ಮಾತೃ-ಧರ್ಮ

ತಲಕಾವೇರಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತವುಂಟಾಗಿ, ತಲಕಾವೇರಿಯ ಪ್ರಧಾನ ಅರ್ಚಕರಾದ ಶ್ರೀ ನಾರಾಯಣಾಚಾರ್  ಅವರ ಧರ್ಮ ಪತ್ನಿ ಮತ್ತು ಅವರ ಸಹೋದರ ಮತ್ತು ಅವರ ನೆರೆಹೊರೆಯವರು  ಆ.5ರಂದು  ಭೂಕುಸಿತದಲ್ಲಿ ‌ ಮೃತಪಟ್ಟ ವಿಷಯ ಎಲ್ಲರಿಗೂ ತಿಳಿದ ವಿಷಯವಾಗಿದ್ದು ಆ ಕುರಿತಂತೆ ಲೇಖನವನ್ನೂ ಬರೆದಿದ್ದೆ.

ಪೋಷಕರ ಮತ್ತು ಸಂಬಂಧೀಕರ ಅಕಾಲಿಕ ಮರಣದ ಸುದ್ದಿ ಕೇಳಿ ದೂರದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿನಲ್ಲಿ ಇದ್ದ ನಾರಾಯಣಾಚಾರ್ ಅವರ ಪುತ್ರಿಯರಾದ ಶಾರದಾ ಅಚಾರ್ ಮತ್ತು ನಮಿತಾ ಆಚಾರ್ ದುರ್ಘಟನೆಯ ಸ್ಥಳಕ್ಕೆ ಒಂದೆರಡು ದಿನಗಳಲ್ಲಿಯೇ ಬಂದಾಗ ಎಲ್ಲರಂತೇ ನಾನೂ ಸಹಾ ಅವರಿಬ್ಬರ ಬಗ್ಗೆ ಮರುಕ ಪಟ್ಟಿದ್ದೆ. ತಂದೆ ಮತ್ತು ತಾಯಿಯರನ್ನು ಏಕ ಕಾಲದಲ್ಲಿಯೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಯಾವ ಶತ್ರುವಿಗೂ ಬಾರದಿರಲಿ ಎಂದೇ ಪ್ರಾರ್ಥಿಸಿದ್ದೆ. ಜಿಲ್ಲಾಡಳಿತ ದ ಬಹಳ ಪ್ರಯತ್ನದ ನಂತರ ಮೃತರ ಕೆಲವು ದೇಹಗಳನ್ನು ಹೊರತೆಗೆದು ಅವರ ಅಂತ್ಯ ಸಂಸ್ಕಾರ ಪುತ್ರಿಯರ ನೇತೃತ್ವದಲ್ಲಿಯೇ ನಡೆದಾಗ ಅಯ್ಯೋ ಪಾಪವೇ ಎಂದು ಬೇಸರಿಸಿದ್ದೆ.

ಸರ್ಕಾರವೂ ಸಹಾ ತನ್ನ ನೀತಿ ನಿಯಮಗಳಂತೆ ಮರಣ ಹೊಂದಿದವರ ಪರಿಹಾರಾರ್ಥವಾಗಿ  ಅಕ್ಕ ತಂಗಿಯರಿಬ್ಬರಿಗೂ ಆಗಸ್ಟ್  15ರಂದು ತಲಾ 2.5 ಲಕ್ಷ ಪರಿಹಾರ ಚೆಕ್‌ ವಿತರಿಸಿ,  ನಾರಾಯಣಾಚಾರ್ ಅವರೊಡನೆಯೇ ಮೃತಪಟ್ಟಿದ್ದ  ಅವರ ಸಹೋದರ ಆನಂದ ತೀರ್ಥರು ಬ್ರಹ್ಮಚಾರಿಗಳಾಗಿದ್ದರಿಂದ ಅವರ ಪರಿಹಾರದ ಹಣವನ್ನು ಅವರ ಸಹೋದರಿ ಸುಶೀಲಾರಿಗೆ ನೀಡಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಕ್ಕ ತಂಗಿಯರು ಆನಂದ ತೀರ್ಥ ಅವರನ್ನು ನಮ್ಮ ತಂದೆಯವರೇ ನೋಡಿಕೊಳ್ಳುತ್ತಿದ್ದರಿಂದ ಅವರ ಪರಿಹಾರವೂ ನಮಗೇ ಸೇರಬೇಕು. ತಮ್ಮ ಅತ್ತೆಯಾದ ಸುಶೀಲಾರಿಗೆ ಪರಿಹಾರದ ಚೆಕ್‌ ನೀಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದದ್ದನ್ನು ವೃತ್ತ ಪತ್ರಿಕೆಯಲ್ಲಿ ಓದಿದಾಗ ಎಲ್ಲರ ಮನೆಯ ದೋಸೆಯೂ ತೂತೇ.  ಅವರ ಕುಟುಂಬದ ಸಮಸ್ಯೆಗಳನ್ನು ಅವರೇ  ಕುಳಿತು ಪರಸ್ಪರ ಚರ್ಚೆ ಮಾಡಿಕೊಂಡು  ಬಗೆ ಹರಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಕಹಾನಿಮೇ ಟ್ವಿಸ್ಟ್ ಎನ್ನುವಂತೆ ಆಗಸ್ಟ್ 26ರಂದು ಭಾಗಮಂಡಲ ನಾಡ  ಕಛೇರಿಗೆ ಬಂದ ತಲಕಾವೇರಿಯ ಗಜಗಿರಿ ಭೂಕುಸಿತದಲ್ಲಿ ತಮ್ಮ ಪಾಲಕರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೊಲೀಸ್‌ ಠಾಣೆಗೆ ದೂರು ನೀಡುವಾಗ ಶಾರದಾ ಆಚಾರ್‌, ನಮಿತಾ ಆಚಾರ್‌  ಎಂದೇ ನಮೂದಿಸಿದ್ದ ಅರ್ಚಕ ನಾರಾಯಣಾಚಾರ್‌ ಅವರ ಪುತ್ರಿಯರು  ತಮಗೆ ನೀಡಲಾದ ಪರಿಹಾರ ಚೆಕ್ಕಿನಲ್ಲಿ ತಮ್ಮ ಹೆಸರನ್ನು ಬದಲಿಸಿ ಕೊಡಬೇಕೆಂದು  ಹಿಂತಿರುಗಿಸಿದ್ದಾರೆ. 

ನಾರಾಯಣಾಚಾರ್‌ ಪುತ್ರಿಯರು ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿಯೇ ಅನ್ಯ ಧರ್ಮೀಯರನ್ನು ಪ್ರೀತಿಸಿ ಅವರನ್ನೇ ಮದುವೆಯಾಗಿ ಅನ್ಯ ಧರ್ಮಕ್ಕೆ ಮತಾಂತರವಾಗಿ ತಮ್ಮ ಹೆಸರನ್ನು ನಮಿತಾ ನಜೇರತ್‌, ಶೆನೋನ್‌ ಫರ್ನಾಂಡಿಸ್‌ ಹೆಸರಿಗೆ ಬದಲಾಯಿಸಿಕೊಂಡಿರುವ ಕಾರಣ  ಪರಿಹಾರದ ಚೆಕ್ಕನ್ನು ತಮ್ಮ ಬದಲಾದ ಹೆಸರಿನಲ್ಲಿ ಕೊಡಬೇಕೆಂದು ಕೋರಿಕೊಂಡಿದ್ದನ್ನು ಮನ್ನಿಸಿದ ಅಧಿಕಾರಿಗಳು ಮೂಲ ಹೆಸರು ಕಾನೂನುಬದ್ಧವಾಗಿ ಬದಲಾಗಿರುವುದಕ್ಕೆ ದಾಖಲೆ ಸಲ್ಲಿಸುವಂತೆ ಉಪ ತಹಸೀಲ್ದಾರ್‌ ಸೂಚನೆ ನೀಡಿದ್ದಾರೆ.

