ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದಲ್ಲಿ ನಡೆಯುತ್ತಿದ್ದ ಧರ್ಮ ದಂಗಲ್, ಗ್ಯಾನವ್ಯಾಪಿ ಮಸೀದಿಯಿಂದ ದೇಶವ್ಯಾಪಿಯಾಗಿ ಹರಡಿ ಹತ್ತಾರು ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ತಿರುಗಿ ಬಿದ್ದಾಗಲೂ ಇಲ್ಲಿನ ಮುಸಲ್ಮಾನರು ದೇಶದ ಪರ ಚಕಾರವೂ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಪರೋಕ್ಷವಾಗಿ ಮುಸಲ್ಮಾನ ದೇಶಗಳ ಪರ ನಿಂತದ್ದರಿಂದ ಬೇಸರಿಸಿಕೊಂಡ ಆತ್ಮೀಯ ಮಿತ್ರರೊಬ್ಬರು, ಜಗತ್ತಿನ ಎಲ್ಲ ಮುಸ್ಲಿಮ್ ದೇಶಗಳು ಭಾರತದ ವಿರುದ್ಧ ನಿಂತಾಗ, ಭಾರತೀಯ ಮುಸ್ಲಿಮರು ಭಾರತದ ಪರ ನಿಲ್ಲುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಹಾಗಾಗಿ ಈ ಮತಾಂಧರರ ಬಗ್ಗೆ ಕಾಳಜಿ ವಹಿಸುವುದನ್ನು ಕಡಿಮೆ ಮಾಡುವುದಲ್ಲದೇ ಎಚ್ಚರಿಕೆಯನ್ನೂ ವಹಿಸ ಬೇಕೇನೂ? ಎಂದು ಮಾರ್ಮಿಕವಾಗಿ ನಮ್ಮ ವ್ಯಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದಕ್ಕೆ ಪ್ರತ್ಯುತ್ತರವಾಗಿ ನಾನು, ಭಾರತದ ಮುಸ್ಲಿಮರನ್ನು ಬಿಡಿ. ಭಾರತದ ಹಿಂದೂಗಳೇ ಭಾರತದ ಪರವಾಗಿ ನಿಲ್ಲುವುದಿಲ್ಲ ಎನ್ನುವುದೇ ವಿಪರ್ಯಾಸ 😡 ಎಂದಾಗ ಅದಕ್ಕೆ ಸಹಮತ ವ್ಯಕ್ತಪಡಿಸಿದವರ ಸಂಖ್ಯೆಯೇ ಅಗಣಿತವಾದಾಗ ಮನಸ್ಸಿಗೆ ಖೇದವಾಗಿದ್ದಂತೂ ಸತ್ಯ.
ನಮ್ಮ ದೇಶದಲ್ಲಿರುವ ಬಹುತೇಕರಿಗೆ ಧರ್ಮ, ಸಿದ್ಧಾಂತ, ದೇಶ ಪ್ರೇಮದ ಬಗ್ಗೆಯೇ ಅರಿವಿಲ್ಲದಿರುವುದು ಇದಕ್ಕೆ ಕಾರಣ ಎಂದರೂ ತಪ್ಪಾಗದು. ಇದಕ್ಕೆ ಪೂರಕವೆನ್ನುವಂತೆ, ನಮ್ಮ ಇಂದಿನ ಪಠ್ಯಪುಸ್ತಕಗಳಲ್ಲಿ ನಮ್ಮ ತನವೇ ಮರೆಯಾಗಿ ನಮ್ಮ ದೇಶವನ್ನು ಲೂಟಿ ಮಾಡಿದರನ್ನೇ ವೈಭವೀಕರಿಸಿದಾಗ, ಸಹಜವಾಗಿಯೇ ಇಂದಿನ್ಗ ಪೀಳಿಗೆಯವರಿಗೆ ನಮ್ಮ ಗುಡಿ-ಗಡಿ-ನುಡಿಗಳ ಬಗ್ಗೆ ಆಸ್ಥೆಯಾದರೂ ಎಲ್ಲಿಂದ ಬರಬೇಕು? 1947ರಲ್ಲಿ ಧರ್ಮಾಧಾರಿತವಾಗಿ ನಮ್ಮ ದೇಶ ವಿಭಜನೆ ಯಾಗಿ ಆಗಿದ್ದ 565 ಸಣ್ಣ ಸಣ್ಣ ಪ್ರಾಂತ್ಯಗಳಾಗಿದ್ದ ಇಡೀ ದೇಶವನ್ನು ಒಗ್ಗೂಡಿಸಿ, ಅದಷ್ಟೂ ಭಾಷಾವಾರು ಪ್ರಾಂತ್ರಗಳಾಗಿ ವಿಂಗಡಿಸಿ ಒಕ್ಕೂಟ ವ್ಯವಸ್ಥೆಯನ್ನು ಜಾರಿಗೊಳಿಸಿದರೂ ಇನ್ನೂ ಸಹಾ ನಮ್ಮವರು ಭಾಷೆ, ಧರ್ಮದ ಹೆಸರಿನಲ್ಲಿ ದಂಗೆ ಎಬ್ಬಿಸುತ್ತಿರುವುದು ನಿಜಕ್ಕೂ ಸೋಜಿಗವೇ ಸರಿ. ಸ್ವಾಭೀಮಾನ ಮತ್ತು ದೇಶಾಭಿಮಾನ ಹೇಗಿರಬೇಕು ಎಂಬುದಕ್ಕೆ ಈ ಎರಡು ಪ್ರಸಂಗಗಳು ಉತ್ತಮ ಉದಾಹರಣೆಯಾಗಬಲ್ಲದು.
