ಕಳೆದ ಒಂದು ವಾರದಲ್ಲಿ, ಇತ್ತೀಚೆಗಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾಸದಸ್ಯರು, ನಾಲ್ಕು ಬಾರಿ ಸಾಂಸದರಾಗಿ ಕೇಂದ್ರದಲ್ಲಿ ಮಂತ್ರಿಗಳಾಗಿದ್ದವರು ಮತ್ತು ಹಿರಿಯ ಶಾಸಕರಲ್ಲದೇ. ಹೆಸರಾಂತ ಗಾಯಕರರಾದ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡಿದ್ದೇವೆ ಮತ್ತು ಅಸ್ಸಾಂನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಚಿಂತಾಜನಕವಾಗಿದೆ. ಇವರೆಲ್ಲರೀ ಪರಿಸ್ಥಿತಿಯ ಹಿಂದೆ ಮಹಾಮಾರಿ ಕೂರೋನಾ ಕೈವಾಡವಿರುವುದು ಸ್ಪಷ್ಟವಾಗಿದೆ. ಸಚಿವರು, ಶಾಸಕರು, ಸಮಾಜದ ಗಣ್ಯವ್ಯಕ್ತಿಗಳಿಗೇ ಚಿಕಿತ್ಸೆ ಫಲಕಾರಿಯಾಗುತ್ತಿಲ್ಲವೆಂದರೆ, ಇನ್ನು ಸಾಮಾನ್ಯ ಜನಗಳ ಪಾಡೇನು?
ಸರ್ಕಾರ ಮತ್ತು ಆರೋಗ್ಯ ಇಲಾಖೆ ಎಷ್ಟೇ ಜಾಗೃತಿ ವಹಿಸಿದ್ದರೂ, ಸಮಾಜದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತೀ ದಿನವೂ ಪತ್ರಿಕೆಗಳಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನೋಡುವುದಕ್ಕೇ ಭಯವಾಗುತ್ತಿದೆ. ಸರ್ಕಾರ ಮತ್ತು ಸ್ಥಳೀಯ ನಗರ ಪಾಲಿಕೆಯವರು ಸಹಾ ಅತೀ ಹೆಚ್ಚಿನ ಕೋವಿಡ್ ಪರೀಕ್ಷಾಕೇಂದ್ರಗಳನ್ನು ಎಲ್ಲಾ ಕಡೆಯಲ್ಲಿಯೂ ಮುಂಜಾಗೃತಾ ಕ್ರಮವಹಿಸಿ ಆರಂಭಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಅದಲ್ಲದೇ ಎಲ್ಲಾ ಮೆಡಿಕಲ್ ಸ್ಟೋರ್ಗಳಲ್ಲಿಯೂ ಜ್ವರದ ಸಂಬಂಧಿತ ಮಾತ್ರೆಗಳನ್ನು ಖರೀದಿಸುವವರ ವಿವರಗಳನ್ನು ಪಡೆದು ಅವರೆಲ್ಲರಿಗೂ ತಮ್ಮ ಆಪ್ತಮಿತ್ರ ಸಹಾಯವಾಣಿಯ ಮುಖಾಂತರ ಕರೆ ಮಾಡಿ ಅವರ ಆರೋಗ್ಯದ ಸ್ಥಿತಿಗಳನ್ನು ವಿಚಾರಿಸಿ ಅವರಿಗೆ ಸೂಕ್ತ ಚಿಕಿತ್ಸೆಗಳನ್ನು ಕೊಡಿಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲದಿರುವುದು ನಿಜಕ್ಕೂ ವಿಷಾಧನೀಯವಾಗಿದೆ.
ಇವೆಲ್ಲರದ ಮಧ್ಯೆ ವಿಕ್ರಮ್ ಆಸ್ಪತ್ರೆಯ ಡಾ. ವೆಂಕಟ ಸುಬ್ಬರಾವ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿರುವ ಒಂದು ಪ್ರಸಂಗ ನಿಜಕ್ಕೂ ಆಘಾತಕಾರಿಯಾಗಿದೆ.
