ಭಾರತೀಯರಿಗೆ ಶಿಕ್ಷಣ ಮತ್ತು ಆರೋಗ್ಯ ಕ್ರಿಶ್ಚಿಯನ್ನರ ಕೊಡುಗೆಯೇ?

christಕಳೆದ ವಾರ ರಾಜ್ಯ ಸರ್ಕಾರ ಮಂಡಿಸಿದ ಮತಾಂತರ ನಿಷೇಧದ ಕಾಯ್ದೆಯ ಕುರಿತಾಗಿ ಸುವರ್ಣಾ ಟಿವಿಯಲ್ಲಿ ಅಜಿತ್ ಹನುಮಕ್ಕನವರ್ ಅವರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದಲ್ಲೇ ಹುಟ್ಟಿ ಅದರಲ್ಲೂ ಬೆಂಗಳೂರಿನಲ್ಲೇ ಅಲ್ಪಸಂಖ್ಯಾತರಿಗೆ ಸಿಗಬಹುದಾದ ಸಕಲ ಸೌಲಭ್ಯಗಳನ್ನೂ ಬಳಸಿಕೊಂಡು ಬೆಳೆದಿರುವ ಕ್ರಿಶ್ಚಿಯನ್ ಧರ್ಮವನ್ನು ಪ್ರತಿನಿಧಿಸುತ್ತಿದ್ದ ಮತಾಂಧ ರಾಬರ್ಟ್ ಕ್ಲೈವ್ ಎಂಬಾತ ಭಾರತದ ಇತಿಹಾಸವನ್ನು ಅರಿಯದೇ ಓತಪ್ರೋತವಾಗಿ ನಾಲಿಗೆಯನ್ನು ಹರಿಬಿಟ್ಟು, ನಮ್ಮ ಶಿಕ್ಷಣ ಬೇಕು, ನಮ್ಮ ಅಸ್ಪತ್ರೆಗಳೇ ಆರೋಗ್ಯ ಕಾಪಾಡಬೇಕು, ನಮ್ಮಿಂದಲೇ ದಾನಗಳನ್ನು ಪಡೆದು ನಮ್ಮನ್ನೇ ಏಕೆ ಟಾರ್ಗೆಟ್ ಮಾಡ್ತೀರೀ? ಎಂದು ಅರುಚಾಡುತ್ತಿದ್ದದ್ದನ್ನು ನೋಡಿದಾಗ, ಛೇ, ಸ್ವಾತ್ರಂತ್ರ್ಯ ಬಂದು 75 ವರ್ಷಗಳು ಕಳೆದರೂ ಅವರಿಗೆ ಇನ್ನೂ ದೇಶ ಮತು ಧರ್ಮದ ನಡುವಿನ ಅಂತರವೇ ತಿಳಿಯದೇ ವಿನಾಕಾರಣ ಸಾರ್ವಜನಿಕವಾಗಿ ತನ್ನ ಜನ್ಮಭೂಮಿಯನ್ನೇ ವಾಚಾಮಗೋಚರವಾಗಿ ಅವಹೇಳನ ಮಾಡುತ್ತಾನಲ್ಲಾ ಎಂದೆನಿಸಿ, ಕೇವಲ ಬ್ರಿಟಿಷರು ಭಾರತಕ್ಕೆ ಬರುವ ಮಂಚೆಯಲ್ಲಾ, ಕ್ರಿಶ್ಚಿಯನ್ ರಿಲೀಜಿಯನ್ ಹುಟ್ಟುವ ಮೊದಲೇ ಭಾರತದಲ್ಲಿ ಶಿಕ್ಷಣ, ಆರೋಗ್ಯ, ಜೀವನ ಶೈಲಿ ಹೇಗಿತ್ತು? ಎಂಬುದನ್ನು ತಿಳಿಯಪಡಿಸುವುದಕ್ಕಾಗಿಯೇ ಈ ಲೇಖನ.

