ರಾಜ್ಯವಿಧಾನ ಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿ ಉಳಿದಿರುವ ಕಾರಣ, ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಇದ್ದಕ್ಕಿದ್ದಂತೆ ಜಾಗೃತವಾಗಿ ಆ ಧಾರೆ, ಈ ಧಾರೆ ಎನ್ನುತ್ತಲೋ, ಹುಟ್ಟಿದಾರಿಂದಲೂ ಜನ್ಮದಿನವನ್ನೇ ಆಚರಿಸದವರೂ, ಒಂದು ವರ್ಷಕ್ಕೆ ಮುಂಚೇಯೇ 75ನೇ ವರ್ಷದ (ಹಿಂದೂ ಸಂಪ್ರದಾಯದಲ್ಲಿ ಹುಟ್ಟಿದ ಹಬ್ಬವನ್ನು ಹೆಚ್ಚಿಸಿ ಮಾಡುವ ಸಂಪ್ರದಾಯವಿದೆ) ಅದ್ದೂರಿಯಾಗಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಆಚರಿಸಿಕೊಳ್ಳುವುದು, ಸಣ್ಣ ಸಣ್ಣಕ್ಕೂ ಸಭೆ ಸಮಾರಂಭಗಳನ್ನು ಏರ್ಪಡಿಸಿವುದು, ಅದ್ದೂರಿಯಾಗಿ ಸಾರ್ವಜನಿಕವಾಗಿ ವರಮಹಾಲಕ್ಷ್ಮೀ, ಶ್ರೀಕೃಷ್ಣ ಜನ್ಮಾಷ್ಠಮಿ, ಗೌರಿ, ಗಣೇಶ, ಊರ ಹಬ್ಬಗಳನ್ನು ಆಚರಿಸುವ ಮೂಲಕ ಜನರಿಗೆ ತಮ್ಮ ಅಸ್ಮಿತೆ ಮತ್ತು ಅಸ್ಥಿತ್ವವನ್ನು ತೋರಪಡಿಸುತ್ತಾ, ಸದ್ಯದಲ್ಲೇ ನಡೆಯುವ ಚುನಾವಣೆಯಲ್ಲಿ ನಿಮ್ಮ ಮುಂದೆ ಮತ ಭಿಕ್ಷೆಗೆ (ಖರೀಧಿಸಲು??) ಬರುತ್ತೇವೆ ಎಂಬ ಸೂಚನೆಯನ್ನು ನೀಡುತ್ತಿವೆ.
ಇದೇ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಜಾತಿ, ಧರ್ಮ, ಪಂಗಡ, ಒಳ ಪಂಗಡಗಳ ನಡುವೆ ಕಂದಕ ಏರ್ಪಡಿಸುವಂತಹ ಸಭೆ ಸಮಾರಂಭಗಳನ್ನು ಆಯೋಜಿಸಿ ಅಲ್ಲಿ ವಿವಿಧ ಜಾತಿ, ಧರ್ಮ ಮತ್ತು ಪಂತದವರನ್ನು ಓಲೈಸಿಕೊಳ್ಳುವ ಸಲುವಾಗಿ ಬಾಯಿಗೆ ಬಂದಂತೆ ನಿಜವಾದ ಸ್ವಾತ್ರಂತ್ರ್ಯ ಹೋರಾಟಗಾರರನ್ನು ನಿಂದಿಸಿದ್ದರಿಂದ ಸಿಡಿದೆದ್ದ ಆಡಳಿತ ಪಕ್ಷದ ಕಾರ್ಯಕರ್ತರು ವಿರೋಧ ಪಕ್ಷಗಳಿಗೆ ಟಕ್ಕರ್ ಕೊಡುವ ಸಲುವಾಗಿಯೇ ಅದೇ ಸ್ವಾತ್ರಂತ ವೀರರ ಫೋಟೋವನ್ನೇ ರಾಜ್ಯಾದ್ಯಂತ ನಡೆಯುತ್ತಿದ್ದ ತಮ್ಮೆಲ್ಲಾ ಸಭೆ ಸಮಾರಂಭಗಳಲ್ಲಿ ಮತ್ತು ಸರ್ಕಲ್ಲುಗಳಲ್ಲಿ ಪ್ರದರ್ಶಿಸುವ ಮೂಲಕ ಸಡ್ಡು ಹೊಡೆದಾಗ ಕೆಲವು ಕಿಡಿಗೇಡಿಗಳು ಅದನ್ನು ಹರಿದು ತನ್ನ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದಾಗ ಅವರ ಸಂಸ್ಕಾರ ಅಷ್ಟೇ ಎಂದು ಸುಮ್ಮನಾಗಬಹುದಾಗಿತ್ತು. ಆದರೆ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ನಿಂತಲ್ಲಿ ಗೆಲ್ಲುತ್ತೇನೆ ಎಂಬ ಭರವಸೆಯೇ ಇಲ್ಲದೇ, ಅಂತರ ಪಿಚಾಚಿಯ ತರಹ ಅಹಿಂದ ಜಪ ಮಾಡಿಕೊಂಡು ಅಲೆದಾಡುತ್ತಾ, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದನಂತೆ (ಜನರಿಂದ ಬಹುಮತ ಪಡೆಯುವ ಮುನ್ನವೇ) ಎನ್ನುವಂತೆ ಹೋದ ಬಂದ ಕಡೆಯಲ್ಲೆಲ್ಲಾ ಮತ್ತೊಮ್ಮೆ ತಾನೇ ಮುಖ್ಯಮಂತ್ರಿ ಎಂದು ಅಬ್ಬರಿಸುತ್ತಿರುವ ಸಿದ್ದರಾಮಯ್ಯ ಕೂಡಾ ಸಂಘ ಮತ್ತು ಸಾವರ್ಕರ್ ವಿರುದ್ಧ ಮಾಡಿದ ಬಾರಿ ಬಾರಿ ಅವಹೇಳನಕಾರಿ ಭಾಷಣಗಳು ನಿಜಕ್ಕೂ ರಾಜ್ಯದ ಸ್ವಾಸ್ಥ್ಯಕ್ಕೆ ಕೊಳ್ಳಿ ಇಟ್ಟಿದೆ ಎಂದರೂ ತಪ್ಪೇನಲ್ಲ.
ಈ ಹಿಂದೆ ದೇವಸ್ಥಾನಕ್ಕೆ ಹೋದಾಗ ಅರ್ಚಕರು ಹಣೆಗೆ ಪ್ರಸಾದದ ಕುಂಕುಮ ಇಟ್ಟಾಗ, ಕೆಲವು ಸಭೆ ಸಮಾರಂಭಗಳಲ್ಲಿ ಕೇಸರಿ ಪೇಟವನ್ನು ತೊಡಿಸಲು ಮುಂದಾದಾಗ, ಕೆಂಡಾ ಮಂಡಲವಾಗಿ ನಾನು ಸಮಾಜವಾದಿ ಜಾತ್ಯಾತೀತ ವ್ಯಕ್ತಿ ಎಂದು ಬೊಬ್ಬಿರಿದ ಇದೇ ಸಿದ್ದರಾಮಯ್ಯ ಮುಸಲ್ಮಾನರ ಸಭೆ ಸಮಾರಂಭಗಳಲ್ಲಿ ಅರಬ್ಬರ ವೇಷ ಮತ್ತು ಮಸೀದಿಗೆಳಿಗೆ ಹೋದಾಗ ತೆಲೆ ಮೇಲೆ ಮುಸ್ಲಿಂ ಟೋಪಿ ಧರಿಸಿ ಆವರ ಜೊತೆ ಇಫ್ತಾರ್ ಔತಣ ಕೂಟಗಳಲ್ಲಿ ಭಾಗವಹಿಸಿದಾಗ ಇಲ್ಲವೇ ಕ್ರೈಸ್ತ ಇಗರ್ಜಿಗಳಿಗೆ ಭೇಟಿ ನೀಡಿ ಅವರದ್ದೇ ಪೋಷಾಕು ಧರಿಸುವಾಗ ಯಾವುದೇ ಜಾತ್ಯಾತೀತತೆ ಕಾಡದೇ ಹೋದದ್ದು ಅಚ್ಚರಿಯಾಗಿದ್ದು ಹಿಂದೂಗಳ ರೀತಿ ರಿವಾಜುಗಳನ್ನು ಧ್ವೇಷಿಸುವುದೇ ಸಿದ್ದರಾಮಯ್ಯನವರಿಗೆ ಜಾತ್ಯಾತೀತತೆಯೇ? ಎನ್ನುವ ಪ್ರಶ್ನೆ ರಾಜ್ಯದ ಜನರಿಗೆ ಕಾಡಲಾರಂಭಿಸಿದೆ. ಹಾಗಾದರೆ ಕೆಳೆದ ಒಂದು ತಿಂಗಳಿನಿಂದ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಹಿಂದೂಗಳ ಶ್ರದ್ಧೆಯ ವಿರುದ್ಧ (ಮಾಂಸಾಹಾರ ಮಾಡಿ) ಭೇಟಿ ಮಾಡಿ ಮಠ ಮಾನ್ಯರಿ ಕಾಲಿಗೆ ಬೀಳುತ್ತಿರುವುದು ಸ್ಪಷ್ಟವಾಗಿ ಅಧಿಕಾರಕ್ಕಾಗಿ ಮಾಡುತ್ತಿರುವ ನಾಟಕ ಎನ್ನುವುದು ಸ್ಪಷ್ಟವಾಗುತ್ತಿದೆ.
ಇನ್ನು ಇತ್ತೀಚೆಗೆ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಚರ್ಚೆಯಾದ ವಿಷಯವೆಂದರೆ ಚಾಮರಾಜ ಪೇಟೆಯ ಆಟದ ಮೈದಾನ. ಚಾಮರಾಜ ಪೇಟೆಯಲ್ಲಿ ಕುರಿ ಮೈದಾನ ಎಂದೇ ಹೆಸರಾಗಿದ್ದ ಈ ಮೈದಾನಕ್ಕೆ ಮೂರ್ನಾಲ್ಕು ದಶಕಗಳ ಹಿಂದೆ ಅಲ್ಲೊಂದು ಮೂರು ಗುಚ್ಚಗಳ ಗೋಡೆಯನ್ನು ಕಟ್ಟಿ ಈದ್ಗಾ ಮೈದಾನ ಎಂದು ಕರೆದು ಆ ಮೈದಾನ ಮುಸಲ್ಮಾನರ ವಕ್ಫ್ ಇಲಾಖೆಗೆ ಸೇರಿದ್ದು ಎಂದು ಹೇಳುತ್ತಾ, ಮುಸಲ್ಮಾನರ ಹೊರತಾಗಿ ಬೇರೆ ಯಾವುದೇ ಧರ್ಮದವರು ಆ ಮೈದಾನವನ್ನು ಉಪಯೋಗಿಸಬಾರದು ಎಂದು ಅಲಿಖಿತ ನಿಯಮವನ್ನೇ ಹೊರಡಿಸಿದ್ದರು. ಇನ್ನು ಝಮೀರ್ ಅಲ್ಲಿಯ ಶಾಸಕನಾದ ಮೇಲಂತೂ ಆವರ ಆಟಾಟೋಪಗಳು ಹೆಚ್ಚಾಗಿ, ಸ್ವಾತ್ರಂತ್ರ್ಯೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವದಂತಹ ಸರ್ಕಾರಿ ಸಭೆಗಳೂ ಅಲ್ಲಿ ನಡೆಸಬಾರದೆಂದು ಬಹಿರಂಗವಾಗಿಯೇ ಫರ್ಮಾನು ಹೊಡೆಸಿದ ಮೇಲಂತೂ ಪರಿಸ್ಥಿತಿ ಮತ್ತಷ್ತು ಬಿಗಡಾಯಿಸಿತು.
