ಸಮಾನತೆ ಎಂದರೆ ಪ್ರತಿಭಾವಂತರನ್ನು ಹತ್ತಿಕ್ಕುವುದೇ?

kuber

ಕಳೆದ ಎರಡು ದಿನಗಳಿಂದಲೂ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಡಾ. ಗಗನ್ ಕುಬೇರ್ ಅವರ ವಿಡಿಯೋ ವೈರಲ್ ಆಗಿರುವುದನ್ನು ನಾವೆಲ್ಲರೂ ನೋಡಿದಾಗ ನನ್ನ ಮನದಲ್ಲಿ ಮೂಡಿದ ಪ್ರಶ್ನೆ ಸಮಾನತೆ ಎಂದರೆ ಪ್ರತಿಭಾವಂತರನ್ನು ಹತ್ತಿಕ್ಕುವುದೇ?

WhatsApp Image 2022-01-29 at 1.52.12 PM

ಉತ್ತರ ಕರ್ನಾಟಕ ಮೂಲದ ಗಗನ್ ಕುಬೇರ್ ಪ್ರತಿಭಾವಂತ ಹುಡುಗ. ಕಷ್ಟ ಪಟ್ಟು ಶ್ರಮವಹಿಸಿ ಓದಿ ತನ್ನ ಅರ್ಹತೆಯಿಂದ ವೈದ್ಯಕೀಯ ಪದವಿಯನ್ನು ಗಳಿಸಿಕೊಂಡಿದ್ದ ಹುಡುಗ. ಈಗಿನ ಕಾಲದಲ್ಲಿ ಕೇವಲ ಎಂ.ಬಿ.ಬಿ.ಎಎಸ್. ಪದವಿ ಇದ್ದರೆ ಸಾಲದು ಸ್ನಾತಕೋತ್ತರ ಪದವಿಯನ್ನು ಪಡೆದಲ್ಲಿ ಮಾತ್ರವೇ ಗೌರವ ದೊರೆಯುತ್ತದೆ ಎಂಬುದನ್ನು ಅರಿತು ಡಾಕ್ಟರ್ ಗಗನ್ ಕುಬೇರ್ ಸಹಾ ವರ್ಷವೀಡೀ ಕಷ್ಟ ಪಟ್ಟು ಓದಿ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಗದಗ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಅರಿವಳಿಕೆ ತಜ್ಞ ವಿಷಯದಲ್ಲಿ ಎಂಡಿ ಮಾಡಲು ಬಯಸಿದ್ದ. ಆದರೆ ಉತ್ತಮ ರ್ಯಾಂಕ್ ಪಡೆದಿದ್ದರೂ ಸೀಟು ವಿತರಿಸುವಾಗ ಅನಸ್ತೇಷಿಯಾ ವಿಷಯದಲ್ಲಿ ಇದ್ದ 3 ಸೀಟುಗಳಲ್ಲಿ 1 ಪರಿಶಿಷ್ಟ ಜನಾಂಗಕ್ಕೆ, 1 ಪರಿಶಿಷ್ಟ ಪಂಗಡಕ್ಕೆ ಮತ್ತೊಂದು ಸೇವೆಯಲ್ಲಿರುವ ಅಭ್ಯರ್ಥಿಗೆ ಮೀಸಲಾಗಿಟ್ಟ ಪರಿಣಾಮ ಸಾಮಾನ್ಯ ವರ್ಗಕ್ಕೆ ಸೇರಿದ ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರಾಗಿ ಹುಟ್ಟಿದ್ದ ಪ್ರತಿಭಾವಂತ ಗಗನ್ ಕುಬೇರ ಉತ್ತಮ ರ್ಯಾಂಕ್ ಪಡೆದದ್ದರ ಹೊರತಾಗಿಯೂ ತಾನು ಇಷ್ಟ ಪಟ್ಟ ಕಾಲೇಜಿನಲ್ಲಿ ಕಲಿಯಲು ಆಗದೇ ಹೋದದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ಅದೆಂದೋ ಸವರ್ಣೀಯರು ದಲಿತರ ಮೇಲೆ ಶೋಷಣೆಯನ್ನು ನಡೆಸಿದ ಪರಿಣಾಮವಾಗಿ ದಲಿತರಿಗೆ ನಮ್ಮ ದೇಶದಲ್ಲಿ ಸಮಾನತೆ ಸಿಕ್ಕಿರಲಿಲ್ಲ ಎಂಬುದನ್ನು ಮುಂದಿಟ್ಟು ಕೊಂಡು ಡಾ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನದಲ್ಲಿ ಕೇವಲ 33 ಜಾತಿಗಳ ಪಟ್ಟಿಯನ್ನು ಮಾಡಿ ಅವರಿಗೆ ಸ್ವಾತಂತ್ರ್ಯಾ ನಂತರ ಕೇವಲ 10 ವರ್ಷಗಳ ಕಾಲ ಮೀಸಲಾತಿಯನ್ನು ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತಂದು ನಂತರ ಈ ಎಲ್ಲಾ ಮೀಸಲಾತಿಗಳನ್ನು ನಿರ್ಭಂಧಿಸಬೇಕು ಎಂಬ ಷರತ್ತಿನೊಂದಿಗೆ ಈ ದೇಶದಲ್ಲಿ 70 ವರ್ಷಗಳ ಹಿಂದೆ ಮೀಸಲಾತಿಯನ್ನು ಜಾರಿಗೆ ತಂದಿದ್ದು ಈಗ ಇತಿಹಾಸ.

