ವ್ಯಾಪಾರಂ ದ್ರೋಹ ಚಿಂತನಂ

ವ್ಯಾಪಾರಂ ದ್ರೋಹ ಚಿಂತನಂ ಎಂಬ ಮಾತಿದೆ. ಸರಳವಾಗಿ ಹೇಳಬೇಕೆಂದರೆ, ಒಮ್ಮೆ ವ್ಯಾಪಾರಕ್ಕೆಂದು ಇಳಿದರೆ, ಅದರಲ್ಲಿ ಧರ್ಮ ಕರ್ಮ ಎಂದು ನೋಡಲಾಗದೇ, ಲಾಭ ಮಾಡುವುದಷ್ಟೇ ಮುಖ್ಯ ಎಂದಾಗುತ್ತದೆ. ಹೀಗಿದ್ದರೂ ಸಹಾ ಈ ಹಿಂದಿನ ಅನೇಕ ವ್ಯಾಪಾರಿಗಳು  ಧರ್ಮ ಕರ್ಮಕ್ಕೆ ಸ್ವಲ್ಪ  ಒತ್ತು ನೀಡುತ್ತಾ, ಸಮಾಜ ಅಭಿವೃದ್ಧಿಗೆ ಕಾರಣರಾಗುತ್ತಿದ್ದರು. ಆದರೆ ಇತ್ತೀಚಿನ ವ್ಯಾಪಾರಿಗಳಿಗೆ ಅಂತಹ ಧರ್ಮ ಮತ್ತು ಕರ್ಮವನ್ನು ನೋಡಲು ಪುರುಸೊತ್ತು ಇಲ್ಲದೇ, ಸಮಾಜ ಹಾಳಾದರೂ ಪರವಾಗಿಲ್ಲಾ ತಮಗೆ ಲಾಭ ಆದರೆ ಸಾಕು ಎನ್ನುವಂತಾಗಿದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿ ಮಂಗಳೂರಿನ… Read More ವ್ಯಾಪಾರಂ ದ್ರೋಹ ಚಿಂತನಂ

ಸರ್ಕಾರಿ ಅಧಿಕಾರಿಗಳ ಅಕ್ರಮ ಮೋಜು ಮಸ್ತಿ

ನೆನ್ನೆ ತಾನೇ ಜನರನ್ನು ಕಾಯುವ ರಕ್ಷಕರೇ ಭಕ್ಷಕರದಾದರೆ ಜನರನ್ನು ಕಾಯುವವರು ಯಾರು? ಎನ್ನುವ ಲೇಖನ ಬರೆದು ಪ್ರಕಟಿಸಿ ರಾತ್ರಿ ಕಳೆದು ಬೆಳಗಾಗುವುದರೊಳಗೆ, ಮತ್ತದೇ ಕೆಲ ಸರ್ಕಾರೀ ಅಧಿಕಾರಿಗಳು ಜೈಪುರದ ಕ್ಯಾಸಿನೋ ಒಂದರಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಕರ್ನಾಟಕದ ದೊಡ್ಡ ದೊಡ್ಡ ಅಧಿಕಾರಿಗಳು ನೋಡಬಾರದಂತಹ ಸ್ಥಿತಿಯಲ್ಲಿ ಮೋಜು ಮಸ್ತಿ ಮಾಡುತ್ತಾ, ಅಲ್ಲಿನ ಸ್ಥಳೀಯ ಪೋಲಿಸರು ನಡೆಸಿದ ಧಾಳಿಯಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಹಿರಿಯ ಸರ್ಕಾರಿಗಳ ಸಹಿತ ಸುಮಾರು 84 ಬಂಧನವಾಗಿರುವ ಸುದ್ಧಿ ಕೇಳಿ ನಿಜಕ್ಕೂ ಮನಸ್ಸಿಗೆ ಖೇಧ ಉಂಟಾಗುತ್ತಿದೆ… Read More ಸರ್ಕಾರಿ ಅಧಿಕಾರಿಗಳ ಅಕ್ರಮ ಮೋಜು ಮಸ್ತಿ

ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಬೆಂಗಳೂರಿನ ಕಲ್ಯಾಣ್ ನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್ಮೆಂಟ್ನಿಂದ ಆಗಸ್ಟ್ 21 ರಂದು ಮಾಜಿ ಕಿರುತೆರೆ ನಟಿ ಅನಿಕಾ ಡಿ ಮತ್ತು ಅವರ ಇಬ್ಬರು ಸಹಚರರಾದ ಎಂ ಅನೂಪ್ ಮತ್ತು ಆರ್ ರವೀಂದ್ರನ್ ಅವರನ್ನು ಬಂಧಿಸಿ ಅವರಿಂದ 145 ಎಂಡಿಎಂಎ ಮಾತ್ರೆಗಳು ಮತ್ತು 2.2 ಲಕ್ಷ ರೂ.ಗಳ ಹಣವನ್ನು ವಶಪಡಿಸಿಕೊಂಡಿದ್ದಲ್ಲದೇ ಅವರ ಮಾಹಿತಿಯ ಮೇಲೆ ಇತರೇ ಹಲವಾರು ಕಡೆ ಧಾಳಿ ನಡೆಸಿ. 96 ಎಂಡಿಎಂಎ ಮತ್ತು 180 ಎಲ್ಎಸ್ಡಿ ಬ್ಲಾಟ್ಗಳನ್ನು ಮುಟ್ಟುಗೋಲು… Read More ಮೋಹಕ ನಟ ನಟಿಯರೋ? ಮಾದಕ ವ್ಯಸನಿಗಳೋ?