ಸಿವಿಲ್ ಇಂಜೀನಿಯರಿಂಗ್ ನಲ್ಲಿ ಬಿ.ಟೆಕ್ ಪದವಿ ಪಡೆದಿರುವ ಅಧೂತ್ ಮೋಹಿತ್ ಎಂಬುವರ ಲೇಖನದ ಭಾವಾರ್ಥವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ನಾನು ಬ್ರಾಹ್ಮಣನಲ್ಲ, ನಾನು ಮರಾಠಿಗ. ಆದರೂ ಕಳೆದ ಕೆಲವು ವರ್ಷಗಳಿಂದ ನನ್ನ ಅವಲೋಕನಗಳನ್ನು ಆಧರಿಸಿ ಇದಕ್ಕೆ ಸೂಕ್ತವಾದ ಉತ್ತರವನ್ನು ನೀಡಬಲ್ಲೆ ಎಂದು ನಾನು ಭಾವಿಸುತ್ತೇನೆ.
ಇಂದಿನ ಭಾರತದಲ್ಲಿ ಬ್ರಾಹ್ಮಣನಾಗಿರುವುದು ಎಂದರೆ 1930ರ ಜರ್ಮನಿಯಲ್ಲಿ ಯಹೂದಿಗಳಿದ್ದಂತೆ. ಜರ್ಮನಿಯ ಜನಸಂಖ್ಯೆಗೆ ಹೋಲಿಸಿದರೆ, ಯಹೂದಿಗಳ ಶೇಕಡಾವಾರು ಸಂಖ್ಯೆ ಬಹಳಷ್ಟು ಕಡಿಮೆ ಇದ್ದರೂ, ಜರ್ಮನ್ನರಿಗೆ ತಮ್ಮೆಲ್ಲಾ ಸಮಸ್ಯೆಗಳಿರೂ ಯಹೂದಿಗಳೇ ಕಾರಣರು ಎಂಬ ಭಾವನೆಯಾಗಿತ್ತು.
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಬ್ರಾಹ್ಮಣರ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಲ್ಲ. ಭಾರತದ ಜನಸಂಖ್ಯೆಯಲ್ಲಿ ಕೇವಲ 2% ಜನರಿದ್ದರೂ ಬ್ರಾಹ್ಮಣರನ್ನು ಭಾರತದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಅನಾವಶ್ಯಕವಾಗಿ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ
ಎಲ್ಲಾ ಬ್ರಾಹ್ಮಣರೂ ಸಹ ಶ್ರೀಮಂತರು ಅಥವಾ ಶಕ್ತಿಶಾಲಿಗಳಲ್ಲ. ಅವರಲ್ಲಿ ಹೆಚ್ಚಿನವರು ಎಲ್ಲರಂತೆ ಮಧ್ಯಮ ವರ್ಗದವರು ಮತ್ತು ಅನೇಕರು ಕಡು ಬಡತನದ ರೇಖೆಗಿಂತಲೂ ಅತ್ಯಂತ ಕಡಿಮೆ ಸ್ಥಿತಿಯಲ್ಲಿ ಇದ್ದಾರೆ. ಅಂತಹವರು, ಮದುವೆ, ಮುಂಜಿ ನಾಮಕರಣ, ತಿಥಿ ಮುಂತಾದ ಧಾರ್ಮಿಕ ಸಮಾರಂಭಗಳಲ್ಲಿ ಪೌರೋಹಿತ್ಯ ಮತ್ತು ಅಡುಗೆ ಮಾಡಿಕೊಂಡು ಸ್ವಾಭಿಮಾನಿಗಳಾಗಿ ತಮ್ಮ ಜೀವನ ನಡೆಸುತ್ತಿದ್ದಾರೆ.
ಬ್ರಾಹ್ಮಣರಿಗೆ ಯಾವುದೇ ಮೀಸಲಾತಿ ಇಲ್ಲ ( ಇತ್ತೀಚೆಗೆ ಸರ್ಕಾರ ಕೊಟ್ಟಿರುವ 10% ಮೀಸಲಾತಿ ಎಲ್ಲಾ ಸವರ್ಣೀಯರಿಗೂ ಅನ್ವಯವಾಗುತ್ತದೆಯೇ ಹೊರತೂ, ಕೇವಲ ಬ್ರಾಹ್ಮಣರಿಗೆ ಮಾತ್ರವೇ ಮೀಸಲಾಗಿಲ್ಲ) ಅವರಿಗೆ ಸರ್ಕಾರದಿಂದ ಯಾವುದೇ ವಿಶೇಷ ಸಬ್ಸಿಡಿಗಳನ್ನು ನೀಡಲಾಗುವುದಿಲ್ಲ. ಆದರೂ ಎಲ್ಲದಕ್ಕೂ ಅವರನ್ನು ದೂಷಿಸಲಾಗುತ್ತದೆ.
