ಬಯಲುಸೀಮೆಯ ಜನ ಥಟ್ ಅಂತಾ ಅಲ್ಲಿ ಹಿಟ್ಟನ್ನು ಬಳಸಿಕೊಂಡು, ಸಾಂಪ್ರದಾಯಕವಾಗಿ ವಾಡಪ್ಪಿ ಎಂಬ ಖಾದ್ಯವನ್ನುವಿಧಾನವನ್ನು ನಮ್ಮ ಅನ್ನಪೂರ್ಣ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ.
ಸುಮಾರು 2-3 ಜನರಿಗೆ ಸಾಕಾಗುವಷ್ಟು ವಾಡಪ್ಪಿಯನ್ನು ತಯಾರಿಸಲು ಬೇಕಾಗುವಂತಹ ಸಾಮಗ್ರಿಗಳು
- ಅಕ್ಕಿ ಹಿಟ್ಟು – 1 ಬಟ್ಟಲು
- ಸಣ್ಣಗೆ ಹೆಚ್ಚಿದ – ಈರುಳ್ಳಿ 1
- ಸಣ್ಣಗೆ ಹೆಚ್ಚಿದ – ಹಸೀ ಮೆಣಸಿನಕಾಯಿ 2-3
- ಸಣ್ಣಗೆ ಹೆಚ್ಚಿದ – ಕರಿಬೇವಿನ ಸೊಪ್ಪು 2 ಎಸಳು
- ಸಣ್ಣಗೆ ತುರಿದ – ಶುಂಠಿ 1/2 ಚಮಚ
- ಬಿಳಿ ಎಳ್ಳು – 1 ಚಮಚ
- ಜೀರಿಗೆ – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ವಾಡಪ್ಪಿ ತಯಾರಿಸುವ ವಿಧಾನ
-
ಒಂದು ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಮೇಲೆ ತಿಳಿಸಿದ ಎಲ್ಲಾ ಪರಿಕರಗಳನ್ನು ಚೆನ್ನಾಗಿ ಬೆರೆಸಿಕೊಂಡು ಅದಕ್ಕೆ ಸ್ವಲ್ಪವೇ ಸ್ವಲ್ಪ ನೀರನ್ನು ಬೆರೆಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ
-
ಕಲೆಸಿಕೊಂಡ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ
-
ಗಟ್ಟಿ ತಳದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಎಡಗೈಗೆ ಸ್ವಲ್ಪ ಎಣ್ಣೇ ಸವರಿಕೊಂಡು ಕಲೆಸಿಟ್ಟ ಉಂಡೆಗಳನ್ನು ತೆಳುವಾಗಿ ತಟ್ಟಿಕೊಂಡು ಕಾಯ್ದ ಎಣ್ಣೆಯಲ್ಲಿ ಬಿಡಿ
-
ಸುಮಾರು ನಾಲ್ಕೈದು ನಿಮಿಷಗಲ ಕಾಲ ಎರಡು ಬದಿಯೂ ಚೆನ್ನಾಗಿ ಎಣ್ಣೆಯಲಿ ಕಂದು ಬಣ್ನ ಬರುವವೆರ್ಗೂ ಕರಿದರೆ ಬಿಸಿ ಬಿಸಿಯಾದ ವಾಡಪ್ಪಿ ಸವಿಯಲು ಸಿದ್ಧ.
ಬಿಸಿ ಬಿಸಿಯಾದ ವಾಡಪ್ಪಿಯನ್ನು ಮೊಸರು, ಚಟ್ನೀ ಪುಡಿ, ಉಪ್ಪಿನಕಾಯಿ ಇಲ್ಲವೇ ಕಾಯಿ ಚೆಟ್ನಿಯೊಡನೆ ತಿನ್ನಲು ಮಜವಾಗಿರುತ್ತದೆ.
ವಾಡಪ್ಪಿ ಮಾಡುವುದನ್ನು ಈ ವೀಡೀಯೋ ಮೂಲಕವೂ ನೋಡಿ ತಿಳಿಯ ಬಹುದಾಗಿದೆ.
ಇನ್ನೇಕೆ ತಡಾ ನೋಡ್ಕೋಳ್ಳಿ, ಓದ್ಕೋಳ್ಳಿ, ಮಾಡ್ಕೋಳ್ಳಿ , ತಿನ್ಕೊಳ್ಳಿ
ಏನಂತೀರೀ?
ಮನದಾಳದ ಮಾತು : ಮೇಲೆ ತಿಳಿಸಿದ ಪದಾರ್ಥಗಳಲ್ಲದೇ, ಕ್ಯಾರೇಟ್, ಮೂಲಂಗಿ, ಗೆಡ್ಡೆ ಗೋಸು ಮತ್ತು ತುರಿದ ತೆಂಗಿನ ತುರಿಯನ್ನು ಬಳಸಿಯೂ ರುಚಿ ರುಚಿಯಾದ ವಾಡಪ್ಪಿಯನ್ನು ತಯಾರಿಸಬಹುದಾಗಿದೆ.
ಈ ಪಾಕ ವಿಧಾನವನ್ನು ಸಾವಕಾಶವಾಗಿ ನಮಗೆ ಮಾಡಿ ತೋರಿಸಿಕೊಟ್ಟ ಬೆಂಗಳೂರಿನ ಹೆಚ್.ಎಂ.ಟಿ ಕಾಲೋನಿಯ ಶ್ರೀಮತಿ ಸುಧಾ ಸೋಮೇಶ್ ಅವರಿಗೆ ನಮ್ಮ ಏನಂತೀರೀ YouTube ಛಾನೆಲ್ಲಿನ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
#ಅನ್ನಪೂರ್ಣ
#ವಾಡಪ್ಪಿ
#ಸಾಂಪ್ರದಾಯಕ_ಅಡುಗೆ
#ಏನಂತೀರೀ