ಸುಮಾರು ದಿನಗಳಿಂದ ಕರೆ ಮಾಡದಿದ್ದ ನನ್ನ ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ಸ್ನೇಹಿತ ನಿನ್ನೆ ರಾತ್ರಿ ಕರೆ ಮಾಡಿದ್ದ. ಸಾಧಾರಣವಾಗಿ ತಿಂಗಳಿಗೊಮ್ಮೆಯೋ ಇಲ್ಲವೇ ಎರಡು ತಿಂಗಳಿಗಳಿಗೆ ಒಮ್ಮೆ ಕರೆ ಮಾಡಿ ಗಂಟೆ ಗಟ್ಟಲೆಗಳ ಕಾಲ ಉಭಯ ಕುಶಲೋಪರಿಯನ್ನು ವಿಚಾರಿಸುವುದು ನಮ್ಮಿಬ್ಬರ ನಡುವಿನ ವಾಡಿಕೆ. ಇತ್ತೀಚೆಗೆ ಸುಮಾರು ಐದಾರು ತಿಂಗಳುಗಳಿಂದ ಆತ ಕರೆ ಮಾಡಿರಲಿಲ್ಲ. ಬಹುಶಃ ಕೆಲಸದ ಬಾಹುಳ್ಯದಿಂದಲೋ ಇಲ್ಲವೇ ಕೂರೋನಾ ಪರಿಸ್ಥಿತಿಯಿಂದಾಗಿ ಆತ ಕರೆ ಮಾಡದಿರಬಹುದು ಎಂದು ನಾನೂ ಕೂಡಾ ಸುಮ್ಮನಾಗಿದ್ದೆ.
ಯಥಾ ಪ್ರಕಾರ ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ಮಕ್ಕಳ ವಿದ್ಯಾಭ್ಯಾಸ ಹೇಗಿದೆ ಎಂಬುದರಿಂದ ಆರಂಭವಾದ ನಮ್ಮಿಬ್ಬರ ಸಂಭಾಷಣೆ, ಕೆಲಸ ಹೇಗಿ ನಡೀತಾ ಇದೇ ಎಂಬಲ್ಲಿಗೆ ಬಂದಾಗ, ಎಲ್ಲಿಯ ಕೆಲಸ? ಕೆಲಸ ಕಳೆದುಕೊಂಡು ಮೂರು ತಿಂಗಳುಗಳಾಯಿತು. ಹೊಸಾ ಕೆಲಸದ ಹುಡುಕಾಟದಲ್ಲಿ ನಿರತನಾಗಿದ್ದೇನೆ. ವಿಶ್ವಾದ್ಯಂತ ಪರಿಸ್ಥಿತಿ ಸರಿ ಇರದ ಕಾರಣ ಹೊಸಾ ಕೆಲಸ ಸಿಗುವುದರಲ್ಲಿ ಸ್ವಲ್ಪ ತಡವಾಗಬಹುದಾದರೂ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಆಶಾವಾದ ನನ್ನದು ಎಂದೆ. ವಿಷಯ ತಿಳಿದು ಬೇಸರಿಕೊಂಡ ಆತ, ಕೂದಲೇ ನನ್ನ ರೆಸ್ಯೂಂ ಕಳುಹಿಸಿಕೊಡು ನನ್ನ ಕೆಲವು ಭಾರತೀಯ ಸ್ನೇಹಿತರಿಗೆ ಕಳುಹಿಸಿ ನನ್ನ ಕಡೆಯಿಂದಲೂ ಪ್ರಯತ್ನಿಸುವ ಎಂದದ್ದಲ್ಲದೇ, ಯಾವುದೇ ರೀತಿಯ ಸಹಾಯ ಬೇಕಿದ್ದರೂ ಸಂಕೋಚವಿಲ್ಲದೇ ನನ್ನ ಬಳಿ ಕೇಳು ಎಂದು ತನ್ನ ದೊಡ್ಡತನವನ್ನು ತೋರಿದ. ಆತನ ಹೃದಯವೈಶಾಲ್ಯತೆಗೆ ಧನ್ಯವಾದಗಳನ್ನು ಅರ್ಪಿಸಿ, ಇನ್ನೂ ಮೂರ್ನಾಲ್ಕು ತಿಂಗಳುಗಳ ಕಾಲ ನಿರ್ವಹಿಸುವುದಕ್ಕೆ ತೊಂದರೆ ಇಲ್ಲ. ಅಷ್ಟರೊಳಗೆ ಕೆಲಸ ಸಿಗಲಿ ಎಂದು ಹಾರೈಸು ಎಂದು ಕೇಳಿಕೊಂಡೆ.
