1947ರಲ್ಲಿ ಬ್ರಿಟೀಷರು ಈ ದೇಶದಿಂದ ಹೊರ ಹೋಗುವಾಗ ಕೆಲವು ಪಟ್ಟಭಧ್ರ ಸ್ವಾರ್ಥ ಹಿತಾಸಕ್ತಿಯಾಗಿ ನಮ್ಮ ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಎರಡು ಭಾಗಗಳಾಗಿ (ನಂತರ ಅದು ಮೂರು ಭಾಗಗಳಾಗಿದೆ) ತುಂಡರಿಸಿ ಭಾರತ ಮತ್ತು ಪಾಕೀಸ್ಥಾನ ಎಂಬ ಎರಡು ಸ್ವತಂತ್ರ ದೇಶಗಳ ಕಾರಣಕ್ಕೆ ಕಾರಣವಾಗಿರುವುದು ಆದಾದ ನಂತರ ಹತ್ತು ಹಲವು ಬಾರಿ ಕಾಲು ಕೆರೆದುಕೊಂಡು ಭಾರತದ ಮೇಲೆ ಬಂದ ಪಾಪಿಗಳಿಗೆ ಭಾರತದ ಕೆಚ್ಚೆದೆಯ ಸೈನಿಕರು ತಕ್ಕ ಉತ್ತರವನ್ನೇ ನೀಡಿರುವುದು ಈಗ ಇತಿಹಾಸ.
ಇಷ್ಟೆಲ್ಲಾ ಹೊಡೆತಗಳಿಂದ ಬುದ್ಧಿ ಕಲಿಯದ ಪಾಪೀಸ್ಥಾನ ಪದೇ ಪದೇ ಭಯೋತ್ಪಾದಕರನ್ನೂ ನುಸುಳುಕೋರರನ್ನು ಭಾರತಕ್ಕೆ ಕಳುಹಿಸಿ ದಂಗೆ ನಡೆಸಿದಾಗ ಭಾರತ ದೇಶ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಅವರ ನೆಲಕ್ಕೇ ನುಗ್ಗಿ ಅವರಿಗೆ ಬುದ್ಧಿ ಕಲಿಸಿದ್ದಲ್ಲದೇ, ಎಲ್ಲಿಯವರೆಗೂ ಪಾಕೀಸ್ಥಾನ ಭಯೋತ್ಪಾದನೆಯನ್ನು ನಿಲ್ಲಿಸುವುದಿಲ್ಲವೋ? ಅಲ್ಲಿಯವರೆಗೂ ಅವರ ಜೊತೆ ಯಾವುದೇ ದ್ವಿಪಕ್ಷೀಯ ರಾಜಕೀಯ, ಕ್ರೀಡೆ ಕಲೆ ಯಾವುದೇ ಚಟುವಟಿಗಳನ್ನು ಇಟ್ಟು ಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.
ಅದರೆ ಒಲಂಪಿಕ್ಸ್, ವಿಶ್ವಕಪ್ ನಂತಹ ಕ್ರೀಡಾಕೂಟಗಳು ತಟಸ್ಥ ಸ್ಥಳಗಳಲ್ಲಿ ನಡೆದಾಗ ಅನಿವಾರ್ಯವಾಗಿ ಆಡಲೇ ಬೇಕಾಗುತ್ತದೆ. ಅದೇ ರೀತಿ 24.10.2021ರಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ಜೊತೆ ಆಡಲೇ ಬೇಕಾದಾಗ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳೆಲ್ಲರ ಚಿತ್ತ ದುಬೈನಲ್ಲಿ ನಡೆಯುತ್ತಿದ್ದ ಆಟದ ಬಗ್ಗೆಯೇ ಇತ್ತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತವಾಗಿ 6 ಬಾರಿ ಪಾಕೀಸ್ಥಾನವನ್ನು ಸೋಲಿಸಿದ್ದ ಭಾರತವೇ ಅಂದೂ ಸಹಾ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಭಾರತೀಯ ಆಟಗಾರರ ಆತಿಯಾದ ಆತ್ಮವಿಶ್ವಾಸದ ಎದುರು ಪಾಕೀಸ್ಥಾನದ ಆಟಗಾರ ಸಾಂಘೀಕ ಪ್ರಯತ್ನವೇ ಮೇಲ್ಗೈಯ್ಯಿ ಪಡೆದು ಅಂತಿಮವಾಗಿ ಪಾಕ್ ಪಾಕೀಸ್ಥಾನದ ವಿರುದ್ದ 10 ವಿಕೆಟ್ ನಿಂದ ಪಂದ್ಯವನ್ನು ಗೆದ್ದಾಗ ಇಡೀ ಭಾರತವೇ ಒಂದು ಕ್ಷಣ ಸ್ಥಬ್ಧವಾಗಿತ್ತು. ಅಲ್ಲಲ್ಲಿ ಕೆಲ ದೇಶವಿರೋಧಿ ವಿಕೃತ ಬುದ್ಧಿಗಳು ಬಾಲ ಬಿಚ್ಚಿದ್ದ ಸಂಗತಿ ಮಾರನೇ ದಿನ ಗೊತ್ತಾದಾಗ ಹೆತ್ತ ತಾಯಿಯನ್ನೂ ಮತ್ತು ಹಾಲು ಕೊಡುವ ಹಸುವಿನ ಕೆಚ್ಚಲನ್ನೇ ಕತ್ತರಿಸಿದಾಗ ಆಗುವಂತಹ ನೋವುಂಟಾಗಿತ್ತು.
ಎಲ್ಲದ್ದಕ್ಕಿಂತಲೂ ಅಪರೂಪವೆಂದರೆ 30 ವರ್ಷಗಳ ನಂತರ ವಿಶ್ವಕಪ್ ನಲ್ಲಿ ಭಾರತದ ತಂಡವನ್ನು ಆ ಪರಿಯಾಗಿ ಸೋಲಿಸಿದ್ದರೂ, ಪಾಕೀಸ್ಥಾನದ ಆಟಗಾರರು ಅತಿರೇಕದ ವರ್ತನೆ ತೋರದೇ ಭಾರತೀಯ ತಂಡದ ವಿರುದ್ಧ ಸಹಜವಾಗಿಯೇ ಹಸ್ತಲಾಘವನ್ನು ನೀಡಿದ್ದಲ್ಲದೇ ಡ್ರೆಸಿಂಗ್ ರೂಮಿನಲ್ಲಿಯೂ ನಾಯಕ ಬಾಬರ್ ಅಜಂ ಮಾತನಾಡಿದ ರೀತಿ ಎಲ್ಲರ ಮೆಚ್ಚುಗೆ ಪಡೆದಿತ್ತು.
ಆದರೆ ಹುಟ್ಟು ಗುಣ ಸುಟ್ಟರು ಹೋಗುವುದಿಲ್ಲ ಎನ್ನುವಂತೆ ಪಾಕೀಸ್ಥಾನ ತಂಡ ಮಾಜೀ ವೇಗದ ಬೌಲರ್, ಮಾಜೀ ನಾಯಕ, ಮಾಜೀ ತರಭೇತುದಾರ ವಖಾರ್ ಯೂನಿಸ್ ಎಂಬ ವಿಕೃತ ಮನಸ್ಸಿನವನು. ಅಲ್ಲಿ ಹಿಂದೂಗಳ ಎದುರು ಮೈದಾನದಲ್ಲಿ ರಿಜ್ವಾನ್ ನಮಾಜು ಮಾಡುತ್ತಿದ್ದ ದೃಶ್ಯ ನನಗೆ ಅತ್ಯಂತ ವಿಶೇಷವಾಗಿತ್ತು ಎಂಬ ಟ್ವಿಟ್ ಮಾಡುವ ಮುಖಾಂತರ ತನ್ನ ಮನಸ್ಸಿನಲ್ಲಿದ್ದ ಕೊಳಕನ್ನು ಹೊರಗೆ ಹಾಕಿದ್ದಾನೆ.. ಈ ರೀತಿ ಯಾವುದೋ ಜಿಹಾದಿ ಮನಸ್ಥಿತಿಯ ಭಯೋತ್ಪಾದಕ ಸಂಘಟನೆ ವ್ಯಕ್ತಿ / ನಾಯಕ ಹೇಳಿದ್ದರೆ ಯಾರೂ ತಲೆ ಕೆಡಸಿಕೊಳ್ಳುತಿರಲಿಲ್ಲ. ಆದರೆ ಕ್ರಿಕೆಟ್ ಜಗತ್ತಿನಲ್ಲಿ ತನ್ನ ಕರಾರುವಾಕ್ ವೇಗದ ಎಸೆತಕ್ಕೆ ಹೆಸರಾಗಿದ್ದವನು ಕ್ರೀಡಾ ರಾಯಭಾರಿ ಎನಿಸಿಕೊಂಡಿದ್ದವನ ಬಾಯಿಯಲ್ಲಿ ಈ ರೀತಿಯ ಮಾತು ನಿಜಕ್ಕೂ ಅಸಹ್ಯ ಎನಿಸಿದೆ.
