ಕಳೆದ ಒಂದೂವರೆ ವರ್ಷಗಳಿಂದ ಕೂರೋನಾ ಮಹಾಮಾರಿ ವಕ್ಕರಿಸಿ ಇಡೀ ವಿಶ್ವವೇ ಒಂದು ರೀತಿ ಸ್ಥಬ್ಧವಾಗಿದ್ದು ಎಲ್ಲೆಡೆಯೂ ಲಾಕ್ ಡೌನ್ ಪರಿಸ್ಥಿತಿ ಇದ್ದು ಈಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿಯೋ ಇಲ್ಲವೇ, ನಾವೇ ಅದರೊಂದಿಗೇ ಜೀವನ ನಡೆಸುವ ಕಲೆಯನ್ನು ಕಲಿತುಕೊಂಡಿದ್ದೇವೆ ಎನ್ನಬಹುದಾದ ಪರಿಸ್ಥಿತಿಯಲ್ಲಿ, ಕೂರೋನಾಕ್ಕಿಂತಲೂ ಹೆಚ್ಚಾಗಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರತೀ ದಿನವೂ ಮಾಧ್ಯಮದವರ ಕೂರೋನಾ ಕುರಿತಾದ ಕಾರ್ಯಕ್ರಮಗಳಿಂದ ಭಯಭೀತರನ್ನಾಗಿ ಮಾಡಿಸುವ ಜೊತೆಗೆ ಹಾಗೇ ಸುಮ್ಮನೆ ವಿಷಯಾಂತರ ಮಾಡುತ್ತಾ,, ಪ್ರಕಾಶ್ ರೈ ಕೆ.ಜಿ.ಎಫ್ ಚಿತ್ರದಲ್ಲಿ ನಟಿಸುತ್ತಿರುವ ವಿಷಯ , ಕನ್ನಡ ಚಿತ್ರರಂಗದ ಮೋಹಕ ನಟ-ನಟಿಯರು ನಿರೂಪಕಿಯರು ಮಾದಕ ವಸ್ತುಗಳ ವ್ಯಸನಿಗಳಗಿದ್ದು ತೋರಿಸುತ್ತಾ ಜನರನ್ನು ದಿಕ್ಕುತಪ್ಪಿಸುತ್ತಿವೆ.
ನಟ ಪ್ರಕಾಶ್ ರೈ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನ್ನಡಿಗನಾಗಿ ದಕ್ಷಿಣ ಭಾರತದ ಅಷ್ಟೂ ಚಲಚಿತ್ರರಂಗವಲ್ಲದೇ ಹಿಂದೀ ಚಿತ್ರರಂಗದಲ್ಲಿಯೂ ತನ್ನ ಛಾಪನ್ನು ಮೂಡಿಸಿ ಪ್ರಖ್ಯಾತನಾದವರೇ. ಜನರು ಗೌರವ ಕೊಡುವುದು ಒಬ್ಬ ವ್ಯಕ್ತಿಗಿಂತ ಆತನ ವ್ಯಕ್ತಿತ್ವಕ್ಕೇ ಎನ್ನುವ ಅರಿವಿಲ್ಲದ ಆತ, ಚಲಚಿತ್ರರಂಗದಲ್ಲಿ ತನ್ನ ಖಳನಾಯಕತನವನ್ನೇ ತನ್ನ ವ್ಯಕ್ತಿತ್ವಕ್ಕೂ ಅಳವಡಿಸಿಕೊಂಡು ಈಗಾಗಲೇ, ಹಲವಾರು ಬಾರಿ ತಮಿಳು, ತೆಲುಗು, ಮಲಯಾಳಂ ಅಷ್ಟೇ ಅಲ್ಲದೇ ಹಿಂದೀ ಚಿತ್ರರಂಗದಲ್ಲಿಯೂ ಭಹಿಷ್ಕಾರಕ್ಕೆ ಒಳಗಾಗಿ ಪ್ರಖ್ಯಾತಿಗಿಂತ ಕುಖ್ಯಾತಿಗೆ ಒಳಗಾಗಿದ್ದೇ ಹೆಚ್ಚು.
