ನಾವು ಪ್ರತೀ ದಿನ ಊಟ ಮಾಡುವ ಮೊದಲು ತಾಯಿ ಅನ್ನಪೂರ್ಣೆಯನ್ನು ನೆನಸಿಕೊಂಡು, ಊಟ ಮುಗಿದ ನಂತರ ಅನ್ನದಾತೋ ಸುಖೀ ಭವ ಎಂದು ಹೇಳಿಯೇ ಊಟ ಮುಗಿಸುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ. ಹೇಳೀ ಕೇಳಿ ನಮ್ಮ ದೇಶ ಕೃಷಿ ಆದಾರಿತವಾದ ದೇಶ. 130 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಈ ದೇಶದ ಜನರಿಗೆ ಕನಿಷ್ಟ ಪಕ್ಷ ಎರಡು ಹೊತ್ತಿನ ಊಟವಾದರೂ ನೆಮ್ಮದಿಯಾಗಿ ಸಿಗುವಂತೆ ಮಾಡುತ್ತಿರುವ ಅನ್ನದಾತ ರೈತನಿಗೆ ಎಲ್ಲರೂ ಕೃತಜ್ಞಾರಾಗಿರಲೇ ಬೇಕು. ಇದನ್ನೇ ಅತ್ಯಂತ ಮನೋಜ್ಞವಾಗಿ ಕವಿಗಳಾದ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಯವರು ಬರೆದಿರುವ ಈ ಪದ್ಯವನ್ನು ನಮ್ಮ ಒಂದನೇ ತರಗತಿಯಲ್ಲಿ ನಲವತ್ತೈದು ವರ್ಷಗಳ ಹಿಂದೆ ಓದಿದ್ದರೂ ಇನ್ನೂ ಹಚ್ಚ ಹಸಿರಾಗಿಯೇ ನಮ್ಮೆಲ್ಲರ ಮನಗಳಲ್ಲಿ ಅಚ್ಚಳಿಯದೇ ಉಳಿದಿದೆ.
ಇವನೇ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸಮನೆ ದುಡಿಯುತ
ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು
ನಮ್ಮ ರೈತನ ಬದುಕು ಹಸನಾಗಿರಲೆಂದೇ ಸ್ವಾತಂತ್ರ್ಯ ಬಂದ ನಂತರ ಎಲ್ಲಾ ಸರ್ಕಾರಗಳೂ ಅನೇಕ ಸವಲತ್ತುಗಳನ್ನು ನೀಡುತ್ತಲೇ ಇದೆ. ರೈತರಿಗೆ ಪಂಪ್ ಸೆಟ್ಟುಗಳಿಗೆ ಉಚಿತ ನೀರು, ಸಬ್ಸಿಡಿ ದರದಲ್ಲಿ ರಸಗೊಬ್ಬರ, ಬಿತ್ತನೇ ಬೀಜಗಳು ಕೃಷಿ ಉಪಕರಣಗಳು, ಕೃಷಿ ಉತ್ಪನ್ನಗಳಿಗೆ ತೆರಿಗೆ ಉತ್ಪನ್ನಗಳು ಹೀಗೆ ಎಲ್ಲವನ್ನೂ ನೀಡುತ್ತಿದ್ದರೂ ಇನ್ನೂ ನಮ್ಮ ರೈತನ ಬದುಕು ದಿನದಿಂದ ದಿನಕ್ಕೆ ಹದಗೆಡುತ್ತಿದೆಯೇ ಹೊರತು ಹಸನಾಗಿಯೇ ಇಲ್ಲದಿರುವುದು ವಿಪರ್ಯಾಸವೇ ಸರಿ.