ನಗರದ ಒಂದು ಖ್ಯಾತ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗಳಿಸಿ ಸಹೋದ್ಯೋಗಿಗಳಾಗಿದ್ದ ಇಬ್ಬರು ಅಧ್ಯಾಪಕರುಗಳಲ್ಲಿ ಕೇವಲ ನಲವತ್ತೊಂದು ವರ್ಷಕ್ಕೇ ಅಧ್ಯಾಪಕ ವೃತ್ತಿಗೆ ತಿಲಾಂಜಲಿ ನೀಡಿ ಪೆಟ್ರೋಲ್ ಪಂಪ್ ವ್ಯವಹಾರ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೋನಾ Symptoms ಕಾಣಿಸಿಕೊಂಡ ನಂತರ, ಪರೀಕ್ಷೇ ಮಾಡಿಸಿಕೊಂಡು ಸೋಂಕು ಧೃಢ ಪಟ್ಟರೂ, ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯವುದರ ಬದಲು, ತಾವೇ ಒಂದು ತಮ್ಮ ಮನೆಯಲ್ಲಿಯೇ Self quarantine, ಆಗಿ ಬಿಟ್ಟು ಬಿಟ್ಟು ಜ್ವರ ಬಂದಾಗಲೆಲ್ಲ ಕೇವಲ Dolo 650 ತೆಗೆದುಕೊಳ್ಳಲಾರಂಬಿಸಿದ್ದಾರೆ. ಆದರೆ ಮಾತ್ರೆಯ ಪರಿಣಾಮಕಾರಿಯಾಗದೇ, ಐದಾರು ದಿನ ಕಳೆದ ನಂತರ ರೋಗ ಉಲ್ಬಣಿಸಿ ಸಾವಿಗೀಡಾಗಿದ್ದಾರೆ
ಅವರ ಸ್ನೇಹಿತರೇ ಆಗಿದ್ದ ಮತ್ತೊಬ್ಬ ಅಧ್ಯಾಪಕರಿಗೂ ಮತ್ತು ಅವರ ಮಡದಿಯವರಿಗೂ Covid ನ ರೋಗ ಲಕ್ಷಣಗಳು ಕಂಡು ಬಂದು, ಅವರ ಪರಮಾಪ್ತ ಸ್ನೇಹಿತರೇ, ತಂದುಕೊಂಡ ವಿಪತ್ತಿನ ಬಗ್ಗೆ ಅರಿವಿದ್ದರೂ, ದಂಪತಿಗಳಿಗೆ Covid ಲಕ್ಷಣಗಳು ಕಾಣಿಸಿದ ನಂತರ ,ತಮ್ಮ ಇಬ್ಬರು ಗಂಡು ಮಕ್ಕಳನ್ನು ಪೋಷಕರ ಮನೆಯಲ್ಲಿ ಬಿಟ್ಟು ತಮ್ಮ ಪಾಡಿಗೆ ತಾವೇ home Quarantine ಮಾಡಿಕೊಂಡು ಮನೆಯಲ್ಲಿ ಉಳಿದು ಬಿಟ್ಟಿದ್ದಲ್ಲದೇ ತಮ್ಮ ವಿವೇಚನೆಗೆ ಅನುಗುಣವಾಗಿ ಒಂದಷ್ಟು symptomatic relief ಗೆ ಕೊಡುವ Paracetamol ,Cough syrup ತೆಗೆದುಕೊಂಡು ಸುಮ್ಮನಾಗಿದ್ದಾರೆ. ಆದರೆ ಯಾವಾಗ ರೋಗ ಉಲ್ಬಣವಾಗಿ ತೀವ್ರವಾಗಿ ಉಸಿರಾಟದ ಸಮಸ್ಯೆ ಕಾಣ ತೊಡಗಿದಾಗ, ಇಬ್ಬರೂ ನಗರದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗುತ್ತಾರೆ. ಅವರ ಪತ್ನಿಯವರು ಈ ಮೊದಲೇ Bronchial