ಮೊನ್ನೆ ಸ್ನೇಹಿತರೊಬ್ಬರು ಕರೆ ಮಾಡಿ ಬಹಳ ತಿಂಗಳುಗಳಿಂದಲೂ ಮನೆಯಲ್ಲಿಯೇ ಕುಳಿತು ಬಹಳ ಬೇಸರವಾಗಿದೆ. ಇಲ್ಲೇ ಬೆಂಗಳೂರಿನ ಸುತ್ತಮುತ್ತಲೇ ಇರುವ ಸುಂದರವಾದ ಯಾವುದಾದರೂ ಪ್ರದೇಶ ಇದೆಯೇ, ಬೆಟ್ಟ ಹತ್ತುವ ಹಾಗಿರಬೇಕು. ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಸಿದ್ಧವಾಗಿರುವಂತಹ ಸ್ಥಳ ಇದ್ದರೆ ತುಂಬಾ ಚೆನ್ನಾಗಿರುತ್ತದೆ ಎಂದಾಗ ಥಟ್ ಅಂತಾ ಮನಸ್ಸಿಗೆ ಹೊಳೆದದ್ದೇ ತುಮಕೂರು ರಸ್ತೆಯಲ್ಲಿರುವ ಶಿವಗಂಗೆ.
ನಾವು ಚಿಕ್ಕವರಿದ್ದಾಗ ಕೆಲವರ್ಷಗಳ ಕಾಲ ನೆಲಮಂಗಲದಲ್ಲಿ ವಾಸವಾಗಿದ್ದೆವು. ಹಾಗಾಗಿಯೇ ನನ್ನ ಬಾಲ್ಯದ ವಿದ್ಯಾಭ್ಯಾಸ ನಡೆದದ್ದೇ ನೆಲಮಂಗಲದ ಸರ್ಕಾರಿ ಶಾಲೆಯಲ್ಲಿ, ನಮ್ಮ ಮನೆಗೆ ಶನಿವಾರ ಯಾರಾದರೂ ಬಂಧು ಮಿತ್ರರು ಬಂದರೆಂದರೆ ಸಾಕು. ಭಾನುವಾರ ಬೆಳಿಗ್ಗೆ ಒಂದು ದಿವಸಕ್ಕೆ ಆಗುವಷ್ಟು ಬುತ್ತಿಯನ್ನು ಕಟ್ಟಿ ಕೊಂಡು ಎಲ್ಲರ ಸಮೇತ ಹೋಗುತ್ತಿದ್ದದ್ದೇ ಶಿವಗಂಗೆಗೆ. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ನಮ್ಮ ಗ್ರಾಮ ದೇವತೆ ಹೊನ್ನಾದೇವಿ. ಶಿವಗಂಗೆಯಲ್ಲಿರುವ ದೇವಿಯೂ ಹೊನ್ನಾದೇವಿಯೇ ಹಾಗಾಗಿ ಅಷ್ಟು ದೂರದ ಊರಿಗೆ ಹೋಗಿ ಹೊನ್ನಾದೇವಿ ದರ್ಶನ ಮಾಡಲು ಸಾಧ್ಯವಾಗದಿದ್ದಾಗಲೆಲ್ಲಾ ಹತ್ತಿರದ ಶಿವಗಂಗೆ ಹೊನ್ನಾದೇವಿಯ ದರ್ಶನ ಪಡೆಯುವುದು ನಮ್ಮ ಮನೆಯಲ್ಲಿ ನದೆಡುಕೊಂಡು ಬಂದಿದ್ದಂತಹ ರೂಡಿ. ಈ ರೀತಿಯಾಗಿ ನಮಗೂ ಶಿವಗಂಗೆಗೂ ಒಂದು ರೀತಿಯ ಅವಿನಾಭಾವ ಸಂಬಂಧ.
ಒಂದೊಂದು ದಿಕ್ಕಿನಲ್ಲಿ ಒದೊಂದು ರೀತಿಯಾಗಿ ಕಾಣುವ ಶಿವಗಂಗೆ ಬೆಟ್ಟವೇ ಒಂದು ಅದ್ಭುತ. ಉತ್ತರದಿಂದ ಸರ್ಪದ ರೀತಿಯಾಗಿಯೂ, ದಕ್ಷಿಣ ಭಾಗದಿಂದ ಗಣೇಶನ ರೀತಿಯಾಗಿಯೂ, ಪೂರ್ವಭಾಗದಿಂದ ನಂದಿಯ ರೂಪದಲ್ಲಿಯೂ ಮತ್ತು ಪಶ್ಚಿಮ ದಿಕ್ಕಿನಿಂದ ಲಿಂಗರೂಪದಲ್ಲಿ ಕಾಣುವ ಈ ಶಿವಗಂಗೆಯನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಬೆಂಗಳೂರಿನಿಂದ ತುಮಕೂರಿನ ಕಡೆಗೆ ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 50 ಕಿ.ಮೀ ದೂರ ಪ್ರಯಾಣಿಸಿದರೆ, ನಮಗೆ ಡಾಬಸ್ ಪೇಟೆಯ ಮೇಲ್ಸೇತುವೆ ಸಿಗುತ್ತದೆ. ಆ ಸೇತುವೆಯಲ್ಲಿ ಮುಂದುವರೆಯದೇ, ಕೆಳಗೆ ಇಳಿದು ಅಲ್ಲಿಂದ ಎಡಕ್ಕೆ ಸುಮಾರು 6 ಕಿಮೀ ದೂರ ಪ್ರಯಾಣಿಸಿದರೆ ಶಿವಗಂಗೆ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ, ರಸ್ತೆ ಅತ್ಯುತ್ತಮವಾಗಿದ್ದು ಬೆಂಗಳೂರಿನಿಂದ ಸುಮಾರು ಮುಕ್ಕಾಲು ಗಂಟೆಯಿಂದ ಒಂದು ಗಂಟೆಯೊಳಗೆ ಅಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.
ಈ ಊರಿಗೆ ಶಿವಗಂಗೆ ಎಂಬ ಹೆಸರು ಬರಲು ಒಂದು ಪುರಾಣವಿದೆ. ಆಗಿನ ಕಾಲದಲ್ಲಿಯೇ ಅಣು ಮತ್ತು ಪರಮಾಣುವಿನ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದ ಕಣಾದ ಎಂಬ ಋಷಿಯು ಒಂಟಿ ಕಾಲಿನಲ್ಲಿ ನಿಂತು ನೀರಿಗಾಗಿ ಈ ಜಾಗದಲ್ಲಿ ತಪಸ್ಸು ಮಾಡಿದ್ದರಂತೆ. ಅವರ ತಪ್ಪಸ್ಸಿಗೆ ಒಲಿದ ಪರಶಿವ ತನ್ನ ಜಟೆಯಿಂದ ನೀರನ್ನು ಈಜಾಗದಲ್ಲಿ ಹರಿಸಿದ್ದ ಕಾರಣ ಈ ಕ್ಷೇತ್ರವನ್ನು ಕಣಾದ ಮುನಿಗಳು ಶಿವನಗಂಗೆ ಎಂದು ಕರೆದರಂತೆ. ಮುಂದೆ ಜನರ ಆಡು ಮಾತಿನಲ್ಲಿ ಅದು ಅಪಭ್ರಂಷವಾಗಿ ಶಿವಗಂಗೆ ಆಯಿತು ಎನ್ನುತ್ತದೆ ಕ್ಷೇತ್ರ ಪುರಾಣ.
ಇನ್ನು ಐತಿಹಾಸಿಕವಾಗಿ ನೋಡಿದಲ್ಲಿ ಈ ಸ್ಥಳವು ಹೊಯ್ಸಳ ರಾಜನಾದ ವಿಷ್ಣುವರ್ಧನನ ಆಡಳಿತದಲ್ಲಿದ್ದು ಆತನ ಧರ್ಮಪತ್ನಿ ರಾಣಿ ಶಾಂತಲೆಗೆ ಸಂತಾನ ಭಾಗ್ಯವಿಲ್ಲದಿದ್ದ ಕಾರಣ ಖಿನ್ನತೆಯಿಂದ ಇದೇ ಬೆಟ್ಟ ತುದಿಯಿಂದ ಹಾರಿ ತನ್ನ ದೇಹ ತ್ಯಾಗ ಮಾಡಿದ ಕಾರಣ ಈ ಬೆಟ್ಟದ ತುದಿ ಕುಂಬಿಯಲ್ಲಿ ಈಗಲೂ ಶಾಂತಲಾ ಡ್ರಾಪ್ ಸ್ಥಳವನ್ನು ನೋಡ ಬಹುದಾಗಿದೆ. ಮುಂದೆ, 16 ನೇ ಶತಮಾನದಲ್ಲಿ ಈ ಗುಡ್ಡವು ಶಿವಪ್ಪ ನಾಯಕರ ಕೋಟೆಯಾಗಿ ನಂತರ ಈ ಕೋಟೆಯನ್ನು ಬೆಂಗಳೂರಿನ ಸಂಸ್ಥಾಪಕ, ಮಾಗಡಿ ಕೆಂಪೇಗೌಡ ಕೋಟೆಯನ್ನು ಜೀರ್ಣೋದ್ಧಾರಗೊಳಿಸಿ ತಮ್ಮ ಇಲ್ಲಿಯೇ ತಮ್ಮ ಸಂಪತ್ತನ್ನು ರಕ್ಷಿಸಿ ಇಟ್ಟಿದ್ದರು ಎನ್ನುತ್ತದೆ ಇತಿಹಾಸ.
ಶಿವಗಂಗೆ ಬೆಟ್ಟದ ತಪ್ಪಲಲ್ಲಿಯೇ ಅರ್ಕಾವತಿ ನದಿಯ ಉಪನದಿಯಾದ ಕುಮುದ್ವತಿ ನದಿಯ ಉಗಮಸ್ಥಾನವಿದೆ. ಶಿವಗಂಗೆಯಲ್ಲಿ ಹುಟ್ಟಿ ನೆಲಮಂಗಲ, ರಾಮನಗರ ಜೆಲ್ಲೆ ಮತ್ತು ಮಾಗಡಿ ತಾಲ್ಲೂಕಿನ ಭಾಗಗಳಲ್ಲಿ ಸುಮಾರು 460 ಕಿ.ಮೀ ಹರಿದು ನಂತರ ತಿಪ್ಪಗೊಂಡನ ಹಳ್ಳಿ ಜಲಾಶಯದಲ್ಲಿ ಅರ್ಕಾವತಿ ನದಿಯೊಂದಿಗೆ ಸೇರಿಕೊಳ್ಳುತ್ತದೆ. ಒಂದು ಕಾಲದಲ್ಲಿ ಈ ನದಿಯು ಜಲಾನಯನ ಪ್ರದೇಶವು ಸುತ್ತಮುತ್ತಲಿನ ಹಳ್ಳಿಗಳ ವ್ಯವಸಾಯ ಮತ್ತು ಕುಡಿಯುವ ನೀರಿನ ಮೂಲವಾಗಿದ್ದು ಇಂದು ಸರಿಯಾದ ಮಳೆಯಾಗದೇ ಬತ್ತುತ್ತಿದೆಯಲ್ಲದೇ ಕೈಗಾರಿಕಾ ತ್ಯಾಜ್ಯಗಳಿಂದಾಗಿ ಕಲುಷಿತಗೊಂಡಿರುವುದು ಬೇಸರ ಸಂಗತಿಯಾಗಿದೆ.
ಶಿವಗಂಗೆಗೆ ಹೋಗುತ್ತಿದ್ದಂತೆಯೇ ನಮ್ಮ ಕಣ್ಣಿಗೆ ಸದಾ ತುಂಬಿರುವ ಕಲ್ಯಾಣಿ ಕಣ್ಣಿಗೆ ಬೀಳುತ್ತದೆ. ಅದರ ಆಸುಪಾಸಿನಲ್ಲಿಯೇ ನಮ್ಮ ವಾಹನಗಳನ್ನು ನಿಲ್ಲಿಸಿ, ಕಲ್ಯಾಣಿಯಲ್ಲಿ ಕೈಕಾಲು ತೊಳೆದುಕೊಂಡು, ದೇವಸ್ಥಾನ ರಸ್ತೆಯಲ್ಲಿರುವ ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಹೂವು ಹಣ್ಣುಗಳನ್ನು ತೆಗೆದುಕೊಂಡು ಸುಮಾರು ನೂರು ಮೆಟ್ಟಿಲುಗಳನ್ನು ಹತ್ತುತ್ತಾ ಹೋದಲ್ಲಿ ಎಡಗಡೆ ಗಣೇಶನ ದೇವಸ್ಥಾನ ಕಣ್ಣಿಗೆ ಕಾಣಿಸಿದರೆ, ಅಲ್ಲಿಂದ ಮುಂದೆ ನಮಗೆ ಹೊನ್ನಾದೇವಿ ಮತ್ತು ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಸಿಗುತ್ತದೆ.
ನಮಗೆಲ್ಲರಿಗೂ ತಿಳಿದಿರುವಂತೆ ಬೆಣ್ಣೆ ಕಾಯಿಸಿ ತುಪ್ಪವನ್ನು ಮಾಡುತ್ತಾರೆ. ಆದರೆ ಪುನಃ ತುಪ್ಪದಿಂದ ಬೆಣ್ಣೆಯನ್ನು ಮಾಡಲಾಗದು. ಇದು ವೈಜ್ಞಾನಿಕವಾಗಿಯೂ ಅಸಾಧ್ಯವಾದ ಮಾತೇ ಸರಿ ಆದರೆ, ಈ ಗಂಗಾಧರೇಶ್ವರ ಉದ್ಭವ ಶಿವಲಿಂಗದಲ್ಲಿ ಇಡೀ ಪ್ರಪಂಚದ್ಯಂತ ಕಾಣದ ಅದ್ಭುತವಾದ ಸಂಗತಿಯನ್ನು ನೋಡಬಹುದಾಗಿದೆ. ದೇವಸ್ಥಾನದ ಅರ್ಚಕರು ಆ ಶಿವನ ಲಿಂಗದ ನೆತ್ತಿಯ ಮೇಲೇ ತುಪ್ಪವನ್ನು ಸುರಿದು ನಿಧಾನವಾಗಿ ಸವರುತ್ತಾ ಹೋದಂತೆಲ್ಲಾ Reverse engineering process ನಡೆದು ತುಪ್ಪಾ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ. ಈ ಅಧ್ಭುತವಾದ ಸಂಗತಿಯು ನಮ್ಮ ಕಣ್ಣ ಮುಂದೆಯೇ ನಡೆದು, ನಂತರ ಅದೇ ಬೆಣ್ಣೆಯನ್ನು ಪ್ರಸಾದ ರೂಪದಲ್ಲಿ ಬಂದ ಭಕ್ತಾದಿಗಳಿಗೆ ಹಂಚಲಾಗುತ್ತದೆ. ತುಪ್ಪದಿಂದ ಬೆಣ್ಣೆಯಾಗುವ ಇದರಲ್ಲಿ ಔಷಧೀಯ ಗುಣವಿದ್ದು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದು ಅಲ್ಲಿಯ ಅರ್ಚಕರು ತಿಳಿಸುತ್ತಾರೆ.