ಇದಕ್ಕೆ ಕಾರಣವೇನೆಂದು ಹುಡುಕಲು ಹೊರಟಾಗ ತಿಳಿದು ಬಂದ ಕುತೂಹಲಕಾರಿ ವಿಷಯವೆಂದರೆ ಅತೀ ವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಸರಿಯಾದ ಬೆಳೆ ಬಾರದಿರುವುದು ಒಂದು ಸಂಗತಿಯಾದರೇ, ಸೂಜಿಯಿಂದ, ವಿಮಾನದವರೆಗೂ ಪ್ರತಿಯೊಂದಕ್ಕೂ ನಿಗಧಿತವಾದ ಬೆಲೆ ಇದ್ದರೆ ರೈತರ ಬೆಳೆಗೆ ಮಾತ್ರಾ ನಿಗಧಿತ ಬೆಲೆ ಇಲ್ಲದೇ ಪ್ರತೀಬಾರಿಯೂ ಏರೂ ಪೇರಾಗುವುದೂ ಮತ್ತೊಂದು ಕಾರಣ. ಇದಕ್ಕಿಂತಲೂ ಮತ್ತೊಂದು ಅಘಾತಕಾರಿ ಅಂಶವೆಂದರೆ, ರೈತರು ತಾವು ಬೆಳೆದ ವಸ್ತುಗಳನ್ನು ಮಾರಾಟ ಮಾಡಲು ಅವರಿಗೆಂದೇ APMC ಮಾರುಕಟ್ಟೆ ಆರಂಭಿಸಿದರೂ, ನೇರವಾಗಿ ಮಾರಲು ಸಾಧ್ಯವಾಗದೇ, ದಳ್ಳಾಳಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಅವರು ಹೇಳಿದ್ದೇ ದರ ಕೊಟ್ಟಷ್ಟೇ ಹಣಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾದ ಪರಿಸ್ಥಿತಿಯೇ ರೈತನ ಈ ಬಡತನಕ್ಕೆ ಸಾಕ್ಷಿಯಾಗಿತ್ತು.
ಇದನೆಲ್ಲವನ್ನೂ ಗಮನಿಸಿದ ಪ್ರಸಕ್ತ ಕೇಂದ್ರ ಸರ್ಕಾರ ರೈತರ ಪ್ರಸ್ತುತ ಇದ್ದ ಕೃಷಿ ನೀತಿಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಇರುವ ಕೃಷಿ ಪದ್ದತಿಯಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರದೇ, ರೈತರಿಗೆ ನೇರವಾಗಿ ಅನುಕೂಲವಾಗಲೆಂದೇ, ಒಂದೆರಡು ಹೊಸಾ ಪದ್ದತಿಗಳನ್ನು ಜಾರಿಗೆ ತಂದು, ರೈತ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆಯನ್ನು ನಿಗಧಿ ಪಡಿಸಿತಲ್ಲದೇ, ರೈತರು ತಮ್ಮ ಬೆಳೆಗಳ ಮಾರುಕಟ್ಟೆಗೆ APMC ಮಾರುಕಟ್ಟೆಯ ದಲ್ಳಾಳಿಗಳ ಹೊರತಾಗಿಯೂ, ತಮ್ಮಿಷ್ಟ ಬಂದವರಿಗೆ ಮತ್ತು ತಮ್ಮ ಅನುಕೂಲದ ಬೆಲೆಗೆ ಯಾರು ಕೊಂಡು ಕೊಳ್ಳುತ್ತಾರೋ ಅಂತಹವರಿಗೂ ಮಾರಾಟ ಮಾಡುವಂತಹ ಮುಕ್ತ ಅವಕಾಶವನ್ನು ತಂದು ಕೊಡುವ ಮೂಲಕ ರೈತನ ಹಿತವನ್ನು ಕಾಪಾಡುವುದಕ್ಕೆ ಮುಂದಾಯಿತು.