ಪ್ರಕಾಶ್ ರೈ ತನಗೆ ಬೇಕಾದ ಸಮಯದಲ್ಲಿ ಬೇಕಾದ ರೀತಿಯ ಬಣ್ಣವನ್ನು ಬದಲಿಸುವ ಮತ್ತು ಕನ್ನಡವನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿ ಕೊಳ್ಳುವ ಊಸರವಳ್ಳಿ ಎಂದರೂ ತಪ್ಪಾಗಲಾರದು. ಉಳಿದೆಲ್ಲಾ ಚಿತ್ರರಂಗದವರೂ ಆತನನ್ನು ಭಹಿಷ್ಕಾರ ಹಾಕಿದ್ದಾಗ ತಾನೊಬ್ಬ ಕನ್ನಡಿಗ ಎಂಬುದು ಥಟ್ ಅಂತ ನೆನಪಾಗಿ ಕನ್ನಡ ಚಿತ್ರವೊಂದನ್ನು ನಿರ್ಮಿಸಿ ಅದರ ಪ್ರಚಾರಕ್ಕೆಂದು ಕನ್ನಡದ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ನಿರೂಪಕಿ, ಆ ಸಮಯದಲ್ಲಿ ಕಾವೇರೀ ನದಿ ನೀರಿನ ಕುರಿತಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ನಡುವಿನ ಪರಿಸ್ಥಿತಿ ಬಿಗುವಾಗಿರುವ ಕುರಿತಂತೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದ್ದೇ ತಡಾ, ಅಲ್ಲಿಯ ವರೆವಿಗೂ ಶಾಂತ ಮೂರ್ತಿಯ ಸ್ವರೂಪದಂತಿದ್ದ ಪ್ರಕಾಶ್ ಇದ್ದಕ್ಕಿದ್ದಂತೆಯೇ ಆ ನಿರೂಪಕಿಯ ಮೇಲೆ ಹೌಹಾಹಾರೀ, ಉರ್ಕೊಂಡು ನಾನು ಇಲ್ಲಿ ಬಂದಿರುವುದು ಒಬ್ಬ ಚಲನಚಿತ್ರ ನಟ ಮತ್ತು ನಿರ್ಮಾಪಕನಾಗಿ ನನ್ನ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೇನೆ. ಹಾಗಾಗಿ ನೀವು ಚಲಚಿತ್ರ ರಂಗದವರನ್ನು ಭಾಷೆಯ ಹೆಸರಿನಲ್ಲಿ ಒಡೆಯದಿರಿ. ಕಲಾವಿದರಿಗೆ ಎಲ್ಲಾ ಭಾಷೇನು ಒಂದೇ. ಅವರಿಗೆ ಭಾಷೆಯ ಹಂಗಿಲ್ಲ ಅಂತ ಹೇಳಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.
ಇನ್ನು ತನ್ನ ವಯಕ್ತಿಕ ತೆವಲುಗಳಿಗಾಗಿ ಚೆಂದದ ಹೆಂಡತಿ ಮತ್ತು ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದರೂ ಆಕೆಗೆ ವಿಚ್ಛೇದನ ನೀಡಿ ಹಿಂದೀ ಭಾಷೀಯ ಉತ್ತರ ಭಾರತೀಯ ನೃತ್ಯಗಾರ್ತಿಯನ್ನು ಎರಡನೇ ಮದುವೆಯಾಗಿ ಆಕೆಗೂ ಒಂದು ಮಗುವನ್ನು ಕರುಣಿಸಿರುವ ವಿಷಯ ಎಲ್ಲರಿಗೂ ತಿಳಿದಿದೆ.
ಹಿರಿಯ ಸಾಹಿತಿ ಲಂಕೇಶ್ ಅವರ ನಿಧನದ ನಂತರ ಅವರ ಪತ್ರಿಕೆಯನ್ನು ಮುನ್ನಡೆಸಿಕೊಂಡು ತುಕ್ಡೇ ತುಕ್ಡೇ ಗ್ಯಾಂಗ್ ನವರಿಗೆ ಅಮ್ಮನಂತಿದ್ದ ಗೌರಿ ಹತ್ಯೆಯಾದದ್ದೇ ತಡಾ, ಪ್ರಕಾಶನಿಗೆ ಆತನೊಳಗಿದ್ದ ರಾಜಕಾರಣೀ ಜಾಗೃತವಾಗಿ, ಸಾವಿನ ಮನೆಯ ಮುಂದೆ ಹಾಕಿದ್ದ ಬೆಂಕಿಯಲ್ಲಿ ತನ್ನ ಚಳಿ ಕಾಯಿಸಿಕೊಳ್ಳುವಂತೆ ನಾನು ಗೌರಿ ಎಂದು ಬೊಬ್ಬಿಡುತ್ತಾ, ಟೌನ್ ಹಾಲ್ ಮುಂದೆ ಅಬ್ಬರಿಸಿದ್ದಲ್ಲದೇ Just Ass-King ಎನ್ನುವ ಬಿರುದಾಂಕಿತನಾಗಿ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೇಳ ಹೆಸರಿಲ್ಲದಂತೇ ಠೇವಣಿಯೂ ಗಿಟ್ಟದಂತೆ ಸೋತು ಸುಣ್ಣವಾಗಿ ಮನೆ ಸೇರಿದ್ದು ಈಗ ಇತಿಹಾಸ.