Asthma ದಂತಹ Comorbidity ಸಮಸ್ಯೆ ಇದ್ದಿದ್ದರ ಪರಿಣಾಮವಾಗಿ I.C.U ನಲ್ಲಿ ಕೊಟ್ಟ ಚಿಕಿತ್ಸೆಯೂ ಕೂಡಾ ಫಲಕಾರಿಯಾಗದೆ, ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಾದಾಗ ಪಕ್ಕದ ಕೊಠಡಿಯಲ್ಲಿಯೇ ಅವರ ಪತಿರಾಯರು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಪತ್ನಿಯ ಶವವ ಒಂದು Ambulance ನಲ್ಲಿ ಮುಂದೆ ಹೋಗುತ್ತಿದ್ದರೆ, ಅದರ ಹಿಂದೆ ಮತ್ತೊಂದು Ambulanceನಲ್ಲಿ ಪತಿಯವರು ಹೋಗಿ, ಸಿನಿಮೀಯ ರೀತಿಯಲ್ಲಿ ಶವಸಂಸ್ಕಾರ ಮುಗಿದು ಹೋಗುತ್ತದೆ. ಮತ್ತೆ ಆಸ್ಪತ್ರೆಗೆ ಮರಳಿದ ಪತಿರಾಯರ ಆರೋಗ್ಯವೂ ಕ್ಷೀಣಿಸಿ, ಮೂರ್ನಾಲ್ಕು ದಿನಗಳ ನಂತರ ಅವರೂ ಮೃತಪಟ್ಟಿದ್ದಾರೆ.
ಇಲ್ಲಿ ಅತೀ ಸೂಕ್ಷ್ಮವಾಗಿ ಗಮನಿಸಬೇಕಾದಂತಹ ಅಂಶವೆಂದರೆ ಮೃತಪಟ್ಟವರೆಲ್ಲರೂ ವಿದ್ಯಾವಂತರನ್ನಿಸಿಕೊಂಡರೇ Masters and PhD, ಮಾಡಿಕೊಂಡಂತವರೇ ಇಷ್ಟು ಉದ್ಧಟತನ ಮತ್ತು ಮೂರ್ಖತನದಿಂದ ಸಾವನ್ನಪ್ಪುತ್ತಾರೆ ಎಂದರೆ ಇನ್ನು ಇನ್ನು ಅನಕ್ಷರಸ್ಥರು, ಬಡವರು ಮತು ಕೂಲೀ ಕಾರ್ಮಿಕರ ಬಗ್ಗೆ ಇನ್ನೇನು ಹೇಳಲು ಸಾಧ್ಯ? COVID +ve ವರದಿ ಬಂದ ನಂತರ ವೈದ್ಯರುಗಳು ತಮ್ಮ ಅನುಭವ ಮತ್ತು ಕೆಲವು base line test ಗಳ ಆಧಾರದ ಮೇಲೆ, ಯಾರಿಗೆ Home Isolation ಮಾತ್ರ ಸಾಕು, ಯಾರಿಗೆ Hospitalization ಬೇಕು ಎನ್ನುವುದಕ್ಕೆ ಇರುವ Clear cut guide line ಗಳ ಆಧಾರದ ಮೇಲೆ ಚಿಕಿತ್ಸೆಗಳನ್ನು ನಿರ್ಧರಿಸುತ್ತಾರೆ. Home Isolation ಅಂದರೆ ಕೇವಲ ಮನೆಯಲ್ಲಿ ಸುಮ್ಮನೆ ಇರಲು ವೈದ್ಯರು ಬಿಡುವುದಿಲ್ಲ. ರೋಗಿಗಳ test reports ಗಳ ಆಧಾರದ ಮೇಲೆ Fabiflu ಅನ್ನುವ Antiviral ಮತ್ತು Immuno booster vitamins ,ಗಳು ,ಒಂದು Antibiotic for secondary bacterial infection, and