ಡ್ರಾಪ್ ಕೊಟ್ಟವನಿಗೇ ಧರ್ಮದೇಟು

ನೆನ್ನೆ ರಾತ್ರಿಯಿಂದ ಹಿಂದೂ ವ್ಯಕ್ತಿಯೊಬ್ಬರು ಬುರ್ಕ ಧರಿಸಿದ ಮಹಿಳೆಯೊಬ್ಬರಿಗೆ ತನ್ನ ಬೈಕಿನಲ್ಲಿ ಡ್ರಾಪ್​ ಕೊಟ್ಟಿದ್ದಕ್ಕಾಗಿ ಕೆಲವು ಮತಾಂಧರ ಗುಂಪು ಧಾಳಿ ನಡೆಸಿ ಹಿಂದು ಯುವಕನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಬಳಿಯ ಡೈರಿ ಸರ್ಕಲ್​ನಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

WhatsApp Image 2021-09-19 at 12.08.21 PMಶುಕ್ರವಾರ ರಾತ್ರಿ ಆ ವ್ಯಕ್ತಿ ಮತ್ತು ಮಹಿಳೆ ಇಬ್ಬರೂ ಒಂದೇ ಬ್ಯಾಂಕಿನಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಸಹೋದ್ಯೋಗಿಯಾಗಿದ್ದು ಅದಾಗಲೇ ಸಮಯವಾಗಿದ್ದ ಕಾರಣ, ಇಬ್ಬರ ಮನೆಯೂ ಒಂದೇ ದಾರಿಯಲ್ಲಿದ್ದ ಕಾರಣ ಮಾನವೀಯತೆ ದೃಷ್ಟಿಯಿಂದ ಅಕೆಯ ಮನೆಯವರೆಗೂ ಡ್ರಾಪ್ ಮಾಡುತ್ತಿರುವಾಗ ಈ ದುರ್ಘಟನೆ ನಡೆದಿದೆ. ಬುರ್ಕಾಧಾರಿ ಮಹಿಳೆಯನ್ನು ಹಿಂದು ವ್ಯಕ್ತಿ ಮನೆಗೆ ಡ್ರಾಪ್ ಮಾಡುವ ವಿಷಯವನ್ನು ಅದು ಹೇಗೋ ತಿಳಿದುಕೊಂಡ ಆ ಕಿಡಿಗೇಡಿಗಳ ತಂಡ ಅವರನ್ನು ಹಿಂಬಾಲಿಸಿ ಸಿಗ್ನಲ್ಲಿನಲ್ಲಿ ಗಾಡಿ ನಿಲ್ಲಿಸಿದ್ದಾಗ ಮುಖದ ತುಂಬಾ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯ ಹೆಲ್ಮೆಟ್ ತೆಗೆಸಿ ಆತ ಕುಂಕುಮಧಾರಿ ಹಿಂದು ಎಂದು ಖಚಿತ ಪಡಿಸಿಕೊಂಡ ನಂತರ ಆತನ ಮೇಲೆ ಏಕಾಏಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೇ, ಇನ್ನೊಮ್ಮೆ ಈ ರೀತಿ ಬುರ್ಕಾ ಹಾಕೊಂಡಿರುವವರನ್ನು ಕೂರಿಸಿಕೊಂಡು ಹೋದ್ರೆ ಅಷ್ಟೇ ಆತನನ್ನು ವಾಚಾಮಗೋಚರವಾಗಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಆ ಪುಂಡರ ಆರ್ಭಟ ಅಷ್ಟಕ್ಕೇ ನಿಲ್ಲದೇ, ಆ ಮಹಿಳೆಗೂ ನಿಂದಿಸಿದ್ದಲ್ಲದೇ, ಉರ್ದುವಿನಲಿ ಏನು ನಿನ್ ಹೆಸರು? ನಿನಗೆ ನಾಚಿಕೆಯಾಗಲ್ವಾ? ಈ ಜಗತ್ತಲ್ಲಿ ಏನಾಗ್ತಿದೆ ಅಂತಾ ಗೊತ್ತಿಲ್ವಾ? ಇಂಥವರ ಜತೆ ಹೋಗ್ಬಾರ್ದು ಅಂತಾ ನಿನಗೆ ಗೊತ್ತಿಲ್ವಾ? ಎಂದು ಏರು ಧನಿಯಲ್ಲಿ ಗದರಿಸಿದ್ದಾರೆ.