ನಮಗೆಲ್ಲರಿಗೂ ತಿಳಿದಿರುವಂತೆ ದ್ವಾಪರಯುಗದ ಚಂದ್ರವಂಶದವರಾದ ಧುತರಾಷ್ಟ್ರನ ಮಕ್ಕಳಾದ 100+1 ಕೌರವರು ತಮ್ಮ ಚಿಕ್ಕಪ್ಪ ಪಾಂಡುವಿನ ಮಕ್ಕಳಾದ ಪಂಚಪಾಂಡವರೊಂದಿಗೆ ದಾಯಾದಿ ಕಲಹದಿಂದಾಗಿ ಸದಾಕಾಲವೂ ಕಾಲು ಕೆರೆದುಕೊಂಡು ಒಂದಲ್ಲಾ ಒಂದು ಕಿತಾಪತಿ ಮಾಡುತ್ತಲೇ ಇರುತ್ತಾರೆ. ಪಗಡೆಯಾಟದಲ್ಲಿ ಮೋಸದಿಂದ ಸೋತು 12 ವರ್ಷ ವನವಾಸ 1 ವರ್ಷ ಅಜ್ಞಾತವಾಸ ಅನುಭವಿಸಿಬಂದರೂ ಕೊಟ್ಟ ಮಾತಿಗೆ ತಪ್ಪಿ ರಾಜ್ಯವನ್ನು ಹಿಂದಿರುಗಿಸಲು ಒಪ್ಪದಿದ್ದಾಗ ಅವರಿಬ್ಬರ ನಡುವೆ ಯುದ್ದವು ಅನಿವಾರ್ಯ ಎನ್ನಿಸುವ ಪರಿಸ್ಥಿತಿಯ ಲಾಭವನ್ನು ಪಡೆಯಲು ನೆರೆಯ ರಾಷ್ಟ್ರವೊಂದು ಕೌರವರ ಮೇಲೆ ಯುದ್ದಕ್ಕೆ ಬರಲು ಸನ್ನದ್ಧವಾಗುತ್ತಿದೆ ಎಂಬ ಸುದ್ದಿ ಕೇಳಿದ ತಕ್ಷಣ ಧರ್ಮರಾಯನು ತಾವು ಕೌರವವರ ಪರವಾಗಿ ಯುದ್ದಕ್ಕೆ ಸನ್ನಧ್ಧರಾಗಿದ್ದೇವೆ ಎಂದು ತಿಳಿಸುತ್ತಾನೆ. ಧರ್ಮರಾಯನ ಈ ನಿರ್ಧಾರ ಉಳಿದ ಪಾಂಡವರಿಗೆ ಮತ್ತು ಕೌರವರು ಅಶ್ಚರ್ಯಚಕಿತವಂತರಾಗುವಂತೆ ಮಾಡಿದಾಗ, ಕೌರವರು ಮತ್ತು ಪಾಂಡವರು ನಾವಿಬ್ಬರೂ ಒಂದೇ ಚಂದ್ರವಂಶದವರಾಗಿದ್ದು ನಮ್ಮ ಆಂತರಿಕ ಕದನವೇನಿದ್ದರೂ ನಮ್ಮೊಳಗೇ ಹೊರತು, ಶತ್ರುಗಳು ನಮ್ಮ ಮೇಲೆ ಬಂದಾಗ ನಾವು 100+5 ಜನರು ಒಟ್ಟಾಗಿಯೇ ಅವರನ್ನು ವಿರೋಧಿಸಬೇಕು ಎಂದು ತಿಳಿಸುತ್ತಾನೆ
ಅದೇ ರೀತಿಯಲ್ಲಿ 1893ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಅಭೂತಪೂರ್ವವಾಗಿ ಭಾಷಣ ಮಾಡುವ ಮೂಲಕ ಜಗತ್ರ್ಪಸಿದ್ಧವಾದ ಸ್ವಾಮೀ ವಿವೇಕಾನಂದರು ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಅಮೇರಿಕಾದಲ್ಲೇ ವಿವಿಧ ರಾಜ್ಯಗಳಿಗೆ ಪರ್ಯಟನೆಯನ್ನು ಮಾಡುತ್ತಿರುವಾಗ, ಅದೊಮ್ಮೆ ರೈಲಿನಲ್ಲಿ ಕುಳಿತು ಮತ್ತೊಂದು ಪ್ರದೇಶಕ್ಕೆ ಹೋಗುತ್ತಿರುವಾಗ ಅದೇ ಬೋಗಿಗೆ ಜಪಾನ್ ದೇಶದ ಕುಟುಂಬವೊಂದು ಬರುತ್ತದೆ. ಅ ಕುಟುಂಬದೊಂದಿಗೆ ಏಳೆಂಟು ವರ್ಷದ ಬಾಲಕನೊಬ್ಬನಿದ್ದು, ವಿವೇಕಾನಂದರ ಸನ್ಯಾಸಿ ವೇಷ ಭೂಷಣಗಳು ಅವನಿಗೆ ಅಚ್ಚರಿಯನ್ನುಂಟು ಮಾಡಿ ಅವರು ಯಾರೆಂದು ತಮ್ಮ ತಾಯಿಯ ಬಳಿಗೆ ಕೇಳಿದಾಗ, ಆಕೆ ಅವರು ಬಹುಶಃ ನಮ್ಮ ಶ್ರದ್ಧೇಯ ಭಾರತ ದೇಶದವರು ಇರಬೇಕು. ಅವರಿಗೆ ಭಕ್ತಿಯಿಂದ ನಮಸ್ಕರಿಸು ಎಂದು ಹೇಳುತ್ತಾಳೆ. ತನ್ನ ತಾಯಿಯ ಆಣತಿಯಂತೆ ಆ ಸಣ್ಣ ಬಾಲಕ ವಿವೇಕಾನಂದರ ಬಳಿ ಬಂದು ನಮಸ್ಕರಿಸಿದಾಗ, ಇವೆಲ್ಲವನ್ನೂ ಗಮನಿಸುತ್ತಿದ್ದ ವಿವೇಕಾನಂದರು ಆ ಬಾಲಕನೊಂದಿಗೆ ಮಾತಿಗೆ ಇಳಿಯುತ್ತಾರೆ. ಅಲ್ಲಾ ಮಗೂ, ನಾನು ಯಾರೆಂದೇ ನಿನಗೆ ತಿಳಿಯದಿದ್ದರೂ, ನೀನೇಕೆ ನನಗೆ ನಮಸ್ಕರಿಸಿದೆ ಎಂದಾಗ, ಆ ಬಾಲಕ ಆಷ್ಟೇ ಮುಗ್ಧತನದಿಂದ ನಮ್ಮ ಹೇಳಿದರು. ನೀವು ಭಾರತದಿಂದ ಬಂದಿದ್ದಿರಿ ಎಂದು ಹಾಗಾಗಿ ನಾನು ನಿಮಗೆ ನಮಸ್ಕರಿಸಿದೆ ಎನ್ನುತ್ತಾನೆ. ಆ ಉತ್ತರದಿಂದ ಆಶ್ಚರ್ಯಚಕಿತರಾದ ಸ್ವಾಮಿಗಳು, ಭಾರತ ಕಂಡರೆ ನಿನಗೇಕೆ ಗೌರವ? ಎಂದಾಗ, ನಾವು ಬೌದ್ಧಮತವನ್ನು ಅನುಸರಿಸುತ್ತೇವೆ. ನಮ್ಮ ಧರ್ಮದ ಪ್ರವರ್ತಕನಾದ ಗೌತಮ ಬುದ್ಧ ಹುಟ್ಟಿದ್ದು ನಿಮ್ಮ ಭಾರತದಲ್ಲಿ ಹಾಗಾಗಿ ನಮಗೆ ಭಾರತದ ಬಗ್ಗೆ ಅಭಿಮಾನವಿದೆ. ಸಾಧ್ಯವಾದಲ್ಲಿ ನಾನು ದೊಡ್ಡವನಾದ ನಂತರ ಹೆಚ್ಚು ಹೆಚ್ಚು ಹಣ ಸಂಪಾದಿಸಿ ಭಾರತಕ್ಕೆ ಭೇಟಿ ನೀಡಿ ಬುದ್ಧನ ನಾಡಿನಲ್ಲಿ ಕೆಲವು ಕಾಲ ಕುಟುಂಬದೊಡನೆ ಪ್ರವಾಸ ಮಾಡಲು ಬಯಸುತ್ತೇನೆ ಎನ್ನುತ್ತಾನೆ.
ಈ ಉತ್ತರದಿಂದ ಸಂತೃಷ್ಟರಾದ ವಿವೇಕಾನಂದರು ಆ ಬಾಲಕನನ್ನು ಮತ್ತಷ್ಟು ಪರೀಕ್ಷಿಸಬೇಕೆಂದು ನಿರ್ಧರಿಸಿ, ಈಗ ಹೇಳು ಮಗು, ಅಕಸ್ಮಾತ್, ಮತ್ತೊಮ್ಮೆ ಹೇಳುತ್ತಿದ್ದೇನೆ ಅಕಸ್ಮಾತ್ ಭಾರತ ದೇಶವೇನಾದರೂ ನಿಮ್ಮ ಜಪಾನ್ ಮೇಲೆ ಧಾಳಿ ಮಾಡಲು ಮುಂದಾದಲ್ಲಿ ನಿನ್ನ ಬೆಂಬಲ ಯಾವ ದೇಶಕ್ಕೆ ಇರುತ್ತದೆ? ಎಂದು ಪ್ರಶ್ನಿಸಿದ ಕೂಡಲೇ, ಛಕ್ ಎಂದು ಕೋಪೋದ್ರಿತನಾಗಿ ಕುಳಿತಲ್ಲೇ ಎದ್ದು ನಿಂತು, ಏನು ಮಾತನಾಡುತ್ತಿದ್ದೀರಿ ನೀವು? ನೀವು ಏನು ಮಾತನಾಡುತ್ತಿದ್ದೀರಿ ಎಂಬ ಪ್ರಜ್ಞೆ ನಿಮಗಿದೆಯೇ? ಜಪಾನ್ ನನ್ನ ಜನ್ಮ ಭೂಮಿ. ನಾನು ಜನ್ಮತಃ ಜಪಾನಿಗ ಹಾಗಾಗಿ ಜಪಾನ್ ಪರವಾಗಿ ಭಾರತದ ವಿರುದ್ಧ ಹೊರಾಡುತ್ತೇನೆ ಎಂದು ಅಬ್ಬರಿಸುತ್ತಾನೆ. ಆಗ ಸ್ವಾಮಿಗಳು ಈಗ ಸ್ವಲ್ಪ ಹೊತ್ತಿನ ಮುಂಚೆ ಭಾರತ ದೇಶದ ಬಗ್ಗೆ ನನಗೆ ಹೆಮ್ಮೆಯಿದೆ. ಅದು ನನ್ನ ಧರ್ಮದ ತಾಯ್ನಾಡು. ದೊಡ್ಡವನಾದ ಮೇಲೆ ಭಾರತಕ್ಕೆ ತೀರ್ಥಯಾತ್ರೆಗೆ ಬರುತ್ತೇನೆ ಎಂದ ಮೇಲೆ ಭಾರತವನ್ನೇ ಬೆಂಬಲಿಸಬೇಕಲ್ಲವೇ? ಎಂದಾಗ. ನನಗೆ ದೇಶ ಮತ್ತು ಧರ್ಮ ಎಂದು ಬಂದಾಗ ದೇಶ ಮೊದಲು ಧರ್ಮ ಆನಂತರ ಎಂದಾಗ ಸ್ವಾಮಿಗಳು ಇಂತಹ ಚಿಕ್ಕವಯಸ್ಸಿನಲ್ಲಿ ಅದೆಂತಹ ಪ್ರಬುದ್ಧತೆ ಮತ್ತು ಪ್ರೌಢಿಮೆ ಎಂದು ಆ ಹುಡುಗನನ್ನು ತಬ್ಬಿ ಮುದ್ದಾಡಿದ್ದರಂತೆ.
