ಮಾರ್ಚ್ 10, 2022 ಶುಕ್ರವಾರದಂದು ಪ್ರಪಂಚಾದ್ಯಂತ ಹರಡಿರುವ ಬಹುತೇಕ ಭಾರತೀಯರ ಚಿತ್ತವೆಲ್ಲಾ ಇದ್ದದ್ದೇ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ಪಂಚರಾಜ್ಯಗಳ ಚುನಾವಣಾ ಫಲಿತಾಂಶದತ್ತ. ಚುನಾವಣೆಯ ಪೂರ್ವೋತ್ತರ ಮತ್ತು ಚುನಾವಣೆಯ ನಂತರದ ಎಕ್ಸಿಟ್ ಪೋಲಿನಲ್ಲಿ ಪಂಜಾಬಿನಲ್ಲಿ ಸರಳ ಬಹುಮತದೊಂದಿಗೆ ಆಮ್ ಆದ್ಮೀ ಪಕ್ಷ, ಉತ್ತರ ಪ್ರದೇಶ ಮತ್ತು ಮಣಿಪುರಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತದೆ ಹಾಗೂ ಉತ್ತರಾಖಂಡ್ ಮತ್ತು ಗೋವಾದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಡುವೆ ಹಣಾಹಣಿಯ ಸ್ಪರ್ಥೆ ಏರ್ಪಟ್ಟು ಅತಂತ್ರವಾಗಬಹುದು ಎಂದೇ ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು.
ತಾನೊಂದು ಬಗೆದರೆ ಜನರೊಂದು ಬಗೆಯುತ್ತಾರೆ ಎನ್ನುವಂತೆ ಎಲ್ಲಾ ಸಮೀಕ್ಷೇಗಳಿಗೂ ಹುಬ್ಬೇರಿಸುವಂತೆ ಪಂಜಾಬಿನಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾದರೆ, ಪಂಜಾಬ್ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿಯೂ ಕಾಂಗ್ರೇಸ್ ಹೇಳ ಹೆಸರಿಲ್ಲದಂತೆ ನೆಲಕಚ್ಚಿದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ನಲ್ಲಿ ಕಳೆದ ಬಾರಿಗಿಂತಲು ಕಡಿಮೆ ಸ್ಥಾನಗಳನ್ನು ಗಳಿಸಿದರೆ, ಮಣಿಪುರ ಮತ್ತು ಗೋವೆಯಲ್ಲಿ ಉತ್ತಮ ಸಾಧನೆಯನ್ನು ತೋರಿ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಹತ್ತು ಹಲವಾರು ದಾಖಲೆಗಳಿಗೆ ಕಾರಣವಾದದ್ದು ಈಗ ಇತಿಹಾಸ
ಕಳೆದ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನವನ್ನು ಪಡೆದು ಅಧಿಕೃತವಾದ ವಿರೋಧ ಪಕ್ಷದ ಸ್ಥಾನಮಾನವನ್ನು ಪಡೆದಿದ್ದ ಆಮ್ ಅದ್ಮೀ ಪಕ್ಷ ಈ ಬಾರಿ ಸರಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಬಯಸಿತ್ತಾದರೂ, ಈ ರೀತಿಯ ಪ್ರಚಂಡವಾಗಿ ಅರಿಸಿ ಬರುತ್ತಾರೆಂದು ಸ್ವತಃ ಕೇಜ್ರಿವಾಲ್ ಕೂಡಾ ನಿರೀಕ್ಷಿಸಿರಲಿಲ್ಲ ಎನ್ನುವುದು ಸತ್ಯದ ವಿಷಯವಾದರೂ ಈ ರೀತಿಯಾಗಿ ಆಯ್ಕೆಯಾಗಲು ಕೇಜ್ರೀವಾಲ್ ಪಕ್ಷ ನಡೆಸಿದ ಪೂರ್ವಭಾವೀ ತಯಾರಿಗಳು ಧಿಗ್ಭ್ರಮೆ ಮೂಡಿಸುವಂತಿದ್ದು ಇದೇ ಪ್ರಶ್ನೆಯೇ ಇಂದಿನ ಲೇಖನದ ಮುಖ್ಯ ವಿಷಯವಾಗಿದೆ.
