ಶ್ರೀ ಅರುಣ್ ಯೋಗಿರಾಜ್, ಮೈಸೂರಿನ ಶಿಲೆಯಿಂದ ಅಯೋಧ್ಯೆಯ ರಾಮಲಲ್ಲನವರೆಗೆ…

ವಂಶಪಾರಂಪರ್ಯದ ಸಾಂಪ್ರದಾಯಿಕ ಶಿಲ್ಪಕಲೆಯನ್ನು ತಾತ ಮತ್ತು ತಂದೆಯವರಿಂದ ಕಲಿತರೂ, MBA ಶಿಕ್ಷಣ ಮುಗಿಸಿ, ಅಮ್ಮನ ಆಸೆಯಂತೆ ಕೆಲ ಕಾಲ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿ,ಕಚೇರಿಯ ಕೆಲಸಕ್ಕಿಂತ ಶಿಲ್ಪಿಯಾಗುವುದೇ, ತಮ್ಮ ನಿಜವಾದ ಬದುಕು ಎಂದು ನಿರ್ಧರಿಸಿ, ಅಯೋಧ್ಯೆಯ ರಾಮಲಲ್ಲಾದಂತಹ ವಿಗ್ರಹವನ್ನು ಕೆತ್ತಿದ ಶ್ರಿ ಅರುಣ್ ಬಾಲಯೋಗಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಶ್ರೀ ಅರುಣ್ ಯೋಗಿರಾಜ್, ಮೈಸೂರಿನ ಶಿಲೆಯಿಂದ ಅಯೋಧ್ಯೆಯ ರಾಮಲಲ್ಲನವರೆಗೆ…

ಆಪರೇಷನ್‌ ಶಕ್ತಿ & ರಾಷ್ಟ್ರೀಯ ತಂತ್ರಜ್ಞಾನ ದಿನ

ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದ 1998 ಮೇ 11 ರಂದು ರಾಜಾಸ್ಥಾನದ  ಪೋಖ್ರಾನ್ ಎಂಬ ಪ್ರದೇಶದಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ದಿನವನ್ನೇ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದ್ದು, ದೇಶದ ಸರ್ವತೋಮುಖ ಪ್ರಗತಿಯ ನಿಟ್ಟಿನಲ್ಲಿ ಭಾರತದ ಹಿರಿಮೆ, ಗರಿಮೆಗಳನ್ನು ಎತ್ತಿಹಿಡಿಯುತ್ತಿರುವ ಕಾರ್ಯದಲ್ಲಿ ತೊಡಗಿಕೊಂಡಿರುವ ಭಾರತದ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅಭಾರಿಗಳಾಗಿ ಈ ದಿನವನ್ನು ಅವರಿಗಾಗಿ ಮೀಸಲಾಗಿಟ್ಟಿದೆ. 1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದ್ದು. ಅಂದು ರಾಜಸ್ಥಾನದ ಪೊಖ್ರಾನ್‌ನಲ್ಲಿ ಭಾರತೀಯ ಸೇನೆಯ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಆಪರೇಷನ್‌… Read More ಆಪರೇಷನ್‌ ಶಕ್ತಿ & ರಾಷ್ಟ್ರೀಯ ತಂತ್ರಜ್ಞಾನ ದಿನ

ಮಾರ್ವಾಡಿಗಳು ನಮ್ಮವರು

ಅದು ತೊಂಬತ್ತರ ದಶಕ ಅಂತ್ಯದ ಸಮಯ. ಆಗ ತಾನೇ ಮದುವೆಯಾಗಿದ್ದ ನಮಗೆ ಮಧುಚಂದ್ರಕ್ಕೆ ಹೋಗಬೇಕೆನ್ನುವ ತವಕ. ಈಗಿನಂತೆ ವಿದೇಶಕ್ಕೆ ಹೋಗುವ ಅರ್ಥಿಕ ಸಧೃಡತೆಯಾಗಲೀ, ಅನುಕೂಲತೆಗಳು ಇಲ್ಲದಿದ್ದಾಗ, ಜೈಪುರ್, ಉದಯಪುರ್, ಬಾಂಬೆಯ ಕಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿಯಾಗಿತ್ತು. ಇದೇ ಸ್ಥಳಗಳಿಗೆ ಹೋಗಲು ತೀರ್ಮಾನಿಸಿದ್ದರ ಹಿಂದೆಯೂ ಒಂದು ಬಲವಾದ ಕಾರಣವಿದ್ದು, ನಮ್ಮಾಕಿಯ ಜೊತೆ ಬಾಲ್ಯದಿಂದಲೂ ನೆರೆಹೊರೆಯವರಾಗಿದ್ದು, ಸಹಪಾಠಿಯೂ ಆಗಿದ್ದು ಆಕೆಯ ಮದುವೆಯೂ ಸಹಾ ನಮ್ಮ ಮದುವೆಯಾಗಿ 15-20 ದಿನಗಳ ನಂತರ ದೂರದ ರಾಜಾಸ್ಥಾನದ ಮಾರ್ವಾಡ್ ಗಂಜಿನ ದೇವಗಡ್ ಮಜಾರಿಯಾ ಎಂಬ ಊರಿನ… Read More ಮಾರ್ವಾಡಿಗಳು ನಮ್ಮವರು