ನಂತರ ಯಥಾ ಪ್ರಕಾರ ಕೋವಿಡ್ ಪರಿಸ್ಥಿತಿ ಹೇಗಿದೆ ಎಂಬ ಪ್ರಶ್ನೆ ಅವನಿಂದ ತೂರಿಬಂತು. ಅಯ್ಯೋ ಅದನ್ನೇಕೆ ಕೇಳುತ್ತೀಯೇ? ಪ್ರತೀ ದಿನ 1000-2000 ಕ್ಕೂ ಹೆಚ್ಚಿನ ಜನರಿಗೆ ಕೋವಿಡ್+ ಆಗ್ತಾ ಇದೆ ಪ್ರತೀದಿನ 15-20 ಜನರು ಕೋವಿಡ್ ನಿಂದಾಗಿ ಸಾಯುತ್ತಿದ್ದಾರೆ. ಹಾಗಾಗಿ ಮತ್ತೆ ಇನ್ನೊಂದು ಸುತ್ತಿನ ಲಾಕ್ ಡೌನ್ ಆಗಿದೆ. ಸುಮಾರು ಮೂರ್ನಾಲ್ಕು ವಾರಗಳಿಂದ ಮನೆಯಿಂದಾಚೆಯೇ ಬಂದಿಲ್ಲ ಪರಿಸ್ಥಿತಿ ಗಂಭಿರವಾಗಿದೆ ಎಂದೆ.
ಅರೇ ಕೇವಲ 2000-3000 ಕೋವಿಡ್+ ಮತ್ತು 15-20 ಜನರು ಸಾಯುತ್ತಿರುವುದಕ್ಕೇ ಅಷ್ಟೋಂದು ಭಯವೇಕೆ? ಇಲ್ಲಿ ಅದು ಸರ್ವೇ ಸಾಧಾರಣ. ಪ್ರತೀದಿನ ಸಾವಿರಾರು ಮಂದಿ ಇಲ್ಲಿ ಸಾಯುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಅವರವರ ಮುನ್ನೆಚ್ಚರಿಕೆಯ ಕ್ರಮದಲ್ಲಿ ಇರಬೇಕೆಂದು ತಿಳಿಸಿದೆ ಮತ್ತು ಸಾಧ್ಯವಾದಷ್ಟೂ ಜನರು ಮನೆಯಿಂದ ಹೊರಬರದೇ, ಸಾಮಾಜಿಕ ಅಂತರವನ್ನು ಕಾಪಾಡಿ ಎಂಬ ಎಚ್ಚರಿಕೆಯ ಹೊರತಾಗಿ ಉಳಿದೆಲ್ಲವೂ ಸಾಧಾರಣವಾಗಿಯೇ ಇದೆ. ಲಾಕ್ ಡೌನ್ ಅಥವಾ ಸೀಲ್ ಡೌನ್ ಇಲ್ಲ ಎಂದು ತಿಳಿಸಿ, ತನ್ನ ಮಾತು ಮುಂದುವರೆಸಿ, ಅದರೆ ಇಲ್ಲಿಯ ಜನರಿಗೆ ಸ್ವಲ್ಪ ಸಾಮಾಜಿಕ ಜವಾಬ್ಧಾರಿ ಹೆಚ್ಚಾಗಿಯೇ ಇದೆ. ಹಾಗಾಗಿ ಸರ್ಕಾರ ಹೇಳಿದ್ದನ್ನು ಕೇಳುವ ಮನಸ್ಥಿತಿ ಹೊಂದಿದ್ದಾರೆ. ಅವೆಲ್ಲವನ್ನೂ ಮೀರಿ ಹೋಗುವ ಸಾಕಷ್ಟು ಮಂದಿಗಳು ಇರುವ ಕಾರಣದಿಂದಾಗಿಯೇ ಇಲ್ಲಿಯೂ ಸಹಾ ಕೂರೋನಾ ಸಾಂಕ್ರಾಮಿಕ ರೋಗ ಮಾರಕವಾಗಿದೆ ಅದಕ್ಕೆ ಅವರು ಸರ್ಕಾರವನ್ನು ದೂಷಿಸದೇ ತಮ್ಮ ಪಾಡಿಗೆ ತಾವು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ.
ಅದರೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಅದಕ್ಕಿಂತಲೂ ವಿಭಿನ್ನ. ಅಮೇರಿಕಾಗಿಂತಲೂ ಐದಾರು ಪಟ್ಟು ಹೆಚ್ಚಿನ ಜನಸಂಖ್ಯೆ ಇರುವ ಮತ್ತು ಕಡಿಮೆ ಸಾಮಾಜಿಕ ಕಳಕಳಿ ಮತ್ತು ಜವಾಬ್ಧಾರಿಯನ್ನು ಹೊಂದಿರುವ ನಮ್ಮಲ್ಲಿ ದಿನೇ ದಿನೇ ಅಲ್ಲಿಯಷ್ಟಿಲ್ಲದಿದ್ದರೂ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರವೂ ಎಷ್ಟೆಲ್ಲಾ ಪ್ರಯತ್ನ ಪಟ್ಟರೂ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಲಾಕ್‌ಡೌನ್ ಇದಕ್ಕೆ ಪರಿಣಾಮಕಾರಿ ಎಂದರೂ ಅದರಿಂದ ಹಲವಾರು ಆರ್ಥಿಕ ಸಮಸ್ಯೆಗಳು ಎದುರಾಯಿತು. ಅಂತರಾಜ್ಯ ಗಡಿಗಳನ್ನು ಮುಚ್ಚಿದ್ದು, ಅಂಗಡಿ ಮುಗ್ಗಟ್ಟುಗಳನ್ನು, ಬೀದಿ ಬದಿಯ ವ್ಯಾಪಾರ ನಿಷೇಧಿಸಿದ್ದು, ಸಾಧ್ಯವಾದಷ್ಟು ಎಲ್ಲರನ್ನೂ ಮನೆಗಳಿಂದಲೇ ಕೆಲಸ ಮಾಡಿ ಎಂದದ್ದನ್ನೇ ನೆಪ ಮಾಡಿಕೊಂಡ ಕೆಲವು ವಿರೋಧ ಪಕ್ಷಗಳ ನಾಯಕರುಗಳು ರಂಪರಾಮಾಯಣಕ್ಕೆ ಬಗ್ಗಿದ ಸರ್ಕಾರ ಯಾವಾಗ ನೆರೆರಾಜ್ಯದ ಗಡಿಗಳನ್ನು ಮುಕ್ತ ಮಾಡಿ, ಲಾಕ್ ಡೌನ್ ನಿರ್ಬಂಧವನ್ನು ಸಡಿಲಗೊಳಿಸಿ, ರಸ್ತೇ ಬದಿಯ ವ್ಯಾಪಾರಗಳಿಗೆ ಅವಕಾಶ ನೀಡಿತೋ ಅಲ್ಲಿಂದ ಶುರುವಾಯಿತು ನೋಡಿ ಕೋರೋನಾ ಅಬ್ಬರ.
ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದಾಗ ಅವರ ಕ್ರೆಡಿಟನ್ನು ಪಡೆಯಲು ತುದಿಕಾಲಲ್ಲಿ ನಿಂತವರೆಲ್ಲರೂ ಯಾವಾಗ ನಿಯಂತ್ರಣ ಕೈ ಮೀರುತ್ತಿದೆ ಎಂಬುದು ಅರಿವಾಗುತ್ತಿದ್ದಂತೆಯೇ ಸದ್ದಿಲ್ಲದೇ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ, ಕುರಿ ಹಳ್ಳಕ್ಕೆ ಬಿದ್ದರೆ, ಆಳಿಗೊಂದು ಕಲ್ಲು ಎಂದು ಪರಸ್ಪರ ದೂಷಣೆ ಮಾಡತೊಡಗಿದ್ದಾರೆ. ಇದೇ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ಕೆಲವು ಪಟ್ಟಭದ್ರ ಹಿತಾಸಕ್ತಿಯ ಮತ್ತು ಒಂದು ಚೂರೂ ಮಾನವೀಯತೆ ಇಲ್ಲದ ಅಧಿಕಾರಿಗಳು ಕೊರೊನಾ ಉಪಕರಣಗಳ ಖರೀದಿಯಲ್ಲಿಯೂ ಸಹಾ ಭಾರೀ ಭ್ರಷ್ಟಾಚಾರವನ್ನು ಮಾಡುತ್ತಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಪರಿಸ್ಥಿತಿ ಗಂಭೀರವಾಗಿರುವ ಒಂದು ರಾಜಕೀಯವನ್ನು ಬದಿಗಿಟ್ಟು ಒಂದು ಜವಾಭ್ದಾರಿ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ಜೊತೆ ಕೈ ಜೋಡಿಸಿ ಪರಿಸ್ಥಿತಿಯನ್ನು ತಹಬದಿಗೆ ತರುವಂತಹ ವಿರೋಧ ಪಕ್ಷಗಳು ದೇಶದಲ್ಲಿ ಎಂದೋ ಮಾಯವಾಗಿ ಬಿಟ್ಟಿವೆ. ಎಲ್ಲದರಲ್ಲೂ ರಾಜಕೀಯ. ಯಾವುದೇ ಪ್ರಕರಣಗಳಾದರೂ ಅದರಲ್ಲಿ ತನ್ನ ರಾಜಕೀಯ ಬೇಳೆಯನ್ನು ಎಷ್ಟು ಮತ್ತು ಹೇಗೆ ಬೇಯಿಸಿಕೊಳ್ಳಬಹುದು? ಜನರನ್ನು ಹೇಗೆ ಸರ್ಕಾರದ ವಿರುದ್ಧ ಎತ್ತಿಕಟ್ಟಿ ಜನಾಂಧೋಲನ ಮಾಡಬಹುದು ಎಂಬುದನ್ನೇ ಯೋಚಿಸುತ್ತಿರುವ ರಾಜಕೀಯ ಧುರೀಣರೇ ಹೆಚ್ಚಾಗಿರುವುದು ದೇಶಕ್ಕೆ ನಿಜಕ್ಕೂ ಮಾರಕವಾಗಿದೆ.
ಜನರ ಉದ್ಧಾರಕ್ಕಾಗಿ ಇರಬೇಕಿದ್ದ ಶಿಕ್ಷಣ ಮತ್ತು ಆಸ್ಪತ್ರೆ ಈ ಎರಡೂ ಕ್ಷೇತ್ರಗಳು ತಮ್ಮ ಜವಾಬ್ಧಾರಿಯನ್ನು ಮರೆತು ವ್ಯಾಪಾರೀಕರಣಗೊಂಡು ಪರಿಸ್ಥಿತಿಯನ್ನು ದುರ್ಲಾಭ ಪಡೆದುಕೊಂದು ಫೀ ಆಸೆಗೆಂದು ನರ್ಸರೀ ಶಾಲೆಯಿಂದ ಕಾಲೇಜಿನವರೆಗೂ Online ಶಿಕ್ಷಣ ಎಂದು ಮಕ್ಕಳನ್ನೂ ಮತ್ತು ಪೋಷಕರ ರಕ್ತವನ್ನು ಹೀರತೊಡಗಿದರೇ, ಇನ್ನು ಖಾಸಗೀ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಅದು ಇಲ್ಲ ಇದು ಇಲ್ಲಾ ಎಂದು ನೆಪವೊಡ್ದಿ ಎಲ್ಲದ್ದಕ್ಕೂ ದುಬಾರಿ ದರ ವಿಧಿಸುತ್ತಾ ಕೂರೋನಾ ವೈರಾಣುವಿನಿಂದ ಸಾಯುವುದಕ್ಕಿಂತಲೂ ಈವರ ಬಿಲ್ ನೋಡಿಯೇ ಸಾಯತೊಡಗಿರುವುದು ಸಹಾ ಸರ್ಕಾರದ ಬಗ್ಗೆ ತಪ್ಪು ಅಭಿಪ್ರಾಯ ಹಾಗೂ ಜನಾಕ್ರೋಶ ರೂಪಿತವಾಗಲು ಕಾರಣವಾಗುತ್ತಿದೆ.
