ರೈತರ ಟ್ರಾಕ್ಟರ್ ಪೆರೇಡ್

ಕಳೆದ ಎರಡು ವರ್ಷಗಳಿಂದ ವಿದ್ಯಾರಣ್ಯಪುರದಲ್ಲಿ ಸ್ವದೇಶೀ ಜಾಗರಣ ಮಂಚ್ ಆಶ್ರಯದಲ್ಲಿ ಸಾವಯವ ಸಂತೆಯನ್ನು ನಡೆಸಿಕೊಂಡು ಹೋಗುವ ಸೌಭ್ಯಾಗ್ಯ ವಯಕ್ತಿಕವಾಗಿ ನನಗೆ ಲಭಿಸಿದೆ. ಸಾವಯವ ಕೃಷಿಯಾಧಾರಿತವಾಗಿ ಬೆಳೆದ ಬಗೆಬೆಗೆಯ ತರಕಾರಿಗಳು, ಸೊಪ್ಪುಗಳು ಮತ್ತು ಹಣ್ಣುಗಳನ್ನು ರೈತರೇ ಯಾವುದೇ ಮಧ್ಯವರ್ತಿಗಳ ನೆರವೆಲ್ಲದೇ ನೇರವಾಗಿ ಗ್ರಾಹಕರುಗಳಿಗೆ ಮಾರಾಟ ಮಾಡುವ ವೇದಿಕೆಯನ್ನು ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರು ತಾಜಾ ತಾಜ ಮತ್ತು ನಿಜವಾಗಿಯೂ ಸಾವಯವವಾಗಿ ಬೆಳೆದದ ಕೃಷಿ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸುವ ಮೂಲಕ ರೈತರಿಗೆ ಅಧಿಕ ಲಾಭಗಳಿಸಲು ಸಹಾಯ ಮಾಡುತ್ತಿದ್ದಾರೆ. ರೈತರು, ಈ ಮೊದಲು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ದಲ್ಲಾಳಿಗಳನ್ನು ಆಶ್ರಯಿಸಬೇಕಾಗಿತ್ತು ಇಲ್ಲವೇ ದೂರ ದೂರದ ತರಕಾರಿ ಮಂಡಿಗಳಲ್ಲಿ ಬೆಳ್ಳಂಬೆಳಿಗ್ಗೆ ತೆಗೆದುಕೊಂಡು ಹೋಗಿ ಅವರು ನಿರ್ಧರಿಸುವ ಬೆಲೆಗಳಿಗೆ ತಮ್ಮ ಉತ್ಪನ್ನಗಳನ್ನು ಕೊಟ್ಟು ತಮ್ಮ ಕಣ್ಣ ಮುಂದೆಯೇ ಅದೇ ಕಮಿಷನ್ ಏಜೆಂಟುಗಳು ಒಂದಕ್ಕೆ ಎರಡರಷ್ಟಕ್ಕೆ ಮಾರಾಟ ಮಾಡುವುದನ್ನು ನೋಡಿಯೂ ನೋಡಂತೆ ಅವರು ಕೊಟ್ಟಷ್ಟು ದುಡ್ಡನ್ನು ಪಡೆದುಕೊಂಡು ಬರಬೇಕಿತ್ತು. ಅದೆಷ್ಟೋ ಏಜೆಂಟುಗಳು ಎಂದೋ ಕೊಟ್ಟಿರುವ ಉತ್ಪನ್ನಗಳಿಗೆ ಇಂದಿಗೂ ಹಣ ಕೊಡದೇ ಸತಾಯಿಸಿರುವ ಉದಾಹರಣೆಗಳು ಎಷ್ಟೋ ಇವೆ. ಹಾಗೆ ಬರಬೇಕಾದ ಹಣವೇ ಲಕ್ಷಾಂತರದಷ್ಟು ಇದೆ ಎಂದು ಅದೇ ರೈತರು ಬೇಸರದಿಂದ ಹೇಳುತ್ತಾರೆ.