symptomatic relief and above all three times stringent monitoring of Vitals and Saturation ,ಇವೆಲ್ಲವನ್ನೂ advise ಮಾಡಿರುತ್ತಾರಲ್ಲದೇ, ಪ್ರತಿದಿನವೂ ಕರೆ ಮಾಡಿ ಅವರ ಸ್ಥಿತಿಗತಿಗಳನ್ನು ವಿಚಾರಿಸಿಕೊಳ್ಳುತ್ತಾ, any worsening of Infection ಇದೆಯಾ ಅಂತ ಖಾತ್ರಿ ಮಾಡಿಕೊಳ್ಳುತ್ತಾರೆ. ಪರಿಸ್ಥಿತಿ ಗಂಭೀರ ಎನಿಸಿದಲ್ಲಿ ಕೂಡಲೇ ಆಸ್ಪತ್ರೆಗೆ ಕರೆತಂದು ಅವರಿಗೆ ಸೂಕ್ತರೀತಿಯ ಚಿಕಿತ್ಸೆ ನೀಡುತ್ತಾರೆ. Home Isolation ನಲ್ಲಿದ್ದ ಎಷ್ಟೋ ಜನರಿಗೆ ಐದನೇ ಅಥವಾ ಆರನೇ ದಿನ ಸಮಸ್ಯೆಗಳು ಕಾಣಿಸಿ (Spikes of fever, Extreme degrees of fatigue or Breathlessness..) ಕೂಡಲೇ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.
ಕೂರೋನಾ ಬಗ್ಗೆ ಕಳೆದ ಆರು ತಿಂಗಳ ಹಿಂದೆ ಇದ್ದ ಆತಂಕ ಇತ್ತೀಚಿನ ದಿನಗಳಲ್ಲಿ ಇಲ್ಲವಾಗಿದೆ. ಇದಕ್ಕೆ ನಿರ್ಧಿಷ್ಟವಾದ ಔಷಧಿ ಇಲ್ಲದಿದ್ದರೂ ಅದಕ್ಕೆ ಪರಿಣಾಮಕಾರಿ ಔಷಧಿಗಳನ್ನು ಕಂಡು ಕೊಂಡಿರುವ ಪರಿಣಾಮ ಈಗ Covid +ಗಳು ಸಾವಿರಾರು ಸಂಖ್ಯೆಯಲ್ಲಿ ಗುಣಮುಖರಾಗುವ ಮೂಲಕ ಭರವಸೆಯನ್ನು ಮೂಡಿಸುತ್ತಿದ್ದಾರೆ. ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೇ ಮಾಡಿಸಿಕೊಳ್ಳಲು ಹೆದರಿಕೊಂಡು, ವೈದ್ಯರ ಬಳಿ ಸೂಕ್ತ ರೀತಿಯ ಚಿಕಿತ್ಸೆ ಪಡೆಯುವುದರ ಬದಲು, ಸುಮ್ಮನೆ ತಾವೇ ಮನೆಯಲ್ಲಿ ಜ್ವರಕ್ಕೆ Paracetamol ತೆಗೆದುಕೊಳ್ಳುತ್ತಾ ಸಾವನ್ನಪ್ಪುತ್ತಿರುವುದು ನಿಜಕ್ಕೂ ದೌರ್ಭಾಗ್ಯಕರವೇ ಹೌದು. ಈ ರೀತಿಯ ಮೂರ್ಖತನದಿಂದ ತಮ್ಮನ್ನೇ ಆಶ್ರಯಿಸಿದ್ದ ಕುಟುಂಬದವರನ್ನು ಅನಾಥರನ್ನಾಗಿ ಮಾಡುವುದಲ್ಲದೇ, ಸಮಾಜದಲ್ಲಿಯೂ ಅನಾವಶ್ಯಕವಾದ ಭಯವನ್ನು ಮೂಡಿಸುತ್ತಿದ್ದಾರೆ ಎಂದರೂ ತಪ್ಪಾಗಲಾರದು.
