ಜಾತ್ಯಾತೀತತೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಎಲ್ಲಾ ಡಾಟ್ ಕಾಂ ಕಂಪನಿಗಳು ಇದ್ದಕ್ಕಿಂದ್ದಂತೆಯೇ ಕುಸಿದು ಹೋಗಿ ಅನೇಕ ಉದ್ಯೋಗಸ್ಥರು ರಾತ್ರೋ ರಾತ್ರಿ ನಿರುದ್ಯೋಗಿಗಳಾಗಿ ಹೋಗಿದ್ದರು. ಸುಮಾರು ಐದಾರು ತಿಂಗಳುಗಳ ಕಾಲ ಚೇತರಿಸಿಕೊಂಡು ಒಂದೊಂದೇ ಸಣ್ಣ Startups ಕಂಪನಿಗಳು ಆರಂಭವಾಗಿದ್ದ ಕಾಲ. ಭಾರತೀಯರೇ ಆದರಲ್ಲೂ ಹಿಂದೂಗಳೇ ಆಗಿದ್ದವರೊಬ್ಬರು ಸುಮಾರು ವರ್ಷಗಳ ಕಾಲ ಅಮೇರೀಕಾದಲ್ಲಿ ಉದ್ಯೋಗ ಮಾಡುತ್ತಲೇ ಅಲ್ಲಿಯೇ ಒಂದು ಕಂಪನಿಯೊಂದನ್ನು ಆರಂಭಿಸಿ, ಬೆಂಗಳೂರಿನಲ್ಲಿ ತಮ್ಮ ಮತ್ತೊಂದು Indian MNC ಶಾಖೆಯೊಂದರನ್ನು ಜೂನ್ ತಿಂಗಳಿನಲ್ಲಿ ಆರಂಭಿಸಿದ ಕಾಲದಲ್ಲಿ ನಾನು ಆ ಆರಂಭಿಕ ಕಂಪನಿಯ ಎರಡನೇ ಉದ್ಯೋಗಿಯಾಗಿ ಸೇರಿಕೊಂಡಿದ್ದೆ.

ಕಂಪನಿಯ ಎರಡನೇ ಉದ್ಯೋಗಿ ಎಂದರೆ ಜವಾಬ್ಧಾರಿ ಹೆಚ್ಚಾಗಿಯೇ ಇತ್ತು. ಪ್ರತಿಯೊಂದುಕ್ಕೂ ಅಳದೂ ತೂಗಿ ಹೆಚ್ಚು ಹಣ ಪೋಲು ಮಾಡದೇ, ಎಷ್ಟು ಬೇಕೋ ಅಷ್ಟನ್ನೇ ಖರ್ಚು ಮಾಡಿ ಅಗತ್ಯವಿದ್ದ Laptops, Desktops, Switches & Servers ಖರೀದಿಸಿ ಕಂಪನಿಗೆ ಚಾಲನೆ ಮಾಡಿದ್ದ ದಿನ. ಅಪ್ಪಟ್ಟ ಕನ್ನಡಿಗ ಮತ್ತು ಹಿಂದೂ ಮನಸ್ಥಿತಿಯನ್ನು ನಮ್ಮ Servers ಗಳಿಗೆ ಕೊಟ್ಟಿದ್ದ ಹೆಸರುಗಳಲ್ಲಿಯೇ ತಿಳಿದುಕೊಳ್ಳಬಹುದಾಗಿತ್ತು ಭೀಮಾ, ಕರ್ಣ, ಅಶ್ವಿನಿ ಭರಣಿ, ಗಂಗಾ, ಯಮುನಾ ಸರಸ್ವತಿ ಕಾವೇರಿ, ನರ್ಮದಾ, ಮಲ್ಲಿಗೆ, ಸಂಪಿಗೆ, ಕೇದಿಗೆ, ಎಂದಿದ್ದರೆ, ಹೊಸದೊಂದು ಪ್ರಾಜೆಕ್ಟಿಗೆ ಕೊಟ್ಟಿದ್ದ ಎರಡು ಸರ್ವರ್ಗಳಿಗೆ ಲವ-ಕುಶ ಎಂದು ಹೆಸರು ಕೊಟ್ಟಿದ್ದೆ. ಇನ್ನು ನಮ್ಮ Conference Roomಗಳಿಗೆ ಅಜಂತಾ, ಎಲ್ಲೋರ, ಐಹೊಳೆ, ಬಾದಾಮಿ ಎಂದು ನಾಮಕರಣ ಮಾಡಲು ಸಫಲನಾಗಿ, ಇಲ್ಲಿನ ಮಣ್ಣಿನ ದೇಸೀ ಸೊಗಡನ್ನು ಹರಡಿಸಲು ಸಫಲನಾಗಿದ್ದೆ.

