ಕೊರಗಜ್ಜ

korag

ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಹೇಗೆ ನಾನಾ ದೇವರುಗಳ ತೀರ್ಥಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆಯೋ ಹಾಗೆಯೇ ಅಲ್ಲಿನ ತುಳುನಾಡಿನ ಜನ ಅಷ್ಟೇ ಭೂತಾರಾಧನೆಯನ್ನೂ ನಂಬುತ್ತಾರೆ ಮತ್ತು ಅದನ್ನೇ ಬಹಳ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹಾಗಾಗಿ ಅಲ್ಲಿನ ಬಹುತೇಕರ ಮನೆಯ ಅಂಗಳದಲ್ಲಿ ಇಂದಿಗೂ ಈ ರೀತಿಯ ಅನೇಕ ಸ್ಥಳೀಯ ದೈವಗಳ ಸಣ್ಣ ಸಣ್ಣ ಗುಡಿಗಳನ್ನು ಕಾಣಬಹುದಾಗಿದೆ. ಅಂತಹ ನಂಬಿಕೆಗಳಲ್ಲಿ ಬಹಳ ಪ್ರಸಿದ್ಧವಾಗಿರುವುದೇ ಕೊರಗಜ್ಜ ಎಂಬ ದೈವ. ಇಲ್ಲಿನ ಜನರು ಈ ಕೊರಗಜ್ಜನನ್ನು ಭಾರೀ ಶ್ರದ್ದಾ, ಭಕ್ತಿಗಳಿಂದ ಪೂಜಿಸುವುದಲ್ಲದೇ, ದಕ್ಷಿಣ ಕನ್ನಡಾದ್ಯಂತ ಈ ಕೊರಗಜ್ಜನಿಗೆ ಹಲವಾರು ದೇವಾಲಯಗಳಿವೆ. ಈ ದೇವಾಲಯಗಳಿಗೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿ, ತಮ್ಮ ಕಷ್ಟ ನಷ್ಟಗಳನ್ನು ಹೇಳಿಕೊಂಡರೆ, ಕೊರಗಜ್ಜನು ಅದನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಗಳು ಇಲ್ಲಿವೆ ಮತ್ತು ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಪವಾಡಗಳು ಇಲ್ಲಿ ಪ್ರತಿನಿತ್ಯವೂ ನೆಡೆಯುತ್ತಲೇ ಬಂದಿರುವುದು ಆ ಭಕ್ತಾದಿಗಳ ನಂಬಿಕೆಯನ್ನು ಮತ್ತಷ್ಟೂ ಧೃಡಪಡಿಸುತ್ತಿದೆ. .

