ಹಲಾಲ್

ಹಿಂದೂಗಳ ಹೊಸಾ ವರ್ಷ ಯುಗಾದಿ ಹಬ್ಬ ಎಂದ ತಕ್ಷಣ ಯುಗಾದಿ ಹಬ್ಬಕ್ಕೆ ಶುಭಹಾರೈಸುತ್ತಾ ಹಾಸ್ಯಕ್ಕಾಗಿ ಕೆಲವರು ಇವತ್ತು ಬೇಳೆ🥘 ನಾಳೆ ಮೂಳೆ 🐐🐓 ಇವತ್ತು ಎಣ್ಣಿ ನೀರು ನಾಳೆ ಎಣ್ಣೆಗೆ ನೀರು🍸🥃 ಎನ್ನುವ ಸಂದೇಶ ಕಳುಹಿಸುವುದನ್ನು ಗಮನಿಸಿರಬಹುದು. . ಹೌದು ನಿಜ. ಯುಗಾದಿ ಹಬ್ಬದ ದಿನ ಒಬ್ಬಟ್ಟಿನ ಊಟ ಮಾಡಿದರೆ, ಯುಗಾದಿಯ ಮಾರನೆಯ ದಿನ ಮಾಂಸಾಹಾರವನ್ನು ಸೇವಿಸುವ ಬಹುತೇಕ ಹಿಂದೂಗಳು ಬಾಡೂಟವನ್ನು ಸೇವಿಸುವುದು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವಂತಹ ರೂಢಿ. ಯುಗಾದಿಯ ಮಾರನೆಯ ದಿನ ವರ್ಷತೊಡಕಿನಿಂದ ಮಾಡುವ ಕೆಲಸಗಳು ಇಡೀ ವರ್ಷ ಇರುತ್ತದೆ ಎಂಬ ನಂಬಿಕೆ ಇರುವ ಕಾರಣ. ಎಷ್ಟೇ ಕಷ್ಟವಿದ್ದರೂ, ಸಾಲ ಸೋಲವಾದರೂ ಮಾಡಿ ಅವತ್ತು ಮಾಂಸಾಹಾರವನ್ನು ಭೋಜನ ಮಾಡಿ ಇಡೀ ವರ್ಷ ಹೀಗೆಯೇ ಮಾಂಸಾಹಾರ ತಿನ್ನುವಷ್ಟು ಹಣ ಪ್ರಾಪ್ತಿಯಾಗಲಿ ಎಂದು ಬಯಸುವುದು ಉಂಟು.

ನಮ್ಮ ಪೂರ್ವಜರು ಆಹಾರ ಪದ್ದತಿಗಳು ಅಳವಡಿಸಿಕೊಳ್ಳುವುದರ ಹಿಂದೆಯೂ ಒಂದು ಸುಂದರವಾದ ಕಲ್ಪನೆ ಇತ್ತು. ಆಗೆಲ್ಲಾ ಅವರು ಮಾಡುವ ಕೆಲಸಗಳ ಮೇಲೆ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ ಎಂಬ ವರ್ಣಾಶ್ರಮದ ವಿಂಗಡೆಯಾಗಿತ್ತೇ ಹೊರತು ಜನ್ಮತಃ ಯಾವುದೇ ಜಾತಿ ಪದ್ದತಿ ಮತ್ತು ಆಹಾರ ಪದ್ಧತಿಗಳು ಇರಲಿಲ್ಲ. ಬ್ರಾಹ್ಮಣರಾಗ ಬಯಸುವವನು ಬ್ರಹ್ಮತ್ವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಾಲಿಸುತ್ತಾ ಸತ್ವದ ಗುಣವನ್ನು ಹೊಂದಿರ ಬೇಕಾದ ಕಾರಣ ತಾಮಸ ಗುಣಗಳನ್ನು ಬೆಳಸುವ ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರಗಳು ವರ್ಜ್ಯವಾಗಿದ್ದು ಅವರು ಶುದ್ಧ ಸಸ್ಯಾಹಾರವನ್ನು ಸ್ವೀಕರಿಸುತ್ತಿದ್ದರು. ಇನ್ನು ಕ್ಷತ್ರೀಯ ಮತ್ತು ಶೂದ್ರರು ಸ್ವಭಾವತಹಃ ವೀರರು, ಶೂರರು ಮತ್ತು ಕಠಿಣ ಸ್ವಭಾವದವರಾಗಿದ್ದು ಅವರು ದೇಶವನ್ನು ಶತ್ರುಗಳಿಂದ ರಕ್ಷಿಸುವ ಮತ್ತು ಹೊಲ ಗದ್ದೆಗಳಲ್ಲಿ ಬೆವರು ಸುರಿಸಿ ಪರಿಶ್ರಮದಿಂದ ದುಡಿಯುತ್ತಿದ ಕಾರಣಕ್ಕಾಗಿ ಅವರಿಗೆ ಅಪಾರವಾದ ಶಕ್ತಿಯ ಅವಶ್ಯಕತೆ ಇದ್ದ ಕಾರಣ ಅವರುಗಳು ಮಾಂಸಾಹಾರವನ್ನು ಸ್ವೀಕರಿಸಿ ದಷ್ಟ ಪುಷ್ಟರಾಗಿರುತ್ತಿದ್ದರು. ಹೀಗೆ ಹಿಂದೂಗಳಲ್ಲಿ ಅವರವರ ಕ್ರಿಯೆಗಳಿಗೆ ಅನುಗುಣವಾಗಿ ಅವರವರ ಅವಶ್ಯಕತೆಗೆ ತಕ್ಕಂತೆ ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ಸೇವಿಸುತ್ತಿದ್ದರು.