ಶತ್ರುವಿನ ಶತ್ರು ತನ್ನ ಮಿತ್ರ ಎನ್ನುವಂತೆ ಇಡೀ ಪ್ರಪಂಚದಲ್ಲಿ ನಿಶ್ಯೇಷವಾಗಿ ಹೋಗಿರುವ ಕಮ್ಯೂನಿಷ್ಟರು ನಮ್ಮ ದೇಶದಲ್ಲಿ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ಜಾತ್ಯಾತೀತತೆ ಎಂಬ ಅತಿಯಾದ ಜಾತಿಯ ಪದ್ದತಿಯನ್ನು ರೂಢಿಗೆ ತಂದು ಹಿಂದೂಗಳನ್ನು ಪದೇ ಪದೇ ಜಾತಿಯ ಆಧಾರಿತವಾಗಿ ಒಡೆಯುತ್ತಿರುವುದಲ್ಲದೇ ಅಂದು ಕೇವಲ 33 ಹಿಂದುಳಿದ ಜಾತಿ ಮತ್ತು ಹಿಂದುಳಿದ ವರ್ಗದಲ್ಲಿ ಇದ್ದವರು ಇಂದು 130ಕ್ಕೂ ಅಧಿಕ ಜಾತಿಗಳು/ಪಂಗಡಗಳು ಸೇರಿಕೊಂಡಿರುವುದಲ್ಲದೇ, ಪ್ರತಿಯೊಂದು ಜಾತಿಗೂ ಮಠವನ್ನು ಕಟ್ಟಿಕೊಂಡು ಅವರ ಮಠಧೀಶರ ಮುಂದಾಳಾತ್ವದಲ್ಲಿ ಈ ಕ್ಷಣಕ್ಕೂ ಅವರ ಜಾತಿಯನ್ನು ಒಂದಲ್ಲಾ ಒಂದು ಹಿಂದುಳಿತ ವರ್ಗಕ್ಕೆ ಸೇರಿಸ ಬೇಕೆಂದು ಉಗ್ರ ಹೋರಾಟ ನಡೆಸುತ್ತಿರುವುದು ವಿಪರ್ಯಾಸವಾಗಿದೆ.