18 ವರ್ಷ ದಾಟಿದ ನಂತರ ಯುವಕ ಯುವತಿಯರು ವಯಸ್ಕರಾಗಿದ್ದು ಆವರ ಇಚ್ಚೆಯಂತೆ ಯಾರನ್ನು ಬೇಕಾದರೂ ಮದುವೆಯಾಗ ಬಹುದು ಮತ್ತು ಸ್ವ ಇಚ್ಚೆಯಿಂದ ಮತಂತಾರ ಹೊಂದಬಹುದು ಎಂದು ದೇಶದ  ಕಾನೂನು ಹೇಳುತ್ತದೆ. ಅಷ್ಟು ವರ್ಷ ಹೆತ್ತೂ ಹೊತ್ತು ಸಾಲ ಸೋಲ ಮಾಡಿ ಸಾಕಿ ಸಲಹಿದ ಮಾತಾ ಪಿತೃಗಳನ್ನೂ ಮತ್ತು ಮಾತೃಧರ್ಮವನ್ನು ಮತ್ತು ಮಾತೇ ದೇಶವನ್ನು ತ್ಯಜಿಸಿ ಹೋಗಿದ್ದವರಿಗೇಕೆ ಸರ್ಕಾರೀ ಪರಿಹಾರವಾಗಿ ನಮ್ಮ ತೆರಿಗೆಯ ಹಣವನ್ನು ಏಕೆ ಕೊಡಬೇಕು? ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ.

ಅಷ್ಟು ದೊಡ್ಡ ಅರ್ಚಕರಾಗಿ ನಮ್ಮ ಸನಾತನ ಸಂಸ್ಕಾರ, ಸಂಸ್ಕೃತಿ ನಮ್ಮ ಧರ್ಮವನ್ನು ಎಲ್ಲರಿಗೂ ತಿಳಿ ಹೇಳುತ್ತಿದ್ದ ವಯೋವೃದ್ಧರಾದ ತಮ್ಮ ಪೋಷಕರಾದ ನಾರಾಯಚಾರ್ ದಂಪತಿಗಳನ್ನೇ ಧಿಕ್ಕರಿಸಿ ತಮ್ಮ ತೆವಲಿಗೆ ವಿದೇಶಕ್ಕೆ ಹೋದವರಿಗೆ ಈಗ ಕೇವಲ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಾತ್ರಕ್ಕೇ ಪೋಷಕರ ಆಸ್ತಿಯನ್ನೇಕೆ ಕೊಡಬೇಕು?

ಬೇರೆಯವರಿಗೆ ಧರ್ಮ ಬೋಧನೆ ಮಾಡುವವರ ಮನೆಯಲ್ಲಿಯೇ ತಮ್ಮ ಮಕ್ಕಳಿಗೆ ನಮ್ಮ ಸನಾತನ ಆಚಾರ, ವಿಚಾರ,  ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕಲಿಸದಿದ್ದಲ್ಲಿ ಇತರಿಗೆ ಅವರು ಧರ್ಮ ಬೋದನೆಯನ್ನು ಹೇಗೆ ಮಾಡುತ್ತಾರೆ ? ಮತ್ತು ಹಾಗೆ ಬೋಧನೆ ಮಾಡಿದರೆ ಇತರರು ಹೇಗೆ ಸ್ವೀಕರಿಸುತ್ತಾರೆ? ದೀಪದ ಕೆಳಗೆ ಸದಾ ಕತ್ತಲು ಎನ್ನುವಂತೆ ಯಾರು ಸನಾತನ ಹಿಂದೂ ಸಂಸ್ಕೃತಿಯ ರಾಯಭಾರಿಗಳು ಅಂತಾ ಇಷ್ಟು ದಿನವೂ ಎಲ್ಲರೂ ಭಾವಿಸಿದ್ದರೋ ಅಂಥಹವರ ಮನೆಯಲ್ಲಿಯೇ ಇಬ್ಬರೂ ಮಕ್ಕಳು ಅನ್ಯಧರ್ಮಕ್ಕೆ ಮತಾಂತಾರ ಹೊಂದಿ ವಿದೇಶಕ್ಕೆ ಹಾರಿ ಹೋಗಿ ಈಗ ಕೇವಲ ಆಸ್ತಿಗಾಗಿ ತಮ್ಮ ಬಂಧುಗಳೊಡನೆಯೇ ಬಡಿದಾಡುತ್ತಿದ್ದಾರೆ ಎಂದರೆ, ಅವರಿಗೆ ಧರ್ಮ  ಮತ್ತು ಸಂಸ್ಕಾರದ ಕೊರತೆ ಎದ್ದುಕಾಣುತ್ತಿದೆ ಎಂದೆನಿಸುತ್ತದೆಯಲ್ಲವೇ?