ಅದಾದ ನಂತರ ರಾವಣಾಸುರವಧೆಯನ್ನು ಮಕ್ಕಳ ನೀಲಿ ಚಲಚಿತ್ರರಂಗಕ್ಕೆ ಹೋಲಿಸುವ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿದ್ದ ಪ್ರಕಾಶ, ನಂತರ ಈ ಕೋವಿಡ್ ದಿನಗಳಲ್ಲಿ ಕೆಲ ನಿರಾಶ್ರಿತರಿಗೆ ಸಹಾಯ ಮಾಡಿ, ಇಲಿ ಹೋದದ್ದನ್ನೇ ಹುಲಿ ಹೋಯಿತು ಎನ್ನುವಂತೆ ಬಿಟ್ಟಿ ಪ್ರಚಾರ ಪಡೆದದ್ದಂತೂ ಸುಳ್ಳಲ್ಲ.
ಕೇವಲ ಕನ್ನಡ ಚಿತ್ರರಂಗವಲ್ಲದೇ, ಭಾರತೀಯ ಚಲನ ಚಿತ್ರರಂಗ ಮತ್ತು ಪ್ರಪಂಚದ ಚಿತ್ರರಂಗದಲ್ಲಿಯೇ, ಕನ್ನಡಿಗರು ಸೃಷ್ಟಿಸಿದ ಅದ್ಭುತ ಇತಿಹಾಸವಾದ ಕೆ.ಜಿ.ಎಫ್ ಚಿತ್ರದ ಎರಡನೇ ಭಾಗದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕರು ಪ್ರಕಟಿಸಿದರೋ, ಆಗ ಇದ್ದಕ್ಕಿದ್ದಂತೆಯೇ ಸ್ವಾಭೀಮಾನಿ ದೇಶಭಕ್ತರು ಅತನ ವಿರುದ್ದ ಭಹಿಷ್ಕಾರದ ಬೆದರಿಕೆ ಹಾಕಿದ್ದಲ್ಲದೇ, ಅತನಿರುವ ಚಿತ್ರವನ್ನು ನೋಡುವುದಿಲ್ಲ ಎಂಬ ಸಾತ್ವಿಕ ಪ್ರತಿಭಟನೆ ತೋರಿದದ್ದು ಪ್ರಕಾಶ್ ರೈ ಮತ್ತು ಕೆಜಿಎಫ್ ಚಿತ್ರ ತಂಡಕ್ಕೆ ಮರ್ಮಘಾತವಾಗಿದ್ದಂತೂ ಸುಳ್ಳಲ್ಲ.