WhatsApp Image 2021-04-01 at 8.38.17 PM

ಕೊರಗ ಎಂಬ ಮೂಲ ನಿವಾಸಿ ಜನಾಂಗವಿದ್ದು ಅವರು ಕೊರಗ ಭಾಷೆಯನ್ನು ಮಾತನಾಡುತ್ತಾರಾದರೂ ಆವರಿಗೂ ಮತ್ತು ಈ ಕೊರಗಜ್ಜನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಮುದ್ದಾದ ಮಗು ಜನಿಸಿ ಅದಕ್ಕೆ ತನಿಯ ಕೊರಗ ಎಂದು ಹೆಸರಿಸುತ್ತಾರೆ. ದುರಾದೃಷ್ಟವಷಾತ್ ಬಾಲ್ಯದಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ ಅ ಪುಟ್ಟ ಬಾಲಕ ತನಿಯ ಅನಾಥನಾದಾಗ ಆಲ್ಲಿಯೇ ಇದ್ದ ಭೈದರೆ ಜನಾಂಗದ ಮೈರಕ್ಕ ಬೈದದಿ ಎಂಬ ಮಹಿಳೆ ಆತನನ್ನು ಸಾಕಿ ಸಲಹಿ ದೊಡ್ಡನನ್ನಾಗಿ ಮಾಡುತ್ತಾಳೆ. ಬೈದರೆ ಜನಾಂಗದ ಕುಲ ಕಸುಬು ಸೇಂದಿ ತಯಾರಿಸಿ ಅದನ್ನು ಮಾರುವುದಾಗಿರುತ್ತದೆ. ಹಾಗಾಗಿ ಈ ಕಾಯಕವನ್ನು ತನಿಯ ಬಾಲ್ಯದಿಂದಲೇ ಕರಗತಮಾಡಿಕೊಂಡಿರುತ್ತಾನೆ. ಬಾಲ್ಯದಿಂದಲೂ ಅಸಾಮಾನ್ಯ ವ್ಯಕ್ತಿಯಾಗಿದ್ದ ತನಿಯ ಶಕ್ತಿ ಸಾಮರ್ಧ್ಯಗಳ ಬಗ್ಗೆ ಹಲವಾರು ಕಥೆಗಳಿವೆ ಅದೊ ಒಮ್ಮೆ ಸೇಂದಿ ತುಂಬು ಎಂದಾಗ, ಎಷ್ಟು ತುಂಬಿದರು ಅದು ಖಾಲಿಯಾಗದಿದ್ದಾಗ ಅಂತಿಮವಾಗಿ ಕದ್ರಿ ಮಂಜುನಾಥನಿಗೆ ಹರಕೆ ಹೊತ್ತು ಅಡಕೆ ಎಲೆಯಿಂದ ಪೇಂಣಲಿ(ಕವಚ)ವನ್ನು ಮಾಡಿಸಿ ಹಾಕಿದಾಗ ಆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಸಂತೋಷಗೊಂಡ ತನಿಯ ಕದ್ರಿ ಮಂಜುನಾಥನಿಗೆ ಕಂಚಿನ ಪೇಂಣಲಿ ಮಾಡಿಸುತ್ತಾನೆ. ಸುಮಾರು 7-8 ಜನರು ಹೊರಬಹುದಾದ ಆ ಕವಚವನ್ನು ಆ ತರುಣ ತನಿಯನೊಬ್ಬನೇ ಹೊತ್ತುಕೊಂಡು ಅಲ್ಲಿಯ ಜನರಿಗೆ ಅಚ್ಚರಿ ಮೂಡಿಸುತ್ತಾನೆ. ಇಂತಹ ತನಿಯ ಸೇಂದಿ ತಯಾರಿಕೆಗಾಗಿ ಮಾಗಿದ ಹಣ್ಣುಗಳನ್ನು ತರಲು ಹತ್ತಿರದ ಕಾಡಿಗೆ ಹೋಗಿದ್ದಾಗ ಅಚಾನಕ್ಕಾಗಿ ಮಾಯವಾದ ಇಲ್ಲವೇ ಕಲ್ಲಾಗಿ ಹೋದ ಎಂಬ ಪ್ರತೀತಿ ಇದ್ದರೇ ಮತ್ತೊಂದರ ಪ್ರಕಾರ ಹಣ್ಣುಗಳನ್ನು ಕೊಯ್ಯುವ ಸಲುವಾಗಿ ದೇವಾಲಯದ ಮೇಲೆಯೇ ಹತ್ತಿದ್ದನ್ನು ಕಂಡು ಅಲ್ಲಿನ ಅರ್ಚಕರು ಆತನನ್ನು ಬೆದರಿಸುವ ಸಮಯದಲ್ಲಿ ಆತ ಹತನಾದ ಪಾಪ ಪರಿಹಾರ್ಥವಾಗಿ ಆತನನ್ನು ದೈವ ಮಾಡಿದರೆಂಬ ಪ್ರತೀತಿಯೂ ಇದೆ. ಇಲ್ಲಿನ ಅನೇಕರು ಕೊರಗಜ್ಜನನ್ನು ಪರಶಿವನ ಅವತಾರವೆಂದೇ ನಂಬುತ್ತಾರೆ.