ನಮ್ಮ ಸನಾತನ ಧರ್ಮದಲ್ಲಿ, ನಮಗೆ ಸರ್ವೇ ಜನಾಃ ಸುಖಿನೋ ಭವಂತು, ಲೋಕಾ ಸಮಸ್ತಾ ಸನ್ಮಂಗಳಾನಿ ಭವಂತು ಎಂದು ಹೇಳುತ್ತಲೇ ಅಕ್ಷರಶಃ ವಸುದೈವ ಕುಟುಂಬಕಂ ಎಂಬುದನ್ನು ಪಾಲಿಸಲೇ ಬೇಕು ಎಂದು ನಮ್ಮ ಪೂರ್ವಜರು ಹೇಳಿಕೊಟ್ಟ ಕಾರಣದಿಂದಲೇ ಇಂದು ಈ ಹಿಂದೂಸ್ಥಾನ ಹತ್ತಾರು ಧರ್ಮದವರಿಗೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದರೂ ತಪ್ಪಾಗದು. ಭಾರತದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ತಮ್ಮ ತಮ್ಮ ಮನೆಗಳಲ್ಲಿ ತಮ್ಮ ತಮ್ಮ ಧರ್ಮದ ಅಚರಣೆ ಮಾಡಿಕೊಳ್ಳಲಿ, ತಮ್ಮ ಪವಿತ್ರ ಕ್ಷೇತ್ರಗಳಾದ ಅರಬ್ ದೇಶದ ಮೆಕ್ಕಾಗೆ ಇಲ್ಲವೇ, ಇಟಲಿಯ ವ್ಯಾಟಿಕನ್ ಸಿಟಿಗೆ ಹೋಗಲಿ ಅದೇ ರೀತಿ ಹಿಂದೂಗಳಲ್ಲಿರುವ ನೂರಾರು ಜಾತಿಯವರು ತಮ್ಮ ತಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಸಂಸ್ಕೃತಿಗಳಿಗೆ ಅನುಗುಣವಾಗಿ ನಡೆದುಕೊಂಡು ಅವೆಲ್ಲವೂ ತಮ್ಮ ತಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಾತ್ರವೇ ಇದ್ದು, ಮನೆಯಿಂದ ಹೊರಬಂದಾಗ ಅವರೆಲ್ಲರೂ ಭಾರತೀಯರಾಗಿರಬೇಕು. ದೇಶ ಎಂದು ಬಂದಾಗ ಧರ್ಮವನ್ನು ಪಕ್ಕಕ್ಕಿಟ್ಟು ನಾವು ಭಾರತೀಯರು ಎಂದು ಒಗ್ಗೂಡಬೇಕಾದದ್ದು ನಮ್ಮ ಆದ್ಯ ಕರ್ತವ್ಯವೇ ಹೌದು.
ದುರಾದೃಷ್ಟವಷಾತ್ ಭಾರತದಲ್ಲಿ ಇರುವ ಎಲ್ಲಾ ಮುಸಲ್ಮಾನರಿಗೆ ಎನ್ನುವುದಕ್ಕಿಂತಲೂ ಮುಸಲ್ಮಾನ ನಾಯಕರಿಗೂ ಮತ್ತು ಕಟ್ಟ ಮುಲ್ಲಾಗಳಿಗೆ ದೇಶ ಮತ್ತು ಧರ್ಮ ಎಂಬುದರ ನಡುವಿನ ಅಂತರ ಅರಿಯಲಾರದೇ ಮತಾಂಧರಾಗಿ ದೇಶಕ್ಕೆ ಸ್ವಾತ್ರಂತ್ರ್ಯ ಬಂದು 75 ವರ್ಷಗಳಾದರೂ ಬಹುಸಂಖ್ಯಾತ ಹಿಂದೂಗಳೊಡನೆ ಸೌಹಾರ್ಧತೆಯನ್ನು ಕಾಪಾಡಿಕೊಳ್ಳದೇ ಸದಾಕಾಲವೂ ಕಾಲು ಕೆರೆದುಕೊಂಡು ಗಲಭೆ ಎಬ್ಬಿಸುತ್ತಾ ದೇಶದಲ್ಲಿ ಕೋಮು ಸೌಹಾರ್ಥವನ್ನು ಹಾಳು ಮಾಡುತ್ತಿರುವುದಕ್ಕೆ ಸೈದ್ದಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳೇ ಕಾರಣವಾಗಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ.