ನಮ್ಮ ಕಂಪನಿಗೆ ಹೊಸದಾಗಿ ಸೇರಿಕೊಳ್ಳುತ್ತಿದ್ದ ಸಹೋದ್ಯೋಗಿಗಳಿಗೂ ಈ ಹೆಸರುಗಳು ಬಲು ಅಪ್ಯಾಯಮಾನವಾಗಿದ್ದವು ಇವೆಲ್ಲವೂ ತಹಬದಿಗೆ ಬರುವಷ್ಟರಲ್ಲಿ ಅಕ್ಟೋಬರ್ ತಿಂಗಳು ಬಂದಿದ್ದೇ ಗೊತ್ತಾಗಲಿಲ್ಲ. ಹೇಳೀ ಕೇಳೀ ಅಕ್ಟೋಬರ್ ತಿಂಗಳಿನಲ್ಲಿ ದಸರಾ ಹಬ್ಬದ ಸಂಭ್ರಮಾಚರಣೆ. ಈ ಹೊಸಾ ಕಂಪನಿಯಲ್ಲಿ ಅದ್ದೂರಿಯಾಗಿ ಆಯುಧಪೂಜೆಯನ್ನು ಮಾಡಬೇಕೆಂದು ನಿರ್ಧರಿಸಿ, ಅಲಂಕಾರಕ್ಕೆ ಮತ್ತು ಪೂಜೆಗಳಿಗೆ ಬೇಕಾಗುವ ಸಾಮಾನುಗಳ ಪಟ್ಟಿ ಮಾಡಿ ಅಡ್ಮಿನ್ ಡಿಪರ್ಟ್ಮೆಂಟಿಗೆ ಕೊಟ್ಟಷ್ಟೇ ಶರವೇಗದಲ್ಲಿ ಅದು ಹಿಂದಕ್ಕೆ ಬಂದಿತ್ತು. ಕಾರಣ ಕೇಳಿದರೇ, ನಮ್ಮದು MNC ಕಂಪನಿ ಹಾಗಾಗಿ ಇಲ್ಲಿ ಯಾವುದೇ ಧಾರ್ಮಿಕ ಆವರಣೆಗೆ ಅವಕಾಶವಿಲ್ಲ ಹಾಗಾಗಿ ಆಯುಧ ಪೂಜೆಗೆ ಖರ್ಚು ಮಾಡಲಾಗದು ಎಂದು ಫೈನಾನ್ಸ್ ಕಂಪನಿಯವರು ಹೇಳಿದ್ದರಂತೆ. ಹೇಗೂ ಆಯುಧ ಪೂಜೆ ಮಾಡಲು ನಿರ್ಧರಿಸಿದ್ದರಿಂದ ನಾನೇ ಸ್ವಂತ ಕರ್ಚಿನಲ್ಲಿ ಸರಳವಾಗಿಯಾದರೂ ಅರ್ಥಪೂರ್ಣವಾಗಿ ಆಯುಧ ಪೂಜೆ ಮಾಡಿ ಮುಗಿಸಿದ್ದೆ.