ಅಂದಿನಿಂದ ಜನರು ಈ ಕೊರಗಜ್ಜನನ್ನು ದೈವವೆಂದು ನಂಬಿ ತಮ್ಮ ಕಷ್ಟ ನಷ್ಟಗಳನ್ನು ತಾವು ಕಳೆದು ಕೊಂಡ ವಸ್ತುಗಳಿಗೆ ಇಲ್ಲವೇ ಯಾವುದೇ ಕಳ್ಳತನವಾದಾಗ ಜನರು ಇದೇ ಕೊರಗಜ್ಜನನ್ನುಮನದಲ್ಲೇ ನೆನೆದು ಹರಕೆ ಹೊತ್ತುಕೊಂಡರೆ ಅವರ ಹರಕೆ ಈಡೇರುತ್ತದೆ ಎಂಬ ನಂಬಿಕೆ ಇದೆ. ಹಾಗೆ ಅವರ ಅಭೀಷ್ಟೆಗಳು ಈಡೇರಿದಾಗ ಕೊರಗಜ್ಜನ ದೇವಾಲಯಗಳಿಗೆ ಹೋಗಿ. ಹರಕೆಯ ರೂಪದಲ್ಲಿ ಕೊರಗಜ್ಜನಿಗೆ ಪ್ರಿಯವಾದ ಮತ್ತು ಆತ ಸೇವಿಸುತ್ತಿದ್ದ ತಾಂಬೂಲ, ಬೀಡಿ, ಸೇಂದಿ, ಮಧ್ಯವನ್ನು ಅತನಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸಿ ಬರುವ ಸಂಪ್ರದಾಯ ಅನಾದಿಕಾಲದಿಂದಲೂ ರೂಢಿಯಲ್ಲಿದೆ.

ಕೊರಗಜ್ಜನ ಪೂಜಾವಿಧಿವಿಧಾನಗಳು ಸಾಂಪ್ರದಾಯಿಕ ಪೂಜೆಗಿಂತ ಸ್ವಲ್ಪ ವಿಭಿನ್ನವೇ ಆಗಿದೆ. ಕುತ್ತಾರು ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು ಇಟ್ಟಿರುತ್ತಾರೆ, ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ ಪರ್ಯಾಯವಾಗಿ ತಮ್ಮ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ದನದ ರಕ್ತವನ್ನು ಚೆಲ್ಲಿ ಅರಸು ದೇವತೆಗಳನ್ನು ಓಡಿಸುತ್ತಾನೆ. ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಸೇರಿ ಹೀಗೆ ಒಟ್ಟು 7 ಕಲ್ಲುಗಳು ಕೋಲ ಸೇವೆಗೆ ಸೇರುತ್ತದೆ. ಮತ್ತು ಸಂಜೆಯ ನಂತರ ಆ ಪ್ರದೇಶಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ.

ಅದೇ ರೀತಿ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ರೀತಿಯ ದೀಪವಾಗಲೀ ಇಲ್ಲವೇ ಬೆಂಕಿ ಕಡ್ಡಿಯನ್ನು ಸಹ ಹೊತ್ತಿಸಬಾರದೆಂಬ ನಿಯಮವಿದ್ದು ಆ ಪ್ರದೇಶ ಸಂಪೂರ್ಣ ಕತ್ತಲು ಮಯವಾಗಿರುತ್ತದೆ. ಹಾಗಾಗಿಯೇ ರಾತ್ರಿಯ ಹೊತ್ತು ಆ ರಸ್ತೆಯಲ್ಲಿ ಬರುವ ಗಾಡಿಗಳು ಸಹಾ ತಮ್ಮ ವಾಹನದ ದೀಪವನ್ನು ಆರಿಸಿಯೇ ಪ್ರಯಾಣಿಸುವ ರೂಢಿ ಇನ್ನೂ ಅಲ್ಲಿ ಚಾಲ್ತಿಯಲ್ಲಿದೆ. ಈ ನಿಯಮವನ್ನು ಅಕಸ್ಮಾತ್ ಯಾರಾದರೂ ಮೀರಿದಲ್ಲಿ ಅವರಿಗೆ ಕೆಡುಕುಂಟಾಗುತ್ತದೆ ಎಂಬ ನಂಬಿಕೆಿ ಇಲ್ಲಿನ ಜನರಿಗೆ ಇದ್ದು ಅದಕ್ಕೆ ಪುರಾವೆಯಂತೆ ಅನೇಕ ಉದಾಹರಣೆ ಕಣ್ಣ ಮುಂದೆಯೇ ಇದೆ.