ಅದೆಲ್ಲೋ ಸದ್ದಾಂ ಹುಸೇನ್ ನನ್ನು ಅಮೇರೀಕಾ ಕೊಂದು ಹಾಕಿದರೆ ಇಲ್ಲಿ ಕಲ್ಲುತೂರಾಟ,, ಕೇರಳದ ಮುಸಲ್ಮಾನ ಲೇಖನೊಬ್ಬ ಬರೆದ ಕಾಲ್ಪನಿಕ ಕಥೆ ಯೊಂದರಲ್ಲಿ ಮೊಹಮ್ಮೊದ್ ಎನ್ನುವ ಕಥಾನಾಯಕ ಮೂರ್ಖನೇ? ಎಂದು ಬರೆದಿದ್ದ ಕಥೆಯೊಂದನ್ನು ಬೆಂಗಳೂರಿನ ಇಂಡಿಯನ್ ಎಕ್ಸಪ್ರೆಸ್ ಪ್ರಕಟಿಸಿದಾಗ ಇಡೀ ಬೆಂಗಳೂರನ್ನೇ ವಾರಾನು ಗಟ್ಟಲೇ ಸುಟ್ಟು ಹಾಕಿದ್ದು, ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿದ್ದ, ಯಾರೂ ಪೂಜೆಯೇ ಮಾಡದೇ ಇದ್ದ ಬಾಬರಿ ಮಸೀದಿ ನಾಶವಾಗಿ, ಅದಾದ ನಂತರ ಕೆಲ ವರ್ಷಗಳ ನಂತರ ನಡೆದ ಕರಸೇವೆ ಮಾಡಿಕೊಂಡು ಬರುತ್ತಿದ್ದ ಕರಸೇವಕರು ಪ್ರಯಾಣಿಸುತ್ತಿದ್ದ ರೈಲ್ವೇ ಭೋಗಿಯನ್ನು ಹೊರಗಿನಿಂದ ಚಿಲುಕ ಹಾಕಿ ಸುಟ್ಟು ಹಾಕಿದ ನಂತರವಂತೂ ದೇಶದಲ್ಲಿ ಹಿಂದೂ ಮುಸಲ್ಮಾನರ ನಡುವಿನ ಕಂದಕ ಮತ್ತಷ್ಟೂ ಹೆಚ್ಚಾಗಿಸಿದೆ ಎಂದರೂ ತಪ್ಪಾಗದು..
ಇಷ್ಟರ ಮಧ್ಯೆ ನಮ್ಮ ದೇಶವನ್ನು ತುಂಡರಿಸಿಕೊಂಡೇ ಉದಿಸಿದ್ದ ಪಾಕೀಸ್ಥಾನವೂ ಆಂತರಿಕವಾಗಿ ತನ್ನದೇ ನೂರಾರು ಸಮಸ್ಯೆಗಳಿದ್ದರೂ, ಭಾರತದ ವಿರುದ್ಧ ನಡೆದ ಯುದ್ದಗಳಲ್ಲಿ ಹೀನಾಮಾನವಾಗಿ ಸೋಲುಂಡಿದ್ದರೂ, ಶತ್ರುವಿನ ಶತ್ರು ತನ್ನ ಮಿತ್ರ ಎನ್ನುವ ಗಾದೆಯಂತೆ, ಭಾರತದ ಮುಸಲ್ಮಾನರ ಈ ಮತಾಂಧತೆಯ ಮನಸ್ಥಿತಿಯನ್ನು ಅತ್ಯಂತ ಸಮಂಜಸವಾಗಿ ದುರ್ಬಳಕೆ ಮಾಡಿಕೊಂಡು ಅರಬ್ ರಾಷ್ಟ್ರಗಳ ನಂಟಿನಿಂದ ಅಂತಹವರಿಗೆ ಆರ್ಥಿಕವಾಗಿ ಬಲ ತುಂಬುತ್ತಾ ಕಾಶ್ಮೀರವೂ ಸೇರಿದಂತೆ ದೇಶಾದ್ಯಂತ ಮತಾಂಧತೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಾ ಸಮಯ ಸಿಕ್ಕಾಗಲೆಲ್ಲಾ ಕೋಮು ದಳ್ಳುರಿಯನ್ನು ಹೆಚ್ಚಿಸುವುದರಲ್ಲೂ ಸಫಲರಾಗಿದ್ದು ಮತ್ತೊಂದು ಸಮಸ್ಯೆ ಗಂಭೀರವಾದ ಸಮಸ್ಯೆಯಾಗಿದೆ.