ಜರ್ಮನಿಯಲ್ಲಿ ಎಲ್ಲದಕ್ಕೂ ಯಹೂದಿಗಳನ್ನೇ ಬಲಿಪಶುಗಳನ್ನಾಗಿ ಮಾಡುತ್ತಿದ್ದಂತೆ, ಭಾರತದಲ್ಲಿಯೂ ಕಮ್ಯುನಿಸ್ಟರು, ಇಸ್ಲಾಮಿಕ್ ಆಮೂಲಾಗ್ರರು ಮತ್ತು ಎಲ್ಲಾ ಹಿಂದೂ ವಿರೋಧಿ ಗುಂಪುಗಳು ಮತ್ತು ಕೆಲ ಸ್ವಯಂ ಘೋಷಿತ ಬುದ್ಧಿಜೀವಿಗಳು ನಿರಂತರವಾಗಿ ಬ್ರಾಹ್ಮಣರನ್ನು ವಿನಾಕಾರಣ ದ್ವೇಷಿಸುತ್ತಾರೆ ಮತ್ತು ದೂಷಿಸುತ್ತಾರೆ
ಏಳನೇ ಶತಮಾನದಲ್ಲಿ ಬೌದ್ಧರ ಅಹಿಂಸಾ ಪರಮೋಧರ್ಮಃ ಎಂಬುದಕ್ಕೆ ಮನಸೋತು ಮತ್ತು ಹಿಂದೂ ಧರ್ಮದಲ್ಲಿದ್ದ ಕಠುವಾದ ಆಚರಣೆಗಳಿಂದ ಬೇಸರಗೊಂಡ ಹಲವು ಬೌದ್ಧ ಧರ್ಮಕ್ಕೆ ಮತಾಂತರವಾಗಿ ಸನಾತನ ಧರ್ಮ ಅವನತಿಯ ಹಾದಿಯಲ್ಲಿ ಇದ್ದಾಗ, ಕೇರಳದ ಬ್ರಾಹ್ಮಣ, ವೈದಿಕ ಧರ್ಮಕ್ಕೆ ಸೇರಿದ ಆದಿ ಶಂಕರಾಚಾರ್ಯರು ತಮ್ಮ ಅಪಾರವಾದ ಪಾಂಡಿತ್ಯ, ಇಚ್ಛಾಶಕ್ತಿ, ಬುದ್ಧಿವಂತಿಕೆ ಮತ್ತು ಚರ್ಚಾ ಶಕ್ತಿಯಿಂದಾಗಿ ಎಲ್ಲರನ್ನೂ ಸೋಲಿಸಿ ಸರ್ವಜ್ಞ ಪೀಠವನ್ನೇರಿ, ದೇಶದ ನಾಲ್ಕೂ ಕಡೆಯಲ್ಲಿಯೂ ಧಾರ್ಮಿಕ ಶಕ್ತಿ ಕೇಂದ್ರಗಳನ್ನು ಆರಂಭಿಸಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.
ಅದಲ್ಲದೇ ನಿರಂಕುಶವಾಗಿ 1000 ವರ್ಷಗಳ ಕಾಲ ಹಿಂದೂ ಧರ್ಮದ ಮೇಲೆ ಅಕ್ರಮ ಮಾಡಿದ ಇಸ್ಲಾಮಿಕ್ ಆಕ್ರಮಣಕಾರನ್ನು ಮತ್ತು 300 ವರ್ಷಕ್ಕೂ ಅಧಿಕ ಕಾಲ ಬ್ರಿಟಿಷ್ ವಸಾಹತುಶಾಹಿಗಳ ಗುಲಾಮಗಿರಗಳ ಸತತ ಧಾಳಿಯ ನಡುವೆಯೂ, ಸನಾತನ ಅಮೂಲ್ಯ ಗ್ರಂಥಗಳಾದ ವೇದಗಳು, ಉಪನಿಷತ್ತುಗಳು, ಬ್ರಹ್ಮ ಸೂತ್ರಗಳು, ಭಗವದ್ಗೀತೆಯ ಜ್ಞಾನವನ್ನು ಸಂರಕ್ಷಿಸಿ ಉಳಿಸಿದವರೇ ಬ್ರಾಹ್ಮಣರು. ಉಳಿದೆಲ್ಲಾ ಜಾತಿಯ ಹಿಂದೂಗಳು ನಮ್ಮ ಧರ್ಮವನ್ನು ಉಳಿಸಲು ಹೋರಾಡಿದರೆ, ವೇದ ಧರ್ಮದ ಮೂಲ ಗ್ರಂಥಗಳು ಮತ್ತು ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಉಳಿಸಿದವರು ಬ್ರಾಹ್ಮಣರು ಎನ್ನುವುದು ಸತ್ಯ.
ಜಗತ್ತಿನ ಬಹುತೇಕ ಭಾಷೆಗಳ ಮೂಲ ಭಾಷೆಯಾದ ಸಂಸ್ಕೃತ ಭಾಷೆಯನ್ನು ಜೀವಂತವಾಗಿರಿಸಿದ್ದ (ಮತ್ತು ಇನ್ನೂ ಇಟ್ಟುಕೊಂಡಿರುವ) ಬ್ರಾಹ್ಮಣರು, ಮೊಘಲ್ ಸಾಮ್ರಾಜ್ಯವನ್ನು ನಾಶಪಡಿಸಿ ಮರಾಠಾ ಸಾಮ್ರಾಜ್ಯವನ್ನು ಅಷ್ಟು ದೊಡ್ಡದಾಗಿ ವಿಸ್ತರಿಸಿದ ಬಾಜಿರಾವ್ ಪೇಶ್ವೆಯವರೂ ಸಹಾ ಬ್ರಾಹ್ಮಣರೇ ಆಗಿದ್ದರು ಎನ್ನುವುದು ಗಮನಾರ್ಹ.