gurukulaಪ್ರಾಚೀನ ಭಾರತದಲ್ಲಿ, ಶಿಕ್ಷಣ ವ್ಯವಸ್ಥೆಯು ಔಪಚಾರಿಕ ಮತ್ತು ಅನೌಪಚಾರಿಕವಾಗಿ ಅಂದಿನಿಂದಲೂ ಅಸ್ತಿತ್ವದಲ್ಲಿತ್ತು. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ಮೊದಲ ಗುರುಗಳು ಎನ್ನುವಂತೆ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಮಕ್ಕಳು ಸಂಸ್ಕಾರ ಮತ್ತು ಶಿಕ್ಷಣವನ್ನು ತಮ್ಮ ಮನೆ ಹತ್ತಿರದ ದೇವಸ್ಥಾನ, ಪಾಠಶಾಲೆ, ಕೂಲಿಮಠಗಳಲ್ಲಿ ಜೀವನಾವಶ್ಯಕವಿದ್ದ ವಿದ್ಯೆಗಳನ್ನು ಕಲಿಯುತ್ತಿದ್ದರೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸ್ಥಳೀಯ ಗುರುಕುಲಗಳಲ್ಲಿ ಛಪ್ಪನ್ನಾರು 64 ವಿಧದ ವಿದ್ಯೆಗಳನ್ನು ಕಲಿಸಿ ಕೊಡಲಾಗುತ್ತಿತ್ತು. ಈ ಗುರುಕುಲಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿತ್ತು. ಅದಲ್ಲದೇ ಮನೆಗಳಲ್ಲಿನ ಹಿರಿಯರು ಹಳ್ಳಿಗಳಳಲ್ಲಿ ನೆಡೆಯುತ್ತಿದ್ದ ನೃತ್ಯ ನಾಟಕಗಳ ಮೂಲಕವಲ್ಲದೇ, ಊರಿನಲ್ಲಿದ್ದ ದೇವಾಲಯಗಳಲ್ಲಿಯೂ ಚಿಕ್ಕ ಮಕ್ಕಳಿಗೆ ಧಾರ್ಮಿಕ ಜೀವನ ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನಗಳನ್ನು ನೀಡುವ ವ್ಯವಸ್ಥೆ ಇತ್ತು.

mechaleಇನ್ನು ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಭಾರತಾದ್ಯಂತ ಗುರುಕುಲದ ಶಿಕ್ಷಣ ವ್ಯವಸ್ಥೆ ಇದ್ದು ಹೊಂದಿದ್ದ ಕಾರಣ, ಈಸ್ಟ್ ಇಂಡಿಯಾ ಕಂಪನಿ ತಮ್ಮ ಮೊದಲ 60 ವರ್ಷಗಳ ಕಾಲದ ಆಳ್ವಿಕೆಯಲ್ಲಿ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿಯೇ ಇರಲಿಲ್ಲ. ಬ್ರಿಟೀಷರು ಭಾರತವನ್ನು ತಮ್ಮ ಕೈವಶ ಮಾಡಿಕೊಂಡ ನಂತರ ಆಡಳಿತ ನಡೆಸುವುದಕ್ಕೆ ಇಂಗ್ಲೇಂಡಿನಿಂದ ಜನರನ್ನು ಕರೆತರುವುದು ಅಸಾಧ್ಯ ಎನಿಸಿದ ಕಾರಣ, ಸ್ಥಳೀಯರನ್ನೇಕೆ ಬಳಸಿಕೊಳ್ಳಬಾರದು ಎಂದು ಯೋಚಿಸಿದಾಗ, ಭಾರತದಲ್ಲಿ ಅಂದಿನ ಮಕ್ಕಳು ಸ್ಥಳೀಯ ಭಾಷೆಗಳಲ್ಲಿ ಅಭ್ಯಾಸ ಮಾಡುತ್ತಿದ್ದರಿಂದ ಥಾಮಸ್ ಬಾಬಿಂಗ್ಟನ್ ಮೆಕಾಲೆ ಎಂಬ ಬೃಹಸ್ಪತಿ ಭಾರತೀಯ ಶಾಲೆಗಳಲ್ಲಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರಬೇಕು ಹಾಗಾದಾಗಲೇ ಭಾರತೀಯ ಮುಖಚರ್ಯೆ ಹೊಂದಿದ ಆದರೆ ಬ್ರಿಟೀಷ್ ಮನಸ್ಥಿತಿಯನ್ನು ಹೊಂದಿರುವಂತಹವರನ್ನು ಬೆಳೆಸಿ ಬಳಸಿಕೊಳ್ಳುವ ಮೂಲಕ ಸುಲಭವಾಗಿ ಆಡಳಿತ ನಡೆಸಬಹುದು ಎಂಬ ಅಂಶವನ್ನು ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಮುಂದಿಟ್ಟು ಅದರ ಪ್ರಕಾರ, ಗುರುಕುಲಗಳೆನ್ನೆಲ್ಲಾ ಬಲವಂತದಿಂದ ಮುಚ್ಚಿಸಿ, ಸ್ಥಳೀಯವಾಗಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಆರಂಭಿಸಿ ಅಲ್ಲಿ ಭಾರತೀಯರಿಗೆ ವಿಜ್ಞಾನ ಮತ್ತು ಪಾಶ್ಚಿಮಾತ್ಯ ಸಾಹಿತ್ಯವನ್ನು ಕಲಿಸಿಕೊಡುವ ಮೂಲಕ, ಆ ವಿದ್ಯಾರ್ಥಿಗಳಿಗೆ ಭಾರತೀಯ ಸಾಂಪ್ರದಾಯಿಕ ಶಿಕ್ಷಣ ಅತ್ಯಂತ ಕಳಪೆಯ ಮಟ್ಟದ್ದು ಎಂಬ ಭಾವನೆ ಮೂಡಿಸುವುದರಲ್ಲಿ ಸಫಲನಾಗುವ ಮೂಲಕ ಭಾರತೀಯ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಿದವರು ಇದೇ ಬ್ರಿಟೀಷರೇ

pahiyanಹುಯ್ಯನ್ಸಾಂಗ್ ಮತ್ತು ಪಾಹಿಯಾನ್ ಎಂಬ ಚೀನೀ ಇತಿಹಾಸಕಾರರು ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಡೀ ಭಾರತ ಸುತ್ತಿದಾಗಲೂ ಒಂದೇ ಒಂದು ಭಿಕ್ಷುಕರು ಕಾಣದದಷ್ಟು ಸುಭಿಕ್ಷವಾಗಿತ್ತು ನಮ್ಮ ನಾಡು.  ಬಿಹಾರದ ನಳಂದ, ತಕ್ಷಶಿಲಾ ಮತ್ತು ಕಾಶ್ಮೀರದ ಶಾರದಾ ಪೀಠಕ್ಕೆ ದೇಶವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಜ್ಞಾನಾರ್ಜನೆ ಬಂದು ವಿದ್ಯೆಯನ್ನು ಕಲಿತುಕೊಂಡು ಹೋಗುತ್ತಿದ್ದರೇ ವಿನಃ ಆಂತಹ ವಿಧ್ಯಾರ್ಥಿಗಳನ್ನು ಎಂದೂ ಮತಾಂತರ ಮಾಡಿರಲಿಲ್ಲ ಎಂದು ನಮೂದಿಸಿರುವ ವಿಷಯವ ಬಹುಶಃ ಮತಾಂಧ ರಾಬರ್ಟ್ ಕ್ಲೈವ್ ಗೆ ತಿಳಿಯ ಪಡಿಸಬೇಕಾಗಿದೆ. ನಮ್ಮ ಪಂಚಾಂಗ ಮತ್ತು ಖಗೋಳ ಶಾಸ್ತ್ರದ ಮೂಲಕ ಕುಳಿತಲ್ಲಿಂದಲೇ ಆಕಾಶ ಮತ್ತು ಪಾತಾಳದ ಅಡಿಯಲ್ಲಿರುವ ಅತ್ಯಂತ ಸೂಕ್ಷ್ಮವಿಷಯಗಳನ್ನು ಅಭ್ಯಸಿಸುವಷ್ಟು ಬುದ್ಧಿವಂತರಿದ್ದರೆಂದು ತೋರಿಸಬೇಕಿದೆ.

charakasಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಪ್ರಾಚೀನ ಇತಿಹಾಸದಲ್ಲಿ, ಗ್ರೀಸ್, ರೋಮ್, ಭಾರತೀಯ ಉಪಖಂಡ ಮತ್ತು ಪರ್ಷಿಯಾದಲ್ಲಿ ಅದಾಗಲೇ ಸುಸಜ್ಜಿತವಾದ ಆಸ್ಪತ್ರೆಗಳು ಇತ್ತು ಎಂಬುದನ್ನು ನಮ್ಮ ಸನಾತನ ಸಂಸ್ಕೃತಿಗಳಲ್ಲಿ, ಧರ್ಮ ಮತ್ತು ಔಷಧವು ಅವಿನಾಭಾವ ಸಂಬಂಧ ಹೊಂದಿತ್ತು. ಕ್ರಿ.ಪೂ ಸಾವಿರಾರು ವರ್ಷಗಳ ಮುಂಚೆಯೇ ಚರಕ ಮಹರ್ಷಿಗಳು ಭಾರತದಲ್ಲಿ ಲಭ್ಯವಿದ್ದ ಸ್ಥಳೀಯ ಗಿಡಮೂಲಿಕೆಗಳಿಂದ ಅಭಿವೃದ್ಧಿಪಡಿಸಿದ ಔಷಧ ಮತ್ತು ಜೀವನಶೈಲಿಯ ವ್ಯವಸ್ಥೆಯಾದ ಆಯುರ್ವೇದದ ಪ್ರಾಚೀನ ಕಲೆ ಮತ್ತು ವಿಜ್ಞಾನಕ್ಕೆ ಪ್ರಮುಖ ಕೊಡುಗೆ ನೀಡಿದವರಲ್ಲಿ ಒಬ್ಬರಾಗಿದ್ದು ಅವರನ್ನು ವೈದ್ಯಶಾಸ್ತ್ರದ ಪಿತಾಮಹ ಎಂದೇ ಕರೆಯಲಾಗುತ್ತದೆ. ಅವರ ಪ್ರಸಿದ್ಧ ಕೃತಿ, ಚರಕ ಸಂಹಿತಾ, ಆಯುರ್ವೇದದ ವಿಶ್ವಕೋಶವೆಂದು ಪರಿಗಣಿಸಲಾಗಿದೆ. ಅದೇ ರೀತಿ ಸುಶ್ರುತ ಸಂಹಿತವು ಸಹಾ ಮತ್ತೊಂದು ಪ್ರಮುಖವಾದ ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಒಂದಾಗಿದ್ದು, ಋಷಿ ಸುಶ್ರುತರು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.

aurvedaಇನ್ನು ಭಾರತದ ಆಹಾರ ಪದ್ದತಿಯಲ್ಲಿ ಬಳಸಲಾಗುವ ಪದಾರ್ಥಗಳು ಅದರಲ್ಲೂ ವಿಶೇಷವಾಗಿ ಸಾಂಬಾರು ಪದಾರ್ಥಗಳು ನೈಸರ್ಗಿಕವಾಗಿಯೇ ಔಷಧೀಯ ಗುಣಗಳನ್ನು ಹೊಂದಿದ್ದವು. ಸಣ್ಣ ಪುಟ್ಟ ರೋಗಗಳಿಗೆ ಮನೆಗಳಲ್ಲೇ ಮನೆ ಮದ್ದನ್ನು ತಯಾರಿಸಿಕೊಂಡರೆ, ವಿಶೇಷವಾದ ಚಿಕಿತ್ಸೆಗೆ ಬಹುತೇಕ ಹಳ್ಳಿಗಳಲ್ಲಿ ಇದ್ದ ನಾಟಿ ವೈದ್ಯರು ಅಥವಾ ಪಂಡಿತರು ಗುಣಪಡಿಸುತ್ತಿದ್ದರಿಂದ ಯಾವುದೇ ಮಾರಣಾಂತಿಕ ಖಾಯಿಲೆಗಳು ಇಲ್ಲದೇ ಬಹುತೇಕರು ಶತಾಯುಷಿಗಳಾಗಿದ್ದರು. ಬ್ರಿಟಿಷ್ ಸರ್ಕಾರವು ವಸಾಹತುಶಾಹಿ ಭಾರತದಲ್ಲಿ ಸಂಘಟಿತ ವೈದ್ಯಕೀಯ ವ್ಯವಸ್ಥೆಯನ್ನು ಸ್ಥಾಪಿಸುವ ಮೂಅಕ ಸ್ಥಳೀಯ ಭಾರತೀಯ ಮತ್ತು ಅರೇಬಿಕ್ ಯುನಾನಿ ಔಷಧ ವ್ಯವಸ್ಥೆಯನ್ನು ಕೊಂದು ಹಾಕುವುದರಲ್ಲಿ ಯಶಸ್ವಿಯಾಯಿತು.