ಪ್ರಪಂಚಾದ್ಯಂತ ಕರೋನಾ ಮಹಾಮಾರಿ ವಕ್ಕರಿಸುವ ಮುನ್ನಾ ಕೇಂದ್ರ ಸರ್ಕಾರ NRC & CAA ಜಾರಿಗೆ ತರಲು ಮುಂದಾದಾಗಾ, ನಮ್ಮ ದೇಶದ ವಿರೋಧ ಪಕ್ಷಗಳು ಈ ಎರಡೂ ಕಾನೂನುಗಳನ್ನು ಬಿಜೆಪಿ ಕೇವಲ ಒಂದು ಧರ್ಮವನ್ನು ಗುರಿಯಾಗಿಸಿಸಿಕೊಂಡು ಜಾರಿಗೆ ತರಲು ಹವಣಿಸುತ್ತಿದೆ ಎಂಬ ಆರೋಪ ಮಾಡಿದ್ದರಿಂದ ಪ್ರೇರಣೆಗೊಂಡ ಮುಸಲ್ಮಾನರು ದೇಶಾದ್ಯತ ಇದರ ವಿರುದ್ಧ ಪ್ರತಿಭಟನೆ ಮಾಡಿದರೆ, ದೆಹಲಿಯ ಶಹೀನ್ ಭಾಗಿನಲ್ಲಿ ಪ್ರತಿಭಟನಾಕಾರರ ಸೋಗಿನಲ್ಲಿ ಪ್ರತಿನಿತ್ಯ ಊಟವೂ ಸೇರಿದಂತೆ ದಿನಗೂಲಿ ಆಧಾರದಲ್ಲಿ ಸಾವಿರಾರು ಮಸಲ್ಮಾನರ ಮಹಿಳೆಯರು ಪ್ರತಿಭಟನೆಯನ್ನು ನಡೆಸಲು ಮುಂದಾದಾಗ ದೆಹಲಿಯ ಸರ್ಕಾರದ ಚುಕ್ಕಾಣಿ ಹಿಡಿದಿರುವ ಕೇಜ್ರಿವಾಲ್ ಅದನ್ನು ತಡೆಹಿಡಿಯದೇ ಶತ್ರುವಿನ ಶತ್ರು ತನ್ನ ಮಿತ್ರ ಎನ್ನುವಂತೆ ಪರೋಕ್ಷವಾಗಿ ಈ ಪ್ರತಿಭಟನೆ ಕಾರರಿಗೆ ಬೇಕಾದ ಸವಲತ್ತುಗಳನ್ನು ಕೊಟ್ಟು ಚಳುವಳಿಯ ಕಾವು ಸುಮಾರು ತಿಂಗಳುಗಳ ಕಾಲ ಹೊತ್ತಿ ಉರಿಯುವಂತೆ ಕೇಜ್ರಿವಾಲ್ ನೋಡಿಕೊಂಡಿದ್ದು ಈಗ ಗುಟ್ಟಾಗಿರುವ ವಿಷಯವೇನಲ್ಲ.
ಕಳೆದ ವರ್ಷ ಕೃಷಿಕರನ್ನು ಮಧ್ಯವರ್ತಿಗಳು ಮತ್ತು ದಲ್ಲಾಳಿಗಳಿಂದ ರಕ್ಷಿಸುವ ಸಲುವಾಗಿ ಕೃಷಿ ವಿಧೇಯಕದ ಪ್ರಸ್ತಾವನೆ ಇಟ್ಟಿದ್ದೇ ತಡಾ ಮತ್ತೆ ಸರ್ಕಾರವ ವಿರುದ್ಧ ಜಾಗೃತವಾದ ಬಿಜೆಪಿ ಸೈದ್ದಾಂತಿಕ ವಿರೋಧಿಗಳು ಈ ವಿಧೇಯಕದ ವಿರುದ್ಧವೂ ಉಗ್ರ ಹೋರಾಟವನ್ನು ಆರಂಭಿಸಿದ್ದಲ್ಲದೇ ಮತ್ತದೇ ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸಿದಾಗ ಉಳಿದೆಲ್ಲಾ ರಾಜ್ಯಗಳಿಗಿಂತಲೂ ಬಹುತೇಕ ಪಂಜಾಬ್ ರಾಜ್ಯದ ರೈತರುಗಳೇ ಅಲ್ಲಿ ಕಾಣಿಸಿಕೊಂಡಾಗ ಕೊಂಚ ಅನುಮಾನ ಬರುತ್ತಿದ್ದ ಕೆಲವೇ ದಿನಗಳಲ್ಲಿ ಅದು ರೈತರ ಚಳುವಳಿಯ ಹೆಸರಿನಲ್ಲಿ ಖಲೀಸ್ಥಾನ್ ಪ್ರತ್ಯೇಕತಾ ಹೋರಾಟ ಎಂಬುದು ಸ್ಪಷ್ಟವಾಗಿ ಹೋಗಿತ್ತು. ಇವೆಲ್ಲವನ್ನು