kuriಆ ರೀತಿಯಾಗಿ ಮಾಂಸಾಹಾರವನ್ನು ಸೇವಿಸುವವರು ತಮ್ಮ ತಮ್ಮ ಮನೆಗಳಲ್ಲಿ ತಮಗೆ ಅಗತ್ಯವಿದ್ದ ಕೋಳಿ, ಕುರಿ, ಮೇಕೆ, ಹಂದಿಗಳನ್ನು ಆರೋಗ್ಯಕರವಾದ ರೀತಿಯಲ್ಲಿ ಸಾಕಿ ಸಲಹಿ ಅದನ್ನು ದಷ್ಟ ಪುಷ್ಟವಾಗಿ ಬೆಳಸಿ, ಕಡೆಗೆ ಒಂದು ದಿನ ಅದನ್ನು ದೇವರಿಗೆ ಬಲಿ ಕೊಟ್ಟು ಅದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಿದ್ದದ್ದು ನಡೆದುಕೊಂಡು ಬಂದ ವಾಡಿಕೆ. ಹಾಗಾಗಿಯೇ ಇಂತಹ ಬಲಿ ಕೊಡುವ ದೇವಾಲಯಗಳು ಊರ ಹೊರಗಿರುತ್ತಿತ್ತು ಮತ್ತು ಬಹುತೇಕರು ತಮ್ಮ ಮನೆಗಳಲ್ಲಿ ಮಾಂಸಾಹಾರ ಮಾಡಲೆಂದೇ ವಿಶೇಷವಾದ ಪಾತ್ರೆ ಪಗಡಗಳನ್ನು ಇಟ್ಟಿರಿರುತಿದ್ದರಲ್ಲದೇ, ಮಾಂಸಾಹಾರವನ್ನು ತಮ್ಮ ಮನೆಯ ಅಡುಗೆ ಮನೆಯಲ್ಲಿ ಬೇಯಿಸದೇ ತೋಟದ ಮನೆಯಲ್ಲಿಯೋ ಇಲ್ಲವೇ ಮನೆಯ ಹಿತ್ತಲು ಅಥವಾ ಕೊಟ್ಟಿಗೆಯಲ್ಲಿ ಮಾಂಸಾಹಾರವನ್ನು ಮಾಡುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳವರೆಗೂ ಮಾಂಸಾಹಾರವನ್ನು ಸೇವಿಸಿದವರು ಅಪ್ಪಿ ತಪ್ಪಿಯೂ ಅಂದು ದೇವಸ್ಥಾನಗಳಿಗಾಗಲೀ ಇಲ್ಲವೇ ಸಸ್ಯಾಹಾರ ಸ್ವೀಕರಿಸುವ ಮನೆಗಳಿಗೆ ಹೋಗುತ್ತಿರಲಿಲ್ಲ ಮತ್ತು ಅಂತಹವರು ತಮ್ಮ ಮನೆಗಳಿಗೆ ಬಂದರೆ ಇವತ್ತು ನಮ್ಮ ಮನೆಯಲ್ಲಿ ಚೀಚೀ ಮಾಡಿದ್ದೇವೆ/ತಿಂದಿದ್ದೇವೆ. ದಯವಿಟ್ಟು ನಾಳೆ ಬನ್ನಿ ಎಂದು ಸೌಜನ್ಯಪೂರಕವಾಗಿ ಹೇಳಿ ಕಳುಹಿಸಿರುವ ಅನೇಕ ಸಂದರ್ಭಗಳಿಗೆ ವಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ.

ಕೆಲ ದಶಕಗಳಿಂದ ಈಚೆ ಬದಲಾವಣೆಯ ಗಾಳಿ ಬೀಸುತ್ತಿದ್ದಂತೆಯೇ ಎಲ್ಲವೂ ಬದಲಾಗಿ ಹೋಗಿ ಮೇಲೆ ತಿಳಿಸಿದ ಆರೋಗ್ಯಕರ ಪದ್ದತಿಗಳಿಗೆ ತಿಲಾಂಜಲಿಯನ್ನು ನೀಡಲಾಗಿ ಯಾರು ಬೇಕಾದರೂ, ಎಲ್ಲಿ ಬೇಕಾದರು, ಹೇಗೆ ಬೇಕಾದರೂ ಮಾಂಸಾಹಾರವನ್ನು ಸೇವಿಸುವ ಪದ್ದತಿ ರೂಡಿಗೆ ಬಂದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