ಪ್ರತಿ ವರ್ಷದ ಸಂಕ್ರಾಂತಿ ಹಬ್ಬದಂದು ಗಂಗಾಧರೇಶ್ವರ ಮತ್ತು ಹೊನ್ನಾದೇವಿಗೆ ವಿವಾಹ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಸಂಕ್ರಾಂತಿಯ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಇದೇ ಪವಿತ್ರವಾದ ಜಲವನ್ನು ಮಂಗಳವಾದ್ಯಗಳ ಸಮೇತ ಕೆಳಗೆ ತಂದು ಅದೇ ನೀರಿನಿಂದಲೇ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ.
ಇದೇ ದೇವಾಲಯದ ಹಿಂದೆ ಒಂದು ಸುರಂಗವಿದ್ದು, ಆ ಸುರಂಗ ಮಾರ್ಗದಲ್ಲಿಯೇ ಮುಂದುವರಿದರೆ ಸೀದಾ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ತಲುಪುತ್ತದೆ ಎನ್ನುತ್ತಾರೆ ಸ್ಥಳೀಯರು. ಬಹಳವಾದ ಕತ್ತಲು ಮತ್ತು ಉಸಿರಾಡಲು ಸೂಕ್ತವಾದ ಗಾಳಿಯ ವ್ಯವಸ್ಥೆ ಇಲ್ಲದ ಕಾರಣ ಮತ್ತು ಹಾವುಗಳು, ಬಾವಲಿಗಳು ಇರಬ್ಹುದಾದ ಸಾಧ್ಯತೆಗಳಿಂದಾಗಿ ಈ ಸುರಂಗವನ್ನು ಕೇವಲ ನೋಡಬಹುದಾಗಿದ್ದು ಒಳಗೆ ಪ್ರವೇಶ ನಿಶಿದ್ಧವಾಗಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಈ ಜಾಗದಲ್ಲಿ ಬಹಳಷ್ಟು ಕೋತಿಗಳಿದ್ದು, ಅವುಗಳು ತಮ್ಮ ಆಹಾರದ ಹುಡುಕಾಟದಲ್ಲಿ ಭಕ್ತಾದಿಗಳ ಕೈಗಳಲ್ಲಿದ್ದ ಚೀಲಗಳ ಮೇಲೆ ಧಾಳಿ ಮಾಡುವ ಸಂಭವ ಹೆಚ್ಚಾಗಿದ್ದು, ಮೈಯೆಲ್ಲಾ ಕಣ್ಣಾಗಿರುವಂತೆ ಎಚ್ಚರ ವಹಿಸಬೇಕಾಗುತ್ತದೆ. ಗವಿಗಂಗಾಧರೇಶ್ವರ ಸ್ವಾಮಿಯ ಆವರಣದಲ್ಲೇ ಇರುವ ಹೊನ್ನಾದೇವಿಯ ದರ್ಶನ ಪಡೆದ ನಂತರ ಬೆಟ್ಟ ಹತ್ತುವ ಕಾರ್ಯ ಶುರುವಾಗುತ್ತದೆ. ಮಾರ್ಗದ ಮಧ್ಯದಲ್ಲಿಯೇ ಒಂದು ಸಣ್ಣ ಗೋಪುರದ ಮೇಲೆ ಅನಾವರಣವಾಗಿರುವ ಬಸವನ ವಿಗ್ರಹವಿದ್ದು ಅಲ್ಲಿಯ ಮೆಟ್ಟಿಲುಗಳು ಕಡಿದಾಗಿರುವ ಕಾರಣ ಬಹಳ ಜಾಗೃತೆಯಿಂದ ಹತ್ತಬಹುದಾಗಿದೆ. ಮಾರ್ಗದ ಬದಿಯಲ್ಲಿ ನಮ್ಮ ದಣಿವಾರಿಸಿಕೊಳ್ಳಲು ಅನೇಕ ಗೂಡಂಗಡಿಗಳಿದ್ದು ಅಲ್ಲಿ ಕಬ್ಬಿನ ಹಾಲು, ನೀರು ಮಜ್ಜಿಗೆ, ಸೌತೆಕಾಯಿ, ಕಾಫೀ,ಟೀ ತಂಪುಪಾನಿಯಗಳ ಜೊತೆಗೆ ಕಡಲೇಕಾಯಿ ಮತ್ತು ಕಡಲೇ ಪುರಿ ಸಿಗುತ್ತದೆ. ಹೀಗೆ ಸಿಕ್ಕಿದ್ದನ್ನು ತಿನ್ನುತ್ತಾ ಬೆಟ್ಟ ಹತ್ತುತ್ತಾ ಮೇಲೆ ಹೋದರೆ ಸಿಗುವುದೇ, ಒಳಕಲ್ಲು ತೀರ್ಥ ಅಥವಾ ಒರಳುಕಲ್ಲು ತೀರ್ಥ ಎನ್ನುವ ಮತ್ತೊಂದು ಕುತೂಹಲಕಾರಿ ಸ್ಥಳ.
ಸಾವಿರಾರು ಅಡಿಗಳಷ್ಟು ಎತ್ತರದಲ್ಲಿರುವ ಈ ಗುಹೆಯಂತಹ ಪ್ರದೇಶದಲ್ಲಿ ಒಂದು ಸಣ್ಣ ಒರಳು ಕಲ್ಲಿನಷ್ಟಿನ ಸ್ಥಳವಿದ್ದು ವರ್ಷದ 365 ದಿನಗಳೂ ಇಲ್ಲಿ ನೀರು ಸಿಗುತ್ತದೆ. ಇಲ್ಲಿನ ನಂಬಿಕೆ ಏನೆಂದರೆ, ನಾವು ಮನಸ್ಸಿನಲ್ಲಿ ಯಾವುದಾದರೂ ವಿಷಯ ನೆನಪಿಸಿಕೊಂಡು ಈ ಒಳಕಲ್ಲು ತೀರ್ಥದಲ್ಲಿ ಕೈ ಹಾಕಿ, ನಮ್ಮ ಕೈಗೆ ನೀರು ಸಿಕ್ಕಿದಲ್ಲಿ ನಮ್ಮ ಕೆಲಸವಾಗುತ್ತದೆ. ನೀರು ಸಿಗದಿದ್ದಲ್ಲಿ ಕೆಲಸವಾಗುವುದಿಲ್ಲ ಎಂಬುದಾಗಿದೆ. ವಿಚಿತ್ರ ಎಂದರೆ, ಆರು ಆಡಿಗಳ ಎತ್ತರದ ಮನುಷ್ಯ ಕೈ ಹಾಕಿದಾಗ ನೀರು ಸಿಗದಿದ್ದು, ಆರು ವರ್ಷದ ಮಗು ಕೈ ಹಾಕಿದಾಗ ನೀರು ಸಿಕ್ಕಿರುವ ಉದಾಹಣೆಗಳಿರುವ ಕಾರಣ ಈ ಒರಳುಕಲ್ಲು ತೀರ್ಥ ಸ್ಧಳದ ಬಗ್ಗೆ ಜನರಿಗೆ ಬಹಳ ಭಯ ಭಕ್ತಿ.