ಇಡೀ ಪ್ರಪಂಚಾದ್ಯಂತ ಈ ರೀತಿಯ ವಿಕೃತ ಮಾತುಗಳನ್ನು ಖಂಡಿಸುತ್ತಿದ್ದಂತೆಯೇ, ಗೆಲುವಿನ ಸಂಭ್ರಮದ ಕ್ಷಣಗಳಲ್ಲಿ, ಮಾತಿನ ಭರದಲ್ಲಿ ಈ ರೀತಿಯ ತಪ್ಪಾದ ಮಾತುಗಳು ನನ್ನ ಬಾಯಿಯಿಂದ ಹೊರಬಂದಿದೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಪ್ಪೇ ಸಾರಿಸಿದ್ದಲ್ಲದೇ, ಕ್ರೀಡೆ, ಜನಾಂಗ, ವರ್ಣ ಮತ್ತು ಧರ್ಮ ಎಲ್ಲವನ್ನು ಮೀರಿ ಜನರನ್ನು ಒಗ್ಗೂಡಿಸುತ್ತದೆ. ಎರಡು ದೇಶಗಳ ಸಂಬಂಧವನ್ನು ಬೆಸೆಯುತ್ತವೆ ಎಂದು ಮರು ಟ್ವೀಟ್ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾನೆ. ಹೇಗೂ ಹಿಂದೂಗಳು ತಾನೇ, ಅವರಿಗೆ ಹೇಳಬಾರದದ್ದೆಲ್ಲವನ್ನು ಹೇಳಿ ತನ್ನ ಮನಸ್ಸಿನಲ್ಲಿದ್ದ ನಂಜನ್ನೆಲ್ಲ ಹೊರಹಾಕಿ ನಂತರ ಕಾಟಾಚಾರಕ್ಕೆ ಕ್ಷಮೆ ಯಾಚಿಸಿರುವುದು ನಿಜಕ್ಕೂ ಕ್ಷಮೆಗೆ ಅರ್ಹವಾಗಿಲ್ಲದ್ದಾಗಿದೆ.
ಭಾರತದ ಹೆಸರಾಂತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರು ಇದು ಆಘಾತಕಾರಿ ಹೇಳಿಕೆ ಮತ್ತು ಅತ್ಯಂತ ನಿರಾಶಾದಾಯಕ ಸಂಗತಿ ಎಂದು ಟ್ವೀಟ್ ಮಾಡಿದ್ದರೆ, ಯೂನಿಸ್‌ನದ್ದು ಜಿಹಾದಿ ಮನಸ್ಥಿತಿ, ಎಂಥಾ ನಾಚಿಕೆಗೇಡಿನ ಮನುಷ್ಯನೀತ ಎಂದು ಕರ್ನಾಟಕದ ಹೆಮ್ಮೆಯ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹೇಳಿರುವುದು ನಿಜಕ್ಕೂ ಸರಿಯಾಗಿದೆ.
