ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ಅಡುಗೆ ಮನೆ (Kitchen Room) ಕೇವಲ ಮನೆಯ ಒಂದು ಕೋಣೆಯಲ್ಲ. ಅದು ಇಡೀ ಕುಟುಂಬದ (Family) ಸದಸ್ಯರನ್ನು ಬೆಸೆದಿಟ್ಟುಕೊಳ್ಳುವ ಕೊಂಡಿ, ಮನೆಯ ಆರೋಗ್ಯದ ಕೇಂದ್ರ & ಶಕ್ತಿ ಕೇಂದ್ರವೂ ಹೌದು. ಮನೆಯ ಅಡುಗೆ ಮನೆಯಲ್ಲಿ ನಿತ್ಯವೂ ಮೂರು ಬಾರಿ ಒಲೆ ಉರಿಯುತ್ತಿದೆ ಎಂದರೆ ಆದೊಂದು ಆರೋಗ್ಯಕರ ಕುಟುಂಬ ಎಂದರು ತಪ್ಪಾಗದು. ಇತ್ತೀಚಿನವರೆಗೂ ಅಡುಗೆ ಮನೆಯ ಡಬ್ಬಿಗಳೇ ಭಾರತೀಯ ಗೃಹಿಣಿಯರ ಉಳಿತಾಯದ ಕೇಂದ್ರವೂ ಆಗಿದ್ದು, ಕುಟುಂಬಕ್ಕೆ ಅತ್ಯಾವಶ್ಯಕತೆ ಬಿದ್ದಾಗ ಅಲ್ಲಿನ ಸಾಸಿವೆ ಡಬ್ಬಿ, ಗಸಗಸೆ ಡಬ್ಬಿಯಲ್ಲಿ ಉಳಿಸಿ ಭದ್ರವಾಗಿ… Read More ಅಡುಗೆ ಮನೆ ಕುಟುಂಬದ ಶಕ್ತಿ ಕೇಂದ್ರ

ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು,  ಅರೇ ಇದೇನಿದು? ಈ ಸಣಕಲ ದೇಹದ  ಮಾವುತನು  ಅಷ್ಟು  ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು  ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ  ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ.  ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ … Read More ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ನಿಖರತೆ ಮತ್ತು ವಿಶ್ವಾಸ

ಅದೊಮ್ಮೆ ರಾಜ ತನ್ನ ಅರಮನೆಯಲ್ಲಿ ಏಕಾಂತದಲ್ಲಿರುವಾದ ರಾಜ್ಯದ ಸೇನಾಧಿಪತಿ ಸರಸರನೆ ಧಾವಿಸಿ ಬಂದು ರಾಜನಿಗೆ ವಂದಿಸಿ ತುಸು ಸಿಟ್ಟಿನಿಂದ ಏರು ಧನಿಯಲ್ಲಿ ಮಹಾರಾಜರೇ ನೀವು ಮಾಡಿದ್ದು ಸರಿಯೇ? ನಾನು ಈ ರಾಜ್ಯದ ಸೇನಾಧಿಪತಿ. ಹಗಲು ರಾತ್ರಿ ಎನ್ನದೇ ರಾಜ್ಯದ ಹಿತಕ್ಕಾಗಿ ಮತ್ತು ನಿಮ್ಮ ಶ್ರೇಯಕ್ಕಾಗಿಯೇ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ಆದರೆ ಏನನ್ನೂ ಮಾಡದ, ಸದಾ ನಿಮ್ಮ ಹಿಂದೆಯೇ ಸುತ್ತುತಾ ಇರುವ ಆ ಮಹಾಮಂತ್ರಿಯನ್ನು ಎಲ್ಲಾ ಕಡೆಯಲ್ಲಿಯೂ ಮೆರೆಸುತ್ತೀರಿ ಮತ್ತು ಕಂಡ ಕಂಡ ಕಡೆ ಹೊಗಳುತ್ತೀರಿ. ನಮ್ಮ ಕೆಲಸದ… Read More ನಿಖರತೆ ಮತ್ತು ವಿಶ್ವಾಸ