ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

ನಮ್ಮ ರಾಷ್ಟ್ರ ಗೀತೆ ಜನಗಣಮನವನ್ನು ರಾಷ್ಟ್ರಕವಿ ಶ್ರೀ ರವೀಂದ್ರ ನಾಥ್ ಟ್ಯಾಗೋರ್ ಅವರು ದೇಶದ ಸ್ತುತಿಗಾಗಿ ಬರೆದಿದ್ದದ್ದಲ್ಲ ಬದಲಾಗಿ ಐದನೆಯ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿ ಬರೆದ್ದದ್ದು ಎಂಬ ವಿವಾದ ಮೊದಲಿನಿಂದಲೂ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇದ್ದೇಿ ಇರುತ್ತದೆ. ಕನ್ನಡಿಗರಿಗೆ ಮೂಲ ಗೀತೆಯನ್ನು ಕೇಳಿದಾಗ ಅಷ್ಟೊಂದು ಸರಿಯಾಗಿ ಅರ್ಥವಾಗದಿದ್ದದ್ದು ಈಗ ಕನ್ನಡದಲ್ಲಿಯೇ ಅದರ ಭಾವಾನುವಾದವನ್ನು ಕೇಳಿದಾಗ ಅಂದಿನ ವಿವಾದದಲ್ಲಿ ಬಹಳಷ್ಟು ತಿರುಳಿದೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬರುತ್ತಿದೆ.

 

ಸಾಮಾನ್ಯವಾಗಿ ನಾವು ಭೂಮಿಯನ್ನು ತಾಯಿ ಎಂದೇ ಭಾವಿಸುತ್ತೇವೆ ಹಾಗಾಗಿ ಭೂಮಿ ತಾಯಿ, ಭೂದೇವಿ, ವಸುಂಧರೆ ಎಂದು ಹೇಳುವುದಲ್ಲದೇ ನಮ್ಮ ದೇಶವನ್ನು ಸಂಭೋದಿಸುವಾಗ ಭಾರತಾಂಬೇ ಎಂದೇ ಪ್ರೀತಿಯಿಂದ ಕರೆಯುತ್ತೇವೆ.

ಈ ಹಾಡಿನ ಪಲ್ಲವಿ ಆರಂಭವಾಗುವುದುದೇ ಜನಮನದ ಒಡೆಯಗೇ ನಾಡಿನ ಒಲುಮೆ ನಿನಗಿದೆ ಎಂದಿಗೂ ಗೆಲುಮೆ ಎಂದಿದೆ. ಹಾಗಾದರೇ ಸ್ವಾತಂತ್ರ ಪೂರ್ವದಲ್ಲಿ ನೂರಾರು ಚಿಕ್ಕ ಚಿಕ್ಕ ಸ್ವತಂತ್ರ್ಯ ರಾಜ್ಯಗಳಾಗಿ ಹರಿದು ಹಂಚಿಹೋಗಿದ್ದ ಭಾರತಕ್ಕೆ ಒಡೆಯರು ಯಾರಿದ್ದರು?

ಅವಿಭಜಿತ ಭಾರತದ ಭೂಭಾಗಗಳಾಗಿದ್ದ ಪಂಜಾಬ್, ಸಿಂಧ್, ಗುಜರಾತ್, ಮರಾಠಾ, ದ್ರಾವಿಡ, ಒಡಿಶಾ ಮತ್ತು ಬಂಗಾಳಗಳಲ್ಲದೇ, ವಿಂಧ್ಯಾ ಮತ್ತು ಹಿಮಾಲಯದ ಬೆಟ್ಟಗಳಲ್ಲಿಯೂ ನಿನ್ನದೇ ಹೆಸರು ಪ್ರತಿಧ್ವನಿಸುತ್ತದೆ. ಯಮುನಾ ಮತ್ತು ಗಂಗಾ ನದಿಗಳಲ್ಲಿಯೂ ನಿನ್ನದೇ ಹೆಸರಿನ ತರಂಗಗಳು ಮೂಡುತ್ತಿವೆ ಎಂದು ವರ್ಣಿಸಿರುವುದು.

