ಯಾವುದೇ ಕಾರ್ಯ ಅಥವಾ ಕಾರ್ಯಕ್ರಮವನ್ನು ನಡೆಸಿದ ನಂತರ ಅದರ ಫಲವನ್ನು ಯಾರು ಯಾರು ಅನುಭವಿಸಬಹುದು? ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಸಂಸ್ಕೃತ ಸುಭಾಷಿತದಲ್ಲಿ ಉಲ್ಲೇಖಿಸಿಲಾಗಿದೆ.
ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ |
ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ ||
ಯಾವುದೇ ಒಳ್ಳೆಯ ಕೆಲಸವೇ ಇರಲಿ ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಈ ನಾಲ್ಕೂ ಜನರೂ ಆ ಕರ್ಮಗಳಿಗೆ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎಂಬುದು ಇದರ ಅರ್ಥವಾಗಿದೆ.
ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಎಂದರೆ, ವಿಶ್ವೇಶ್ವರ ಭಟ್ಟರ ಸಾರಥ್ಯದಲ್ಲಿ ಪ್ರಕಟವಾಗುತ್ತಿರುವ ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣಕಾರ ಜಯವೀರ ಗೌಡ ಎಂಬುವರು, ಇತ್ತೀಚೆಗೆ ಶೃಂಗೇರಿಯ ಕಿರಿಯ ಶ್ರೀಗಳು ಶಂಕರಪುರದ ಪೋಲೀಸ್ ಠಾಣೆಗೆ ಭೇಟಿಕೊಟ್ಟು ಅಲ್ಲಿನ ಸಿಬ್ಬಂಧಿ ವರ್ಗದವರನ್ನು ಆಶೀರ್ವದಿಸಿ ಬಂದ ಸಣ್ಣ ಘಟನೆಯನ್ನೇ ಹುಲಿ ಬಂತು ಹುಲಿ ಎನ್ನುವಂತೆ ಶೃಂಗೇರಿ ಶ್ರೀಗಳನ್ನು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಸಬಾರದಿತ್ತು ಎಂದು ಮೇಲ್ನೋಟಕ್ಕೆ ಸ್ವಾಮಿಗಳ ಬಗ್ಗೆ ಕಕ್ಕುಲತೆ ತೋರಿದಂತಿದ್ದರೂ, ಲೇಖನವನ್ನು ಸೂಕ್ಷ್ಮವಾಗಿ ಓದಿ ಅರ್ಥೈಸಿಕೊಳ್ಳುವವರಿಗೆ ಅದು ಕುಹಕವಾಗಿ ಮತ್ತು ವಿಡಂಬಣಾತ್ಮಕವಾಗಿ ಸ್ವಾಮಿಗಳ ಅವಹೇಳಣ ಮಾಡುವಂತಿದ್ದ ಕಾರಣ, ಜಾತಿ ಮತ ಬೇಧವಿಲ್ಲದೇ ಸಮಸ್ತ ಹಿಂದೂಗಳೂ ವಿಶ್ವೇಶ್ವರ ಭಟ್ಟರು ಮತ್ತು ಆ ಅಂಕಣಕಾರರ ಬಗ್ಗೆ ಆಕ್ಷೇಪ ವ್ಯಕ್ತಡಿಸುತ್ತಿದ್ದಾರೆ.