ದುರಾದೃಷ್ಟವಷಾತ್ ಸ್ವಾತ್ರಂತ್ರ್ಯ ಬಂದು 75 ವರ್ಷಗಳ ನಂತರವೂ ಈ ದೇಶದಲ್ಲಿ ಸಾಮಾಜಿಕ ಅಸಮಾನತೆ ಎನ್ನುವುದು ಗಗನ ಕುಸುಮವಾಗಿದ್ದು, ಸವರ್ಣೀಯರಾಗಿ ಹುಟ್ಟುದ ಪ್ರತಿಭಾವಂತರಿಗೆ ನಮ್ಮ ದೇಶದಲ್ಲಿ ಯಾವುದೇ ಬೆಲೆ ಇಲ್ಲದ ಕಾರಣ ಪ್ರತೀ ವರ್ಷವೂ ವಿದೇಶಗಳಿಗೆ ಲಕ್ಷಾಂತರ ಪ್ರತಿಭಾ ಪಲಾಯನವಾಗುತ್ತಿದ್ದರೂ ಇದುವರೆಗೂ ಬಂದ ಯಾವುದೇ ಸರ್ಕಾರಗಳು ಗಮನ ಹರಿಸದೇ ಇರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ. ಅರಂಭದಲ್ಲಿ ಸವರ್ಣೀಯರು ದಲಿತರನ್ನು ತುಳಿದರು ಎಂದರೆ ಈಗ ಮೀಸಲಾತಿಯ ಪರಿಣಾಮವಾಗಿ ಅದು ವಿರುದ್ಧವಾಗಿದ್ದು, ದಲಿತರು ಸವರ್ಣೀಯರ ಮೇಲೆ ಸವಾರಿ ಮಾಡುತ್ತಿರುವುದಕ್ಕೆ ಗಗನ್ ಕುಬೇರ್ ಅವರ ಸಂಗತಿ ಜ್ವಲಂತ ವಿಷಯವಾಗಿದೆ.

ಈ ದೇಶದಲ್ಲಿ ಕೇವಲ 2-3% ಇರುವ ಬ್ರಾಹ್ಮಣರನ್ನು ಪ್ರತೀ ದಿನವೂ ಹಳಿಯದೇ ಹೋದರೆ ಅವರು ತಿಂದದ್ದು ಅರಗದೇ ಹೋಗದಿರುವಂತಹ ಕೆಲವು ವರ್ಗ ಸೃಷ್ಟಿಯಾಗಿರುವುದು ಈ ದೇಶಕ್ಕೆ ಮಾರಕವಾಗಿದೆ. 70+ ವರ್ಷಗಳ ನಂತರವೂ ಅದೇ ಮೀಸಲಾತಿಯ ಅಡಿಯಲ್ಲಿ ಅವರು. ಅವರ ಮಕ್ಕಳು. ಮೊಮ್ಮಕ್ಕಳು, ಮರಿಮಕ್ಕಳು ಅದಿಯಾಗಿ ಮುಂದಿನ ಹತ್ತು ತಲೆಮಾರುಗಳಿಗೆ ಅಗುವಷ್ಟು ಆಸ್ತಿಯನ್ನು ಮಾಡಿಕೊಂಡರೂ ಅವರಿಗೆ ಅದೇಕೋ ಬ್ರಾಹ್ಣಣರ ಮೇಲಿನ ದ್ವೇಷ ಕಡಿಮೆಯಾಗದೇ ಹೋಗಿರುವುದು ನಿಜಕ್ಕೂ ದುಃಖಕರವೇ ಸರಿ.