ಈ ರೀತಿಯಾಗಿ ಝಮೀರ್ ಅವರ ಉದ್ಧಟನದ ಮಾತುಗಳು ಸ್ಥಳೀಯರ ಭಾವನೆಗಳನ್ನು ಕೆರಳಿಸಿದ ಕಾರಣ ಅವರೆಲ್ಲರೂ ಸೇರಿ ಒಂದು ದಿನದ ಮಟ್ಟಿಗೆ ಸ್ವಯಂಪ್ರೇರಿತವಾಗಿ ಚಾಮರಾಜ ಪೇಟೆ ಬಂದ್ ಕೂಡಾ ಮಾಡಿ ತಮ್ಮ ಒಗ್ಗಟ್ಟನ್ನು ಸೂಚಿಸಿದ್ದಲ್ಲದೇ, ಈ ಸರ್ಕಾರೀ ಮೈದಾನದಲ್ಲೇ ಭಾರತ ದೇಶದ ಸ್ವಾತ್ರಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಲು ನಿರ್ಧರಿಸಿದರು. ಆಗ ಮತ್ತೆ ಝಮೀರ್, ವಕ್ಫ್ ಇಲಾಖೆ ಈ ಮೈದಾನದ ಮೇಲೆ ತಮ್ಮ ಹಕ್ಕನ್ನು ಸ್ಥಾಪಿಸಲು ಮುಂದಾದರೂ ಅದಕ್ಕೆ ಸೂಕ್ತವಾದ ಧಾಖಲೆಗಳನ್ನು ಒದಗಿಸಲು ವಿಫಲವಾದ ಕಾರಣ ತಾಂತ್ರಿಕವಾಗಿ ಆ ಆಟದ ಮೈದಾನ, ಕಂದಾಯ ಇಲಾಖೆಗೆ ಸೇರಿದ್ದು ಎಂದು ಹೇಳಿದ್ದಲ್ಲದೇ, ಸರ್ಕಾರದ ಅಧೀನದಲ್ಲಿಯೇ ಸ್ವಾತ್ರಂತ್ಯ್ರ ಅಮೃತ ಮಹೋತ್ಸವವನ್ನು ಸಹಸ್ರರಾರು ಪೋಲೀಸ್ ಮತ್ತು ಮಿಲಿಟರಿ ಸೈನಿಕರ ನಡುವೆ ನಡೆಸಿತು.
ಅದೆಷ್ಟೊ ವರ್ಷಗಳ ನಂತರ ಆ ಮೈದಾನದಲ್ಲಿ ಮುಸಲ್ಮಾನೇತರ ಸಭೆ ನಡೆದದ್ದರಿಂದ ಸಂತಸ ಗೊಂಡ ಸ್ಥಳೀಯರು ಸಾರ್ವಜನಿಕವಾಗಿ ಗಣೇಶೋತ್ಸವನ್ನು ಆಚರಿಸಲು ಮುಂದಾದಾಗ, ಮತ್ತದೇ ಸಿದ್ದರಾಮಯ್ಯನವರ ಭಂಟ ಝಮೀರ್ ಮತ್ತು ವಕ್ಘ್ ಇದರ ವಿರುದ್ಧ ಹೈಕೋರ್ಟಿನಲ್ಲಿ ದಾವೆ ಹೊಡಿತಾದರೂ, ಆ ಮೈದಾನ ವಕ್ಘ್ ಇಲಾಖೆಗೆ ಸೇದಿದ್ದು ಎನ್ನುವುದಕ್ಕೆ ಯಾವುದೇ ಆಧಾರ ವಿಲ್ಲದೇ ಅದು ಸಂಪೂರ್ಣವಾಗಿ ಸರ್ಕಾರದ ಕಂದಾಯ ಇಲಾಖೆಗೆ ಸೇರಿರಿರುವ ಕಾರಣ, ಜಾತ್ಯಾತೀತವಾಗಿ ಬಿಬಿಎಂಪಿ ಮತ್ತು ಸ್ಥಳೀಯ ಪೋಲಿಸರ ಅನುಮತಿಯ ಮೇರೆಗೆ ಅಲ್ಲಿ ಎಲ್ಲಾ ರೀತಿಯ ಸಭೆ ಸಮಾರಂಭಗಳನ್ನು ನಡೆಸಬಹುದು. ಅದರಲ್ಲೂ ವಿಶೇಶವಾಗಿ ಈ ಬಾರಿಯ ಗಣೇಶೋತ್ಸವ ನಡೆಸಲು ಮುಂದಾದಾಗ ಹಿಂದೂಗಳಿಗೆ ಆದ ಹರ್ಷಕ್ಕೆ ಪಾರವೇ ಇರಲಿಲ್ಲ. ನ್ಯಾಯಾಲಯದ ಆದೇಶ ತಮ್ಮ ವಿರುದ್ಧವಾಗಿದ್ದರಿಂದ ಒಳಗೊಳಗೇ ಝಮೀರ್ ಕುಪಿತಗೊಂಡರೂ ಸಾರ್ವಜನಿಕವಾಗಿ ಹಿಂದೂ ಮುಸಲ್ಮಾನರು ಎಲ್ಲರೂ ಅಣ್ಣ ತಮ್ಮಂದಿರಂತೆ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸೋಣ ಎಂಬ ಹೇಳಿಕೆ ನೀಡಿದಾಗ ಗಣೋಶೋತ್ಸವ ಸಮಿತಿಯವರೂ ಸ್ಥಳೀಯ ಶಾಸಕರೇ ತಮ್ಮ ಪರವಾಗಿ ಹೇಳಿಕೆ ಕೊಟ್ಟಾಗ ಎಲ್ಲಾ ರೀತಿಯ ವಿಘ್ನಗಳೂ ಸಹಾ ನಿವಾರಣೆಯಾಗಿದೆ ಎಂದೇ ಭಾವಿಸಿದ್ದಲ್ಲದೇ ಅದ್ಧೂರಿಯ ಗಣೇಶೋತ್ಸವದ ತಯಾರಿಯನ್ನು ಮುಂದುವರೆಸಿ ಆ ಕುರಿತಾದ ಮಾಹಿತಿಯನ್ನು ಎಲ್ಲೆಡೆಗೂ ಪಸರಿಸಿದ್ದರು.
ಚಾಮರಾಜ ಮೇಟೆಯ ಮೈದಾನ( ಈದ್ಗಾ ಮೈದಾನ?)ದಲ್ಲಿ ಗಣೇಶೋತ್ಸವ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದರಿಂದ ಪ್ರೇರಿತರಾಗಿ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಈದ್ಗಾ ಮೈದಾನದಲ್ಲೂ (1994ರಲ್ಲಿ, ಹೋರಾಟದಿಂದ ಹಿಂದೂ ಸಂಘಟನೆಗಳು ಅಲ್ಲಿ ತ್ರಿವರ್ಣಧ್ವಜವನ್ನು ಹಾರಿಸಿದಾಗ ಗೋಲಿಬಾರ್ ನಡೆದಿತ್ತು) ಗಣೇಶೋತ್ಸವವನ್ನು ಆಚರಿಸಲು ಮುಂದಾದಾಗ ಅಲ್ಲಿನ ಸ್ಥಳೀಯ ಅಂಜುಮನ್ ಇಸ್ಲಾಂ ಮುಸ್ಲಿಂ ಸಂಘಟನೆ ಇದರ ವಿರುದ್ಧ ಹೈಕೋರ್ಟಿನಲ್ಲಿ ಧಾವೆ ಹೂಡಿತು.
ಇತ್ತ ಬೆಂಗಳೂದಿನ ಚಾಮರಾಜಪೇಟೆಯ ಹಿಂದೂ ಸಂಘಟನೆಗಳು ಅದ್ದೂರಿಯ ಗಣೇಶೋತ್ಸವಕ್ಕೆ ತಯಾರಿ ಮಾಡಿಕೊಳ್ಳುತ್ತಾ ಝಮೀರ್ ಬಗ್ಗೆಒಂದು ರೀತಿಯಾಗಿ ಮೈಮರೆತಿದ್ದಾಗಲೇ, ಹಿಂದೂ ಮುಸ್ಲಿಂ ಬಾಯ್ ಬಾಯ್ ಎಂದು ಹಲ್ಲು ಕಚ್ಚಿ ಹೇಳುವ ಝಮೀರ್ ಸದ್ದಿಲ್ಲದೇ ರಾಜ್ಯ ವಕ್ಘ್ ಮಂಡಳಿಯ ಮುಖ್ಯರಸ್ಥರನ್ನು ದೆಹಲಿಗೆ ಕರೆದುಕೊಂಡು ಹೋಗಿ ದೇಶವಿರೋಧಿ ಕುಕೃತ್ಯಗಳ ಪರವಾಗಿ ವಾದಿಸಲೇ ತನ್ನ ಜೀವವನ್ನು ಸವೆಸಿತ್ತಿರುವ ಇತ್ತೀಚಗಷ್ಟೇ ಕಾಂಗ್ರೇಸ್ ತ್ಯಜಿಸಿ ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾದ ಕಪಿಲ್ ಸಿಬಲ್ ಮೂಲಕ ತುರಾತುರಿಯಲ್ಲಿ ಚಾಮರಾಚ ಪೇಟೆ ಮೈದಾದನದ ಗಣೋಶೋತ್ಸವ ವಿರುದ್ದ ದಾವೆ ಹೂಡಿದ್ದಲ್ಲದೇ, ಅಲ್ಲಿ ದ್ವಿಸದಸ್ಯ ಪೀಠದಲ್ಲೇ ವೈರುಧ್ಯವಾದ ನಿರ್ಣಯ ತಾಳಿದ ಪರಿಣಾಮ ತ್ರಿಸದಸ್ಯ ಪೀಠಕ್ಕೆ ಅದನ್ನು ವರ್ಗಾಯಿಸಿ ಅಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಸಭೆ ಸಮಾರಂಭಗಳಿಗೂ ಅವಕಾಶ ಮಾಡಿಕೊಡದೇ ಯಥಾ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಬೇಕೆಂಬ ತಡೆಯಾಜ್ಞೆಯನ್ನು ತರಲು ಸಫಲವಾಗಿ, ಇದು ಹಿಂದೂಗಳ ಸೋಲು ಮತ್ತು ಮುಸಲ್ಮಾನರ ಗೆಲುವು ಎಂಬುದನ್ನು ಬಿಂಬಿಸಲು ಮುಂದಾಗಿರುವುದು ಖಂಡನಾರ್ಹವಾಗಿದ್ದು, ಇದು ಹಿಂದೂ ಮುಸಲ್ಮಾನರ ಸೋಲು ಗೆಲುವು ಎನ್ನುವುದಕ್ಕಿಂತಲೂ ಈ ಪ್ರಜಾಪ್ರಭುತ್ವದ ಮತ್ತು ದೇಶದ ಸಾಮರಸ್ಯತ್ವಕ್ಕೆ ಸೋಲು ಎಂದರೂ ತಪ್ಪಾಗದು.
ಅದ್ದೂರಿಯ ಗಣೇಶೋತ್ಸವದ ಆಚರಣೆಗೆ ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಪ್ರತ್ಯಕ್ಷವಾಗಿ ಝಮೀರ್ ತಣ್ಣೀರೆರೆಚಿದ್ದನ್ನು ತಡೆಯಲಾಗದೇ ಬೆಂಗಳೂರಿಗಳು ದುಃಖಪಡುತ್ತಿದ್ದರೆ ಅತ್ತ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸ ಬಹುದು ಎಂದು ಹಬ್ಬದ ಹಿಂದಿನ ದಿನ ತಡ ರಾತ್ರಿ ಆದೇಶ ಬಂದ ಕೂಡಲೇ ಸ್ಥಳೀಯ ಹಿಂದೂ ಕಾರ್ಯಕರ್ತರು ಅಧಿಕೃತವಾಗಿ ಬೆಳಿಗ್ಗೆ 11 ಘಂಟೆಗೆ ಗಣೇಶನನ್ನು ಪ್ರತಿಷ್ಟಾಪನೆ ಮಾಡುತ್ತೇವೆ ಎಂದು ಹೇಳಿದ್ದವರು, ಹಬ್ಬದ ದಿನ ನ್ಯಾಯಾಲಯದ ಕಲಾಪ ಆರಂಭವಾದ ಕೂಡಲೇ ಮತ್ತೆ ಮುಸಲ್ಮಾನ ಸಂಘಟನೆಗಳು ಸುಪ್ರೀಂ ಕೋರ್ಟ್ ಬಾಗಿಲು ಬಡಿದು ಎಲ್ಲಿ ತಡೆಯಾಜ್ಞೆ ತರುತ್ತಾರೋ ಎಂಬ ಅತಂಕದಿಂದ ಬೆಳಿಗ್ಗೆ 7ಕ್ಕೆಲ್ಲಾ ತುರಾತುರಿಯಲ್ಲಿ ಸಣ್ಣದಾದ ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಶಾಸ್ತ್ರೋಕ್ತವಾಗಿ ಮೂರ್ತಿಗೆ ಪೂಜೆ ಮುಗಿಸುವ ಮೂಲಕ ಗೆಲುವಿನ ನಗೆ ಚೆಲ್ಲಿದರೂ, ಹಿಂದೂಗಳೇ ಬಹುಸಂಖ್ಯಾತರಾಗಿರುವ ಹಿಂದೂಸ್ಥಾನದಲ್ಲೇ ಹಿಂದೂಗಳ ಧಾರ್ಮಿಕ ಹಬ್ಬಗಳಿಗೇಕೆ ಈ ರೀತಿಯ ಪರದಾಟ ಎಂಬುದು ಯೋಚಿಸಬೇಕಾದ ಸಂಗತಿಯಾಗಿದೆ.
