ಮೈಸೂರು ಶ್ರೀ ಚಾಮುಂಡಿ ಬೆಟ್ಟದ ಮಹಾ ನಂದಿ

ನಮ್ಮಲ್ಲಿ ಬಹುತೇಕರು ಮೈಸೂರಿನ ಚಾಮುಂಡೀ ಬೆಟ್ಟಕ್ಕೆ ಹೋಗಿ ತಾಯಿ ಶ್ರೀ ಚಾಮುಂಡಿಯ ದರ್ಶನ ಪಡೆದು ಬಂದರೂ, ಅಲ್ಲಿನ ಮೂಲ ದೇವರಾದ ಶ್ರೀ ಮಹಾಬಲೇಶ್ವರ ಮತ್ತು ಮಹಾನಂದಿಯ ದರ್ಶನವನ್ನೇ ಮಾಡದಿರುವ ಕಾರಣ, ಶ್ರೀ ಮಹಾಬಲೇಶ್ವರ ಮತ್ತು ಮಹಾ ನಂದಿಯ ಕುರಿತಾದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ.… Read More ಮೈಸೂರು ಶ್ರೀ ಚಾಮುಂಡಿ ಬೆಟ್ಟದ ಮಹಾ ನಂದಿ

ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ಒಂದು ಕಾಲದಲ್ಲಿ ಕಾಶ್ಮೀರೀ ಪಂಡಿತರಿಂದಲೇ ಆವೃತವಾಗಿದ್ದ ಕಾಶ್ಮೀರದ ಕಣಿವೆಯಲ್ಲಿಿ ಇಂದು ಅವರೇ ಅಲ್ಪಸಂಖ್ಯಾತರಾಗಿರುವಂತಹ ದೌರ್ಭಾಗ್ಯವಾಗಿದ್ದರೂ, ಶ್ರೀನಗರದ ಹೃದಯಭಾಗದಲ್ಲಿರುವ ಭವ್ಯವಾದ ಶ್ರೀ ಶಂಕರಾಚಾರ್ಯ ದೇವಾಲಯ ಇಡೀ ಶ್ರೀನಗರಕ್ಕೇ ಮುಕುಟಪ್ರಾಯವಾಗಿದೆ. ಆ ದೇವಾಲಯದ ಸ್ಥಳ ಪುರಾಣ, ಶೀ ಜೇಷ್ಠೇಶ್ವರನ ದರ್ಶನದ ಜೊತೆಗೆ, ಮೈಸೂರು ಅರಸರಿಗೂ ಆ ದೇವಾಲಯಕ್ಕೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಯೋಣ ಬನ್ನಿ… Read More ಕಾಶ್ಮೀರದ ಶ್ರೀನಗರದ ಶ್ರೀ ಶಂಕರಾಚಾರ್ಯ ದೇವಾಲಯ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ವರ್ಷದ 365 ದಿನಗಳೂ ಮೋಡಗಳಿಂದ ಆವೃತವಾಗಿ ಅತ್ಯಂತ ರಮಣೀಯವಾಗಿರುವ ಹಿಮವದ್ ಗೋಪಾಸ್ವಾಮಿ ಬೆಟ್ಟದ ಸ್ಥಳ ಪುರಾಣ, ಆ ದೇವಾಲಯದ ವೈಶಿಷ್ಟ್ಯಗಳು ಮತ್ತು ಅಲ್ಲಿ ಕಾಗೆಗಳು ಏಕೆ ಕಾಣಸಿಗುವುದಿಲ್ಲ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಭಾರತೀಯ ವಿಜ್ಞಾನ ಸಂಸ್ಥೆ (IISc.)

ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc.)ಯನ್ನು ದೇಶದ ಖ್ಯಾತ ಕೈಗಾರಿಗೋದ್ಯಮಿಗಳಾದ ಜೆಮ್ ಷಡ್ ಜೀ ಟಾಟಾರವರು ಆರಂಭಿಸಲು ಸ್ವಾಮಿ ವಿವೇಕಾನಂದರು ಹೇಗೆ ಕಾರಣರಾದರು? ಮತ್ತು ಇಂತಹ ಮಹಾನ್ ಸಂಸ್ಥೆಗೆ ನಮ್ಮ ಮೈಸೂರು ಸಂಸ್ಥಾನದ ಕೊಡುಗೆಗಳೇನು? IISc. ಬೆಳೆದು ಬಂದ ಹಾದಿಯ ಕುರಿತಾದ ಅದ್ಭುತವಾದ ಮಾಹಿತಿಗಳು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಭಾರತೀಯ ವಿಜ್ಞಾನ ಸಂಸ್ಥೆ (IISc.)

ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ನವೆಂಬರ್ ತಿಂಗಳಾದ್ಯಂತ ಕನ್ನಡ ನಾಡಿನ ಅವಿಖ್ಯಾತ ಕಲಿಗಳನ್ನು ಪರಿಚಯಿಸುವ ಕನ್ನಡದ ಕಲಿಗಳು ಮಾಲಿಕೆಯಲ್ಲಿ, ಮೈಸೂರು ಸಂಸ್ಥಾನದ ರಾಜಪುರೋಹಿತರು, ಆಸ್ಥಾನ ಕವಿಗಳೂ ಆಗಿದ್ದಲ್ಲದೇ, ತಮ್ಮ ಸರಸ ಕವಿತೆಗಳು, ಹತ್ತಾರು ಅನುವಾದ ಕೃತಿಗಳಲ್ಲದೇ, ತಮ್ಮದೇ ಸ್ವಂತ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಪುಣ್ಯಪುರುಷರಾಗಿರುವ ಶ್ರೀ ಬಸವಪ್ಪ ಶಾಸ್ತ್ರಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಅಭಿನವ ಕಾಳಿದಾಸ ವಿದ್ವಾನ್ ಬಸವಪ್ಪ ಶಾಸ್ತ್ರಿಗಳು

ಮೂರ್ತಿ ಪೂಜೆ

ರಸ್ತೇ ಅಗಲೀಕರಣದ ನೆಪದಲ್ಲಿ ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಕಳೆದ ವಾರ ನಂಜನಗೂಡಿನ ಬಳಿ 800 ವರ್ಷದ ಹಳೆಯದಾದ ಚೋಳರ ಕಾಲದ  ದೇವಾಲಯವನ್ನು ಒಡೆದು ಹಾಕಿರುವ ವಿಷಯ ಇನ್ನೂ ಆರದಿರುವಾಗ ಅದೇ ಪ್ರಾಂತ್ಯದ ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ತೆರವು ಮಾಡುವ ಎಡವಟ್ಟೊಂದನ್ನು ಮಾಡುವ ಮೂಲಕ  ಆಸ್ತಿಕ ಮಹಾಶಯರ ಸಾತ್ವಿಕ ಕೋಪ ಹೆಚ್ಚುವಂತಾಗಿದೆ. ನಮ್ಮ ರಾಜ್ಯದ ಹಲವಾರು ದೇವಾಲಯಗಳಿಗೆ ನಮ್ಮ ಮೈಸೂರು ಅರಸರ ಕೊಡುಗೆ ಅಪಾರ ಎನ್ನುವುದು ನಿರ್ವಿವಾದ. ಅದರಲ್ಲೂ… Read More ಮೂರ್ತಿ ಪೂಜೆ