halal1ಊರಿನ ಹೊರವಲಯದಲ್ಲಿ ಮಾರಾಟವಾಗುತ್ತಿದ್ದ ಕುರಿ ಕೋಳಿ, ಮೀನು, ಹಂದಿ ಮಾಂಸಗಳು ಇಂದು ಆಕರ್ಷಣೀಯವಾದ ಜಾಹೀರಾತುಗಳಿಂದ ಜನರನ್ನು ಮರಳು ಮಾಡುತ್ತಾ ಚೆಂದನೆಯ ಪ್ಯಾಕಿನಲ್ಲಿ ಸಾಧಾರಣ ತರಕಾರಿ ಅಂಗಡಿಗಳಲ್ಲಿಯೂ ಲಭ್ಯವಿದ್ದು ಅಗತ್ಯವಿದ್ದ ಯಾರು ಬೇಕಾದರೂ ಖರೀದಿಸ ಬಹುದಾಗಿದೆ. ಅದು ಇಷ್ಟೇ ಆಗಿದ್ದಲ್ಲಿ ಯಾರ ಆಕ್ಷೇಪಣೆ ಇರುತ್ತಿರಲಿಲ್ಲ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅ ಪ್ಯಾಕಿನ ಮೇಲೆ ಹಲಾಲ್ ಎಂಬ ಮುದ್ರೆ ಒತ್ತಿರುವುದು ಆತಂಕಕ್ಕೆ ಈಡು ಮಾಡಿದೆ. ಅದಕ್ಕಾಗಿಯೇ ಹಲಾಲ್ ಎಂದರೆ ಏನು ಎಂಬುದನ್ನು ಎಲ್ಲರೂ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾಗಿದೆ.

halal2ಮುಸಲ್ಮಾನರ ಕುರಾನ್ ಮತ್ತು ಹದೀಸ್ ಗಳಲ್ಲಿ ಹೇಳಿರುವಂತೆ ಮತ್ತು ಅನುಮೋದಿಸಲಾಗಿರುವುದನ್ನು ಹಲಾಲ್ ಎಂದೂ ಮತ್ತು ಅದರಲ್ಲಿ ನಿಷೇಧಕ್ಕೊಳಪಟ್ಟಿರುವಂಥವನ್ನು ಹರಾಮ್ ಎಂದೂ ಕರೆಯಲಾಗುತ್ತದೆ. ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಅದನ್ನು ಯಾರು ಮತ್ತು ಹೇಗೆ ಕತ್ತರಿಸಬೇಕೆಂಬ ನಿಯಮವಿದ್ದು ಪ್ರಾಣಿಗಳನ್ನು ವಧಿಸುವ ಮುನ್ನ ಮುಸಲ್ಮಾನ್ ಮೌಲ್ವಿಗಳು ಬಂದು ಪ್ರಾರ್ಥನೆ ಸಲ್ಲಿಸಿ ಆ ಪ್ರಾಣಿಗಳ ಮೇಲೆ ಪವಿತ್ರ ನೀರನ್ನು ಪ್ರೋಕ್ಷಿಸಿ, ಆ ಪ್ರಾಣಿಗಳ ಕುತ್ತಿಗೆಯನ್ನು ಸೀಳಿ, ಆ ಪ್ರಾಣಿಗಳು ವಿಲ ವಿಲ ಒದ್ದಾಡುತ್ತಾ ದೇಹದಲ್ಲಿದ್ದ ರಕ್ತವು ಸಂಪೂರ್ಣವಾಗಿ ಖಾಲಿಯಾದ ನಂತರ ಕತ್ತರಿಸಿದ ಮಾಂಸವನ್ನು ಸ್ವೀಕರಿಸಿದವರ ಪ್ರಾರ್ಥನೆಯನ್ನು ಮಾತ್ರವೇ, ಭಗವಂತನಿಗೆ ಸಂಪ್ರೀತವಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಹಿಂದೂಗಳು ಏಕ್ ಮಾರ್ ದೋ ತುಕುಡಾ ಎಂಬಂತೆ ಪ್ರಾಣಿಗಳಿಗೆ ಹೆಚ್ಚು ನೋವಾಗದಂತೆ ಒಂದೇ ಏಟಿಗೆ ಕತ್ತರಿಸಿದ ಮಾಂಸ ಹರಾಮ್ ಎನಿಸಿಕೊಂಡಿದ್ದು ಅದು ತಿನ್ನಲು ಯೋಗ್ಯವಲ್ಲ ಎಂಬುದು ಅವರ ನಂಬಿಕೆಯಾಗಿದೆ

halal4ಅರೇ ಈ ಹಲಾಲ್ ಎನ್ನುವುದು ಅವರವರ ಆಚರಣೆ. ಇದು ಭಾರತ ದೇಶ ಬೇಕೋ ಬೇಡವೋ ಜಾತ್ಯಾತೀತ ದೇಶ ಎಂದು ಯಾರೋ ಸಂವಿಧಾನದಲ್ಲಿ ಬಲವಂತವಾಗಿ ತುರುಕಿದ್ದಾರೆ ಅದಕ್ಕನುಗುಣವಾಗಿ ನಾವು ನಡೆದುಕೊಂಡು ಹೋಗಬೇಕೇ ಹೊರತು ಈ ರೀತಿಯಾಗಿ ಆಹಾರ ಪದ್ದತಿಯಲ್ಲಿ ಬೇಧಭಾವ ಕಲ್ಪಿಸುತ್ತಾ ಕೋಮು ಸೌಹಾರ್ಧ ಹಾಳುಮಾಡಬಾರದು ಎಂದು ಹೇಳುವವರಿಗೇನೂ ಕಡಿಮೆ ಇಲ್ಲ. ಆದರೆ ಇದು ಈ ರೀತಿಯಾಗಿ ಅಸಡ್ಡೆ ತೋರದೇ ನಿಜವಾಗಿಯೂ ಯೋಚಿಸಬೇಕಾದ ಗಮನಾರ್ಹವಾದ ಅಂಶವಾಗಿದೆ.

halal_certificateಈ ರೀತಿಯ ಹಲಾಲ್ ಹೇರಿಕೆ ಕೇವಲ ಮುಸಲ್ಮಾನರಿಗಲ್ಲದೇ, ಮುಸಲ್ಮಾನೇತರ ಮೇಲೂ ಬಲವಂತವಾಗಿ ಅವರಿಗೇ ತಿಳಿಯದಂತೆ ಹೇರಲಾಗುತ್ತಿರುವುದು ಕಳವಳಕಾರಿಯಾಗಿದೆ. ಇದು ಕೇವಲ ಪ್ರಾಣಿಗಳನ್ನು ವಿಶಿಷ್ಟ ರೀತಿಯಲ್ಲಿ ಕತ್ತರಿಸುವ ವಿಧಾನವಾಗಿದ್ದಲ್ಲಿ ಹೆಚ್ಚಿನ ತಕರಾರು ಇರುತ್ತಿರಲಿಲ್ಲ. ಒಂದು ಧರ್ಮದ ಆಚರಣೆಯ ನೆಪದಲ್ಲಿ ಇಡೀ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಹುನ್ನಾರ ಸದ್ದಿಲ್ಲದೇ ನಡೆಯುತ್ತಿದೆ. ಹಿಂದೂಗಳಲ್ಲಿ ಮಾಂಸದ ವ್ಯಾಪಾರವನ್ನು ಮಾಡುವವರು ಬಹುತೇಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು ಈಗ ಅವರು ಕತ್ತರಿಸಿದ ಮಾಂಸ ಹರಾಮ್ ಎಂದಾದಾಗ ಅವರು ತಮ್ಮ ವ್ಯಾಪಾರವನ್ನು ವೃದ್ಧಿಸುವ ಸಲುವಾಗಿ ಪರೋಕ್ಷವಾಗಿ ಮಾಂಸ ಕತ್ತರಿಸುವ ಮೊದಲು ಮುಸ್ಲಿಂ ಮೌಲ್ವಿಗಳನ್ನು ಕರೆಸಿ ಅವರಿಂದ ಪವಿತ್ರ ನೀರನ್ನು ಪ್ರೋಕ್ಷಿಸಿ ಅವರ ಪದ್ದತಿಯ ಮೂಲಕವೇ ಮಾಂಸ ಕತ್ತರಿಸ ಬೇಕಾದ ಅನಿವಾರ್ಯ ಸಂಧರ್ಭ ಒದಗಿಬಂದಿದೆ. ಈ ರೀತಿಯ ಕ್ರಮ ಈ ಅಂಗಡಿಯಲ್ಲಿ ಜಾರಿ ಇದೆ ಎಂದು ತಿಳಿದುವುದಕ್ಕಾಗಿಯೇ ಹಲಾಲ್ ಪ್ರಮಾಣ ಪತ್ರವನ್ನೂ ಸಹಾ ಅಂತಹ ಅಂಗಡಿಗಳಲ್ಲಿ ಪ್ರದರ್ಶನ ಮಾಡುತ್ತಾ, ಇಂತಹ ಪ್ರಮಾಣ ಪತ್ರವನ್ನು ಪಡೆಯಲು ಪ್ರತೀವರ್ಷವೂ ಹಲಾಲ್ ಬೋರ್ಡಿಗೆ ಇಂತಿಷ್ಟು ವಂತಿಕೆ ನೀಡಬೇಕೆಂಬ ನಿಯವೂ ಇದೆ. ಹಿಂದೂಗಳು ಕ್ರಮೇಣ ಈ ಪದ್ದತಿಯಿಂದ ಬೇಸರಿಕೊಂಡು ಇಷ್ಟೆಲ್ಲಾ ಉಸಾಬರಿ ತನಗೇಕೆ ಎಂದು ಮಾಂಸ ಮಾರುವುದನ್ನೇ ಅನಿವಾರ್ಯವಾಗಿ ಬಿಟ್ಟು ಬಿಟ್ಟಲ್ಲಿ ಆ ಪ್ರದೇಶದಲ್ಲಿ ಮಾಂಸಾಹಾರದ ಮಾರುಕಟ್ಟೆ ಸಂಪೂರ್ಣ ಮುಸಲ್ಮಾನರ ಕೈ ಪಾಲಾಗಿ ಹಿಂದೂಗಳು ನಿರುದ್ಯೋಗಿಗಳಾಗುತ್ತಾರೆ.