ನಮ್ಮ ದೇಶದಲ್ಲಿ ತಪ್ಪು ಕಂಡು ಹಿಡಿಯುವರಿಗೇನೂ ಕಡಿಮೆ ಇಲ್ಲಾ. ಅದರೆ ಆ ತಪ್ಪನ್ನು ಹೇಗೆ ಸರಿಪಡಿಸಬೇಕು ಎಂದು ಹೇಳುವವರು ಯಾರೂ ಇಲ್ಲಾ. ಇಂದು ವಿರೋಧ ಪಕ್ಷದಲ್ಲಿರುವವರು ಒಂದು ಕಾಲದಲ್ಲಿ ಆಡಳಿತದಲ್ಲಿ ಇದ್ದವರೇ, ಅವರು ಅಂದಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯಾವಾಗದ ಕಾರಣಕ್ಕೇ ಇಂದು ಅವರು ವಿರೋಧ ಪಕ್ಷದಲ್ಲಿ ಇದ್ದಾರೆ ಎನ್ನುವುದನ್ನು ಮರೆಯದಿರುವುದು ಒಳೀತು. ಅದೇ ರೀತಿ ಒಂದು ಕಾಲಕ್ಕೆ ವಿರೋಧ ಪಕ್ಷದಲ್ಲಿದ್ದವರೇ ಇಂದು ಆಡಳಿತ ಪಕ್ಷದಲ್ಲಿದ್ದು ಇತರ ತಪ್ಪು ತೋರಿಸುವುದು ಸುಲಭ. ಅದರೆ ಅದೇ ತಪ್ಪನ್ನು ಸರಿಪಡಿಸುವುದು ಎಷ್ಟು ಕಷ್ಟ ಎಂಬುದು ಅವರಿಗೆ ಈಗ ಅರಿವಾಗುತ್ತಿರಬಹುದು.
ತಪ್ಪು ಮಾಡುವುದು ಮನುಷ್ಯನ ಸಹಜ ಗುಣ. ಮಾಡಿದ ತಪ್ಪನ್ನು ಅವರೇ ಅನುಭವಿಸಬೇಕು ಎಂಬ ಹಗೆಯನ್ನು ಸಾಧಿಸುವವರು ಸಹಾ ಅಷ್ಟೇ ತಪ್ಪಿತಸ್ಥರಾಗುತ್ತಾರೆ. ಹಾಗಾಗಿ ಅವರ ತಪ್ಪನ್ನು ಸಾರ್ವಜನಿಕವಾಗಿ ಅವಮಾನಕರವಾಗಿ ಮತ್ತು ಅಸಹ್ಯಕರವಾಗಿ ಎತ್ತಿ ತೋರಿಸಿದೇ, ರಾಜಕಾರಣ ಮಾಡದೇ, ದೇಶದ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆ ಹರಿಸುವತ್ತ ಚಿತ್ತ ಹರಿಸುತ್ತಾ ವಿಶಾಲ ಹೃದಯವಂತರಾಗ ಬೇಕಲ್ಲವೇ?
