ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

PFI2ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ, ಕೋಮು ಗಲಭೆ ಮತ್ತು ಹಿಜಾಬ್ ಪ್ರಕರಣಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಲ್ಲಿ ಆ ಎಲ್ಲಾ ಘಟನೆಗಳ ಹಿಂದೆಯೂ ಪ್ರಮುಖವಾಗಿ ಕೇಳಿ ಬರುವ ಪ್ರಮುಖ್ಯವಾದ ಹೆಸರೆಂದರೆ, PFI ಮತ್ತು SDPI ಎನ್ನುವುದು ನಿಜಕ್ಕೂ ಕಳವಳಕಾರಿಯಾದ ವಿಷಯವಾಗಿದ್ದು, ಈ ರೀತಿ ಘಟನೆಗಳು ನಡೆದಾಗಲೆಲ್ಲಾ, ಸರ್ಕಾರ ಈ ಭಯೋತ್ಚಾದಕ ಸಂಘಟನೆಗಳನ್ನು ಏಕೆ ನಿಷೇಧಿಸಬಾರದು? ಎಂದು ಕೇಳುತ್ತಿದ್ದ ಸಮಯದಲ್ಲೇ, ಇಂದು 22 ಸೆಪ್ಟೆಂಬರ್ 2022 ರ ಬೆಳಗ್ಗೆ ಬೆಂಗಳೂರು, ಮಂಗಳೂರು ಸೇರಿದಂತೆ ದೇಶಾದ್ಯಂತ ಸುಮಾರು 13 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಕ ಕಾಲದಲ್ಲಿ ಧಾಳಿ ನಡೆಸಿ, 100ಕ್ಕೂ ಅಧಿಕ PFI, SDPI ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಬಂಧಿಸಿರುವುದು ನಿಜಕ್ಕೂ ಭಾರತೀಯರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ ಎಂದರೂ ತಪ್ಪಾಗದು.

division1947ರಲ್ಲಿ ಧರ್ಮಾಧಾರಿತವಾಗಿ ನಮ್ಮ ದೇಶ, ಭಾರತ ಮತ್ತು ಪೂರ್ವ/ಪಶ್ಚಿಮ ಪಾಕಿಸ್ಥಾನಗಳಾಗಿ ಇಬ್ಬಾಗವಾದಾಗಲೂ ಮಹಾತ್ಮಾ ಗಾಂಧಿಯವರ ದೂರದೃಷ್ಟಿ ಕೊರತೆಯೋ ಅಥವಾ ಅಲ್ಪಸಂಖ್ಯಾತರ ಮೇಲಿನ ತುಷ್ಟೀಕರಣವೋ ಕಾಣೇ, ಭಾರತದಿಂದ ಪಾಕೀಸ್ಥಾನದ ಕಡೆ ಗುಳೆ ಎದ್ದಿದ್ದ ಮುಸಲ್ಮಾನರು ಭಾರತವನ್ನು ಡಾಟಿ ಹೋಗಬೇಕೆಂದರೆ ಅವರು ನನ್ನ ಹೆಣವನ್ನು ದಾಟಿಕೊಂಡು ಹೋಗಲಿ ಎಂಬ ಭಾವನಾತ್ಮಕ ಪಟ್ಟನ್ನು ಹಾಕಿದ ನಂತರ ರೋಗಿ ಬಯಸಿದ್ದೂ ಹಾಲೂ ಅನ್ನಾ, ವೈದ್ಯ ಹೇಳಿದ್ದೂ ಹಾಲು ಅನ್ನವೆಂಬಂತೆ, ಗಾಂಧಿಯವರ ಒತ್ತಾಸೆಗೆ ಕಟ್ಟು ಬಿದ್ದು ಕೋಟ್ಯಾಂತರ ಮಸಲ್ಮಾನರು ಭಾರತದಲ್ಲೇ ಉಳಿಯುವಂತಾಯಿತು. ಹಾಗೆ ಗಾಂಧಿಯವರು ಮುಸಲ್ಮಾನರನ್ನು ಉಳಿದುಕೊಂಡದ್ದಲ್ಲದೇ, ಅವರಿಗೆ ಸಂವಿಧಾನಾತ್ಮಕವಾಗಿ ಅಲ್ಪಸಂಖ್ಯತರ ಪಟ್ಟ ಕಟ್ಟಿ ನಾನಾ ರೀತಿಯ ವಿಶೇಷ ಸೌಲಭ್ಯಗಳನ್ನು ಕೊಟ್ಟು ತಲೆ ಮೇಲೆ ಕೂರಿಸಿಕೊಂಡಿದ್ದೇ, ಈಗ ಸೆರಗಿನಲ್ಲಿಟ್ಟು ಕೊಂಡಿದ್ದ ಕೆಂಡದಂತಾಗಿ ಈಗ ಮಗ್ಗಲ ಮುಳ್ಳಾಗಿ, ಇಡೀ ದೇಶದ ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಮೇಲ್ನೋಟಕ್ಕೆ ಮುಸಲ್ಮಾನರು ತಾವು ಶಾಂತಿ ಪ್ರಿಯರು, ತಮ್ಮ ಧರ್ಮ ಶಾಂತಿಯನ್ನೇ ಸಾರುತ್ತದೆ ಎಂದು ಹೇಳುತ್ತಾರಾದರು ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಯ ಹಿಂದೆ ಮುಸಲ್ಮಾನರ ನಂಟು ಕಟ್ಟಿಕೊಳ್ಳುವುದು ಭಯವನ್ನುಂಟು ಮಾಡುತ್ತದೆ. ಇದನ್ನೇ ಗಮನಿಸಿಯೇ ಏನೋ? ಭಾರತದ ಉಪಪ್ರಧಾನಿಗಳಾಗಿದ್ದ ಶ್ರೀ ಲಾಲಕೃಷ್ಣ ಅಡ್ವಾನಿಯವರು, ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲಾ. ಆದರೆ ಭಯೋತ್ಪಾದಕರೆಲ್ಲಾ ಮುಸಲ್ಮಾನರೇ ಎಂಬ ಹೇಳಿಕೆ ಕೊಟ್ಟಿದ್ದರು.

ಈ ದೇಶದಲ್ಲಿ ಹುಟ್ಟಿ ಇಲ್ಲಿಯ ಎಲ್ಲಾ ಸೌಲಭ್ಯಗಳನ್ನೂ ಪಡೆದು ಬೆಳೆದು ವಿದ್ಯಾವಂತರಾಗುವುದರ ಜೊತೆ ಜೊತೆಯಲ್ಲೇ ಮತಾಂಧತೆಯ ಅಫೀಮನ್ನೂ ತಲೆಗೆ ಏರಿಸಿಕೊಂಡು ಕೋಮು ದಳ್ಳುರಿ, ಕೋಮು ಸೌಹಾರ್ಧತೆ ಹಾಳು ಮಾಡುವುದು, ಭಯೋತ್ಪಾದನ ಚಟುವಟಿಗಳಲ್ಲಿ ಭಾಗಿಯಾಗುವುದು ಇಲ್ಲವೇ ಭಯೋತ್ಪಾದನಾ ಕೃತ್ಯಗಳಿಗೆ/ಭಯೋತ್ಪಾದಕರಿಗೆ ಪತ್ಯಕ್ಷ/ಪರೋಕ್ಷ್ಮವಾಗಿ ಸಹಾಯ ಮಾಡುವುದು, ಇದ್ದಕ್ಕಿದ್ದಂತೆಯೇ ಈ ದೇಶದಿಂದ ಮಾಯವಾಗಿ ಒಮ್ಮೆಲ್ಲೆ ಸಿರಿಯಾ, ಲೆಬನಾನ್, ಇರಾಕ್ ಮುಂತಾದ ದೇಶಗಳಲ್ಲಿರುವ ಐಸಿಸ್ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುವುದು ನಿಜಕ್ಕೂ ಭಯಾನಕವಾಗಿರುವ ಸಂಗತಿಯಾಗಿದೆ.