ಆರಂಭದಲ್ಲಿ ನೆಲಮಂಗಲದ ರೈತರು‌ ಮಾತ್ರ ನಮ್ಮ ಸಾವಯವ ಸಂತೆಯ ವೇದಿಕೆಯನ್ನು ಬಳಸಿಕೊಳ್ಳುತ್ತಿದರೆ, ಕ್ರಮೇಣ ನಮ್ಮ ಸಂತೆಯ ಖ್ಯಾತಿ ಎಲ್ಲಾ ಕಡೆಯಲ್ಲೂ ಹರಡಿ ಈಗ, ಕುಣಿಗಲ್ ಸಮೀಪದ ಪ್ರಗತಿಪರ ರೈತರು (ಆಯುರ್ವೇದಿಕ್ ಡಾಕ್ಟರ್ ಆಗಿದ್ದವರು ಈಗ ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದಾರೆ) ಕನಕಪುರದ ಬಳಿಯ ರೈತರು (ವೃತ್ತಿ ಪರ ಪೈಲೆಟ್ ಆಗಿದ್ದವರು ಅನಾರೋಗ್ಯದ ಕಾರಣ ಆ ಹುದ್ದೆ ತ್ಯಜಿಸಿ ಸಂಪೂರ್ಣ ಕೃಷಿಕರಾಗಿದ್ದಾರೆ) ಇತ್ತೀಚೆಗೆ ಕೆಂಗೇರಿಯ ರೈತರು (ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು ಈಗ ಸಂಪೂರ್ಣ ಕೃಷಿಕರಾಗಿದ್ದಾರೆ) ಮತ್ತು ನಾಡಪ್ರಭು ಕೆಂಪೇಗೌಡರು ಹುಟ್ಟಿದ ಆವುತಿಯ ರೈತರುಗಳು ತಾವು ಬೆಳೆದ ತರಕಾರಿ ಮತ್ತು ಸೊಪ್ಪುಗಳನ್ನು ನಮ್ಮಲ್ಲಿ ಮಾರಾಟ ಮಾಡಿ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಹಿಂದಿನ ದಿನ ಕಟಾವು ಮಾಡಿದ ಉತ್ಪನ್ನಗಳಿಗೆ ಮಾರನೇ ದಿನವೇ ಹಣ ಗಳಿಸುತ್ತಾ ನೆಮ್ಮದಿಯಾಗಿದ್ದಾರೆ. ಇಂತಹವರಿಗೆ ಹೆಚ್ಚಿನ ವೇದಿಕೆಯನ್ನು ಕಲ್ಪಿಸುವ ಸಲುವಾಗಿಯೇ ಸ್ವದೇಶೀ ಜಾಗರಣ ಮಂಚ್ ನಗರದ ಹತ್ತಾರು ಕಡೆಯಲ್ಲಿ ಇಂತಹ ಸಾವಯವ ಸಂತೆಯನ್ನು ಆಯೋಜಿಸುವ ಕಾರ್ಯದಲ್ಲಿ ಮಗ್ನವಾಗಿವೆ.

