ಹಯಗ್ರೀವ

ಸಾಂಪ್ರದಾಯಕವಾದ ಹಯಗ್ರೀವ ಸಿಹಿ ಖ್ಯಾದ್ಯವನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.

ಸುಮಾರು 3-4 ಜನರಿಗೆ ಸಾಕಾಗುವಷ್ಟು ಹಯಗ್ರೀವ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಕಡಲೇ ಬೇಳೆ – 1/2 ಪಾವು
  • ಪುಡಿ ಮಾಡಿದ ಉಂಡೇ ಬೆಲ್ಲ – 1 ಬಟ್ಟಲು
  • ತುರಿದ ಕೊಬ್ಬರಿ – 1 ಬಟ್ಟಲು
  • ಗಸಗಸೆ – 20 ಗ್ರಾಂ
  • ಗೊಡಂಬಿ – 8-10
  • ದ್ರಾಕ್ಷಿ – 8-10
  • ಏಲಕ್ಕಿ – 2-3
  • ತುಪ್ಪ – 3-4 ಚಮಚ

ಹಯಗ್ರೀವ ತಯಾರಿಸುವ ವಿಧಾನ

  • ಹಯಗ್ರೀವ ತಯಾರಿಸುವ ಸುಮಾರು ಮೂರ್ನಾಲ್ಕು ಮೊದಲು ಗಂಟೆಗಲ ಮೊದಲೇ ಕಡಲೇ ಬೇಳೆಯನ್ನು ಚೆನ್ನಾಗಿ ನೆನೆಸಿಟ್ಟು ಕೊಳ್ಳಬೇಕು
  • ನೆನೆಸಿಟ್ಟು ಕೊಂಡ ಕಡಲೇ ಬೇಳೆಯನ್ನು ಕುಕ್ಕರಿನಲ್ಲಿ ಸುಮಾರು ನಾಲ್ಕೈದು ವಿಶಲ್ ಬರುವ ವರೆಗೂ ಬೇಯಿಸಿಕೊಂಡು ಆರಲು ಬಿಡಬೇಕು
  • ಪಾತ್ರೆಯೊಂದರಲ್ಲಿ ಬೆಲ್ಲದ ಪುಡಿಯನ್ನು ಹಾಕಿಕೊಂಡು ಅದು ಮುಳುಗುವಷ್ಟು ನೀರನ್ನು ಬೆರೆಸಿ ಬೆಲ್ಲದ ಪಾಕವನ್ನು ತಯಾರಿಸಿಕೊಂಡು ಅದನ್ನು ಶೋಧಿಸಿ ಆರಲು ಬಿಡಬೇಕು.
  • ಒಂದು ಸಣ್ಣ ಬಾಣಲೆಯನ್ನು ತೆಗೆಕೊಂಡು ಸಣ್ಣ ಉರಿಯಲ್ಲಿ ಗಸಗಸೆಯನ್ನು ಚೆನ್ನಾಗಿ ಕೆಂಪಗಾಗುವರೆಗೂ ಹುರಿದು ಕೊಳ್ಳಬೇಕು
  • ಒಂದು ದಪ್ಪ ತಳದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಹಾಕು ತುಪ್ಪ ಕಾದ ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬಾಡಿಸಿಕೊಳ್ಳಬೇಕು
  • ಈಗ ಅದಕ್ಕೆ ಬೆಲ್ಲದ ಪಾಕ ಸೇರಿಸಿ ಅದು ಒಂದು ಕುದಿ ಬಂದ ನಂತರ ಅದಕ್ಕೆ ಬೇಯಿಸಿಟ್ಟು ಕೊಂಡಿದ್ದ ಬೇಳೆಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು
  • ಈಗ ಅದಕ್ಕೆ ಏಲಕ್ಕಿ ಪುಡಿ ಮತ್ತು ಕೊಬ್ಬರೀ ತುರಿಯನ್ನು ಸೇರಿಸಿ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿಬೇಕು
  • ಆ ಮಿಶ್ರಣಕ್ಕೆ ಹುರಿದುಕೊಂಡಿದ್ದ ಗಸಗಸೆಯನ್ನು ಸೇರಿಸಿ ಮತ್ತೆ ಮೂರ್ನಾಲ್ಕು ನಿಮಿಷಗಳಷ್ಟು ಕುದಿಸಿ ತಣ್ಣಗಾಗಲು ಬಿಟ್ಟಲ್ಲಿ ರುಚಿ ರುಚಿಯಾದ ಹಯಗ್ರೀವ ಸವಿಯಲು ಸಿದ್ಧ.

ಬಿಸಿ ಬಿಸಿಯಾದ, ಸಿಹಿಯಾದ ಹಯಗ್ರೀವ ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
https://youtu.be/c0va3c3TYdY

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ

ಏನಂತೀರೀ?

IMG_20200715_133724-removebg-previewಮನದಾಳದ ಮಾತು : ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಮಾತ್ರವೇ ಸವಿಯಲು ಸಿಗುವ ಹಯಗ್ರೀವ, ಕಡಲೇಬೇಳೆ ಮತ್ತು ಬೆಲ್ಲ ಬಳಸಿ ತಯಾರಿಸಿರುವ ಈ ಸಿಹಿ ಖಾದ್ಯ ಆರೋಗ್ಯಕ್ಕೂ ಒಳ್ಳೆಯದು. ಇದಕ್ಕೆ ಒಂದು ಚೂರು ಪಚ್ಚ ಕರ್ಪೂರ ಸೇರಿಸಿದಲ್ಲಿ ರುಚಿಯೂ ಹೆಚ್ಚುವುದಲ್ಲದೇ ಆರೋಗ್ಯಕ್ಕೂ ಉತ್ತಮ.

 

#ಅನ್ನಪೂರ್ಣ
#ಹಯಗ್ರೀವ
#ಏನಂತೀರೀ?

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s