ದೇವಸ್ಥಾನಗಳಲ್ಲಿ ಮಂಗಳಾರತಿ ತಟ್ಟೆಗೆ ಭಕ್ತಿಯಿಂದ ಯಥಾ ಶಕ್ತಿ ದಕ್ಷಿಣೆ ಹಾಕುವುದನ್ನು ಅತ್ಯಂತ ಕಠು ಶಬ್ಧಗಳಲ್ಲಿ ವಿರೋಧಿಸುತ್ತಾ ಸಮಾಜದಲ್ಲಿ ಒಡಕನ್ನು ಉಂಟು ಮಾಡುವ ಬುದ್ದಿ ಜೀವಿಗಳಿಗೆ ಹಲಾಲ್ ರೂಪದಲ್ಲಿ ಮುಸ್ಲಿಂ ಮೌಲ್ವಿಗಳು ಬಿಸ್ಲಿಲ್ಲಾ ಎಂದು ನೀರು ಪ್ರೋಕ್ಷಿಸುತ್ತಾ ಮತ್ತು ಕೇವಲ ಒಂದು ಪ್ರಮಾಣ ಪತ್ರ ನೀಡುವ ಹಲಾಲ್ ಬೋರ್ಡ್ ನಡೆಸುತ್ತಿರುವ ಹಗಲು ದರೋಡೆ ಕಣ್ಣಿಗೆ ಕಾಣಿಸದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ,

halal_cuttingಸರ್ಕಸ್ಸಿನಲ್ಲಿ ಪ್ರಾಣಿಗಳಿಂದ ಕಸರತ್ತು ಮಾಡಿಸಿದರೆ, ಸಿನಿಮಾದಲ್ಲಿ ಪ್ರಾಣಿಗಳನ್ನು ತೋರಿಸಿದರೆ, ಬೀದೀ ನಾಯಿಗಳನ್ನು ಹಿಡಿದುಕೊಂಡು ಹೋದರೆ ಪ್ರಪಂಚವೇ ಉರುಳಿ ಹೋಯಿತು ಎಂದು ಬೊಬ್ಬಿರುವ ಪ್ರಾಣಿ ದಯಾ ಸಂಘದವರು, ಹಲಾಲ್ ಎಂಬ ಹೆಸರಿನಲ್ಲಿ ಪ್ರಾಣಿಗಳ ಕತ್ತು ಸೀಳಿ ರಕ್ತ ಬಸಿದು ಹೋಗುವವರೆಗೂ ವಿಲ ವಿಲ ಒದ್ದಾಡುವಂತೆಯೋ ಇಲ್ಲವೇ, ಪ್ರಾಣಿಗಳ ಮೇಲೆ ಬಿಸಿ ಬಿಸಿ ನೀರನ್ನು ಸುರಿದು ಅದರ ಚರ್ಮ ಸುಲಿದು ಪ್ರಾಣಿಗಳನ್ನು ನರಳಿಸುತ್ತಾ ಸಾಯುವಂತೆ ಮಾಡುತ್ತಿರುವುದನ್ನು ನೋಡಿಯೂ ನೋಡದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಆಶ್ಚರ್ಯದ ವಿಷಯವಾಗಿದೆ.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆಯುತ್ತಿಲ್ಲಾ ಎಂದು ಪ್ರತೀ ದಿನವೂ ಭಾಷಣ ಮಾಡುವ ರಾಜಕಾರಣಿಗಳಿಗೆ ಸದ್ದಿಲ್ಲದೇ ಹಲಾಲ್ನಲ್ಲಿ ಬಿಸ್ಮಿಲ್ಲಾ ಎನ್ನುತ್ತಾ ಪ್ರಾಣಿಯ ಕುತ್ತಿಗೆಯನ್ನು ನಿಧಾನವಾಗಿ ಕತ್ತರಿಸಬೇಕು. ಆ ಸಮಯದಲ್ಲಿ ಮೌಲ್ವಿಯೊಬ್ಬ ಕಲ್ಮಾ ಓದಬೇಕು ಮತ್ತು ಈ ರೀತಿಯಾಗಿ ಪ್ರಾಣಿಯನ್ನು ಕತ್ತರಿಸುವವ ಮುಸಲ್ಮಾನನೇ ಆಗಿರಬೇಕು ಎಂಬ ಅಂಶದ ಮೂಲಕ ಒಬ್ಬ ಹಿಂದೂವಿನ ಕೆಲಸಕ್ಕೆ ಕತ್ತರಿ ಹಾಕುತ್ತಿರುವ ಹುನ್ನಾರವನ್ನು ಪ್ರತಿಭಟಿಸುವ ಶಕ್ತಿಯೂ ಇಲ್ಲದೇ ಹೋಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಈಗ ಮಾಂಸ ಕತ್ತರಿಸುವವನು ಮುಸಲ್ಮನರಾಗಿರ ಬೇಕು ಎಂಬ ನಿಯಮವನ್ನು ಹಂತ ಹಂತವಾಗಿ ಬೆಳಸಿಕೊಂಡು ಹೋಗಿ, ನಂತರ ಪ್ರಾಣಿಗಳನ್ನು ಬೆಳೆಸುವವ ಮುಸಲ್ಮಾನನಾಗಿರ ಬೇಕು, ಅದನ್ನು ಕೊಂಡು ಮಾರುಕಟ್ಟೆಗೆ ಸರಬರಾಜು ಮಾಡುವವ ಮುಸಲ್ಮಾನನಾಗಿರಬೇಕು ಎನ್ನುತ್ತಾ ವಿಸ್ತರಿಸುತ್ತಾ ಹೋಗಿ ಒಂದು ದಿನ ಇಡೀ ಮಾಂಸಾಹಾರ ಮಾರುಕಟ್ಟೆ ಮುಸಲ್ಮಾನರ ಕೈವಶವಾದಾಗ ಪ್ರತಿಭಟನೆ ನಿರರ್ಥಕ ಎನಿಸುತ್ತದೆ.

