ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ನನ್ನ ಪ್ರೌಢಶಾಲೆಯಲ್ಲಿ ಸಮಾಜ ಶಾಸ್ತ್ರದ ಮೂಲಕ ಇತಿಹಾಸ, ಭೂಗೋಳವನ್ನು ಕಲಿಸಿಕೊಟ್ಟು ನನಗೆ ಚರಿತ್ರೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದ ನನ್ನ ನೆಚ್ಚಿನ/ಮೆಚ್ಚಿನ ಗುರುಗಳಾದ ಶ್ರೀಮತಿ ನಾಗವೇಣಿ ಭಾಸ್ಕರ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ಶಿಕ್ಷಕರ ದಿನಾಚರಣೆಯಂದು ನಿಮ್ಮೊಂದಿಗೆ ಮಾಡಿಕೊಡುತ್ತಿದ್ದೇನೆ.… Read More ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ಶ್ರೀಮತಿ ದ್ರೌಪದಿ ಮುರ್ಮು

ನಮ್ಮ ಭಾರತ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಒಂದು ರೀತಿಯ ಅಧ್ಯಕ್ಷ ಪದವಿಯನ್ನು ಹೊಂದಿರುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತೀಯ ಮೂರೂ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್) ದಂಡನಾಯಕರಾಗಿದ್ದು, ಸಂಸತ್ತಿನ ಉಭಯ ಸಭೆಗಳಲ್ಲಿ ಬಹುಮತದಿಂದ ರೂಪಿಸಲ್ಪಟ್ಟ ಹೊಸಾ ಮಂಡಿಸಲ್ಪಟ್ಟ ಮಸೂದೆಗಳು ರಾಷ್ಟ್ರಪತಿಗಳ ಅಂಗೀಕಾರದ ನಂತರವೇ ಅಧಿಕೃತವಾದ ಕಾನೂನಾಗಿ ಜಾರಿಗೆ ತರಲ್ಪಡುತ್ತದೆ. ಇಂತಹ ರಾಷ್ಟ್ರಪತಿಗಳನ್ನು ಲೋಕಸಭೆ ಮತ್ತು ರಾಜ್ಯಸಭೆಯ ಸಾಂಸದರು ಮತ್ತು ದೇಶದ ಎಲ್ಲಾ ರಾಜ್ಯಗಳ ಮತ್ತು ಪ್ರಾಂತ್ಯಗಳ ವಿಧಾನಸಭೆಯ ಶಾಸಕರು… Read More ಶ್ರೀಮತಿ ದ್ರೌಪದಿ ಮುರ್ಮು

ವಿಮಲ ಮಿಸ್

ಅದು ಎಂಭತ್ತರ ದಶಕ ಆರಂಭದ ಕಾಲ ನಾನು ಆಗ ತಾನೇ ನೆಲಮಂಗಲದ ಸರ್ಕಾರೀ ಪ್ರಾಥಮಿಕ ಶಾಲೆಯಿಂದ ಬೆಂಗಳೂರಿನ ಪ್ರತಿಷ್ಠಿತ ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಸ್ಲೇಟು ಬಳಪ ಹಿಡಿದುಕೊಂಡು ಯಾವುದೇ ರೀತಿಯ ಸಮವವಸ್ತ್ರ ಇಲ್ಲದೇ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡು ನೆಲದ ಮೇಲೆ ಹಾಕಿದ್ದ ಮಣೆಯ ಮೇಲೆ ಪಾಠ ಕಲಿಯುತ್ತಿದ್ದ ನನಗೆ, ಏಕಾ ಏಕಿ ಸ್ಲೇಟು ಬಳಪ ಜಾಗದಲ್ಲಿ ನೋಟ್ ಪುಸ್ತಕ, ಪೆನ್ಸಿಲ್, ಸಮವಸ್ತ್ರದ ಜೊತೆ ಟೈ ಮತ್ತು ಶೂ ಹಾಕಿಕೊಂಡು ಡೆಸ್ಕಿನ ಮೇಲೆ ಕುಳಿತು ಕೊಂಡು… Read More ವಿಮಲ ಮಿಸ್