ಅರಿತಿದ್ದರೂ ದೆಹಲಿಯ ಮುಖ್ಯಮಂತ್ರಿಯಾದ ಕೇಜ್ರಿವಾಲ್ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧದ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಈ ಚಳುವಳಿ ಹೋರಾಟಗಾರರಿಗೆ ಯಾವುದೇ ರೀತಿಯ ಪಂಚತಾರಾ ಹೋಟೆಲ್ಲುಗಳಿಗೂ ಕಡೆಮೆ ಇಲ್ಲದಂತಹ ಸೌಲಭ್ಯಗಳನ್ನು ಒದಗಿಸಿಕೊಡಲು ಪರೋಕ್ಷವಾಗಿ ಕಾರಣವಾದದ್ದಲ್ಲದೇ ಪ್ರತ್ಯಕ್ಶವಾಗಿಯೇ ಮಾನವೀಯತೆಯ ಹೆಸರಿನಲ್ಲಿ ಆ ಪ್ರತಿಭಟಣಾಕಾರರಿಗೆ ಅಗತ್ಯವಿದ್ದ ನೀರು, ವಿದ್ಯುತ್ಛ್ಛಕ್ತಿಯಲ್ಲದೇ ಚಳಿಗಾಲವಾದ್ದರಿಂದ ದೆಹಲಿಯ ಸರ್ಕಾರದ ಖರ್ಚಿನಲ್ಲಿಯೇ ಅವರೆಲ್ಲರಿಗೂ ಹೊದ್ದು ಕೊಳ್ಳಲು ಬೆಚ್ಚನೆಯ ಕಂಬಳಿ ನೀಡಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಪಂಚರಾಜ್ಯಗಳ ಚುನಾವಣೆ ಘೋಷಣೆ ಆದ ಕೂಡಲೇ ಜಾಗೃತರಾದ ಕೇಜ್ರಿವಾಲ್ ಮೇಲ್ನೋಟಕ್ಕೆ ಜನರನ್ನು ಮರಳು ಮಾಡುವ ಸಲುವಾಗಿ ಎಲ್ಲಾ ಐದು ರಾಜ್ಯಗಳಲ್ಲಿಯೂ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಎಂದಿನಂತೆ ಉಚಿತವಾಗಿ ನೀರು, ಕರೆಂಟ್, ಆರೋಗ್ಯ ಚಿಕಿತ್ಸೆ, ಹೈಟೆಕ್ ಶಿಕ್ಷಣದ ಜೊತೆಗೆ ಮಹಿಳೆಯರಿಗೆ ಉಚಿತ ಬಸ್, ಮೆಟ್ರೋ ಪಾಸ್ ಜೊತೆ 1000/- ರೂಪಾಯಿಗಲನ್ನು ನೀಡುವ ಪ್ರನಾಳಿಕೆಯನ್ನು ಬಿಡುಗಡೆ ಮಾಡಿದರೂ ಪಂಜಾಬಿನಲ್ಲಿ ಈ ಎಲ್ಲಾ ಆಮೀಷಗಳಿಗಿಂತ ಕೃಷಿ ಪ್ರತಿಭಟನೆಯ ಸಮಯದಲ್ಲಿ ಸಹಾಯ ಮಾಡಿದ್ದ ಖಲಿಸ್ಥಾನಿ ಸಂಘಟನೆಯ ಬೆಂಬಲ ಇದ್ದೇ ಇರುತ್ತದೆ ಎಂಬ ಕೇಜ್ರೀವಾಲ್ ನಂಬಿಕೆ ಹುಸಿಯಾಗಲಿಲ್ಲ. ಅದಕ್ಕೆ ಪೂರಕವಾಗಿ ಈ ಕೆಳಗಿನ ಅಂಕಿ ಅಂಶಗಳು ಪುಷ್ಟೀಕರಿಸುತ್ತದೆ. ಕೇವಲ ಪಂಜಾಬ್ ಅಭೂತಪೂರ್ವ ಯಶಸ್ಸು ಮತ್ತು ಗೋವಾದಲ್ಲಿ 2 ಶಾಸಕರ ಹೊರತು ಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ಅವರ ಪಕ್ಷ ಹೇಳ ಹೆಸರಿಲ್ಲದಂತೆ ನೆಲಕಚ್ಚಿದೆ.