ಈ ಬದಲಾದ ಕೃಷಿ ನೀತಿ ಕೇಂದ್ರ ಸರ್ಕಾರದ ಸಂಸತ್ತಿನ ಎರಡೂ ಮನೆಗಳಲ್ಲಿ ಚರ್ಚೆಗೆ ಒಳಪಟ್ಟು ಸಾಂಸದರ ಬಹುಮತದಿಂದ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಧಿಕೃತ ಮುದ್ರೆ ಬೀಳುತ್ತಿದ್ದಂತೆಯೇ ದೇಶದ ಕೆಲ ಪಟ್ಟ ಭದ್ರ ಹಿತಾಸಕ್ತಿಗಳಿಗೆ ಮೂಲ ಆದಾಯಕ್ಕೇ ಬಾರೀ ಪೆಟ್ಟು ಬಿದ್ದಂತಾಗಿ ಒಮ್ಮಿಂದೊಮ್ಮೆಲೇ ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದವು. ಎಲ್ಲದಕ್ಕಿಂತಲೂ ಅಚ್ಚರಿಯೆನ್ನುವಂತೆ ಸರ್ಕಾರ ಅಂಗ ಪಕ್ಷವಾಗಿದ್ದ ಅಕಾಲೀ ದಳ ಶಿರೋಮಣಿ ಮೊದಲು ಮುಗಿಬಿದ್ದು ಈ ಕೃಷಿ ನೀತಿಯನ್ನು ಬದಲಿಸದೇ ಹೋದಲ್ಲಿ ಸರ್ಕಾರದಿಂದ ಹೊರಬೀಳುತ್ತೇವೆ ಎಂಬ ಬೆದರಿಕೆ ಹಾಕಿತು. ಇಂತಹ ಗೊಡ್ಡು ಬೆದರಿಕೆಗಳಿಗೆ ಸರ್ಕಾರ ಬಗ್ಗದಿದ್ದಾಗ ವಿಧಿ ಇಲ್ಲದೇ ಸರ್ಕಾರ ಮತ್ತು ಎನ್.ಡಿ.ಎ ದಿಂದ ಹೊರಬಿದ್ದಿತು. ಇನ್ನು ಕೇವಲ ಈರುಳ್ಳಿಯ ಸಗಟು ಸಂಗ್ರಹಣೆ ಮತ್ತು ದಲ್ಲಾಳಿತನದಿಂದಲೇ, ಸಾವಿರ ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯವನ್ನು ಗಳಿಸುತ್ತಿದ್ದ ಮಹಾರಾಷ್ಟ್ರದ ಶರದ್ ಪವಾರ್ ಕುಟುಂಬಕ್ಕೆ ಮರ್ಮಘಾತವಾಗಿದ್ದಂತೂ ಸುಳ್ಳಲ್ಲ.
ರಾಜ್ಯದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಸೋತು ಸೊರಗಿರುವ ಕಾಂಗ್ರೇಸ್ ಪಕ್ಷಕ್ಕೆ ಶತ್ರುವಿನ ಶತ್ರು ಮಿತ್ರ ಎಂಬ ಗಾದೆಯಂತೆ ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಕಾಯುತ್ತಿದ್ದ ಕಾಂಗ್ರೇಸ್, ಕಮ್ಯೂನಿಷ್ಟರು, ತುಕ್ಡೇ ತುಕ್ಡೇ ಗ್ಯಾಂಗ್ ಜೊತೆ CAA & NRC ವಿರುದ್ಧ ದೇಶಾದ್ಯಂತ ಹೋರಾಟನಡೆಸಿ, ಕಡೆಗೆ ದೆಹಲಿಯ ಷಹೀನ್ ಬಾಗಿನಲ್ಲಿ ತಿಂಗಳಾನುಗಟ್ಟಲೆ ದಿನಗೂಲಿ ಮತ್ತು ಬಿರ್ಯಾನಿಯಾಧಾರಿತ ಹೆಣ್ಣು ಹೋರಾಟಗಾರರನ್ನು ಬಿಟ್ಟು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಇತ್ತೀಚಿಗೆ ಸಿದ್ದರಾಮಯ್ಯನವರು ಹೇಳಿದ ಮೊಘಲರ ಕಲಬೆರೆಕೆಯವರು ಸೇರಿ ಒಂದಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಹುನ್ನಾರ ಮಾಡತೊಡಗಿದರು.
