ಸುಮಾರು 175 ವರ್ಷಗಳ ಹಿಂದಿನ ಘಟನೆ. ಧನ್ಯಾ ಎಂಬ 50ರ ಪ್ರಾಯದ ಕೆಳಜಾತಿಗೆ ಸೇರಿದ ಮಹಿಳೆ ಒಬ್ಬರು ಅವರು ಕೆಲಸ ಮಾಡುತ್ತಿದ್ದ ಮನೆಯ 5 ವರ್ಷದ ಬ್ರಾಹ್ಮಣ ಹುಡುಗನನ್ನು ಬಲು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಅಕೆಗೆ ಆ ಬಾಲಕನ ಮೇಲೆ ಬಲು ಪ್ರೀತಿ. ಆತನೀಗೂ ಅಕೆಯೆಂದರೆ ಬಲು ಅಕ್ಕರೆ ಹಾಗಾಗಿ ಅವರಿಬ್ಬರೂ ಬಹಳ ಅನ್ಯೋನ್ಯತೆಯಿಂದ್ದಿದ್ದರು. ಅದೊಂದು ದಿನ ಆಕೆ ಆ ಬಾಲಕನೊಂದಿಗೆ ಒಂದು ವಿಷಯವನ್ನು ನಿವೇದಿಸಿಕೊಂಡಾಗ ಕೂಡಲೇ ಆ ಬಾಲಕ ಆಕೆಯ ಇಚ್ಛೆಯನ್ನು ಖಂಡಿತವಾಗಿಯೂ ನೆರವೇರಿಸಿಕೊಡುತ್ತೇನೆ ಎಂದು ಭಾಷೆ ಕೊಟ್ಟನು. ಆತ ಒಪ್ಪಿಕೊಂಡದ್ದು ಕೇಳಿ ಆಕೆಯ ಕಣ್ಗಳಲ್ಲಿ ಧನ್ಯತಾ ಭಾವದಿಂದ ಆನಂದಭಾಷ್ಪ ಹರಿದಿತ್ತು.
ನಿಜ ಹೇಳಬೇಕೆಂದರೆ, ಧನ್ಯಾ ಆ ಊರಿನ ಒಬ್ಬ ಬಡ ಮಧ್ಯಮನ ಹೆಂಡತಿಯಾಗಿದ್ದು ಆ ಊರಿನಲ್ಲಿ ಸೂಲಗಿತ್ತಿಯೂ ಆಗಿದ್ದಳು. ಆ ಬಾಲಕನ ತಾಯಿಯ ಹೆರಿಗೆಯೂ ಆಕೆಯ ಸಾರಥ್ಯದಲ್ಲಿಯೇ ನಡೆದಿತ್ತು. ಆ ಬಾಲಕನ ಮನೆಯಲ್ಲಿಯೇ ಆಕೆ ಕೆಲಸ ಮಾಡುತ್ತಿದ್ದ ಕಾರಣ, ಆ ಹುಡುಗನೊಂದಿಗೆ ವಿವರಿಸಲಾಗದ ಭಾವನಾತ್ಮಕ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿದ್ದಲ್ಲದೇ, ಆತ ಸದಾಕಾಲವೂ ತನ್ನ ಪರವಾಗಿದ್ದು ತನ್ನ ಕಡೆಯಗಾಲದಲ್ಲಿ ತನ್ನನ್ನು ನೋಡಿಕೊಳ್ಳುತ್ತಾನೆ ಎಂದೇ ಭಾವಿಸಿದ್ದಳು.
ಬಾಲಕನಿಗೆ ಹತ್ತರ ಪ್ರಾಯದಲ್ಲಿ ಮನೆಯವರು ಆತನಿಗೆ ಉಪನಯನ ಮಾಡಲು ನಿರ್ಧರಿಸಿದರು. ಆ ಹುಡುಗನ ಹಿರಿಯ ಸಹೋದರ ತನ್ನ ತಮ್ಮನಿಗೆ ಉಪನಯನದ ವೈಶಿಷ್ಟ್ಯ ಮತ್ತು ಉಪನಯನದ ನಂತರದ ನೀತಿ ಸಂಹಿತೆಗಳ ಬಗ್ಗೆ ವಿವರಿಸುತ್ತಿದ್ದಾಗಲೇ, ಮಾತೃ ಭಿಕ್ಷೆಯ ಬಗ್ಗೆ ವಿವರಿಸುತ್ತಾ, ಉಪನಯನದ ವಟು, ಭವತೀ ಭಿಕ್ಷಾಂ ದೇಹಿ ಎಂದು ತನ್ನ ತಾಯಿಯಿಂದ ಮೊದಲ ಭಿಕ್ಷೆಯನ್ನು ಪಡೆದು ಆಕೆಯ ಆಶೀರ್ವಾದವನ್ನು ಪಡೆಯಬೇಕು ಎಂದು ವಿವರಿಸಿದನು. ಪ್ರತಿಯೊಬ್ಬ ತಾಯಿಗೂ ಮಗನಿಗೆ ಮಾತೃ ಭಿಕ್ಷೆ ನೀಡಿ ಆಶೀರ್ವಾದ ಮಾಡುವುದು ಹೆಮ್ಮೆಯ ಸಂಗತಿಯಾಗಿರುತ್ತದೆ ಎಂದು ತಿಳಿಸಿದನು.
