ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಒಂದೊಂದು ಪಂದ್ಯವನ್ನು ಗೆದಿದ್ದು ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ಬಹಳ ಮುಖ್ಯವಾಗಿರುವ ಪರಿಣಾಮವಾಗಿ ಈ ಪಂದ್ಯ ಬಹಳ ಜಿದ್ದಾ ಜಿದ್ದಿನಿಂದ ರೋಚಕವಾಗಿರುವುದರಲ್ಲಿ ಸಂದೇಹವೇ ಇಲ್ಲ. ಈ ಸಮಯದಲ್ಲಿ, ಇದೇ ಕ್ರೀಡಾಂಗಣದಲ್ಲಿ , ಇದೇ ತಂಡಗಳ ನಡುವೆ 1996ರಲ್ಲಿ ರೋಚಕವಾಗಿ ನಡೆದ ಟೈಟಾನ್ ಕಪ್ ಪಂದ್ಯವಳಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಹೊನಲು ಬೆಳಕಿನ ಆ ಪಂದ್ಯವನ್ನು ಕ್ರೀಡಾಂಗಣದಲ್ಲಿ… Read More ಭಾರತ / ಆಸ್ಟ್ರೇಲಿಯ ಟೈಟಾನ್ ಕಪ್ 1996

Nation First Everything Next

ಒಂದನೊಂದು ಊರಿನ ಪಕ್ಕದಲ್ಲಿ ಒಂದು ದೊಡ್ಡ ಕಾಡು ಇತ್ತು. ಆ ಕಾಡಿನ ಒಂದು ದೊಡ್ಡ ಮರವೊಂದರಲ್ಲಿ ಹಲವಾರು ಪಕ್ಷಿಗಳು ಸುಖವಾಗಿ ವಾಸಮಾಡಿ ಕೊಂಡಿದ್ದವು. ಅಂತಹ ಪಕ್ಷಿಗಳ ಸಂಕುಲಗಳಲ್ಲಿ ಒಂದು ಗಂಡುಬೇರುಂಡ ಪಕ್ಷಿಯೂ ಇತ್ತು. ಎಲ್ಲರಿಗೂ ತಿಳಿದಿರುವಂತೆ ಗಂಡುಬೇರುಂಡ ಪಕ್ಷಿಗೆ ಒಂದೇ ದೇಹ ಎರಡು ತಲೆಗಳು ಇರುತ್ತಿದ್ದವು. ಈಗ ಈ ಪಕ್ಷಿಗಳು ನಶಿಸಿ ಹೋಗಿರುವುದರಿಂದ ಅದರ ಜ್ಣಾಪಕಾರ್ಥವಾಗಿ ನಮ್ಮ ರಾಜ್ಯದ ಅಧಿಕೃತ ಲಾಂಛನದ ಮಧ್ಯಭಾಗದಲ್ಲಿ ಗಂಡುಬೇರುಂಡ ಪಕ್ಷಿಯನ್ನು ಅಳವಡಿಸಿಕೊಂಡಿದ್ದಾರೆ. ಇಂತಹ ಗಂಡುಬೇರುಂಡ ಪಕ್ಷಿಯು ಇತರೇ ಪಕ್ಷಿಗಳಂತೆ ಕಾಡಿನಲ್ಲಿದ್ದ ಹಲವಾರು… Read More Nation First Everything Next