ದೆಹಲಿಯ ಹಿಂದೂಗಳು ಬಹಿರಂಗವಾಗಿ ಛತ್ ಪೂಜಾ ನಡೆಸಲು ದೆಹಲಿ ಸರ್ಕಾರದ ಅನುಮತಿ ಕೇಳಿದಾಗ ಕರೋನಾ ನೆಪವೊಡ್ಡಿ ಅನುಮತಿ ನೀಡದ ಕೇಜ್ರೀವಾಲ್ ಸರ್ಕಾರವೂ, ತನ್ನ ಪರಮ ಶತ್ರು ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಈ ಹುನ್ನಾರಕ್ಕೇ ತುಪ್ಪ ಎರೆಯದಿದ್ದರೇ ಹೇಗೇ? ತಮ್ಮ ಸರ್ಕಾರ ರೈತರ ಪರವಾಗಿದೆ ಎಂಬ ಬಹಿರಂಗ ಹೇಳಿಕೆ ಕೊಟ್ಟಿದ್ದಲ್ಲದೇ, ಲಕ್ಷಾಂತರ ರೈತರು ಒಟ್ಟಿಗೆ ದೆಹಲಿಗೆ ಬರಲು ಒಪ್ಪಿಗೆ ನೀಡಿದ್ದಲ್ಲದೇ, ಪಂಜಾಬ್ ಹಾಗೂ ಹರ್ಯಾಣದ ರೈತರು ದಿಲ್ಲಿ ಗಡಿ ಭಾಗದ ಸಂಘು, ತಕ್ರಿ ಹಾಗೂ ಗಾಝಿಪುರದಲ್ಲಿ ಪ್ರತಿಭಟನೆ ಕುಳಿತಿರುವವರಿಗೆ ಚಳಿಯ ನೆಪವೊಡ್ಡಿ ಬಂದವರಿಗೆಲ್ಲರಿಗೂ ದೆಹಲಿ ಸರ್ಕಾರದ ಪರವಾಗಿ ಹೊದಿಕೆಗಳನ್ನು ಒದಗಿಸಲು ಮುಂದಾಯಿತು. ಛತ್ ಪೂಜೆಯಲ್ಲಿದ್ದ ಕರೋನಾ ನೆಪ ಸಾಮೂಹಿಕವಾಗಿ ಛಾದರ್ ಗಳನ್ನು ಒದಗಿಸಿದಾಗ ಬರಲಿಲ್ಲ ಎನ್ನುವುದು ಇಲ್ಲಿ ಗಮನಿಸ ಬೇಕಾದ ವಿಷಯ.
ನಿಜವಾದ ರೈತ ತಾನು ಬೆಳೆದಿದ್ದ ಬೆಳೆಯನ್ನು ಮಾರಲು ಓಡಾಡುತ್ತಿದ್ದಾಗ, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ರೈತರನ್ನು ಹೇಗೆ ಕರೆತರುವುದು ಎಂದು ಯೋಚಿಸುತ್ತಿರುವಾಗಲೇ ನೆರವಿಗೆ ಬಂದದ್ದು ಅದೇ ಬಾಂಧವರೇ. ಸಿಖ್ಖರು ಉದ್ದುದ್ದ ಮೀಸೆ ಮತ್ತು ಗಡ್ಡವನ್ನು ಬಿಟ್ಟು ತಲೆಯ ಮೇಲೆ ಪಗಡಿ ಧರಿಸಿರುತ್ತಾರೆ. ಇನ್ನು ಬಾಂಧವರೂ ಉದ್ದುದ್ದ ಗಡ್ಡ ಬಿಟ್ಟಿರುತ್ತಾರೆ. ಅವರ ತಲೆಯ ಮೇಲಿರುವ ಸೊಳ್ಳೆ ಪರೆದೇ ಟೋಪಿಯ ಬದಲು ಪಗಡೀ ಧರಿಸಿದರೇ ಸಿಖ್ಖರಾಗಿ ಬಿಡುತ್ತಾರೆ ಎಂಬ ಉಪಾಯ ಅದಾರು ಕೊಟ್ಟರೋ ತಿಳಿಯದು. ಈ ಉಪಾಯ ಎಲ್ಲರಿಗೂ ಇಷ್ಟವಾಗಿ ಅದನ್ನು ಕಾರ್ಯರೂಪಕ್ಕೆ ತಂದೇ ಬಿಟ್ಟರು. ಅಪರಾಧಿ ಎಷ್ಟೇ ಚಾಣಾಕ್ಷನಾದರೂ, ಪ್ರತೀ ಅಪರಾಧ ನಡೆಸಿದ ನಂತರ ಒಂದಲ್ಲಾ ಒಂದು ಕುರುಹನ್ನು ಬಿಟ್ಟೇ ಹೋಗಿರುತ್ತಾನೆ ಎನ್ನುವಂತೆ, ಇಲ್ಲೂ ಸಹಾ ಕೇವಲ ಉದ್ದನೆ ಗಡ್ಡ ಮತ್ತು ತಲೆ ಮೇಲೆ ಪಗಡಿ ಧರಿಸಿದರೇ ಸಿಖ್ಖರಾಗುವುದಿಲ್ಲ. ಸಿಖ್ಖರ ಗಡ್ಡಕ್ಕೆ ತಕ್ಕಂತೆ ಅನುಗುಣವಾಗಿಯೇ ಗಿರಿಜಾ ಮೀಸೆ ಇರುತ್ತದೆ. ಆದರೆ ಬಾಂಧವರಿಗೆ ಕೇವಲ ಗಡ್ಡ ಇರುತ್ತದೆ ಮೀಸೆ ಇರುವುದಿಲ್ಲ ಎಂಬ ಸತ್ಯವನ್ನು ಮರೆತ ಪರಿಣಾಮ ನಕಲೀ ಹೋರಾಟಗಾರರು ಪೋಲಿಸರಿಗೆ ಸುಲಭವಾಗಿ ಸಿಕ್ಕಿ ಬಿದ್ದರು.