ಅಣ್ಣ ಈ ರೀತಿಯಾಗಿ ಮಾತೃ ಭಿಕ್ಷೆಯ ಬಗ್ಗೆ ವಿವರಿಸುತ್ತಿದ್ದಾಗ, ಅಣ್ಣನನ್ನು ಒಂದು ಕ್ಷಣ ತಡೆದು, ನಾನಂತೂ ಮೊದಲು ಮಾತೃ ಭಿಕ್ಷೆಯನ್ನು ಅಮ್ಮನಿಂದ ಸ್ವೀಕರಿಸದೇ ಧನ್ಯಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸುತ್ತೇನೆ ಎಂಬ ಮಾತು ಅವಳಿಗೆ ಮಾತು ಕೊಟ್ಟಿದ್ದೇನೆ ಎಂದು ಖಡಾಖಂಡಿತವಾಗಿ ಹೇಳಿದ್ದನ್ನು ಕೇಳಿದ ಅಣ್ಣ ಒಂದು ಕ್ಷಣ ವಿಚಲಿತನಾಗಿ, ನೋಡು ನಮ್ಮ ಸಂಪ್ರದಾಯವನ್ನು ನಮ್ಮಿಷ್ಟಕ್ಕೆ ನಾವು ಬದಲಿಸಲಾಗದು. ಇದರಿಂದ ಕುಟುಂಬದವರೆಲ್ಲರಿಗೂ ಬೇಸರವಾಗುತ್ತದೆ ಎಂದು ಎಚ್ಚರಿಸಿದ.
ನೋಡು ಅಣ್ಣಾ, ರಾಮಾಯಣದಲ್ಲಿ ದಶರಥ ಕೈಕೇಯಿಗೆ ಕೊಟ್ಟ ಮಾತನ್ನು ನಡೆಸಿಕೊಡುವ ಸಲುವಾಗಿ ರಾಮ ಕಾಡಿಗೆ ಹೊರಟಾಗ, ಕುಟುಂಬದ ಹಿರಿಯರೂ ಸೇರಿದಂತೆ ಇಡೀ ರಾಜ್ಯವೇ ರಾಮನನ್ನು ಕಾಡಿಗೆ ಹೋಗದಂತೆ ವಿನಂತಿಸಿಕೊಂಡರು. ಆದರೆ ರಾಮ, ತನ್ನ ತಂದೆಗೆ ನೀಡಿದ ವಾಗ್ದಾನವನ್ನು ಮುರಿಯಲು ಇಚ್ಚಿಸದೇ, ಕಾಡಿಗೆ ಸೀತೆ ಮತ್ತು ಲಕ್ಷ್ಮಣನೊಂದಿಗೆ ಹೊರಟೇ ಬಿಟ್ಟ. ಅದೇ ರೀತಿಯಲ್ಲಿ ನಾನು ಕೂಡಾ ಆಕೆಗೆ ಭಾಷೆ ಕೊಟ್ಟಿದ್ದೇನೆ ಹಾಗಾಗಿ ಅದನ್ನು ಉಳಿಸಿಕೊಂಡೇ ತೀರುತ್ತೇನೆ. ಹಾಗೆ ಮಾಡದಿದ್ದಲ್ಲಿ ಉಪನಯನದಲ್ಲಿ ಧರಿಸುವ ಯಜ್ಞೋಪವಿತಕ್ಕೆ ಪಾವಿತ್ರವೇ ಇರುವುದಿಲ್ಲ ಎಂದನು. ಏನೋ ಹುಡುಗು ಬುದ್ಧಿಯಿಂದ ಹೇಳುತ್ತಿದ್ದಾನೆ ಎಂದು ಅಣ್ಣನೂ ಮಾತನ್ನು ಮುಂದುವರಿಸಲಿಲ್ಲ.
ಉಪನಯನದ ದಿನ ಬಂದೇ ಬಿಟ್ಟಿತು. ಮನೆಯಲ್ಲಿ ತಳಿರು ತೋರಣ, ಬಂಧು ಮಿತ್ರರೆಲ್ಲರೂ ಆಗಮನ, ಮಂಗಳವಾದ್ಯಗಳ ನಡುವೆ ಪುರೋಹಿತರ ಸಾರಥ್ಯದಲ್ಲಿ ಶಾಸ್ತ್ರೋಕ್ತವಾಗಿ ಯಜ್ಞೋಪವೀತ ಧಾರಣೇ ಮುಗಿದು ತಂದೆಯಿಂದ ಗಾಯತ್ರೀ ಮಂತ್ರದ ಉಪದೇಶವೂ ಮುಗಿಯಿತು. ಪುರೋಹಿತರು ಇನ್ನೇನು ಮಾತೃ ಭಿಕ್ಷೆ ಪ್ರಾರಂಭವಾಗಲಿದೆ. ಹುಡುಗನ ತಾಯಿ ಮತ್ತು ಇತರೇ ಹೆಂಗಸರು ವಟುವಿಗೆ ಭಿಕ್ಷೆ ನೀಡಲು ಸಿದ್ಧರಾಗಿ ಎಂದು ಗಟ್ಟಿಧನಿಯಲ್ಲಿ ಹೇಳಿದರು.