Self quarantine ಸಮಸ್ಯೆಗಳು ಈ ರೀತಿಯಾದರೆ, ಇನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾದ ವೈದ್ಯರುಗಳಿಂದ ಚಿಕಿತ್ಸೆ ದೊರೆತರೂ ಪ್ರತೀ ದಿನ ಸಾವು ಸಂಭವಿಸುತ್ತಿವೆ ಎನ್ನುವುದೂ ಸತ್ಯ ಮತ್ತು ಅದನ್ನು ಅಲ್ಲಗಳಿಯಲು ಸಾಧ್ಯವಾಗದು. ಸದ್ಯಕ್ಕೆ ಈ ಮಹಾಮಾರಿಗೆ ನಿರ್ಧಿಷ್ಟವಾದ ಮದ್ದು ಇಲ್ಲದಿರುವುದೂ ಪರಿಸ್ಥಿತಿಯನ್ನು ಬಿಗಡಾಯಿಸುತ್ತಿದೆ ಎನ್ನುವುದು ನಂಬಲೇ ಬೇಕಾದ ಸತ್ಯವಾಗಿದೆ. ಹಾಗಾಗಿ ಯುದ್ಧಕಾಲೇ ಶಸ್ತ್ರಾಭ್ಯಾಸ ಎಂದು ಖಾಯಿಲೆ ತರಿಸಿಕೊಂಡು ವ್ಯಥೆ ಪಡುವುದರ ಬದಲು prevention is better than cure ಎನ್ನುವಂತೆ ಖಾಯಿಲೆಯಿಂದ ಆದಷ್ಟೂ ದೂರ ಇರುವುದು ಉತ್ತಮವಲ್ಲವೇ?
- ಒಬ್ಬರಿಂದ ಒಬ್ಬರ ವಯಕ್ತಿಕ ಸಂಪರ್ಕದ ಕಾರಣದಿಂದಾಗಿ ಈ ರೋಗ ಹರಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿರುವುದರಿಂದ ಸಾಧ್ಯವಾದಷ್ಟೂ ಅನಾವಶ್ಯಕವಾಗಿ ಹೊರಗೆ ತಿರುಗಾಡದಿರುವುದರ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ.
- ಅತ್ಯಗತ್ಯವಾಗಿ ಹೊರಗೆ ಹೋಗಲೇ ಬೇಕಾದ ಪರಿಸ್ಥಿತಿಯಲ್ಲಿ ಬಾಯಿ ಮತ್ತು ಮೂಗು ಪೂರ್ಣವಾಗಿ ಮುಚ್ಚಿಕೊಳ್ಳುವ ಹಾಗೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ.
- ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಲು ಸಾಧ್ಯವಾದಷ್ಟೂ ಸಾರ್ವಜನಿಕ ವಾಹನಗಳನ್ನು ಬಳಸದೇ ವಯಕ್ತಿಕ ವಾಹನಗಳನ್ನೇ ಈ ಸಂದರ್ಭಗಳಲ್ಲಿ ಬಳಸುವುದು ಸೂಕ್ತ.
- ಮದುವೆ, ಮುಂಜಿ, ನಾಮಕರಣ, ಶ್ರಾದ್ಧ ಇಲ್ಲವೇ ರಾಜಕೀಯ ಮತ್ತು ಧಾರ್ಮಿಕ ಸಭೆ ಸಮಾರಂಭಗಳಿಂದಲೇ ಈ ರೋಗ ಈಗಾಗಲೇ ಹರಡಿರುವುದು ಧೃಢ ಪಟ್ಟಿರುವ ಕಾರಣದಿಂದಾಗಿ ಇವುಗಳಿಂದ ಆದಷ್ಟೂ ದೂರವಿರುವುದೇ ಲೇಸು.