ಇನ್ನು ಬಾಡಿಗೆ ಭಂಟರಿಗೆ ಸುಪಾರಿ ಕೊಟ್ಟು ತಾವು ಸಿಕ್ಕಿ ಕೊಳ್ಳಬಾರದೆಂದು ಊರು ಬಿಟ್ಟು ಹೋಗುವ ಅಪರಾಧಿಗಳಂತೆ, ಪಂಜಾಬಿನ ಕಾಂಗ್ರೇಸ್ ಸರ್ಕಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವಂತೆ ಛೂ ಬಿಟ್ಟು, ಆರೋಗ್ಯ ಮತ್ತು ಕೆಟ್ಟ ಹವಾಮಾನದ ಕುಂಟು ನೆಪವೊಡ್ಡಿ ಅಮ್ಮಾ ಮತ್ತು ಮಗ ಸದ್ದಿಲ್ಲದೇ ಗೋವಾ ಸೇರಿಕೊಂಡು ಪ್ರತಿಭಟನೆಗೂ ನಮಗೂ ಯಾವ ಸಂಬಂಧವೇ ಇಲ್ಲ ಎಂದು ತೋರಿಸಲು ಹೊರಟರೂ ಕಾಂಗ್ರೇಸ್ಸಿನ ಬಿರ್ಯಾನಿಯ ಘಮಲು ದೆಹಲಿಯಿಂದ ಗೋವಾವರೆಗೂ ಹಬ್ಬಿದ್ದಂತೂ ಸುಳ್ಳಲ್ಲ.
ಎಲ್ಲಾ ಹೋರಾಟದಲ್ಲೂ ಅದೇ ಬಾಡಿಗೆ ಓಲಾಟಗಾರಿಗೆ ಬೇರೆ ಬೇರೆ ದಿರಿಸಿನಲ್ಲಿ ಕಳುಹಿಸಿದರೂ, ಹುಟ್ಟು ಗುಣ ಸುಟ್ಟರೂ ಬಿಡದು ಎನ್ನುವಂತೆ, ಕೇಂದ್ರ ಸರ್ಕಾರದ ಕೃಷಿ ನೀತಿಯ ವಿರುದ್ಧ ರೈತರ ಹೋರಾಟದಲ್ಲಿ ಯಾವಾಗ CAA & NRC , Article 370 & 35A ಭಿತ್ತಿ ಫಲಕಗಳು ಕಂಡು ಬಂದ ಕೂಡಲೇ ಇಡೀ ದೇಶಕ್ಕೆ ಈ ನಕಲೀ ಓಲಾಟಗಾರು, ನಿಜವಾದ ರೈತರಲ್ಲ. ಅವರೆಲ್ಲರೂ ಬಿರ್ಯಾನಿ ಬಾಂಧವರು ಎಂಬುದು ಖಚಿತವಾಯಿತು. ಇದಲ್ಲದೇ ಎಂಭತ್ತರ ದಶಕದಲ್ಲಿ ಇದೇ ಕಾಂಗ್ರೇಸ್ಸಿನ ಅಂದಿನ ಅದಿದೇವತೆ ಇಂದಿರಾಗಾಂಧಿ ಪಂಜಾಬಿನಲ್ಲಿ ಬೆಳೆಸಿದ್ದ ಬಿಂದ್ರನ್ ವಾಲೆ ಎಂಬ ಬಂಟ ಸಿಖ್ಖರ ಪವಿತ್ರ ಗುರುದ್ವಾರ ಅಮೃತಸರದ ಸ್ವರ್ಣಮಂದಿರದಲ್ಲೇ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಾ, ಖಲಿಸ್ತಾನದ ಬೇಡಿಕೆ ಒಡ್ಡುತ್ತಾ ಸರ್ಕಾರಕ್ಕೇ ಮುಳ್ಳಾದನೋ ಅಗ ಅದೇ ಇಂದಿರಾಗಾಂಧಿ Operation Blue Star ಹೆಸರಿನಲ್ಲಿ ಗುರುದ್ವಾರದ ಮೇಲೆ ವಾರಗಟ್ಟಲೆ ಧಾಳಿ ನಡೆಸಿ ಹತ್ತಿಕ್ಕಿದ್ದ ಖಲಿಸ್ತಾನ್ ಬೇಡಿಕೆಗೆ ಈಗ ಅದೇ ಕಾಂಗ್ರೇಸ್ ಪರೋಕ್ಷವಾಗಿ ವೇದಿಕೆ ಒದಗಿಸುತ್ತಿರುವುದು ನಿಜಕೂ ದೇಶವಿರೋಧಿ ಚಟುವಟಿಕೆಯಾಗಿದೆ.