ಆ ಹುಡುಗನ ತಾಯಿ ಬಹಳ ಪ್ರೀತಿಯಿಂದ ಮಗನಿಗೆ ಮೊದಲ ಭಿಕ್ಷೆ ನೀಡಲು ಸಿದ್ಧರಾಗಿದ್ದರು. ಆದರೆ ಆ ಬಾಲಕ ತನ್ನ ತಾಯಿಯಿಂದ ಮೊದಲ ಭಿಕ್ಷೆ ಸ್ವೀಕರಿಸದೇ, ಕೊಟ್ಟ ಮಾತಿನಂತೇ ನೇರವಾಗಿ ಮನೆಯ ಒಂದು ಮೂಲೆಯಲ್ಲಿ ಕೈಯಲ್ಲಿ ಸಣ್ಣ ಚೀಲವನ್ನು ಹಿಡಿದಿದ್ದ ಧನ್ಯಾಳ ಬಳಿ ಹೋಗಿ ಭವತೀ ಭಿಕ್ಷಾಂ ದೇಹಿ ಎಂದು ಕೇಳಿದಾಗ, ಉಪನಯನಕ್ಕೆ ಬಂದಿದ್ದ ಎಲ್ಲಾ ಬ್ರಾಹ್ಮಣ ಪಂಡಿತರು ಮತ್ತು ಹೆಂಗಸರು ಆಶ್ಚರ್ಯಚಕಿತರಾದರು. ಅಸ್ಪೃಶ್ಯತೆಯು ಉತ್ತುಂಗದಲ್ಲಿದ್ದಾಗ ಕೆಳಜಾತಿಯ ಮಹಿಳೆಯೊಬ್ಬರಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಲು ಬ್ರಾಹ್ಮಣ ಬಾಲಕ ನಿಂತಿದ್ದ. ಧನ್ಯಳೂ ಕೂಡಾ ಬಹಳ ಅಕ್ಕರೆಯಿಂದ ತಾನು ತಂದಿದ್ದ ಅಕ್ಕಿ ಮತ್ತು ಹಣ್ಣುಗಳನ್ನು ಬಾಲಕನ ತಟ್ಟೆಯೊಳಗಿಟ್ಟಳು. ಬಾಲಕ ವಿನಯಪೂರ್ವಕವಾಗಿ ಆದನ್ನು ಸ್ವೀಕರಿಸಿ, ಆಕೆಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದ. ಆಕೆಯೂ ಅವಳ ಹೆಸರಿಗೆ ಅನ್ವರ್ಥದಂತೆ ಧನ್ಯತಾ ಭಾವದಿಂದ ಮನಸಾರೆ ಆ ಬಾಲಕನನ್ನು ಹರಸಿದ್ದಲ್ಲದೇ, ಮಗು ನನ್ನ ಜೀವನದ ಏಕೈಕ ಕೋರಿಕೆಯನ್ನು ಈಡೇರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಪ್ರತಿವಂದಿಸಿದಳು. ಇಬ್ಬರ ಕಣ್ಗಳಲ್ಲೂ ಧಾರಾಕಾರವಾದ ನೀರು ಹರಿಯುತ್ತಿತ್ತು.
ಈ ಘಟನೆಯನ್ನು ನೋಡಿದ ಆ ಹುಡುಗನ ಅಣ್ಣ. ಇನ್ನು ಆಯಿತು. ಕುಟುಂಬದವರೆಲ್ಲರೂ ತಮ್ಮನ ಮೇಲೆ ಹೌರಾರುತ್ತಾರೆ ಎಂದೇ ಭಾವಿಸಿ ಕಂಗಾಲಾದ. ಅಚ್ಚರಿಯಂತೆ ಆದಾವ ಘಟನೆಗಳೂ ಆಗದೇ, ಪೌರೋಹಿತ್ಯವಹಿಸಿದ್ದ ಮುಖ್ಯ ಪಂಡಿತರು ಆ ಹುಡುಗನ ಸತ್ಯ ವಾಕ್ಯ ಪರಿಪಾಲನೆ ಮಾಡಿದ್ದಕ್ಕಾಗಿ ಮೆಚ್ಚಿಕೊಂಡಿದ್ದಲ್ಲದೇ, ಅವನಿಗೆ ಹೃದಯಪೂರ್ವಕವಾಗಿ ಆಶೀರ್ವದಿಸಿದರು. ಈ ಅವಿಸ್ಮರಣೀಯ ಘಟನೆ ಅರ್ಥಾತ್ ಒಂದು ರೀತಿಯ ಮೌನ ಕ್ರಾಂತಿ ನಡೆದದ್ದು ಪಶ್ಚಿಮ ಬಂಗಾಳದ ಒಂದು ಸಣ್ಣ ಹಳ್ಳಿಯಲ್ಲಿ. ಆ ಹುಡುಗನ ಹೆಸರು ಗಧಾಧರ್ ಎಂದಾಗಿದ್ದು ಮುಂದೆ ಆ ಬಾಲಕನೇ ರಾಮಕೃಷ್ಣ ಪರಮಹಂಸರಾಗಿ ಜನಪ್ರಿಯರಾದರು.
ರಾಮಕೃಷ್ಣ ಪರಮಹಂಸರು, ಜಾತೀ, ಮತ, ಧರ್ಮಗಳೆಲ್ಲವನ್ನೂ ಮೀರಿ ಪ್ರೀತಿ ಮತ್ತು ವಾತ್ಸಲ್ಯಮಯವಾದ ಪರಿಸರವನ್ನು ಬೆಳೆಸಿದ್ದಲ್ಲದೇ, ನರೇಂದ್ರ ಎಂಬ ಅಬ್ರಾಹ್ಮಣ ಯುವಕನಿಗೆ ಸನ್ಯಾಸತ್ವದ ದೀಕ್ಷೇ ನೀಡಿ, ಇಡೀ ವಿಶ್ವವೇ ಕೊಂಡಾಡುವಂತಹ ಸ್ವಾಮೀ ವಿವೇಕಾನಂದರಾಗುವಂತೆ ಮಾಡಿದ್ದಲ್ಲದೇ, ಇಡೀ ವಿಶ್ವಕ್ಕೇ ಹಿಂದೂ ಧರ್ಮದ ಬಗ್ಗೆ ಇದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಅನುವು ಮಾಡಿಕೊಟ್ಟರು.
ಮೊನ್ನೆಯಿಂದ ಅದಾವುದೋ ದೇವಸ್ಥಾನದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡಿದರು ಎಂಬ ವಿಷಯವನ್ನೇ ಮುಂದಿಟ್ಟುಕೊಂಡು, ಹಿಂದೂಗಳನ್ನು ಒಡೆಯಲು ಹುನ್ನಾರ ನಡೆಸಿರುವ ಕೆಲ ಪಟ್ಟ ಭದ್ರಹಿತಾಸಕ್ತಿಯ ಜನ ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿರುವುದನ್ನು ನೋಡಿ ಈ ಘಟನೆಯನ್ನು ಮತ್ತೆ ಎಲ್ಲರಿಗೂ ತಿಳಿಸುವ ಮನಸ್ಸಾಯಿತು. ನಿಜ ಹೇಳಬೇಕೆಂದರೆ ಮೇಲಿನ ಘಟನೆಯೂ ಸೇರಿದಂತೆ ದಲಿತರನ್ನು ಮುಖ್ಯ ವಾಹಿನಿಗೆ ತರುವುದರಲ್ಲಿ ಪ್ರಮುಖವಾದ ಪಾತ್ರ ವಹಿಸಿದವರು ಬ್ರಾಹ್ಮಣರೇ ಎನ್ನುವುದು ಅಕ್ಷರಶಃ ಸತ್ಯ. ದಲಿತ ನಾಯಕರೇ ತಮ್ಮ ಪಂಗಡಗಳು ಮುಖ್ಯವಾಹಿನಿಗೆ ಬರಲು ಅಡ್ಡಗಾಲು ಹಾಕುತ್ತಿರುವುದು ಸುಳ್ಳೇನಲ್ಲ.
