫ್ಯೂ

ನಮಗೆಲ್ಲರಿಗೂ ಈಗಾಗಲೇ ತಿಳಿದಿರುವಂತೆ ದಿನಾಂಕ 22.03.2020, ಬೆಳಿಗ್ಗೆ 7 ರಿಂದ ರಾತ್ರಿ 9 ಘಂಟೆಯವರೆಗೂ ಸಮಸ್ತ ಭಾರತೀಯರು ಸ್ವಯಂಪ್ರೇರಿತರಾಗಿ ಮನೆಯಲ್ಲಿಯೇ ಇರಬೇಕೆಂದು ನಮ್ಮ ದೇಶದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ದಿನಾಂಕ 19.03.2020 ರಂದು ರಾತ್ರಿ 8.00 ಘಂಟೆಗೆ ಮಾಡಿದ ಭಾಷಣದಲ್ಲಿ ಕೋರಿಕೊಂಡಿದ್ದಾರೆ. ಬಹಳಷ್ಟು ಜನರಿಗೆ ಒಂದು ಕೇವಲ 14 ಘಂಟೆಗಳ ಅವಧಿಯವರೆಗೆ ಮನೆಯಲ್ಲಿದ್ದರೆ ಮಾರಕ ಸೋಂಕು ಕರೋನವನ್ನು ತಡೆಗಟ್ಟ ಬಹುದೇ? ಹಾಗಿದ್ದಲ್ಲಿ ಇದನ್ನು ಪ್ರಪಂಚಾದ್ಯಂತ ಈಗಾಗಲೇ ಮಾಡುತ್ತಿರಲಿಲ್ಲವೇ ಎಂಬ ಕುಹಕ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಇದು… Read More ಜನತಾ ಕರ್ಫ್ಯೂ