ಇಲ್ಲಿನ ಅಗೆಲು ಸೇವೆ ಮತ್ತು ಕೋಲ ಅತ್ಯಂತ ಪ್ರಸಿದ್ಧವಾಗಿದ್ದು ಆ ಅಗೆಲು ಸೇವೆಯಲ್ಲಿ ಹುರುಳಿ, ಬಸಳೆ, ಮೀನು, ಕೋಳಿ, ಉಪ್ಪಿನಕಾಯಿ, ಚಕ್ಕಲಿ, ಸೇಂದಿ, ಮಧ್ಯ, ತಾಂಬೂಲ ಮುಂತಾದವುಗಳು ಕೊರಗಜ್ಜನಿಗೆ ಪ್ರಿಯವೆಂದು ನೈವೇದ್ಯಕ್ಕೆ ಇಟ್ಟು ಅದನ್ನು ಅಜ್ಜನಿಗೆ ಬಡಿಸಲಾಗುತ್ತದೆ.

WhatsApp Image 2021-04-01 at 9.04.18 PM

ಇನ್ನು ಕೊರಗಜ್ಜನ ವೇಶವನ್ನು ಹಾಕಿಕೊಂಡಿರುವ ವ್ಯಕ್ತಿ, ಮೈಯೆಲ್ಲಾ ಕಪ್ಪು ಬಣ್ಣ ಬಳೆದು ಕೊಂಡು, ಸೊಂಟಕ್ಕೆ ಪೇಂಣಲಿ(ಕವಚ)ವನ್ನು ಕಟ್ಟಿಕ್ಕೊಂಡು ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡು ಕೈಯಲ್ಲೊಂದು ಬೆತ್ತವನ್ನು ಹಿಡಿದು ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ವರ್ಣಿಸುವುದಕ್ಕಿಂತಲೂ ನೋಡುವುದಕ್ಕೇ ಮಹದಾನಂದವಾಗುತ್ತದೆ.

ಇಂತಹ ಕೊರಗಜ್ಜನನ್ನು ಸಾಮಾಜಿಕ ಜಾಲ ತಾಣದ ಗುಂಪೊಂದರ ಮುಖ್ಯಸ್ಥ ಮನೋಜ್ ಪಂಡಿತ್ ಎನ್ನುವ ವ್ಯಕ್ತಿ ಟೀಕೆ ಮಾಡಿ ನಂತರ ಆತನ ತಾಯಿ ತೀವ್ರವಾದ ಅನಾರೋಗ್ದ ಸಮಸ್ಯೆಯಿಂದ ಬಳಲುತ್ತಿದ್ದದ್ದನ್ನು ಗಮನಿಸಿ ಭಕ್ತಿಯಿಂದ ಕೊರಗಜ್ಜನಿಗೆ ಸೇವೆ ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಕೊಂಡ ಎಂಬ ಉದಾಹರಣೆ ಕಣ್ಣ ಮುಂದೆ ಇರುವಾಗಲೇ,