halal3ಅರೇ ಈ ಹಲಾಲ್ ಎನ್ನುವುದು ಕೇವಲ ಮಾಂಸಾಹಾರಕ್ಕೆ ಸೀಮಿತವಾಗಿದೆ. ಸಸ್ಯಾಹಾರಿಗಳಿಗೆ ಇದರಿಂದ ಯಾವುದೇ ಹಾನಿಯಿಲ್ಲ ಎಂದು ಯೋಚಿಸುತ್ತಿದ್ದರೆ ಅದು ತಪ್ಪು ಕಲ್ಪನೆಯಾಗಿದೆ. ಈ ಹಲಾಲ್ ಕಬಂಧ ಬಾಹು ಕೇವಲ ಮಾಂಸಾಹಾರಕ್ಕಷ್ಟೇ ಸೀಮಿತವಾಗಿರದೇ, ಸದ್ದಿಲ್ಲದೇ ಒಣ ಹಣ್ಣುಗಳು, ಅಡುಗೆ ಎಣ್ಣೆ, ಸಿಹಿ ಪದಾರ್ಥಗಳು, ಗೋಧಿ, ಮೈದಾ ಮುಂತಾದ ಧಾನ್ಯಗಳು, ಬಿಸ್ಕೆಟ್, ಚಾಕ್ಲೇಟ್ ಮುಂತಾದ ಮಕ್ಕಳು ಸೇವಿಸುವ ಆಹಾರ ಪದಾರ್ಥಗಳು, ಸಾಬೂನು, ಶ್ಯಾಂಪೂ, ಹಲ್ಲುಜ್ಜುವ ಪುಡಿ & ಪೇಸ್ಟ್ ಗಳಲ್ಲದೇ ನಮ್ಮ ಹೆಣ್ಣು ಮಕ್ಕಳು ಬಳಸುವ ಕಣ್ಣಿನ ಕಾಡಿಗೆ, ಲಿಪ್‌ಸ್ಟಿಕ್ ಮುಂತಾದ ಸೌಂದರ್ಯವರ್ಧಕ ವಸ್ತುಗಳಲ್ಲಿಯೂ ನಿಧಾನವಾಗಿ ಹಲಾಲ್ ಸರ್ಟಿಫಿಕೇಟ್ ಕಾಣ ತೊಡಗಿದೆ. ಹಲ್ದಿರಾಮ್. ಬಾಬಾ ರಾಮ್ ದೇವ್ ಮುಂತಾದ ಸಸ್ಯಾಹಾರಿ ಸಿದ್ಧ ಆಹಾರಗಳನ್ನು ತಯಾರಿಸಿ ಮಾರುವವರು ಮತ್ತು ಮ್ಯಾಕ್‌ಡೊನಾಲ್ಡ್‌ನ ಬರ್ಗರ್ ಹಾಗೂ ಡಾಮಿನೋಸ್‌ನ ಪಿಝ್ಝಾಗಳೂ ಸಹಾ ಈಗ ಹಲಾಲ್ ಪ್ರಮಾಣೀಕೃತವಾಗಿವೆ ಎಂದರೆ ಸದ್ದಿಲ್ಲದೇ ಎಲ್ಲಿಯವರೆಗೂ ಈ ಹಲಾಲ್ ತಲುಪಿದೆ ಎಂಬುದನ್ನು ತಿಳಿಯಬಹುದಾಗಿದೆ. ಈಗ ಸೌಂದರ್ಯವರ್ಧಕಳಿಗೂ ಅದು ಮುಂದುವರೆದು ದೇಶದ ಪ್ರಖ್ಯಾತ ಔಷಧಿ ಮತ್ತು ಸೌಂದರ್ಯವರ್ಧಕ ವಸ್ತುಗಳ ತಯಾರಕರಾದ ಹಿಮಾಲಯ ಕಂಪನಿ ಹೆಮ್ಮೆಯಿಂದ ಹಲಾಲ್ ಸರ್ಟಿಫಿಕೇಟನ್ನು ತನ್ನ ಕಾರ್ಖಾನೆಯಲ್ಲಿ ಹಾಕಿಕೊಂಡಿರುವುದರ ಜೊತೆಗೆ ತನ್ನ ಪ್ರತೀ ಉತ್ಪನ್ನಗಳ ಮೇಲೆ ಹಲಾಲ್ ಪ್ರಮಾಣಿಕೃತ ಚಿಹ್ನೆಯನ್ನು ಹಾಕಿಕೊಂಡಿರುವುದು ಹಿಂದೂಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಆಸ್ಪತ್ರೆಗಳೂ ಸಹಾ ಹಲಾಲ್ ಪ್ರಮಾಣೀಕೃತವಾಗುತ್ತಿವೆ ಎಂಬುದನ್ನು ನೋಡುತ್ತಿದ್ದರೆ ಹಲಾಲ್ ಕಬಂಧ ಬಾಹು ಹೇಗೆ ಎಲ್ಲಿಯವರೆಗೂ ಹರಡಿಕೊಂಡಿದೆೆ ಎಂಬುದರ ಅರಿವಾಗುತ್ತದೆ.