ಸಾಧಾರಣವಾಗಿ ಬಹುತೇಕ ಭಕ್ತಾದಿಗಳು ಇಲ್ಲಿಂದ ಮೇಲಿನ ಸ್ಥಳ ಬಹಳ ಕಡಿದಾಗಿದ್ದು ದುರ್ಗಮವಾಗಿರುವ ಕಾರಣ ಮುಂದೆ ಹೋಗಲು ಇಚ್ಚೆ ಪಡದೇ ಇಲ್ಲಿಂದಲೇ ನಿಧಾನವಾಗಿ ಬೆಟ್ಟದಿಂದ ಕೆಳಗೆ ಇಳಿದು ಬಿಡುತ್ತಾರೆ. ಆದರೆ ಗಂಡೆದೆಯ ಶೂರರು ಸ್ವಲ್ಪ ಧೈರ್ಯ ಮಾಡಿ ಅಲ್ಲಿಂದ ಬೆಟ್ಟ ಏರಲು ಅರಂಭಿಸಿದರೇ, ಮಧ್ಯದಲ್ಲಿ ಶಿವಪಾರ್ವತಿಯ ದೇವಸ್ಥಾನವಿದ್ದು ಅಲ್ಲಿ ದ್ವಾದಶ ಜ್ಯೊತಿರ್ಲಿಂಗವು ಇದೆ. ಇಲ್ಲಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮತ್ತೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದಲ್ಲಿ ಇನ್ನೇನ್ನು ತುತ್ತ ತುದಿ ಕುಂಬಿಯನ್ನು ತಲುಪಲು ಹತ್ತಿಪ್ಪತ್ತು ಮೆಟ್ಟಿಲುಗಳು ಇವೆ ಎನ್ನುವಾಗ ಎಡ ಬದಿಯಲ್ಲಿ ಎತ್ತರವಾದ ಕಡಿದಾದ ಬಂಡೆಯ ಮೇಲೆ ಸುಂದರವಾಗಿ ಕೆತ್ತಿರುವ ಬೃಹತ್ತಾದ ನಂದಿ ವಿಗ್ರಹವಿದೆ.
ಈ ನಂದಿ ವಿಗ್ರಹದ ಜಾಗಕ್ಕೆ ಹತ್ತಿ ಅಲ್ಲಿ ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸ. ಇಲ್ಲಿ ಕಾಲಿಡುವ ಜಾಗ ಬಹಳ ಚಿಕ್ಕದಾಗಿದ್ದು ಮತ್ತೊಂದು ಕಡೆ ನೋಡಿದಲ್ಲಿ ಮೈ ಜುಂ ಎನ್ನುವ ಹಾಗೆ ಪ್ರಪಾತವಿದೆ. ಈಗೇನೋ ಅಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಿ ಚಾರಣಿಗರ ಸುರಕ್ಷತೆಗೆ ಗಮನ ಕೊಟ್ಟಿದ್ದಾರೆ. ಆದರೆ ಆಗಿನ ಕಾಲದಲ್ಲಿ ಇದ್ದನ್ನು ಕೆತ್ತಲು ಇನ್ನೆಷ್ಟು ಸಾಹಸ ಪಟ್ಟಿರಬೇಕು ಎಂಬುದನ್ನು ನೆನಸಿಕೊಂಡರೇ ಎದೆ ಝಲ್ ಎನ್ನುವುದಂತೂ ಸತ್ಯ. ಇಷ್ಟೆಲ್ಲ ಸಾಹಸ ಮಾಡಿ ನಂದಿಗೆ ಪ್ರದಕ್ಷಿಣೆ ಹಾಕಿ ಕೆಳಗಿ ಇಳಿದು ಅಲ್ಲಿಂದ 20 ಹೆಜ್ಜೆಗಳನ್ನು ಹಾಕಿದರೇ ಬೆಟ್ಟದ ತುದಿ ಕುಂಬಿಯನ್ನು ತಲುಪಿದಾಕ್ಷಣ ಅಲ್ಲಿಯ ತಣ್ಣನೆಯ ಗಾಳಿ, ಅಲ್ಲಿಂದ ಕಾಣಸಿಗುವ ವಿಹಂಗಮ ನೋಟ ಎಲ್ಲವೂ ಅಷ್ಟೆಲ್ಲಾ ಕಷ್ಟ ಪಟ್ಟು ಬೆವರು ಸುರಿಸಿ ಬೆಟ್ಟ ಹತ್ತಿದ ದಣಿವೆನ್ನೆಲ್ಲಾ ಮರೆಸಿ ಬಿಡುವುದಂತೂ ಖಂಡಿತ. ಇಲ್ಲೂ ಸಹ ಗಂಗಾಧರೇಶ್ವರ ದೇವಾಲಯವಿದ್ದು ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳೀ ಗಂಟೆಗಳು. ಅದನ್ನು ನೋಡುತ್ತಿದ್ದರೇ ಯಾರಪ್ಪ ಇಂತಹ ಗಂಡೆದೆಯ ಭಂಟರು ಹೀಗೆ ಇದನ್ನು ಇಲ್ಲಿ ಕಟ್ಟಿದವವರು ಎಂದೆನಿಸುತ್ತದೆ.
ದೇವಸ್ಥಾನದ ಮತ್ತೊಂದು ಬದಿಯಲ್ಲಿರುವುದೇ, ನಾಟ್ಯ ರಾಣಿ ಶಾಂತಲೆಯು ಕೆಳಗೆ ಬಿದ್ದ ಜಾಗವಾಗಿದ್ದು ಇದನ್ನು ಶಾಂತಲಾ ಡ್ರಾಪ್ ಎಂದು ಕರೆಯಲಾಗುತ್ತದೆ. ದೂರದಿಂದ ನೋಡಲು ಅದ್ಭುತವಾಗಿದ್ದರೂ, ಹತ್ತಿರದಿಂದ ನೋಡಲು ಭಯಂಕರವಾಗಿದ್ದು, ಬಹಳ ಎಚ್ಚರಿಕೆಯಿಂದ ಹೋಗಬಹುದಾಗಿದೆ. ಭಕ್ತಾದಿಗಳ ಸುರಕ್ಷತೆಗಾಗಿ ಈಗ ಕಬ್ಬಿಣದ ಸರಳುಗಳನ್ನು ಹಾಕಲಾಗಿದೆ.
ಸಾಧಾರಣವಾದ ಭಕ್ತರು ಹೀಗೆ ತಿಳಿಸಿದಂತೆ ಬೆಟ್ಟದ ತುದಿಯನ್ನು ತಲುಪಿದರೆ, ಚಾರಣಿಗರು ಬೆಟ್ಟದ ಹಿಂದಿನ ದುರ್ಗಮ ಮತ್ತು ಕಡಿದಾದ ಬಂಡೆಗಳನ್ನು ಏರಿ ಬಂದು ಬೆಟ್ಟದ ತುದಿಯನ್ನು ತಲುಪಿ ತಮ್ಮ ಸಾಹಸವನ್ನು ಮೆರೆಯುತ್ತಾರೆ.
ಬೆಟ್ಟದಿಂದ ಕೆಳೆಗೆ ಇಳಿಯುವ ಮಾರ್ಗದಲ್ಲಿ ಶಂಕರಾಚಾರ್ಯರ ಶಾಖಾ ಮಠವಾದ ಆವನಿ ಶಂಕರ ಮಠವಿದ್ದು ಅಲ್ಲಿ ಶಾರದಾಂಬೆಯ ದೇವಸ್ಥಾನವೂ ಇದೆ. 108 ಲಿಂಗಗಳನ್ನುಳ್ಳ ಅಗಸ್ತ್ಯರ ದೇವಸ್ಥಾನವೂ ಇದ್ದು ಇಲ್ಲಿನ ಪಾತಾಳ ಗಂಗೆಯಲ್ಲಿ ವರ್ಷಪೂರ್ತೀ ನೀರಿನಿಂದ ತುಂಬಿರುತ್ತದೆ. ಇಲ್ಲಿ ವೈಚಿತ್ರವೆಂದರೆ, ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿ, ಬೇಸಿಗೆ ಕಾಲದಲ್ಲಿ ನೀರಿನ ಮಟ್ಟ ಹೆಚ್ಚಾಗಿರುತ್ತದೆ. ಅಷ್ಟು ಎತ್ತರದ ಬೆಟ್ಟದ ಮೇಲಿದ್ದರು ಸಹ ಎಂತಹ ಕಡು ಬೇಸಿಗೆಯಲ್ಲಿಯೂ ಇಲ್ಲಿನ ನೀರು ಕಡಿಮೆಯಾಗುವುದಾಗಲೀ ಬತ್ತಿರುವ ಉದಾಹರಣೆ ಇಲ್ಲ ಎನ್ನುವುದೇ ಗಮನಾರ್ಹ ಅಂಶವಾಗಿದೆ.
