ಹಿತಚಿಂತಕರು ಮತ್ತು ಹಿತಶತ್ರುಗಳು
ಮನುಷ್ಯ ಸಂಘ ಜೀವಿ ಮತ್ತು ಭಾವುಕ ಜೀವಿಯೂ ಹೌದು. ಹಾಗಾಗಿ ಆತ ಕಾಲ ಕಾಲಕ್ಕೆ ತನ್ನ ಮನಸ್ಸಿನಲ್ಲಾಗುವ ತುಮುಲಗಳನ್ನು ಮತ್ತು ಭಾವನೆಗಳನ್ನು ಮತ್ತೊಬ್ಬರ ಹತ್ತಿರ ಹಂಚಿಕೊಳ್ಳುವ ಮೂಲಕ ನಿರಾಳನಾಗುತ್ತಾನೆ. ಹಾಗಾಗಿಯೇ ಮನುಷ್ಯರು ಸದಾಕಾಲವೂ ಉತ್ತಮ ಗುರುಗಳು, ಸ್ನೇಹಿತರು ಮತ್ತು ಸಂಗಾತಿಯ ಅನ್ವೇಷಣೆಯಲ್ಲಿದ್ದು, ಒಮ್ಮೆ ತಮ್ಮ ಅಭಿರುಚಿಗೆ ತಕ್ಕಂತಹವರು ಸಿಕ್ಕ ಕೂಡಲೇ ತಮ್ಮ ಜೀವನದ ಗುಟ್ಟು ರಟ್ಟುಗಳನ್ನೆಲ್ಲಾ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವುದಕ್ಕೆ ಪ್ರಮುಖ ಕಾರಣ ತಮ್ಮ ಗೆಳೆಯ ಈ ಎಲ್ಲಾ ಗೌಪ್ಯತೆಯನ್ನು ಕಾಪಾಡುತ್ತಾನೆ ಮತ್ತು… Read More ಹಿತಚಿಂತಕರು ಮತ್ತು ಹಿತಶತ್ರುಗಳು