ಇದೇ ಸಮಯದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅವರು ಹೇಳಿರುವ ಅಖ್ತರ್ ‘ಗಜ್ವಾ-ಎ-ಹಿಂದ್‘ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗಜ್ವಾ ಇ ಹಿಂದ್ ಅನ್ನು ನಮ್ಮ ಪವಿತ್ರ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ನಾವು ಮೊದಲು ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇವೆ ಮತ್ತು ನಂತರ ಘಜ್ವಾ ಇ ಹಿಂದ್‌ಗಾಗಿ ಭಾರತವನ್ನು ಎಲ್ಲಾ ಕಡೆಯಿಂದ ಆಕ್ರಮಿಸುತ್ತೇವೆ ಎಂಬ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಎಂದೋ ಹೇಳಿದ್ದ ಮಾತುಗಳು ಎಂದು ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರಾದರು ಭಾರತದ ವಿರುಧ ಅವರ ಮನಸ್ಸಿನಲ್ಲಿದ್ದ ವಿಕೃತ ಮನೋಭಾವನೆ ಹೊರ ಬಿದ್ದಿದೆ. ಭಾರತದ ವಿರುದ್ಧ ಈ ರೀತಿಯಾಗಿ ವಿಷಕಾರುವುದರಲ್ಲಿ ಅಖ್ತರ್ ಒಬ್ಬರೇ ಮೊದಲ ಕ್ರಿಕೆಟ್ಟಿಗರೇನಲ್ಲ. ಭಾರತದ ವಿರುದ್ಧ ಈ ಹಿಂದೆ ಶಾಹಿದ್ ಅಫ್ರಿದಿ, ಜಾವೇದ್ ಮಿಯಾಂದಾದ್ ಸೇರಿದಂತೆ ಹಲವಾರು ಕ್ರಿಕೆಟಿಗರು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ.
ಏತನ್ಮಧ್ಯೆ, ಭಾರತದ ನಿಗೂಢ ಸ್ಪಿನ್ನರ್ ವರುಣ್ ಚಕ್ರವರ್ತಿ ಪಾಕಿಸ್ತಾನದ ವಿರುದ್ಧದ ಬೌಲ್ ಮಾಡಿದ ಮೊದಲ ಓವರ್‌ನಲ್ಲಿ ಕೇವಲ 2 ರನ್ ನೀಡಿ ಮೆಚ್ಚುಗೆ ಗಳಿಸಿದ್ದರೂ ನಂತರ ದುಬಾರಿಯಾಗಿ ತಮ್ಮ 4 ಓವರ್‌ಗಳ ಕೋಟಾದಲ್ಲಿ ಯಾವುದೇ ವಿಕೆಟ್ ಪಡೆಯದೇ 33 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಭಾರತೀಯರಿಗೆ ಅಚ್ಚರಿಯನ್ನು ಮೂಡಿಸಿದ್ದರು. ಇವರ ಕುರಿತಂತೆಯೇ ತಮ್ಮ ಕೊಳಕು ನಾಲಿಗೆಯನ್ನು ಹರಿಬಿಟ್ಟಿರುವ ಸಲ್ಮಾನ್ ಭಟ್ ಎಂಬ ಪಾಕಿಸ್ಥಾನದ ಮಾಜೀ ಆರಂಭ ಆಟಗಾರ. ವರುಣ್ ಚಕ್ರವರ್ತಿಯಂತಹ ನಿಗೂಢ ಸ್ಪಿನ್ನರ್‌ಗಳು ಪಾಕಿಸ್ತಾನದ ಗಲ್ಲಿ ಗಲ್ಲಿಗಳಲ್ಲಿಯೂ ಹೇರಳವಾಗಿ ಕಾಣಸಿಗುತ್ತಾರೆ. ಅವನ ಬೌಲಿಂಗ್ ಶೈಲಿ ತುಂಬಾ ಸಾಮಾನ್ಯವಾಗಿರುವ ಕಾರಣ ಪಾಕೀಸ್ಥಾನದ ದಾಂಡಿಗರು ತುಂಬಾ ಸುಲಭವಾಗಿ ಅವನನ್ನು ಎದುರಿಸಲು ಸಾಧ್ಯವಾಯಿತು. ಐಪಿಎಲ್ ನಲ್ಲಿ ವಿದೇಶೀ ಆಟಗಾರರ ಎದುರು ಆತ ಮಿಂಚಿರ ಬಹುದು ಆದರೆ ಪಾಕಿಸ್ತಾನದ ವಿರುದ್ಧ ಆತ ಎಂದಿಗೂ ಪರಿಣಾಮಕಾರಿಯಾಗುವುದಿಲ್ಲ. ಎಂದು ಸಲ್ಮಾನ್ ಭಟ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹರಿಬಿಟ್ಟಿದ್ದಾರೆ.