ಇಡೀ ದೇಶಾದ್ಯಂತ ನಿನ್ನಯ ಹೆಸರನು ಮೆರೆಸಿ, ನಿನಗಿದು ಒಳಿತನು ಬಯಸಿ ಹಾಡುವೆ ಗೆಲುವನೆ ಬಯಸಿ ಎಂದು ಹೇಳಿರುವುದು ಬಹಳ ಸ್ಪಷ್ಟವಾಗಿ ಅಂದು ದೇಶವನ್ನು ಪರೋಕ್ಷವಾಗಿ ಒತ್ತೆಯಾಳಾಗಿಟ್ಟುಕೊಂಡಿದ್ದ ಬ್ರಿಟಿಷ್ ರಾಜ ಜಾರ್ಜ್ ಅವರನ್ನು ಹೊಗಳುವುದಕ್ಕಾಗಿಯೇ ಬರೆದಿರುವುದನನ್ನು ಮನಗಾಣಬಹುದಾಗಿದೆ.

1911 ರ ಡಿಸೆಂಬರ್‌ನಲ್ಲಿ ಬ್ರಿಟಿಷ್ ರಾಜ ಐದನೇ ಜಾರ್ಜ್ ಮತ್ತು ರಾಣಿ ಮೇರಿಯವರ ಭಾರತದ ಭೇಟಿಯ ಸಮಯದಲ್ಲಿ ಅವರನ್ನು ಹೊಗುಳುವುದಕ್ಕಾಗಿಯೇ ಈ ಹಾಡನ್ನು ಸಂಯೋಜಿಸಲಾಗಿತ್ತು. ಹಾಗಾಗಿಯೇ ಆತನನ್ನು ಅಧಿನಾಯಕ (ಭಗವಂತ ಅಥವಾ ಆಡಳಿತಗಾರ) ಎಂದು ಪ್ರಶಂಸಿರುವುದಲ್ಲದೇ, ಭಾರತ ಭಾಗ್ಯ ವಿಧಾತ (ಭಾರತದ ಹಣೆಬರಹವನ್ನು ಬರೆಯುವವ) ಎಂದೇ ಹಾಡಿ ಹೊಗಳಿರುವುದು ನಿಜಕ್ಕೂ ದಾಸ್ಯದ ಸಂಕೇತವೇ ಸರಿ.

ಯಾವ ದಿಕ್ಕಿನಲ್ಲಿ ಯಾವುದೇ ಭಾವನೆಯಿಂದ ನೋಡಿದರೂ ಈ ಗೀತೆ ನಮ್ಮ ಭಾರತಾಂಬೆಯ ಕುರಿತಂತೆ ಪ್ರೀತಿಯಿಂದ ಹಾಡಿ ಹೊಗಳುತ್ತಿಲ್ಲ ಎನ್ನುವುದು ಸುಸ್ಪಷ್ಟವಾಗಿದೆ .

ಡಿಸೆಂಬರ್ 1911 ರಲ್ಲಿ ಐದನೇ ರಾಜ ಜಾರ್ಜ್‌ಗೆ ನಿಷ್ಠಾವಂತ ಸ್ವಾಗತ ನೀಡಲು ಮತ್ತವನಿಗೆ ಧನ್ಯವಾದ ಹೇಳಲು ಕಲ್ಕತ್ತಾದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ವಿಶೇಷ ಸಮ್ಮೇಳನದ ಎರಡನೇ ದಿನದಂದು ಭಾರತದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಗಿತ್ತು. ಆ ದಿನ ಚಕ್ರವರ್ತಿ ಮತ್ತು ಸಾಮ್ರಾಜ್ಞೆ ಗೆ ಸ್ವಾಗತ ಮತ್ತು ನಿಷ್ಠೆಯನ್ನು ವ್ಯಕ್ತಪಡಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು ಎನ್ನುವುದು ಗಮನಾರ್ಹ.