ನಿಜ ಹೇಳಬೇಕೆಂದರೆ ಯಾರು ಪುರದ ಹಿತವನ್ನು ಕಾಪಾಡುತ್ತಾರೋ ಅವರು ಪುರೋಹಿತರಾಗುತ್ತಾರೆ ಎಂಬ ಅರ್ಥವಿರುವ ಕಾರಣ, ಬ್ರಾಹ್ಮಣರನ್ನು ಪುರೋಹಿತರು ಎಂದೇ ಹಿಂದಿನಿಂದಲೂ ಸಂಭೋಧಿಸುತ್ತಿದ್ದರು. ಬ್ರಾಹ್ಮಣರು ಜನ್ಮತಃ ಬುದ್ಧಿವಂತರಾಗಿರುತ್ತಿದ್ದದ್ದಲ್ಲದೇ ತಮ್ಮ ಕಠಿಣ ಪರಿಶ್ರಮ ಮತ್ತು ಅಧ್ಯಯನಗಳ ಮೂಲಕ ಜ್ಣಾನಾರ್ಜನೆ ಮಾಡಿಕೊಂದು ಊರ ಜನರ ಹಿತವನ್ನು ಬಯಸುತ್ತಿದ್ದರು. ಬ್ರಿಟೀಷರು ಭಾರತಕ್ಕೆ ವ್ಯಾಪಾರಕ್ಕೆಂದು ಬಂದು ನಮ್ಮಲ್ಲಿದ್ದ ಒಡಕುಗಳನ್ನೇ ಮುಂದೆ ಮಾಡಿಕೊಂಡು ನಿಧಾನವಾಗಿ ಒಂದೊಂದೇ ರಾಜ್ಯವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಿದ್ದದ್ದನ್ನು ಸೂಕ್ಷ್ಮವಾಗಿ ಗಮನಿಸಿದ ಬ್ರಾಹ್ಮಣರು ಬ್ರಿಟೀಷರ ಕುಟಿಲತೆಗಳನ್ನು ಜನರಿಗೆ ಎತ್ತಿ ತೋರಿಸಿ ಅವರ ವಿರುದ್ಧ ಜನ ಜಾಗೃತಿಯನ್ನು ಮಾಡಿದ್ದನ್ನು ಗಮನಿಸಿದ ಬ್ರಿಟೀಷರು ಅದೇ ಬ್ರಾಹ್ಮಣರ ಮೇಲೆ ಇಲ್ಲ ಸಲ್ಲದ್ದನ್ನು ಹೇಳಿ ಬ್ರಾಹ್ಮಣರಿಂದಲೇ ಈ ದೇಶ ಹಾಳಾಯಿತು ಎಂದು ಹೇಳಿದ ಹಸೀ ಸುಳ್ಳನ್ನೇ ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿರುವುದು ದುರಾದೃಷ್ಟಕರವೇ ಸರಿ.