ಮೊದಲೇ ಭಾರತ ಮತ್ತು ಪಾಕಿಸ್ಥಾನಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿ ಹೋಗಿದೆ. ಇಂತಹ ಸಮಯದಲ್ಲಿ ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಅತ್ಯಂತ ಸಂಯಮದಿಂದ ಮತ್ತು ಬಹಳ ನಾಜೂಕಿನಿಂದ ಭಾರತ ಮತ್ತು ಪಾಕಿಸ್ಥಾನದ ಆಟಗಾರರು ನಿಭಾಯಿಸ ತೊಡಗಿದ್ದರೆ ಕೆಲಸವಿಲ್ಲದ ಬಡಗಿ ಮಗಳ ಕುಂ.. ಕೆತ್ತಿದನಂತೆ ಎನ್ನುವಂತೆ ಯಾರನ್ನೋ ಮೆಚ್ಚಿಸುವ ಸಲುವಾಗಿಯೋ ಇಲ್ಲವೇ ಯಾವುದೋ ವಯಕ್ತಿಕ ಹಿತಾಸಕ್ತಿಗಳಿಗೆ ಈ ರೀತಿಯ ಮಾತುಗಳನ್ನು ಆಡುವ ಮುಖಾಂತರ ಉರಿಯುವ ಬೆಂಕಿಗೆ ತುಪ್ಪವನ್ನು ಹಾಕುವುದು ನಿಜಕ್ಕೂ ಉತ್ತಮವಾದ ಲಕ್ಷಣವಲ್ಲ.
ನಿಜ ಹೇಳಬೇಕೆಂದರೆ ಯಾವುದೇ ವಿಧದಲ್ಲಿ ತಾಳೆ ಹಾಕಿದರೂ ಪಾಕೀಸ್ಥಾನ ಭಾರತದೊಂದಿಗೆ ಸರಿಸಮನಾಗದು ಎಂದರೂ ಅತಿಶಯವಲ್ಲ. ಅದರಲ್ಲೂ ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದ ತಕ್ಷಣವೇ ಇಡೀ ಪ್ರಪಂಚವನ್ನೇ ಗೆದ್ದಂತೆ ಆಡುತ್ತಿರುವ ಕೆಲ ವಿಕೃತ ಮನಸ್ಥಿಯವರಿಗೆ ಕೆಲವೇ ಕಲವು ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಇತ್ತೀಚೆಗೆ ಬಿಸಿಸಿಐ ಪಿಸಿಬಿಗೆ ಪರೋಕ್ಷವಾಗಿ ಹಣ ನೀಡುತ್ತಿದೆ ಎಂಬ ಹೇಳಿಕೆ ನೀಡಿರುವುದನ್ನು ಮರೆತಂತಿದೆ. ಐಸಿಸಿಯ ಸುಮಾರು 90%ರಷ್ಟು ಆದಾಯ ಬಿಸಿಸಿಐನಿಂದ ಬರುತ್ತದೆ. ಐಸಿಸಿಯು ಅದೇ ಹಣದಿಂದ ಪಿಸಿಬಿಯೂ ಸೇರಿದಂತೆ ಉಳಿದ ಎಲ್ಲಾ ಕ್ರಿಕೆಟ್ ಮಂಡಳಿಗಳಿಗೆ ಹಣವನ್ನು ನೀಡುತ್ತದೆ ಎಂಬ ಕಠು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಭಾರತ ಇಚ್ಚಿಸಿದಲ್ಲಿ ಧನಸಹಾಯವನ್ನು ನಿಲ್ಲಿಸುವ ಪಾಕಿಸ್ತಾನದ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎಂಬ ಎಚ್ಚರಿಕೆಯ ಮಾತುಗಳನ್ನೂ ರಮೀಜ್ ಆಡಿರುವುದನ್ನು ಈ ವಿಕೃತ ಮನಸ್ಸುಗಳು ಆಲಿಸಬೇಕಿದೆ.