ಬಹುಶಃ ಬ್ರಾಹ್ಮಣರಿಲ್ಲದಿದ್ದರೆ, ವೇದ ನಾಗರಿಕತೆಯು ಪರ್ಷಿಯನ್, ಗ್ರೀಕ್, ಈಜಿಪ್ಟಿನ, ರೋಮನ್ ಮತ್ತು ಇತರ ಅನೇಕ ನಾಗರಿಕತೆಗಳಂತೆ ಸತ್ತುಹೋಗುತ್ತಿತ್ತು. ಹಾಗಾಗಿ ಬ್ರಾಹ್ಮಣರೇ ಪ್ರಾಚೀನ ವೈದಿಕ ನಾಗರಿಕತೆಗೆ ನಮ್ಮನ್ನು ಸಂಪರ್ಕಿಸುವ ಕೊಂಡಿಗಳಾಗಿದ್ದರು ಎಂದರೂ ಅತಿಶಯವಲ್ಲ.
ಇಂಗ್ಲಿಷ್ನಲ್ಲಿ To kill a snake, cut it’s head off ಅಂದರೆ ಹಾವನ್ನು ಕೊಲ್ಲ ಬೇಕೆಂದರೆ ಅದರ ತಲೆಯನ್ನು ಮೊದಲು ಕತ್ತರಿಸಿ ಎಂಬ ಗಾದೆಯ ಮಾತಿನಂತೆ, ಭಾರತದಲ್ಲಿ ಹಿಂದೂ ಧರ್ಮವನ್ನು ಅಳಿಸಲು ಬುದ್ಧಿವಂತರಾದ ಬ್ರಾಹ್ಮಣರನ್ನು ನಾಶಮಾಡಬೇಕು ಎಂಬುದನ್ನು ಅತ್ಯಂತ ಶೀಘ್ರವಾಗಿ ಬ್ರಿಟೀಶರು ಮನಗಂಡಿದ್ದರು. ಈಗ ಅದನ್ನೇ, ಭಾರತದ ಹಿಂದೂ ವಿರೋಧಿ ಶಕ್ತಿಗಳು 40 ರ ದಶಕದಲ್ಲಿ ಯಹೂದಿಗಳ ವಿರುದ್ಧ ಧಾಳಿ ಮಾಡಿದ ನಾಜಿಗಳಂತೆಯೇ ಇಂದು ಬ್ರಾಹ್ಮಣರು ಮೇಲೆ ಬಿದ್ದಿದ್ದಾರೆ.
ಇದಕ್ಕೆ ಪುರಾವೆ ಎಂಬಂತೆ ಕೆಳಜಾತಿಯವರು ಬ್ರಾಹ್ಮಣರಿಂದ ಅತ್ಯಂತ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬ ಕಟ್ಟು ಕಥೆಯನ್ನು ತೇಲಿಬಿಟ್ಟರು. ನಿಜ ಹೇಳಬೇಕೆಂದರೆ, ನಾನು ಜಾತಿ ತಾರತಮ್ಯವನ್ನು ವಿರೋಧಿಸುತ್ತೇನೆ. ಆದರೆ, ನಿಜವಾದ ಚರಿತ್ರೆಯಲ್ಲಿ ಹಿಂದೂಗಳು, ಬೌದ್ಧರು, ಜೈನರು ಇಸ್ಲಾಮಿಕ್ ಆಡಳಿತಗಾರರಿಂದ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದಾರೆಯೇ ಹೊರತು, ಇಸ್ಲಾಮಿಕ್ ಆಕ್ರಮಣಕಾರರಂತೆ ಬ್ರಾಹ್ಮಣರು ಎಂದಿಗೂ ಯಾರೊಬ್ಬರ ವಿರುದ್ಧವೂ ನರಮೇಧ ಅಭಿಯಾನವನ್ನು ನಡೆಸಲಿಲ್ಲ. ಯಾವುದೇ ಧಾರ್ಮಿಕ ಕಟ್ಟಡಗಳನ್ನು ಹಾಳು ಮಾಡುವುದಿರಲಿ, ಕನಿಷ್ಟ ಪಕ್ಷ ಒಂದು ಚೂರು ಭಿನ್ನಗೊಳಿಸಿದ ಯಾವುದೇ ಇತಿಹಾಸವಿಲ್ಲ.