ಇದಕ್ಕೆ ಪೂರಕ ಎನ್ನುವಂತೆ ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ವಿದ್ಯೆಗಿಂತಲೂ ತಮ್ಮ ಧರ್ಮ ಮುಖ್ಯ ಎಂದು ಪ್ರಕರಣವನ್ನು ನ್ಯಾಯಾಲಯದವರೆಗೂ ತೆಗೆದುಕೊಂಡು ಅಲ್ಲಿನ ತೀರ್ಪು ತಮ್ಮ ಪರವಾಗಿಲ್ಲದೇ ಹೋದರೂ ಅದೇ ಮೊಂಡು ವಾದವನ್ನು ಮುಂದಿಟ್ಟುಕೊಂಡು ಇಂದಿಗೂ ಪ್ರಕರಣವನ್ನು ಜೀವಂತವಾಗಿ ಮುಂದುವರೆಸಿ ಕೊಂಡು ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಸಾರಾಸಗಟಾಗಿ ಒಂದೇ ಪಕ್ಷಕ್ಕೆ ಓಟ್ ಮಾಡುತ್ತಾರೆ ಎನ್ನುವ ಕಾರಣದಿಂದ ನಂತರ ಭಾರತದ ಬಹುತೇಕ ಪಕ್ಷಗಳು ಮುಸಲ್ಮಾನರನ್ನು ಓಲೈಸುತ್ತಲೇ ಓಟ್ ಬ್ಯಾಂಕ್ ರಾಜಕಾರಣವನ್ನು ಮುಂದುವರಿಸಿದ ಕಾರಣದಿಂದಾಗಿಯೇ ಮುಸಲ್ಮಾನರ ಮನಸ್ಥಿತಿ ಎಲ್ಲಿಯವರೆಗೆ ಬಂದಿದೆ ಎಂದರೆ, ಈ ದೇಶದಲ್ಲಿ ತಾವು ಮಾಡಿದ್ದೇ ಸರಿ. ತಮ್ಮನ್ನು ಯಾರು ಸಹಾ ಪ್ರಶ್ನಿಸಲೇ ಬಾರದು. ಹಾಗೆ ಪ್ರಶ್ನಿಸಿದರೆ ಅವರ ಮೇಲೆ ದೌರ್ಜನ್ಯ ಮಾಡುವುದುಏ ತಮ್ಮ ನೈತಿಕತೆ ಎಂದು ಭಾವಿಸಿರುವುದಕ್ಕೆ ಡಿಜೆ ಹಳ್ಳಿಯ ಶಾಸಕ ಅಖಂಡ ಶ್ರೀನಿವಾಸ್ ಮನೆಯನ್ನು ಸುಟ್ಟು ಹಾಕಿದ್ದೇ ಸಾಕ್ಷಿ.
ಇನ್ನು ಕಾಶಿಯ ಗ್ಯಾನವ್ಯಾಪಿ ಮಸೀದಿಯಲ್ಲಿ 14 ಅಡಿ ಶಿವನ ಲಿಂಗ, ಶ್ರೀರಂಗ ಪಟ್ಟಣ ಆಂಜನೇಯಸ್ವಾಮಿಯ ಗುಡಿಯನ್ನು ವಿಕೃತ ಗೊಳಿಸಿ ಜಾಮಿಯ ಮಸೀದಿ ಕಟ್ಟಲಾಗಿರುವ ವಿಷಯದ ಜೊತೆಗೆ, ಪೀರ್ ಭಾಷಾ ಮಂಟಪ ಬಸವಣ್ಣನವರ ಅನುಭವದ ಮಂಟಪವಾಗಿತ್ತು ಎಂಬ ವಿಷಯಗಳು ಬಹಿರಂಗವಾಘುತ್ತಿದ್ದಂತೆ ದೇಶದಲ್ಲಿರುವ ಬಹುತೇಕ ಮಸೀದಿಗಳು ಮೊಘಲರ ಕಾಲದಲ್ಲಿ ಹಿಂದೂ ಮಂದಿರಗಳನ್ನು ಒಡೆದು ಕಟ್ಟಲಾಗಿದೆ ಎಂದು ನೂರಾರು ವರ್ಷಗಳಿಂದಲೂ ಹೇಳಿಕೊಂಡು ಬರುತ್ತಿದ್ದ ಹಿಂದೂಗಳಿಗೆ ಪ್ರಮುಖ ಆಧಾರವಾಗಿತು.