ಅಲೋಪತಿ ಚಿಕಿತ್ಸೆಯಿಂದ ರೋಗಿಯು ದಿಢೀರ್ ಆಗಿ ಗುಣಪಡಲ್ಪಟ್ಟರೂ, ಆ ಚಿಕಿತ್ಸೆಯ ಆಡ್ಡ ಪರಿಣಾಮಗಳು ನಂತರದ ದಿನಗಳಲ್ಲಿ ಕಾಡುವುದನ್ನು ಇಂದಿಗೂ ತಡೆಯಲಾಗಿಲ್ಲ. ಆದರೆ ಅದೇ ಭಾರತೀಯ ಆಯುರ್ವೇದ ಪದ್ದತಿಯ ಔಷಧಿಗಳು ಕೆಲವೊಮ್ಮೆ ಗುಣಪಡಿಸಲು ನಿಧಾನಗತಿ ತೋರಿದರೂ ಅಥವಾ ಗುಣಪಡಿಸಲು ವಿಫಲವಾದರೂ ಅದರಿಂದ ಯಾವುದೇ ಅಡ್ಡ ಪರಿಣಾಮಗಳನ್ನಂತೂ ಅಂದಿಗೂ ಇಂದಿಗೂ ಮತ್ತು ಮುಂದೆಯೂ ಬೀರುವುದಿಲ್ಲ ಎಂಬ ಸತ್ಯವನ್ನು ರಾಬರ್ಟ್ ಕ್ಲೈವ್ ಗೆ ತಿಳಿಸ ಬೇಕಾಗಿದೆ.

gudiಬ್ರಿಟಿಷರು ಭಾರತಕ್ಕೆ ಬರುವ ಮುನ್ನಾ ನಮ್ಮದು ಕೃಷಿಯಾಧಾರಿತ, ಗುಡಿ ಕೈಗಾರಿಕೆಗೆ ಆಧಾರಿತ, ಪರಸ್ಪರ ವಸ್ತುಗಳ ವಿನಿಮಯ ರೂಪದ ಸಾಮಾಜಿಕ ಪದ್ದತಿ ರೂಡಿಯಲ್ಲಿದ್ದು ಎಲ್ಲರೂ ಸ್ವಾವಲಂಭಿಗಳಾಗಿ ಬದುಕುತ್ತಿದ್ದರು. ಆದರೆ ಬ್ರಿಟಿಷರು ಭಾರತಕ್ಕೆ ಬಂದೊಡನೆಯೇ ಮಾಡಿದ ಮೊತ್ತ ಮೊದಲ ಕೆಲಸವೆಂದರೆ ನಮ್ಮ ಗುಡಿ ಕೈಗಾರಿಕೆಗಳ ನಾಶ ಮತ್ತು ಸ್ವಾವಲಂಭಿಗಳನ್ನು ಜೀತ ಪದ್ದತಿಗೆ ದೂಡಿದ್ದು. ನಮ್ಮ ಗುರುಕುಲ ಶಿಕ್ಷಣ ಪದ್ದತಿಯ ಬದಲು ಮೆಕಾಲೇ ಶಿಕ್ಷಣ ಪದ್ದತಿಯಲ್ಲಿ ಟಸ್ ಪುಸ್ ಎಂಬ ಇಂಗ್ಲೀಷ್ ಭಾಷೆಯನ್ನು ಕಲಿಸಿ ಅವರಲ್ಲೇ ಉದ್ಯೋಗ ಕೊಟ್ಟು ಸೂಟು ಬೂಟು ಹಾಕಿಸಿ ಮೂಲ ಒಕ್ಕಲುತನಕ್ಕೇ ಕೊಳ್ಳಿ ಇಟ್ಟರು. ಸಾವಯವ ಕೃಷಿ ಪದ್ಧತಿಯ ಬದಲು ರಾಸಾಯನಿಕ ವಿಷಯುಕ್ತ ವ್ಯವಸಾಯ, ಎಗ್ಗಿಲ್ಲದ ನೀರಿನ ಬಳಕೆ, ಕಾಡು ಕಡಿದು ನಾಡು ಮಾಡಿದ್ದು, ದೇಶೀ ತಳೀ ಹಸುಗಳ ಬದಲಾಗಿ ಸೀಮೇ ಹಸುಗಳನ್ನು ಪರಿಚಯಿಸಿ ನಂತರ ಜರ್ಸೀ ಹಸುಗಳ ಹಾಲಿನ ರೂಪದಲ್ಲಿ ಹಾಲಾಹಲವನ್ನು ಕುಡಿಸುವ ದುರಾಭ್ಯಾಸ ಮಾಡಿಸಿದವರೂ ಬ್ರಿಟೀಷರೇ.