ಹೀಗೆ ಹಂತ ಹಂತವಾಗಿ ಒಂದೊಂದೇ ಪದಾರ್ಥಗಳನ್ನು ಹಲಾಲ್ ವ್ಯಾಪ್ತಿಗೆ ತರುತ್ತಲೇ, ಒಂದು ದಿನ ಇವುಗಳನ್ನು ಬೆಳೆಯುವವನು, ಇವುಗಳನ್ನು ಕಚ್ಚಾ ವಸ್ತುಗಳ ರೀತಿಯಲ್ಲಿ ಸಂಗ್ರಹಣೆ ಮಾಡುವವನು, ಕಡೆಗೆ ಅದನ್ನು ಸಿದ್ದ ವಸ್ತುಗಳಾಗಿ ತಯಾರಿಸುವವನು, ಹೀಗೆ ತಯಾರಿಸುವುದರ ಉಸ್ತುವಾರಿ ವಹಿಸಿ ಅದನ್ನು ಧೃಢೀಕರಿಸುವವನು ಹೀಗೆ ಎಲ್ಲವೂ ಶರಿಯಾ ಪಾಲಿಸುವ ಮುಸ್ಲಿಮನಿಂದಲೇ ಆಗಬೇಕು ಎಂಬ ನಿಯವವನ್ನು ರೂಢಿಗೆ ತಂದಲ್ಲಿ ದೇಶದಲ್ಲಿನ ಅರ್ಥವ್ಯವಸ್ಥೆ ಸದ್ದಿಲ್ಲದೇ ಒಂದು ಕೋಮಿಗೇ ಸೀಮಿತವಾಗಿ ಏಕಸ್ವಾಮ್ಯವನ್ನು ಸಾಧಿಸುವಂತಾಗುವ ಕರಾಳ ಪರಿಸ್ಥಿತಿ ಬಂದೊಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಕಣ್ಣ ಮುಂದಿದೆ.

ಭಾರತ ಸರ್ಕಾರದ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಮತ್ತು ಅನೇಕ ರಾಜ್ಯಗಳಲ್ಲಿ ಆಹಾರ ಮತ್ತು ಔಷಧಿ ಪ್ರಾಧಿಕಾರಗಳು ಈಗಾಗಲೇ, ಇರುವಾಗ, ಜಾತ್ಯಾತೀತ ರಾಷ್ಟ ಎಂದು ಬೊಬ್ಬಿರುವ ಈ ದೇಶದಲ್ಲಿ ಕೇವಲ ಒಂದು ಕೋಮಿನವರು ನೀಡುವ ಹಲಾಲ್ ಪ್ರಮಾಣಪತ್ರದ ಆವಶ್ಯಕತೆ ಏನಿದೆ? ಆರಂಭದಲ್ಲಿ ಒಂದು ಉತ್ಪನ್ನಕ್ಕೆ ಈ ಹಲಾಲ್ ಪ್ರಮಾಣ ಪತ್ರ ಪಡೆಯುವುದಕ್ಕೆ ರೂ 20,500 ಮತ್ತು ಪ್ರತೀ ವರ್ಷವೂ ಇದರ ನವೀಕರಣಕ್ಕಾಗಿ 15,000 ರೂಪಾಯಿಗಳನ್ನು ಕೊಡಬೇಕಾಗಿದೆ. ಒಂದಕ್ಕಿಂತಲೂ ಹೆಚ್ಚಿನ ಉತ್ಪನ್ನಗಳಿಗೆ ಹಲಾಲ್ ಪ್ರಮಾಣ ಪತ್ರ ಪಡೆಯಲು ಪ್ರತ್ಯೇಕ ಶುಲ್ಕ ಕೊಡಬೇಕಾಗಿದೆ. ಹಲಾಲ್ ಉದ್ಯಮದಿಂದ ಬಂದ ಹಣದ ಒಂದು ಪಾಲು ಇಸ್ಲಾಂನ ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾಗಬೇಕು ಎನ್ನುವುದು ಮುಸ್ಲಿಮರ ನಿಯಮ. ಹಾಗೇ ಸುಮ್ಮನೇ ಲೆಖ್ಖಾ ಹಾಕುತ್ತಾ ಹೋದಲ್ಲಿ ಈ ರೀತಿಯ ಹಲಾಲ್ ಪ್ರಮಾಣ ಪತ್ರ ನೀಡುವ ದಂಧೆಯ ಮೂಲಕವೇ ಕೋಟ್ಯಾಂತರ ಹಣವನ್ನು ಅನಧಿಕೃತವಾಗಿ ಸಂಗ್ರಹಿಸಿ ಜಮಾತ್-ಇ -ಉಲೆಮಾ ಎಂಬ ಇಸ್ಲಾಮಿಕ್ ಸಂಸ್ಥೆ ಈ ಹಣವನ್ನು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೆ, ಮತಾಂತರಕ್ಕೆ, ಜಿಹಾದಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಆತಂಕವನ್ನುಂಟು ಮಾಡುತ್ತಿದೆ.