ಅಕ್ಟೋಬರ್ ನವೆಂಬರ್ ಕಳೆದು ಡಿಸೆಂಬರ್ ಎರಡನೇ ವಾರದಲ್ಲಿ ಬೆಳ್ಳಂಬೆಳಿಗ್ಗೆ ಕಛೇರಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಝಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಕ್ರಿಸ್ಮಸ್ ಗಿಡ ನೋಡುತ್ತಿದ್ದಂತೆ ಎದೆ ಝಲ್ ಎಂದಿದ್ದಂತೂ ಸುಳ್ಳಲ್ಲ. ನಮ್ಮ ಸ್ವಾಗತಕಾರಿಣಿ ಬಳಿ ಇದನ್ನು ಹಾಕಿದವರು ಯಾರು ಎಂದು ಕೇಳಿದೆ. ಅಕೆ ಅಷ್ಟೇ ಮುಗ್ಧವಾಗಿ ನೆನ್ನೆ ಸಂಜೆ ಅಡ್ಮಿನ್ ಡಿಪಾರ್ಟ್ಮೆಂಟಿನವರು ಇದನ್ನು ಮಾಡಿಹೋದರು ಎಂದುಳು. ಛೇ!! ನಾವು ಇಲ್ಲಿನ ಸಂಪ್ರದಾಯದ ಅನುಗುಣವಾಗಿ ಆಯುಧಪೂಜೆ ಮಾಡ್ತೀವಿ ಅಂದಾಗ ಇಲ್ಲಾ ಎಂದವರು ಇದಕ್ಕೇ ಹೇಗೆ ಅನುವು ಮಾಡಿಕೊಟ್ಟಿದ್ದೀರಿ ? ಎಂದು ಆಕೆಯನ್ನು ದಬಾಯಿಸಿದ್ದಕ್ಕೆ ಆಕೆ ಒಂದು ಚೂರು ಮಾತನಾಡದೇ ಸುಮ್ಮನಿದ್ದಳು. ಇದನ್ನೇ ಅಡ್ಮಿನ್ ಡಿಪಾರ್ಟ್ಮೆಂಟ್ ಬಳಿ ಹೋಗಿ ಅಲ್ಲಿಯೂ ಗಲಾಟೆ ಮಾಡಿದ್ದೆ. ಮಧ್ಯಾಹ್ನ ಊಟದ ಸಮಯದಲ್ಲಿ ನಮ್ಮ ಸಹೋದ್ಯೋಗಿಗಳ ಬಳಿ ಇದೇ ಕುರಿತಂತೆ ಚರ್ಚೆ ನಡೆಸುತ್ತಿದ್ದ ಸಮಯದಲ್ಲಿ ತಿಳಿದು ಬಂದ ವಿಷಯವೇನೆಂದರೆ ನಮ್ಮ ಸ್ವಾಗತಕಾರಣಿಯೂ ರೋಮನ್ ಕ್ಯಾಥೋಲಿಕ್ ಆಗಿದ್ದು ಈ ಹುನ್ನಾರದಲ್ಲಿ ಆಕೆಯದ್ದೂ ಪರೋಕ್ಷವಾದ ಹಸ್ತಕ್ಷೇಪವಿತ್ತು.

ಅದಾದ ನಂತರ ಎರಡು ಮೂರು ಬಾರಿ ಹೊಸಾ ಕಛೇರಿಗೆ ಸ್ಥಳಾಂತರ ಗೊಂಡಾಗ, ಇದೇ ವಿಷಯವನ್ನು ಮುಂದಿಟ್ಟು ಕೊಂಡು ಕಂಪನಿಯ ಕಡೆಯಿಂದಲೇ ಹೋಮ ಮತ್ತು ಹವನ ಪೂಜೆ ಪುನಸ್ಕಾರಗಳನ್ನು ಮಾಡಿಸಲು ಸಫಲನಾಗಿದ್ದಲ್ಲದೇ, ಅಲ್ಲಿಂದ ಮುಂದೆ ನಾನು ಆ ಕಂಪನಿಯಲ್ಲಿ ಇರುವವರೆಗೂ ಪ್ರತೀ ವರ್ಷವೂ ನಮ್ಮ ಕಛೇರಿಯ ಎಲ್ಲಾ ಸಹೋದ್ಯೋಗಿಗಳಿಂದ ಹಣವನ್ನು ಸಂಗ್ರಹಿಸಿ ಅದ್ದೂರಿಯಾಗಿ ರಾಮ ನವಮಿಯನ್ನು ಮಾಡಿ ಇಡೀ ಕಛೇರಿಯ ನಾಲ್ಕುನೂರರಿಂದ ಐದು ನೂರು ಉದ್ಯೋಗಿಗಳಿಗೆ ಯಥೇಚ್ಚವಾಗಿ ಹೊಟ್ಟೆ ತುಂಬುವಷ್ಟು ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಕೋಸಂಬರಿ, ಪಾನಕ ಮತ್ತು ನೀರು ಮಜ್ಜಿಗೆ ಸಮಾರಾಧನೆ ನಡೆಸುತ್ತಿದ್ದೆವು. ಇದರಿಂದ ನನಗೆ ತಿಳಿದು ಬಂದಿದ್ದೇನೆಂದರೆ, ನಾವು ಹೆದರಿದರೆ, ನಮ್ಮ ತಲೆಮೇಲೆ ಕೂರುವವರು ಇದ್ದೇ ಇರುತ್ತಾರೆ. ಅದೇ ನಾವು ಆರನ್ನು ಧಿಕ್ಕರಿಸಿ ನಿಂತರೆ ಸುಮ್ಮನೇ ಬಾಲ ಮುದುರಿಕೊಳ್ಳುತ್ತಾರೆ.