ಇಡೀ ಪ್ರಪಂಚಾದ್ಯಂತ ಕೋಮು ಗಲಭೆ ಎಬ್ಬಿಸುವವರೆಲ್ಲರೂ, ತಮ್ಮ ಬ್ರದರ್ಸ್ ಎಂಬ ಸತ್ಯ ಸಂಗತಿಯ ಅರಿವಿದ್ದರೂ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೋಮು ಗಲಾಟೆ ನಡೆದರೆ ಯಾರು ಹೊಣೆ? ಎಂದು ಸರ್ಕಾರವನ್ನು ಪ್ರಶ್ನಿಸುವ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಿಂದೂಗಳ ಧಾರ್ಮಿಕ ಆಚರಣೆಗೆ ಭಂಗ ತರಬೇಡಿ ಎಂದು ತಮ್ಮ ಬ್ರದರ್ಸ್ ಗಳಿಗೆ ಬುದ್ದಿ ಹೇಳುವುದು ಡಿಕೆಶಿ ಅವರ ಕರ್ತವ್ಯ ಎಂದು ಭಾವಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಎಲ್ಲಾ ಸಭೆ ಸಮಾರಂಭಗಳು/ ಧಾರ್ಮಿಕ ಪೂಜೆಗಳು ಯಾವುದೇ ಗಲಾಟೆಗಳು ಇಲ್ಲದೇ, ನಿರ್ವಿಘ್ನವಾಗಿ ನಡೆಯಲೆಂದು ಗಣೇಶನಿಗೇ ಮೊದಲು ಪೂಜೆ ಮಾಡಬೇಕೆಂದು ನಮ್ಮ ಪುರಾಣದಲ್ಲಿ ಹೇಳಿದ್ದರೆ, ಈಗ ಗಣೇಶ ಹಬ್ಬವೇ ಗಲಾಟೆಗೆ ಆಸ್ಪದವಾಗಿದ್ದು, ಅದೇ ಗಣೇಶನ ಹಬ್ಬವನ್ನು ಮಾಡಲು ಪೋಲೀಸರು, ನ್ಯಾಯಾಲಯ, ಅಷ್ಟೇಕೆ ಅನ್ಯಮತೀಯರ ಅಪ್ಪಣೆ ಪಡೆದುಕೊಳ್ಳುವಂತಹ ಸ್ಥಿತಿಗೆ ತಲುಪಿರುವುದು ಹಿಂದೂಗಳ ದೌರ್ಭಾಗ್ಯವೇ ಸರಿ.