2500 ವರ್ಷಗಳ ಹಿಂದಿನ ವೈದಿಕ ಕಾಲದಲ್ಲಿ ಮಾತ್ರ ಬ್ರಾಹ್ಮಣರು ಪ್ರಭಲಾಗಿದ್ದಿರ ಬಹುದು ಅದರೆ ಕ್ರಿ.ಪೂ 500 ರಲ್ಲಿ ಬೌದ್ಧಧರ್ಮದ ಆರಂಭವಾದ ನಂತರದ, ಭಾರತೀಯರು ಬ್ರಾಹ್ಮಣರ ಸಂಪ್ರದಾಯಗಳನ್ನು ಧಿಕ್ಕರಿಸಿ, ನಿಧಾನವಾಗಿ ಬೌದ್ಧಧರ್ಮಕ್ಕೆ ಮತಾಂತರವಾಗ ತೊಡಗಿದರು.
8 ನೇ ಶತಮಾನದವರೆಗೆ ಶಂಕರಾಚಾರ್ಯರು ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವವರೆಗೂ ಬೌದ್ಧಧರ್ಮವೇ ಭಾರತ ಮತ್ತು ಸುತ್ತಮುತ್ತಲ ವಿದೇಶಗಳಲ್ಲಿಯೂ ಬಹುಸಂಖ್ಯಾತ ಧರ್ಮವಾಗಿತ್ತು.
ಅದಾಗಿ 200 ವರ್ಷಗಳ ನಂತರ ಇಸ್ಲಾಮಿಕ್ ಆಕ್ರಮಣಗಳು ಪ್ರಾರಂಭವಾಗಿ ಉತ್ತರದಿಂದ ದಕ್ಷಿಣದ ವರೆಗೂ ಭಾರತದ ಬಹುಭಾಗ ಇಸ್ಲಾಮಿಕ್ ಆಡಳಿತಗಾರರ ದೌರ್ಜನ್ಯಕ್ಕೆ ಒಳಗಾಗಿತ್ತು. ಮೊಘಲ್ ಸಾಮ್ರಾಜ್ಯದ ಇನ್ನೇನೂ ಅಂತ್ಯವಾಗುತ್ತದೆ ಎನ್ನುವಷ್ಟರಲ್ಲಿ ಯೂರೋಪಿಯನ್ನರ ಹಿಡಿತಕ್ಕೆ ಒಳಗಾಗಿ ಅದರಲ್ಲೂ ಬ್ರಿಟಿಷರ ವಸಾಹತುಗಳಗಿ ಮಾರ್ಪಾಟಾಗಿತ್ತು.
ನಂದರ ದುರಾಡಳಿಕ್ಕೆ ವಿರೋಧವಾಗಿ ಚಂದ್ರಗುಪ್ತನೆಂಬ ಸಾಮಾನ್ಯರ ಬೆನ್ನುಲುಬಾಗಿನಿಂತು ನಂದರ ವಂಶವನ್ನು ನಿರ್ನಾಮಗೊಳಿಸಿ ಮೌರ್ಯ ವಂಶ ಸ್ಥಾಪಿಸಿದವರು ಇಂದಿಗೂ ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದೇ ಖ್ಯಾತಿ ಪಡೆದ ಚಾಣಕ್ಯ.
ಉತ್ತರದಲ್ಲೆಲ್ಲಾ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ, ದಕ್ಷಿಣದ ಕಡೆ ದಂಡೆತ್ತಿ ಬರುತ್ತಿದ್ದ ಮೊಘಲರನ್ನು ಸಾಧಾರಣ ಪಾಳೆಯಗಾರರಾಗಿದ್ದ ಹಕ್ಕ-ಬುಕ್ಕರ ಬೆಂಬಲಕ್ಕೆ ನಿಂತು ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯರು.
ಚಾಣಕ್ಯ ಮತ್ತು ವಿದ್ಯಾರಣ್ಯರು ಮನಸ್ಸು ಮಾಡಿದ್ದಲ್ಲಿ ತಾವೇ ರಾಜರಾಗಬಹುದಿತ್ತಾದರೂ, ಅವರೆಂದೂ ಆ ದುರಾಸೆ ಪಡಲಿಲ್ಲ. ಅವರು King ಆಗುವುದಕ್ಕಿಂತಲೂ King Maker ಆಗುವುದಕ್ಕೇ ಇಚ್ಚೆ ಪಟ್ಟು, ರಾಜ್ಯ ಸ್ಥಾಪನೆಯಾಗಿ ಸುಸ್ಥಿರವಾದ ಕೂಡಲೇ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿರತರಾದರು.