ಅದೇ ರೀತಿ ಕ್ಷಮೆ ಎನ್ನುವುದು ಮನುಷ್ಯರಲ್ಲಿರಬೇಕಾದ ಒಂದು ಪ್ರಮುಖ ಲಕ್ಷಣ. ತಮ್ಮ ಅಹಂ ಬದಿಗಿಟ್ಟು ಮಾಡಿದ ತಪ್ಪಿಗೆ ಕ್ಷಮೆ ಕೇಳುವುದೂ ಸಹಾ ದೊಡ್ಡ ಗುಣವೇ. ಇಲ್ಲಿ ಕ್ಷಮೆ ಕೇಳಿದಾಕ್ಷಣ ಆತ ಸಣ್ಣವನಾಗುವುದಿಲ್ಲ. ಬದಲಾಗಿ ಕ್ಷಮೆಯಾಚಿಸಿ, ಹಳೆಯದ್ದನ್ನೆಲ್ಲಾ ಮರೆತು ಮತ್ತೆ ಹೊಸ ಹುಮ್ಮಸ್ಸಿನಂದ ಸಮಸ್ಯೆಯನ್ನು ಬಗೆಹರಿಸುವ ವಿಶಾಲ ಹೃದಯದ ಮನಸ್ಥಿತಿ ಬರುತ್ತದೆ
ಇಡೀ ವಿಶ್ವಕ್ಕೇ ಕೂರೋನಾ ಮಹಾ ಮಾರಿ ಆಕ್ರಮಿಸಿಕೊಂಡಾಗ ಸರ್ಕಾರವು, ಪರಿ ಪರಿಯಾಗಿ ಗಿಣಿಗೆ ಹೇಳುವ ಹಾಗೆ ನಿಮ್ಮ ಎಚ್ಚರದಲ್ಲಿ ನೀವು ಇರಿ. ಹೊರಗೆಲ್ಲೂ ಬರಬೇಡಿ, ಸಾಮಾಜಿಕ ಅಂತವನ್ನು ಕಾಪಾಡಿ ಎಂದು ಕೇಳಿಕೊಂಡರೂ, ನಮಗೆ ನಮ್ಮ ಧರ್ಮವೇ ಮುಖ್ಯ, ನಮ್ಮ ಸುತ್ತಾಟವೇ ಮುಖ್ಯ ಎಂದು ಅಂಡೆಲೆಯುತ್ತಾ ಇಂದು ಕೂರೋನಾ ಸೋಕು ತಗುಲಿದ ಕೂಡಲೇ ಅದು ಸರ್ಕಾರದ ಬೇಜವಾಬ್ದಾರಿತನ ಎಂದು ಹೇಳುವುದು ಮೂರ್ಖತನವಲ್ಲದೇ ಮತ್ತೇನು? ಎಲ್ಲೂ ಹೋಗದೇ ಮನೆಯಲ್ಲಿಯೇ ಕುಳಿತವರಿಗೆ ಕೂರೋನ ಬಂದ ಒಂದೇ ಒಂದು ಉದಾಹರಣೆ ಎಲ್ಲಿಯೂ ಇಲ್ಲವೇ ಇಲ್ಲ ಅಲ್ಲವೇ?