muslinಪ್ರಂಪಂಚದಲ್ಲೇ ಅತ್ಯಂತ ಪ್ರಖ್ಯಾತವಾಗಿದ್ದ , ಒಂಬತ್ತು ಗಜದ ಇಡೀ ಸೀರೆಯನ್ನು ಒಂದು ಬೆಂಕಿ ಪೊಟ್ಟಣದಲ್ಲಿ ಮಡಿಸಿಡಬಲ್ಲಂತಹ ಅತ್ಯಂತ ನುಣುಪಾದ ಮತ್ತು ಆಷ್ಟೇ ನಯವಾದ ಮಸ್ಲಿನ್ ಬಟ್ಟೆಗಳನ್ನು ನೇಯುತ್ತಿದ್ದ ನೇಕಾರರ ಕೈಕಡಿದು ಮ್ಯಾಂಚೆಸ್ಟರ್ ನಲ್ಲಿ ಕೈಗಾರಿಕಾ ಕ್ರಾಂತಿಯಿಂದಾಗಿ ಯಂತ್ರಗಳ ಮೂಲಕ ತಯಾರಾದ ಬಟ್ಟೆಗಳ ಶೋಕಿಯನ್ನು ನಮಗೆ ಹತ್ತಿಸಿ, ನಮ್ಮ ಖಾದಿಯ ಖದರ್ ಅವರ ಖಾಖಿಯ ಮುಂದೆ ತಲೆ ತಗ್ಗಿಸುವಂತೆ ಮಾಡಿದರವೂ ಇದೇ ಬ್ರಿಟೀಷರೇ.

ಇನ್ನು ಬೆಳಗ್ಗೆ ಎದ್ದ ಕೂಡಲೇ ಬೇವಿನ ಕಡ್ಡಿಯಿಂದಲೋ, ಇದ್ದಿಲಿಂದಲೋ, ಬೂದಿಯಿಂದಲೋ, ಉಪ್ಪಿನಿಂದಲೋ ಹಲ್ಲನ್ನು ಉಜ್ಜಿ, ಕಡಲೇ ಹಿಟ್ಟಿನಿಂದ ಮುಖ ತೊಳೆದುಕೊಂಡು ಸ್ನಾನ ಮಾಡಿ ಶುಭ್ರವಾಗಿ ನೊಸಲಿಗೆ ಗೋಮಯದ ಭಸ್ಮ ಧರಿಸುವ ಮೂಲಕ ನೈಸರ್ಗಿಕವಾಗಿಯೇ ಆರೋಗ್ಯಕರವಾಗಿ ಇರುತ್ತಿದ್ದವರಿಗೆ, ನಿಧಾನವಾಗಿ ಟೋಥ್ ಬ್ರಷ್, ಪೇಸ್ಟ್,, ಸೋಪು, ಶಾಂಪು, ಫೇಸ್ ವಾಷ್ ಫೇಸ್ ಕ್ರೀಂಗಳನ್ನು ಅಭ್ಯಾಸ ಮಾಡಿಸಿ ಅಂತಹ ಉತ್ಪನ್ನಗಳನ್ನು ವಿದೇಶದಿಂದಲೇ ಅಮದು ಮಾಡಿಕೊಂಡು ಬಳೆಸಿದಲ್ಲಿ ಮಾತ್ರವೇ ಹೆಮ್ಮೆಯ ವಿಷಯ ಎನ್ನುವ ಭ್ರಮೆಯನ್ನು ಮೂಡಿಸಿದವರೂ ಇದೇ ಬ್ರಿಟೀಷರೇ.