acharya

ನಮ್ಮ ದೇಶದ ಇಡೀ ಇತಿಹಾಸವನ್ನು ಗಮನಿಸಿದಲ್ಲಿ, ಬ್ರಾಹ್ಮಣರು ಎಂದಿಗೂ ಯಾವ ರಾಜ್ಯವನ್ನು ಆಳಲೇ ಇಲ್ಲ. ಅವರೇನಿದ್ದರೂ ರಾಜಾಶ್ರಯದಲ್ಲಿ ಮಂತ್ರಿಗಳಾಗಿ ರಾಜನಿಗೆ ಆಡಳಿತಾತ್ಮಕವಾಗಿ, ರಾಜ ತಾಂತ್ರಿಕವಾಗಿ, ಕಾನೂನಾತ್ಮಕವಾದ ಸಲಹೆ ಸೂಚನೆಗಳನ್ನು ನೀಡುತ್ತಾ ರಾಜ್ನದ ಹಿತವನ್ನು ಕಾಪಾಡಿಕೊಂಡು ಬರುತ್ತಿದ್ದರು. ನಮ್ಮ ದೇಶ ಮತ್ತು ಧರ್ಮಕ್ಕೆ ತೊಂದರೆ ಆದಾಗಲೆಲ್ಲಾ ಇದೇ ಬ್ರಾಹ್ಮಣರು ಸಿಡಿದೆದ್ದು ಜನರನ್ನು ಸಂಘಟಿಸಿ ಸಾಮ್ರಾಜ್ಯವನ್ನು ಕಟ್ಟುವ ಸಾರಥ್ಯವಹಿಸಿದರೆ ಹೊರತು ಎಂದಿಗೂ ಸಾಮ್ರಾಟರಾಗಲಿಲ್ಲ ಎನ್ನುವುದಕ್ಕೆ, ಬೌದ್ಧ ಧರ್ಮದ ಉಚ್ರಾಯ ಸ್ಥಿತಿಯಿಂದಾಗಿ ಹಿಂದೂ ಧರ್ಮ ಅವಸಾನದತ್ತ ಸಾಗಿದ್ದಾಗ ದಕ್ಷಿಣ ಭಾರತದಲ್ಲಿ ಜನಿಸಿದ ಆದಿಗುರು ಶಂಕರರಿಂದಾಗಿ ಆರಂಭವಾದ ಹಿಂದೂ ಜಾಗೃತಿ ನಂತರ ರಾಮಾನುಜಾಚಾರ್ಯರು ಮತ್ತು ಮಧ್ವಚಾರ್ಯರು ಮುಂದುವರೆಸಿಕೊಂಡು ಹೋದ ಕಾರಣದಿಂದಾಗಿಯೇ ಇಂದಿಗೂ ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿ ಇದ್ದಾರೆ ಎನ್ನುವುದು ಸತ್ಯ. ಇನ್ನು ದುಷ್ಟ ನಂದರನ್ನು ಮಣಿಸಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಾಣಕ್ಯ, ಮೊಘಲರು ದಕ್ಷಿಣ ಭಾರತವನ್ನು ಆಕ್ರಮಿಸಿಕೊಳ್ಳದಂತೆ ತಡೆಯಲು ಹಕ್ಕ ಬುಕ್ಕರನ್ನು ಮುಂದಾಗಿಟ್ಟುಕೊಂಡು ಹೈಂದವೀ ಸಾಮ್ರಾಜ್ವನ್ನು ಕಟ್ಟಿದ ಗುರು ವಿದ್ಯಾರಣ್ಯರು ಇವರೆಲ್ಲರು ದೇಶವನ್ನು ಉದ್ಧಾರ ಮಾಡಿದ ಬ್ರಾಹ್ಮಣರೇ ಹೌದು.

ಇನ್ನು1857ರ ಪ್ರಥಮ ಸ್ವಾತ್ರಂತ್ಯ ಸಂಗ್ರಾಮದಲ್ಲಿ ಹೋರಾಟದ ಕಿಚ್ಚನ್ನು ಹತ್ತಿಸಿದ ಮಂಗಲ್ ಪಾಂಡೆಯೂ ಸಹಾ ಬ್ರಾಹ್ಮಣರೇ. ಇನ್ನು ಸ್ವಾತ್ರಂತ್ರ್ಯ ಹೋರಾಟದಲ್ಲಿ ಮುಂದಾಳತ್ವ ವಹಿಸಿಕೊಂಡಿದ್ದ ತಿಲಕರು, ಗೋಖಲೆಯವರು, ರಾನಡೆಯವರು, ಚಂದ್ರಶೇಖರ್ ಅಜಾದ್ ಹೀಗೆ ಪಟ್ಟಿ ಮಾಡುತ್ತಾ ಹೋದಲ್ಲಿ ಪುಟಗಟ್ಟಲೆ ಹೇಳಬಹುದಾದಷ್ತು ಬ್ರಾಹ್ಮಣರು ಈ ದೇಶ ಮತ್ತು ಧರ್ಮದ ಉದ್ಧಾರಕ್ಕಾಗಿ ಕಾಯಾ ವಾಚಾ ಮನಸ್ಸಿನಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವಾಗ ಅಂತಹವರಿಂದಲೇ ಈ ದೇಶ ಹಾಳಾಗಿದೆ ಎನ್ನುವುದು ಹಾಸ್ಯಾಸ್ಪದ ಎನಿಸುತ್ತದೆಯಲ್ಲವೇ?