ಇನ್ನು ಮೊನ್ನೆ ಕೇಂದ್ರ ಸರ್ಕಾರ ಕೇವಲ 30 ರೈತ ಸಂಘಟನೆಗಳನ್ನು (ಉಳಿದ 800 ಕ್ಕೂ ಹೆಚ್ಚಿನ ರೈತ ಸಂಘನೆಗಳು ಇಂತಹ ಅನಾವಶ್ಯಕ ಪ್ರತಿಭಟನೆಯತ್ತ ತಲೆ ಹಾಕದೇ ತಮ್ಮ ಕೃಷಿ ಚಟುವಟಿಕೆಗಳಲ್ಲಿ ನಿರತವಾಗಿದೆ) ಇನ್ನು ರೈತರಿಗೆ ಮೋಸವಾಗಿದೆ ಎಂದು ಪ್ರತಿಭಟನೆ ಮಾಡಲು ಬಂದಿರುವರಾರು ನಿರ್ಗತಿಕ ರೈತರಾಗಿರದೇ ಬಹುತೇಕರು, ಐಶಾರಾಮಿ ಕಾರ್ ಗಳಾದ Nissa, Fartunure, Tyota ಗಳಲ್ಲಿ ಬಂದರೆ, ಇನ್ನೊಬ್ಬರು ನೇರವಾಗಿ ಹೆಲಿಕ್ಯಾಪ್ಟರ್ನಲ್ಲಿ ಬಂದದ್ದಾರೆ. ಜನ ಸಾಮಾನ್ಯರು ಹತ್ತು ಹದಿನೈದು ಸಾವಿರದ ಸ್ಮಾರ್ಟ್ ಫೋನ್ ತೆಗೆದುಕೊಳ್ಳುವುದಕ್ಕೇ ಹಿಂದೂ ಮುಂದು ನೋಡುತ್ತಿರುವಾಗ ಇಲ್ಲಿ ಬಂದಿರುವ ಅನೇಕ ರೈತರುಗಳ ಕೈಯಲ್ಲಿ ಸುಮಾರು ಒಂದು ಲಕ್ಷ ಬೆಲೆಬಾಳುವ ಸ್ಮಾರ್ಟ್ ಫೋನ್ಗಳು ಓಡಾಡುತ್ತಿವೆ ಎಂದರೆ ಅವರೆಂತಹ ಹೊಟ್ಟೇ ತುಂಬಿದ ರೈತರು ಎಂದು ಅರ್ಥವಾಗುತ್ತದೆ. ಸರ್ಕಾರದ ಅಧಿಕಾರಿಗಳು ಮತ್ತು ಮಂತ್ರಿಗಳ ಜೊತೆ ಮಾತು ಕತೆಗೆ ನಡೆಯುತ್ತಿದ್ದ ತಿಳಿದು ಬಂದ ಆಶ್ವರ್ಯಕರವಾದ ವಿಷವೇನೆಂದರೆ ಆ 30 ಸಂಘಟನೆಗಳ ನಾಯಕರುಗಳಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿಲ್ಲದೆ ಹೆಚ್ಚಿನವರಿಗೆ ತಾವು ಯಾವುದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಮತ್ತು ಆವರ ಆಕ್ಷೇಪಕ್ಕೆ ಇರುವ ಪರಿಹಾರವೇನು ಎಂಬುದೇ ತಿಳಿಯದಿರುವನ್ನು ಅರಿತ ಸರ್ಕಾರ ಮತ್ತೆ ಎರಡು ದಿನಗಳ ನಂತರ ನಿಮ್ಮೊಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ನಿಮ್ಮ ಆಕ್ಷೇಪಕ್ಕೆ ಸೂಕ್ತವಾದ ಉಪಾಯವನ್ನು ಕಂಡು ಹಿಡಿದುಕೊಂಡು ಬನ್ನಿ ಎಂದು ತಿಳಿಹೇಳಿ ಕಳುಹಿಸಿದೆ.
