ಯಾವುದೇ ಆಟಗಳೇ ಆಗಲಿ ಪಂದ್ಯ ಆರಂಭವಾಗಿ ಆಟಗಾರರು ಮೈದಾನದಲ್ಲಿ/ಆಖಾಡದಲ್ಲಿ ಆಡುತ್ತಾ ಹೋದಂತೆಲ್ಲಾ, ಅಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಮತ್ತೊಬ್ಬರು ಮತ್ತೊಂದು ದಿನ ಮುರಿಯುವುದು ಸರ್ವೇ ಸಾಮಾನ್ಯವಾಗಿದೆ. ದಾಖಲೆಗಳಿಗಾಗಿಯೇ ಯಾವ ಆಟಗಾರರೂ ಆಡುವುದಿಲ್ಲವಾದರೂ, ಅವರುಗಳು ಆಡಿದಾಗಲೆಲ್ಲಾ ದಾಖಲೆಗಳು ಆವರ ಅರಿವಿಗೆ ಬಾರದೆಯೇ ಹುಟ್ಟುಕೊಳ್ಳುತ್ತವೆ. ಅದಕ್ಕೆ ಈ ಬಾರಿಯ ಐಪಿಎಲ್ 2021 ಕೂಡಾ ಹೂರತಾಗಿಲ್ಲ. ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದಿಂದ ಹಿಡಿದು ನೆನ್ನೆ ನಡೆದ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದವರೆಗೂ ಈ ವರೆಗೂ ನಡೆದಿರುವ ಆರು ಪಂದ್ಯಗಳಲ್ಲಿಯೂ ಮೊದಲು ಆಟವಾಡಿದ ತಂಡದ, ಕಡೆಯ ಎಸೆತದಲ್ಲಿ, ಆಟಗಾರ ಔಟ್ ಆಗುವ ಮೂಲಕ ಒಂದು ಅಪರೂಪದ ದಾಖಲೆಯ ನಿರ್ಮಾಣಕ್ಕೆ ಎಲ್ಲಾ 8 ತಂಡಗಳೂ ಸಹಕರಿಸಿವೆ ಎನ್ನುವುದು ಗಮನಾರ್ಹವಾಗಿದೆ.
IPL,2021, 1 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ,ಚೆನ್ನೈ, 9 ಏಪ್ರಿಲ್ 2021
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮುಂಬೈ ಆರ್‌ಡಿ ಚಹರ್ ರನ್ ಔಟ್ 0 (ಕೊಹ್ಲಿ / ಡಿವಿಲಿಯರ್ಸ್) 9-159 (ಚಹರ್, 19.6 ಓವರ್).
IPL,2021, 2 ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂ, 10 ಏಪ್ರಿಲ್ 2021
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್
ಚೆನ್ನೈ ಎಸ್.ಎಂ.ಕರ್ರನ್ ಬಿ ವೋಕ್ಸ್ 34, 7-188 (ಕರ್ರನ್, 19.6 ಓವರ್).
IPL,2021, 3 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ, ಚೆನ್ನೈ, 11 ಏಪ್ರಿಲ್ 2021
ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್
ಕೋಲ್ಕತಾ ಶಕೀಬ್ ಅಲ್ ಹಸನ್ ಸಿ ಅಬ್ದುಲ್ ಸಮದ್ ಬಿ ಕುಮಾರ್ 3, 6-187 (ಶಕೀಬ್ ಅಲ್ ಹಸನ್, 19.6 ಓವರ್).
IPL,2021, 4 ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂ, 12 ಏಪ್ರಿಲ್ 2021
ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್
ಪಂಜಾಬ್ ಜೆಎ ರಿಚರ್ಡ್ಸನ್ ಸಿ ಮೋರಿಸ್ ಬಿ ಸಕರಿಯಾ 0 6-221 (ರಿಚರ್ಡ್ಸನ್, 19.6 ಓವರ್).
ರಾಜಸ್ಥಾನ ಎಸ್‌ವಿ ಸ್ಯಾಮ್ಸನ್ ಸಿ ಹೂಡಾ ಬಿ ಅರ್ಷ್‌ದೀಪ್ ಸಿಂಗ್ 119 7-217 (ಸ್ಯಾಮ್ಸನ್, 19.6 ಓವರ್).