ಬೆಟ್ಟದಿಂದ ಕೆಳಗೆ ಇಳಿದು ಗಣೇಶನ ಗುಡಿಯ ಬಳಿ ಬಂದರೆ ಭೋಜನಾಲವಿದೆ. ಪ್ರತಿ ನಿತ್ಯವೂ ದಾಸೋಹದ ಮೂಲಕ ಭಕ್ತಾದಿಗಳ ಹಸಿವನ್ನು ನಿವಾರಿಸುವ ಪದ್ದತಿಯಿದೆ. ಶುಚಿ ರುಚಿಯಾದ ಹೊಟ್ಟೆ ತುಂಬುವಷ್ಟು, ಅನ್ನಾ, ಸಾರು/ಹುಳಿ, ಪಲ್ಯ ಮತ್ತು ಮಜ್ಜಿಗೆಯನ್ನು ಬಡಿಸಿ ಸಾವಕಾಶವಾಗಿ ಚೆಲ್ಲದಂತೆ ಎಷ್ಟು ಬೇಕೋ ಅಷ್ಟನ್ನು ಹಾಕಿಸಿಕೊಳ್ಳಲು ವಿನಂತಿಸಿಕೊಳ್ಳುತ್ತಾರೆ.
ಇಷ್ಟೆಲ್ಲಾ ಸವಿರವಾದ ವಿರಣೆಗಳನ್ನು ಓದಿದ ನಂತರ ಖಂಡಿತವಾಗಿಯೂ ಶಿವಗಂಗೆ ಶ್ರೀ ಕ್ಷೇತ್ರಕ್ಕೆ ಹೋಗಿ ಹೊನ್ನಾದೇವಿ ಮತ್ತು ಗಂಗಧರೇಶ್ವರ ಸ್ವಾಮಿಯ ದರ್ಶನ ಪಡೆದು, ಒರಳು ಕಲ್ಲು ತೀರ್ಥದಲ್ಲಿ ನಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಂಡು ಬೆಟ್ಟದ ತುತ್ತ ತುದಿ ಕುಂಬಿಯನ್ನು ಏರುವ ಮೂಲಕ ನಮ್ಮ ದೇಹದ ಕಸುವಿನ ಸಾಮಥ್ಯವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.
ಇನ್ನೇಕೆ ತಡಾ, ಈ ವಾರಂತ್ಯದಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಶಿವಗಂಗೆ ನೋಡಿಕೊಂಡು ನಿಮ್ಮ ಆಭಿಪ್ರಾಯ ತಿಳಿಸುತ್ತೀರೀ ಅಲ್ವೇ?
ಏನಂತೀರೀ?
ಮೊನ್ನೆ ಸ್ನೇಹಿತರೊಬ್ಬರು ಕರೆ ಮಾಡಿ ಬಹಳ ತಿಂಗಳುಗಳಿಂದಲೂ ಮನೆಯಲ್ಲಿಯೇ ಕುಳಿತು ಬಹಳ ಬೇಸರವಾಗಿದೆ. ಇಲ್ಲೇ ಬೆಂಗಳೂರಿನ ಸುತ್ತಮುತ್ತಲೇ ಇರುವ ಸುಂದರವಾದ ಯಾವುದಾದರೂ ಪ್ರದೇಶ ಇದೆಯೇ, ಬೆಟ್ಟ ಹತ್ತುವ ಹಾಗಿರಬೇಕು. ಐತಿಹಾಸಿಕವಾಗಿ ಮತ್ತು ಧಾರ್ಮಿಕವಾಗಿ ಪ್ರಸಿದ್ಧವಾಗಿರುವಂತಹ ಸ್ಥಳ ಇದ್ದರೆ ತುಂಬಾ ಚೆನ್ನಾಗಿರುತ್ತದೆ ಎಂದಾಗ ಥಟ್ ಅಂತಾ ಮನಸ್ಸಿಗೆ ಹೊಳೆದದ್ದೇ ತುಮಕೂರು ರಸ್ತೆಯಲ್ಲಿರುವ ಶಿವಗಂಗೆ.
ನಾವು ಚಿಕ್ಕವರಿದ್ದಾಗ ಕೆಲವರ್ಷಗಳ ಕಾಲ ನೆಲಮಂಗಲದಲ್ಲಿ ವಾಸವಾಗಿದ್ದೆವು. ಹಾಗಾಗಿಯೇ ನನ್ನ ಬಾಲ್ಯದ ವಿದ್ಯಾಭ್ಯಾಸ ನಡೆದದ್ದೇ ನೆಲಮಂಗಲದ ಸರ್ಕಾರಿ ಶಾಲೆಯಲ್ಲಿ, ನಮ್ಮ ಮನೆಗೆ ಶನಿವಾರ ಯಾರಾದರೂ ಬಂಧು ಮಿತ್ರರು ಬಂದರೆಂದರೆ ಸಾಕು. ಭಾನುವಾರ ಬೆಳಿಗ್ಗೆ ಒಂದು ದಿವಸಕ್ಕೆ ಆಗುವಷ್ಟು ಬುತ್ತಿಯನ್ನು ಕಟ್ಟಿ ಕೊಂಡು ಎಲ್ಲರ ಸಮೇತ ಹೋಗುತ್ತಿದ್ದದ್ದೇ ಶಿವಗಂಗೆಗೆ. ಎಲ್ಲದ್ದಕ್ಕಿಂತಲೂ ಮಿಗಿಲಾಗಿ ನಮ್ಮ ಗ್ರಾಮ ದೇವತೆ ಹೊನ್ನಾದೇವಿ. ಶಿವಗಂಗೆಯಲ್ಲಿರುವ ದೇವಿಯೂ ಹೊನ್ನಾದೇವಿಯೇ ಹಾಗಾಗಿ ಅಷ್ಟು ದೂರದ ಊರಿಗೆ ಹೋಗಿ ಹೊನ್ನಾದೇವಿ ದರ್ಶನ ಮಾಡಲು ಸಾಧ್ಯವಾಗದಿದ್ದಾಗಲೆಲ್ಲಾ ಹತ್ತಿರದ ಶಿವಗಂಗೆ ಹೊನ್ನಾದೇವಿಯ ದರ್ಶನ ಪಡೆಯುವುದು ನಮ್ಮ ಮನೆಯಲ್ಲಿ ನದೆಡುಕೊಂಡು ಬಂದಿದ್ದಂತಹ ರೂಡಿ. ಈ ರೀತಿಯಾಗಿ ನಮಗೂ ಶಿವಗಂಗೆಗೂ ಒಂದು ರೀತಿಯ ಅವಿನಾಭಾವ ಸಂಬಂಧ.