ಇತ್ತೀಚೆಗೆ ಕೆಲವು ಅನಕ್ಷರಸ್ಥ ಪುಂಡ ಪೂಕರಿಗಳು ಮಂಗಳೂರಿನ ದೇವಾಲಯಕ್ಕೆ ರಾತ್ರಿಹೊತ್ತು ನುಗ್ಗಿ ಅಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಸ್ವಾಮಿ ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಗಳನ್ನು ಆಗ್ಗಿಂದ್ದಾಗೆ ಹಾಕುತ್ತ ತಮ್ಮ ವಿಕೃತಿಯನ್ನು ಮೆರೆದಿದ್ದರು. ದೇವಸ್ಥಾನದ ಆಡಳಿತ ಮಂಡಳಿಗೆ ಇದೊಂದು ಬಗೆ ಹರಿಸಲಾರದ ಸಮಸ್ಯೆಯಾಗಿ ಆ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ದೂರು ನೀಡಿದರೂ ಅದರಿಂದ ಯಾವುದೇ ಪರಿಹಾರವಾಗದೇ ಹೋದಾಗ ಅಂತಿಮವಾಗಿ ತಮ್ಮ ನಂಬಿಕೆಯಂತೆ ತಮ್ಮ ದೇವತೆ ಪ್ರಭು ಕೊರಗಜ್ಜನನ್ನೇ ಆ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ವಿಧಿಸುವಂತೆ ಕೇಳಿಕೊಂಡರು.

ಇದಾದ ಕೆಲ ದಿನಗಳ ಹಿಂದೆ ದೇವಾಲಯದ ಮುಂದೆ ಅನ್ಯ ಕೋಮಿನ ಯುವಕರಿಬ್ಬರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದನ್ನು ಗಮನಿಸಿದ ಅಲ್ಲಿನ ಅರ್ಚಕರು ಅವರಿಬ್ಬರನ್ನೂ ಕರೆದು ವಿಚಾರಿಸಿದಾಗ ಆ ಇಬ್ಬರೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಅದರ ಪರಿಹಾರಾರ್ಥವಾಗಿ ದೇವರಲ್ಲಿ ಕ್ಷಮೆ ಯಾಚಿಸಲು ಬಂದಿದ್ದಾರೆಂದು ತಿಳಿಯಿತು. ಮೊದಲಿಗೆ ಆ ಅರ್ಚಕರು ಇದು ಆ ಯುವಕರ ಕುಕೃತ್ಯದ ಮುಂದುವರೆದ ಭಾಗವಾಗಿರಬಹುದೆಂದು ಭಾವಿಸಿದರಾದರೂ, ನಂತರ ಅವರನ್ನು ಕೂಲಂಕುಶವಾಗಿ ವಿಚಾರಿಸಿದಾಗ ದೇವರ ಕಾಣಿಕೆ ಹುಂಡಿಯೊಳಗೆ ಕಾಂಡೋಮ್ಗಳನ್ನು ಹಾಕಿದ್ದ ಮೂವರು ತರುಣರಲ್ಲಿ ನವಾಜ್ ಎಂಬ ಮುಖ್ಯ ಅಪರಾಧಿಯು ಇತ್ತೀಚೆಗೆ ಇದ್ದಕ್ಕಿದ್ದಂತೆಯೇ ಮಾನಸಿಕ ಸ್ವಾಸ್ಥ್ಯವನ್ನು ಕಳೆದು ಕೊಂಡು ಹುಚ್ಚುತನದಿಂದ ವರ್ತಿಸಲು ಪ್ರಾರಂಭಿಸಿದ್ದಲ್ಲದೇ, ರಕ್ತ ವಾಂತಿ ಮತ್ತು ತೀವ್ರವಾದ ಭೇದಿಯಿಂದ ನರಳಿ ಕಡೆಗೊಂದು ದಿನ ತನ್ನ ಮನೆಯಲ್ಲಿಯೇ ಗೋಡೆಗಳಿಗೆ ತಲೆಯನ್ನು ಬಡಿದುಕೊಂಡು ರಕ್ತಕಾರಿ ಸತ್ತು ಹೋದ ಕತೆಯನ್ನು ತಿಳಿಸಿದರು.