ಇದೇ ಕುರಿತಂತೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆಯುತ್ತಿದ ಸಂದರ್ಶನದಲ್ಲಿ ಭಾಗವಹಿಸಿದ್ದ ಬಿಜೆಪಿ ಪಕ್ಷದ ವಕ್ತಾರೆಯಾಗಿದ್ದ ನೂಪುರ್ ಶರ್ಮಾಳು, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಮುಸಲ್ಮಾನರ ಪ್ರಮುಖ ಪದೇ ಪದೇ ಅದು ಈಶ್ವರನಿಗೆ ಅವಮಾನ ಪಡಿಸುತ್ತಾ ಅಲ್ಲಿ ಕಾಣಿಸಿದ್ದು ಶಿವಲಿಂಗ ಅಲ್ಲ ಅದು ಕಾರಂಜಿ ಎಂದಿದ್ದಲ್ಲದೇ, ಅದೊಂದು ದೆಹಲಿಯ ರಸ್ತೆ ಬದಿಯ ಕಂಬ ಎಂದು ಅಪಹಾಸ್ಯ ಮಾಡಿದಾಗ ತನ್ನ ಅರಾಧ್ಯ ದೈವ ಮಹಾದೇವನಿಗೆ ಆತ ನಿರಂತರವಾಗಿ ಅಪಮಾನ ಮತ್ತು ಅಗೌರವವನ್ನು ಮಾಡುತ್ತಿದ್ದರ ಪ್ರತಿಕ್ರಿಯೆಯಾಗಿ ಆಕೆ 60 ವರ್ಷದ ಪ್ರವಾದಿ ಮೊಹಮ್ಮದ್ದರು 8 ವರ್ಷದ ಬಾಲಕಿಯನ್ನು ಮದುವೆಯಾಗಿ ಆಕೆಗೆ 10 ವರ್ಷವಾಗುವ ಹೊತ್ತಿಗೆ ವಿಚ್ಚೇದನ ನೀಡಿದ್ದರ ಕುರಿತಾಗಿ ಎತ್ತೀ ಹೇಳಿದ್ದನ್ನೆ ದೊಡ್ಡದಾಗಿ ಮುಸ್ಸಿಮ್ಮರ ಜೊತೆ ಕಮ್ಯೂನಿಷ್ಟ್ ಮನಸ್ಥಿತಿಯ ಮಾಧ್ಯಮದವರು ಉರಿಯುವ ತುಪ್ಪಕ್ಕೆ ಬೆಂಕಿ ಸುರಿಯುವಂತೆ ಅಪಪ್ರಚಾರ ನೀಡಿದ್ದೇ ತಡಾ ಭಾರತದಲ್ಲಿ ಮುಸಲ್ಮಾನರನ್ನು ಹತ್ತಿಕಲಾಗುತ್ತಿದೆ ಎಂದು ಬೊಬ್ಬಿರಿದ ಮುಸಲ್ಮಾನ ದೇಶಗಳು ಭಾರತದ ಮೇಲೆ ಭಹಿಷ್ಕಾರ ಹಾಕುವುದಕ್ಕೆ ಮುಂದಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ.
ಕಲೆಯ ಹೆಸರಿನಲ್ಲಿ ನಮ್ಮ ಶ್ರಧ್ಧೇಯ ಲಕ್ಷ್ಮೀ, ಸರಸ್ವತಿಯರನ್ನು ಬೆತ್ತಲೆ ಚಿತ್ರಿಸಿ ಈ ದೇಶದಿಂದಲೇ ಗಡಿಪಾರದ ಎಂ.ಎಫ್ ಹುಸೇನ್ ಎಂಬುವನನ್ನು ತಮ್ಮ ದೇಶದಲ್ಲಿ ಆತ ಸಾಯುವವರೆಗೂ ರಾಜಾಶ್ರಯ ನೀಡಿದ ಕತಾರ್ ಎಂಬ ಸಣ್ಣ ಮುಸ್ಲಿಂ ರಾಷ್ಟ್ರವೂ ಭಾರತದ ವಿರುದ್ಧ ಎಚ್ಚರಿಕೆ ನೀಡುತ್ತದೆ ಎಂದರೆ ಅವರ ಮತಾಂಧತೆಯ ಅಮಲು ಎಷ್ಟರ ಮಟ್ಟಿಗೆ ಇದೆ ಎಂಬುದರ ಅರಿವಾಗುತ್ತದೆ.
ಕೆಟ್ಟದನ್ನು ಚಿತ್ರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಸತ್ಯವನ್ನೇ ಹೇಳಿದ್ದ ನೂಪುರ್ ಶರ್ಮಾಳದ್ದು ತಪ್ಪು ಹೇಗಾಗುತ್ತದೆ? ಈ ಕುರಿತಂತೆ ಆಕೆ ಬಹಿರಂಗವಾಗಿ ಕ್ಷಮೆಯನ್ನು ಕೋರಿದ್ದರೂ ದೇಶಾದ್ಯಂತ ಮುಸಲ್ಮಾನ ಸಂಘಟನೆಗಳು ಸಾರ್ ತಾನ್ ಸೆ ಜುದಾ ಗಾಗಿ ತಮ್ಮ ಕರೆಯನ್ನು ಕೊಡುತ್ತಿರುವುದಲ್ಲದೇ ಬಹಿರಂಗವಾಗಿಯೇ ಆಕೆಯ ಹತ್ಯೆಯನ್ನು ಮಾಡಲು ಉತ್ತೇಜನ ನೀಡುತ್ತಿರುವುದನ್ನು ಖಂಡಿಸದೇ ಅದು ಅವರ ಅಭಿವ್ಯಕ್ತಿ ಸ್ವಾತ್ರಂತ್ಯ್ರ ಅದನ್ನು ಖಂಡಿಸಲಾಗದು ಎಂದು ನಮ್ಮವರೇ ಹೇಳುತ್ತಿರುವಾಗ ಏನು ತಾನೇ ಮಾಡಲು ಸಾಧ್ಯ?