ಒಂದೊಂದು ದಿಕ್ಕಿನಲ್ಲಿ ಒದೊಂದು ರೀತಿಯಾಗಿ ಕಾಣುವ ಶಿವಗಂಗೆ ಬೆಟ್ಟವೇ ಒಂದು ಅದ್ಭುತ. ಉತ್ತರದಿಂದ ಸರ್ಪದ ರೀತಿಯಾಗಿಯೂ, ದಕ್ಷಿಣ ಭಾಗದಿಂದ ಗಣೇಶನ ರೀತಿಯಾಗಿಯೂ, ಪೂರ್ವಭಾಗದಿಂದ ನಂದಿಯ ರೂಪದಲ್ಲಿಯೂ ಮತ್ತು ಪಶ್ಚಿಮ ದಿಕ್ಕಿನಿಂದ ಲಿಂಗರೂಪದಲ್ಲಿ ಕಾಣುವ ಈ ಶಿವಗಂಗೆಯನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಬೆಂಗಳೂರಿನಿಂದ ತುಮಕೂರಿನ ಕಡೆಗೆ ಪೂನಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 50 ಕಿ.ಮೀ ದೂರ ಪ್ರಯಾಣಿಸಿದರೆ, ನಮಗೆ ಡಾಬಸ್ ಪೇಟೆಯ ಮೇಲ್ಸೇತುವೆ ಸಿಗುತ್ತದೆ. ಆ ಸೇತುವೆಯಲ್ಲಿ ಮುಂದುವರೆಯದೇ, ಕೆಳಗೆ ಇಳಿದು ಅಲ್ಲಿಂದ ಎಡಕ್ಕೆ ಸುಮಾರು 6 ಕಿಮೀ ದೂರ ಪ್ರಯಾಣಿಸಿದರೆ ಶಿವಗಂಗೆ ಸಿಗುತ್ತದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ, ರಸ್ತೆ ಅತ್ಯುತ್ತಮವಾಗಿದ್ದು ಬೆಂಗಳೂರಿನಿಂದ ಸುಮಾರು ಮುಕ್ಕಾಲು ಗಂಟೆಯಿಂದ ಒಂದು ಗಂಟೆಯೊಳಗೆ ಅಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.
ಈ ಊರಿಗೆ ಶಿವಗಂಗೆ ಎಂಬ ಹೆಸರು ಬರಲು ಒಂದು ಪುರಾಣವಿದೆ. ಆಗಿನ ಕಾಲದಲ್ಲಿಯೇ ಅಣು ಮತ್ತು ಪರಮಾಣುವಿನ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದ ಕಣಾದ ಎಂಬ ಋಷಿಯು ಒಂಟಿ ಕಾಲಿನಲ್ಲಿ ನಿಂತು ನೀರಿಗಾಗಿ ಈ ಜಾಗದಲ್ಲಿ ತಪಸ್ಸು ಮಾಡಿದ್ದರಂತೆ. ಅವರ ತಪ್ಪಸ್ಸಿಗೆ ಒಲಿದ ಪರಶಿವ ತನ್ನ ಜಟೆಯಿಂದ ನೀರನ್ನು ಈಜಾಗದಲ್ಲಿ ಹರಿಸಿದ್ದ ಕಾರಣ ಈ ಕ್ಷೇತ್ರವನ್ನು ಕಣಾದ ಮುನಿಗಳು ಶಿವನಗಂಗೆ ಎಂದು ಕರೆದರಂತೆ. ಮುಂದೆ ಜನರ ಆಡು ಮಾತಿನಲ್ಲಿ ಅದು ಅಪಭ್ರಂಷವಾಗಿ ಶಿವಗಂಗೆ ಆಯಿತು ಎನ್ನುತ್ತದೆ ಕ್ಷೇತ್ರ ಪುರಾಣ.
ಇನ್ನು ಐತಿಹಾಸಿಕವಾಗಿ ನೋಡಿದಲ್ಲಿ ಈ ಸ್ಥಳವು ಹೊಯ್ಸಳ ರಾಜನಾದ ವಿಷ್ಣುವರ್ಧನನ ಆಡಳಿತದಲ್ಲಿದ್ದು ಆತನ ಧರ್ಮಪತ್ನಿ ರಾಣಿ ಶಾಂತಲೆಗೆ ಸಂತಾನ ಭಾಗ್ಯವಿಲ್ಲದಿದ್ದ ಕಾರಣ ಖಿನ್ನತೆಯಿಂದ ಇದೇ ಬೆಟ್ಟ ತುದಿಯಿಂದ ಹಾರಿ ತನ್ನ ದೇಹ ತ್ಯಾಗ ಮಾಡಿದ ಕಾರಣ ಈ ಬೆಟ್ಟದ ತುದಿ ಕುಂಬಿಯಲ್ಲಿ ಈಗಲೂ ಶಾಂತಲಾ ಡ್ರಾಪ್ ಸ್ಥಳವನ್ನು ನೋಡ ಬಹುದಾಗಿದೆ. ಮುಂದೆ, 16 ನೇ ಶತಮಾನದಲ್ಲಿ ಈ ಗುಡ್ಡವು ಶಿವಪ್ಪ ನಾಯಕರ ಕೋಟೆಯಾಗಿ ನಂತರ ಈ ಕೋಟೆಯನ್ನು ಬೆಂಗಳೂರಿನ ಸಂಸ್ಥಾಪಕ, ಮಾಗಡಿ ಕೆಂಪೇಗೌಡ ಕೋಟೆಯನ್ನು ಜೀರ್ಣೋದ್ಧಾರಗೊಳಿಸಿ ತಮ್ಮ ಇಲ್ಲಿಯೇ ತಮ್ಮ ಸಂಪತ್ತನ್ನು ರಕ್ಷಿಸಿ ಇಟ್ಟಿದ್ದರು ಎನ್ನುತ್ತದೆ ಇತಿಹಾಸ.
ಶಿವಗಂಗೆ ಬೆಟ್ಟಡ ತಪ್ಪಲಲ್ಲಿಯೇ ಅರ್ಕಾವತಿ ನದಿಯ ಉಪನದಿಯಾದ ಕುಮುದ್ವತಿ ನದಿಯ ಉಗಮಸ್ಥಾನವಿದೆ. ಶಿವಗಂಗೆಯಲ್ಲಿ ಹುಟ್ಟಿ ನೆಲಮಂಗಲ, ರಾಮನಗರ ಜೆಲ್ಲೆ ಮತ್ತು ಮಾಗಡಿ ತಾಲ್ಲೂಕಿನ ಭಾಗಗಳಲ್ಲಿ ಸುಮಾರು 460 ಕಿ.ಮೀ ಹರಿದು ನಂತರ ತಿಪ್ಪಗೊಂಡನ ಹಳ್ಳಿ ಜಲಾಶಯದಲ್ಲಿ ಅರ್ಕಾವತಿ ನದಿಯೊಂದಿಗೆ ಸೇರಿಕೊಳ್ಳುತ್ತದೆ. ಒಂದು ಕಾಲದಲ್ಲಿ ಈ ನದಿಯು ಜಲಾನಯನ ಪ್ರದೇಶವು ಸುತ್ತಮುತ್ತಲಿನ ಹಳ್ಳಿಗಳ ವ್ಯವಸಾಯ ಮತ್ತು ಕುಡಿಯುವ ನೀರಿನ ಮೂಲವಾಗಿದ್ದು ಇಂದು ಸರಿಯಾದ ಮಳೆಯಾಗದೇ ಬತ್ತುತ್ತಿದೆಯಲ್ಲದೇ ಕೈಗಾರಿಕಾ ತ್ಯಾಜ್ಯಗಳಿಂದಾಗಿ ಕಲುಷಿತಗೊಂಡಿರುವುದು ಬೇಸರ ಸಂಗತಿಯಾಗಿದೆ.
ಶಿವಗಂಗೆಗೆ ಹೋಗುತ್ತಿದ್ದಂತೆಯೇ ನಮ್ಮ ಕಣ್ಣಿಗೆ ಸದಾ ತುಂಬಿರುವ ಕಲ್ಯಾಣಿ ಕಣ್ಣಿಗೆ ಬೀಳುತ್ತದೆ. ಅದರ ಆಸುಪಾಸಿನಲ್ಲಿಯೇ ನಮ್ಮ ವಾಹನಗಳನ್ನು ನಿಲ್ಲಿಸಿ, ಕಲ್ಯಾಣಿಯಲ್ಲಿ ಕೈಕಾಲು ತೊಳೆದುಕೊಂಡು, ದೇವಸ್ಥಾನ ರಸ್ತೆಯಲ್ಲಿರುವ ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಹೂವು ಹಣ್ಣುಗಳನ್ನು ತೆಗೆದುಕೊಂಡು ಸುಮಾರು ನೂರು ಮೆಟ್ಟಿಲುಗಳನ್ನು ಹತ್ತುತ್ತಾ ಹೋದಲ್ಲಿ ಎಡಗಡೆ ಗಣೇಶನ ದೇವಸ್ಥಾನ ಕಣ್ಣಿಗೆ ಕಾಣಿಸಿದರೆ, ಅಲ್ಲಿಂದ ಮುಂದೆ ನಮಗೆ ಹೊನ್ನಾದೇವಿ ಮತ್ತು ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಸಿಗುತ್ತದೆ.