ಅವರ ವಯಕ್ತಿಕ ಆಸ್ತಿಯಾಗಲೀ ಅಥವಾ ಸರ್ಕಾರದ ಪರಿಹಾರ ಹಣವನ್ನು ಕೊಡುವ ಸಮಯದಲ್ಲಿ ಯಾವ ಸಂಬಂಧೀಕರು ಮೃತರ ಜೊತೆಗಿದ್ದು ಅವರ ಅಂತ್ಯ ಕಾಲದಲ್ಲಿ ನೋಡಿಕೊಳ್ಳುತ್ತಿದ್ದರೋ ಅಂದರೆ ಉಳುವವನೇ ರೈತ ಎನ್ನುವಂತೆ ಅವರಿಗೆ ಮಾತ್ರವೇ ಆಸ್ತಿ ಪಾಸ್ತಿ ಮತ್ತು ಪರಿಹಾರವನ್ನು ನೀಡಬೇಕೇ ಹೊರತು ಮತಾಂತರಗೊಂಡು ಪೋಷಕರನ್ನು  ಅನಾಥ ಹೆಣವನ್ನಾಗಿ ಮಾಡಿದವರಿಗೆ  ಏಕೆ ನೀಡಬೇಕು? ಎಂಬ ಸಂದೇಹ ಎಲ್ಲರಲ್ಲೂ ಕಾಡುತ್ತಿದೆ?

ಇನ್ನು ಚಿಕ್ಕಮಗಳೂರು,ಕೊಡಗು ಮುಂತಾದ  ಗುಡ್ಡಗಾಡು ಪ್ರದೇಶಗಳಲ್ಲಿ ಮತಾಂತರದ ಪಿಡುಗು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ ಎಂದು ಎಲ್ಲಾರೂ ಹೇಳುತ್ತಿದ್ದರೂ ಸಾಕ್ಷಾಧಾರದ ಕೊರತೆ ಎಂಬ ನೆಪದಲ್ಲಿ ಸುಮ್ಮನಿದ್ದ ಸರ್ಕಾರಕ್ಕೆ ಈ ಪ್ರಕರಣ ಸೂಕ್ತ ಸಾಕ್ಷಿಯಾಗ ಬಹುದಲ್ಲವೇ?

ಎಲ್ಲರಂತೆ ತಮ್ಮ ಮಕ್ಕಳೂ ಚೆನ್ನಾಗಿ ಓದಿ ದೊಡ್ಡವರಾಗಲೀ ಎಂದು ಸಾಲ ಸೋಲ ಮಾಡಿಯಾದರೂ ಕಾನ್ವೆಂಟ್ ಸ್ಕೂಲಿಗೆ ಬಡವ ಬಲ್ಲಿದರಾದಿಯಾಗಿ  ಸೇರಿಸುವ ಹಪಾ ಹಪಿ ಅಲ್ಲಿ ಶುರುವಾಗಿದೆ. ಇನ್ನು ಆ ಕಾನ್ವೆಂಟ್ ಸ್ಕೂಲ್ಕಳಲ್ಲಿ ಹಣೆಗೆ ಕುಂಕುಮ ಇಡಬಾರದು, ಕೈಗೆ ಬಳೆ ಹಾಕಿಕೊಳ್ಳಬಾರದು, ತಲೆಗೆ ಹೂವು ಮುಡಿಯ ಬಾರದು, ಮಂಡಿಯ ಮೇಲಿ ಇರುವಂತೆಯೇ ಲಂಗವನ್ನು ಹಾಕಿಕೊಳ್ಳಬೇಕು ಎಂದು  ನಮ್ಮ ಮುಗ್ಧ ಮಕ್ಕಳ ಮನಸ್ಸನ್ನು ಹಂತ ಹಂತವಾಗಿ ಪಾಶ್ಚಾತ್ಯೀಕರಣಗೊಳಿಸುತ್ತವೆ. ಇನ್ನು ಬಹುತೇಕ ಶಾಲೆಗಳಲ್ಲಿ ಹಿಂದೂ ಹಬ್ಬಗಳಿಗೆ ಕಿಂಚಿತ್ತೂ ಗೌರವವಿಲ್ಲದೇ, ಕ್ರಿಸ್ಮಸ್ ಹ್ಯಾಲೋವಿನ್ ಡೇ, ಫಾದರ್ಸ್ ಡೇ, ಮದರ್ಸ್ ಡೇ,  ವಾಲೆಂಟೇನ್ಸ್ ಡೇ ಎಂಬ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಪರೋಕ್ಷವಾಗಿ ನಮ್ಮ ಮಕ್ಕಳನ್ನು ನಮ್ಮ ಧರ್ಮದ ಬಗ್ಗೆ ಜಿಗುಪ್ಸೆ ಹೊಂದಿ ಮತಾಂತರಕ್ಕೆ ಅಡಿಪಾಯವನ್ನು ಹಾಕುತ್ತಿರುವುದು ಈ ಎಲ್ಲಾ ಘಟನೆಗಳಿಗೆ ಕಾರಣೀಭೂತವಾಗುತ್ತಿದೆ.