ನೆನ್ನೆ ಸುಮ್ಮನೆ ಇಂತಹ ರೈತರುಗಳ ಬಳಿ ಏನು ಮಂಗಳವಾರ ನಡೆಯುವ ಟ್ರಾಕ್ಟರ್ ಪೆರೇಡಿನಲ್ಲಿ ನೀವು ಪಾಲ್ಗೊಂಳ್ಳುತ್ತೀರಾ? ಎಂದು ಕೇಳಿದರೆ, ನನ್ನನ್ನೇ ತಿಂದು ಬಿಡುವಂತೆ ದುರುಗುಟ್ಟಿ ನೋಡೀ ಇದೇನ್ ಸಾರ್ ಹೀಗೆ ಮಾತಾಡ್ತೀರಾ? ನಮಗೆ ಕೈ ತುಂಬಾ ಕೆಲಸ ಇದೇ ಸಾರ್. ಹೋರಾಟ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲು ನಮಗೆಲ್ಲಿ ಸಾರ್ ಪುರುತೊತ್ತಿದೆ? ನಿಜ ಹೇಳ್ಬೇಕೂ ಅಂದ್ರೇ ಅಲ್ಲಿ ಪ್ರತಿಭಟನೆ ಮಾಡುವವರ್ಯಾರೂ ನಿಜವಾದ ರೈತರೇ ಅಲ್ಲಾ. ಇದೇ ಕಮಿಷನ್ ಏಜೆಂಟ್ಗಳು ನಮ್ಮ ಹಳ್ಳಿಗಳಲ್ಲಿ ಕೆಲಸ ಇಲ್ಲದೇ ಸುಮ್ಮನೇ ಅಂಡಲೆಯುವವರನ್ನು ಬೆಳಿಗ್ಗೆ ಲಾರಿ ಇಲ್ಲವೇ ಟ್ರಾಕ್ಟರ್ ಕಳುಹಿಸಿ ಕರೆದುಕೊಂಡು ಹೋಗಿ ಅಲ್ಲಿ ಹೆಗಲು ಮೇಲೆ ಹಸಿರು ಶಾಲು ಇಲ್ಲವೇ ಟವೆಲ್ ಹೊದಿಸಿ ಅವರನ್ನೇ ರೈತರೆಂದು ಬಿಂಬಿಸಿ, ಸಂಜೆ ಒಂದಷ್ಟು ಹಣ, ಕುಡಿಯಲು ಮದ್ಯ ಮತ್ತು ಬಿರ್ಯಾನಿ ಕೊಟ್ಟು ಕಳುಹಿಸುತ್ತಾರೆ ಅಷ್ಟೇ ಸಾರ್ ಎಂದರು.

ನಿಜ ಹೇಳ್ಬೇಕೂ ಅಂದ್ರೇ ಈ ಹೊಸಾ ಕೃಷಿ ಪದ್ದತಿ ಬಂದ ನಂತರ ನಾವು ಇಂತಹವರಿಗೆ ಇಷ್ಟಕ್ಕೇ ಮಾರಬೇಕು ಅಂತೇನು ಇಲ್ಲಾ. ನಮಗೆ ಇಷ್ಟ ಬಂದವರಿಗೆ ಇಷ್ಟ ಬಂದ ಕಡೆ ಇಷ್ಟ ಬಂದ ಬೆಲೆಗೆ ಮಾರಬಹುದಾಗಿದೆ. ಅದೂ ಅಲ್ಲದೇ ಬೆಂಬಲ ಬೆಲೆ ನಿಗಧಿಯಾಗಿರುವ ಕಾರಣ ಬೆಂಬಲ ಬೆಲೆಗಿಂತಲೂ ಕಡಿಮೆಗಂತೂ ಮಾರಲು ಸಾಧ್ಯವಿಲ್ಲ ಎಂದು ಹೆಮ್ಮೆಯಿಂದ ಹೇಳುವಾಗ ಅವರ ಕಣ್ಣುಗಳಲ್ಲಿನ ಮಿಂಚುವಂತಹ ಹೊಳಪನ್ನು ನೋಡಿ ಸಂತಸವಾಗಿತ್ತು.

ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಈ ಹೊಸಾ ಕೃಷಿ ನೀತಿಯ ಪದ್ದತಿಯ ಕುರಿತಂತೆ ಸಾಧಕ ಬಾಧಕಗಳ ಕುರಿತು ಸಾಕಷ್ಟು ಚರ್ಚೆ ನಡೆಸಿ ಬಹುಮತ ಪಡೆದು ಕಡೆಗೆ ರಾಷ್ಟ್ರಪತಿಗಳ ಅಂಗೀಕಾರದ ನಂತರವೇ ಕೃಷಿ ನೀತಿಯಾಗಿ ಹೊರಬಂದಿದೆ. ಇದರಿಂದ ನಿಸ್ಸಂದೇಹವಾಗಿಯೂ ರೈತರಿಗೆ ಯಾವುದೇ ಮಾರಕವಾಗುವಂತಹ ವಿಷಯಗಳು ಇಲ್ಲದಿದ್ದರೂ, ಖಂಡಿತವಾಗಿಯೂ ನಕಲೀ ರೈತರುಗಳಿಗೆ ಮತ್ತು ಕಮಿಷನ್ ಏಜೆಂಟರುಗಳಾದ ದಳ್ಳಾಳಿಗಳಿಗೆ ಮಾರಕವಾಗಿರುವುದಂತೂ ಸತ್ಯ. ಹಾಗಾಗಿ ಇದೇ ದಳ್ಳಾಳಿಗಳು ರೈತರ ಸೋಗಿನಲ್ಲಿ ರೈತ ಚಳವಳಿ ಆರಂಭಿಸಿದ್ದರೆ, ಅವರಿಗೆ ಬೆಂಬಲವಾಗಿ ಖಲಿಸ್ಥಾನ್ ಹೊರಾಟಗಾರರು ಮತ್ತು CAA & NRC ವಿರುದ್ಧ ಇದೇ ಷಡ್ಯಂತರದಿಂದ ಶಹೀನ್ ಬಾಗ್ ನಲ್ಲಿ ತಿಂಗಳಾನುಗಟ್ಟಲೇ ಹೋರಾಟ ನಡೆಸುತ್ತಿದ್ದ ದೇಶವಿರೋಧಿ ಶಕ್ತಿಗಳು ಕೈ ಜೋಡಿಸಿರುವುದು ಸ್ಪಷ್ಟವಾಗಿದೆ.

ಇವರೆಲ್ಲರೂ ನಿಜವಾದ ರೈತರುಗಳಾಗಿದ್ದಲ್ಲಿ ಮತ್ತು ಇದು ರೈತಪರ ಹೋರಾಟವಾಗಿದ್ದಲ್ಲಿ, ಈ ಹೊಸಾ ನೀತಿಯ ಲೋಪ ದೋಷಗಳ ಕುರಿತಂತೆ ತಜ್ಞರ ಸಲಹೆಗಳನ್ನು ನೀಡಿ ಅಲ್ಪ ಸ್ವಲ್ಪ ಮಾರ್ಪಾಟುಗಳ ಮೂಲಕ ಎಲ್ಲವನ್ನು ಸರಿಪಡಿಸಬಹುದಾಗಿತ್ತು. ಸರ್ಕಾರವೂ ಸಹಾ ಈ ಕುರಿತಂತೆ ಮುಕ್ತವಾದ ಮಾತು ಕಥೆಗೆ ಸಿದ್ಧವಿತ್ತು. ಸುಮಾರು ಹತ್ತು ಹದಿನೈದು ಸಂಧಾನ ಸಭೆ ನಡೆದರೂ ರೈತ ನಾಯಕರು ಈ ಬಗ್ಗೆ ಯಾವುದೇ ವಿಷಯವನ್ನು ಮಾರ್ಪಾಟು ಮಾಡದೇ ಕೇವಲ ಈ ಹೊಸಾ ಕೃಷಿ ನೀತಿಯನ್ನು ರದ್ದು ಪಡಿಸಲೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ ಎಂದರೆ ಅವರ ಉದ್ದೇಶ, ಸಮಸ್ಯೆಯ ಪರಿಹಾರಕ್ಕಿಂತಲೂ, ಇತ್ಯರ್ಥವಾಗುವುದೇ ಬೇಡ ಎನ್ನುತ್ತಿರುವ ಹಿಂದಿನ ರಹಸ್ಯ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ರೈತರ ಹೆಸರಿನಲ್ಲಿ ಸಾವಿರಾರು ಜನರನ್ನು ಯಾವುದೇ ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ ತಿಂಗಳಾನುಗಟ್ಟಲೆ ರಸ್ತೆಯ ಬದಿಯ ಟೆಂಟ್ ಗಳಲ್ಲಿ ಐಷಾರಾಮ್ಯದ ಊಟೋಪಚಾರಗಳಿಗೆ ನೀರಿನಂತೆ ಕೋಟ್ಯಾಂತರ ಹಣ ಖರ್ಚುಮಾಡುತ್ತಿರುವುದನ್ನು ನೋಡಿದಲ್ಲಿ ನಿಜವಾದ ರೈತನಾದವನು ಚಳುವಳಿಗಳನ್ನು ಮಾಡಲು ಸಾಧ್ಯವೇ ಎಂದೆನಿಸುವುದಿಲ್ಲವೇ? ಕೃಷಿಗಾಗಿ ಮಾಡಿದ ಸಾಲದ ಬಾಧೆ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನ ಬಳಿ ಇಷ್ಟೊಂದು ಹಣವಿದ್ದಲ್ಲಿ ಆತ ಸಾಲವನ್ನು ತೀರಿಸಿ ನೆಮ್ಮದಿಯಾಗಿ ಜೀವನವನ್ನು ನಡೆಸುತ್ತಿರಲಿಲ್ಲವೇ?