ನಮ್ಮ ಸನಾತನ ಧರ್ಮದಲ್ಲಿ ಅವರವರು ಮಾಡುತ್ತಿದ್ದ ಕೆಲಸಕ್ಕೆ ಅನುಗುಣವಾಗಿ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ ಎಂಬ ವರ್ಣಾಶ್ರಮ ರೂಡಿಯಲ್ಲಿತ್ತು. ಕ್ರಮೇಣ ಆ ವರ್ಣಾಶ್ರಮವೇ ಜಾತಿಯ ರೂಪತಳೆದು ವೃತ್ತಿಯಾಧಾರಿತವಾಗಿ ಬದಲಾಗಿ ಜನ್ಮತಃ ಈ ಜಾತಿ ಪದ್ದತಿ ಆಚರಣೆಗೆ ರೂಡಿಗೆ ಬಂದ್ದದ್ದು ದುರಾದೃಷ್ಟಕರವಾದ ಸಂಗತಿಯಾಗಿತ್ತು.
ಆಗ ಬ್ರಾಹ್ಮಣರ ಕುಲದಲ್ಲಿ ಹುಟ್ಟಿದವರು ಆಚಾರ ವಿಚಾರಗಳಿಗೆ ಒತ್ತು ಕೊಟ್ಟು ಶಾಸ್ತ್ರ ಸಂಪ್ರದಾಯಗಳ ಜೊತೆ ಸಂಸ್ಕೃತ, ವೇದಾಧ್ಯಯನಗಳನ್ನು ಮಾಡಿ ಪ್ರತಿನಿತ್ಯ ಸ್ನಾನ ಸಂಧ್ಯವಂದನೆ, ನಿತ್ಯ ಪೂಜೆ ಜಪ ತಪಗಳನ್ನು ಮಾಡುತ್ತಾ ದೇವರ ಪೂಜೆಗಳನ್ನು ಮಾಡುತ್ತಾ ನಮ್ಮ ಸನಾತನ ಸಂಪ್ರದಾಯದ ರಾಜರಾಯಭಾರಿಗಳಾಗಿ ಇಡೀ ಸಮಾಜವೆಲ್ಲಾ ಸನಾತನ ಸಂಪ್ರದಾಯವನ್ನು ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ಧಾರಿಯನ್ನು ಹೊತ್ತಿದ್ದ ಕಾರಣ ಪುರೋಹಿತರು (ಪುರದ ಹಿತವನ್ನೇ ಬಯಸುವವರು) ಎಂದೇ ಪ್ರಖ್ಯಾತರಾದರು. ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು ಎಲ್ಲರಿಗೂ ಒಳ್ಳೆಯದಾಗಲೀ ಎಂದು ನಿಸ್ವಾರ್ಥವಾಗಿ ಎಲ್ಲರನ್ನೂ ಹಾರೈಸುತ್ತಿದ್ದರು. ಹಾಗಾಗಿ ಇತರೇ ವರ್ಣಾಶ್ರಮದವರೂ ಬ್ರಾಹ್ಮಣರಿಗೆ ಅತ್ಯಂತ ಗೌರವವನ್ನು ಕೊಡುತ್ತಿದ್ದರಲ್ಲದೇ, ತಾವು ಬೆಳೆದಿದ್ದ ಬೆಳೆಯಲ್ಲಿ ಸ್ವಲ್ಪ ಪಾಲನ್ನು ಅವರಿಗೆ ಕೊಡುವ ಮೂಲಕ ಬಹಳ ಸ್ನೇಹ ಸೌಹಾರ್ಧತೆಗಳಿಂದ ಜೀವನ ನಡೆಸುತ್ತಿದ್ದರು.
ನಮ್ಮ ದೇಶದ ಇತಿಹಾಸವನ್ನು ಅವಲೋಕಿಸಿದರೇ ಕರ್ನಾಟಕದಲ್ಲಿ ಮಯೂರ ಶರ್ಮ ಮತ್ತು ಬಿಹಾರದ ಮಿಥಿಲೆಯಲ್ಲಿ ಮಾತ್ರಾ ಕೆಲ ಕಾಲ ರಾಜರಾಗಿದ್ದರೇ ವಿನಃ ಉಳಿದೆಲ್ಲಾ ಕಡೆ ಬ್ರಾಹ್ಮಣರು ರಾಜಾಶ್ರಯದಲ್ಲಿಯೇ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದರು. ಜೈನ ಧರ್ಮ ಮತ್ತು ಬೌದ್ಧ ಧರ್ಮದ ಆಕರ್ಷಣೆಗೊಳಗಾಗಿ ಸಮೂಹ ಸನ್ನಿಯಂತೆ ಹಿಂದೂಗಳು ಅನ್ಯ ಧರ್ಮಗಳಿಗೆ ಮತಾಂತರವಾಗುತ್ತಿದ್ದಾಗ ಸನಾತನ ಧರ್ಮದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದವರು ಆದಿಗುರು ಶಂಕರಾರ್ಯರಾದರೇ, ನಂತರ ಬಂದ ರಾಮಾನಾಜಾಚಾರ್ಯರು ಮತ್ತು ಮಧ್ವಾಚಾರ್ಯರು ಅದನ್ನೇ ಮುಂದು ವರೆಸಿ ಸನಾತನ ಧರ್ಮವನ್ನು ಕಾಪಾಡಿದರು. ನಾಡಿನಲ್ಲಿ ದೌರ್ಜನ್ಯಗಳು ಮತ್ತು ದಂಗೆಗಳು ನಡೆದಾಗ ಕ್ಷತ್ರೀಯರ ಕ್ಷಾತ್ರ ತೇಜವನ್ನು ಬಡಿದೆಚ್ಚರಿಸಿ ಚಂದ್ರಗುಪ್ತ ಮೌರ್ಯನಿಗೆ ಪಟ್ಟಾಭಿಷೇಕ ಮಾಡಿದ ಚಾಣಕ್ಯ ಮತ್ತು ಮೊಘಲರ ಧಾಳಿಗೆ ಸಿಕ್ಕು ಹಿಂದೂ ಧರ್ಮ ಅವಸಾನದ ಅಂಚಿಗೆ ಹೋಗಿದ್ದಾಗ ಹಕ್ಕ ಬುಕ್ಕರಿಗೆ ಧೈರ್ಯ ತುಂಬಿ ವಿಜಯನಗರದ ಹಿಂದೂ ಸಾಮ್ರಾಜ್ಯವನ್ನು ಕಟ್ಟಿದರು ಗುರು ವಿದ್ಯಾರಣ್ಯರು. ಹೀಗೆ ಬ್ರಾಹ್ಮಣರು king makerಗಳು ಆದರೇ ಹೊರತುಅವರೆಂದೂ kingಗಳಾಗಲಿಲ್ಲ.