ಪಿಸಿಬಿಯ ಮಾಜಿ ಅಧ್ಯಕ್ಷರಾದ ರಮಿಜ್ ಅವರ ಈ ಹೇಳಿಕೆಗಳು ಅನಗತ್ಯ ಮತ್ತು ಇದು ದೇಶದ ಘನತೆಗೆ ವಿರುದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಮಾತುಗಳನ್ನು ಅವರೆಂದೂ ಆಡಬಾರದು ಎಂದು ಅನೇಕರು ಹೇಳಿರುವುದಲ್ಲದೇ ಇನ್ನೂ ಕೆಲವರು ಅವರು ರಾಷ್ಟ್ರದ ಕ್ಷಮೆಯಾಚಿಸುವಂತೆ ತಾಕೀತು ಮಾಡಿರುವುದು ಗಮನಾರ್ಹವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ ಟಿ20 ಕ್ರಿಕೆಟ್ ಪಂದ್ಯದಲ್ಲಿ ಆಕಸ್ಮಾತ್ ಪಾಕಿಸ್ತಾನವು ಭಾರತ ತಂಡವನ್ನು ಸೋಲಿಸಿದಲ್ಲಿ ರಮೀಜ್ ರಾಜಾರವರಿಗೆ ಖಾಲಿ ಚೆಕ್ ಕೊಡಲು ಉದ್ಯಮಿಯೊಬ್ಬರು ಸಿದ್ಧ ಇರುವುದಾಗಿ ಹೇಳುವ ಮುಖಾಂತರ ಅಚ್ಚರಿಯನ್ನು ಮೂಡಿಸಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ರೀತಿಯಲ್ಲೂ ಗೊಂದಲದ ಗೂಡಾಗಿರುವ ಪಾಕೀಸ್ಥಾನದಲ್ಲಿ ಸುಮ್ಮನಿರಲಾದೇ ಇರುವೆ ಬಿಟ್ಟು ಕೊಂಡ ಎನ್ನುವಂತೆ ಅನಗತ್ಯವಾಗಿ ವಿವಾದಗಳನ್ನು ಮೈ ಮೇಲೆ ಎರಚಿಕೊಳ್ಳುತ್ತಿದ್ದಾರೆ, ಕ್ರೀಡೆ ಸಂಬಂಧಗಳನ್ನು ಬೆಸೆಯುತ್ತದೆ ಎಂದು ಎಲ್ಲರೂ ಹೇಳುತ್ತಾರಾದರು ಪಾಕಿಸ್ಥಾನದ ಕೆಲ ಕುಹಕಿಗಳು ತಿಳಿದೋ ತಿಳಿಯದೋ ಮತಾಂಧತೆಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧದ ನಡುವಿರುವ ಕಂದಕವನ್ನು ಮತ್ತಷ್ಟು ತೋಡುತ್ತಿರುವುದಂತೂ ಸತ್ಯ.
ಏನಂತೀರೀ?
ನಿಮ್ಮವನೇ ಉಮಾಸುತ
ಪಾಕಿಸ್ತಾನದ ಮಂತ್ರಿಯೊಬ್ಬರು ಇದು ಇಸ್ಲಾಂ ಧರ್ಮಕ್ಕೆ ಸಿಕ್ಕ ಜಯ ಎಂದು ವಾಂತಿ ಮಾಡಿದ್ದಾರೆ. ಭಾರತದಲ್ಲಿ ಎಡಪಂಥೀಯರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಂದ ಭಾರತದ ಬೌಲರ್ ಶಮಿ ವಿರುದ್ಧ ಹರಿಹಾಯ್ದು ಅದನ್ನು ನಿಜ ಭಾರತೀಯರ ಮೇಲೆ ಆರೋಪಿಸಿರುವುದು ಮತ್ತು ಖಂಡಿಸುತ್ತಿರುವುದು ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಇವರ ಈ ವಿಕೃತ ಅಭಿಯಾನದಲ್ಲಿ ನಿಜ ಸ್ಥಿತಿ ಅರಿಯದೇ ಕ್ರಿಕೆಟಿಗರಾದ ಸಚಿನ್, ಯುವರಾಜ್, ಹರಭಜನ್, ಕುಂಬ್ಲೆ ಮತ್ತು ಹಲವಾರು ಮಂದಿ ಭಾಗಿಯಾಗಿರುವುದು ಅತ್ಯಂತ ಬೇಸರದ ಸಂಗತಿ.
LikeLiked by 1 person