ಶ್ರೀ ಬಂಕಿಮಚಂದ್ರ ಚಟರ್ಚಿಯವರ ವಿರಚಿತ ನಿಜವಾದ ದೇಶ ಭಕ್ತಿ ಗೀತೆ ವಂದೇಮಾತರಂ, ಸ್ವಾತಂತ್ರ್ಯ ಪೂರ್ವದಲ್ಲಿ ನಾಡಿನುದ್ದಕ್ಕೂ ಜನಮಾನಸದಲ್ಲಿ ಅಚ್ಚನ್ನು ಒತ್ತಿ, ವಂದೇಮಾತರಂ ಎಂದು ಘೋಷಣೆ ಕೋಟ್ಯಾಂತರ ಜನರನ್ನು ದೇಶಭಕ್ತಿಯ ಅಡಿಯಲ್ಲಿ ಒಂದು ಮಾಡಿತ್ತು. ವಂದೇಮಾತರಂ ಎಂಬ ಪದ ಬ್ರಿಟೀಷರ ಕಿವಿಗೆ ಬಿದ್ದೊಡನೆಯೇ ಕಾಯ್ದ ಸೀಸ ಕಿವಿಗೆ ಬಿದ್ದ ಹಾಗಾಗುತ್ತಿತ್ತು.

ಹಾಗಾಗಿ ಜನಗಣಮನ ಕುರಿತಂತೆ ಅನೇಕರು ಅಕ್ಷೇಪ ವ್ಯಕ್ತಪಡಿಸಿದಾಗ 1937ರಲ್ಲಿ ರವೀಂದ್ರನಾಥ ಟ್ಯಾಗೋರರು ತಾವು ಪರಮ ದೇಶಭಕ್ತರೆಂದೂ ತಾವೆಂದೂ ಬ್ರಿಟಿಷ್ ರಾಜನನ್ನು ಗೌರವಿಸಲು ಈ ಹಾಡನ್ನು ಬರದಿಲ್ಲವೆಂದು ಸ್ಪಷ್ಟನೆ ನೀಡ ಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಗಿತ್ತು. ಬಹುಜನರ ಒತ್ತಾಸೆಯನ್ನು ಬದಿಜೊತ್ತಿ ವಂದೇ ಮಾತರಂ ಬದಲಾಗಿ ಅಂದಿನ ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ವಿಶೇಶ ಆಸ್ತೆ ಮತ್ತು ಅಸಕ್ತಿಗಳಿಂದಾಗಿ ಜನ ಗಣ ಮನವನ್ನೇ ಭಾರತ ರಾಷ್ಟ್ರಗೀತೆಯನ್ನಾಗಿ ಹೆಮ್ಮೆಯಿಂದ ಅಂಗೀಕರಿಸಲಾಯಿತು.

ಇನ್ನು ಧರ್ಮಾಧಾರಿತವಾಗಿ ದೇಶ ವಿಭಜಿತವಾಗಿ ಭಾರತದಲ್ಲಿ ಹಿಂದೂಗಳೇ ಬಹುಸಂಖ್ಯಾತರಾಗಿದ್ದರೂ ತಮ್ಮ ರಾಜಕೀಯ ಸ್ವಾರ್ಥ ಹಿತಾಸಕ್ತಿಗಾಗಿ ಅನ್ಯ ಧರ್ಮೀಯರನ್ನು ಓಲೈಸುವ ಮನಸ್ಥಿತಿಯ ನಾಯಕರಿದ್ದ ಕಾರಣ ಭಗವಾಧ್ವಜದ ಬದಲು ಮೂರೂ ಧರ್ಮಗಳನ್ನು ಆಧರಿಸಿಯೇ ತ್ರಿವರ್ಣಧ್ವಜವನ್ನು ಆಯ್ಕೆಮಾಡಿ, ಆದರ ಮಧ್ಯದಲ್ಲೊಂದು ಅಶೋಕ ಚಕ್ರವನ್ನು ಇಟ್ಟು ನಂತರ ಅದಕ್ಕೆ ತ್ಯಾಗ, ಶಾಂತಿ ಮತ್ತು ಭರವಸೆ ಎಂದು ಹೆಸರಿಸಿ ಜನರನ್ನು ಮರಳು ಮಾಡಲಾಯಿತು.