ತಮ್ಮ ಸ್ವಸಾಮರ್ಥ್ಯದಿಂದ ಬುದ್ಧಿ ಶಕ್ತಿಯಿಂದ ಉನ್ನತ ಸ್ಥಾನ ಮಾನ ಗಳಿಸಿದರೇ ಹೊರತು ಯಾರದ್ದೋ ತಲೆ ಹಿಡಿದೋ ಇಲ್ಲವೇ, ಯಾರ ಮೇಲೆ ದಂಡೆದ್ದು ಹೋಗಿ ಅಧಿಕಾರವನ್ನು ಗಳಿಸಿದವರಲ್ಲ. ಕಳೆದ ಇನ್ನೂರು ಮೂನ್ನೂರು ವರ್ಷಗಳಲ್ಲಿ ಬ್ರಾಹ್ಮಣರು ಯಾರ ಮೇಲೆಯೂ ದಬ್ಬಾಳಿಕೆ ನಡೆಸಿದ ಯಾವುದೇ ಉದಾರಣೆಗಳು ಇಲ್ಲ. ಜನ್ಮತಃ ಬುದ್ಧಿವಂತರಾಗಿದ್ದ ಕಾರಣ ಇಂಗ್ಲೀಷನ್ನು ಅತ್ಯಂತ ಸುಲಭವಾಗಿ ಕಲಿತ ಬ್ರಾಹ್ಮಣರಲ್ಲಿ ಕೆಲವರು ಅವರ ಆಳ್ವಿಕೆಯಲ್ಲಿ ಉನ್ನತ ಸ್ಥಾನಮಾನ ಗಳಿಸಿದರೆ, ಸ್ವಾಭೀಮಾನಿಗಳಾದ ಹಲವರು ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯ ಹೋರಾಟಗಳಲ್ಲಿ ಸ್ವಾಭಾವಿಕವಾಗಿಯೇ ನಾಯಕರಾಗಿ ಸಮಾಜಕ್ಕಾಗಿ ಹೋರಾಡಿದರೇ ಹೊರತು ಸ್ವಾರ್ಥಕ್ಕಾಗಿ ಅಲ್ಲವೇ ಅಲ್ಲ.
ಸಮಾಜದಲ್ಲಿ ಅತ್ಯಂತ ಗೌರವ ಹೊಂದಿದ್ದ ಮತ್ತು ಎಲ್ಲರೂ ಅವರ ಮಾತನ್ನು ಕೇಳುತ್ತಿದ್ದ ಈ ಬುದ್ಧಿವಂತ ಬ್ರಾಹ್ಮಣರು ತಮ್ಮ ವಿರುದ್ಧ ಸಿಡಿದೆದ್ದೇಳಿದ್ದನ್ನು ಗಮನಿಸಿದ ಬ್ರಿಟೀಷರು ಭಾರತೀಯರನ್ನು ಒಡೆಯುವ ಸಲುವಾಗಿ ಇತರೇ ಜನರನ್ನು ಬ್ರಾಹ್ಮಣರ ವಿರುದ್ಧ ಎತ್ತಿ ಕಟ್ಟಿದ್ದಲ್ಲದೇ, ಹಳ್ಳಿಗಳಲ್ಲಿ ದಲಿತರನ್ನು ಸವರ್ಣೀಯರು (ಸವರ್ಣೀಯರು ಎಂದರೆ ಕೇವಲ ಬ್ರಾಹ್ಮಣರಲ್ಲದೇ ಎಲ್ಲಾ ಮೇಲ್ಜಾತಿಯವರೂ ಸೇರುತ್ತಾರೆ)ವಿರುದ್ಧ ಎತ್ತಿ ಕಟ್ಟಿದ್ದಲ್ಲದೇ ಅದಕ್ಕೆ ಬ್ರಾಹ್ಮಣರೇ ಕಾರಣರು ಎಂಬ ಕಾಗಕ್ಕಾ ಗುಬ್ಬಕ್ಕ ಕಥೆಯನ್ನು ಹರಿಬಿಟ್ಟರು.