ಇತಿಹಾಸದ ಈ ಎಲ್ಲಾ ಉದಾಹರಣೆಗಳನ್ನು ಅವಲೋಕಿಸಿದರೆ, ಭಾರತದಲ್ಲಿ ಕಳೆದ 1000 ವರ್ಷಗಳಿಂದ ಬ್ರಾಹ್ಮಣರು ಭಾರತದಲ್ಲಿ ಎಂದೂ ಪ್ರಭಲವಾಗಿ ಅಧಿಕಾರದಲ್ಲಿ ಇರಲೇ ಇಲ್ಲ. ಎಲ್ಲಾ ರಾಜಕೀಯ, ಆರ್ಥಿಕ ಮತ್ತು ಆಡಳಿತ ಅಧಿಕಾರಗಳು ಇಸ್ಲಾಮಿಕ್ ಚಕ್ರವರ್ತಿಗಳಿಂದ ಬ್ರಿಟಿಷರರಿಗೆ ಹಸ್ತಾಂತರವಾಗಿ ನಂತರ ಪ್ರಜಾಪ್ರಭುತ್ವದ ಆಡಳಿತಕ್ಕೆ ಒಳಗಾಯಿತು. ಹಾಗಾಗಿ ಇಂದಿನ ಭಾರತದಲ್ಲಿ ಹೆಚ್ಚಿನ ಬಡತನ ಮತ್ತು ಅಸಮಾನತೆಗಳು ವಸಾಹತುಶಾಹಿ ಮತ್ತು ಬಂಡವಾಳಶಾಹಿಗಳ ಕೊಡುಗೆಯಾಗಿದೆ. ಅವರು ಸೃಷ್ಟಿಸಿದ ಪರಿಸ್ಥಿತಿಗಳಿಗೆ ಬ್ರಾಹ್ಮಣರನ್ನು ಸುಖಾ ಸುಮ್ಮನೆ ಏಕೆ ದೂಷಿಸಲಾಗುತ್ತದೆ ? ಎಂದು ತಿಳಿಯದಾಗಿದೆ.
ಸ್ವಾತ್ರಂತ್ರ್ಯಾನಂತರವಂತೂ ಬ್ರಾಹ್ಮಣರು ತಮ್ಮ ಸ್ವಂತ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಇತರರು ಬ್ರಾಹ್ಮಣರ ಬಗ್ಗೆ ಏನು ಆಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಕನಿಷ್ಠ ತಲೆಕೆಡಿಸಿಕೊಳ್ಳದೇ, ತಮ್ಮ ಬುದ್ಧಿ ಶಕ್ತಿ, ಕಠಿಣ ಪರಿಶ್ರಮದಿಂದ ವಿಶ್ವಾದ್ಯಂತ ಯಶಸ್ವಿಯಾಗಿದ್ದಾರೆ. ಎಪ್ಪತ್ತರ ದಶಕದಲ್ಲಿ ಉಳುವವನಿಗೇ ಭೂಮಿ ಎಂಬ ಕಾನೂನು ಬಂದಾಗಲಂತೂ ಅತ್ಯಂತ ಹೆಚ್ಚಿನ ಭೂಮಿಯನ್ನು ಕಳೆದುಕೊಂಡವರು ಬ್ರಾಹ್ಮಣರೇ. ಹಿಂದಿನ ದಿನದವರೆಗೂ ನೂರಾರು ಎಕರೆ ಜಮೀನ್ದಾರರಾಗಿದ್ದವರು ಏಕಾ ಏಕಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದರೂ, ಯಾವುದೇ ರೀತಿಯ ಪ್ರತಿಭಟನೆಯಾಗಲೀ, ಹೋರಾಟವನ್ನಾಗಲೀ ಮಾಡದೇ, ಪಾಲಿಗೆ ಬಂದದ್ದು ಪಂಚಾಮೃತ ಎಂದು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಮಾಡಿಕೊಂಡು ಜೀವನ ನಡೆಸತೊಡಗಿದರು.
ಈ ಕ್ಷಣಕ್ಕೂ, ವಿಶ್ವದ ಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ ಮೈಕ್ರೋಸಾಫ್ಟ್ , ಗೂಗಲ್, ಇನ್ಫೋಸಿಸ್ ಇನ್ನು ಮುಂತಾದ ಕಂಪನಿಗಳಲ್ಲಿ ಬ್ರಾಹ್ಮಣರೇ ಪ್ರಮುಖ ಸ್ಥಾನಗಳಲ್ಲಿದ್ದರೂ, ಅವರೆಂದೂ ಜಾತಿವಾದಿಗಳಾಗಿಲ್ಲ. ತಮ್ಮ ಜಾತಿಯವರಿಗೆ ಪ್ರಾಮುಖ್ಯತೆಯನ್ನೂ ನೀಡಿಲ್ಲ ಎನ್ನುವುದು ಗಮನಾರ್ಹವಾಗಿದೆ.
ಇನ್ನು ಹೊಸ ಪೀಳಿಗೆಯ ಬ್ರಾಹ್ಮಣ ಯುವಕರಂತೂ ಈ ಜಂಜಾಟಗಳಿಂದ ಬೇಸತ್ತು, ತಮ್ಮ ಬುದ್ಧಿವಂತಿಗೆ ಮತ್ತು ಕಠಿಣ ಪರಿಶ್ರಮದಿಂದ ಇಂದು ವಿಶ್ವದ ವಿವಿಧ ಮೂಲೆಗಳಿಗೆ ವಲಸೆ ಹೋಗಿದ್ದಾರೆ ಮತ್ತು ತಮ್ಮ ಪರಿಣತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನಗಳನ್ನು ಪಡೆದಿದ್ದಾರೆ. When you are in Rom, be lika a Roman ಎನ್ನುವಂತೆ ಎಲ್ಲೆಡೆಯೂ ಬ್ರಾಹ್ಮಣರು ತಾಳ್ಮೆ ಮತ್ತು ಶಾಂತಿಯಿಂದ ಜೀವಿಸುವುದಲ್ಲದೇ ಸನ್ನಡತೆಗೆ ಹೆಸರುವಾಸಿಯಾಗಿದ್ದಾರೆ.