ನಾವಿಬ್ಬರು ಸಹೋದ್ಯೋಗಿಗಳು ನನಗೆ ಮದುವೆ ಆಗಿದೆ, ನಮ್ಮಿಬ್ಬರ ಮನೆಯೂ ಒಂದೇ ದಾರಿಯಿದ್ದೂ ಅದಾಗಲೇ ಕತ್ತಲಾಗಿದ್ದ ಕಾರಣ ನಾನೇ ಡ್ರಾಪ್ ಕೇಳಿದೆ ಎಂದು ಮಹಿಳೆ ಪರಿ ಪರಿಯಾಗಿ ಪುಂಡರ ಬಳಿ ಕೇಳಿಕೊಂಡರು ಕೇಳುವ ತಾಳ್ಮೆ ಇಲ್ಲದವರು ಆಕೆಯ ಫೋನಿನಿಂದ ಆಕೆಯ ಮನೆಯವರಿಗೆ ಕರೆ ಮಾಡಿಸಿ, ಆಕೆಯ ಮನೆಯವರೂ ಸಹಾ ಅವರಿಬ್ಬರು ಒಟ್ಟಿಗೆ ಬರುತ್ತಿರುವ ವಿಷಯದ ಅರಿವಿದೆ ಎಂದು ಹೇಳಿದರೂ, ಬುರ್ಕಾ ಹಾಕೊಂಡು ಅನ್ಯಕೋಮಿನವರ ಜತೆ ಕಳುಹಿಸಿರುವುದು ತಪ್ಪು ಅಂತಾ ನಿಮಗೆ ಗೊತ್ತಿಲ್ವಾ? ಎಂದು ಧಮ್ಕಿ ಹಾಕಿರುವುದಲ್ಲದೇ, ಆ ಯುವಕ ಮತ್ತು ಯುವತಿಯನ್ನು ಬಲವಂತದಿಂದ ಬೈಕ್ನಿಂದ ಕೆಳಗೆ ಇಳಿಸಿ ಆಕೆಗೆ ಆಟೋ ಇಲ್ಲವೇ ಕ್ಯಾಬ್ ನಲ್ಲಿ ಹೋಗಲು ಆವಾಜ್ ಹಾಕುತ್ತಿರುವುದು ಆ ವಿಡೀಯೋದಲ್ಲಿ ಸ್ಪಷ್ಟವಾಗಿದೆ.

attackಕೆಲ ತಿಂಗಳುಗಳ ಹಿಂದೆ ಸಾಮಾಜಿಕ ಜಾಲ ತಾಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂಗಳ ವಿರುದ್ಧ ಹಾಕಿದ್ದ ಆಕ್ಷೇಪಾರ್ಹ ವಿಷಯಕ್ಕೆ ವಿರುದ್ಧವಾಗಿ ದೇವರಜೀವನ ಹಳ್ಳಿಯ ಶಾಸಕರ ಸಂಬಂಧಿ ಹಿಂದೂ ಹುಡುಗನೊಬ್ಬ ತನ್ನ ಧರ್ಮದ ಪರವಾಗಿ ವಾದ ಮಾಡುವ ಪರದಲ್ಲಿ ಮುಸ್ಲಿಂ ಧರ್ಮದ ವಿಷಯವನ್ನೊಂದು ಎತ್ತಿದ್ದ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಸಾವಿರಾರು ಮತಾಂಧರು ಶಾಸಕರ ಮನೆಯನ್ನು ಸುಟ್ಟು ಹಾಕಿರುವ ಹೊಗೆ ಇನ್ನೂ ತಾತ್ವಿಕವಾಗಿ ಆರದಿರುವಾಗಲೇ,

ಇತ್ತೀ‍ಚೆಗೆ ದಾವಣಗೆಯಲ್ಲಿ ಕೆಲವು ಬುರ್ಕಾಧಾರಿ ಹೆಂಗಸರು ತಮ್ಮ ಹಬ್ಬಕ್ಕೆ ಮನೆಮಂದಿಗೆಲ್ಲಾ ಬಟ್ಟೆಯನ್ನು ಹಿಂದೂಗಳ ಅಂಗಡಿಯಿಂದ ಖರೀದಿಸಿ ಸಂಭ್ರಮದಿಂದ ಹೊರಬರುತ್ತಿರುವುದನ್ನು ಕಂಡ ಕೆಲವು ಮತಾಂಧರು ಆ ಮಹಿಳೆಯರನ್ನು ಅಡ್ಡಗಟ್ಟಿ ನಮ್ಮ ಹಬ್ಬಕ್ಕೆ ಹಿಂದೂಗಳ ಅಂಗಡಿಯಿಂದ ಬಟ್ಟೆ ಖರೀಧಿಸುವುದು ನಿಷಿದ್ಧ ಎಂದು ವಾದಿಸಿದ್ದಲ್ಲದೇ, ಆ ಹೆಂಗಸರು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದರೂ, ನಡು ರಸ್ತೆಯಲ್ಲಿಯೇ ಆ ಬಟ್ಟೆಗಳನ್ನು ಕಿತ್ತುಕೊಂಡು ಅಂಗಡಿಯ ಹೆಸರಿದ್ದ ಕವರ್ಗಳನ್ನು ಕಿತ್ತು ರಸ್ತೆಯಲ್ಲಿ ಬಿಸಾಡಿದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಈ ಡ್ರಾಪ್ ಪ್ರಕರಣ ಬೆಳಕಿಗೆ ಬಂದಿದೆ.