takkadi

ಸಮಾನತೆಗೆ ತಕ್ಕಡಿಯೇ ಅತ್ಯುತ್ತಮ ಆಳತೆ ಗೋಲಾಗಿದ್ದು ಎರಡೂ ಕಡೆಯಲ್ಲಿ ಸಮ ಪ್ರಮಾಣದ ವಸ್ತುಗಳನ್ನು ಇಟ್ಟಾಗಲೇ ತಕ್ಕಡಿಯ ಅಳತೆ ಸರಿಯಾಗಿರುತ್ತದೆ. ಅದೇ ರೀತಿ ನಮ್ಮ ದೇಶದಲ್ಲಿ ಜಾತಿಯ ಹೊರತಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿತಕ್ಕೆ ಒಳಪಟ್ಟ ಪ್ರತಿಯೊಬ್ಬರನ್ನೂ ಮೇಲಕ್ಕೆ ತರಲೇ ಬೇಕಿದೆ. ಹಾಗೆಂದ ಮಾತ್ರಕ್ಕೇ ಕೆಲವೇ ವರ್ಗಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡಿದಲ್ಲಿ ಗಗನ್ ನಂತಹ ಪ್ರತಿಭಾವಂತರು ನಷ್ಟವನ್ನು ಅನುಭವಿಸುತ್ತಾರೆ. ಇದನ್ನೇ ಮನಗಂಡು ಯಾವುದೇ ರೀತಿಯ ಮೀಸಲಾತಿಗಳು ಶೇ 50 ಕ್ಕಿಂತ ಹೆಚ್ಚಾಗಿರಬಾರದೆಂಬ ಕಾನೂನು ಇದ್ದರೂ ಸಹಾ ಅದೇ ಕಾನೂನಿನಲ್ಲಿರುವ ಲೋಪ ಲೋಪವನ್ನು ಮುಂದಾಗಿಟ್ಟುಕೊಂಡು ಹಿಂಬಾಗಿಲಿನಿಂದ 80-90% ಈ ಪ್ರಕರಣದಲ್ಲಿ 100% ಮೀಸಲಾತಿಯನ್ನು ಜಾರಿಗೆ ತಂದಿರುವುದು ಅರ್ಹ ಪ್ರತಿಭಾವಂತರನ್ನು ಆರಂಭದಲ್ಲೇ ಚಿವುಟಿ ಹಾಕುವುದರ ಮೂಲಕ ಈ ದೇಶದ ಅಭಿವೃದ್ಧಿಗೆ ಮಾರಕವಾಗಿದೆ.

ಇಂದು ಗಗನ್ ಸಿಡಿದೆದ್ದಿದ್ದಾನೆ. ಮುಂದೆ ಇದೇ ರೀತಿಯ ಮನೋಭಾವ ಎಲ್ಲೆಡೆಯೂ ಮುಂದುವರೆದಲ್ಲಿ ಇನ್ನೂ ಸಹಸ್ರಾರು ಪ್ರತಿಭಾವಂತರು ಸಿಡಿದೇಳುತ್ತಾರೆ. ಆಗ ಇದನ್ನೇ ನಪ ಮಾಡಿಕೊಂಡು ಕಮ್ಯೂನಿಷ್ಟ್ ಸಿದ್ಧಾಂತದ ವ್ಯಕ್ತಿಗಳು, ಹಿಂದೂ ವಿರೋಧಿ ಶಕ್ತಿಗಳು ಮತ್ತು ಕೆಲ ಮತಾಂಧದ ಶಕ್ತಿಗಳು ಒಂದಾಗಿ, ಅಲ್ಪಸಂಖ್ಯಾತರು, ಹಿಂದುಳಿ ದವರ್ಗದವರು, ದಲಿತರು ಎಲ್ಲರಲ್ಲೂ ಅಹಿಂದ ಎನ್ನುವ ವಿಷಬೀಜವನ್ನು ಬಿತ್ತಿ, ಬ್ರಿಟಿಷರಂತೆಯೇ ಜಾತಿ, ಧರ್ಮ ಭಾಷೆಗಳನ್ನೇ ಎತ್ತಿ ಕಟ್ಟಿ ಇಡೀ ದೇಶದಲ್ಲಿ ಕೋಮು ದಳ್ಳುರಿಯನ್ನು ಎಬ್ಬಿಸಿ ಮತ್ತೊಮ್ಮೆ ಭಾರತವನ್ನು ಹತ್ತು ಹಲವು ಭಾಗಗಳಾಗಿ ತುಂಡರಿಸುವ ಕಾಲ ಬಂದರೂ ಆಶ್ಚರ್ಯ ಪಡಬೇಕಿಲ್ಲ.

