ವಿಜಯದಶಮಿ

ಶರನ್ನವರಾತ್ರಿಯ ನಂತರ ಹತ್ತನೇ ದಿನವಾದ ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ದಸರಾ ಎಂಬ ಹೆಸರು ಹೇಗೆ ಬಂದಿತು? ದೇಶಾದ್ಯಂತ ಈ ವಿಜಯ ದಶಮಿ ಹಬ್ಬದ ಆಚರಣೆ ಹೇಗೆ ಮಾಡಲಾಗುತ್ತದೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ವಿಜಯದಶಮಿ

ಕೋಲಾರದಲ್ಲಿ ಆರ್. ಎಸ್. ಎಸ್. ಸ್ವಯಂಸೇವಕರ ಪಥಸಂಚಲನ

ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆದು ಬಂದ ದಾರಿ ಮತ್ತು ಸಂಘದ ಶತಮಾನೋತ್ಸವದ ಅಂಗವಾಗಿ ಜನವರಿ 04, 2025 ಭಾನುವಾರದಂದು ವಕ್ಕಲೇರಿ ಗ್ರಾಮದಿಂದ ಕೋಲಾರದವರೆಗೂ ನಡೆದ 15 ಕಿಮೀಗಳಷ್ಟು ದೂರದ ಬೃಹತ್ ಪಥಸಂಚಲನದ ವಿಹಂಗಮ ನೋಟ ಇದೋ ನಿಮಗಾಗಿ… Read More ಕೋಲಾರದಲ್ಲಿ ಆರ್. ಎಸ್. ಎಸ್. ಸ್ವಯಂಸೇವಕರ ಪಥಸಂಚಲನ

ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

ಸರಳ ಸಜ್ಜನ, ಬಡವರ ಮನೆಯ ಜನಾನುರಾಗಿ, ಬರಿಗಾಲ ಸಂತ ಎಂದೇ ಖ್ಯಾತಿಯಾಗಿರುವ ಬೈಂದೂರಿನ ಶಾಸಕ ಶ್ರೀ ಗುರುರಾಜ ಗಂಟಿಹೊಳಿ ಅವರೊಂದಿಗೆ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ, ಶಾಸಕರಾಗಿ ಹೀಗೂ ಇರಬಹುದೇ? ಎಂದು ಮೂಗಿನ ಮೇಲೆ ಬೆರಳಿವಂತೆ ಆದ ಅನುಭವ ಇದೋ ನಿಮಗಾಗಿ… Read More ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

ಹಿಂದೂಸೇವಾ ಪ್ರತಿಷ್ಠಾನದ ಅಜಿತ್ ಕುಮಾರ್

ಸಂಘ ಎಂದರೆ ಕೇವಲ ಒಂದು ಘಂಟೆಯ ಶಾಖೆಯನ್ನು ನಡೆಸುವುದಷ್ಟೇ ಅಲ್ಲ. ಸಂಘ ಪರಿವಾರದ ಅಡಿಯಲ್ಲಿ ಹಿಂದೂಸೇವಾ ಪ್ರತಿಷ್ಠಾನ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ಆರಂಭಿಸಿ, ಅದರ ಮೂಲಕ ನೂರಾರು ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾವಿರಾರು ಸೇವಾವೃತ್ತಿಗಳ ಮೂಲಕ, ಲಕ್ಷಾಂತರ ಜನರಿಗೆ ತಲುಪುವಂತಹ ಸಮಾಜ ಸೇವೆಯನ್ನು ಮಾಡಲು ಪ್ರೇರೇಪಿಸಿದಂತಹ ಶ್ರೀ ಅಜಿತ್ ಕುಮಾರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ದೂರದರ್ಶಿತ್ವದ ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಹಿಂದೂಸೇವಾ ಪ್ರತಿಷ್ಠಾನದ ಅಜಿತ್ ಕುಮಾರ್

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದು ಬಂದ ಹಾದಿ

ಸೆಪ್ಟಂಬರ್ 27 1925 ಭಾನುವಾರ, ವಿಕ್ರಮ ನಾಮ ಸಂವತ್ಸರದ ದಕ್ಷಿಣಾಯನದ ಶರದ್ ಋತು ವಿಶೇಷವಾಗಿ ವಿಜಯದಶಮಿಯಂದು ಆರಂಭವಾದ ಮಹಾರಾಷ್ಟ್ರದ ನಾಗಪುರದ ಮೋಹಿತೇವಾಡ ಎಂಬ ಮೈದಾನದಲ್ಲಿ ಹತ್ತಾರು ಮಕ್ಕಳೊಂದಿಗೆ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರಿಂದ ಆರಂಭವಾದ ಸಂಘ (RSS) ಇಂದಿಗೆ 100 ಸಂವತ್ಸರ* ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಅಂತಹ ಸಂಘದ ಕಿರುಪರಿಚಯ ಇದೋ ನಿಮಗಾಗಿ… Read More ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದು ಬಂದ ಹಾದಿ

ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಗಳಿಗೆ ಹೋಗುವ  ಆಬಾವೃದ್ದರಾದಿಯಾದ ಸ್ವಯಂಸೇವಕರಿಗೆ  ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..  ಹಾಡು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಈ ಹಾಡಿನ ಪಲ್ಲವಿ ಮತ್ತು ಚರಣಗಳಲ್ಲಿ ಬರುವ ಪ್ರತಿಯೊಂದು ಪದವೂ ಸ್ವಯಂಸೇವಕನ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿರುವುದಕ್ಕೆ ನನ್ನಂತಹ ಕೋಟ್ಯಾಂತರ ಸ್ವಯಂಸೇವಕರೇ ಸಾಕ್ಷಿಯಾಗಿದೆ. ಹಾಗಾಗಿ, ವಯಕ್ತಿಕವಾಗಿ ನನಗಂತೂ ಪ್ರತೀ ಬಾರಿ ಈ ಹಾಡು ಹಾಡುವಾಗಲಾಗಲೀ ಇಲ್ಲವೇ ಕೇಳುವಾಗಲೀ ಮೈ ರೋಮಾಂಚನ ಗೊಳ್ಳುತ್ತದೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ? ಎಂದು ನೀವೆಲ್ಲ ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ… Read More ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ಶಾಲೆಗಳನ್ನೇ ವಿಶೇಷ ಕೋವಿಡ್ ಅರೈಕೆ ಕೇಂದ್ರಗಳನ್ನಾಗಿಸಿದ ರಾಷ್ಟ್ರೋತ್ಥಾನ ಪರಿಷತ್

ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು.  ಆದರೆ  ಅವರ ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಅಡುಗೆ ಇರಲಿಲ್ಲ. ಅಷ್ಟು ಜನರಿಗೆ  ಅಡುಗೆ ಮಾಡಬೇಕೆಂದರೂ ಕನಿಷ್ಟ ಪಕ್ಷ ಒಂದೆರಡು ಗಂಟೆಯಾದರೂ ಬೇಕಿತ್ತು.  ತಿಂಗಳ ಕೊನೆಯಾಗಿದ್ದರಿಂದ ಹೋಟೇಲ್ಲಿನಿಂದಲೂ ತರುವಷ್ಟು ಹಣ ಅವರ ಬಳಿ ಇರಲಿಲ್ಲ. ಕೂಡಲೇ ಮನೆಯಾಕೆ… Read More ಶಾಲೆಗಳನ್ನೇ ವಿಶೇಷ ಕೋವಿಡ್ ಅರೈಕೆ ಕೇಂದ್ರಗಳನ್ನಾಗಿಸಿದ ರಾಷ್ಟ್ರೋತ್ಥಾನ ಪರಿಷತ್

ವಿಜಯ ದಿವಸ್ ಮತ್ತು ಪ್ರಹಾರ ದಿವಸ್

ಡಿಸೆಂಬರ್ 16, 1971 ನಿಜಕ್ಕೂ ನಮ್ಮ ಭಾರತದ ಮೂರೂ ಸೇನೆಗಳಿಗೆ ಅತ್ಯಂತ ಸ್ಮರಣಿಯ ದಿನ. ಇಡೀ ಪ್ರಪಂಚವೇ ನಮ್ಮ ವಿರುದ್ಧವಾಗಿದ್ದರೂ, ಸ್ವತಃ ಅಮೇರಿಕಾ ಹಿಂಬಾಗಿಲಿನಿಂದ ಪಾಕೀಸ್ಥಾನಕ್ಕೆ ಸಹಾಯ ಮಾಡುತ್ತಿದ್ದರೂ, ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇಲ್ಲದಿದ್ದರೂ ನಮ್ಮ ಭೂ,ವಾಯು ಮತ್ತು ಜಲ ಸೇನೆಗಳು ಜಂಟಿಯಾಗಿ ಛಲದಿಂದ ಪಾಕೀಸ್ಥಾನದ ವಿರುದ್ಧ ಜನರಲ್ ಮಾಣಿಕ್ ಷಾ ಅವರ ನೇತೃತ್ವದಲ್ಲಿ ಹೋರಾಡಿ ಸುಮಾರು 93000ಕ್ಕೂಅಧಿಕ ಪಾಕೀ ಸೈನಿಕರನ್ನು ಸೆರೆಗೈದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಅಂದಿನ ಪೂರ್ವ ಪಾಕೀಸ್ಥಾನದ ಜೆನರಲ್… Read More ವಿಜಯ ದಿವಸ್ ಮತ್ತು ಪ್ರಹಾರ ದಿವಸ್