ಬ್ರಿಟೀಷರು ಭಾರತ ಬಿಟ್ಟು ಹೋದರೂ ಅವರ ಜಾಗದಲ್ಲಿ ವಕ್ಕರಿಸಿದ ಕಮ್ಯೂನಿಷ್ಟರು ಮತ್ತು ತಮ್ಮ ರಾಜಕೀಯ ಅಸ್ಥಿತ್ವ ಮತ್ತು ಅಸ್ಮಿತೆಯಾಗಿ ಕೆಲವು ಪಟ್ಟ ಭಧ್ರ ಹಿತಾಸಕ್ತಿಗಾಗಿ ಬ್ರಿಟೀಷರು ಹರಿಬಿಟ್ಟ ಅದೇ ಕಾಗಕ್ಕಾ ಗುಬ್ಬಕ್ಕ ಕಥೆಯನ್ನೇ ಇಂದಿಗೂ ಮುಂದುವರೆಸಿಕೊಂಡು ವಿನಾಕಾರಣ ಸಣ್ಣ ಪುಟ್ಟ ವಿಷಯಗಳನ್ನೂ ದೊಡ್ಡದು ಮಾಡುತ್ತಾ ಜಾತಿಯ ವಿಷ ಬೀಜ ಬಿತ್ತುತ್ತಾ ದಂಗೆ ಎಬ್ಬಿಸುತ್ತಾ ದೇಶ ಮತೊಮ್ಮೆ ವಿಭಜಿಸುವ ಕಾಯಕದಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.
ಯಾರು ತುಳಿತಕ್ಕೆ ಒಳಗಾಗಿದ್ದಾರೋ ಅವರನ್ನು ದಲಿತರು ಎನ್ನುತ್ತಾರೆಯೇ ಹೊರತು ದಲಿತರು ಎಂಬ ವಿಶೇಷವಾದ ಪಂಗಡವೇ ಇಲ್ಲ. ಎಲ್ಲಾ ಜಾತಿಯಲ್ಲೂ ದಲಿತರು ಇದ್ದಾರೆ. ಆದರೆ ಕೆಲ ರಾಜಕೀಯ ನಾಯಕರು ಅಲ್ಪ ಸಂಖ್ಯಾ
ತರು, ಹಿಂದುಳಿದವರು ಮತ್ತು ದಲಿತರು ಎಂಬ ಪ್ರತ್ಯೇಕ ಪಂಗಡವನ್ನೇ ಹುಟ್ಟು ಹಾಕಿ ಅವರನ್ನು ಎತ್ತಿಕಟ್ಟುವುದರಲ್ಲಿ ಬಹುತೇಕ ಸಫಲರಾಗಿರುವುದು ಈ ದೇಶದ ಅವನತಿಗೆ ಕಾರಣರಾಗಿದೆ. ಎಲ್ಲಾ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಬೇಕೆಂದು ಬಯಸಿ ಸ್ವಾತಂತ್ರ್ಯಾನಂತರ ಕೆಲವರಿಗೆ ಕೆಲವು ಮೀಸಲಾತಿ ಸೌಲಭ್ಯಗಳನ್ನು ಕೇವಲ ಹತ್ತು ವರ್ಷಗಳು ಮಾತ್ರವೇ ಇರಬೇಕೆಂದು ಸಂವಿಧಾನದ ಕರಡು ಸಮಿತಿಯ ಮುಖ್ಯಸ್ಥರಾಗಿದ್ದ ಶ್ರೀ ಅಂಬೇಡ್ಕರ್ ಬಯಸಿದ್ದರು.
ದುರಾದೃಷ್ಟವಷಾತ್ ಮಾತೆತ್ತಿದರೇ ಅಂಬೇಡ್ಕರ್ ಹೆಸರೆತ್ತುವ ಆದರೆ ಅಂಬೇಡ್ಕರ್ ಅವರ ಬಗ್ಗೆ ಸ್ವಲ್ಪವೂ ತಿಳಿಯದ ಕೆಲವರು ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡು ತಾವು ಉದ್ದಾರವಾಗಿದ್ದಲ್ಲದೇ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇದೇ ಮೀಸಲಾತಿಯನ್ನು ಎಪ್ಪತ್ತು ವರ್ಷಗಳವರೆಗೂ ಮುಂದುವರೆಸಿಕೊಂಡು ಜನರನ್ನು ಎತ್ತಿ ಕಟ್ಟುತ್ತಾ ದೇಶವನ್ನು ಹಾಳುಗೆಡುವುತ್ತಿದ್ದಾರೆ ಎಂದರೂ ತಪ್ಪಾಗಲಾರದು.
ಪದೇ ಪದೇ ಬ್ರಾಹ್ಮಣರ ಊಟದ ವಿಷಯದಲ್ಲಿ, ತಟ್ಟೆ ಕಾಸಿನ ವಿಚಾರದಲ್ಲಿ ಸಮಾನತೆ ಕೇಳುವವರಿಗೆ ಒಂದು ನೇರ ಪ್ರಶ್ನೆ. ಶೇ90ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದರೂ, ಕೇವಲ ಶೇ35 ಗಳಿಸಿದರವರ ಜೊತೆ ಶಾಲಾ ಕಾಲೇಜುಗಳಲ್ಲಿ, ಕೆಲಸ ಗಿಟ್ಟಿಸುವಲ್ಲಿ, ನಂತರ ಭಡ್ತಿ ಕೊಡುವುದರಲ್ಲೂ ಹೊರಾಡಬೇಕಾಗಿರುವ ಅಸಹ್ಯಕರ ಅಸಮಾನತೆ ಬಗ್ಗೆ ಚರ್ಚೆ ನಡೆಸಲು ಸಿದ್ಧರಿದ್ದಾರೆಯೇ?
ಮಾತೆತ್ತಿದರೆ ಅಂಬೇಡ್ಕರ್ ಹೆಸರು ಎತ್ತುವವರು, ಅಂಬೇಡ್ಕರ್ ಹೇಳಿದಂತೆ ಹತ್ತು ವರ್ಷಗಳ ನಂತರ ಮೀಸಲಾತಿ ತೆಗೆಯದೇ ಎಪ್ಪತ್ತು ವರ್ಷಗಳ ನಂತರವೂ ಮುಂದುವರೆಸಿಕೊಂಡು ಹೋಗುತ್ತಿರುವ ವಿರುದ್ಧ ಸೊಲ್ಲೇಕೆ ಎತ್ತುವುದಿಲ್ಲ?