ಈ ಕುರಿತಂತೆ ವಿಷಯಾಂತರ ಮಾಡಲು ಪ್ರಕಾಶ್ ರೂ ಅಂತಹ ಗೋಸುಂಬೆಗೆ ಥಟ್ ಅಂತ ನರನಪಾಗಿದ್ದೇ ಹಿಂದೀ ದಿವಸ್. ಕೇವಲ ತಮಿಳು, ತೆಲುಗು ಭಾಷೆಯ ಈ ಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿಂದ ಸ್ವಲ್ಪ ಇಲ್ಲಿಂದ ಸ್ವಲ್ಪ ಕದ್ದು ಅದನ್ನು ತಮ್ಮದೇ ಸಿನಿಮಾ ಎಂದು ಬಿಂಬಿಸುವ ಚಿತ್ರರಂಗದವರು, ಬರೀ ಚಿತ್ರವಲ್ಲದೇ ತಮಿಳು ನಾಡಿನ ಚಲಚಿತ್ರರಂಗದವರು ಆರಂಭಿಸಿದ ಹಿಂದಿ ತೆರೆಯಾದು ಪೋಡಾ ಎಂಬುದನ್ನು ಯಥಾವತ್ತಾಗಿ ಇಲ್ಲಿ ನಕಲು ಮಾಡಿ, ನನಗೆ ಹಿಂದೀ ಬರೋದಿಲ್ಲ ಹೋಗೂ, ನಾವು ದ್ರಾವಿಡರು ಎಂಬ ಅಭಿಯಾನವನ್ನು ಇದೇ ಪ್ರಕಾಶ್ ರೈ ಮುಂದಾಳತ್ವದಲ್ಲಿ ಮುಂದುವರೆಸುತ್ತಾ ತಮ್ಮ ಬೌದ್ಧಿಕ ದೀವಾಳಿತನವನ್ನು ಎತ್ತಿ ತೋರಿಸಿದ್ದಲ್ಲದೇ ಭಾಷೆಯ ಹೆಸರಿನಲ್ಲಿ ಕನ್ನಡಿಗರನ್ನು ಎತ್ತಿ ಕಟ್ಟಿ ಪ್ರಚೋದಿಸುತ್ತಿರುವುದು ನಿಜಕ್ಕೂ ಶೋಚನೀಯವೇ ಸರಿ.
ಇನ್ನು ಈ ಖನ್ನಢ ಉಟ್ಟು ಓರಾ(ಲಾ)ಗಾರರು ಹಾಕಿಕೊಂಡಿದ್ದ ಟಿ-ಶರ್ಟ್ ನಲ್ಲಿ ಬರೆದಿದ್ದನ್ನು ನೋಡಿ ನಗಬೇಕೋ ಅಳಬೇಕೋ ಅಂತಾ ಗೊತ್ತಾಗಲಿಲ್ಲ ಕನ್ನಡಿಗರು ಶಾಂತಿ ಪ್ರಿಯರು. ಕುಡಿಯಲು ನೀರು ಕೇಳಿದರೆ ಜೊತೆಗೆ ಬೆಲ್ಲವನ್ನು ಕೊಡುವಂತಹ ಸಹೃದಯಿಗಳು. ಯಾರನ್ನೂ ಏಕವಚನದಲ್ಲಿ ಮಾತನಾಡಿಸದೇ ಎಲ್ಲರಿಗೂ ಗೌರವವನ್ನು ನೀಡುವವರು. ಅದರೆ ತಮಿಳರ ಹಿಂದಿ ತೆರೆಯಾದು ಪೋಡಾ ಎಂಬುದನ್ನು ಯಥಾವತ್ತಾಗಿ ಇಲ್ಲಿ ನಕಲು ಮಾಡುತ್ತಾ, ಹಿಂದಿ ಗೊತ್ತಿಲ್ಲ ಹೋಗೂ ಅಂತ ಏಕವಚನ ಬಳಸಿರುವುದಲ್ಲದೇ, ಎರಡನೇ ಸಾಲಿನಲ್ಲಿ ನಾನು ಕನ್ನಡಿಗರು ಎಂಬ ಆಪಭ್ರಂಷ ಬೇರೆ. ನಾನು ಕನ್ನಡಿಗ ಎಂದೋ, ಇಲ್ಲವೇ ನಾವು ಕನ್ನಡಿಗರು ಎಂದೋ ವ್ಯಾಕರಣಾತ್ಮಕವಾಗಿ ಸರಿಯಾಗಿ ಬರೆಯಲೂ ಬಾರದವರಿಂದ ಕನ್ನಡ ಉದ್ದಾರ ಇನ್ನು ಎಷ್ಟರ ಮಟ್ಟಿಗೆ? ಇನ್ನು ಮುಂದಿನ ಸಾಲು ನಾವು ದ್ರಾವಿಡರು ಎಂಬುದು ದೇಶವನ್ನೇ ವಿಭಜನೆ ಮಾಡುವ ಹುನ್ನಾರ.
ಇನ್ನು ಇದಕ್ಕೆ ಬೆನ್ನೆಲುಬಾಗಿ ಹಿಂದಿ ಬಾರದು ಎಂಬ ಅಸಂಬದ್ಧ ಟಿ-ಶರ್ಟ್ ಹಾಕಿಕೊಂಡ ಶಾಸಕ ಝಮೀರ್ ನನ್ನು ನೋಡಿದಾಗಲಂತೂ ಏನು ಹೇಳಬೇಕು ಎಂದು ತಿಳಿಯದೇ ಮೂಕವಿಸ್ಮಿತರಾಗುವುದೊಂದು ಬಾಕಿ.