simi1977ರ ಏಪ್ರಿಲ್ ನಲ್ಲಿ ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ಎಂಬ ಭಯೋತ್ಪಾದಕ ಸಂಘಟನೆ ಆರಂಭವಾಗಿ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿತ್ತು. ಇದರ ಅಂಗವಾಗಿ ದೇಶಾದ್ಯಂತ ಸಣ್ಣ ಸಣ್ಣ ಉಗ್ರಗಾಮಿಗಳನ್ನು ಸಂಘಟಿಸುತ್ತಾ, ಭಾರತದ ವಿರುದ್ಧ ಜಿಹಾದ್ ಅನ್ನು ಘೋಷಿಸಿತ್ತು. ಈಗಾಗಲೇ ತಿಳಿಸಿದಂತೆ ಇದರ ಮುಖ್ಯ ಗುರಿಯು ಭಾರತವನ್ನು ದಾರ್-ಉಲ್-ಇಸ್ಲಾಂ (ಇಸ್ಲಾಂನ ಭೂಮಿ) ಯನ್ನಾಗಿ ಬಲವಂತವಾಗಿಯೋ ಇಲ್ಲವೇ ಇಸ್ಲಾಂಗೆ ಮತಾಂತರಿಸುವ ಮೂಲಕವೋ ಅಥವಾ ಹಿಂಸೆಯ ಮೂಲಕವೂ ಸ್ಥಾಪಿಸುವುದಾಗಿತ್ತು. ಹಾಗಾಗಿಯೇ ಅಲ್ಲಲ್ಲಿ ಆಮೀಷ ಇಲ್ಲವೇ ಭಯದ ವಾತಾವರಣ ಮೂಡಿಸಿ ಮತಾಂತರ ಮಾಡಿಸುತ್ತಿದ್ದರೆ, ಇನ್ನೂ ಹಲವೆಡೆ ಅಧುನಿಕ ರೀತಿಯಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮುಸಲ್ಮಾನ ಯುವಕರು ಪ್ರೀತಿಸುವ ನಾಟಕಮಾಡಿ ಅವರನ್ನು ಮುಸಲ್ಮಾನರಾಗಿ ಮತಾಂತರಿಸಿ ಮದುವೆಯಾಗಿ ಒಂದೆರಡು ಮಕ್ಕಳನ್ನು ಮಾಡಿ ಕೈ ಬಿಡುವುದನ್ನು ರೂಢಿ ಮಾಡಿಕೊಂಡಿದ್ದನ್ನು ಗಮನಿಸಿದ ಸರ್ಕಾರ 9/11 ದಾಳಿಯ ನಂತರ 2001 ರಲ್ಲಿ ಈ ಸಂಘಟನೆಯನ್ನು ನಿಷೇಧಿಸಿತು.

SDPI-pfiಹೋದೆಯಾ ಪಿಚಾಚಿ ಎಂದರೆ, ಬಂದೇ ಗವಾಕ್ಷೀಲೀ ಎನ್ನುವಂತೆ, 21 ಜೂನ್ 2009ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಎಂಬ ಹೆಸರಿನಲ್ಲಿ ಭಾರತೀಯ ರಾಜಕೀಯ ಪಕ್ಷವಾಗಿ ಸ್ಥಾಪಿತವಾದರೇ, PFI ಎಂಬ ಮತ್ತೊಂದು ಸಂಘಟನೆಯ ರೂಪದಲ್ಲಿ ತಮ್ಮನ್ನು ನ್ಯಾಯ, ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಜನರನ್ನು ಸಬಲೀಕರಣಗೊಳಿಸಲು ಬದ್ಧವಾಗಿರುವ ನವ-ಸಾಮಾಜಿಕ ಚಳುವಳಿ ಎಂದು ಹೇಳಿಕೊಳ್ಳುತ್ತದೆ. ಆದರೇ, ನ್ಯಾಷನಲ್ ವುಮೆನ್ಸ್ ಫ್ರಂಟ್ (NWF) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸೇರಿದಂತೆ ವಿವಿಧ ವಿಭಾಗಗಳನ್ನು ಹೊಂದಿರುವ ಈ ಸಂಘಟನೆ ಕೇರಳ ಮತ್ತು ಕರ್ನಾಟಕದಲ್ಲಿ ನೂರಾರು ಭಯೋತ್ಪಾದನ ಚಟುವಟಿಕೆಗಳಲ್ಲಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹಿಂಸಾತ್ಮಕ ಕಗ್ಗೊಲೆಯ ಮಸಿಯನ್ನು ಬಳಿದುಕೊಂಡಿದೆ.