ನಿಜ ಹೇಳಬೇಕೆಂದರೆ, ಕೂರೋನಾ ವಿಷಯದಲ್ಲಿ ದೇಶಾದ್ಯಂತ ಇರುವ ಯಾವುದೇ ಪಕ್ಷಗಳ ರಾಜ್ಯ ಸರ್ಕಾರಗಳಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಸುಮ್ಮನೆ ಕೈ ಕಟ್ಟಿ ಕುಳಿತಿಲ್ಲ. ಎಲ್ಲರೂ ತಮ್ಮ ಕೈ ಮೀರಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರದ ಎಲ್ಲಾ ಎಚ್ಚರಿಕೆಯನ್ನೂ ಧಿಕ್ಕರಿಸಿ ಕೂರೋನಾ ಹತ್ತಿಸಿಕೊಂಡು ಈಗ ಅವರು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು, ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಖಂಡಿತವಾಗಿಯೂ ಸರಿಕಾಣದು. ಈ ರೀತಿಯ ಅನಗತ್ಯ ಪ್ರತಿಭಟನೆಗಳಿಂದ ಕೂರೋನಾ ಹೋಗಲಾಡಿಸಲು ಸಾಧ್ಯವಾಗದು ಮತ್ತು ಇಂತಹ ನಕಾರಾತ್ಮಕ ಹೋರಾಟಗಳು ನಿಷ್ಟೆಯಿಂದ ಕೆಲಸ ಮಾಡುತ್ತಿರುವ ಕೆಲವೇ ಕೆಲವು ಮಂತ್ರಿಗಳು ಮತ್ತು ಅಧಿಕಾರಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆಯಷ್ಟೇ.
ಕೂರೋನಾದಿಂದ ಸತ್ತಿರುವ ಸಂಖ್ಯೆಗಿಂತ ಆರೋಗ್ಯವಾಗಿ ಮನೆಗೆ ಮರಳಿರುವ ಸಂಖ್ಯೆಯೇ ಹೆಚ್ಚಾಗಿರುವಾಗ ಅಂತಹ ಧನಾತ್ಮಕ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಜನರಿಗೆ ತೋರಿಸಿ, ಕೂರೋನಾ ಬಗ್ಗೆ ಜನರಲ್ಲಿರುವ ಭಯ ಮತ್ತು ಮೌಢ್ಯವನ್ನು ಹೋಗಲಾಡಿಸುವ ಪ್ರಯತ್ನವನ್ನು ಎಲ್ಲರೂ ಮಾಡಿದಲ್ಲಿ ಈ ಸಾಂಕ್ರಾಮಿಕ ಭಯದಿಂದ ಮುಕ್ತಿ ಹೊಂದಬಹುದು.
ಇನ್ನು ಒಬ್ಬ ಜವಾಬ್ಧಾರಿ ನಾಗರೀಕನಾಗಿ, ಮನೆಯಲ್ಲಿಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಷಾಯಗಳನ್ನು ಸೇವಿಸುತ್ತಾ, ಧೃತಿಗೆಡದೇ, ಧೈರ್ಯದಿಂದ ಬಂದದ್ದು ಬರಲಿ ಗೋವಿಂದನ ದಯೆ ನಮಗಿರಲಿ ಎಂದು ಭಗವಂತನ ನೆನೆಯುತ್ತಾ ನೆಮ್ಮದಿಯ ಜೀವನ ನಡೆಸೋಣ.
ಜೀವ ನಮ್ಮದು ಹಾಗಾಗಿ ನಮ್ಮ ಹುಷಾರಿನಲ್ಲಿ ನಾವಿರಬೇಕು ಹೊರತೂ, ಎಲ್ಲದ್ದಕ್ಕೂ ಯಾವುದೇ ಸರ್ಕಾರವನ್ನು ದೂಷಿಸಲಾಗದು ಮತ್ತು ದೂಷಿಸಲೂಬಾರದು. ಹೋಗಿರುವುದು ಕೆಲಸ ಮಾತ್ರ ಜೀವ ಅಥವಾ ಜೀವನವಲ್ಲ. ಜೀವವಿದ್ದಲ್ಲಿ ಇಂತಹ ನೂರಾರು ಕೆಲಸವನ್ನು ಗಿಟ್ಟಿಸಿಕೊಂಡು ಮತ್ತೆ ನೆಮ್ಮದಿಯ ಜೀವನ ನಡೆಸಬಲ್ಲೆವು ಅಲ್ಲವೇ? ಅದಕ್ಕೇ ಹೇಳಿದ್ದು ಆಲ್ ರೈಟ್ ಮುಂದಕ್ಕೆ ಹೋಗೋಣ ಅಂತಾ.
ಏನಂತೀರೀ?
kamraj discussion, US it’s common they go for insurance
rahul ghandhi tweet
rajastan incident