ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು

ಅವನೊಬ್ಬ ಅಸಾಧಾರಣ ಹುಡುಗನಾಗಿದ್ದ. ಓದಿನಲ್ಲಂತೂ ಸದಾಕಾಲವೂ ಚುರುಕು. ಗಣಿತ ಮತ್ತು ವಿಜ್ಞಾನದಲ್ಲಂತೂ ಸದಾಕಾಲವೂ 100% ಅಂಕಗಳನ್ನು ಗಳಿಸುತ್ತಿದ್ದ ಕಾರಣ ಸಹಜವಾಗಿ ಐಐಟಿ ಮದ್ರಾಸ್‌ಗೆ ಆಯ್ಕೆಯಾಗಿದ್ದಲ್ಲದೇ ಅಲ್ಲೂ ಸಹಾ ಅತ್ಯುತ್ತಮ ಅಂಕಗಳನ್ನು ಗಳಿಸಿ ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೇರಿಕಾದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ ಒಂದರಲ್ಲಿ ಎಂಬಿಎ ಪದವಿಯ ನಂತರ ಆರಂಕಿಯ ಸಂಬಳದ ಉದ್ಯೋಗವನ್ನು ಗಿಟ್ಟಿಸಿ ಅಲ್ಲಿಯೇ ನೆಲೆಸಿದ. ಕೆಲವು ವರ್ಷಗಳ ನಂತರ ಕರ್ನಾಟಕ್ಕೆ ಬಂದು, ಮನೆಯವರು ನೋಡಿದ ಕನ್ನಡತಿಯನ್ನೇ ವಿವಾಹವಾಗಿ ಅಮೇರಿಕಾದಲ್ಲಿ 5 ಕೊಠಡಿಗಳು ಇರುವಂತಹ ದೊಡ್ಡದಾದ ಮನೆ ಮತ್ತು ಐಷಾರಾಮಿ… Read More ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು

ಸಾರ್ಥಕ ಬದುಕು

ಒಂದು ಉದ್ದೇಶಿತ ಕೆಲಸಕ್ಕಾಗಿ ಬಂದು ಆ ಕೆಲಸವನ್ನು ಸಕಾಲಕ್ಕೆ ಸರಿಯಾಗಿ ಎಲ್ಲರೂ ಒಪ್ಪುವಂತೆ, ಇಲ್ಲವೇ ಹೊಗಳುವಂತೆ ಮಾಡಿ ಮುಗಿಸಿ ಹೋದಲ್ಲಿ ಅದುವೇ ಸಾರ್ಥಕತೆ ಎನಿಸುತ್ತದೆ. ಅಂತಹ ಒಂದು ಸಾರ್ಥಕ ಬದುಕನ್ನು ನಡೆಸಿದ ಒಂದು ಹಿರಿಯ ಜೀವದ ಬಗ್ಗೆ ನೆನಸಿಕೊಳ್ಳುವಂತಹ ಅನಿವಾರ್ಯ ಸಂದರ್ಭ ಬಂದೊದಗಿದ್ದು ನಿಜಕ್ಕೂ ದುಃಖ ಕರ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಯಗುಕೋಟೆಯ ಜಮೀನ್ದಾರ್ ರಾಮಚಂದ್ರರವರ ದ್ವಿತೀಯ ಪುತ್ರಿ ಲಕ್ಷ್ಮೀ (ಆದಿ ಲಕ್ಷ್ಮೀ) ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಬಳಿಯ ತಿಪ್ಪೂರಿನ… Read More ಸಾರ್ಥಕ ಬದುಕು

ಬದುಕು ಜಟಕಾ ಬಂಡಿ

ಇಂದು ಬೆಳಿಗ್ಗೆ ಮನೆಯ ಹತ್ತಿರ ಜಾಗಿಂಗ್ ಮಾಡುತ್ತಿದ್ದೆ. ಹಾಗೆ ಮಾಡುವಾಗ ನನಗಿಂತ ಸುಮಾರು ಅರ್ಧ ಕಿಲೋ ಮೀಟರ್ ಮುಂದೆ ಜಾಗಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗಮನಿಸಿದೆ. ಅವರು ಸ್ವಲ್ಪ ನಿಧಾನವಾಗಿ ಓಡುತ್ತಿರುವುದನ್ನು ಗಮನಿಸಿ ಅವರನ್ನು ಹಿಂದಿಕ್ಕಬೇಕೆಂದು ನನ್ನ ಒಳ ಮನಸ್ಸು ಹೇಳಿತು. ಹಾಗಾಗಿ ನಾನು ಮತ್ತಷ್ಟೂ ವೇಗ ಮತ್ತು ವೇಗವಾಗಿ ಓಡಲು ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಅವರಿಗಿಂತ 100 ಅಡಿಗಳ ಹಿಂದೆ ಬಂದಿದ್ದನ್ನು ಗಮನಿಸಿದ ಅವರೂ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ನಾನೂ ಕೂಡ ಅವರನ್ನು ಹಿಂದಿಕ್ಕಲು ಸರ್ವ… Read More ಬದುಕು ಜಟಕಾ ಬಂಡಿ

ಪುನರ್ಜನ್ಮ

ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ,  ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು  ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು.  ಆಗ  ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ.… Read More ಪುನರ್ಜನ್ಮ