ಈ ರೀತಿಯ ಅಪಸವ್ಯಗಳನ್ನು ನಂದಿ ಬ್ರಾಂಡ್ ಇಲ್ಲವೇ ವಾಂತಿ ಭಾರತಿಯವರು ಬರೆದಿದ್ದರೆ ಅಥವಾ ASSking ಪರಕಾಚನೋ ಇಲ್ಲವೇ ಭಗವಾನ್ ಕೇಳಿದ್ದರೇ ನಾಯಿ ಬೊಗಳಿದರೆ ದೇವಲೋಕಕ್ಕೇನೂ ಹಾನಿಯಾಗೋದಿಲ್ಲಾ ಎಂದು ಸುಮ್ಮನಾಗಬಹುದಾಗಿತ್ತು. ಆದರೆ ಇದು ಶೃಂಗೇರಿ ಮಹಾಸಂಸ್ಥಾನದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಭಟ್ಟರು ತಮ್ಮ ಶಿಷ್ಯ ಅಂಕಣಕಾರ ಜಯವೀರ ಗೌಡರ (ಭಟ್ಟರೇ ಆ ಹೆಸರಿನಲ್ಲಿ ಅಗ್ಗಾಗ್ಗೆ ಬರೆಯುತ್ತಾರೆ ಎಂಬ ಗುಮಾನಿಯೂ ಇದೆ) ಕೈಯ್ಯಲ್ಲಿ ಬರೆಸಿರುವಂತಹ ಈ ಲೇಖನ ಖಂಡಿತವಾಗಿಯೂ ಯಾವುದೇ ರೀತಿಯಲ್ಲಿ ನೋಡಿದರೂ ಪತ್ರಿಕಾಧರ್ಮಕ್ಕೆ ವಿರುದ್ಧವಾಗಿದೆ. ರವಿ ಕಾಣದ್ದನ್ನು ಕವಿ ಕಂಡ. ಕವಿ ಕಾಣದ್ದನ್ನು ಪತ್ರಕರ್ತ ಕಂಡ ಎನ್ನುವ ಮಾತಿನಂತೆ, ಪತ್ರಕರ್ತನೊಬ್ಬ ತನ್ನ ಲೇಖನ ಬರೆಯುವ ಮುನ್ನಾ ಸಾಕಷ್ಟು ಸಿದ್ಧತೆ ಮಾಡಿಕೊಂಡು ಪೂರ್ವಾಪರವಿಲ್ಲದೇ, ತಾನು ಬರೆಯುವಂತಹ ವಿಷಯದ ಬಗ್ಗೆ ಸಂಪೂರ್ಣ ಪೂರ್ವಾಪರವನ್ನು ವಿಚಾರಿಸಿ ಬರೆಯ ಬೇಕಾಗುವುದು ಪತ್ರಿಕಾ ಸಹಜ ಧರ್ಮ
ಸಾಮಾನ್ಯವಾಗಿ ಸರ್ಕಾರಿ ಕಛೇರಿಗಳ ನಿರ್ಮಾಣ ಮತ್ತು ನಿರ್ವಹಣೆ ಸರ್ಕಾರದ ಜವಾಬ್ಧಾರಿಯಾಗಿದ್ದರೂ, ಕೆಲವೊಮ್ಮೆ ಆ ಕಟ್ಟಡ ಕಟ್ಟಲು ಸ್ಥಳ ದಾನಿಗಳು ಇಲ್ಲವೇ ಸಹಾಯ ಮಾಡಿದವರನ್ನು ಸ್ಮರಿಸುವುದು ನಮ್ಮ ಧರ್ಮದ ಭಾಗವಾಗಿದೆ. ಲೇಖನ ಬರೆಯುವ ಮುನ್ನಾ ಶಂಕರಪುರ ಪೋಲೀಸ್ ಠಾಣೆಯ ನವೀಕೃತ ಕಟ್ಟದದ ಲೋಕಾರ್ಪಣೆಯ ಫಲಕದಲ್ಲಿ ಶ್ರೀ ಶ್ರೀ ಶೃಂಗೇರೀ ಜಗದ್ಗುರುಗಳ ಆಶೀರ್ವಾದದಿಂದ ಎಂಬುದನ್ನು ಏಕೆ ಹಾಕಿಸಿದ್ದಾರೆ? ಎಂಬುದರ ಕುರಿತಾಗಿ ವಿಚಾರಿಸಿದ್ದಲ್ಲಿ ಎಲ್ಲವೂ ತಿಳಿದು ಈ ರೀತಿಯ ಲೇಖನ ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. ದುರಾದೃಷ್ಟವಷಾತ್ ಪೂರ್ವಾಗ್ರಹ ಪೀಡಿತರಾಗಿ ಯಾರದ್ದೋ ಹೇಳಿಕೆಯನ್ನು ಕೇಳಿ ಸ್ಥಳ ಪರಿಶೀಲನೇಯೇ ಮಾಡದೇ ಈ ಲೇಖನವನ್ನು ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಇಂದು ಬಹುತೇಕ ಮಠಮಾನ್ಯಗಳು ಮತ್ತು ಧಾರ್ಮಿಕ ಸಂಘಸಂಸ್ಥೆಗಳು ಸರ್ಕಾರಕ್ಕೆ ನಮಗೆ ಈ ಜಾಗವನ್ನು ಇಷ್ಟು ಅನುದಾನ ಕೊಡಿ, ಇಲ್ಲವೇ ಈ ದೇವಸ್ಥಾನದ ಸುಪರ್ದಿಯನ್ನು ನಮಗೇ ವಹಿಸಿಕೊಡಿ ಎಂದು ಬೇಡುತ್ತಿರುವುದನ್ನೇ ನೋಡಿರುವ ನಮಗೆ ಅಪರೂಪಕ್ಕೆ ಎನ್ನುವಂತೆ, ಈ ರೀತಿಯ ಯಾವುದೇ ರಾಜಕೀಯ ಲಾಭಿಗಳ ಗೋಜಿಗೇ ಹೋಗದೇ, ಸರ್ಕಾರದಿಂದ ತನಗೆ ಯಾವ ಅನುಕೂಲ, ಅನುದಾನ, ಜಾಗವನ್ನೂ, ಧನವನ್ನೂ ಅಪೇಕ್ಷಿಸದೇ ಇರುವ ಕೆಲವೇ ಕೆಲವು ಮಠಗಳಲ್ಲಿ ಶ್ರೀ ಶೃಂಗೇರಿ ಜಗದ್ಗುರು ಮಹಾಸಂಸ್ಥಾನವೂ ಒಂದಾಗಿದೆ. ಹಾಗಾಗಿಯೇ ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಮತ್ತು ಪೀಠಸ್ಥರ ಪ್ರತಿಯೊಂದು ನಡೆ ನುಡಿಗಳನ್ನು ಸಮಸ್ತ ದೇಶವಾಸಿಗಳು ಅತ್ಯಂತ ಗೌರವಿಸುತ್ತಾರೆ.
ಹಾಗಾಗಿ ಭಕ್ತಾದಿಗಳಿಂದ ಕೇವಲ ಶ್ರೀ ಮಠಕ್ಕೆ ಕಾಣಿಕೆಗಳನ್ನು/ದೇಣಿಗೆಗಳನ್ನು ಪಡೆಯುವುದರ ಜೊತೆಗೆ, ಅಗತ್ಯಬಿದ್ದಾಗ ಶ್ರೀ ಮಠದಿಂದ ಸಮಾಜದ ಹಿತಕ್ಕಾಗಿ ಮಠದ ವತಿಯಿಂದ ದಾನ ಧರ್ಮಗಳನ್ನು ಮಾಡುವ ಸಂಪ್ರದಾಯವನ್ನು ಅನೂಚಾನಾಗಿ ನಡೆಸಿಕೊಂಡು ಬಂದಿದೆ. ಅದರ ಮುಂದುವರೆದ ಭಾಗವಾಗಿಯೇ ಬೆಂಗಳೂರಿನ ಹೃದಯಭಾಗದಲ್ಲಿ ಕೋಟ್ಯಾಂತರ ಬೆಲೆಬಾಳುವ ತಮ್ಮ ಶಂಕರಪುರದ ಶ್ರೀ ಶಂಕರಮಠದ ಆವರಣದಲ್ಲಿ ಆಸ್ಪತ್ರೆ, ಬುದ್ಧಿಮಾಂದ್ಯ ಮಕ್ಕಳ ಶಾಲೆ, ಅಂಚೇ ಕಛೇರಿ, ಕಲ್ಯಾಣ ಮಂಟಪವನ್ನು ಕಟ್ಟಿಸಿ, ಅದರಲ್ಲಿ ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ಆಸ್ಪತ್ರೆ ಮತ್ತು ಶಾಲೆಯನ್ನು ಮಠವೇ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈಗ ನವೀಕೃತ ಪೋಲಿಸ್ ಠಾಣೆಯೂ ಸಹಾ ಶ್ರೀ ಮಠಕ್ಕೆ ಸೇರಿದ ಜಾಗದಲ್ಲಿಯೇ ಇರುವುದು ವಿಶೇಷವಾಗಿದೆ.