ಈ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರೂ ಸಹಾ ಕೊನೆಯ ಓವರಿನ ಕೊನೆಯ ಎಸೆತದಲ್ಲಿ ಔಟ್ ಆಗಿರುವುದು ಮತ್ತೊಂದು ವಿಶೇಷವಾಗಿದೆ.
IPL,2021, 5 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ, ಚೆನ್ನೈ, 13 ಏಪ್ರಿಲ್ 2021
ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್
ಮುಂಬೈ ಆರ್‌ಡಿ ಚಹರ್ ಸಿ ಶುಬ್ಮನ್ ಗಿಲ್ ಬಿ ರಸ್ಸೆಲ್ 8 10-152 (ಚಹರ್, 19.6 ಓವರ್).
ಮುಂಬೈನ ಆರ್‌ಡಿ ಚಹರ್ ಆಡಿರುವ ಎರಡೂ ಪಂದ್ಯದಲ್ಲಿ ಕಡೆಯ ಎಸೆತಕ್ಕೆ ಔಟ್ ಆಗಿರುವುದು ಮತ್ತೊಂದು ವಿಶೇಷವಾಗಿದೆ.
IPL,2021, 6 ನೇ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣ, ಚೆಪಾಕ್, 14 ಏಪ್ರಿಲ್ 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿ ಸನ್‌ರೈಸರ್ಸ್ ಹೈದರಾಬಾದ್
ಆರ್ಸಿಬಿ ಜಿ ಮ್ಯಾಕ್ಸ್ ವೆಲ್ ಸಿ ಸಹಾ ಬಿ ಜೆ ಹೋಲ್ಡರ್ 59 8-149 (ಜಿ ಮ್ಯಾಕ್ಸ್ ವೆಲ್, 19.6 ಓವರ್).
ಈಗಾಗಲೇ ತಿಳಿಸಿದಂತೆ ಮೈದಾನದಲ್ಲಿ ಆಡುವಾಗ, ಆಟಗಾರರಿಗೆ ಇಂತಹ ದಾಖಲೆಗಳ ಬಗ್ಗೆ ಅರಿವಿಲ್ಲದಿದ್ದರೂ ಮತ್ತು ಅವರುಗಳು ದಾಖಲೆಗಳಿಗಾಗಿ ಆಡುವುದಿಲ್ಲವಾದರೂ (ಮುಂಬೈ ಮೂಲದ ಕ್ರಿಕೆಟ್ ಆಟಗಾರರು ಇದಕ್ಕೆ ಅಪವಾದವಾಗಿರುವುದು ವಿಪರ್ಯಾಸ) ಪ್ರತಿ ಪಂದ್ಯಗಳಲ್ಲೂ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣವಾಗುತ್ತಲೇ ಹೋಗುವುದು ಈ ಎಲ್ಲಾ ಆಟಗಳ ವೈಶಿಷ್ಟ್ಯವಾಗಿದೆ.
ಈಗಿನ್ನೂ IPL ಪಂದ್ಯಾವಳಿಗಳು ಆರಂಭವಾಗಿದ್ದು, ಪಂದ್ಯಾವಳಿ ಮುಂದುವರೆದಂತೆಲ್ಲಾ ಖಂಡಿತವಾಗಿಯೂ ಇಂತಹ ಹತ್ತು ಹಲವಾರು ವಿಶೇಷ ದಾಖಲೆಗಳು ಯಾರಿಗೂ ಅರಿವಿಗೇ ಬಾರದೇ ನಿರ್ಮಾಣವಾಗುತ್ತಲೇ ಹೋಗುತ್ತದೆ. ಇಂತಹ ದಾಖಲೆಗಳಿಗಾಗಿಯೇ ಬಕ ಪಕ್ಷಿಗಳಂತೆ ಕಾಯುತ್ತಾ ದಾಖಲೆ ನಿರ್ಮಾಣವಾದಾಗಲೆಲ್ಲಾ ಅದನ್ನು ಹೆಕ್ಕಿ ತೋರಿಸುವ ಕ್ರಿಕೆಟ್ ಅಂಕಿ ಸಂಖ್ಯಾ ತಜ್ಞರಿಗೆ ನಮ್ಮೆಲ್ಲರ ಪರವಾಗಿ ಒಂದು ಧನ್ಯವಾದಗಳನ್ನು ಅರ್ಪಿಸೋಣ.
