ವ್ಯಾಪಾರಂ ದ್ರೋಹ ಚಿಂತನಂ

ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿದೆ. ಸರಳವಾಗಿ ಹೇಳಬೇಕೆಂದರೆ, ಒಮ್ಮೆ ವ್ಯಾಪಾರಕ್ಕೆಂದು ಇಳಿದರೆ, ಅದರಲ್ಲಿ ಧರ್ಮ ಕರ್ಮ ಎಂದು ನೋಡಲಾಗದೇ, ಲಾಭ ಮಾಡುವುದಷ್ಟೇ ಮುಖ್ಯ ಎಂದಾಗುತ್ತದೆ. ಹೀಗಿದ್ದರೂ ಸಹಾ ಈ ಹಿಂದಿನ ಅನೇಕ ವ್ಯಾಪಾರಿಗಳು  ಧರ್ಮ ಕರ್ಮಕ್ಕೆ ಸ್ವಲ್ಪ  ಒತ್ತು ನೀಡುತ್ತಾ, ಸಮಾಜ ಅಭಿವೃದ್ಧಿಗೆ ಕಾರಣರಾಗುತ್ತಿದ್ದರು. ಆದರೆ ಇತ್ತೀಚಿನ ವ್ಯಾಪಾರಿಗಳಿಗೆ ಅಂತಹ ಧರ್ಮ ಮತ್ತು ಕರ್ಮವನ್ನು ನೋಡಲು ಪುರುಸೊತ್ತು ಇಲ್ಲದೇ, ಸಮಾಜ ಹಾಳಾದರೂ ಪರವಾಗಿಲ್ಲಾ ತಮಗೆ ಲಾಭ ಆದರೆ ಸಾಕು ಎನ್ನುವಂತಾಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ಮಂಗಳೂರಿನ… Read More ವ್ಯಾಪಾರಂ ದ್ರೋಹ ಚಿಂತನಂ

ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ತಮ್ಮ ಮನೋಜ್ಞ ಅಭಿನಯದ ಮೂಲಕ ನೂರಾರು ನಾಟಕಗಳು, ಲೆಕ್ಕವಿಲ್ಲದಷ್ಟು ಧಾರಾವಾಹಿಗಳು ಮತ್ತು ಸುಮಾರು 500 ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಸದಾಕಾಲವೂ ಹಚ್ಚ ಹಸುರಾಗಿದ್ದ ಮತ್ತು ನೆನ್ನೆ ತಾನೇ ಹೃದಯಾಘಾತದಿಂತ ನವೆಂಬರ್ 8, 2022ರಂದು ನಿಧನರಾದ ಕಂಚಿನ ಕಂಠದ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ವ್ಯಕ್ತಿ ಚಿತ್ರಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ಕೊಡುಗೈ ರಾಜು

ಅದು 1998. ನನ್ನ ಮದುವೆಗಾಗಿ ಹೆಣ್ಣು ನೋಡುತ್ತಿದ್ದ ಸಮಯದಲ್ಲಿ ತಮ್ಮ ಮಗಳ ಜಾತಕವನ್ನು ಹಿಡಿದುಕೊಂಡು ಮೊತ್ತ ಮೊದಲ ಬಾರಿಗೆ ಸುಮಾರು 6 ಅಡಿಯಷ್ಟು ಎತ್ತರದ ಸುಂದರ ಮೈಕಟ್ಟಿನ ನಡು ವಯಸ್ಸಿನವರು ನಮ್ಮ ಮನೆಗೆ ಬಂದು ತಮ್ಮನ್ನು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಹುಟ್ಟಿಸುವಾಗಲೇ ಬ್ರಹ್ಮ ಬರೆದು ಕಳುಹಿಸಿರುತ್ತಾನೆ ಎಂಬಂತೆ ಜಾತಕಗಳೆಲ್ಲವೂ ಕೂಡಿ ಬಂದ ಕಾರಣ, ಅದೇ ಗುರುವಾರ ಸಂಜೆ ನನ್ನ ಜೀವನದಲ್ಲಿಯೇ ಪ್ರಪ್ರಥಮವಾಗಿ ಮತ್ತು ಅಧಿಕೃತವಾಗಿ… Read More ಕೊಡುಗೈ ರಾಜು