ಪಂಜಾಬ್ 92
ಗೋವಾ -02
ಉತ್ತರಪ್ರದೇಶ – 0
ಉತ್ತರಾಖಂಡ್ – 0
ಮಣಿಪುರ – 0
ಹೇಳೀ ಕೇಳಿ ಈ ದೇಶದ ಗೋಧಿಯ ಕಣಜ ಎಂದೇ ಖ್ಯಾತವಾಗಿರುವ ಐಶಾರಮಿ ಜೀವನದ ಪಂಜಾಬಿನಲ್ಲಿ ಉಚಿತಗಳ ಆಮೀಷ ಕೊಂಚವು ಸರಿ ಹೊಂದುವುದಿಲ್ಲ. ಈ ಬಾರಿ ಕಾಂಗ್ರೇಸ್ ಒಳಜಗಳ ಮತ್ತು ಅಕಾಲಿದಳ-ಬಿಜೆಪಿಯ ವಿರಸ ಸ್ವಲ್ಪ ಲಾಭವಾದರೂ ಹೆಚ್ಚಿನ ಲಾಭವಾಗಿರುವುದು ಖಲಿಸ್ಥಾನಿ ಬೆಂಗಲಿಗರಿಂದಲೇ ಎನ್ನುವುದು ದೇಶದ ಆಂತರಿಕ ಭಧ್ರತೆಯ ದೃಷ್ಟಿಯಿಂದ ಕಳವಳಕಾರಿಯಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಪಂಜಾಬಿಗರು ಖಲಿಸ್ತಾನ್ ವಿರೋಧಿ ನಾಯಕರಾದ ಬಾದಲ್ ಕುಟುಂಬ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ನಿರ್ಣಾಯಕವಾಗಿ ಸೋಲಿಸಿದ್ದಾರೆ.
ಎಎಪಿ ಬಹುಮತ ಗಳಿಸಿದೆ ಎಂಬ ಫಲಿತಾಂಶ ಪ್ರಕಟವಾದದ್ದೇ ತಡಾ ಭಾರತದಲ್ಲಿ ನಿಷೇಧಿತವಾಗಿರುವ ಸಿಖ್ಸ್ ಫಾರ್ ಜಸ್ಟಿಸ್ ಎಂಬ ಸಂಸ್ಥೆ ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಆಮ್ ಆದ್ಮಿ ಪಕ್ಷ ಕೃಷಿ ಬಿಲ್ ಸಮಯದಲ್ಲಿ ಪಂಜಾಬಿಗಳು ಮತ್ತು ಖಲೀಸ್ಥಾನಿಗಳ ಪರ ಮೃದು ಧೋರಣೆ ತಳೆದದ್ದೇ ಆಮ್ ಆದ್ಮಿ ಪಕ್ಷ ಪಂಜಾಬಿನಲ್ಲಿ ಅಭೂತಪೂರ್ವ ಜಯಗಳಿಸಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೇ ಈ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷ ಖಲಿಸ್ತಾನಿ ನಿಧಿಯನ್ನು ಎಗ್ಗಿಲ್ಲದೇ ಬಳಸಿಕೊಂಡಿರುವ ಕಾರಣ, ಭಗವಂತ್ ಮಾನ್ ಮುಖ್ಯಮಂತ್ರಿಯಾದ ಕೂಡಲೇ, ಭಾರತದಿಂದ ಪಂಜಾಬ್ನ ಸ್ವಾತಂತ್ರ್ಯಕ್ಕಾಗಿ SFJ ನ ಪ್ರತ್ಯೇಕತಾವಾದಿ ಜನಾಭಿಪ್ರಾಯ ಸಂಗ್ರಹವನ್ನು ಮಾಡಲು ಖಲಿಸ್ತಾನ್ ಜನಮತಗಣನೆಗೆ ಅವಕಾಶ ನೀಡಬೇಕು ಎಂಬ ಎಚ್ಚರಿಕೆಯನ್ನು ನೀಡಿರುವುದು ನಿಜಕ್ಕೂ ಭಾರತೀಯರಲ್ಲಿ ಆತಂಕ ಮೂಡಿಸಿದೆ.
