ಮೈಸೂರು ಪಾಕ್

ಮೈಸೂರು ಎಂದಾಕ್ಷಣ ಎಲ್ಲರಿಗೂ ಥಟ್ ಅಂತಾ ನೆನಪಿಗೆ ಬರುವುದೇ ಮೈಸೂರು ದಸರಾ, ಮೈಸೂರು ಅರಮನೆ, ಮೈಸೂರು ಮೃಗಾಲಯ ಇದರ ಜೊತೆಗೆ ಮೈಸೂರಿನ ಹೆಸರನ್ನು ಜಗದ್ವಿಖ್ಯಾತ ಮಾಡಿದ ಮತ್ತೊಂದು ಅಂಶವೆಂದರೆ, ಮೈಸೂರು ಪಾಕ್. ಅರೇ! ಈ ಸಿಹಿ ತಿಂಡಿಗೂ ಮೈಸೂರಿಗೂ ಏನು ಸಂಬಂಧ? ಅಂತ ತಿಳಿಯ ಬೇಕಾದರೆ, ಆ ಸಿಹಿ ತಿಂಡಿ ಆವಿಷ್ಕಾರದ ಹಿಂದಿರುವ ರೋಚಕವಾದ ಸಂಗತಿ ತಿಳಿಯೋಣ ಬನ್ನಿ. 1884-1940ರ ವರೆಗೂ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ಮಡೀ ಕೃಷ್ಣರಾಜ ಒಡೆಯಯರ್ ಅವರಿಗೆ ಉಟೋಪಚಾರಗಳಲ್ಲಿ ವಿಶೇಷವಾದ ಆಸಕ್ತಿ… Read More ಮೈಸೂರು ಪಾಕ್

ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ಕನ್ನಡ ಸುಗಮ ಸಂಗೀತದ ಪ್ರವರ್ತಕರಾಗಿ ಕನ್ನಡದ ಬಹುತೇಕ ಕವಿಗಳ ಭಾವಗೀತೆಗಳಿಗೆ ಧ್ವನಿಯಾಗಿದ್ದ ಶ್ರೀ ಪಿ ಕಾಳಿಂಗರಾಯರ ಕುರಿತು ಹಿಂದಿನ ಮಾಲಿಕೆಯಲ್ಲಿ ಪರಿಚಯ ಮಾಡಿಕೊಂಡ ಮೇಲೆ ನಾವಿಂದು ಅವರ ಉತ್ತರಾಧಿಕಾರಿಗಳ ಪರಿಚಯ ಮಾಡಿಕೊಳ್ಳಲೇ ಬೇಕಲ್ಲವೆ? ತಮ್ಮ ಅದ್ಭುತ ಗಾಯನ ಮತ್ತು ರಾಗ ಸಂಯೋಜನೆಗಳಿಂದ ಸುಗಮ ಸಂಗೀತ ಕ್ಷೇತ್ರದ ಅನುಭಿಷಕ್ತ `ದೊರೆಯಾಗಿ ಮೆರೆದವರು, ಮ್ಯಾಂಡೊಲಿನ್, ತಬಲ, ಕೊಳಲು, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರೂ ಮತ್ತು ಕವನಗಳನ್ನು ರಚಿಸಬಲ್ಲ ಸಾಮರ್ಥ್ಯ ಹೊಂದಿದ್ದಂತಹ ಶ್ರೀ ಮೈಸೂರು ಅನಂತಸ್ವಾಮಿಗಳ ಬಗ್ಗೆ ನಾವಿಂದು ಅರಿತುಕೊಳ್ಳೋಣ.… Read More ಗಾನ ಗಾರುಡಿಗ ಮೈಸೂರು ಅನಂತಸ್ವಾಮಿ

ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ದಸರಾಹಬ್ಬ ಮೈಸೂರು ಪ್ರಾಂತದ ನಾಡಹಬ್ಬ ಒಂಭತ್ತು ರಾತ್ರಿಗಳು ಸೇರಿ ಒಟ್ಟು ಹತ್ತು ದಿನಗಳು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಳೇ ಮೈಸೂರು ಪ್ರಾಂತ್ಯದ ಬಹುತೇಕರ ಮನೆಗಳಲ್ಲಿ ರಾಜಾ ರಾಣಿಯರ ಪಟ್ಟದ ಗೊಂಬೆಗಳ ಜೊತೆ ವಿವಿಧ ರೀತಿಯ ಅಲಂಕಾರಿಕ ಗೊಂಬೆಗಳನ್ನು ಇಟ್ಟು ಜೊತೆಗೆ ಕಳಸ ಮತ್ತು ದೇವಿಯನ್ನಿಟ್ಟು ಬಗೆ ಬಗೆಯ ರೀತಿಯ ಅಲಂಕಾರಗಳನ್ನು ಮಾಡಿ ಪ್ರತೀದಿನವೂ ಭಕ್ತಿಯಿಂದ ನೈವೇದ್ಯ ಮಾಡಿ ಮಕ್ಕಳಿಗೆ ಬೊಂಬೇ ಬಾಗಿಣ ಕೊಡುವುದು ಸಂಪ್ರದಾಯ. ನವರಾತ್ರಿಯ ಪ್ರತೀ ದಿನದ ದೇವಿಯ ಅಲಂಕಾರ, ಆಕೆಗೆ ಇಷ್ಟವಾದ ಹೂವು,… Read More ನವರಾತ್ರಿಯ ಆಚರಣೆ ಮತ್ತು ವಿಶೇಷತೆಗಳು

ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು

ವಿದ್ಯಾರಣ್ಯಪುರ ಮಂಥನದ ಹನ್ನೆರಡನೇ ಆವೃತ್ತಿಯ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಅರೇನಹಳ್ಳಿ ಧರ್ಮೇಂದ್ರ ಕುಮಾರ್(ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್, ಪ್ರವೃತ್ತಿಯಲ್ಲಿ ಖ್ಯಾತ ಲೇಖಕರು ಮತ್ತು ಇತಿಹಾಸಕಾರರು) ಮತ್ತು ಶ್ರೀ ನಾಗರಾಜ ಮೌದ್ಗಲ್ ಅವರುಗಳ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಲಕ್ಷ್ಮೀ ಆನಂದ್ ಅವರ ಸುಶ್ರಾವ್ಯ ಕಂಠದ ವಿಘ್ನವಿನಾಶಕನ ಸ್ತುತಿಸುವ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೈಸೂರು ಸಂಸ್ಥಾನದಲ್ಲಿ ಅರಮನೆಯ ಖ್ಯಾತ ವೈದ್ಯರಾಗಿದ್ದ… Read More ಮೈಸೂರು ಸಂಸ್ಥಾನಕ್ಕೆ ಮೈಸೂರಿನ ಅರಸರ ಕೊಡುಗೆಗಳು