ಶ್ರೀ ಮಠದ ಸಮಾಜ ಸೇವೆಗಳು ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದು ಎನ್ನುವ ಜಾಯಮಾನದ್ದಾಗಿದ್ದ ಕಾರಣ, ಸಾರ್ವಜನಿಕರ ಹಿತಾಸಕ್ತಿ ಮತ್ತು ರಕ್ಷಣೆಗಾಗಿ, ತನ್ನ ಮಠಕ್ಕೆ ಸೇರಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಪೋಲೀಸ್ ಠಾಣೆಯ ಕಟ್ಟಡಕ್ಕೆ ನೀಡುವ ಮೂಲಕ ಉಳಿದ ಮಠಮಾನ್ಯಗಳಿಗೆ ಮಾದರಿಯಾಗಿದೆ ಎಂದರೂ ತಪ್ಪಾಗದು. ಭಟ್ಟರು ಈ ರೀತಿಯ ವಿಕೃತ ವಿತಂಡವಾದವನ್ನು ಆರಂಭಿಸದೇ ಹೋಗಿದ್ದಲ್ಲಿ, ಬಹುಶಃ ಶೃಂಗೇರಿ ಶ್ರೀಗಳು ದಾನವಾಗಿ ನೀಡಿದ್ದ ಜಾಗದಲ್ಲೇ ಪೊಲೀಸ್ ಠಾಣೆ ನಿರ್ಮಾಣವಾಗಿದೆ ಎಂಬುದೇ ಯಾರಿಗೂ ತಿಳಿಯದೇ ಹೋಗಿರುತ್ತಿದ್ದ ಕಾರಣ ಪರೋಕ್ಷವಾಗಿ ಶ್ರೀಮಠದ ಸಮಾಜಮುಖೀ ಕಾರ್ಯಗಳನ್ನು ಜನರಿಗೆ ತಿಳಿಸಿದ ಕೀರ್ತಿಗೆ ಭಟ್ಟರು ಭಾಜನರಾಗಿದ್ದಾರೆ.
ಲೋಕಕಲ್ಯಾಣಕ್ಕಾಗಿ ಮತ್ತು ಸಕಲ ಭಕ್ತಾದಿಗಳನ್ನು ಅಶೀರ್ವದಿಸುವುದಕ್ಕಾಗಿ ಬೆಂಗಳೂರಿನ ಶಂಕರ ಮಠದಲ್ಲಿ ಕೆಲ ದಿನಗಳ ಕಾಲ ವಾಸ್ತವ್ಯವನ್ನು ಹೂಡಿರುವ ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಶ್ರೀಗಳಿಗೆ ಅವರ ಮಠದ ಆವರಣದಲ್ಲೇ ಅತ್ಯಾಧುನಿಕ ರೀತಿಯಲ್ಲಿ ನವೀಕೃತಗೊಂಡ ಪೊಲೀಸ್ ಠಾಣೆಯನ್ನು ವೀಕ್ಷಿಸಿ ಅಲ್ಲಿನ ಸಿಬ್ಬಂಧಿವರ್ಗದವರನ್ನು ಅನುಗ್ರಹಿಸಬೇಕೆಂದು ಗುರುಗಳನು ಕೃತಜ್ಣತಾಪೂರ್ವಕವಾಗಿ ಕೇಳಿಕೊಂಡಿರುವ ಕಾರಣದಿಂದಾಗಿ ಜಗದ್ಗುರುಗಳು ಸ್ವಲ್ಪ ಸಮಯ ಮಾಡಿಕೊಂಡು ಠಾಣೆಗೆ ಭೇಟಿ ನೀಡಿದ್ದಾರೆಯೇ ಹೊರತು, ಯಾರ ಮೇಲೆ ದೂರು ದಾಖಲಿಸುವ ಸಲುವಾಗಿಯೋ, ಇಲ್ಲವೇ ತಮ್ಮ ವಿರುದ್ಧ ಮೊಕ್ಕದ್ದಮೆಗಾಗಿಯೋ ಅಲ್ಲ ಎನ್ನುವುದನ್ನು ಭಟ್ಟರು ಮತ್ತವರ ಶಿಷ್ಯರು ಗಮನಿಸದೇ ಹೋದದ್ದು ವಿಷಾಧನೀಯವಾಗಿದೆ.