ಈಗ ಹೇಳಿ,
ಶತ ಶತಮಾನಗಳ ಹಿಂದೆ ಆಗಿರಬಹುದಾಗಿದ್ದ ತಪ್ಪುಗಳಿಗೆ ಈ ಪರಿಯಾಗಿ ಇಂದಿಗೂ ಬ್ರಾಹ್ಮಣರನ್ನು ದೂಷಿಸುವುದು ಮತ್ತು ದ್ವೇಷಿಸುವುದು ಎಷ್ಟು ಸರಿ?
ಮೀಸಲಾತಿಯ ಹಂಗಿಲ್ಲದೇ, ಸ್ಚಶಕ್ತಿಯಿಂದ ಉದ್ದಾರವಾಗಿರೋದು ತಪ್ಪಾ?
ಭಾರತದಲ್ಲಿ ಬ್ರಾಹ್ಮಣರಾಗಿ ಹುಟ್ಟುವುದೇ ತಪ್ಪಾ?
ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂದು ಎನ್ನುವುದು ಬರೀ ಬಾಯಿ ಮಾತಾ?
ನಾವೂ ಬದುಕೋಣ. ಎಲ್ಲರನ್ನೂ ಬಾಳಲು ಬಿಡೋಣ. ಎಷ್ಟಾದರೂ ನಮ್ಮದು ವಸುಧೈವ ಕುಟುಂಬಕಂ ಅಲ್ಲವೇ? ಎನ್ನುತ್ತಲೇ, ಬ್ರಾಹ್ಮಣರನ್ನು ದೂರ ಮಾಡಿದರೆ ಸಮಾಜದಲ್ಲಿ ಸಮಾನತೆ ಹೇಗೆ ಸಾಧ್ಯ?
ಏನಂತೀರೀ?
ನಿಮ್ಮವನೇ ಉಮಾಸುತ
ಒಂದು ತಿದ್ದುಪಡಿ;
ಆದಿಶಂಕರರು ಮತ್ತು ಅಭಿನವ ಶಂಕರರು ಬೇರೆ ಬೇರೆ. ಕ್ರಿಸ್ತಪೂರ್ವದ ಶಂಕರರನ್ನು ಕ್ರಿಸ್ತಶಕೆಗೆ ತಂದು ನಿಲ್ಲಿಸಿದ್ದು ಮೆಕಾಲೆ ಮತ್ತು ನೆಹರೂನ ಸಿದ್ಧಾಂತದ ಇತಿಹಾಸಕಾರರು ! ಪುರಿ, ಬದರಿ, ದ್ವಾರಕಾಶ್ರಮಗಳ ಇತಿಹಾಸಕ್ಕೂ ೮ನೆಯ ಶತಮಾನಕ್ಕೂ ತಾಳೆಯಾಗುವುದಿಲ್ಲ ! ಶೃಂಗೇರಿಯ ಇತಿಹಾಸದ ಅಪಸವ್ಯವನ್ನು ಪಾರದರ್ಶಕವಾಗಿ ಸಂಶೋಧನೆ ಮಾಡಿ, ಮುಕ್ತವಾಗಿ ಒಪ್ಪಿಕೊಳ್ಳುವ ವಿಶಾಲ ಹೃದಯ ಬೇಕಷ್ಟೆ.
LikeLiked by 1 person
ಸರ್ ಶಂಕರರ ಜನ್ಮ ದಿನಾಂಕದ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ ಎಂದು ಈಗಾಗಲೇ ಶಂಕರ ಕುರಿತಾದ ನನ್ನ ಲೇಖನದಲ್ಲಿ ತಿಳಿಸಿದ್ದೇನೆ. ನಮ್ಮ ಶ್ರಧ್ದೆಯ ಪ್ರಕಾರ ಶಂಕರರು ಕ್ರಿ.ಪೂ ಹುಟ್ಟಿದ್ದಾರೆ.ಸದ್ಯದ ಇತಿಹಾಸದ ಪ್ರಕಾರ ಏಳನೇ ಶತಮಾನ ಹಾಗಾಗಿ ಅದನ್ನೇ ಪ್ರಾಮುಖ್ಯಗಿಟ್ಡುಕೊಂಡಿದ್ದೇನೆ. ಅನ್ಯಥಾ ಭಾವಿಸದಿರಿ.
LikeLike
ಅದ್ಭುತವಾಗಿ ಹೇಳಿದ್ದೀರಿ. ನಿಮ್ಮ ಅಧ್ಯಯನಕೊಂದು ಸಲಾಂ.
LikeLiked by 1 person
ಅಧೂತ್ ಮೋಹಿತರ ಅನಿಸಿಕೆಗೆ ಶತಕೋಟಿ ನಮನಗಳು.