PFI 2006 ರ ಸುಮಾರಿಗೆ ಕೇರಳದ ರಾಜಕೀಯ ರಂಗವನ್ನು ಪ್ರವೇಶಿಸಿದ್ದಲ್ಲದೇ ಅತ್ಯಂತ ವೇಗವಾಗಿ ಇತರ ರಾಜ್ಯಗಳಿಗೆ ಹರಡಿತು. ನಂತರ ಅದು ತನ್ನ ರಾಷ್ಟ್ರೀಯ ಪ್ರಧಾನ ಕಛೇರಿಯನ್ನು ಕೋಝಿಕೋಡ್‌ನಿಂದ ನವದೆಹಲಿಗೆ ಸ್ಥಳಾಂತರಿಸಿಕೊಂಡಿದ್ದಲ್ಲದೇ, ತನ್ನನ್ನು ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಸಮಾಜದ ದಲಿತ ಮತ್ತು ಬುಡಕಟ್ಟು ವರ್ಗಗಳ ವಿಮೋಚನೆಗಾಗಿ ರಾಷ್ಟ್ರೀಯ ಚಳುವಳಿ ಎಂದು ಬಿಂಬಿಸಿಕೊಂಡಿತ್ತಾದರೂ, PFI ಸಂಘಟನೆಯು ನಿಷೇಧಿತ ಸಿಮಿಯ ಹೊಸ ಮುಖವಾಗಿದ್ದು, ಮೂಲಭೂತವಾದಿ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಕೇರಳ ಪೊಲೀಸರ ಗುಪ್ತಚರ ವಿಭಾಗವು ಹೇಳಿದ್ದರೆ, ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಹಾ ಪಿಎಫ್‌ಐ ಅನ್ನು ಇಸ್ಲಾಮಿಸ್ಟ್ ಸಂಘಟನೆ ಎಂದು ಪದೇ ಪದೇ ಹೇಳುತ್ತಿದೆಯಲ್ಲದೇ, ಕೇರಳದಲ್ಲಿ ನಡೆದಿರುವ ಹಲವಾರು ರಾಜಕೀಯ ಕೊಲೆಗಳು ಮತ್ತು ಲವ್ ಜಿಹಾದ್ ಹಿಂದೆ ಇದೇ ಸಂಘಟನೆಯು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ ಎಂದೂ ದೂಷಿಸಿದೆ.

ಕೇವಲ ಭಯೋತ್ಪಾದನಾ ಚಟುವಟಿಕೆಯಲ್ಲದೇ, ಮುಸಲ್ಮಾನ ಧರ್ಮದ ಅಮಾಯಕ ಯುವಕರ ತಲೆ ಕೆಡಿಸಿ ಅವರಲ್ಲಿ ಮತಾಂಧತೆಯನ್ನು ತುಂಬಿ ಅವರಿಗೆ ರಹಸ್ಯವಾಗಿ ಶಸ್ತ್ರಾಸ್ತ್ರ, ಮದ್ದು ಗುಂಡುಗಳ ತಯಾರಿಕೆ ಮತ್ತು ಬಳಕೆಯ ಕುರಿತಾದ ತರಬೇತಿ ಶಿಬಿರಗಳನ್ನು ಆಯೋಜಿಸುವುದಲ್ಲದೇ, ಅವರನ್ನು ದೇಶದಲ್ಲಿ ನಡೆಸಲಾಗುವ ವಿವಿಧ ಕುಕೃತ್ಯಗಳಲ್ಲಿ ಬಳಸಿಕೊಳ್ಳುವುದಲ್ಲದೇ, ನಿಷೇಧಿತ ಸಂಘಟನೆಗಳಿಗೆ ಅವರನ್ನು ಸೇರಿಸಲು ಮುಂದಾಗಿರುವುದನ್ನೂ ಸಹಾ ತನಿಖಾಧಿಕಾರಿಗಳು ಗುರುತಿಸಿದ್ದಾರೆ.

pfi3ಹಾಗಾಗಿ ಇಂದು ಪಿಎಫ್‌ಐನ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ನಾಯಕರ ಮನೆಗಳ ಮೇಲೆ ದಾಳಿ ನಡೆಸಿ ಕೇರಳ (22), ಮಹಾರಾಷ್ಟ್ರ ಮತ್ತು ಕರ್ನಾಟಕ (ತಲಾ 20), ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಮಧ್ಯಪ್ರದೇಶ (4), ಪುದುಚೇರಿ (3), ತಮಿಳಿನಾಡು (10), ಉತ್ತರ ಪ್ರದೇಶ (8) ಮತ್ತು ರಾಜಸ್ಥಾನ (2) ಹೀಗೆ 100ಕ್ಕೂ ಹೆಚ್ಚು ಪಿಎಫ್‌ಐ ಸದಸ್ಯರನ್ನು ಬಂಧಿಸಿ ಅನೇಕ ಪ್ರಕರಣಗಳನ್ನು ದಾಖಲಿಸುವುದರ ಜೊತೆಗೆ, ಈ ಬಾರಿ ಮನಿ ಲಾಂಡರಿಂಗ್ ಪ್ರಕರಣದಡಿಯಲ್ಲಿಯೂ ಇಡಿ ಸಹಾ ಈ ಧಾಳಿಯ ಹಿಂದಿದೆ.