ಬ್ರಿಟಿಷರು ಭಾರತಕ್ಕೆ ಬಂದು ಬೆಟ್ಟದ ತಪ್ಪಲಿನ ತಂಪಾದ ಹವೆಯಲ್ಲಿದ್ದ ನಮ್ಮ ಲಕ್ಷಾಂತರ ಎಕರೆ ಕಾಫಿ, ಟೀ ತೋಟಗಳ ಮಾಲಿಕರನ್ನು ಹೆದರಿಸಿ ಬೆದರಿಸಿ ಅವರಿಂದ ಜಮೀನುಗಳನ್ನು ಕಿತ್ತುಕೊಂಡು ಅಲ್ಲಿ ತಮ್ಮ ಐಶಾರಾಮ್ಯ ಬಂಗಲೆಗಳನ್ನು ಕಟ್ಟಿಕೊಂಡು ಅದೇ ಹಳ್ಳಿಯ ಜನರನ್ನೇ ಕೂಲಿಗಳನ್ನಾಗಿಸಿ ತಾವೂ ಮಾತ್ರಾ ಐಶಾರಾಮ್ಯದ ವೈಟ್ ಕಾಲರ್ಡ್ ಕೆಲಸಗಳನ್ನು ಮಾಡುತ್ತಾ ದಬ್ಬಾಳಿಕೆ ನಡೆಸಿದವರೂ ಬ್ರಿಟೀಷರೇ.

michineryಬ್ರಿಟೀಷರು ಕೇವಲ ಭಾರತವನ್ನು ಲೂಟಿ ಮಾಡಿಕೊಂಡು ಹೋಗದೇ, ನಮ್ಮ ಕಲೆ ಸಂಸ್ಕೃತಿ, ಸಂಪ್ರದಾಯಗಳನ್ನೂ ವಿಕೃತಗೊಳಿಸಿ ಅದರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ದಲಿತರನ್ನು ಸವರ್ಣೀಯರ ಮೇಲೆ ಎತ್ತಿ ಕಟ್ಟಿ ನಂತರ ಅದೇ ದಲಿತರನ್ನೂ ಮತ್ತು ಗುಡ್ಡಗಾಡಿನ ಅಮಾಯಕ ಜನರನ್ನು ಸಹಾಯದ ರೂಪದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ಕಾರಣದಿಂದಲ್ಲೇ 2011 ರ ಭಾರತದ ಜನಗಣತಿಯ ಪ್ರಕಾರ ಭಾರತದಲ್ಲಿ ಶೇಕಡಾ 2.3 ಕ್ರಿಶ್ಚಿಯನ್ನರು ಇದ್ದು, ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮದ ನಂತರ ಕ್ರಿಶ್ಚಿಯನ್ ಧರ್ಮವೇ ಭಾರತದ ಮೂರನೇ ಅತಿದೊಡ್ಡ ಧರ್ಮವಾಗಿದ್ದು ಸುಮಾರು 27.8 ಮಿಲಿಯನ್ ಕ್ರಿಶ್ಚಿಯನ್ ಅನುಯಾಯಿಗಳು ಇರುವುದಕ್ಕೆ ಮುಖ್ಯ ಕಾರಣೀಭೂತರು ಬ್ರಿಟೀಷರೇ.