ಅಧೂತ್ ಮೋಹಿತ್ ರವರ ವಿಳಾಸ ಸಹಿತ ಅವರ ಮೂಲ ಲೇಖನವನ್ನು ದಯಮಾಡಿ
ನನ್ನ ಇಮೇಲ್ kaansen_bng@yahoo.co.in ಗೆ ಕಳುಹಿಸಿದರೆ, ನಾನು ಆಭಾರಿ.
LikeLike
ಮೋಹಿತ್ ಅವರ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿ ಓದಿ ಮನಸ್ಸಿಗೆ ಹಿಡಿಸಿದ ಕಾರಣ ಅದನ್ನು ಕನ್ನಡಕ್ಕೆ ಭಾವಾನುವಾದ ಜೊತೆ ಕೆಲವೊಂದು ಪೂರಕ ಅಂಶಗಳನ್ನೂ ಸೇರಿಸಿ ಈ ಲೇಖನ ಪ್ರಕಟಿಸಿದ್ದೇನೆ.
ಹಾಗಾಗಿ ಮೂಲ ಲೇಖಕರ ವಯಕ್ತಿಕ ಪರಿಚಯ ಇಲ್ಲದ ಕಾರಣ ಅವರ ವಿವರಗಳನ್ನು ತಮಗೆ ತಿಳಿಸಲಾಗದೇ ಇರುವುದಕ್ಕಾಗಿ ಕ್ಷಮೆ ಇರಲಿ
LikeLike
ಈಗಿನ ಪರಿಸ್ಥಿತಿ ನೋಡಿದರೆ ಕೆಲಸವೂ ಸಿಗುತ್ತಿಲ್ಲ ಎಲ್ಲಾ ಕಡೆ ತುಳಿಯುತ್ತಿದ್ದಾರೆ ಮುಂದೆ ಜೀವನ ಹೇಗೆ ಎಂಬುದೇ ತಿಳಿಯುತ್ತಿಲ್ಲ , ಬದುಕುವ ಆಸೆ ಇಲ್ಲ ಬದುಕು ಸಾಕೇನಿಸಿದೆ ನನಗೆ ಎಂದು ವಿರಾಮ ಹೇಳುವೆನು ಈ ಜೀವಕ್ಕೆ ನಾ ಕಾಣೆ , ಆ ದೇವರಲ್ಲಿ ಕೇಳಿ ಕೊಳ್ಳುವುದು ಏನೆಂದರೆ ಮುಂದಿನ ಜನ್ಮ ಅಂತ ಇದ್ದರೆ ಮಾನವನಾಗಿ ಮಾತ್ರ ಹುಟ್ಟಿಸಬೇಡ ಎಂದು ಕೇಳಿಕೊಳ್ಳುತ್ತೇನೆ 🙏
LikeLiked by 1 person
ಜೀವನದಲ್ಲಿ ನಿರಾಶೆಯಾಗದಿರಿ. ಕೋವಿಡ್ ಸಮಯದಲ್ಲಿ ನನ್ನದೂ ಕೆಲಸ ಹೋಗಿತ್ತು. ದೇವರ ದಯೆಯಿಙದ ನಾಲ್ಕು ದಿನಗಳ ಹಿಂದೆ ಹೊಸಾ ಕೆಲಸ ಸಿಕ್ಕಿದೆ.
ಸಮಯ ಮಾಡಿಕೊಂಡು ಶ್ರದ್ಧೆಯಿಂದ ದಯವಿಟ್ಟು ಗುರು ಚರಿತ್ರೆ ಓದಿ. ಎಲ್ಲವೂ ಸರಿ ಹೋಗುತ್ತದೆ. ನಾನು ಸಹಾ ಅದನ್ನೇ ಪಾಲಿಸಿದೆ
LikeLike
ಮೋಹಿತ್ ಅವರ ಲೇಖನ ಸ್ಪಷ್ಟ ಹಾಗೂ ಕಾರುಣ್ಯದಿಂದ ಕೊಡಿದೆ, ಅವರಿಗೆ ನನ್ನ ನಮಸ್ಕಾರಗಳು.
ನಿಜವಾಗಲೂ ಅವರು ಹೇಳಿದಂತೆ ಬ್ರಾಹ್ಮಣರು ಆಡಳಿತದ ಚುಕ್ಕಾಣಿ ಎಂದೂ ಹಿಡಿಯಲೇ ಇಲ್ಲಾ, ಹಿಡಿದಿದ್ದರೂ ಅಲ್ಲೋಬ್ಬ ಇಲ್ಲೋಬ್ಬ ಇದ್ದಾರೆ, ವೇದ ಪೂರ್ವ ಕಾಲದಿಂದಲೂ ಈ ದೇಶದ ಆಡಳಿತದ ಚುಕ್ಕಾಣಿ ಕ್ಷತ್ರೀಯರು, ಶೂದ್ರರು ಹಿಡಿದಿದ್ದಾರೆ ಅದರಲ್ಲೂ ಶೂದ್ರರೇ ಅತೀ ಹೆಚ್ಚು ಆಮೇಲೆ ಅವರು ಕ್ಷತ್ರೀಯರಾದರು. ಈವರೆಗೂ ಕೂಡಾ ಬ್ರಾಹ್ಮಣರು ಆಡಳಿತದ ಚುಕ್ಕಾಣಿ ಸ್ವಾತಂತ್ರ್ಯ ನಂತರ ಯಾರೂ ಹಿಡಿದಿಲ್ಲ ನರಸಿಂಹ ರಾವ್ ಬಿಟ್ರೆ. ಹಾಗಾದರೆ ಈವಾಗ ತುಳಿತಕ್ಕೊಳಗಾದ ದಲೀತರ ಶಿಕ್ಷಣ, ಆರೋಗ್ಯ, ಉದ್ಯೋಗ,ಆರ್ಥಿಕ ಸ್ಥಿತಿಗತಿ ಇವುಗಳಿಗೆ ಕಾರಣರು ಯಾರು?
