ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಬಾಲ್ಯದಲ್ಲಿ ಸಣ್ಣ ಮಕ್ಕಳಿಗೆ ಅವರ ಅಪ್ಪಾ ಹೀರೋ ಎನಿಸಿದರೆ, ನನಗೆ ಮಾತ್ರಾ ನನ್ನ ಸೋದರ ಮಾವ ಚೆಲುವಣ್ಣಾ ಮಾವನೇ ಹೀರೋ. ಮೊನೆ ತಾನೇ ತಮ್ಮ 83ನೇ ವರ್ಷ ಹುಟ್ಟು ಆಚರಿಸಿಕೊಂಡು 2 ದಿನ ಕಳೆಯುತ್ತಿದ್ದಂತೆಯೇ ಗುರುವಾರ, 09.03.2023ರಂದು ನಮ್ಮನ್ನಗಲಿರುವುದು ದಃಖಕರವಾದ ಸಂಗತಿಯಾಗಿದೆ.

ಹುಟ್ಟೂ ಸಾವು ಎರಡರ ಮಧ್ಯೆ ಆ ಮೂರು ದಿನದ ಬಾಳಿನಲ್ಲಿ ಆವರೇಕೆ ನನಗೆ ಹೀರೋ ಎನಿಸಿದ್ದರು? ನನ್ನ ಮತ್ತು ಅವರ ಮಧುರ ಬಾಂಧವ್ಯ ಹೇಗಿತ್ತು? ಎಂಬ ಹೃದಯಸ್ಪರ್ಶಿ ಕಥನ ಇದೋ ನಿಮಗಾಗಿ … Read More ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಅಮ್ಮನ ಮಡಿಲು

ಅಮ್ಮಾ= ಅ+ಮ+ಮ+ಆ. ಅಕ್ಕರೆಯಿಂದ , ಮಮತೆ ಮತ್ತು ಮಮಕಾರದಿಂದ, ಆರೈಕೆ ಮಾಡುವವಳೇ ಅಮ್ಮಾ. ಜಗತ್ತಿನಲ್ಲಿ ಯಾರಿಗೇ ಆಗಲಿ ಅಥವಾ ಯಾವುದಕ್ಕೇ ಆಗಲಿ ಪರ್ಯಾಯ ಸಿಗಬಹುದೇನೋ ಆದರೆ ಅಮ್ಮನಿಗೆ ಮಾತ್ರ ಪರ್ಯಾಯವೇ ಇಲ್ಲಾ. ಆಕೆ ಮಾತ್ರಾ ಅದ್ವಿತೀಯಳು, ಅನುಕರಣಿಯಳು, ಸದಾವಂದಿತಳು. ತಾಯಿ ಇಲ್ಲದೇ ಜಗವಿಲ್ಲಾ. ತಾಯಿ ಇಲ್ಲದೇ ನಾವಿಲ್ಲ. ಜನ್ಮ‌ ಕೊಟ್ಟ ತಾಯಿ ಮತ್ತು ಆಶ್ರಯ ನೀಡುತ್ತಿರುವ ಭೂಮಿ ತಾಯಿಗೆ ಪರ್ಯಾಯವೇ ಇಲ್ಲ‌. ಹಾಗಾಗಿ ಅವರಿಬ್ಬರೂ ಸದಾಕಾಲವೂ ಪೂಜ್ಯರು‌ ವಂದಿತರು ಮತ್ತು ಆದರಣೀಯರೇ ಸರಿ. ಒಂಭತ್ತು ತಿಂಗಳು ತನ್ನ… Read More ಅಮ್ಮನ ಮಡಿಲು