ಆ ಕಂಪನಿಯ ಎರಡನೇ ಉದ್ಯೋಗಿಯಾಗಿದ್ದ ಕಾರಣ ಬಹುತೇಕ ಎಲ್ಲಾ ಉದ್ಯೋಗಿಗಳ ಪರಿಚಯವೂ ನನಗಿತ್ತು. ಅಕಸ್ಮಾತ್ ಯಾವುದೇ ಹಿಂದೂ ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಇಟ್ಟು ಕೊಳ್ಳದಿದ್ದಲ್ಲಿ ಅಥವಾ ಕೈಗೆ ಬಳೇ ಹಾಕಿಕೊಂಡು ಬಾರದೇ ಇದ್ದು, ಅಕಸ್ಮಾತ್ ಅದನ್ನು ನಾನೇದಾದರೂ ಗಮನಿಸಿದಲ್ಲಿ ಕೂಡಲೇ ಹೋ!! ಸಾರಿ ಸಾರಿ ಎಲ್ಲೋ ಬಿದ್ದು ಹೋಗಿದೆ ಎಂದು ಹೇಳಿ ಮತ್ತೆ ಹಣೆಗೆ ಬಿಂದಿ ಇಟ್ಟುಕೊಳ್ಳುವಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿತ್ತು. . ಇವೆಲ್ಲವೂ ಆಗ್ರಹ ಪೂರ್ವಕವಾಗಿಯೋ ಇಲ್ಲವೇ ಬಲವಂತವಾಗಿ ಹೇರದೇ ಪ್ರೀತಿ ಪೂರ್ವಕವಾಗಿ ಹೇಳಿದ ಪರಿಣಾಮವಾಗಿತ್ತು. ಅರೇ ಗಂಡಸಾಗಿ ನಾನೇ ಹಣೆಗೆ ತಪ್ಪದೇ ಕುಂಕುಮ ಇಟ್ಟು ಕೊಳ್ಳುತ್ತೇನೆ. ಕಿವಿಗೆ ಕರ್ಣ ಕುಂಡಲಗಳಿವೆ. ಸಣ್ಣದಾದ ಶಿಖೆ ಇದೆ. ಇನ್ನು ಹೆಣ್ಣು ಮಕ್ಕಳಾಗಿ ನೀವೇ ಇಟ್ಟು ಕೊಳ್ಳದೇ ಹೋದರೆ ಹೇಗೇ ಎಂದು ಭಾವನಾತ್ಮಕವಾಗಿ ಅವರನ್ನು ಕಿಚಾಯಿಸುತ್ತಿದ್ದೆ. ಆರಂಭದಲ್ಲಿ ಒಂದಿಬ್ಬರು ಕಮಿಕ್ ಕಿಮಿಕ್ ಎಂದರೂ ನಂತರ ಅವರಿಗೆ ನಮ್ಮ ಭಾವನೆಗಳು ಅರ್ಥವಾಗಿ ಮನಃಪೂರ್ವಕವಾಗಿ ಅವರೆಲ್ಲರೂ ಸ್ಪಂದಿಸಿದ್ದರು.