ದೇವಸ್ಥಾನಕ್ಕೆ ಹೋಗುವುದು ದೇವರ ದರ್ಶನಕ್ಕೋ ಅಥವಾ ಅರ್ಚಕರ ತಟ್ಟೇ ಕಾಸಿನ್ನು ಎಣಿಸಲೋ? ಎಂಬುದನ್ನು ತಿಳಿಸಲಿ. ನಿಜವಾಗಲೂ ಅವರಿಗೆ ದೇವರ ಮೇಲೆ ಭಕ್ತಿ ಇದ್ದಲ್ಲಿ ವೇದ ಮತ್ತು ಆಗಮ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿತು ತಮ್ಮ ಆಹಾರ ಪದ್ದತಿಗಳನ್ನು ಬದಲಿಸಿಕೊಂಡು ಅರ್ಚಕ ವೃತ್ತಿಯನ್ನು ಮಾಡಿದಲ್ಲಿ ಯಾವ ಬ್ರಾಹ್ಮಣರೂ ಖಂಡಿತವಾಗಿಯೂ ವಿರೋಧಿಸುವುದಿಲ್ಲ.
ಇನ್ನೂ ಕೆಲವರು ರಾಷ್ಟ್ರ ಕವಿ ಕುವೆಂಪು ಅವರನ್ನು ಎಳೆದು ತಂದು ಅವರು ಪ್ರತಿಪಾದಿಸಿದ ವಿಶ್ವಮಾನವತೆಯ ಬಗ್ಗೆ ತೌಡು ಕುಟ್ಟುತ್ತಾ ವಿತಂಡ ವಾದ ಶುರು ಮಾಡುತ್ತಾರೆ, ಅಂತಹವರಿಗೆ ಒಂದು ಪಂಥಾಹ್ವಾನ. ಮನುಜಮತ ವಿಶ್ವಪಥ, ಯಾವುದೇ ಮತದ ಹಂಗಿಲ್ಲದೆ ನಾವೆಲ್ಲರೂ ಒಂದೇ ನಮಗೆ ಸಂಸ್ಕೃತ ಭಾಷೆಯ ಮಂತ್ರಗಳು ಬೇಡ, ಒಂದೇ ದೇಶ ಒಂದೇ ಕಾನೂನು. ಯಾರಿಗೂ ಯಾವುದೇ ಮೀಸಲಾತಿ ಬೇಡ. ಅರ್ಹತೆ ಇದ್ದವರು ಅಧಿಕಾರ ಗಳಿಸಲಿ ಎಂಬುದನ್ನು ಒಪ್ಪುತ್ತಾರೆಯೇ ಕೇಳಿ ನೋಡಿ.
ಈ ರೀತಿಯ ಸಮಾನತೆಗೆ ಯಾವೊಬ್ಬರೂ ಖಂಡಿತವಾಗಿಯೂ ಮುಂದಾಗುವುದಿಲ್ಲ. ಅವರೇ ಒಪ್ಪುವ ಸಂವಿಧಾನದಲ್ಲಿಯೇ ತಿಳಿಸಿರುವಂತೆ ಬಹು ಧರ್ಮಾಧಾರಿತ ಬಹು ಬಾಷೆ ಮತ್ತು ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ದೇಶದಲ್ಲಿ ಎಲ್ಲರಿಗೂ ಅವರವರ ಧಾರ್ಮಿಕ ನಂಬಿಕೆ ಮತ್ತು ಆಚಾರ ವಿಚಾರಗಳನ್ನು ಅನುಸರಿಸುವ ಸ್ವಾತಂತ್ರ್ಯವಿರುವಾಗ ಕೇವಲ ಬ್ರಾಹ್ಮಣರನ್ನು ಮಾತ್ರ ನಿಂದಿಸುವುದು ಎಷ್ಟು ಸರಿ? ಖಂಡಿತವಾಗಿಯೂ ಇದೊಂದು ಷಡ್ಯಂತ್ರವಲ್ಲದೇ ಬೇರೇನೂ ಅಲ್ಲ.
ಜಾತಿಗೊಂದು ಮಠ. ಮಠಕ್ಕೊಬ್ಬರು ಪೀಠಾಧಿಪತಿಗಳು, ಆ ಪೀಠಾಧಿಪತಿಗಳ ಆಣತಿಯ ಮೇರೆಗೇ ಮೀಸಲಾತಿ ಕೊಡಬೇಕು. ಅದರಲ್ಲೂ ಎಡಗೈ ಮತ್ತು ಬಲಗೈ ಎಂಬ ವಿಂಗಡನೆ. ಅವರ ಜಾತಿಯ ಹತ್ತಾರು ಶಾಸಕರು ಸಾಂದದರನ್ನು ಆಯ್ಕೆಮಾಡಿ ಅವರ ಇಚ್ಚೆಯಂತೆಯೇ ಮಂತ್ರಿಗಳನ್ನು ಮಾಡಬೇಕು ಇಲ್ಲದಿದ್ದಲ್ಲಿ ಸಮಾಜದಿಂದ ಬಂಡೇಳುತ್ತೇವೆ. ಅನ್ಯಧರ್ಮಕ್ಕೆ ಸಾಮೂಹಿಕ ಮತಾಂತರ ಆಗುತ್ತೇವೆ ಎನ್ನುವವರ ವಿರುದ್ಧ ಈ ರೀತಿಯ ಯಾವುದೇ ವಿರೋಧಗಳು ನಡೆದದ್ದನ್ನು ಕಂಡೇ ಇಲ್ಲ.