ಇದೇ ಜನರು ಕೆಲ ತಿಂಗಳುಗಳ ಹಿಂದೆ ತೈಲ ಬೆಲೆಗಳು ಏರಿಕೆಯಾಗಿದೆ. ಸರ್ಕಾರ ಕರೋನ ಮಹಾಮಾರಿಯನ್ನು ಸರ್ಕಾರ ನಿಭಾಯಿಸುವುದರಲ್ಲಿ ಎಡವಿದೆ ಎಂಬುದರ ಕುರಿತಾಗಿ ದೇಶಾದ್ಯಂತ ಬಾರಿ ಬಾರಿ ಬಂದ್ ನಡೆಸಿದ್ದು ಹಸಿರಾಗಿರುವಾಗಲೇ ಈಗ ಅದೇ ರೈತರು ಸಹಸ್ರಾರು ಟ್ರಾಕ್ಟರ್ಗಳಲ್ಲಿ ನೂರಾರು ಮೈಲಿಗಳ ದೂರ ಸಾಗಿ ಬಂದು ಚಳುವಳಿಯನ್ನು ನಡೆಸುತ್ತಾರೆ ಎಂದರೆ ನಂಬಲು ಸಾಧ್ಯವೇ? ನಮ್ಮ ಹಳ್ಳಿಗಳಲ್ಲಿ ಮೂರೋ ನಾಲ್ಕು ಜನರು ಟ್ರ್ಯಾಕ್ಟರ್ ಇಟ್ಟುಕೊಂಡಿರುವಾಗ ಇನ್ನು ಸಹಸ್ರಾರು ಟ್ರಾಕ್ಟರ್ ದುಬಾರಿಯಾಗಿರುವ ಡೀಸಲ್ ಹಾಕಿಸಿಕೊಂಡು ಸ್ವಂತ ಖರ್ಚಿನಲ್ಲಿ ಬಂದು ತಿಂಗಳಾನುಗಟ್ಟಲೇ ಮನೆ ಮಠ, ಹೊಲ ಗದ್ದೆಗಳನ್ನು ಮರೆತು ಬೀದಿಯಲ್ಲಿ ನಿಂತು ಚಳುವಳಿ ಮಾಡುವಷ್ಟು ಸಾಹುಕಾರರಾಗಿದ್ದಾರೆಯೇ ನಮ್ಮ ರೈತರು?

ಕೂಲಂಕುಶವಾಗಿ ಯೋಚಿಸಿದಲ್ಲಿ ಟ್ರಾಕ್ಟರಿನಲ್ಲಿ ನೂರಾರು ಮೈಲಿಗಳನ್ನು ದಾಟಿ ಬರುವುದಕ್ಕೆ ಮತ್ತು ಚಳುವಳಿಯ ಪ್ರದೇಶದಲ್ಲಿ ಉಳಿದುಕೊಳ್ಳುವ ಖರ್ಚನ್ನೆಲ್ಲಾ ಪೆರೇಡಿಗೆ ಕರೆ ನೀಡಿರುವ ರೈತ ನಾಯಕರೇ ಭರಿಸುತ್ತಾರೆಂದರೆ, ಈ ರೈತ ನಾಯಕರುಗಳು ಪಟ್ಟ ಭದ್ರ ಹಿತಾಸಕ್ತಿಗಳಿಗೆ ತಮ್ಮನ್ನು ತಾವು ಎಷ್ಟು ಬೆಲೆಗೆ ಮಾರಿ ಕೊಂಡಿರಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡುತ್ತದೆ.

