ವ್ಯಾಪಾರಂ ದ್ರೋಹ ಚಿಂತನಂ

ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿದೆ. ಸರಳವಾಗಿ ಹೇಳಬೇಕೆಂದರೆ, ಒಮ್ಮೆ ವ್ಯಾಪಾರಕ್ಕೆಂದು ಇಳಿದರೆ, ಅದರಲ್ಲಿ ಧರ್ಮ ಕರ್ಮ ಎಂದು ನೋಡಲಾಗದೇ, ಲಾಭ ಮಾಡುವುದಷ್ಟೇ ಮುಖ್ಯ ಎಂದಾಗುತ್ತದೆ. ಹೀಗಿದ್ದರೂ ಸಹಾ ಈ ಹಿಂದಿನ ಅನೇಕ ವ್ಯಾಪಾರಿಗಳು  ಧರ್ಮ ಕರ್ಮಕ್ಕೆ ಸ್ವಲ್ಪ  ಒತ್ತು ನೀಡುತ್ತಾ, ಸಮಾಜ ಅಭಿವೃದ್ಧಿಗೆ ಕಾರಣರಾಗುತ್ತಿದ್ದರು. ಆದರೆ ಇತ್ತೀಚಿನ ವ್ಯಾಪಾರಿಗಳಿಗೆ ಅಂತಹ ಧರ್ಮ ಮತ್ತು ಕರ್ಮವನ್ನು ನೋಡಲು ಪುರುಸೊತ್ತು ಇಲ್ಲದೇ, ಸಮಾಜ ಹಾಳಾದರೂ ಪರವಾಗಿಲ್ಲಾ ತಮಗೆ ಲಾಭ ಆದರೆ ಸಾಕು ಎನ್ನುವಂತಾಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ಮಂಗಳೂರಿನ… Read More ವ್ಯಾಪಾರಂ ದ್ರೋಹ ಚಿಂತನಂ

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಇರುವಾಗಲೆಲ್ಲಾ ಪುಂಡರ ಹಾವಳಿ ಅತಿಯಾಗುತ್ತದೆ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಕಳೆದ ಒಂದು ವಾರದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಆಗುತ್ತಿರುವ ಘಟನೆಗಳಿಂದಾಗಿ ಈ ರಾಜ್ಯದಲ್ಲಿ ಗೃಹಖಾತೆ ಎನ್ನುವುದು ಇದೆಯೇ? ಎಂದು ಜನ ಮಾತನಾಡಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ ಅಲ್ವೇ?… Read More ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ

ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ?

ಹಿಂದೂಗಳ‌ ಮೇಲಿನ ಹತ್ಯೆಗಳಿಗೆ ನಾಲಾಯಕ್ ರಾಜಕಾರಣಿಗಳನ್ನು ದೂಷಿಸುವ ಬದಲು, ನಮ್ಮ ಹಿಂದೂ ಮಠಾಧೀಶರುಗಳನ್ನು ಪ್ರಶ್ನಿಸ ಬೇಕಿದೆ.

ನಮ್ಮ ಜಾತಿಗೆ ಮೀಸಲಾತಿ ಕೊಡಿ, ನಮ್ಮರಿಗೆ ಟಿಕೆಟ್ ಕೊಡೀ, ನಮ್ಮವರನ್ನೇ ಮಂತ್ರಿ, ಮುಖ್ಯಮಂತ್ರಿ ಮಾಡಿ ಎಂದು ಬೀದಿಗಿಳಿದು ಬ್ಲಾಕ್ಮೇಲ್ ಮಾಡುವ ಮಠಾಧೀಷರುಗಳು ಹಿಂದೂ ಪರ‌ ಒಗ್ಗಟ್ಟಾಗಿ ಬೀದಿಗಿಳಿದಿದ್ದರೆ, ಯಾರೂ ಸಹಾ ಹಿಂದೂಗಳನ್ನು ಮುಟ್ಟುವುದಕ್ಕೆ ಮುಂದಾಗುತ್ತಿರಲಿಲ್ಲ ಅಲ್ವೇ?… Read More ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ?

ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಬಹಳ ಹಿಂದೆ ಕರಾವಳಿ ಪ್ರದೇಶದವರು ಎಂದರೆ ಬಹಳ ಶಾಂತಿ ಪ್ರಿಯರು. ಸಂಪ್ರದಾಯ, ಸಂಸ್ಕಾರವಂತರಷ್ಟೇ ಅಲ್ಲದೇ ಸಹೃದಯಿಗಳಾಗಿ ಕುಡಿಯಲು ನೀರು ಕೇಳಿದರೂ, ನೀರಿನ ಜೊತೆ ಸಿಹಿಯಾದ ಬೆಲ್ಲದುಂಡೆಗಳನ್ನು ನೀಡುವಂತಹ ವಿಶಾಲಹೃದಯಿಗಳು. ಇವೆಲ್ಲದರ ಜೊತೆಗೆ ಓದಿನಲ್ಲಿ ಸದಾ ಕಾಲವೂ ಮುಂದಿರುವುದಲ್ಲದೇ, ಬಹಳ ಶ್ರಮದಿಂದ ಎಂತಹ ಕೆಲಸವನ್ನು ಮಾಡಬಲ್ಲವರು ಎಂದೇ ಎಂದೇ ಪ್ರಖ್ಯಾತರಾದವರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಕರಾವಳಿ ಮತ್ತು ಕೇರಳದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಬಹಳ ಬೇಸರವನ್ನು ತರಿಸುತ್ತಿದೆ. ಯಾವುದೋ ಮತಾಂಧರ ಮಾತುಗಳಿಗೆ ಬಲಿಯಾಗಿ ವಿದ್ಯೆಗಿಂತಲೂ ಧರ್ಮವೇ ಮುಖ್ಯ… Read More ಸಮಾನತೆ ಎಂದರೆ ಸ್ವೇಚ್ಚಾಚಾರವಲ್ಲ

ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ನಾವೆಲ್ಲಾ ಚಿಕ್ಕವರಿದ್ದಾಗ ರೈಲಿನಲ್ಲಿ ಪ್ರಯಾಣಿಸುವುದೆಂದರೆ ಅದೇನೋ ಸಂಭ್ರಮ. ಪ್ರಯಾಣಕ್ಕೆ ಒಂದೆರಡು ದಿನಗಳ ಮಂಚೆಯೇ, ನಮ್ಮೆಲ್ಲಾ ಸ್ನೇಹಿತರಿಗೂ ರೈಲಿನಲ್ಲಿ ಹೋಗುತ್ತಿರುವುದನ್ನು ಹೇಳೀ ಅವರ ಹೊಟ್ಟೆಯನ್ನು ಉರಿಸುತ್ತಿದ್ದಲ್ಲದೇ, ರೈಲಿನಿಂದ ಪುನಃ ಹಿಂದಿರುಗಿದ ನಂತರ ಗೆಳೆಯರ ಬಳೀ ಅದೇ ಕುರಿತಾಗಿಯೇ ಮಾತು ಕತೆ. ಇನ್ನು ಎರಡು ಮೂರು ದಿನಗಳ ಮಟ್ಟಿಗೆ ಪ್ರಯಾಣಿಸಿದರಂತೂ ರೈಲಿನ ಕುಲುಕಾಟದ ಭಾಸವೇ ನಮಗಾಗುತ್ತಿತ್ತು. ಇನ್ನು ರೈಲಿನಲ್ಲಿ ಕುಳಿತುಕೊಳ್ಳಬೇಕಾದರೇ ನಾನು ಕಿಟಕಿ ಪಕ್ಕ ನಾನು ಕಿಟಕಿ ಪಕ್ಕ ಎಂದು, ಅಣ್ಣಾ ತಮ್ಮಾ, ಅಕ್ಕತಂಗಿಯರೊಂದಿಗೆ ಶರಂಪರ ಕಿತ್ತಾಡಿದ್ದೂ ಉಂಟು. ರೈಲಿನಲ್ಲಿ… Read More ಬೆಂಗಳೂರು-ಮಂಗಳೂರು ವಿಸ್ಟೋಡಾಮ್ ರೈಲು

ಲಕ್ಷದ್ವೀಪ

ಕಳೆದ ವಾರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಲಕ್ಷದ್ವೀಪ ಪ್ರವಾಸದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ಪ್ರಪಂಚಾದ್ಯಂತ ಪ್ರವಾಸೀತಾಣಗಳು ಅಲ್ಲೋಲಗೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.

ಲಕ್ಷದ್ವೀಪದ ಕುರಿತಾದ ಪ್ರಧಾನಿಗಳ ಪ್ರೇಮ ಕೇವಲ ನೆನ್ನೆಯ ಮೊನ್ನೆಯದ್ದಾಗಿರದೇ, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಈ ಕುರಿತಾಗಿ ತಮ್ಮ ದೂರದೃಷ್ಟಿತನದಿಂದ ಅಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ, ಲಕ್ಷದ್ವೀಪದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಲಕ್ಷದ್ವೀಪ