ಈ ಎಲ್ಲಾ ಪ್ರಕರಣಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಕಾಡುತ್ತಿರುವ ಪ್ರಶ್ನೆ ಎಂದರೆ

  • ಈ ರೀತಿಯ ಧರ್ಮಾಧಾರಿತ ದಾದಗಿರಿ ಮಾಡುವ ನೈತಿಕ ಹೊಣೆಯನ್ನು ಈ ಪುಂಡರಿಗೆ ಕೊಟ್ಟವರು ಯಾರು?
  • ಬಹುಸಂಖ್ಯಾತ ಹಿಂದೂಗಳ ಪವಿತ್ರ ಹಬ್ಬ ಹರಿದಿನಗಳಿಗೆ ನೂರೆಂಟು ಕಾನೂನುಗಳ ಮೂಲಕ ವಿಘ್ನಗಳನ್ನು ಹೇರುವ ಸರ್ಕಾರ ಮತ್ತು ಗೃಹ ಇಲಾಖೆ ಮೇಲೆ ತಿಳಿಸಿದ ಆ ಎಲ್ಲಾ ಪ್ರಕರಣಗಳಲ್ಲಿ ಯಾವ ಕ್ರಮ ತೆಗೆದುಕೊಂಡಿವೆ?
  • ಈ ದೇಶದಲ್ಲಿ ಕಾನೂನು ಕ್ರಮ ಜರುಗಿಸುವುದು ಕೇವಲ ಬಹುಸಂಖ್ಯಾತ ಹಿಂದೂಗಳ ಮೇಲೆ ಮಾತ್ರವೇ?

ಮದುವೆಯಾದ ಮುಸ್ಲಿಂ ಮಹಿಳೆ ಕೇಳಿಕೊಂಡ ಕಾರಣಕ್ಕಾಗಿ ಮಾನವೀಯತೆಯಿಂದ ಹಿಂದೂ ವ್ಯಕ್ತಿ ಡ್ರಾಪ್‌ ಕೊಡುವುದೇ ಅಪರಾಧವಾದಲ್ಲಿ, ಇನ್ನು ಮುಂದೆ ಮುಸಲ್ಮಾನರು ಓಡಿಸುವ ಬಸ್ ಆಟೋ, ಕ್ಯಾಬ್ ಮತ್ತು ಲಾರಿಗಳನ್ನು ಹಿಂದುಗಳು ಬಳಸುವುದಿಲ್ಲ, ಮುಸಲ್ಮಾನರ ಬಳಿ ಯಾವುದೇ ರೀತಿಯ ವ್ಯಾವಹಾರಿಕ ವ್ಯಾಪಾರ, ಮನೆಗಳನ್ನು ಮಾಡುವುದಿಲ್ಲ. ಅಂತಹವರಿಗೆ ಮನೆಗಳನ್ನು ಬಾಡಿಗೆ ಕೊಡುವುದಿಲ್ಲ. ಎಂದು ಹಿಂದುಗಳು ನಿರ್ಧರಿದಲ್ಲಿಈ ಮತಾಂಧರು ಏನು ಮಾಡುತ್ತಾರೆ?