ಏನಂತೀರೀ?
ನಿಮ್ಮವನೇ ಉಮಾಸುತ
ಇಂತಹ ಅದ್ಭುತ ಮಾಹಿತಿಯನ್ನು ತಿಳಿಸಿ ಈ ಲೇಖನ ಬರೆಯಲು ಪ್ರೇರೇಪಿಸಿದ ಕ್ರಿಕೆಟ್ ಅಂಕಿ ಸಂಖ್ಯಾ ತಜ್ಞ ಶ್ರೀ ಗೋಪಾಲಕೃಷ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು
ಮಾನ್ಯ ಶೀ್ರ.ಶೀ್ರಕಂಠ ಬಾಳಗಂಜಿ ಸರ್, ನಿಮ್ಮ IPL ಕ್ರಿಕೆಟ್ ಲೇಖನ ವನ್ನು ಉದ್ದೇಶ ಪೂರ್ವಕ ವಾಗಿ ನನ್ನ್ನ ಮಗನಿಗೆ ಕಳಿಸಿದ್ದು ಅವನಿಗೆ ಕ್ರಿಕೆಟ್ ಅಂದರೆ ಊಟ ತಿಂಡಿ ಇಲ್ಲದೇ ವೀಕ್ಷಿಸುತ್ತಾನೆ ನಿಮ್ಮ ಈ ಲೆಖನ ಬಹಳ ಅಧ್ಬುತ ವಾಗಿದ್ದು ಬಹಳ ಸಂತೋಷ ಪಟ್ಟು IPL ನ ಪೂರ್ಣ ಮುಗಿಯುವ ವರವಿಗೆ ಅಂಕಿ ಅಂಶ ಇದೇತರಹ ಲೇಖನ ಬರೆಯಲೇ ಬೇಕೆಂದು ತಿಳಿಸಿ ಅಲ್ಲದೇ ಈ ಲೇಖನ ಕ್ಕೆ ನಿಮ್ಮ ಸ್ನೇಹಿತರಿಗೆ ಈ ಮಂಜುನಾಥನ ಹೃದಯ ಪೂರ್ವಕ ಅಭಿನಂದನೆ ಗಳನ್ನು ತಿಳಿಸಿ IPL ಕ್ರಿಕೆಟ್ ಬಗ್ಗೆ ಇದೊಂದು ಅತ್ಯಧ್ಬುತ ಮತ್ತು ವಿಸ್ಮಯ ಲೇಖನ ಅವರಿಗೆ ಹೆಚ್ಚು ,ಹೆಚ್ಚು ಇಂತಹ ಹತ್ತು ಹಲವಾರು ದಾಖಲೆ ಗಳನು ಉಣಬಡಿಸಿರುವುದಕ್ಕೆ ಮತ್ತೂಮ್ಮ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಹೇಳಿದ್ದು ಅಲ್ಲದೇ ದಾಖಲೆ ಗಳನ್ನು ಲೇಖನ ಮೂಲಕ ಬರೆದು ತುಂಬಾ ಓದಲು ಆಸಕ್ಥಿ ಮೂಡಿಸಿರುವ ತಮಗೆ ಈ ರಾಮಚಂದ್ರನ ಹೃತ್ಪೂರ್ವಕ ಅಭಿನಂದನೆಗಳು
IPL ಕ್ರಿಕೆಟ್ ಬಗ್ಗೆ ದಾಖಲೆಗಳನ್ನು ಹೆಚ್ಚು,,ಹೆಚ್ಚು ಬರೆದು ಕ್ರಿಕೆಟ್ ತಿಳಿದವರಿಗೆ ತಿಳೀಯದೇ ಇರುವ ವರಿಗೆ IPL ಕ್ರಿಕೆಟ್ ನೋಡಲು ತನ್ನಷ್ಟಕ್ಕೆ ತಾನೇ ಉತ್ಸಾಹ ಬರೀಸಿದ ಈಲೇಖನ ಇಂತಹ ಲೇಖನ ಹೆಚ್ಚು, ಹೆಚ್ಚು ಬರಲಿ ಎಂದು ಆಶಿಸುವ
ನಿಮ್ಮವನೇಆದ
ರಾಮಚಂದ್ರ.ಜಿ.ಹೆಚ್
LikeLike