ಕೇಜ್ರಿವಾಲ್ ಅವರ ರಾಜಕೀಯ ಹಿನ್ನಲೆಯನ್ನು ಸರಿಯಾಗಿ ಗಮನಿಸಿದಲ್ಲಿ ಆತ ಎಂದೂ ಎಲ್ಲಿಯೂ ನೇರವಾಗಿ ಅಖಾಡಕ್ಕೆ ಇಳಿಯುದೇ ಪರಾವಲಂಭಿಯಾಗಿ ಮತ್ತೊಬ್ಬರ ಆಶ್ರಯದಲ್ಲೇ ಬೆಳದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ತಮ್ಮ ರಕ್ಷಣೆಗಾಗಿ ಕಷ್ಟಪಟ್ಟು ಗೆದ್ದಲು ಹುಳುಗಳು ಹುತ್ತವನ್ನು ಕಟ್ಟಿದರೆ, ಅದೇೆ ಗೆದ್ದಲು ಹುಳುಗಳನ್ನೇ ತಿಂದು ಅವುಗಳು ಕಟ್ಟಿದ ಹುತ್ತವನ್ನೇ ತನ್ನ ಆಶ್ರಯವನ್ನಾಗಿ ಮಾಡಿಕೊಳ್ಳುವ ಹಾವಿನಂತೆ ಭ್ರಷ್ಟಾಚಾರದ ವಿರುದ್ಧ ರಾಜಕೀಯೇತರ ಹೋರಾಟ ನಡೆಸುತ್ತಿದ್ದ ಅಣ್ಣಾ ಹಜಾರೆಯವರ ಜೊತೆಗೆ ನಿಂತುಕೊಂಡೇ ಸದ್ದಿಲ್ಲದೇ ಆಣ್ಣಾ ಹಜಾರೆಯವರನ್ನೇ ಪಕ್ಕಕ್ಕೆ ಸರಿಸಿ ರಾಜಕೀಯ ಪಕ್ಷ ಕಟ್ಟಿ ಉಚಿತ ಆಮೀಷಗಳ ಮೂಲಕ ದೆಹಲಿಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಏರಿದ್ದಲ್ಲದೇ ಗೋವಾ ಮತ್ತು ಗುಜರಾತ್ ಗೆದ್ದೇ ಬಿಟ್ಟೆವು ಎಂದು ಐದು ವರ್ಷದ ಹಿಂದೆಯೇ ಬೀಗಿ ಭಾರೀ ಮುಖಭಂಗವನ್ನು ಅನುಭವಿಸಿದ್ದು ಇನ್ನೂ ಹಚ್ಚಹಸುರಾಗಿದೆ. ಕೇವಲ ದೆಹಲಿಯ ಮುಖ್ಯಮಂತ್ರಿಯಾಗಿ ರಾಷ್ಟ್ರನಾಯಕ ಎಂಬಂತೆ ಬಿಂಬಿಸಿಕೊಂಡು ಪ್ರಧಾನ ಮಂತ್ರಿ ಆಗುತ್ತೇನೆ ಎಂದು 2014 ರಲ್ಲಿ ನರೇಂದ್ರ ಮೋದಿಯವರ ವಿರುದ್ಧ ವಾರಣಸಿಯಲ್ಲಿ ಸ್ಪರ್ಥಿಸಿ ಸೋತು ಸೊರಗಿದ್ದನ್ನು ನೋಡಿದ್ದೇವೆ.