ಇನ್ನು ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ, ತಮ್ಮ ಹೊಟ್ಟೆ ಪಾಡಿಗಾಗಿ ಬಂದ್ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ, ರೈತ ಚಳುವಳಿಯಾಗಲೀ, ಕನ್ನಡ ಪರ ಹೋರಾಟವಾಗಲಿ, ರಾಜಕೀಯ ಪ್ರೇರಿತ ಬಂಧ್ ಆಗಲೀ ಎಲ್ಲದಕ್ಕೂ ಅದೇ ಜನರನ್ನೇ ಬಗೆ ಬಗೆಯ ವೇಷ ಭೂಷಣಗಳಿಂದ ಕರೆದುಕೊಂಡು ಅನುಕೂಲಕ್ಕೆ ತಕ್ಕಂತೆ, ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಗೋಸುಂಬೆಗಳಂತೆ ಪರಿಸ್ಥಿತಿಗೆ ಅನುಗುಣವಾಗಿ ರೈತನಾಯಕ, ಕನ್ನಡ ಪರ ಹೋರಾಟಗಾರ, ಕಾರ್ಮಿಕರ ನಾಯಕ, ಹೀಗೆ ಐಶಾರಾಮಿ ಬಂಗಲೆಯಲ್ಲಿ ವಾಸಿಸುತ್ತಲೇ, ಹತ್ತು ಹಲವಾರು ರೂಪಗಳನ್ನು ತಾಳುವವರು ಸಹಾ ಬೆಂಗಳೂರಿನಲ್ಲಿ ಸಹಸ್ರಾರು ಟ್ರಾಕ್ಟರ್‌ಗಳೊಂದಿಗೆ ಪರೇಡ್ ಮಾಡುತ್ತಿದ್ದಾರೆ ಎಂದರೆ ಈ ಚಳುವಳಿ ಎಂತಹ ರೂಪದಲ್ಲಿರ ಬಹುದು ಎನ್ನುವುದರ ಅರಿವಾಗುತ್ಯದೆ.

ಈ ನಕಲಿ ರೈತರ ಹೋರಾಟಕ್ಕೆ ಸಂವಿಧಾನಾತ್ಮಕವಾಗಿ ದೇಶಾದ್ಯಂತ ಕೊಟ್ಯಾಂತರ ಜನರ ಆಶೀರ್ವಾದದೊಂದಿಗೆ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗಿರುವ ಕೇಂದ್ರ ಸರ್ಕಾರ ಮಣಿಯಲೇ ಬಾರದು ಎಂದೇ ಇಡೀ ದೇಶವಾಸಿಗರ ಆಶಯವಾಗಿದೆ. ಇಂತಹವರ ಕುಮ್ಮಕ್ಕಿನಿಂದ ಕೃಷಿನೀತಿಯನ್ನು ಹಿಂತೆದು ಕೊಂಡ ಮಾರನೆಯ ದಿನವೇ ಇದೇ ಬಂದ್ ಹೋರಾಟಗಾರರು ಮತ್ತೊಮ್ಮೆ ದೇಶದ್ರೋಹಿಗಳ ಜೊತೆ ಕೈ ಜೋಡಿಸಿ ಸಿಎಎ & ಎನ್.ಆರ್.ಸಿ, ಟ್ರಿಬಲ್ ತಲ್ಲಾಖ್, ಕಾಶ್ಮೀರದ 370, 35A ವಿರುದ್ಧ ಇದೇ ಹೋರಾಟ ಇಲ್ಲವೇ ಈ ಹಿಂದೆ ನಡೆಸಿದಂತೆ ಹಿಂಸಾಚಾರಕ್ಕೆ ಇಳಿದರೂ ಅಚ್ಚರಿಪಡಬೇಕಿಲ್ಲ.