ಬ್ರಿಟೀಷರು ಭಾರತಕ್ಕೆ ಬಂದಾಗ, ಒಡೆದು ಆಳು ಎಂಬ ನೀತಿಯನ್ನು ಅಳವಡಿಸಿಕೊಂಡು ಆರ್ಯರು ಮತ್ತು ದ್ರಾವಿಡರು ಎನ್ನುವಂತೆ ಉತ್ತರ ಭಾರತೀಯರು ಮತ್ತು ದಕ್ಷ್ಣಿಣ ಭಾರತೀಯರ ಮಧ್ಯೆ ಕಂದಕವನ್ನು ತೋಡುವ ಸುಳ್ಳು ಇತಿಹಾಸವನ್ನು ಬರೆದದ್ದಲ್ಲದೇ, ಆರ್ಯರು ಮಧ್ಯ ಏಷ್ಯಾದಿಂದ ಭಾರತಕ್ಕೆ ಬಂದವರು ಹಾಗಾಗಿ ಅವರೂ ಸಹಾ ಪರಕೀಯರೇ ಎಂಬ ವಿಷ ಬೀಜವನ್ನು ಬಿತ್ತಿ ಹೋದರು. ಅಂತಿಮವಾಗಿ ಧರ್ಮಾಧಾರಿತವಾಗಿ ದೇಶವನ್ನು ಒಡೆದು ಮೂರು ಭಾಗಗಳಾಗಿ ಮಾಡಿ ಹೋದರೆ, ಸ್ವಾತಂತ್ರ್ಯ ಬಂದ ಮೇಲೆ ನಮ್ಮ ರಾಜಕಾರಣಿಗಳು ತಮ್ಮ ಓಟಿಗಾಗಿ ಜನರನ್ನು ಜಾತಿಯ ಮೇಲೆ ಒಡೆದು ಛಿದ್ರ ಛಿದ್ರ ಮಾಡಿದರು. ಈಗ ಈ ಚಿತ್ರರಂಗದವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಭಾಷೆಯಾಧಾರಿತವಾಗಿ ನಮ್ಮನ್ನು ಒಡೆಯಲು ಹವಣಿಸುತ್ತಿರುವುದು ನಮ್ಮ ಜನರಿಗೇಕೆ ಅರ್ಥವಾಗುತ್ತಿಲ್ಲ?
ಮೇಲು ನೋಟಕ್ಕೆ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಎಂದು ಬೊಬ್ಬಿರಿಯುತ್ತಾ ತಪ್ಪು ತಪ್ಪಾಗಿ ಬರೆದ ಟಿ-ಶರ್ಟ್ ಹಾಕಿಕೊಂಡು ಬೀದಿಗಿಳಿದ ಕೆಲ ಕನ್ನಡ ಹೋರಾಟಗಾರರಿಗೆ ಮತ್ತು ಪ್ರಕಾಶ್ ರೈ ನಂತಹವರಿಗೆ ಕನ್ನಡಕ್ಕಿಂತಲೂ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಈ ಎಲ್ಲಾ ಹೋರಾಟವಷ್ಟೇ. ಇಂತಹವರಿಂದ ಕನ್ನಡ ಮತ್ತು ಕನ್ನಡಿಗರು ಉದ್ದಾರವಾಗ್ತಾರಾ?
ನಿಜವಾಗಿಯೂ ಹಿಂದಿ ಹೇರಿಕೆ ಎಲ್ಲಿಂದ ಆಗಿದೆ ಎಂದು ಯೋಚನೆ ಮಾಡಿದರೆ,
20-30 ವರ್ಷಗಳ ಹಿಂದೆ ನಮಗೆ ಹೆಚ್ಚು ಬಾಡಿಗೆ ಕೊಡ್ತಾರೇ, ನಮ್ಮ ಆಸ್ತಿಗೆ ಹೆಚ್ಚಿನ ಹಣ ಕೊಡ್ತಾರೆ ಅಂತ, ಕನ್ನಡ, ಕನ್ನಡಿಗರನ್ನು ಮರೆತು, ಬೆಂಗಳೂರಿನ ಹೃದಯಭಾಗವಾಗಿದ್ದ, ಪ್ರಮುಖ ವ್ಯಾಪಾರೀ ತಾಣವಾಗಿದ್ದ ಚಿಕ್ಕಪೇಟೆ, ಬಳೇ ಪೇಟೆ, ತಿಗಳ ಪೇಟೆ, ಅಕ್ಕೀ ಪೇಟೆಯಲ್ಲಿ ಮಾರ್ವಾಡಿಗಳಿಗೆ ಮಾರಿದ್ರಲ್ಲಾ ಅವಾಗಲೇ ಹಿಂದಿ ಹೇರಿಕೆ ಶುರುವಾಯಿತಲ್ವೇ.