ಅಧಿಕಾರಕ್ಕಾಗಿ ಯಾರ ಮನೆಯ ಬಾಗಿಲನ್ನಾದರು ತಟ್ಟಲು ಸಿದ್ಧ ಎಂಬುದಕ್ಕೆ ಭ್ರಷ್ಟಾಚಾರಿ ಎಂದೆ ಹತ್ತು ಹಲವಾರು ಕೇಸುಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ವೇದಿಕೆಯ ಮೇಲೆ ಅಪ್ಪಿ ಮುದ್ದಾಡಿದ್ದನ್ನು ಜನರು ಮರೆತಿಲ್ಲ.
SFJ ಬಿಡುಗಡೆ ಮಾಡಿದ ಪತ್ರದಲ್ಲಿ, ಭಾರತ ವಿರೋಧಿ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನೂನ್, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಂಜಾಬ್ ಗೆಲ್ಲಲು ಖಲಿಸ್ತಾನ್ ಮತಗಳು ಮತ್ತು ಹಣವನ್ನು ವಿಶ್ವಾಸಘಾತುಕವಾಗಿ ಬಳಸಿದೆ ಎಂಬ ಆರೋಪ ಮಾಡಿರುವುದಲ್ಲದೇ, ಅಮೇರಿಕಾ, ಕೆನಡಾ, ಬ್ರಿಟನ್, ಯುಯೇಇ ಮತ್ತು ಆಸ್ಟ್ರೇಲಿಯಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಎಎಪಿಗೆ ಭಾರಿ ಹಣ ಮತ್ತು ಬೆಂಬಲ ನೀಡಿದ್ದಾರೆ ಎಂಬುದು ಬಹಿರಂಗ ರಹಸ್ಯವಾಗಿರುವ ಕಾರಣ ಮತ್ತು ಅದರಿಂದಾಗಿಯೇ ಅಧಿಕಾರಕ್ಕೇರಿರುವ ಎಎಪಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯನ್ನು ಪಂಜಾಬಿನಲ್ಲಿ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿರುವುದು ಆತಂಕಕಾರಿಯಾದ ಬೆಳವಣಿಯಾಗಿದೆ
ಇದಕ್ಕೆ ಪೂರಕವಾಗಿ ಎನ್ನುವಂತೆ, ಖಲಿಸ್ತಾನ್ ಚಳವಳಿಯನ್ನು ತಡೆಯಲು ಗುಂಡುಗಳನ್ನು ಬಳಸಿದ ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ದೈಹಿಕವಾಗಿ ಸಾವನ್ನಪ್ಪಿದರೆ, ಖಲಿಸ್ತಾನವನ್ನು ತಡೆಯಲು ಯತ್ನಿಸಿದ ಬಾದಲ್ ಮತ್ತು ಅಮರಿಂದರ್ ಸಿಂಗ್ ಅವರು ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾಗಿ ಖಲೀಸ್ಥಾನ್ ಪರ ಮೃದು ಧೋರಣೆಯನ್ನು ಹೊಂದಿರುವ ಭಗವಂತ್ ಮಾನ್ ಪಂಜಾಬಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಅದೇ ರೀತಿಯಲ್ಲೇ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮುಂದೊಮ್ಮೆ ಪಂಜಾಬಿನ ಮುಖ್ಯಮಂತ್ರಿ ಮುಕ್ತ ಖಲಿಸ್ತಾನದ ಮೊದಲ ಪ್ರಧಾನಿಯಾಗುತ್ತೇನೆ ಎಂದು ಹೇಳಿದ್ದ ವಿಡೀಯೋವನ್ನು ಆಪ್ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರು ಬಹಿರಂಗಪಡಿಸಿರುವುದು ಕಳವಳಕಾರಿಯಾಗಿದೆ.