- ಕೂರೋನಾ ವೈರಾಣು ಗಂಟಲಿನಲ್ಲಿಯೇ ಉಳಿಯುವುದರಿಂದ, ಕಾಲಕ ಕಾಲಕ್ಕೆ ಬಿಸೀ ನೀರು ಅಥವಾ ಬಿಸಿಯಾದ ಪದಾರ್ಥಗಳನ್ನು ಸೇವಿಸುವ ಮೂಲಕ ರೋಗಾಣುವನ್ನು ತಡೆಗಟ್ಟಬಹುದು ಎಂದು ಧೃಢ ಪಟ್ಟಿರುವ ಕಾರಣ ಸೇವಿಸುವ ಆಹಾರ ಬಿಸಿ ಬಿಸಿಯಾಗಿರಲಿ
- ಈ ಸಾಂಕ್ರಾಮಿಕ ಕಾಲದಲ್ಲಿ ಸಾಧ್ಯವಾದಷ್ಟೂ ಹೊರಗಿನ ಆಹಾರವನ್ನು ತಿನ್ನದೇ ಮನೆಯಲ್ಲಿಯೇ ಶುಚಿ ರುಚಿಯಾಗಿ ಆಹಾರವನ್ನು ತಯಾರಿಸಿಕೊಂಡು ಸೇವಿಸಬಹುದಾಗಿದೆ.
- ಪ್ರತೀ ದಿನ ನಿಯಮಿತ ವ್ಯಾಯಾಮಗಳನ್ನು ಮಾಡುವ ಮೂಲಕ ಕಷಾಯಗಳನ್ನು ಸೇವಿಸುವ ಮೂಲಕ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕವೂ ರೋಗ ನಿರೋಧ ಶಕ್ತಿಯನ್ನು ಉತ್ತಮ ಪಡಿಸಿಕೊಳ್ಳಬಹುದಾಗಿದೆ.
ಕರೋನ ಬಂದಿದೆ ಎಂದು ಆಸ್ಪತ್ರೆಗೆ ಹೋದರೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೆದರಿ ಮನೆಯಲ್ಲಿಯೇ ಕುಳಿತರೂ ಸಾವು ತಪ್ಪಿದ್ದಲ್ಲ. ಇತ್ತ ನರಿ ಅತ್ತ ಪುಲಿ ಎನ್ನುವ ಹಾಗಿದೆ ಮಧ್ಯಮ ವರ್ಗದ ಶ್ರೀಸಾಮಾನ್ಯರ ಬದುಕು. ಹಾಗಾಗಿ ಇಂತಹ ದುಬಾರಿ ಕಷ್ಟದ ಸಮಯದಲ್ಲಿ, ನಮ್ಮ ಜೀವ ನಮ್ಮ ಕೈಯಲ್ಲಿಯೇ ಇದೆ ಎಂಬುದನ್ನು ಮನಗಂಡು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ನಾವೇ ಹೊಣೆಗಾರರೇ ಹೊರತು ಯಾರನ್ನೂ ದೂಷಿಸಲಾಗದು ಮತ್ತು ದೂಷಿಸಬಾರದು ಕೂಡ. ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ. ಜೀವವಿದ್ದಲ್ಲಿ ಮಾತ್ರವೇ ಜೀವನ ಅಲ್ಲವೇ?
ಏನಂತೀರೀ?
ಈಗ ದಿನೇದಿನೇ ಕೊರೋನಾ ಸೋಂಕು ಜಾಸ್ತಿಯಾಗುತ್ತಿದೆ. ಎಲ್ಲರೂ ತುಂಬಾ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಆದ್ದರಿಂದ ನೀವು ನಡೆಸುವ ಆರ್ಗಾನಿಕ್ ಸಂತೆ ಸದ್ಯಕ್ಕೆ ಮಾಡಬೇಡಿ. ಇದರಿಂದ ತೊಂದರೆಗಳಾಗುವ ಸಂಭವ ಇದೆ. ಇದು ನನ್ನ ಸಲಹೆ.
LikeLiked by 1 person
ಸುಂದರ ಸಮಯೋಚಿತ ಲೇಖನ.🙏
LikeLike
ಸುಂದರ ಸಮಯೋಚಿತ ಲೇಖನ.🙏
LikeLiked by 1 person