talib1ಮೊನ್ನೆ ಇನ್ನೂ ಅಫ್ಘಾನಿಸ್ಥಾನವನ್ನು ಅಮೇರಿಕಾ ಸೈನ್ಯ ಬಿಟ್ಟು ಹೋರಡುತ್ತಿದ್ದಂತೆಯೇ ಮತಾಂಧ ತಾಲೀಬಾನಿಗಳು ಆ ದೇಶವನ್ನು ಅದು ಹೇಗೆ ತಮ್ಮ ಕೈವಶ ಮಾಡಿಕೊಂಡು ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಅದಾವ ಪರಿ ಅತ್ಯಾಚಾರ ನಡೆಸುತ್ತಿದ್ದಾರೆ ಎಂಬದನ್ನು ಮಾಧ್ಯಮದಲ್ಲಿ ನೋಡಿ ಮಮ್ಮುಲ ಮರುಗಿದ ಹಿಂದೂಗಳಿಗೆ ಕಡೆಮೆ ಏನಿಲ್ಲ. ಬೇಕೋ ಬೇಡವೂ ಬೆಂಗಳೂರಿನಲ್ಲಿ ಈಗಾಗಲೇ ಹಲವು ಬಡಾವಣೆಗಳು ಮತಾಂಧರ ಕೈವಶವಾಗಿದ್ದು ಅದೊಂದು ರೀತಿಯ ಮಿನಿ ಪಾಕಿಸ್ತಾನ ಎನ್ನುವಂತಾಗಿ ಅಲ್ಲಿನ ಪುಂಡರುಗಳು ಈಗ ಅದೇ ತಾಲೀಬಾನಿಗಳಿಂದ ಪ್ರೇರಿತವಾಗಿ ಈ ರೀತಿಯ ಧಾಳಿಯನ್ನು ಇಲ್ಲೂ ನಡೆಸಲು ಮುಂದಾಗಿರುವುದನ್ನು ನೋಡಿದಾಗ, ನಾವು ಭಾರತದಲ್ಲಿ ಇದ್ದೇವೆಯೋ ಇಲ್ಲಾ ತಾಲೀಬಾನಿನಲ್ಲಿ ಇದ್ದೇವೆಯೋ? ಎನ್ನುವ ಅನುಮಾನ ಮೂಡಿದ್ದಂತೂ ಸುಳ್ಳಲ್ಲಾ. ಈ ರೀತಿಯ ಅಟ್ಟಹಾಸ ಹೀಗೇ ಮುಂದುವರಿದಲ್ಲಿ ಸಾರ್ವಜನಿಕರ ಪಾಡೇನು? ಎಂಬ ಕಳವಳವೂ ಮೂಡುತ್ತಿರುವುದೂ ಸತ್ಯವೇ ಸರಿ.

ಈ ರೀತಿಯ ಪ್ರಕರಣಗಳು ಸುದ್ದಿಯಾಗುತ್ತಿದ್ದಂತೆಯೇ ಅದೇ ಕೋಮಿನ ಮತ್ತು ಕೆಲ ರಾಜಕೀಯ ನಾಯಕರುಗಳು ಅವರದ್ದೇ ಆದ ಕೆಲ ಮಾಧ್ಯಮಗಳೆಲ್ಲರೂ ಒಂದಾಗಿ ಇವರೆಲ್ಲರೂ ಅನಕ್ಷರಸ್ಥರು ಅವರಿಗೇನೂ ಗೊತ್ತಿಲ್ಲ ಎಂದು ಇದನ್ನು ಸಮರ್ಥನೆ ಮಾಡಿಕೊಂಡರೆ, ಇನ್ನು ನಮ್ಮ ಘನ ಸರ್ಕಾರದ ಮಂತ್ರಿಗಳೂ ಸಹಾ ನೋಡ್ತೀವೀ ಮಾಡ್ತೀವಿ, ಅವರ ಮೇಲೆ ಕ್ರಮ ಕೈಗೊಳ್ಳುತ್ತೀವಿ ಎಂದು ತಿಪ್ಪೇ ಸಾರಿಸುತ್ತಾ ಈ ರೀತಿಯ ದಾದಾಗಿರಿಗೆ ಈ‌ ಕೂಡಲೇ ಕಡಿವಾಣ ಹಾಕದೇ‌ ಹೋದಲ್ಲಿ ಕೇವಲ ಕೋಮು ಸಾಮರಸ್ಯವಲ್ಲದೇ ದೇಶದ ಆಂತರಿಕ ಭದ್ರತೆಯ ವಿಷಯದಲ್ಲೂ ಮುಂದೆ ಬಾರೀ ಬೆಲೆ ತೆರಬೇಕಾದೀತು.

talkb2ಕಾಲ ಮಿಂಚಿ ಹೋಗುವ ಮುನ್ನಾ ಆ ಪುಂಡರನ್ನು ಹೆಡೆಮುರಿಕಟ್ಟಿ ಈ ರೀತಿ ಕಾನೂನನ್ನು ಕೈಗೆ ತೆಗೆದುಕೊಂಡರೆ ಯಾವ ರೀತಿಯ ಅಡ್ಡಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅವರಿಗೆ ತೋರಿಸದೇ ಹೋದಲ್ಲಿ ಹಿಂದೂಗಳು ಇಲ್ಲಿ ನಿರ್ಭಯವಾಗಿ ವಾಸಿಸುವುದೇ ಕಷ್ಟವಾಗುತ್ತದೆ. ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ. ಕೊಟ್ಟ ಕುದುರೆಯನ್ನು ಏರದವನು ವೀರನು ಅಲ್ಲ ಶೂರನೂ ಅಲ್ಲ. ಸೂಕ್ತ ಸಮಯದಲ್ಲಿ ದಿಟ್ಟ ತನದ ಕ್ರಮವನ್ನು ಜಾರಿಗೆ ತರದವನು ನಾಯಕನೇ ಅಲ್ಲಾ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s