ಲೇಖನದ ಆರಂಭದಲ್ಲಿ ಹೇಳಿರುವ ಸುಭಾಷಿತದಲ್ಲಿನ ಮೊದಲಿನ ಸಾಲಿನಲ್ಲಿ ಹೇಳಿರುವ ಹಾಗೆ, ಒಳ್ಳೆಯ ಕೆಲಸವನ್ನು ಮಾಡಿದವರು ಇಲ್ಲವೇ, ಮಾಡಿಸಿದವರು ಅಥವಾ ಅದಕ್ಕೆ ಪ್ರೇರಣೆ ನೀಡಿದವರು ಅದರ ಫಲವನ್ನು ಅನುಭವಿಸುತ್ತಾರೆ ಎನ್ನುವಂತೆ, ತಮ್ಮ ಮಠದ ಆವರಣದಲ್ಲಿ ತಾವು ನೀಡಿದ್ದ ಸ್ಥಳದಲ್ಲಿ ತಲೆ ಎತ್ತಿದ ಪೋಲೀಸ್ ಠಾಣೆಗೆ ಕಚೇರಿಗೆ ಭೇಟಿ ನೀಡಿದ್ದು ಯಾವುದೇ ತಪ್ಪಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದೇ ರೀತಿಯಾಗಿ ಈ ಲೇಖನದ ಸಂಪೂರ್ಣ ಕರ್ಮ ಫಲಾಫಲಗಳು ಲೇಖಕಕರಿಗೇ ಸೇರಿದ್ದು ಇಲ್ಲವೇ, ಈ ಲೇಖನ ತಮ್ಮ ಗಮನಕ್ಕೆ ಬಾರದೇ ಅಚ್ಚಾಗಿದೆ ಎಂದು ಸಬೂಬು ಹೇಳಿ ಮಾಡಿದ ತಪ್ಪಿನಿಂದ ನುಸಿಳಿಕೊಳ್ಳಲು ಭಟ್ಟರು ಪ್ರಯತ್ನ ಪಟ್ಟಲ್ಲಿ ಸುಭಾಷಿತದ ಎರಡನೇ ಸಾಲಿನಲ್ಲಿ ಹೇಳಿರುವಂತೆ ಈ ಲೇಖನಕ್ಕೆ ಪ್ರೇರಣೆ ಕೊಟ್ಟವರು ಇಲ್ಲವೇ, ಅದರ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರೂ ಸಹಾ ಆ ಕರ್ಮದಲ್ಲಿ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎಂದಿರುವ ಕಾರಣ ಈ ಸಮಸ್ತ ಆಸ್ತಿಕ ಬಂಧುಗಳ ಆಕ್ರೋಶವನ್ನು ಭಟ್ಟರೂ ಹೊರಲೇ ಬೇಕಾಗಿದೆ ಮತ್ತು ಅದಕ್ಕೆ ಸಾರ್ವಜನಿಕವಾಗಿ ಕ್ಷಮೆಯನ್ನು ಕೇಳುವ ಮೂಲಕ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲೇ ಬೇಕಾಗಿದೆ.
ಇನ್ನು ನಮ್ಮ ದೇಶದಲ್ಲಿ ಪ್ರತ್ಯಕ್ಷ ದೇವರುಗಳದ ಸೂರ್ಯ ಚಂದ್ರರ ನಂತರದ ಸ್ಥಾನಮಾನವನ್ನು ತಂದೆ ತಾಯಿಗಳಿಗೆ ನೀಡಿ ಮೂರನೇ ಸ್ಥಾನವನ್ನು ಆಚಾರ್ಯ ದೇವೋಭವ ಎಂದು ಗುರುಗಳಿಗೆ ನೀಡಿದ್ದೇವೆ. ತಮ್ಮ ಮಗನೇ ಗುರುಸ್ಥಾನದಲ್ಲಿ ಕುಳಿತಿದ್ದರೂ, ಅವರಿಗೆ ಜನ್ಮ ನೀಡಿದ ತಂದೆಯೇ ನಮಸ್ಕಾರ ಮಾಡುತ್ತಾರೆ. ಇನ್ನು ಸಮಾಜದ ಹಿತಕ್ಕಾಗಿಯೇ ಎಂತಹ ಸಂದರ್ಭದಲ್ಲಿಯೂ ಊಟೋಪಹಾರಗಳನ್ನೂ ಲೆಕ್ಕಿಸದೆ ಕರ್ತವ್ಯ ನಿಷ್ಠರಾಗಿ ಹಗಲೂ ಇರುಳು ದುಡಿಯುವ, ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಗೂ ಗುರುಗಳ ಅನುಗ್ರಹ ಖಂಡಿತವಾಗಿಯೂ ಅತ್ಯಾವಶ್ಯಕವಾಗಿದೆ. ಜಗದ್ಗುರುಗಳ ದರ್ಶನಕ್ಕೆ ಬರುವ ಭಕ್ತರನ್ನು ಬಿಡಿ, ಈ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನ ಮಂತ್ರಿಯಾದಿಯಾಗಿ ಸಕಲ ಆಡಳಿತ ವರ್ಗ ಭಕ್ತಿ ಪೂರ್ವಕವಾಗಿ ತಮ್ಮ ಪಾದರಕ್ಷಣೆಗಳನ್ನು ಪಕ್ಕಕ್ಕಿಟ್ಟು ಭಕ್ತಿ ಭಾವಗಳಿಂದ ಜಗದ್ಗುರುಗಳ ಆಶೀರ್ವಾದ ಪಡೆಯುವುದು ಇಲ್ಲಿನ ಸಂಸ್ಕಾರ. ಅದೇ ರೀತಿಯಾಗಿಯೇ ಅಲ್ಲಿನ ಸಿಬ್ಬಂದ್ಧಿ ವರ್ಗದವರೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ತಮ್ಮ ಪೋಲಿಸ್ ಸಮವಸ್ತ್ರಧಾರಿಗಳಾಗಿಯೇ ಕೇವಲ ಪದವೇಷವನ್ನು ಕಳಚಿಟ್ಟಿದ್ದನ್ನು ಎತ್ತಿ ತೋರಿಸುವ ಮೂಲಕ ಕುಚೋದ್ಯ ಮಾಡಿದ್ದು, ಲೇಖಕರಿಗೆ ನಮ್ಮ ಆಚಾರ ವಿಚಾರ ಮತ್ತು ಪದ್ಧತಿಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದೇ ಇರುವ ಅವರ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ.