ಭ್ರಷ್ಟಾಚಾರ ಮತ್ತು ಗೂಂಡಾ ಮುಕ್ತ ಅಭಿವೃದ್ಧಿ ಪರ ಆಡಳಿತವನ್ನು ನೀಡುತ್ತೇವೆ ಎಂಬ ವಿಶ್ವಾಸದೊಡನೆ ದೆಹಲಿಯಲ್ಲಿ ಆಳ್ವಿಕೆಗೆ ಬಂದ ಕೇಜ್ರೀವಾಲ್ ಒಂದೆರಡು ಗಲ್ಲಿ ಕ್ಲೀನಿಕ್ ಮತ್ತು ಕೆಲವು ಆಧುನಿಕ ಸೌಲಭ್ಯದ ಉತ್ತಮ ಶಾಲೆಯನ್ನು ಆರಂಭಿಸಿದ ಹೊರತಾಗಿ ಅವರ ಶಾಸಕರ/ನಗರ ಪಾಲಿಕೆ ಸದಸ್ಯರ ಕಮಿಷನ್ ದಂಧೆ, ದೈಹಿಕ ಹಲ್ಲೆ, ಕಿರುಕುಳ, ಸುಲಿಗೆ, ಕಿರುಕುಳ, ಭ್ರಷ್ಟಾಚಾರ, ಸರ್ಕಾರೀ ಅಧಿಕಾರಿಗಳ ಆತ್ಮಹತ್ಯೆಗೆ ಪ್ರಚೋದನೆಯ ಜೊತೆಗೆ ಕೋಮು ದಳ್ಳುರಿಯನ್ನು ನಡೆಸಿದ ಕಾರಣ ಹತ್ತು ಹಲವಾರು ಮೊಕ್ಕದ್ದಮೆಗಳನ್ನು ಇಂದಿಗೂ ಎದುರಿಸುತ್ತಿರುವುದು ಸುಳ್ಳೇನಲ್ಲ.
ಇನ್ನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮಾನ್ 2000ರ ಆಸುಪಾಸಿನಲ್ಲಿ ಲಾಫ್ಟರ್ ಇಂಡಿಯಾ ಎಂಬ ಟಿವಿ ಕಾರ್ಯಕ್ರಮದಲ್ಲಿ ಹಾಸ್ಯಗಾರನಾಗಿ ಪ್ರಖ್ಯಾತಿ ಹೊಂದಿದ ಕಾರಣದಿಂದಲೇ, ಎರಡು ಬಾರಿ ಸಾಂಸದನಾಗಿ ಆಯ್ಕೆಯಾಗಿದ್ದರೂ, ನಂತರದ ದಿನಗಳಲ್ಲಿ ಮದ್ಯವ್ಯಸನಿಯಾಗಿ ಕುಖ್ಯಾತಿ ಪಡೆದಿರುವುದು ಸುಳ್ಳೇನಲ್ಲ. ಲೋಕಸಭೆಯ ಅಧಿವೇಶನದ ಸಮಯದಲ್ಲೇ ಕುಡಿದು ಸಂಸತ್ತನ್ನು ಪ್ರವೇಶಿಸಿದ ಕಾರಣ ಲೋಕಸಭಾಧ್ಯಕ್ಷರಿಂದ ಛೀಮಾರಿ ಹಾಕಿಸಿಕೊಂಡು ತಪ್ಪೊಪ್ಪಿಗೆಯ ಪತ್ರವನ್ನೂ ನೀಡಿದ್ದರು. ಇದೇ ಕಾರಣದಿಂದಾಗಿಯೇ ಆತನ ಪತ್ನಿ ಮತ್ತು ಮಕ್ಕಳು ಆತನಿಂದ ದೂರ ಸರಿದಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿ ಚುನಾವಣೆಗೂ ಮುನ್ನಾ ನಿಯೋಜಿತನಾದ ಕೂಡಲೇ ತಾನು ಇನ್ನು ಮುಂದೆ ಮದ್ಯವನ್ನು ಸೇವಿಸುವುದಿಲ್ಲ ಎಂದು ತನ್ನ ಹೆತ್ತ ತಾಯಿಯ ಮುಂದೆ ಆಣೆ ಪ್ರಮಾಣಗಳನ್ನು ಮಾಡಿದ್ದರೂ ಚುನಾವಣೆಯ ಫಲಿತಾಂಶ ಪ್ರಕಟವಾದ ದಿನ ಕುಡಿದು ಚಿತ್ತಾಗಿ ತನ್ನ ಕಾರನ್ನು ಹತ್ತಲೂ ತೂರಾಡುತ್ತಿದ್ದ ವೀಡೀಯೋ ಸಾಕಷ್ಟು ವೈರಲ್ ಆಗಿದೆ.