ಬಹುಶಃ ಇಡೀ ವಿಶ್ವದಲ್ಲೇ ಬಹುಸಂಖ್ಯಾತರು ಅಲ್ಪಸಂಖ್ಯಾತರ ಅನುಗುಣವಾಗಿ ಅವರ ಅಪ್ಪಣೆಯ ಮೇರೆಗೆ ಉಡುಗೆ ತೊಡುಗೆ ತೊಡುವುದು (ಹಿಜಬ್), ಆಹಾರವನ್ನು ಸೇವಿಸುವುದು (ಹಲಾಲ್), ಸಾರ್ವಜನಿಕವಾಗಿ ರಾಷ್ಟ್ರ ನಾಯಕರ ಫೋಟೋಗಳನ್ನು ಹಾಕುವುದು, ರಾಷ್ಟ್ರ ನಾಯಕರುಗಳ ಹೆಸರನ್ನು ಸರ್ಕಲ್/ ಫೈ ಓವರ್ಗಳಿಗೆ ಇಡುವುದು (ಸಾವರ್ಕರ್) ] ಪೂಜೆ ಪುನಸ್ಕಾರ, ಮೆರವಣಿಗೆ ಮಾಡುವುದು ನಿಜಕ್ಕೂ ದುಃಖಕರವಾದ ಮತ್ತು ದೈನೇಸಿ ವಿಚಾರವಾಗಿದೆ.
ಈ ರೀತಿಯ ದುಸ್ಥಿತಿಗೆ ನಾನು ಆ ರಾಜಕಾರಣಿಗಳನ್ನು ತೆಗಳದೆ ಅಂತಹವರನ್ನು ಆಯ್ಕೆಮಾಡಿ ಕಳುಹಿಸಿದ ನಮ್ಮನ್ನೇ ನಾವು ಹಳಿದುಕೊಳ್ಳಬೇಕಿದೆ. ಕೇವಲ 15-20% ಇರುವ (ಅಷ್ಟೂ ಜನ ಅವರನ್ನೇ ಬೆಂಬಲಿಸುತ್ತಾರೆ ಎಂಬ ನಂಬಿಕೆಯೂ ಇಲ್ಲ) ಜನರ ಅನುಕೂಲಕ್ಕಾಗಿ ೮೦% ಜನರನ್ನು ಜಾತಿ, ಒಳ ಜಾತಿ, ಎಡಗೈ, ಬಲಗೈ ಎಂದು ವಿಭಜಿಸಿ ಅವರಲ್ಲೇ ಕಿತ್ತಾಟವನ್ನು ಏರ್ಪಡಿಸುವುವವರನ್ನು ಖಂಡಿತವಾಗಿಯೂ ಮನೆಗೆ ಕಳುಹಿಸಲೇ ಬೇಕಿದೆ. ಹಿಂದೂಗಳ ಬೆಂಬಲವಿಲ್ಲದೇ, ಕೇವಲ 20% ಅಲ್ಪ ಸಂಖ್ಯಾತರ ಬಲದಿಂದ ಗೆಲ್ಲುವುದು ಅಸಾಧ್ಯ ಎಂದು ತೋರಿಸಲೇ ಬೇಕಾದ ಅನಿವಾರ್ಯ ಸಂದರ್ಭ ಒದಗಿಬಂದಿದೆ. ಹಾಗಾಗಿ ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎನ್ನುವ ಘೋಷಣೆ ಕೇವಲ ಘೋಷಣೆಗಷ್ಟೇ ಸೀಮಿತವಾಗಿರದೇ, ಹಿಂದೂಗಳೆಲ್ಲರೂ ಜಾಗೃತರಾಗಿ ಒಗ್ಗಟ್ಟಾಗಿ ಅದನ್ನು ಕಾರ್ಯರೂಪಕ್ಕೆ ತರುವ ಮೂಲಕ ಇಲ್ಲಿ ಮಗುವಿನ ಕುಂ..ಯನ್ನೂ ಜಿಗುಟಿ, ಮತ್ತವರೇ ಅದೇ ಮಗುವಿನ ತೊಟ್ಟಿಲನ್ನೂ ತೂಗುವಂತಹವರಿಗೆ ಪಾಠ ಕಲಿಸಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಪರಿಸ್ಥಿತಿ ಬಂದುಬಿಟ್ಟಿದೆ.
ಹಿಂದೂ ಜಾಗ್ಟತನಾದರೆ ಮಾತ್ರ ದೇಶ ಉಳಿಯುತ್ತದೆ. ಹಾಗೆ ದೇಶ ಉಳಿದಲ್ಲಿ ಮಾತ್ರವೇ ಹಿಂದೂಗಳು ಉಳಿಯುತ್ತಾರೆ ಎನ್ನುವುದು ಕಠೋರ ಸತ್ಯವಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