ಅಂದು ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದೇ ಹೋದದ್ದನ್ನೇ ಬಂಡವಾಳ ಮಾಡಿಕೊಂಡು ನಮ್ಮ ನಮ್ಮಲ್ಲೇ ಜಗಳವನ್ನು ತಂದಿಟ್ಟು ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನುವಂತೆ ಬ್ರಿಟೀಷರು ಮೂರ್ನಾಲ್ಕು ಶತಮಾನಗಳ ಕಾಲ ದಾಸ್ಯದಲ್ಲಿಟ್ಟುಕೊಂಡಿದ್ದಲ್ಲದೇ, ನಮ್ಮ ದೇಶವನ್ನು ಲೂಟಿ ಹೊಡೆದಿದ್ದ ವಿಚಾರಗಳು ತಿಳಿದೂ ಮತ್ತು ದೇಶದ ಬಹುಸಂಖ್ಯಾತ ಹಿಂದೂಗಳನ್ನು ಮೆಟ್ಟಿ ನಿಲ್ಲಲು ವಿದೇಶೀ ನೆರವಿನೊಂದಿಗೆ ಅಲ್ಪಸಂಖ್ಯಾತರುಗಳು ಪದೇ ಪದೇ ಮಾಡುತ್ತಿರುವ ಷಡ್ಯಂತರಗಳನ್ನು ಅರಿತೂ ಭಟ್ಟರು ಪೂರ್ವಾಗ್ರಹ ಪೀಡಿತರಾಗಿ ನಮ್ಮ ನಮ್ಮಲ್ಲೇ ಈ ರೀತಿಯಾಗಿ ಕುಚೇಷ್ಟೆ ಮಾಡುತ್ತಾ ಒಡಕನ್ನು ತಂದಿಡಲು ಮುಂದಾಗಿರುವುದು ನಿಜಕ್ಕೂ ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿದ್ದು ಅಕ್ಷಮ್ಯ ಅಪರಾಧವಾಗಿದೆ.
ಭಟ್ರೇ ಸುಮ್ಮನೇ ನಿಮ್ಮ ಲೇಖನದಲ್ಲಿ ನಾವೆಲ್ಲಾ ಹಿಂದು, ನಾವೆಲ್ಲಾ ಒಂದು ಎಂದು ಬರೆದರೆ ಸಾಲದು ಅದನ್ನು ಜೀವನದಲ್ಲಿ ಅಕ್ಷರಶಃ ಪಾಲಿಸಿದಲ್ಲಿ ಮಾತ್ರವೇ, ನಿಮಗೂ ಮತ್ತು ನಿಮ್ಮ ಲೇಖನಕ್ಕೂ ಒಂದು ಬೆಲೆ ಬರುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಸಂದರ್ಭಕ್ಕೆ ತಕ್ಕ ಲೇಖನ. ಅಭಿನಂದನೆಗಳು.
LikeLiked by 1 person
ಭಟ್ಟರನ್ನು ಏನೋ ಅಂದುಕೊಂಡಿದ್ದೆ. ಈಗ ಸರಿಯಾಗಿ ಅರ್ತವಾಯಿತು
LikeLike