ಈಗಲೂ ಸಹಾ ಕಮೀಶನ್ ಜಾಸ್ತಿ ಕೊಡ್ತಾರೆ ಅಂತ ಗೊತ್ತಾದ್ರೇ, ಇದೇ ಖನ್ನಡ ಹೋರಾಟಗಾರರೇ ಮುಂದೆ ನಿಂತು ಅನ್ಯ ಭಾಷಿಕರಿಗೆ ಆಸ್ತಿ ಖರೀದಿ,ಅಂಗಡಿ,ಮನೆ ಬಾಡಿಗೆ ಪಡೆಯಲು ದಲ್ಲಾಳಿ ಕೆಲಸ ಮಾಡ್ತಾ ಇರೋದು ಗುಟ್ಟಿನ ವಿಷಯವೇನಲ್ಲ. ದುಡ್ಡು ಕೊಟ್ರೇ ಸನ್ನೀ ಲಿಯೋನ್ ಅರೆ ಬೆತ್ತಲೆ ನೃತ್ಯಕ್ಕೆ ಮುಂದಾಳತ್ವ ವಹಿಸ್ತೀನಿ ಅಂತ ಹೇಳಿದವರೂ ಮತ್ತೊಬ್ಬ ಖನ್ನಡ ಓರಾಟಗಾರ ಎನ್ನುವುದು ಸುಳ್ಳೆನಲ್ಲ. ಹೀಗೆ ಹಣದ ಆಸೆಗಾಗಿ ನಮ್ಮ ಜುಟ್ಟನ್ನೇ ಇನ್ನೊಬ್ಬರ ಕೈಗೆ ಕೊಟ್ಟು ಈಗ ಅಯ್ಯೋ ಕನ್ನಡಿಗರ ಮೇಲೆ ಅನ್ಯಭಾಷಿಕರ ದಬ್ಬಾಳಿಕೆ ಅಂತಾ ಬಾಯಿ ಬಡ್ಕೊಂಡ್ರೆ ಏನು ಪ್ರಯೋಜನ ಅಲ್ಚೇ?
ಅದೇ ರೀತಿ, ಏ ಬಾಯ್, ಚಾರ್ ಸೌ ಬೀಸ್ ಪಾನ್ ದೇನಾ, ತೋಡಾ ಸುಪಾರೀ ಔರ್ ಚುನ್ನಾ, ದೇಖ್ ಕೇ ಡಾಲ್ನಾ ಎಂದು ಬೀಡಾ ಹಾಕಿಸಿಕೊಂಡು ಬಾಯ್ತುಂಬಾ ತಿಂದು ಎಲ್ಲೆಂದರಲ್ಲಿ ಉಗಿಯುವ ನೂರಾರು ಖನ್ನಢ ಓರಾಟಗಾರರು ಇಂದಿಗೂ ಎಲ್ಲೆಡೆ ಕಾಣ್ತಾರೇ ಅಲ್ವೇ?
ಇನ್ನು ನಮ್ಮ ಹೆಮ್ಮಕ್ಳು ರಸ್ತೆ ಬದಿಯಲ್ಲಿ ಭಯ್ಯಾ ಪಾನಿ ಪೂರಿ ದೇನಾ, ಭಯ್ಯಾ ತೋಡಾ ಜ್ಯಾದಾ ಮೀಟಾ ಡಾಲ್ನಾ ಅಂತಾನೋ, ಇಲ್ಲವೇ ಭಯ್ಯಾ ಏ ಬಿಂದಿ ಪ್ಯಾಕೇಟ್ ಕಿತ್ನಾಕಾ ಹೈ? ತೋಡಾ ಕಮ್ ಕರ್ಕೇ ದೇನಾ ಭಯ್ಯಾ, ಎಂದು ಅವರಿಗೆ ಕನ್ನಡ ಬಂದ್ರೂ ನಮ್ಮವರೇ ಅರೆ ಬರೇ ಹಿಂದಿಯಲ್ಲಿ ಮಾತಾನಾಡಿಸುವುದು ಸುಳ್ಳೆನಲ್ಲಾ ಅಲ್ವೇ?