WhatsApp Image 2022-03-30 at 8.34.16 PMಹಲಾಲ್ ಮೂಲಕ ಮುಸಲ್ಮಾನರ ದೇವರಿಗೆ ಈಗಾಗಲೇ ಅರ್ಪಿತವಾದ ಮಾಂಸವನ್ನು ನಮ್ಮ ದೇವರುಗಳಿಗೆ ನೈವೇದ್ಯ ಮಾಡಿದಲ್ಲಿ ಎಂಜಿಲಾಗುತ್ತದೆ ಎಂಬುದನ್ನು ಅರಿತ ಹಿಂದೂಗಳು ಈ ಬಾರಿ ಯುಗಾದಿ ಹಬ್ಬಕ್ಕೆ ಹಲಾಲ್ ಮಾಂಸವನ್ನು ಧಿಕ್ಕರಿಸಿ ಜಟ್ಕಾ ಮಾಂಸವನ್ನೇ ಬಳಸಲು ನಿರ್ಧರಿಸಿರುವುದು ಹಿಂದೂಗಳು ಜಾಗೃತವಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವರ್ಷ ತೊಡಕು ದಿನಂದಂದು ಮಾಡುವ ಪ್ರತಿಯೊಂದು ಕೆಲಸಕಾರ್ಯಗಳು ವರ್ಷವಿಡೀ ಇರುತ್ತದೆ ಎಂಬ ನಂಬಿಗೆ ನಮ್ಮಲ್ಲಿ ಇರುವ ಕಾರಣ ಸಮಸ್ತ ಹಿಂದೂಗಳೂ ಇಂದಿನಿಂದ ಈ ಹಲಾಲ್ ಸಂಸ್ಕೃತಿಗೆ ಸ್ವಯಂಪ್ರೇರಿತರಾಗಿ ತಿಲಾಂಜಲಿಯನ್ನು ಇಡುತ್ತಿರುವುದು ಸ್ವಾಗತಾರ್ಹವಾಗಿದೆ.

ಹಲಾಲ್ ಪ್ರಮಾಣ ಪತ್ರ ಇರುವ ಉತ್ಪನ್ನಗಳನ್ನು ಕೊಳ್ಳುವುದಾಗಲೀ, ಹಲಾಲ್ ಎಂಬ ಬೋರ್ಡ್ ಹಾಕಿರುವ ಹೋಟೆಲ್ಗಳಲ್ಲಿ ಆಹಾರವನ್ನು ಸ್ವೀಕರಿಸದಿರೋಣ. ನಮ್ಮ ದೇಶದ ರೀತಿ ರಿವಾಜು, ಸಂಸ್ಕಾರ, ಸಂಪ್ರದಾಯ, ಕಾನೂನು ಮತ್ತು ಸುವ್ಯವಸ್ಥೆಗಳನ್ನು ಪಾಲಿಸುವವರಿಂದಲೇ ನಮ್ಮ ಆಹಾರ ಉತ್ಪನ್ನಗಳನ್ನು ಖರೀದಿಸುವ ಸಂಕಲ್ಪವನ್ನು ಮಾಡೋಣ. ನಾವು ಖರ್ಚು ಮಾಡುವ ಹಣ ನಮ್ಮ ದೇಶಕ್ಕೆ ಒಳಿತು ಮಾಡುವವರಿಗೆ ಮಾತ್ರವೇ ತಲುಪಬೇಕೇ ಹೊರತು ದೇಶವನ್ನು ಛಿದ್ರಮಾಡುವವರಿಗೆ ಅಲ್ಲಾ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

5 thoughts on “ಹಲಾಲ್

  1. ತಮ್ಮ ಈ ಲೇಖನ ಬಹಳ ಮನಮುಟ್ಟು ವಂತಿದ್ದು ಎಲ್ಲ ಮಾಂಮ್ಸಾ ಹಾರಿ ಹಿಂದುಗಳು ಓದಿತಿಳಿಯಲೇಬೇಕಾದ ಲೇಖನ ಬಹಳ ಚನ್ನಾಗಿ ವಿವರಿಸಿರುವುದಕ್ಕೆ ಧನ್ಯವಾದಗಳು

    Liked by 1 person

  2. ಎಲ್ಲವನ್ನು ಜನಗಳೇ ಮಾಡುವುದಾದರೆ ಸರಕಾರ ಗೆಣೆಸು ಕೆರೆಯುತ್ತ ಕುಳಿತಿದಿಯೆ? ಪ್ರಮಾಣ ಪತ್ರ ಕೊಡುವುದನ್ನು ಸರಕಾರ ನಿಲ್ಲಿಸಬಹುದಲ್ಲವೆ? ಅದೇನು ಕಾನೂನ ಮೂಲಕ ರಚನೆಯಾದ ಸ೦ಸ್ಥೆ ಅಲ್ಲ. ಬೇಕೆ೦ದವರು ಅ೦ಥಹ ಅ೦ಗಡಿಗಳಿಗೆ ಹೋಗಿ ತೆಗೆದುಕೊಳ್ಳಲಿ. ಎಲ್ಲರಿಗೂ ಕಡ್ಡಾಯವಾಗಿ ಹಾಕುವದನ್ನು ನಿಷೇಧಿಸಲಿ. ಹಿ೦ದೂಗಳು ಜಾಗೃತರಾಗಲಿ ಮತ್ತು ಹಲಾಲ್ ಮಾರ್ಕ್ ಇರುವ ಸಾಮಾನುಗಳನ್ನು ಅ೦ಥವರಿ೦ದ ತೆಗೆದುಕೊಳ್ಳುವದನ್ನು ನಿಲ್ಲಿಸಲಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s