ಕೇಂದ್ರದ ನೆರವಿನಿಂದ ದೆಹಲಿಯಲ್ಲಿ ಹೇಗೋ ಉಚಿತ ಆಮಿಷಗಳನ್ನು ಕೊಡುತ್ತಿರುವ ಕೇಜ್ರೀವಾಲ್ ಅದನ್ನೇ ಪಂಜಾಬಿನಲ್ಲಿ ಹೇಗೆ ಕೊಡಲು ಸಾಧ್ಯ? ಎಂದಾಗ, 20-30% ಭ್ರಷ್ಟಾಚಾರ ಮತ್ತು ಲಂಚಗುಳಿತನ ಮತ್ತು ಶಾಸಕರು, ಸಂಸದರು ಮತ್ತು ಸರ್ಕಾರೀ ಅಧಿಕಾರಿಗಳ ಉಚಿತ ಸೌಲಭ್ಯವನ್ನು ಕತ್ತರಿಸಿ ಅದರಿಂದ ಉಳಿಯುವ ಕೋಟ್ಯಾಂತರ ಹಣದಲ್ಲಿ ತಮ್ಮೆಲ್ಲಾ ಉಚಿತಗಳನ್ನು ನೀಡುವುದಾಗಿ ಚುನಾವಣೆಯ ಮುನ್ನ ಸಂದರ್ಶನದಲ್ಲಿ ತಿಳಿಸಿದ್ದರೂ, ನಾಯಿಯ ಬಾಲಕ್ಕೆ ಎಷ್ಟೇ ದಬ್ಬೇ ಕಟ್ಟಿದರೂ ಅದರ ಬಾಲ ನೆಟ್ಟಗಾಗುವುದಿಲ್ಲ ಎನ್ನುವಂತೆ, ಮಾನ್ ಅಧಿಕಾರಕ್ಕೆ ಏರಿದ ತಕ್ಷಣವೇ ಸರ್ಕಾರ ನಡೆಸಲು ಕೇಂದ್ರ ಸರ್ಕಾರ ಈ ಕೂಡಲೇ 50000 ಕೋಟಿಗಳ ಪರಿಹಾರವನ್ನಾಗಿ ನೀಡಬೇಕು ಎಂದು ಆಗ್ರಹಿಸಿರುವುದು ಆಪ್ ಸರ್ಕಾರದ ಇಬ್ಬಂಧಿತನವನ್ನು ಜಗ್ಗಜ್ಜಾಹೀರಾತು ಪಡಿಸಿದೆ.
ಒಟ್ಟಿನಲ್ಲಿ ಹೇಳುವುದು ಸುಲಭ ಮತ್ತು ಅದನ್ನೇ ಮಾಡಿ ತೋರಿಸುವುದು ಬಹಳ ಕಷ್ಟ ಎನ್ನುವುದು ಮುಂದಿನ ದಿನಗಳಲ್ಲಿ ಕೇಜ್ರೀವಾಲ್ ಮತ್ತವನ ಪಟಾಲಂಗಳಿಗೆ ಅರಿಯುವಷ್ಟರಲ್ಲಿ ಖಲೀಸ್ಥಾನ್ ಪರ ಉಗ್ರ ಬಿಂದ್ರನ್ ವಾಲೆಯಿಂದಾಗಿ 80ರ ದಶಕಲ್ಲಿ ಆದಂತೆಯೇ ಪಂಜಾಬ್ ಹೊತ್ತಿ ಉರಿಯದಿರಲಿ ಎನ್ನುವದಷ್ಟೇ ಸಕಲ ಭಾರತೀಯರ ಆಶಯವಾಗಿದೆ. ತಮ್ಮ ರಾಜಕೀಯದ ಅಧಿಕಾರದ ತೆವಲಿಗಾಗಿ ಉಚಿತ ಆಮಿಷಗಳನ್ನೊಡ್ಡಿ ಜನರನ್ನು ಸೋಮಾರಿಗಳಾಗಿಸುವ ಮತ್ತು ದೇಶ ವಿರೋಧಿಗಳ ಜೊತೆ ಕೈ ಜೋಡಿಸಲು ಮುಂದಾಗಿರುವ ಇಂತಹ ದೇಶ ಭ್ರಷ್ಟ ರಾಜಕಾರಣಿಗಳ ಬಗ್ಗೆ ಉಳಿದ ರಾಜ್ಯದ ಜನರು ಅಗತ್ಯವಾಗಿ ಎಚ್ಚರಿಕೆಯನ್ನು ವಹಿಸಬೇಕಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