ವರ್ಕ್ ಫ್ರಂ ಹೋಮ್

ಶಂಕರ ದೂರದ  ಹಾಸನದ ಜಿಲ್ಲೆಯ ಸಣ್ಣದೊಂದು ಗ್ರಾಮದಲ್ಲಿ ಹುಟ್ಟಿ ಅಲ್ಲಿಯೇ ತನ್ನ ವಿದ್ಯಾಭ್ಯಾಸವನ್ನೆಲ್ಲವನ್ನೂ ಮುಗಿಸಿದವ. ಇದ್ದ ಸಣ್ಣ ಸಾಗುವಳಿ ಅವರ ಜೀವನಕ್ಕೆ ಸಾಲುತ್ತಿರಲಿಲ್ಲವಾದ್ದರಿಂದ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು  ಅರಂಭದಲ್ಲಿ  ಅವರಿವರ ಕೈಕಾಲು ಹಿಡಿದು ಸಣ್ಣ ಕಂಪನಿಯೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡು ನಂತರ ತನ್ನ ಸ್ವಸಾಮರ್ಥ್ಯದಿಂದ ಬೇಗನೇ ಮೇಲೆ ಬಂದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಐದಂಕಿಯ ಸಂಬಳ ಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಾನೆ. ಬದುಕಿನಲ್ಲಿ ಎಷ್ಟೇ ಮೇಲಕ್ಕೆ ಏರಿದ್ದರೂ  ತನ್ನ ಹುಟ್ಟೂರು ತಂದೆ ತಾಯಿ, ತಾತಾ ಅಜ್ಜಿಯರನ್ನು ಮರೆಯದ ಶಂಕರ… Read More ವರ್ಕ್ ಫ್ರಂ ಹೋಮ್

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ

ಸಾಮ್ಯಾನ್ಯವಾಗಿ ನಮ್ಮ ಹಿಂದಿನ ಕಾಲದವರು ಈಗಿನಷ್ಟು ಆರ್ಥಿಕವಾಗಿ ಸಧೃಡರಿಲ್ಲದಿದ್ದರೂ, ಸರಿಯಾಗಿ ಎರಡು ಹೊತ್ತು ಊಟ ಮಾಡಲು ಇರುತ್ತಿರದಿದ್ದರೂ, ಯಾವುದೇ ರೋಗ ರುಜಿನಗಳಿಲ್ಲದೇ ಆರಾಮವಾಗಿ 80-90 ವರ್ಷಗಳು ಜೀವಿಸುತ್ತಿದ್ದರು. ಅದೆಷ್ಟೋ ಜನ ಶತಾಯುಷಿಗಳಾಗಿಯೂ ಜೀವಿಸಿದ್ದರು. ಅವರ ನೆನಪಿನ ಶಕ್ತಿಯಂತೂ ಕೇಳುವುದೇ ಬೇಡ. ಹಾಗಾಗಿಯೇ ಸುಲಭವಾಗಿ ಐದಾರು ತಲೆಮಾರುಗಳನ್ನು ಸುಲಭವಾಗಿ ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಮಾಯವಾಗಿದೆ. 20-30 ವರ್ಷಕ್ಕೇ ಕೂದಲೆಲ್ಲಾ ಬೆಳ್ಳಾಗಾಗಿ ಅದೆಷ್ಟೋ ಮಂದಿಗಳಿಗೆ ಕೂದಲೆಲ್ಲ ಉದುರಿ ಹೋಗಿ, ಹತ್ತಾರು ರೀತಿಯ ಖಾಯಿಲೆಗಳಿಗೆ ತುತ್ತಾಗಿ ಊಟಕ್ಕಿಂತಲೂ ಹೆಚ್ಚಾಗಿ… Read More ಬಂದದ್ದೆಲ್ಲಾ ಬರಲಿ ಗೋವಿಂದನ ದಯೆ ಇರಲಿ