ಇದೆಲ್ಲಾ ಗಮನಿಸುತ್ತಿದ್ದಲ್ಲಿ ಈ ಹೋರಾಟ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟರು ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ನಕಲೀ ರೈತರನ್ನು ಭಾವಿಗೆ ದೂಡಿ ಆಳ ನೋಡುವಂತಿದೆ. ಇನ್ನು ಬಾಂಧವರು ತಮ್ಮ ಬಂಧುಗಳಿಗೆ ಬಿರ್ಯಾನಿ ಕೊಡುತ್ತಿದ್ದರೆ, ಕೇಜ್ರೀವಾಲ್ ಈ ನಕಲೀ ಓಲಾಟಾಗಾರರಿಗೆ ಹೊದಿಕೆಗಳನ್ನು ಕೊಡುತ್ತಾ, ಶಹೀನ್ ಭಾಗ್ -1ರಲ್ಲಿ ಪ್ರವರ್ಧಮಾನಕ್ಕೆ ಬಂದ ಬಲ್ಕಿಸ್ ಬಾನೂ ಎಂಬ ವಯೋವೃದ್ದ ಮಹಿಳೆಯನ್ನು ಕರೆತಂದು ಈ ಓಲಾಟವನ್ನು ಶಹೀನ್ ಭಾಗ್-2 ಮಾಡುವುದರಲ್ಲಿ ನಿರತವಾಗಿದೆ.
ಈ ರೀತಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ವಿವಿಧ ವೇಷಗಳಲ್ಲಿ ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಈ ನಕಲೀ ಓಲಾಟಗಳು ಸದ್ಯಕ್ಕಂತೂ ಸಫಲವಾಗದೇ, ತಮ್ಮ ತಮ್ಮಲ್ಲಿನ ಒಳಜಗಳಗಳಿಂದಲೇ ವಿಫಲವಾಗುವುದಲ್ಲದೇ, ಜನರ ಮುಂದೆ ಇವರ ಆಟೋಟಗಳೆಲ್ಲವೂ ಒಂದೊಂದೇ ಬಯಲಾಗುತ್ತಾ ಹೋಗಿ ಕಡೆಗೆ ಬೆತ್ತಲಾಗಿ ನಿಲ್ಲುವುದಂತೂ ನಿಚ್ಚಳವಾಗಿದೆ ಎನ್ನುವುದಂತೂ ಸತ್ಯ.
ರೈತ ದೇಶದ ಬೆನ್ನುಲುಬು. ಈ ನಕಲೀ ಓಲಾಟವನ್ನು ಎಲ್ಲರಿಗೂ ತಿಳಿಯಪಡಿಸುವ ಮೂಲಕ, ಇಷ್ಟು ವರ್ಷಗಳ ಕಾಲ ಅಂತಹ ರೈತನ ಬೆನ್ನು ಹಿಡಿದ ಬೇತಾಳರಾಗಿದ್ದಂತಹ ಬಂಡವಾಳಶಾಹಿಗಳು ಮತ್ತು ದಲ್ಲಾಳಿಗಳ ಪಕ್ಕೆಲುಬು ಮುರಿಯುವ ಸುಸಂಧರ್ಭವನ್ನು ಸದುಪಯೋಗ ಪಡಿಸಿಕೊಳ್ಳೋಣ.
ಏನಂತೀರೀ?