ರಂಗನಾಥ ಮೇಷ್ಟ್ರು

ಸಾಧಾರಣವಾಗಿ ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನೂ ಅಚರಿಸುತ್ತಿರಲಿಲ್ಲ. ಆದರೆ ಆಷಾಢ ಮಾಸದ ಹುಣ್ಣಿಮೆಯ ದಿನಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದದ್ದಂತೂ ಸುಳ್ಳಲ್ಲ. ಆಷಾಢ ಮಾಸದಲ್ಲಿ ನಾವೆಲ್ಲರೂ ಆಚರಿಸಬಹುದಾದಂತಹ ಅತ್ಯಂತ ಶ್ರೇಷ್ಠವಾದ ಹಬ್ಬವೆಂದರೆ ಗುರು ಪೂರ್ಣಿಮೆ. ಈ ಗುರು ಪುರ್ಣಿಮೆಯಂದು, ನಮ್ಮನ್ನು ತಿದ್ದಿ ತೀಡಿ ನಮ್ಮಲ್ಲಿ ಜ್ಞಾನ ದೀವಿಗೆಯನ್ನು ಹಚ್ಚಿ ಅದನ್ನು ಬೆಳಗಿ, ನಮಗೆ ವಿದ್ಯಾ ಬುದ್ಧಿಗಳನ್ನು ಕಲಿಸಿ ಕೊಟ್ಟ ಗುರುಗಳಿಗೆ ವಂದನೆ ಸಲ್ಲಿಸುವ ದಿನವಿದು. ಗುರುವಿನ ಮಹತ್ವವನ್ನು ಅರಿಯುವ ದಿನವಿದು. ಜನ್ಮ ಕೊಟ್ಟ ತಂದೆ ತಾಯಿಯರ… Read More ರಂಗನಾಥ ಮೇಷ್ಟ್ರು

ಮಾಹಿಮಾಪುರದ ಮಹಿಮಾರಂಗ

ಸಾಧಾರಣವಾಗಿ ಯಾರಾದರೂ, ಯಾವುದಾದರೂ ತೀರ್ಥಕ್ಷೇತ್ರ ಅಥವಾ ಪುಣ್ಯಕ್ಷೇತ್ರಕ್ಕೆ ಹೋಗಿ ಬಂದು ತೀರ್ಥಪ್ರಸಾದವನ್ನು ಕೊಟ್ಟು ಆ ಕ್ಷೇತ್ರದ ಮಹಿಮೆಯನ್ನು ವಿವರಿಸಿ ನೀವು ಆದಷ್ಟು ಶೀಘ್ರದಲ್ಲಿ ಖಂಡಿತವಾಗಿಯೂ ಹೋಗಿ ಬರಲೇ ಬೇಕು ಎಂದಾಗ. ಅಯ್ಯೋ ನೀವೇ ಪುಣ್ಯವಂತರು. ನಮಗೆಲ್ಲಿದೆ ಆ ಭಾಗ್ಯ. ಆ ಭಗವಂತ ನಮ್ಮನ್ನು ಯಾವಾಗ ಕರೆಸಿಕೊಳ್ಳೊತ್ತಾನೋ ಎಂದು ಹೇಳುವುದು ಸಹಜ ಪ್ರಕ್ರಿಯೆ. ಅದರಂತೆಯೇ, ಮೂರ್ನಲ್ಕು ವಾರಗಳ ಹಿಂದೆ ನಮ್ಮ ಸ್ನೇಹಿತನ ಮದುವೆಗೆ ಹೋಗುವ ನೆಲಮಂಗಲ ದಾಟಿ ದಾರಿಯಲ್ಲಿ ತಿಂಡಿಗೆ ನಿಲ್ಲಿಸಿದ್ದಾಗ ದೂರದಲ್ಲಿ ಬೆಟ್ಟದ ತುದಿಯಲ್ಲಿ ಸುಂದರ ದೇವಸ್ಥಾನ… Read More ಮಾಹಿಮಾಪುರದ ಮಹಿಮಾರಂಗ