ಪ್ರತಿಯೊಂದಕ್ಕೂ ಈ ದೇಶದಲ್ಲಿ ನಮಗೆ ಸಂವಿಧಾನವೇ ಪ್ರಧಾನ. ಅಂಬೇಡ್ಕರ್ ಅವರ ಸಂವಿಧಾನದಂತೆಯೇ ಎಲ್ಲರಿಗೂ ಸಮಾನತೆ ಇರಬೇಕು ಎಂದು ಮೀಸಲಾತಿ ಗುರಾಣಿಯನ್ನು ಹಿಡಿದು ಹೋರಾಟಕ್ಕೆ ಇಳಿಯುವ ಬುದ್ದಿಜೀವಿಗಳು ಗಂಜಿ ಗಿರಾಕಿಗಳು ಪ್ರತಿಭಾವಂತ ಗಗನ್ ವಿಷಯದಲ್ಲಿ ಮೌನವಾಗಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ. ಅವರ ಈ ಜಾಣ ಮೌನ ಈ ದೇಶದಲ್ಲಿ ಸಮಾನತೆ ಎಂದರೆ ಮೀಸಲಾತಿಯ ಅಡಿಯಲ್ಲಿ ಪ್ರತಿಭಾವಂತರನ್ನು ತುಳಿಯುವುದು ಎಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ ಅಲ್ಲವೇ?

ಮಿಂಚಿ ಹೋದ ಮೇಲೆ ಚಿಂತಿಸುವ ಫಲವಿಲ್ಲ ಎನ್ನುವಂತೇ ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಅದರಲ್ಲಿ ಬ್ರಾಹ್ಮಣರೂ ಸೇರಿದಂತೆ ಹಿಂದೂ, ಕ್ರೈಸ್ತ ಮುಸಲ್ಮಾನ, ಬೌದ್ಧ, ಜೈನ, ಪಾರ್ಸೀ ಸಿಖ್ಖರ ಆದಿಯಾದಿಯಾಗಿ ಈ ದೇಶದಲ್ಲಿ ಜನಿಸಿದ ಮತ್ತು ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತೀಯರಿಗೂ ಒಂದೇ ದೇಶ ಮತ್ತು ಒಂದೇ ಕಾನೂನು ಅಡಿಯಲ್ಲಿ ಎಲ್ಲರಿಗೂ ಸರಿಸಮಾನವಾದ ಸವಲತ್ತುಗಳನ್ನು ಕೊಟ್ಟಲ್ಲಿ ಮಾತ್ರವೇ ಸಮಾನತೆ ಎಂಬುದು ನಿಜವಾದ ಅರ್ಥದಲ್ಲಿ ಈ ದೇಶದಲ್ಲಿ ಮೂಡುತ್ತದೆ. ಹಾಗಾದಾಗ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ದೊರೆತು, ವಿದ್ವಾನ್ ಸರ್ವತ್ರ ಪ್ಯೂಜ್ಯತೆ ಎಂದು ಪ್ರತಿಭಾಫಲಾಯನ ತಪ್ಪಿ ಭಾರತ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂದೇಹವೇ ಇಲ್ಲಾ ಅಲ್ಲವೇ?