ಕನ್ನಡ ಭಾಷೆಯನ್ನು ಉಳಿಸುವುದು ಮತ್ತು ಬೆಳೆಸುವುದು ಯಾವುದೋ ಕನ್ನಡ ಚಿತ್ರರಂಗದ ಕೆಲ ನಟ ನಟಿಯರಿಂದಾಗಲೀ, ಕೆಲ ಕನ್ನಡ ಪರ ಸಂಘಟನೆಗಳ ಜವಾಬ್ದಾರಿಯಲ್ಲ. ಬದಲಾಗಿ ಅದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ.
- ಹಾಗಾಗಿ ಮೊದಲು ಮನೆಯಲ್ಲಿ ಸ್ವಚ್ಚವಾಗಿ ಮತ್ತು ಸ್ಪಷ್ಟವಾಗಿ ಕನ್ನಡ ಮಾತನಾಡೋಣ.
- ವ್ಯಾವಹಾರಿಕವಾಗಿ ಸಹಿಯನ್ನೂ ಒಳಗೊಂಡಂತೆ ಎಲ್ಲವನ್ನೂ ಕನ್ನಡಲ್ಲೇ ಮಾಡುವ ಪ್ರಯತ್ನ ನಮ್ಮಿಂದಲೇ ಆರಂಭವಾಗಲಿ.
- ನಮ್ಮ ಮಕ್ಕಳನ್ನು ಕನ್ನಡ ಶಾಲೆ ಅದರಲ್ಲೂ ಸರ್ಕಾರೀ ಶಾಲೆಗೇ ಸೇರಿಸಿ ಎಂದು ಕೂಗಾಡುವ ಬದಲು, ಮಕ್ಕಳು ಕಲಿಯುವ ಶಾಲೆಯಲ್ಲಿ ಕನ್ನಡ ಸರಿಯಾಗಿ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಕಲಿಸುತ್ತಾರಾ ಎಂದು ಗಮನಿಸೋಣ.
- ಒಬ್ಬ ಕನ್ನಡಿಗನಾಗಿ ಸರ್ಕಾರೀ, ಖಾಸಗೀ ಮತ್ತು ಬ್ಯಾಂಕ್ಗಳಲ್ಲಿ ಕನ್ನಡವನ್ನೇ ವ್ಯಾವಹಾರಿಕ ಭಾಷೆಯನ್ನಾಗಿ ನಾವು ಬಳಸಲು ಆರಂಭಿಸಿದಲ್ಲಿ, ಉಳಿದವರೂ ವಿಧಿ ಇಲ್ಲದೇ ಕನ್ನಡದಲ್ಲಿಯೇ ಪ್ರತಿಕ್ರಿಯಿಸುತ್ತಾರೆ.
- ಒಂದು ಗೆರೆಯನ್ನು ಮುಟ್ಟದೇ ಸಣ್ಣದು ಮಾಡಬೇಕೆಂದರೆ ಅದರ ಪಕ್ಕದಲ್ಲಿ ದೊಡ್ಡದಾದ ಗರೆಯೊಂದನ್ನು ಬರೆಯುವಂತೆ, ಇತರೇ ಭಾಷೆಗಳಿಗಿಂತಲೂ ನಮ್ಮ ಮಾತೃಭಾಷೆಯನ್ನು ಹೆಚ್ಚಾಗಿ ಬಳಸುತ್ತಾ ಹೋದಂತೆ ಉಳಿದ ಭಾಷಾ ವ್ಯಾಮೋಹ ಕುಗ್ಗುತ್ತದೆ.