ಸುಮಾರು ಹತ್ತು ವರ್ಷಗಳ ಕಾಲ ಆ ಕಂಪನಿಯಲ್ಲಿ ಕೆಲಸ ಮಾಡಿ ಆ ಕಂಪನಿ ಬಿಟ್ಟು ಸುಮಾರು ಹತ್ತು ವರ್ಷಗಳಾದರೂ ಇಂದಿಗೂ ಆ ಕಂಪನಿಯ ಮಾಜೀ ಸಯೋದ್ಯೋಗಿಗಳ ಪ್ರತಿಯೊಂದು ಶುಭ ಮತ್ತು ಅಶುಭಕಾರ್ಯಗಳಲ್ಲಿ ಬಹುತೇಕರೆಲ್ಲರೂ ಭಾಗಿಗಳಾಗುವ ಮೂಲಕ ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಂಡು ಬೆಳಸಿಕೊಂಡು ಹೋಗಿರುವುದು ನಿಜಕ್ಕೂ ಅನನ್ಯವೇ ಸರಿ.

ಇಷ್ಟೆಲ್ಲಾ ಪೀಠಿಕೆ ಯಾಕೆ ಹೇಳಬೇಕಾಯಿತೆಂದರೆ, ಇತ್ತೀಚೆಗೆ ಜಾತ್ಯಾತೀತತೆ ಎಂಬ ಹೆಸರಿನಲ್ಲಿ ಇಂದಿನ ಯುವ ಜನತೆ ತಮ್ಮ ಹಿಂದೂ ಹಬ್ಬಗಳು, ನಮ್ಮ ಧರ್ಮದ ಸಂಸ್ಕಾರ ಮತ್ತು ಸಂಪ್ರದಾಯಗಳ ವಿಶೇಷತೆಗಳನ್ನೇ ಅರಿಯದೇ ಅಥವಾ ಅರಿತಿದ್ದರೂ ಅದನ್ನು ಬದಿಗೆ ಇಟ್ಟು, ನಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ಅಪಹಾಸ್ಯ ಮಾಡುತ್ತಾ, ಸಾಂಟಾ ಟೋಪಿಗಳನ್ನು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ Happy X-MAS, Advance Happy New year ಎಂದು ಕೇಕ್ ಕತ್ತರಿಸುವ Photoಗಳನ್ನು ಹಾಕುವುದನ್ನು ನೋಡಿದರೆ ಮನಸ್ಸಿಗೆ ಏನೋ ಒಂದು ತರಹ ಕಸಿವಿಸಿ. ಸಂಕ್ರಾಂತಿ, ಯುಗಾದಿ, ಗೌರೀ ಗಣೇಶ ಅಥವಾ ದೀಪಾವಳಿ ಹಬ್ಬಕ್ಕೆ ಶುಭಾಶಯಗಳನ್ನು ಕೋರಲು ಮುಜುಗರ ಪಡುವವರೂ ಸಹಾ Happy X-MAS, Happy New year ಎಂದು ಮುಗಿಬಿದ್ದು ಶುಭಾಶಯ ಕೋರುವುದು ಒಂದು ರೀತಿಯ ಅಸಹ್ಯವನ್ನು ಹುಟ್ಟಿಸುತ್ತದೆ.