ನಮಗೆಲ್ಲರಿಗೂ ತಿಳಿದಿರುವಂತೆ ಬೆಣ್ಣೆ ಕಾಯಿಸಿ ತುಪ್ಪವನ್ನು ಮಾಡುತ್ತಾರೆ. ಆದರೆ ಪುನಃ ತುಪ್ಪದಿಂದ ಬೆಣ್ಣೆಯನ್ನು ಮಾಡಲಾಗದು. ಇದು ವೈಜ್ಞಾನಿಕವಾಗಿಯೂ ಅಸಾಧ್ಯವಾದ ಮಾತೇ ಸರಿ ಆದರೆ, ಈ ಗಂಗಾಧರೇಶ್ವರ ಉದ್ಭವ ಶಿವಲಿಂಗದಲ್ಲಿ ಇಡೀ ಪ್ರಪಂಚದ್ಯಂತ ಕಾಣದ ಅದ್ಭುತವಾದ ಸಂಗತಿಯನ್ನು ನೋಡಬಹುದಾಗಿದೆ. ದೇವಸ್ಥಾನದ ಅರ್ಚಕರು ಆ ಶಿವನ ಲಿಂಗದ ನೆತ್ತಿಯ ಮೇಲೇ ತುಪ್ಪವನ್ನು ಸುರಿದು ನಿಧಾನವಾಗಿ ಸವರುತ್ತಾ ಹೋದಂತೆಲ್ಲಾ Reverse engineering process ನಡೆದು ತುಪ್ಪಾ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ. ಈ ಅಧ್ಭುತವಾದ ಸಂಗತಿಯು ನಮ್ಮ ಕಣ್ಣ ಮುಂದೆಯೇ ನಡೆದು, ನಂತರ ಅದೇ ಬೆಣ್ಣೆಯನ್ನು ಪ್ರಸಾದ ರೂಪದಲ್ಲಿ ಬಂದ ಭಕ್ತಾದಿಗಳಿಗೆ ಹಂಚಲಾಗುತ್ತದೆ. ತುಪ್ಪದಿಂದ ಬೆಣ್ಣೆಯಾಗುವ ಇದರಲ್ಲಿ ಔಷಧೀಯ
ಗುಣವಿದ್ದು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂದು ಅಲ್ಲಿಯ ಅರ್ಚಕರು ತಿಳಿಸುತ್ತಾರೆ.
ಪ್ರತಿ ವರ್ಷದ ಸಂಕ್ರಾಂತಿ ಹಬ್ಬದಂದು ಗಂಗಾಧರೇಶ್ವರ ಮತ್ತು ಹೊನ್ನಾದೇವಿಗೆ ವಿವಾಹ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಸಂಕ್ರಾಂತಿಯ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಇದೇ ಪವಿತ್ರವಾದ ಜಲವನ್ನು ಮಂಗಳವಾದ್ಯಗಳ ಸಮೇತ ಕೆಳಗೆ ತಂದು ಅದೇ ನೀರಿನಿಂದಲೇ ಶ್ರೀ ಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ.
ಇದೇ ದೇವಾಲಯದ ಹಿಂದೆ ಒಂದು ಸುರಂಗವಿದ್ದು, ಆ ಸುರಂಗ ಮಾರ್ಗದಲ್ಲಿಯೇ ಮುಂದುವರಿದರೆ ಸೀದಾ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ತಲುಪುತ್ತದೆ ಎನ್ನುತ್ತಾರೆ ಸ್ಥಳೀಯರು. ಬಹಳವಾದ ಕತ್ತಲು ಮತ್ತು ಉಸಿರಾಡಲು ಸೂಕ್ತವಾದ ಗಾಳಿಯ ವ್ಯವಸ್ಥೆ ಇಲ್ಲದ ಕಾರಣ ಮತ್ತು ಹಾವುಗಳು, ಬಾವಲಿಗಳು ಇರಬ್ಹುದಾದ ಸಾಧ್ಯತೆಗಳಿಂದಾಗಿ ಈ ಸುರಂಗವನ್ನು ಕೇವಲ ನೋಡಬಹುದಾಗಿದ್ದು ಒಳಗೆ ಪ್ರವೇಶ ನಿಶಿದ್ಧವಾಗಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಈ ಜಾಗದಲ್ಲಿ ಬಹಳಷ್ಟು ಕೋತಿಗಳಿದ್ದು, ಅವುಗಳು ತಮ್ಮ ಆಹಾರದ ಹುಡುಕಾಟದಲ್ಲಿ ಭಕ್ತಾದಿಗಳ ಕೈಗಳಲ್ಲಿದ್ದ ಚೀಲಗಳ ಮೇಲೆ ಧಾಳಿ ಮಾಡುವ ಸಂಭವ ಹೆಚ್ಚಾಗಿದ್ದು, ಮೈಯೆಲ್ಲಾ ಕಣ್ಣಾಗಿರುವಂತೆ ಎಚ್ಚರ ವಹಿಸಬೇಕಾಗುತ್ತದೆ. ಗವಿಗಂಗಾಧರೇಶ್ವರ ಸ್ವಾಮಿಯ ಆವರಣದಲ್ಲೇ ಇರುವ ಹೊನ್ನಾದೇವಿಯ ದರ್ಶನ ಪಡೆದ ನಂತರ ಬೆಟ್ಟ ಹತ್ತುವ ಕಾರ್ಯ ಶುರುವಾಗುತ್ತದೆ. ಮಾರ್ಗದ ಮಧ್ಯದಲ್ಲಿಯೇ ಒಂದು ಸಣ್ಣ ಗೋಪುರದ ಮೇಲೆ ಅನಾವರಣವಾಗಿರುವ ಬಸವನ ವಿಗ್ರಹವಿದ್ದು ಅಲ್ಲಿಯ ಮೆಟ್ಟಿಲುಗಳು ಕಡಿದಾಗಿರುವ ಕಾರಣ ಬಹಳ ಜಾಗೃತೆಯಿಂದ ಹತ್ತಬಹುದಾಗಿದೆ. ಮಾರ್ಗದ ಬದಿಯಲ್ಲಿ ನಮ್ಮ ದಣಿವಾರಿಸಿಕೊಳ್ಳಲು ಅನೇಕ ಗೂಡಂಗಡಿಗಳಿದ್ದು ಅಲ್ಲಿ ಕಬ್ಬಿನ ಹಾಲು, ನೀರು ಮಜ್ಜಿಗೆ, ಸೌತೆಕಾಯಿ, ಕಾಫೀ,ಟೀ ತಂಪುಪಾನಿಯಗಳ ಜೊತೆಗೆ ಕಡಲೇಕಾಯಿ ಮತ್ತು ಕಡಲೇ ಪುರಿ ಸಿಗುತ್ತದೆ. ಹೀಗೆ ಸಿಕ್ಕಿದ್ದನ್ನು ತಿನ್ನುತ್ತಾ ಬೆಟ್ಟ ಹತ್ತುತ್ತಾ ಮೇಲೆ ಹೋದರೆ ಸಿಗುವುದೇ, ಒಳಕಲ್ಲು ತೀರ್ಥ ಅಥವಾ ಒರಳುಕಲ್ಲು ತೀರ್ಥ ಎನ್ನುವ ಮತ್ತೊಂದು ಕುತೂಹಲಕಾರಿ ಸ್ಥಳ. ಸಾವಿರಾರು ಅಡಿಗಳಷ್ಟು ಎತ್ತರದಲ್ಲಿರುವ ಈ ಗುಹೆಯಂತಹ ಪ್ರದೇಶದಲ್ಲಿ ಒಂದು ಸಣ್ಣ ಒರಳು ಕಲ್ಲಿನಷ್ಟಿನ ಸ್ಥಳವಿದ್ದು ವರ್ಷದ 365 ದಿನಗಳೂ ಇಲ್ಲಿ ನೀರು ಸಿಗುತ್ತದೆ. ಇಲ್ಲಿನ ನಂಬಿಕೆ ಏನೆಂದರೆ, ನಾವು ಮನಸ್ಸಿನಲ್ಲಿ ಯಾವುದಾದರೂ ವಿಷಯ ನೆನಪಿಸಿಕೊಂಡು ಈ ಒಳಕಲ್ಲು ತೀರ್ಥದಲ್ಲಿ ಕೈ ಹಾಕಿ, ನಮ್ಮ ಕೈಗೆ ನೀರು ಸಿಕ್ಕಿದಲ್ಲಿ ನಮ್ಮ ಕೆಲಸವಾಗುತ್ತದೆ. ನೀರು ಸಿಗದಿದ್ದಲ್ಲಿ ಕೆಲಸವಾಗುವುದಿಲ್ಲ ಎಂಬುದಾಗಿದೆ. ವಿಚಿತ್ರ ಎಂದರೆ, ಆರು ಆಡಿಗಳ ಎತ್ತರದ ಮನುಷ್ಯ ಕೈ ಹಾಕಿದಾಗ ನೀರು ಸಿಗದಿದ್ದು, ಆರು ವರ್ಷದ ಮಗು ಕೈ ಹಾಕಿದಾಗ ನೀರು ಸಿಕ್ಕಿರುವ ಉದಾಹಣೆಗಳಿರುವ ಕಾರಣ ಈ ಒರಳುಕಲ್ಲು ತೀರ್ಥ ಸ್ಧಳದ ಬಗ್ಗೆ ಜನರಿಗೆ ಬಹಳ ಭಯ ಭಕ್ತಿ.
ಸಾಧಾರಣವಾಗಿ ಬಹುತೇಕ ಭಕ್ತಾದಿಗಳು ಇಲ್ಲಿಂದ ಮೇಲಿನ ಸ್ಥಳ ಬಹಳ ಕಡಿದಾಗಿದ್ದು ದುರ್ಗಮವಾಗಿರುವ ಕಾರಣ ಮುಂದೆ ಹೋಗಲು ಇಚ್ಚೆ ಪಡದೇ ಇಲ್ಲಿಂದಲೇ ನಿಧಾನವಾಗಿ ಬೆಟ್ಟದಿಂದ ಕೆಳಗೆ ಇಳಿದು ಬಿಡುತ್ತಾರೆ. ಆದರೆ ಗಂಡೆದೆಯ ಶೂರರು ಸ್ವಲ್ಪ ಧೈರ್ಯ ಮಾಡಿ ಅಲ್ಲಿಂದ ಬೆಟ್ಟ ಏರಲು ಅರಂಭಿಸಿದರೇ, ಮಧ್ಯದಲ್ಲಿ ಶಿವಪಾರ್ವತಿಯ ದೇವಸ್ಥಾನವಿದ್ದು ಅಲ್ಲಿ ದ್ವಾದಶ ಜ್ಯೊತಿರ್ಲಿಂಗವು ಇದೆ. ಇಲ್ಲಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮತ್ತೆ ಕಡಿದಾದ ಬೆಟ್ಟವನ್ನು ಏರುತ್ತಾ ಹೋದಲ್ಲಿ ಇನ್ನೇನ್ನು ತುತ್ತ ತುದಿ ಕುಂಬಿಯನ್ನು ತಲುಪಲು ಹತ್ತಿಪ್ಪತ್ತು ಮೆಟ್ಟಿಲುಗಳು ಇವೆ ಎನ್ನುವಾಗ ಎಡ ಬದಿಯಲ್ಲಿ ಎತ್ತರವಾದ ಕಡಿದಾದ ಬಂಡೆಯ ಮೇಲೆ ಸುಂದರವಾಗಿ ಕೆತ್ತಿರುವ ಬೃಹತ್ತಾದ ನಂದಿ ವಿಗ್ರಹವಿದೆ. ಈ ನಂದಿ ವಿಗ್ರಹದ ಜಾಗಕ್ಕೆ ಹತ್ತಿ ಅಲ್ಲಿ ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸ. ಇಲ್ಲಿ ಕಾಲಿಡುವ ಜಾಗ ಬಹಳ ಚಿಕ್ಕದಾಗಿದ್ದು ಮತ್ತೊಂದು ಕಡೆ ನೋಡಿದಲ್ಲಿ ಮೈ ಜುಂ ಎನ್ನುವ ಹಾಗೆ ಪ್ರಪಾತವಿದೆ. ಈಗೇನೋ ಅಲ್ಲಿ ಕಬ್ಬಿಣದ ಸರಳುಗಳನ್ನು ಅಳವಡಿಸಿ ಚಾರಣಿಗರ ಸುರಕ್ಷತೆಗೆ ಗಮನ ಕೊಟ್ಟಿದ್ದಾರೆ. ಆದರೆ ಆಗಿನ ಕಾಲದಲ್ಲಿ ಇದ್ದನ್ನು ಕೆತ್ತಲು ಇನ್ನೆಷ್ಟು ಸಾಹಸ ಪಟ್ಟಿರಬೇಕು ಎಂಬುದನ್ನು ನೆನಸಿಕೊಂಡರೇ ಎದೆ ಝಲ್ ಎನ್ನುವುದಂತೂ ಸತ್ಯ. ಇಷ್ಟೆಲ್ಲ ಸಾಹಸ ಮಾಡಿ ನಂದಿಗೆ ಪ್ರದಕ್ಷಿಣೆ ಹಾಕಿ ಕೆಳಗಿ ಇಳಿದು ಅಲ್ಲಿಂದ 20 ಹೆಜ್ಜೆಗಳನ್ನು ಹಾಕಿದರೇ ಬೆಟ್ಟದ ತುದಿ ಕುಂಬಿಯನ್ನು ತಲುಪಿದಾ ಕ್ಷಣ ಅಲ್ಲಿಯ ತಣ್ಣನೆಯ ಗಾಳಿ, ಅಲ್ಲಿಂದ ಕಾಣಸಿಗುವ ವಿಹಂಗಮ ನೋಟ ಎಲ್ಲವೂ ಅಷ್ಟೆಲ್ಲಾ ಕಷ್ಟ ಪಟ್ಟು ಬೆವರು ಸುರಿಸಿ ಬೆಟ್ಟ ಹತ್ತಿದ ದಣಿವೆನ್ನೆಲ್ಲಾ ಮರೆಸಿ ಬಿಡುವುದಂತೂ ಖಂಡಿತ. ಇಲ್ಲೂ ಸಹ ಗಂಗಾಧರೇಶ್ವರ ದೇವಾಲಯವಿದ್ದು ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಬೆಳ್ಳೀ ಗಂಟೆಗಳು. ಅದನ್ನು ನೋಡುತ್ತಿದ್ದರೇ ಯಾರಪ್ಪ ಇಂತಹ ಗಂಡೆದೆಯ ಭಂಟರು ಹೀಗೆ ಇದನ್ನು ಇಲ್ಲಿ ಕಟ್ಟಿದವವರು ಎಂದೆನಿಸುತ್ತದೆ.