mich2ಇನ್ನು ಕ್ಲೈವ್ ಹೇಳಿದಂತೆ ವಿದೇಶಗಳಿಂದ ಬರುತ್ತಿದ್ದ ಹಣಗಳೆಲ್ಲವೂ ಕೇವಲ ಮಿಷಿನರಿಗಳ ಮೂಲಕ ಸ್ಥಳೀಯರನ್ನು ಮತಾಂತರಗೊಳಿಸಲು ಬಳಸುವುದಕ್ಕೆ ವ್ಯಯವಾಗುತ್ತಿದೆಯೇ ವಿನಾಃ ಇದರಿಂದ ಭಾರತಕ್ಕೆ ಕಿಂಚಿತ್ತೂ ಲಾಭವಿಲ್ಲ ಎಂಬ ಸತ್ಯವನ್ನು ಅರಿತ ಪ್ರಸ್ತುತ ಸರ್ಕಾರ 16,745 NGOಗಳ ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಗಿಗಳನ್ನು ಕಾನೂನಿನ ನಿಬಂಧನೆಗಳ ಉಲ್ಲಂಘನೆಗಾಗಿ ರದ್ದುಗೊಳಿಸಿದ ಪರಿಣಾಮವಾಗಿಯೇ ರಾಬರ್ಚ್ ಕ್ಲೈವ್ ನಂತಹ ಮತಾಂತರಿಗಳಿಗೆ ಬರುತ್ತಿದ್ದ ಆಮಧನಿ ತಪ್ಪಿಹೋಗುತ್ತಿರುವ ಕಾರಣದಿಂದಲೇ ಈ ರೀತಿಯಾಗಿ ಕಂಡ ಕಂಡ ಕೆಡೆಯಲ್ಲೆಲ್ಲಾ ಗೀಳಿಡಿತ್ತಾ, ಭಾರತದಲ್ಲಿ ಕ್ರಿಶ್ಚಿಯನ್ನರನ್ನು ಹತ್ತಿಕ್ಕಲಾಗುತ್ತಿದೆ ಎಂದು ಬೊಬ್ಬಿಡುತ್ತಿರುವುದು ಹಾಸ್ಯಾಸ್ಪದ ಎನಿಸುತ್ತಿದೆ.

ಬ್ರಿಟೀಷರು ನಮ್ಮನ್ನು ಸುಮಾರು 350 ವರ್ಷಗಳ ಕಾಲ ಆಳಿ ಹೋದ ಪರಿಣಾಮದಿಂದಲೇ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ನಮ್ಮ ನಾಗರಿಕತೆ, ರಾಜಕೀಯ, ಆರ್ಥಿಕತೆ, ಸಾಮಾಜಿಕ ವ್ಯವಸ್ಥೆಗಳು, ವೈಯಕ್ತಿಕ ಜೀವನ ಶೈಲಿ ಎಲ್ಲವೂ ಇನ್ನೂ ಬ್ರಿಟೀಷರ ದಾಸ್ಯ ರೂಪದಲ್ಲಿಯೇ ಇರುವುದರಿಂದಲೇ ಈ ದೇಶ ಹಾಳಾಗಿದೆ ಎಂದರೆ ತಪ್ಪಾಗದು. ಒಟ್ಟಿನಲ್ಲಿ ವ್ಯಾಪಾರಕ್ಕೆಂದು ಬಂದ ಬ್ರಿಟೀಷರು ಉಂಡೂ ಹೋದ ಕೊಂಡೂ ಹೋದ ಎನ್ನುವಂತೆ ದೇಶವನ್ನು ಕೊಳ್ಳೆ ಹೊಡೆದದ್ದಲ್ಲದೇ, ಮಿಷಿನರಿಗಳ ಅಮಿಷ/ಬಲವಂತ ಮತಾಂತರ ಮಾಡಿದ್ದರಿಂದಲೇ ಇಂದಿಗೂ ರಾಬರ್ಟ್ ಕ್ಲೈವ್ ನಂತರ ಬ್ರಿಟೀಷ್ ದರಿದ್ರ ಮನಸ್ಥಿತಿಯ ಕೋಟ್ಯಾಂತರ ಮತಾಂತರಿಗಳಿಂದಲೇ ಈ ದೇಶದ ಪರಿಸ್ಥಿತಿ ಹೀಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s