ಇದೆಲ್ಲಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ನಕಲೀ ಹಿಂದೂಗಳು ಭಾವೈಕ್ಯತೆ ಎಂಬ ಹುಸಿ ಭ್ರಮೆಯಲ್ಲಿ ನಮ್ಮ ಆಯುಧ ಪೂಜೆಯಂದು ಸರ್ವಧರ್ಮ ದೇವರುಗಳ ಪಟಕ್ಕೆ ಪೂಜೆ ಸಲ್ಲಿಸಿ, ದೀಪಾವಳಿಯಂದು ಪಟಾಕಿ ಹೋಡೀಬೇಡಿ ವಾಯು ಮಾಲಿನ್ಯವಾಗುತ್ತದೆ, ಹೋಲಿ ದಿನ ಬಣ್ಣ ಹಚ್ಚಬೇಡಿ. ಸಾರ್ವಜನಿಕವಾಗಿ ಗಣೇಶ ಹಬ್ಬ ಆವವರಿಸಬೇಡಿ ಪರಿಸರ ಹಾಳಾಗುತ್ತದೆ ಎಂದು ಬೊಬ್ಬಿರಿದವರೇ, ಅನ್ಯ ಧರ್ಮೀಯರ ಹಬ್ಬದಂದು ಗಡದ್ದಾಗಿ ಬಿರ್ಯಾನಿ ತಿನ್ನುತ್ತಾರೆ. ಅದೇ ಕ್ರಿಸ್ಮಸ್ ಮತ್ತು ಹೊಸಾವರ್ಷದ ನೂರಾರು ಗಿಡಮರಗಳನು ಕಡಿದು ಸಂಭ್ರಮಿಸುವುದರ ಜೊತೆಗೆ ಬಾಣ ಬಿಸುಸುಗಳ ಪಟಾಕಿ ಹೊಡೆದು ಮಜಾ ಉಡಾಯಿಸುತ್ತಾರೆ. ಕೋಟ್ಯಾಂತರ ಮೇಣದ ಬತ್ತಿಗಳನ್ನು ಸುಟ್ಟು ಪರಿಸರವನ್ನು ಹಾಳುಮಾಡುತ್ತಿರುವುದು ಯಾರ ಗಮನಕ್ಕೆ ಬಾರದೇ? ಹಾಗಾದರೇ ಜಾತ್ಯಾತೀತತೆ ಎನ್ನುವುದು ದೇಶದಲ್ಲಿರುವ ಶೇ 85ರಷ್ಟು ಬಹುಸಂಖ್ಯಾತ ಹಿಂದೂಗಳಿಗೆ ಮಾತ್ರವೇ ಹೌದಾ? ಎನ್ನುವ ಜಿಜ್ಞಾಸೆ ಕಾಡುವುದಂತೂ ಸತ್ಯ, ಕೇವಲ 15% ಅನ್ಯಧರ್ಮೀಯರನ್ನು ಓಲೈಕೆ ಮಾಡುವುದಕ್ಕಾಗಿ ರಾಜಕಾರಣಿಗಳು ನಾನವಿಧದ ಭಾಗ್ಯಗಳನ್ನು ಕರುಣಿಸಿ ತುಷ್ಟೀಕರಣ ಮಾಡಿದರೇ, ಇನ್ನು ಮಾಂಸಾಹಾರಿ ಹೋಟೆಲ್ಲಿನವರು ಹಲಾಲ್ ಮಾಂಸವನ್ನೇ ಎಲ್ಲರಿಗೂ ತಿನ್ನಿಸುವ ತೆವಲು ಏಕೆಂದು ಅರ್ಥವಾಗುತ್ತಿಲ್ಲ.

ಬಹುತೇಕ ಶಾಲೆಗಳಲ್ಲಿ ನಮ್ಮ ಹಿಂದೂ ಹಬ್ಬಗಳನ್ನು ಆಚರಿಸಲು ಮುಜುಗರ ಪಡುತ್ತಾರೆ ಆದರೆ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಸಾಂಟಾಕ್ಲಾಸ್ ಧರಿಸಿ ಸಾಂಟಾ ಕೇಳಿದ್ದನ್ನೆಲ್ಲಾ ಕೊಡುತ್ತಾನೆ ಎಂದು ನಮ್ಮ ಮಕ್ಕಳ ತಲೆಯಲ್ಲಿ ತುಂಬುತ್ತಿದ್ದಾರೆ, ಎಷ್ಟೋ ಶಾಲಾ ಕಾಲೇಜಿನಲ್ಲಿ ಹಣೆಗೆ ಕುಂಕುಮ, ಕೈಗೆ ಬಳೆಗಳು ಮತ್ತು ತಲೆಗೆ ಹೂವು ಮುಡಿಯುವುದನ್ನೂ ನಿಷೇಧಿಸಿದ್ದರೆ, ಅದೆಷ್ಟೋ ಶಾಲಾ ಕಾಲೇಜುಗಳಲ್ಲಿ ಹೆಣ್ಣುಮಕ್ಕಳ ಚೆಂದದನೆಯ ಕೂದಲನ್ನು ಕತ್ತರಿಸಿ ಬಾಬ್ ಮಾಡಿಲೇ ಬೇಕೆಂಬ ಅಲಿಖಿತ ನಿಯಮಗಳು ಇವೆ.