ನೀರಿಗೆ ಇಳಿದ ಮೇಲೆ ಚಳಿಯೇನೂ, ಮಳೆಯೇನು ಎನ್ನುವಂತೆ, ಕೇಂದ್ರ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಅಚಲವಾಗಿದ್ದು ಮಾತು ಕಥೆಯ ಹೆಸರಿನಲ್ಲಿ ಈ ನಕಲೀ ರೈತರ ಮುಂದೆ ಹಲ್ಲು ಗಿಂಜದೇ, ಈ ದೊಂಬರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲೇ ಬೇಕಾಗಿದೆ. ರಾಮಮಂದಿರ ಮತ್ತು ನೂತನ ಸಂಸತ್ ಭವನ ನಿರ್ಮಾಣ ಮಾಡುವುದೇ ಘನ ಕಾರ್ಯ ಎಂದು ಭಾವಿಸಿ ಸರ್ಕಾರ ತನ್ನೆಲ್ಲಾ ಸಂಪನ್ಮೂಲಗಳನ್ನು ಅಲ್ಲಿಗೇ ಬಳಸಿ, ಇನ್ನು ಮೂರು ವರ್ಷಗಳಲ್ಲಿ ಅದರ ನಿರ್ಮಾಣ ಪೂರ್ಣಗೊಳಿಸಿದರೆ, ಜನರು ಮತ್ತೆ ನಮ್ಮನ್ನೇ ಪುನರಾಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಭ್ರಮಾ ಲೋಕದಲ್ಲಿ ತೇಲಾಡುತ್ತಿದ್ದರೆ, ಇಂತಹ ಸಣ್ಣ ಸಣ್ಣ ಚಳುವಳಿಗಳನ್ನೇ ಹತ್ತಿಕ್ಕಲಾದವರು, ಜನ ವಿರೋಧಿ ಸರ್ಕಾರ ಎಂದು ಜನರ ಮುಂದೆ ಬೊಬ್ಬಿಡುತ್ತಾ ಮತ್ತೆ ದೇಶದ ಜೋಕರ್ ಅಧಿಕಾರಕ್ಕೆ ಬಂದರೂ ಬರಬಹುದು ಯಾರಿಗೆ ಗೊತ್ತು? ವಿದೇಶಾಂಗ ನೀತಿಯ ಜೊತೆ ಜೊತೆಯಲ್ಲಿಯೇ ದೇಶದ ಆಂತರಿಕ ಸಮಸ್ಯೆಗಳತ್ತಲೂ ಗಮನ ಹರಿಸಿ ಕಾಲ ಕಾಲಕ್ಕೆ ಅದನ್ನು ಪರಿಹರಿಸುವುದು ಒಳ್ಳೆಯ ನಾಯಕನ ಗುಣಲಕ್ಷಣಗಳಾಗಿವೆ. ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

3 thoughts on “ರೈತರ ಟ್ರಾಕ್ಟರ್ ಪೆರೇಡ್

 1. Request Swadeshi Jagarana Manch to start Saavayava Santhe at other places too in Bengaluru etc. The farmers from surrounding villages would be very happy if some coordination is done. There is huge demand for Saavayava Krishi Utpannna. The farmers have to Initially convince that they are truly Saavayava . Looking forward to this expansion.

  Liked by 1 person

  1. ಲೇಖನದಲ್ಲೇ ತಿಳಿಸಿರುವಂತೆ ಸ್ವದೇಶೀ ಜಾಗರಣ್ ಮಂಚ್ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ.

   ಮುಂದಿನ ತಿಂಗಳಿಂದ ಮಲ್ಲೇಶ್ವರಂ ಮತ್ತು‌ HBR layoutನಲ್ಲಿ ಸಾವಯವ ಸಂತೆ ಆರಂಭಭವಾಗುತ್ತಿದೆ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s