ಇನ್ನಾದರೂ ಬ್ರಾಹ್ಮಣರ ಶೋಷಣೆ ನಿಲ್ಲಲಿ. ಬ್ರಾಹ್ಮಣ ಜನಾಂಗದ ಬಡವರನ್ನು ಗುರುತಿಸಿ ಅವರನ್ನು ಮೇಲಕ್ಕೆತ್ತುವ ಕೆಲಸ ಆಗಬೇಕಾಗಿದೆ.
ಹಾ! ಯಾವುದೋ ಬ್ರಾಹ್ಮಣ ಜನಾಂಗದ ಕೆಲವು ಜನ MLA MP ಮಂತ್ರಿಗಳಾದರೆ ಅವರಿಂದ ಬ್ರಾಹ್ಮಣರ ಉದ್ಧಾರ ಆಗುವುದಿಲ್ಲ ಅದು ಭ್ರಮೆ.
ಯಾರನ್ನೂ ನೋಯಿಸುವ ಉದ್ದೇಶ ನಮ್ಮದಲ್ಲ ಇದು ಸತ್ಯ.
LikeLiked by 1 person
ಸ್ವಾತಂತ್ರ್ಯ ನಂತರದಲ್ಲಿ ಭಾರತದ ಚುಕ್ಕಾಣಿಯನ್ನು ನರಸಿಂಹರಾವ್ ಬಿಟ್ಟರೆ ಬೇರೆ ಯಾರು ಹಿಡಿದಿಲ್ಲ ಎಂದು ತಿಳಿಸಿದ್ದೀರಿ ಆದರೆ ಪಂಡಿತ್ ಜವಾಹರ್ ಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿ, ಚಂದ್ರಶೇಖರ ,ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಇವರೆಲ್ಲ ಕೂಡ ಬ್ರಾಹ್ಮಣರಲ್ಲವೆ ದಯವಿಟ್ಟು ವಿವರಿಸಿ…
LikeLiked by 1 person
ನೆಹರು ಮತ್ತು ಇಂದಿರಾಗಾಂಧಿಯವರು ಪೂರ್ವಜರು ಮುಸಲ್ಮಾನರು ಎಂಬುದು ಈಗಾಗಲೇ ಜಗಜನಿತವಾಗಿದೆ. ಲಾಲ ಬಹಾದ್ದೂರ್ ಶಾಸ್ತ್ರಿ ಮತ್ತು ಚಂದ್ರಶೇಖರ ಅವರು ಜನ್ಮತಃ ಬ್ರಾಹ್ಮಣರಲ್ಲ. ವಾಜಪೇಯಿಗಳು ಬ್ರಾಹ್ಮಣರಾಗಿದ್ದರೂ ಅವರು ಸಂಘದ ಹಿನ್ನೆಲೆಯಿಂದ ಬಂದ ಕಾರಣ ಅವರೆಂದೂ ಬ್ರಾಹ್ಮಣ್ಯತ್ವವನ್ನು ಪಾಲಿಸಲಿಲ್ಲ.
LikeLike
I AM SO HAPPY BY SEEING THIS MESSAGE. I SUPPORT 100%, AND READY TO WORK FOR IT. AFTER LOCKDOWN LET INTERESTED BRAHMINS WILL UNITE AND DEVELOP OUR COMMUNITY.
LikeLiked by 1 person
ಸರಿಯಾಗಿ ಹೇಳಿರುವಿರಿ.
LikeLiked by 1 person
ನಮಸ್ಕಾರಗಳು. ಈ ಲೇಖನವನ್ನು ನಮಗೆ ತಲುಪಿಸಿದ್ದಕ್ಕೆ ಧನ್ಯವಾದಗಳು. ಸಣ್ಣ ತಿದ್ದುಪಡಿ “ವಸುಧ+ಏವ = ವಸುಧೈವ ಕುಟುಂಬಕಂ”.
LikeLiked by 1 person
ತಪ್ಪನ್ನು ಸರಿಪಡಿಸಿದ್ದಕ್ಕಾಗಿ ಧನ್ಯವಾದಗಳು
LikeLike
I sugest,brahmins should not crave for jobs. Once you join somewhere you will become a slave.No value for your merit.Better do any buisness, or start your own industry, i.e, be independent.Follow Sindhis or Marwadies.
LikeLiked by 1 person