pfi1ಭಾರತ ಮತ್ತು ವಿದೇಶಗಳಲ್ಲಿ ಪಿಎಫ್‌ಐಗಾಗಿ ಅಕ್ರಮವಾಗಿ ನಿಧಿ ಸಂಗ್ರಹಿಸಿದ್ದಾರೆ ಎಂದು ಇಡಿ ಆರೋಪಿಸಿದ್ದಲ್ಲದೇ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಸುಮಾರು ₹34 ಲಕ್ಷವನ್ನು ಪಿಎಫ್‌ಐನ ಮುಂಭಾಗದ ಸಂಸ್ಥೆಯಾದ ರೆಹಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್) ಗೆ ವರ್ಗಾಯಿಸಿದರು. ಅದೇ ರೀತಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) – ಪಿಎಫ್‌ಐನ ರಾಜಕೀಯ ಮುಂಭಾಗದ ಅಧ್ಯಕ್ಷ ಎಂ.ಕೆ. ಫೈಜಿ ಅವರಿಗೆ ₹2 ಲಕ್ಷ ವರ್ಗಾಯಿಸಿದರು… ಅವರು ಭೂಗತ/ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ ಸುಮಾರು ₹19 ಕೋಟಿ ವರ್ಗಾಯಿಸಿರುವುದಲ್ಲದೇ, ಇದೇ ರೀತಿ ಲೆಕ್ಕಕ್ಕೇ ಸಿಗದ ಮತ್ತು ವಿವರಿಸಲಾಗದ ನಗದು ರೂಪದಲ್ಲಿ ಅಪರಾಧದ ಆದಾಯ ಮತ್ತು ವಿದೇಶಿ ಹಣವನ್ನು MVVP ನಲ್ಲಿ ನಿಲುಗಡೆ ಮಾಡಲಾಗಿದೆ ಮತ್ತು ಅದನ್ನು ಕಳಂಕರಹಿತವೆಂದು ಬಿಂಬಿಸಲಾಗಿದೆ ಎಂದು ED ತಿಳಿಸಿರುವ ಕಾರಣ, ಈ ಬಾರಿ ಈ ಎರಡೂ ಸಂಘನೆಗಳ ಮೇಲೆ ಕಾನೂನು ಕುಣಿಕೆ ಜೋರಾಗಿದ್ದು ಬಹುಶಃ ಅತ್ಯಂತ ಶೀಘ್ರದಲ್ಲಿಯೇ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವ ಕಾಲ ಸನ್ನಿಹಿತವಾಗಿದೆ ಎನಿಸುತ್ತಿದೆ.

ಆದರೇ ಕೇವಲ ನಿಷೇಧವೊಂದೇ ಈ ಸಮಸ್ಯೆಯನ್ನು ಬದಲಾಯಿಸಲಾರದು ಎಂದು ಈಗಾಗಲೇ SIMIಯನ್ನು ನಿಷೇಧಿಸಿದಾಗ PFI ಮತ್ತು SDPI ಮೂಲಕ ತಲೆ ಎತ್ತಿದ ಮತಾಂಧ ಸಂಘಟನೆಗಳು ಮತ್ತೊಮ್ಮೆ ಮತ್ತೊಂದು ಹೆಸರಿನಲ್ಲಿ ಖಂಡಿತವಾಗಿಯೂ ತಲೆ ಎತ್ತಿ ಮತ್ತಷ್ಟು ಉಗ್ರರೂಪದಲ್ಲಿ ಕಾರ್ಯಾಚರಣೆಯನ್ನೂ ಮಾಡಬಹುದು ಎಂಬ ಸಂದೇಹವೂ ಇರುವ ಕಾರಣ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನಡೆಸಿದಂತೆ ದೇಶಾದ್ಯಂತ ಧಾರ್ಮಿಕ ಭಾವನೆಗಳನ್ನೇ ತಲೆಗೆ ಮೆತ್ತುವ ಮದರಸಾಗಳನ್ನು ಮುಚ್ಚಿ ಅಲ್ಲಿ ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ರಾಷ್ಟ್ರೀಯ ಮನೋಭಾವನೆ ಬೆಳಸುವಂತಹ ಶಿಕ್ಷಣವನ್ನು ನೀಡುವ ಮೂಲಕ ಮೊಳಕೆಯಲ್ಲೇ ಭಯೋತ್ಪಾದನಾ ಮನೋಭಾವನೆಗಳನ್ನು ಚಿವುಟಿ ಹಾಕಬೇಕಾಗಿದೆ.

ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವ ಮತಾಂಧರಿಗೆ ಸುಮ್ಮನೇ ಮೀನಾಮೇಷ ಎಣಿಸದೇ ದಂಡಂ ದಶಗುಣಂ ಎನ್ನುವಂತೆ ಕಠಿಣ ಶಿಕ್ಷೆ (ಖಂಡಿತವಾಗಿಯೂ ಕರ್ನಾಟಕ ರಾಜ್ಯದ ಕಠಿಣ ಶಿಕ್ಷೆಯಲ್ಲಾ) ಅರ್ಥಾತ್ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಶಿಕ್ಷೆ ಕೊಟ್ಟರೆ ಆ ಶಿಕ್ಷೆಗೆ ಹೆದರಿಯಾದರೂ ಅಲ್ಪ್ಸ ಸ್ವಲ್ಪ ಭಯೋತ್ಪಾದನೆ ತಗ್ಗಬಹುದಾಗಿದೆ. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಒಂದು ದೇಶ, ಒಂದೇ ಕಾನೂನನ್ನು ಜಾರಿಗೆ ತಂದು, ಜಾತಿ, ಮತ, ಧರ್ಮದ ಬೇಧಭಾವವಿಲ್ಲದೇ, ದೇಶಾದ್ಯಂತ ಇರುವ ಸಕಲ ಭಾರತೀಯರಿಗೂ ಅನ್ವಯವಾಗುವಂತಹ ಕಾನೂನನ್ನು ತಂದಾಗಲೇ, ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಎಂಬ ನೀತಿ ಅಕ್ಷರಶಃ ಜಾರಿಗೆಯಾದಾಗಲೇ ಮಾತ್ರವೇ ಈ ದೇಶ ನೆಮ್ಮದಿಯಾಗಿ ಬಾಳುವಂತಾಗುತ್ತದೆ.

ಇಲ್ಲದೇ ಹೋದಲ್ಲಿ, ಈಗ ಮಾಡಿರುವ ಧಾಳಿ ಸುಮ್ಮನೇ ನದಿಯಲ್ಲಿ ಹುಣಸೇ ಹಣ್ಣನ್ನು ತೊಳೆದಂತಾಗಿ, ಸರ್ಕಾರ ಜಂಬ ಕೊಚ್ಚಿದ ಉತ್ತರ ಕುಮಾರನಂತೆ ಆರಂಭ ಶೂರತ್ವವಾಗಿ ಈಗಾಗಲೇ ಸಿಕ್ಕಿ ಕೊಂಡಿರುವ ಭಯೋತ್ಪಾದಕರು ತಿಳಿಸಿದಂತೆ ಸ್ವಾತ್ರಂತ್ಯ ದೊರಕಿ 100 ವರ್ಷಗಳಾಗುವ 2047ರ ಹೊತ್ತಿಗೆ ಈ ಹಿಂದೂಸ್ಥಾನ ಮತ್ತೊಂದು ಮುಸಲ್ಮಾನ ದೇಶವಾಗುದರಲ್ಲಿ ಯಾವುದೇ ಅನುಮಾನ ಇಲ್ಲದಂತಾಗಿ ಹೋಗುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ದೇಶದಲ್ಲಿ ಜಾತಿ,ಮತ, ಧರ್ಮ ಎಲ್ಲವೂ ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಮಾತ್ರವೇ ಆಚರಣೆಯಲ್ಲಿದ್ದು ಮನೆಯಿಂದ ಹೊರಗೆ ಬಂದ ಕೂಡಾಲೇ, ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆ ಬೆಳದಾಗ ಮಾತ್ರವೇ ಈ ದೇಶ ಉದ್ಧಾರವಾಗುತ್ತದೆ ಅಲ್ವೇ?

ಏನಂತಿರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s