ತಾರಸಿ ತೋಟ ಕಾರ್ಯಾಗಾರ

ಸ್ವದೇಶಿ ಜಾಗರಣ ಮಂಚ್ ಮತ್ತು ವಿಶ್ವಗುರು ಚಾರಿಟಬಲ್ ಟ್ರಸ್ಟ್  ಆಶ್ರಯದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ದಿನಾಂಕ 24.07.2022 ರಂದು ಶ್ರೀಮತಿ ಪ್ರತಿಮಾ ಅಡಿಗರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ತಾರಸಿ ತೋಟ ಕಾರ್ಯಾಗಾರವನ್ನು ನಡೆಸಲಾಯಿತು. ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತನೇ ಈ ದೇಶದ ಬೆನ್ನಲುಬಾಗಿದ್ದಾನೆ. ಹಾಗಾಗಿ ಸ್ಥಳೀಯ ಚಿಂತನೆ, ಸ್ಥಳೀಯ ಮಾರುಕಟ್ಟೆ ಮತ್ತು ದೇಶದ ಸ್ಥಳೀಯ ಆರ್ಥಿಕ ಅಭಿವೃದ್ಧಿಯು ಎಂಬ ಸ್ವದೇಶಿ ಪರಿಕಲ್ಪನೆಯು ನಮ್ಮ ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಬ್ರಿಟಿಷ್ ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದ ನಂತರವೂ ನಮ್ಮ… Read More ತಾರಸಿ ತೋಟ ಕಾರ್ಯಾಗಾರ

ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವಪರಿಸರ ದಿನವಾದ ಜೂನ್ 6 2022ರಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಕಾರ್ಯಕ್ರಮದ ಅತಿಥಿಗಳಾಗಿದ್ದ ಶ್ರೀ ಗಂಗಾಧರನ್ (ಆರೋಗ್ಯ ಭಾರತಿಯ ಪ್ರಾಂತ ಸಹಕೋಶಾಧ್ಯಕ್ಷರು) ಮತ್ತು ಶ್ರೀಮತಿ ಮನಿಲಾ ರೆಡ್ಡಿ, (ಸ್ವದೇಶಿ ಚಾಗರಣ ಮಂಚ್ ಮಹಿಳಾ ಘಟಕದ ಪ್ರಮುಖ್) ಮತ್ತು ಸಭೆಯಲ್ಲಿ ಸೇರಿದ್ದ ಕೆಲವು ಮಾತೆಯರಿಂದ ದೀಪವನ್ನು ಪ್ರಜ್ವಲಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರೆ, ರಾಮಚಂದ್ರಪುರದ ಕಲಾಸದ ಅಕಾಡೆಮಿ ಮಕ್ಕಳು ಸುಶ್ರಾವ್ಯವಾಗಿ ಹಾಡಿದ… Read More ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ

ಸರಿ ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದೆ ಯಾವುದೇ ಮನೆಗಳಿಗೆ ಹೋದರೂ ನಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದದ್ದು ಬಾಗಿಲಿಗೆ ಕಟ್ಟಿರುವ ಒಣಗಿದ ಮಾವಿನ ಎಲೆಯ ತೋರಣ. ತೋರಣದ ಅಡಿಯಲ್ಲಿ ತಲೆಬಾಗಿ ಮನೆಯ ಒಳ ಹೊಕ್ಕಲ್ಲಿ ವಿಶಾಲವಾದ ಪ್ರಾಂಗಣ ಅದರ ಮೂಲೆಯಲ್ಲೊಂದು ಕಾಲ್ತೊಳೆಯುವ ಸ್ಥಳ. ತಾಮ್ರವೋ ಇಲ್ಲವೇ ಹಿತ್ತಾಳೆ ಕೊಳಗದಲ್ಲಿದ್ದ ನೀರನ್ನು ತಂಬಿಗೆಯಿಂದ ತುಂಬಿಕೊಂಡು ಕಾಲ್ತೊಳೆದುಕೊಂಡು, ಶುದ್ಧವಾದ ವಸ್ತ್ರದಿಂದ ಒರೆಸಿಕೊಂಡು ಹಜಾರದಲ್ಲಿ ಹಾಕಿರುವ ನಾನಾ ರೀತಿಯ ಮರದ ಪೀಠೋಪರಣದ ಮೇಲೆ ಆಸೀನರಾಗುತ್ತಿದ್ದಂತೆಯೇ ಮನೆಯೊಡತಿ ಪಳ ಪಳನೆ ಹೊಳೆಯುತ್ತಿದ್ದ ಹಿತ್ತಾಳೆ ಲೋಟದಲ್ಲಿ… Read More ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