ಮಜ್ಜಿಗೆ ಹುಳಿ

ಹಬ್ಬ ಹರಿದಿನಗಳಲ್ಲಿ ಮತ್ತು ಸಭೆ ಸಮಾರಂಭಗಳಲ್ಲಿ ಉಣಬಡಿಸುವ ಸಾಂಪ್ರದಾಯಕವಾದ ಮಜ್ಜಿಗೆಹುಳಿಯನ್ನು ನಮ್ಮ ಮನೆಗಳಲ್ಲಿಯೇ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.

ಸುಮಾರು 5-6 ಜನರಿಗೆ ಸಾಕಾಗುವಷ್ಟು ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಕಡಲೇ ಬೇಳೆ/ಹುರಿಗಡಲೆ – 1 ಬಟ್ಟಲು
  • ತೆಂಗಿನ ತುರಿ – 1 ಬಟ್ಟಲು
  • ಮೊಸರು – 1 ಬಟ್ಟಲು
  • ಜೀರಿಗೆ – 8-10
  • ಸಾಸಿವೆ – 8-10
  • ಒಣಮೆಣಸಿನಕಾಯಿ – 2-3
  • ಹಸೀಮೆಣಸಿನಕಾಯಿ – 6-8 ಖಾರಕ್ಕೆ ತಕ್ಕಷ್ಟು
  • ಶುಂಠಿ – 1/2 ಇಂಚು ಖಾರಕ್ಕೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು – 2-3 ಕಡ್ಡಿ
  • ಕರೀಬೇವಿನ ಸೊಪ್ಪು – 1-2 ಕಡ್ಡಿ
  • ರುಚಿಗೆ ತಕ್ಕಷ್ಟು ಉಪ್ಪು
  • ಚಿಟುಕಿ ಇಂಗು
  • ಆಡಿಗೆ ಎಣ್ಣೆ – 2 ಚಮಚ
  • ತರಕಾರಿಯಾಗಿ ಹೆಚ್ಚಿದ ಬೂದುಗುಂಬಳಕಾಯಿ/ಸೋರೇಕಾಯಿ/ಸೀಮೇಬದನೇಕಾಯಿ/ಸೌತೇಕಾಯಿ

ಮಜ್ಜಿಗೆಹುಳಿ ತಯಾರಿಸುವ ವಿಧಾನ

  • ಮಜ್ಜಿಗೆ ಹುಳಿ ತಯಾರಿಸುವ ಸುಮಾರು ಮೂರ್ನಾಲ್ಕು ಗಂಟೆಗಳ ಮೊದಲೇ ಕಡಲೇ ಬೇಳೆಯನ್ನು ಚೆನ್ನಾಗಿ ನೆನೆಸಿಟ್ಟು ಕೊಳ್ಳಬೇಕು
  • ಮಜ್ಜಿಗೆ ಹುಳಿಗೆ ಬಳೆಸುವ ತರಕಾರಿಯನ್ನು ಚೆನ್ನಾಗಿ ತೊಳೆದು ಮಧ್ಯಮಗಾತ್ರದ ಆಕಾರಕ್ಕೆ ಕತ್ತರಿಸಿಕೊಂಡು ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ, ಮುಕ್ಕಾಲು ಭಾಗ ಬೇಯಿಸಿಟ್ಟು ಕೊಳ್ಳಬೇಕು.
  • ತೆಂಗಿನತುರಿ, ಸಾಸಿವೆ, ಜೀರಿಗೆ, ಹಸೀಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ನೆನಸಿದ ಕಡಲೇ ಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು
  • ಬೇಯಿಸಿಕೊಂಡ ತರಕಾರಿಯ ಜೊತೆಗೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಅದಕ್ಕಿ ಚಿಟುಕಿ ಅರಿಶಿನವನ್ನು ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಬೇಕು
  • ಈಗ ಅದಕ್ಕೆ ಮೊಸರನ್ನು ಬೆರೆಸಿ ಒಂದು ಕುದಿಸಿಕೊಳ್ಳಬೇಕು.
  • ಒಂದು ಸಣ್ಣ ಬಾಣಲೆಯಲ್ಲಿ ಸಾಸಿವೆ, ಇಂಗು, ಕರಿಬೇವು ಮತ್ತು ಒಣಮೆಣಸಿನಕಾಯಿಯನ್ನು ಸೇರಿಸಿ ಒಗ್ಗರಣೆ ಹಾಕಿಕೊಂಡು ಅದನ್ನು ಕುದಿಯುತ್ತಿರುವ ಹುಳಿಗೆ ಹಾಕಿ ಮತ್ತೊಂದು ಕುದಿ ಕುದಿಸಿದಲ್ಲಿ ರುಚಿ ರುಚಿಯಾದ ಸಾಂಪ್ರದಾಯಕವಾದ ಮಜ್ಜಿಗೆ ಹುಳಿ ಸಿದ್ದ.

ಬಿಸಿ ಬಿಸಿಯಾದ, ಮಜ್ಜಿಗೆಹುಳಿ ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.

ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ

ಏನಂತೀರೀ?

ಮನದಾಳದ ಮಾತು : ಸಭೆ ಸಮಾರಂಭಗಳಲ್ಲಿ ಬೂದುಗುಂಬಳಕಾಯಿ ಮಜ್ಜಿಗೆಯ ಗಮ್ಮನ್ನೇ ಬೇರೆ. ಈ ಮಜ್ಜಿಗೆ ಹುಳಿಯನ್ನು ಅನ್ನಕ್ಕೆ ಕಲೆಸಿಕೊಳ್ಳುಬಹುದು ಇಲ್ಲವೇ ಈಗಾಗಲೇ ಹಿಂದಿನ ಕೆಲವು ವಾರಗಳ ಹಿಂದಿನ ಸಂಚಿಕೆಯಲ್ಲಿ ತೋರಿಸಿರುವ ನುಚ್ಚಿನುಂಡೆ, ಬಿಸಿಬೇಳೆಬಾತ್ ಮತ್ತು ವಾಂಗಿಬಾತ್ ಜೊತೆಯಲ್ಲಿ ಸವಿಯಲು ಮಜವಾಗಿರುತ್ತದೆ. ಮನೆಯಲ್ಲಿ ಮೊಸರು ಅಥವಾ ಮಜ್ಜಿಗೆ ಹುಳಿಯಾಗಿದ್ದಲಿ ಅದನ್ನು ಸುಮ್ಮನೆ ಚೆಲ್ಲುವ ಬದಲು ಈ ರೀತಿಯಾಗಿ ಮಜ್ಜಿಗೆಹುಳಿ ಮಾಡಬಹುದಾಗಿದೆ.

#ಅನ್ನಪೂರ್ಣ
#ಮಜ್ಜಿಗೆಹುಳಿ
#ಏನಂತೀರೀ?

2 thoughts on “ಮಜ್ಜಿಗೆ ಹುಳಿ

Leave a comment