ಇನ್ನೂ ಮುಂದೇ ಹೋಗಿ, ನಮ್ಮ ಧರ್ಮದಲ್ಲಿ ಜಾತೀಯ ತಾರತಮ್ಯತೆ, ಅಸಮಾನತೆ ಮತ್ತು ಅಸಹಿಷ್ಣುತೆ ಇದೆ ಎಂದು ಅನ್ಯಧರ್ಮಕ್ಕೆ ಹೋಗಿಯೂ ಮೀಸಲಾತಿಯನ್ನು ಪಡೆಯುತ್ತಿರುವವರ ವಿರುದ್ಧ ದೇಶದಲ್ಲಿ ಪ್ರತಿಭಟನೆ ಮಾಡಿದ್ದನ್ನು ಎಲ್ಲಿಯೂ ಕಂಡಿದ್ದಾಗಲೀ ಕೇಳಿದ್ದಾಗಲಿ ಇಲ್ಲವೇ ಇಲ್ಲ.
ಇಷ್ಟೆಲ್ಲಾ ವಿರೋಧಾಭಾಸಗಳ ನಡುವೆಯೂ ಬ್ರಾಹ್ಮಣರ ಜೊತೆ ಸಹಪಂಕ್ತಿ ಭೋಜನ ಮಾಡಿದಲ್ಲಿ ದೇಶದಲ್ಲಿ ಸಮಾನತೆ ಬರುತ್ತದೆ ಎಂದಾದಲ್ಲಿ ಎಪ್ಪತ್ತರ ದಶಕದಲ್ಲಿಯೇ, ಪೇಜಾವರ ಶ್ರೀಗಳು ದಲಿತ ಕೇರಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ್ದಂತೆ ಇಂದೂ ಬ್ರಾಹ್ಮಣರೇ ತಮ್ಮ ಸ್ವಂತ ಖರ್ಚಿನಲ್ಲಿಯೇ ಸಹಪಂಕ್ತಿ ಭೋಜನ ಏರ್ಪಡಿಸಲು ಸಿದ್ದ. ಮೀಸಲಾತಿಯನ್ನು ಧಿಕ್ಕರಿಸಿ, ಎಡಗೈ ಬಲಗೈ, ಅವರು ಒಳಗೆ, ಇವರು ಹೊರಗೆ ಎಂಬ ಹಮ್ಮು ಬಿಮ್ಮು ಬಿಟ್ಟು ಒಂದು ದೇಶ ಒಂದೇ ಕಾನೂನು. ಇಲ್ಲಿ ಎಲ್ಲರೂ ಸರಿಸಮಾನರು ಎಂದು ಹೇಳಲು, ಸ್ಚಘೋಷಿತ ದಲಿತ ನಾಯಕರು, ಟೌನ್ ಹಾಲ್ ತುಕ್ಡೇ ಗ್ಯಾಂಗ್ ಸಿದ್ದವಿದೆಯೇ?
ಏನಂತೀರೀ?
ವಿಚಾರಗಳು ಅರ್ಥ ಪೂರ್ಣ ವಾಗಿದೆ. Infact ಮೊದಲ ಸ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹೊತ್ತಿಸಿ ದ್ದು ಯಾರು ?
LikeLike
ನಿಜವಾದ ಮಾತು…
LikeLiked by 1 person
ರಾಮ ಕೃಷ್ಣ ಪರಮಹಂಸಗೆ ದೇವಸ್ಥಾನ ನೀಡಿ ಅವನನ್ನ ಪುರೋಹಿತಕ್ಕೆ ಅವಕಾಶ ಮಾಡಿಕೊಟ್ಟ ರಾಣಿ ಯಾರೆಂದು, ಮತ್ತು ಅವಳ ಜಾತಿಯವುದೆಂದು ತಿಳಿದುಕೊಳ್ಳಿ, ಹಾಗೆ ವೈದಿಕ ರಲ್ಲಿ ಮೂರ್ತಿ ಪೂಜೆ ಇಲ್ಲ ಅಂತ ವೇದಗಳಲ್ಲೇ ಹೇಳಿದೆ ಮತ್ತೇಕೆ ಮೂರ್ತಿ ಪೂಜೆ ವ್ಯಾಮೋಹ ವೈದಿಕರಿಗೆ?? ತಟ್ಟೆ ಕಾಸು ಸಿಗುತ್ತೆ ಅಂತ ಅಲ್ವೆ
LikeLike
ಲೇಖನದಲ್ಲೇ ಹೇಳಿದಂತೆ ಬ್ರಾಹ್ಮಣರೇ ದೇವರ ಪೂಜೆ ಮಾಡಬೇಕೆಂದೇನಿಲ್ಲ. ಯಾರು ಬೇಕಾದರೂ ಆಗಮಶಾಸ್ತ್ರದ ಅನುಗುಣವಾಗಿ ಪೂಜೆ ಮಾಡಿ ತಟ್ಟೇ ಕಾಸು ಪಡೆಯಲಿ. ಅದಕ್ಕೆ ಯಾವ ಬ್ರಾಹ್ಮಣರೂ ಆಕ್ಷೇಪಣೆ ಮಾಡುವುದಿಲ್ಲ. ಮೀಸಲಾತಿ ಅಡಿಯಲ್ಲಿ ಎಪ್ಪತ್ತು ವರ್ಷಗಳ ಕಾಲ ಎಲ್ಲರನ್ನೂ ತುಳಿದು ಸಕಲ ಸರ್ಕಾರೀ ಸೌಲಭ್ಯಗಳನ್ನು ಪಡೆದು ಉದ್ದಾರವಾಗದವರು,ಕಂಡ ಕಂಡಲ್ಲೆಲ್ಲಾ,ವಾಚಾಮಗೋಚರವಾಗಿ ಬ್ರಾಹ್ಮಣರನ್ನು ಬೈಯ್ಯುವವರೇ, ಈಗ ಬ್ರಾಹ್ಮಣರ ಜೊತೆ ಸಹಪಂಕ್ತಿ ಭೋಜನ ಮಾಡಿದರೆ ಸಮಾನತೆ ಪಡೆದು ಉದ್ದಾರ ಆಗ್ತಾರೆ ಅನ್ನುವ ಭ್ರಮೆ ಏಕೋ?
LikeLike