ಉಡುಪಿಯಲ್ಲಿ ಆರಂಭವಾದ ಹಿಜಾಬ್ ಗಲಭೆಗೆ ಶಿವಮೊಗ್ಗದಲ್ಲಿ ಹರ್ಷನ ಕೊಲೆ ಮಾಡುವ ಮೂಲಕ ಪ್ರತೀಕಾರ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಗೋರಿಪಾಳ್ಯದಲ್ಲಿ ಉರ್ದು ಮಾತನಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಧ್ಯರಾತ್ರಿಯಲ್ಲಿ ಕನ್ನಡಿಗ ಚಂದ್ರುವಿನ ಹತ್ಯೆ, ಕರಾವಳಿ ಮತ್ತು ಕೇರಳದಲ್ಲಿ ಪ್ರತಿನಿತ್ಯವೂ ಲವ್ ಜಿಹಾದ್ ಮೂಲಕ ಲಕ್ಶಾಂತರ ಹಿಂದೂ ಹೆಣ್ಣು ಮಕ್ಕಳ ಮತಾಂತರ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರತಿನಿತ್ಯವೂ ಮನೆಗಳ ಕೊಟ್ಟಿಗೆಗೆ ನುಗ್ಗಿ ಮಾರಕಾಸ್ತ್ರಗಳನ್ನು ಝಳುಪಿಸಿ ಗೋವುಗಳ್ಳತನ, ಹಿಂದೂ ಧಾರ್ಮಿಕ ಮೆರವಣಿಗೆಯಲ್ಲಿ ಮಸೀದಿಗಳಿಂದ ಕಲ್ಲು ತೂರುವುದು ಬಲವಂತವಾಗಿ ಹಲಾಲ್ ಉತ್ಪನ್ನಗಳನ್ನು ಹಿಂದೂಗಳ ಮೇಲೆ ಹೇರುವುದರ ಕುರಿತಾಗಿ ಯಾವುದೇ ವಿದೇಶೀ ಮಾಧ್ಯಮಗಳಾಗಲೀ ಮುಸ್ಲಿಂ ದೇಶಗಳು ಚಕಾರ ಎತ್ತದೇ ಇರುವುದು ನಿಜಕ್ಕೂ ಸೋಜಿಗವೇ ಸರಿ.
ಮುಸಲ್ಮಾನರು ತಮಗೆ ತಾವೇ ಶಾಂತಿದೂತರು ಎಂದು ಕಂಡ ಕಂಡಲ್ಲಿ ಹೇಳಿಕೊಂಡು ತಿರುಗಾಡುವ ಬದಲು ಅದನ್ನೇ ಅಕ್ಷರಶಃ ಮಾಡಿ ತೋರಿಸಿದರೆ ಸಾಕು. ಮುಸಲ್ಮಾನ ದೇಶಗಳು ಭಾರತದ ಬಗ್ಗೆ ಹೇಳಿದಾಗ ಇಲ್ಲಾ ನಾವು ನಿಜಕ್ಕೂ ಇಲ್ಲಿ ಚೆನ್ನಾಗಿಯೇ ಇದ್ದೇವೆ ಎಂದು ತಿರುಗಿ ಹೇಳಿದರೂ ಸಾಕು. ಕನಿಷ್ಟ ಪಕ್ಷ ಪಾಕೀಸ್ಥಾನದ ವಿರುದ್ದ ಭಾರತ ತಂಡ ಯಾವುದೇ ಆಟದಲ್ಲಿ ಸೋತಾಗ ಪಟಾಕಿ ಸಂಭ್ರಮಿಸದೇ ಸಂತಾಪ ಸೂಚಿದರೂ ಸಾಕು ಹಿಂದೂಗಳು ಕರಗಿ ನೀರಾಗಿ ಸೌಹಾರ್ಧತೆಯನ್ನು ಧಾರೆ ಎರೆದು ಬಿಡುತ್ತಾರೆ. ಮುಸಲ್ಮಾನರಾದರೂ ಝಾಕೀರ್ ಹುಸೇನ್, ಫಕ್ರುದ್ದೀನ್ ಅಲಿ ಅಹ್ಮದ್, ಅಬ್ದುಲ್ ಕಲಾಂ ರಂತಹವರು ಈ ದೇಶದ ಅತ್ಯುನ್ನದ ಸ್ಥಾನವಾದ ರಾಷ್ಟ್ರಪತಿಗಳಾಗುವುದು, ಕಟ್ಟರ್ ಮುಸಲ್ಮಾನರಾದ ಮೊಹಮ್ಮದ್ ಹಮೀದ್ ಅನ್ಸಾರಿ ಎರಡು ಬಾರಿ ಉಪರಾಷ್ಟ್ರಪತಿಗಳಾಗುವುದು, ಸ್ವಾತ್ರಂತ್ರ್ಯ ಬಂದ 15-20 ವರ್ಷಗಳ ಕಾಲ ಮುಸಲ್ಮಾನರೇ ದೇಶದ ಶಿಕ್ಶಣ ಮಂತ್ರಿಗಳಾಗುವುದು, ಮುಫ್ತೀ ಮೊಹಮ್ಮದ್ ಸಯೀದ್ ರಕ್ಷಣಾಮಂತ್ರಿ, ಗುಲಾಬ್ ನಬಿ ಆಜಾದ್ ರಂತಹವರು ಕೇಂದ್ರ ಮಂತ್ರಿಗಳಾಗುವುದು ಕೇವಲ ಭಾರತದಲ್ಲಿ ಮಾತ್ರವೇ ಸಾಧ್ಯ ಎಂಬುದನ್ನು ಜಗತ್ತಿಗೆ ಪ್ರತಿಯೊಬ್ಬ ಭಾರತಿಯರು ಅದರಲ್ಲೂ ಭಾರತೀಯ ಮುಸಲ್ಮಾನರು ಎತ್ತಿ ತೋರಿಸಿದಾಗಲೇ ಈ ದೇಶದ ಜನರಲ್ಲಿ ರಾಷ್ಟ್ರೀಯತೆಯ ಮನೋಭಾವನೆ ಇನ್ನೂ ಜಾಗೃತವಾಗಿದೆ ಎಂದು ತೋರಿಸಿದಂತಾಗುತ್ತದೆ. ಇಲ್ಲದೇ ಹೋದಲ್ಲಿ ಎಲ್ಲವೂ ತೋರ್ಪಡಿಕೆಯಾಗುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