ಬ್ರಿಟೀಷರಿಂದ ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ನಂತರವೂ ಪ್ರತೀ ದಿನ ರಾಷ್ಟ್ರ ಗೀತೆಯ ಹೆಸರಿನಲ್ಲಿ ಅದೇ ಬ್ರಿಟಿಷ್ ರಾಜನನ್ನು ಹೊಗಳಬೇಕಾದ ಅನಿವಾರ್ಯತೆ ನಮ್ಮ ಭಾರತೀಯರಿಗೆ ಬಂದೊದಗಿರುವುದು ದೇಶದ ದೌರ್ಭಾಗ್ಯವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

ಬೋಲೋ ಭಾರತ್ ಮಾತಾ ಕೀ.. ಜೈ..

ಜೈ ಹಿಂದ್, ಜೈ ಕರ್ನಾಟಕ ಮಾತೆ.

3 thoughts on “ರಾಷ್ಟ್ರಗೀತೆ, ಜನಗಣಮನದ ಭಾವಾರ್ಥ ಮತ್ತು ಗೂಡಾರ್ಥ

 1. ನೀವು ಹೇಳೋದು ನಂಬೋದು ಆದ್ರೆ ರಾಷ್ಟ್ರ ಗೀತೆಯಲ್ಲಿ ಯಾವ ಇಂಗ್ಲಿಷ್ ಬ್ರಿಟಿಷರ ಹೆಸರು ಇಲ್ಲವಲ್ಲ

  Like

  1. ಅಧಿನಾಯಕ, ಭಾಗ್ಯವಿಧಾತ ಎಲ್ಲವೂ ಬ್ರಿಟಿಷ್ ರಾಜ ಜಾರ್ಜ್ ನನ್ನು ಹೊಗಳಲು ಬಳಸಿದ ಉಪಮೇಯಗಳು. ಮತ್ತೊಮ್ಮೆ ಜನಗಣಮನ ಕೇಳಿ ಅದರಲ್ಲಿ ಭಾರತಮಾತೆಯ ಬಗ್ಗೆಯಾಗಲೀ ಆಕೆಯನ್ನು ಹೊಗಳುವ ಒಂದೇ ಪದ ಇದ್ದಲ್ಲಿ ತೋರಿಸಿಬಿಡಿ. ನಾನೇ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಡುತ್ತೇನೆ

   Like

 2. ನಮ್ಮ ಧರ್ಮದಲ್ಲಿ ಒಗ್ಗಟ್ಟು ಅನ್ನುವ ಪದ ಕ್ಷೀಣ ವಾಗಿರುವುದೇ ಇದಕ್ಕೆ ಕಾರಣ. ಇವತ್ತಿಗೂ ಹೊರಗಡೆಯಿಂದ ಬಂದಿದ್ದೆ ನಮಗೆ ಶ್ರೇಷ್ಠ. ನಮ್ಮಲ್ಲಿರುವ ಜ್ಞಾನ ನಮ್ಮಲ್ಲಿರುವ ಜನ ನಮಗೆ ಮುಖ್ಯ ಅನ್ನಿಸ್ಸಿಲ್ಲ. ಗುಲಾಮಗಿರಿ ನಾವೆಂದಿಗೂ ಬಿಟ್ಟಿಲ್ಲ.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s