ತಮ್ಮ ತೆವಲಿಗೆ ಹೆತ್ತ ತಂದೇ ತಾಯಿಯರು, ಮಾತೃಭೂಮಿ ಮತ್ತು ಮಾತೃಧರ್ಮ ತ್ಯಜಿಸಿ ದೂರದ ದೇಶದಲ್ಲಿ ಮೋಜು ಮಸ್ತಿ ಮಾಡಲು ಹೋದವರಿಗೆ  ಪರಿಹಾರವನ್ನಾಗಲೀ, ಅವರಿಗೆ ಸಂಬಂದಿಸಿದ ಆಸ್ತಿಯನ್ನಾಗಲೀ ಕೊಡದೇ ಅವರ ಜೊತೆಗಿದ್ದ ಸಂಬಂಧೀಕರಿಗಾಗಲೇ ಅಥವಾ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಮಾತೃಗಳನ್ನೂ ಧರ್ಮವನ್ನೂ ಧಿಕ್ಕರಿಸಿ ಹೋಗುವವರಿಗೆ ಎಚ್ಚರಿಕೆಯ ಗಂಟೆಯನ್ನಾಗಿಸಬೇಕು.

ಇದ್ದಾಗ ಸರಿಯಾಗಿ ನೋಡಿಕೊಳ್ಳದೇ, ಸತ್ತಾಗ ಎದೆ ಬಡಿದು ಕೊಂಡು ಅತ್ತೂ, ಕರೆದು, ಹತ್ತಾರು ಜನರಿಗೆ ಭಕ್ಷ್ಯ ಭೋಜನಗಳನ್ನು ಬಡಿಸಿದರೆ ಎದ್ದು ಬರುವರೇ ಹೆತ್ತವರು?

ಮಾತಾ ಪಿತೃಗಳನ್ನೂ ಮತ್ತು ಮಾತೃ ಧರ್ಮವನ್ನು ಧಿಕ್ಕರಿಸಿ ಹೋದವರಿಗೆ ಅಂತಿಮವಾಗಿ ಪೋಷಕರು ಸತ್ತಾಗ ಅವರ ಆಸ್ತಿ ಪಾಸ್ತಿಗಳನ್ನು ಯಾವ ಅರ್ಹತೆಯಿಂದ ಅನುಭವಿಸುತ್ತಾರೆ?

ಏನಂತೀರೀ?

2 thoughts on “ಮಾತೃ-ಧರ್ಮ

  1. ನೀವು ಹೇಳಿರುವ ಒಂದೊಂದು ಪದ ಅಕ್ಷರಶಃ ಸತ್ಯ.
    ಹೇಗಾದರೂ ನಮ್ಮ ನಾಡಲ್ಲಿ ಮತಾಂತರವನ್ನು ನಿಲ್ಲಿಸಲು ಹೋರಾಡಿ

    Like

  2. ಮೊದಲು ಕಾಡು ಕಡಿದು ತನ್ನ ತೆವಲಿಗೆ ರೆಸಾರ್ಟ್ ಮಾಡುವ ಪ್ರಕೃತಿ ವಿರುದ್ಧ ದ ವಿಕೃತಿ ಕೇರಳ, ಚಿಕ್ಕ ಮಗಳೂರು, ಕೊಡಗು ಇಲ್ಲಿ ನಿಲ್ಲಬೇಕಿದೆ. ಹಣ ದಾಹ ಎಲ್ಲ ವರ್ಗ ಗಳಲ್ಲಿ, ಜೊತೆಗೆ ಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಮಿತಿ ಮೀರಿದ ಪರಿಣಾಮ, ಪ್ರಕೃತಿ ತನ್ನ ಆಯುಧ ಬಳಸಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s