ಈ ಘಟನೆಯಿಂದ ಉಳಿದ ಇಬ್ಬರು ಅಪರಾಧಿಗಳಾದ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫೀಕ್ ತೀವ್ರತರವಾಗಿ ಹೆದರಿದ್ದಲ್ಲದೇ, ಅಬ್ದುಲ್ ರಹೀಂ ಕೂಡ ಅನಾರೋಗ್ಯದಿಂದ ಬಳಲುತ್ತಿರುವುದಲ್ಲದೇ ಮೃತ ನವಾಜ್ ನಂತೆಯೇ ಅಗ್ಗಾಗ್ಗೆ ರಕ್ತ ವಾಂತಿಯನ್ನು ಮಾಡಿಕೊಂಡಿದ್ದಾನೆ. ಹಾಗಾಗಿ ಪ್ರಾಣ ಭಯದಿಂದಾಗಿ ದೇವಸ್ಥಾನಕ್ಕೆ ಬಂದು ತಾವುಗಳು ಮಾಡಿದ ತಪ್ಪಿಗಾಗಿ ಕ್ಷಮೆಯಾಚಿಸಿ ಅದರ ಪಾಪ ಪರಿಹಾರಗಳನ್ನು ಮಾಡಲು ಮುಂದಾಗಿದ್ದಾರೆ. ಇಷ್ಟೆಲ್ಲಾ ಆದರ ನಂತರ ಪೊಲೀಸರು ಆ ಸ್ಥಳಕ್ಕೆ ಆಗಮಿಸಿ ಅವರಿಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅವರಿಬ್ಬರೂ ತಮ್ಮ ಕಿಡಿಗೇಡಿತನಗಳನ್ನು ಒಪ್ಪಿಕೊಂಡಿರುವ ಕಾರಣ ಅವರಿಗೆ ಸೂಕ್ತ ಚಿಕಿತ್ಸೆಗಳನ್ನು ಕೊಡಿಸುತ್ತಿದ್ದಾರೆ.

WhatsApp Image 2021-04-01 at 8.38.28 PM

ಇಂದಿನ ಆಧುನಿಕ ಕಾಲದಲ್ಲಿಯೂ ಇಂತಹ ಪವಾಡಗಳು ಅಚ್ಚರಿಯನ್ನು ಮೂಡಿಸುತ್ತದೆಯಾದರೂ, ನಮ್ಮ ದೇಶವೇ ಇಂತಹ ನೂರಾರು ನಂಬಿಕೆಗಳ ಮೇಲೆ ನಡೆದುಕೊಂಡು ಹೋಗುತ್ತಿರುವಾಗ, ತಲೆ ಗಟ್ಟಿಗಿದೆ ಎಂದು ಅದನ್ನು ವಿನಾಕಾರಣ ಪ್ರಶ್ನಿಸುವುದು ಮತ್ತು ಜನರ ನಂಬಿಕೆಗಳ ವಿರುದ್ಧ ಅನಗತ್ಯವಾಗಿ ಕುಕೃತ್ಯಗಳನ್ನು ಎಸಗುವವರಿಗೆ ಈ ಉದಾಹಣೆಗಳು ಎಚ್ಚರಿಕೆಯ ಗಂಟೆಯಾಗಿರುದಂತೂ ಸತ್ಯ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಕೊರಗಜ್ಜ

  1. ಆ ಮೂವರು ಆರೋಪಿಗಳಲ್ಲಿ ಸತ್ತವನು ಕಳೆದ ಒಂದೂವರೆ ವರ್ಷಗಳಿಂದ ಏಡ್ಸ್ ನಿಂದ ಬಳಲುತ್ತಿದ್ದು ಹಾಸಿಗೆ ಹಿಡಿದಿದ್ದು ಕಳೆದ ಮೂರು ತಿಂಗಳ ಹಿಂದೆ ಕೊರಗಜ್ಜನ ತಾಣದಲ್ಲಿ ಅಪಚಾರ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳೂ ಸಹ ಏಳುತ್ತವೆ. ಅವನು ರಕ್ತಕಾರಿ ಸತ್ತದ್ದು ಏಡ್ಸನಿಂದ ಎಂಬ ವೈದ್ಯಕೀಯ ವರದಿಗಳಿವೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s