ವಿದ್ಯಾರಣ್ಯಪುರದ ಈಚಲುಮರ ಇನ್ನಿಲ್ಲ

ಸಾಧಾರಣವಾಗಿ “ಇನ್ನಿಲ್ಲ” ಅನ್ನುವ ಪದವನ್ನು ಸಮಾಜದ ಯಾರಾದರೂ ಗಣ್ಯವ್ಯಕ್ತಿಗಳು ಸತ್ತಾಗ  ಹೇಳುವುದು ವಾಡಿಕೆ.  ಆದತೆ ನಮ್ಮ ಸಂಸ್ಕೃತಿಯಲ್ಲಿ ಮರಗಳನ್ನೂ ಮನುಷ್ಯರ ರೀತಿಯಿಂದಲೇ ಪ್ರೀತಿಸುವುದರಿಂದ ಈಗ ನಾನು ಹೇಳಲು ಹೊರಟಿರುವುದು  ನಮ್ಮ ವಿದ್ಯಾರಣ್ಯಪುರದ ವಕ್ಷಸ್ಥಳದಲ್ಲಿದ್ದ ಈಚಲು ವೃಕ್ಷದ ಅವಸಾನದ ಗೋಳಿನ ಕಥೆ.

ವಿದ್ಯಾರಣ್ಯಪುರದ ಮುಖ್ಯರಸ್ತೆಯಲ್ಲಿ ಹಳೆಯ ಪಳಿಯುಳಿಕೆಯಂತಿದ್ದ, ತನ್ನ ಇರುವಿಕೆಯಂದಲೇ  ಈಚಲುಮರ ಬಸ್ ಸ್ಟಾಪ್ ಎಂದೇ ಹೆಸರಾಗಿದ್ದ ಪುರಾತನ ಈಚಲು ಮರಕ್ಕೆ ಇಂದು ಬೆಳಿಗ್ಗೆ ಹಾಲಿನ ವಾಹನದ ಚಾಲಕನ ಅಜಾಗರೂಕತೆಯಂದಲೋ ಅಥವ ನಿಯಂತ್ರಣ ತಪ್ಪಿಯೋ ಗುದ್ದಿದ ಪರಿಣಾಮವಾಗಿ ಈಚಲು ಮರ ಧರೆಗುರುಳಿ ಅವಸಾನವಾಗಿದೆ. ಸಮಾಜದಲ್ಲಿ ಈಚಲು ಮರಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇಲ್ಲದೆ ನಿಕೃಷ್ಟವಾಗಿ ನೋಡುವಂತಹ ಪರಿಸ್ಥಿತಿಯಿದ್ದರೂ, ನಮ್ಮ ವಿದ್ಯಾರಣ್ಯಪುರ ನಿವಾಸಿಗಳಿಗೆ ಈ ಈಚಲುಮರ ಅಚ್ಚು ಮೆಚ್ಚಾಗಿತ್ತು ಎಂದು ಹೇಳಿದರೆ ಅತಿಶಯೋಕ್ತಿ ಏನಲ್ಲ.

ಈಗಾಗಲೇ ಕೆಲವರು  ಈಚಲುಮರ ಇಲ್ಲವಾದ್ದರಿಂದ ಆ ಬಸ್ ನಿಲ್ಡಾಣವನ್ನು ಕರ್ನಾಟಕ ಬ್ಯಾಂಕ್ ನಿಲ್ದಾಣ ಆಥವಾ A2B stop  ಎಂದು  ಕರೆಯಬೇಕೆಂದು ಸೂಚಿಸುತ್ತಿರುವರಾದರೂ, ಬೆಂಗಳೂರಿನ ಶಿವಾನಂದ, ನಿರ್ಮಲಸ್ಟೋರ್ಸ್, ಸುಜಾತ, ಸ್ವಸ್ತಿಕ್  ಅಂಗಡಿ ಮತ್ತು ಚಿತ್ರಮಂದಿರಗಳು ಈಗಿಲ್ಲವಾದರೂ ಅದನ್ನು ಅದೇ ಹೆಸರಿನಿಂದ ಕರೆಯಲ್ಪಡುವಂತೆ ನಮ್ಮ ವಿದ್ಯಾರಣ್ಯಪುರದಲ್ಲಿ  ಆ ಹಳೆಯ ಈಚಲುಮರ ಈಗ ಇಲ್ಲದಿದ್ದರೇನಂತೆ  ಆ ಬಸ್ ನಿಲ್ದಾಣ ಎಂದೆಂದಿಗೂ ಈಚಲುಮರ ಸ್ಟಾಪ್ ಎಂದೇ ಇರುತ್ತದೆ. ಬೇಕಿದ್ದರೆ, ನಾವಲ್ಲಿ ಮತ್ತೋಂದು ಈಚಲುಮರವನ್ನು ಮರವನ್ನು ನೆಟ್ಟು  ಪೋಷಿಸಿ ಈಚಲುಮರ  ಸ್ಟಾಪ್ ಹೆಸರನ್ನು ಅಜರಾಮರಗೊಳಿಸೋಣ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s