- ಕನ್ನಡದ ಮೇಲಿನ ಅಭಿಮಾನದಿಂದ ಅದನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ಎಲ್ಲಾ ಕನ್ನಡಿಗರು ತಮ್ಮನ್ನು ತಾವು ಸ್ವಪ್ರೇರಣೆಯಿಂದ ತೊಡಗಿಸಿಕೊಳ್ಳಬೇಕೇ ಹೊರತು, ಕನ್ನಡದ ಹೆಸರಿನಿಂದ ಅನ್ಯಭಾಷಿಗರನ್ನು ಹೆದರಿಸಿ ಬೆದರಿಸಿ ನಮ್ಮ ಹೊಟ್ಟೆ ಹೊರೆಯುವ ಕಾಯಕಕ್ಕೆ ಎಂದೂ ಯಾರೂ ಇಳಿಯಬಾರದು.
- ಕನ್ನಡಿಗರದ್ದು ಕೊಡುವ ಕೈ ಹೊರತು ಬೇಡುವ ಕೈ ಅಲ್ಲಾ. ದೇಹಿ ಎಂದು ಬಂದವರಿಗೆ ಹೊಟ್ಟೆಯ ತುಂಬಾ ಊಟ ಬಡಿಸುವ ವಿಶಾಲ ಹೃದಯಿಗಳು.
ಯಾವುದೋ ನಟ ಅಥವಾ ಕೆಲ ಸಂಘಟನೆಗಳ ಸ್ವಾರ್ಥಕ್ಕೆ ಅವರ ಹೊಟ್ಟೆ ತುಂಬಿಸುವುದಕ್ಕೆ ನೈಜ ಕನ್ನಡಿಗರಾದ ನಾವುಗಳು ಬಲಿಯಾಗದೇ. ಸ್ವಾಭಿಮಾನಿಗಳಾಗಿ ತಲೆಯೆತ್ತಿ ಬಾಳೋಣ. ಇತರರನ್ನೂ ನೆಮ್ಮದಿಯಾಗಿ ಬಾಳಗೊಡೋಣ. ಕರ್ನಾಟಕದಲ್ಲಿ ಕನ್ನಡಕ್ಕೇ ಪ್ರಾಧ್ಯಾನ್ಯ ಮತ್ತು ಕನ್ನಡಿಗನೇ ಸಾರ್ವಭೌಮ.
ಊಟದ ಎಲೆಯಲ್ಲಿ ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಗೊಜ್ಜುಗಳು ಇದ್ದರೂ ಹೊಟ್ಟೆ ತುಂಬಿಸುವುದು ಮಾತ್ರ ಅನ್ನ ಮತ್ತು ಸಾರು. ಅಂತೆಯೇ ಉಳಿದೆಲ್ಲಾ ಭಾಷೆಗಳನ್ನು ದ್ವೇಷಿಸದೇ ಕಲಿಯೋಣ. ಕನ್ನಡವನ್ನು ಮಾತ್ರಾ ವ್ಯಾವಹಾರಿಕವಾಗಿ ಬಳಸೋಣ. ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಪ್ರಜಾಶ್ ರೈ ಬರಿ ಕನ್ನಡತನವನ್ನಲ್ಲ,ತನ್ನತನವನ್ನೇ ಬಿಟ್ಟಿರುವ ಡೋಂಗಿ .ಅವನನ್ನು ಅನುಕರಿಸುವುದಿರಲಿ,ಬಹಿಷ್ಕರಿಸ ಬೇಕು.
ರೈ ಆಗಿದ್ದಾಗ ಸರಿ ಇದ್ದ.ರಾಜ್ ಆಗಿ ಕೆಟ್ಟ.😡
LikeLiked by 1 person
ಹೌದು …..
ಮೊದಲು ಮನೆಯಲ್ಲಿ ಸರಿಯಾದ ಕನ್ನಡ ಮಾತಾಡಲಿ, ಮಕ್ಕಳಿಗೆ ಕನ್ನಡ ಶಾಲೆಗೆ ಸೇರಿಸಲಿ. ಆನಂತರ ಕನ್ನಡ ಹೋರಾಟಗಾರ ಎಂದು ಎಡೆತಟ್ಟಿ ಹೇಳಲಿ.
ಎಲ್ಲ ಡೋಂಗಿ ಖನ್ನಡ ಓಲಾಟಗಾರರು…..
LikeLiked by 1 person
ಅಕ್ಷರಶಃ ಸತ್ಯ. ಕನ್ನಡಿಗರು ಮೊದಲು ಕನ್ನಡಿಗರಾಗಲಿ, ಮನೆಯಲ್ಲಿ ಕನ್ನಡ ಬಳಸಲಿ
LikeLiked by 1 person