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಸಮಾನತೆ ಎಂದರೆ ಪ್ರತಿಭಾವಂತರನ್ನು ಹತ್ತಿಕ್ಕುವುದೇ?

  1. ಉತ್ತಮ ಲೇಖನ. ನಗನ್ನಿಸುವುದು ಗಗನ್ ರವರು ನ್ಯಾಯಾಲಯದ ಮೊರೆ ಹೋಗಬೇಕು. ಸೀಟು ಹೆಚ್ಚಿಗೆ ಮಾಡಿ ಗಗನ್ ಗೆ ಕೊಡಬಹುದಾದ ಸಾಧ್ಯತೆ ಹೆಚ್ಚಾಗಿ ಇದೆ.
    ಉಷಾ ವಾಸು

    Liked by 1 person

  2. ಗಗನ್ ರವರು ನಿಜವಾಗಿ ಬಂದಿದ್ದು ೧೨೦೦೦ ನೇ ರ್ಯಾಂಕ್ . ಆದರೆ ವೀಡಿಯೋದಲ್ಲಿ ತನ್ನದು ಮೊದಲನೇ ರ್ಯಾಂಕ್ ಎಂದು ಬುರುಡೆ ಬಿಟ್ಟಿದ್ದಾರೆ ಅಷ್ಟೆ.

    Like

    1. ಒಂದು ವೇಳೆ ನಾನು ಮೊದಲ ರ್ಯಾಂಕ್ ಬಂದ್ರೂ ಸಹ ನನಗೆ ಸೀಟ್ ಸಿಗೋದಿಲ್ಲ ಯಾಕಂದ್ರೆ ಈಗಾಗಲೇ ಸೀಟು ಮೀಸಲಾಗಿದೆ ಎಂದಿದ್ದಾನೆಯೇ ಗಗನ್ ಹೊರತು ನಾನೇ ಒಂದನೇ ರ್ಯಾಂಕ್ ಪಡೆದುಕೊಂಡಿದ್ದೇನೆ‌ ಎಂದು ಹೇಳಿಲ್ಲ. ಅವನ ಮಾತನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳದೆ ಮಾತಾಡೋದು ಬಹಳ ಸುಲಭ.

      ಯಾವುದೇ ಮೀಸಲಾತಿ 50% ಗಿಂತಲೂ ಹೆಚ್ಚಿಗೆ ಇರಬಾರದು ಎಂಬ ಸುಪ್ರೀಂಕೋರ್ಟ್ ಕಾನೂನೇ‌ ಇರುವಾಗ ಅಲ್ಲಿ ಇರುವ ಮೂರು ಸೀಟುಗಳೂ ಮೂವರಿಗೆ ಮೀಸಲಾದರೆ ಸಾಮಾನ್ಯ ವರ್ಗದವರು ಎಲ್ಲಿ ಹೋಗಬೇಕು ಎನ್ನುವುದಷ್ಟೇ ಗಗನ್ ಅವರ ಆಗ್ರಹವಾಗಿದೆ.

      ಇನ್ನು ಆತ ಗದಗ್ ನವನಾದ್ದರಿಂದ ಆತ ಗದಗ್‌ ಕಾಲೇಜು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಅದರ ಕುರಿತಾಗಿಯೂ ಕುಹಕವಾಡಿವೆ ವಿಕೃತ ಮನಸ್ಸುಗಳು.

      ಶೇ100 ರಷ್ಟು ಮೀಸಲಾತಿಯನ್ನು ಪ್ರಶ್ನಿಸಿದವರ ವಯಕ್ತಿಕ ನಿಂದನೆ ಮಾಡುವುದರ ಮೂಲಕ ವಿಷಯಾಂತರ ಮಾಡುತ್ತಾ ಒಟ್ಟಿನಲ್ಲಿ ಹೇಗಾದರೂ ಬ್ರಾಹ್ಮಣರನ್ನು ಅವಹೇಳನ ಮಾಡುವದಷ್ಟೇ ಅವರ ಕುತಂತ್ರವಾಗಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s