ಇನ್ನು ಯುವತಿಯ ವೇಷಭೂಷಣಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದೇನೋ? ನೋಡಲು ಸ್ವಲ್ಪ ಸುಂದರವಾಗಿದ್ದು ಒಳ್ಳೆಯ ಬೈಕ್ ಮೇಲೆ ಬಂದ ಹುಡುಗರ ಪೂರ್ವಾಪರ ತಿಳಿಯದೇ, ಚಕ್ಕಂದವಾಡಿ ಕಡೆಗೆ ಲವ್ ಜಿಹಾದ್ ಗೆ ತಾವೂ ಬಲಿಯಾಗುವುದಲ್ಲದೇ ಹೆತ್ತ ತಂದೆ ತಾಯಿಯರ ಕಣ್ಣೀರು ಸುರಿಸುತ್ತಿರುವುದು ನಿಜಕ್ಕೂ ದುಃಖಕರ ವಿಷಯವೇ ಆಗಿದೆ.

ನಮ್ಮ ಹಿಂದೂ ಸಂಪ್ರದಾಯ ಮತ್ತು ಸಂಸ್ಕಗಳ ರಾಯಭಾರಿಗಳು ಎನ್ನಿಸುವ ದೇವಸ್ಥಾನದ ಅರ್ಚಕರು ಇದಕ್ಕಿಂತಲೂ ಒಂದು ಹೆಜ್ಜೆ ಮುಂದುವರೆದು ನಮ್ಮ ಮೊನ್ನೆ ಕ್ರಿಸ್ಮಸ್ ಸಮಯದಲ್ಲಿ ವಿಘ್ನವಿನಾಶಕನಿಗೇ ಏಸುವಿನ ಅಲಂಕಾರ ಮಾಡಿ ಅದನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಅಭಿವ್ಯಕ್ತಿ ಸ್ವಾತ್ರಂತ್ರ್ಯದ ದುರುಪಯೋಗವೇ ಸರಿ.

ಇನ್ನು Corporate ಕಂಪನಿಗಳಲ್ಲಿ ಆಯುಧ ಪೂಜೆ ಮಾಡದಿದ್ದರೂ ಸರಿ Halloween Day ಎಂದು ಅಲಂಕಾರ ಮಾಡುವುದಲ್ಲದೇ, Secret Santa ಆಟ ಎಂದು ಬಲವಂತವಾಗಿ ಅನಾಮಿಕವಾಗಿ ಒಬ್ಬರು ಮತ್ತೊಬ್ಬರಿಗೆ ಉಡುಗೊರೆಗಳನ್ನು ಕೊಡಿಸುತ್ತಾರೆ. ಇನ್ನು ಶುಕ್ರವಾರ ಮಧ್ಯಾಹ್ನ ಕಡ್ಡಾಯವಾಗಿ ಹೋಟೆಲ್ಲಿನಲ್ಲಿ ಮಾಂಸಾಹಾರ ಸೇವನೆ ಸಂಜೆಯಾಯಿತೆಂದರೆ ಯಾವುದಾದರೂ ಪಬ್ ಇಲ್ಲವೇ ಬಾರಿನಲ್ಲಿ ಮಧ್ಯದ ನಶೆಯಲ್ಲಿ ತೇಲಾಡುವುದೇ ಗೌರವದ ಸಂಕೇತ ಎಂಬ ಹುಸಿ ಕಲ್ಪನೆಯನ್ನು ನಮ್ಮ ಯುವ ಜನತೆಗೆ ತುಂಬುವ ಮೂಲಕ, ಹಿಂದೂಸ್ಥಾನದಲ್ಲಿಯೇ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಕೊಳ್ಳಿ ಇಡುವ ಮೂಲಕ ಮೆಕಾಲೆ ಕಂಡಿದ್ದಂತಹ ಜನ್ಮತಃ ಭಾರತೀಯನಾಗಿದ್ದರೂ ಬೌದ್ಧಿಕವಾಗಿ ಆತ ಪಾಶ್ವಾತ್ಯನಾಗಿರುವಂತಹ ಕನಸನ್ನು ನನಸು ಮಾಡುತ್ತಿರುವುದು ನಿಜಕ್ಕೂ ದೇಶಕ್ಕೆ ಆಘಾತಕಾರಿ ಎನಿಸುತ್ತಿದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s