ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

WhatsApp Image 2023-04-08 at 20.13.37ಕಳೆದ ಡಿಸೆಂಬರ್ ನಲ್ಲಿ ಮನ್ ಮೂಲ್ ಕಾರ್ಯಕ್ರಮಕ್ಕಾಗಿ ಮಂಡ್ಯಾಕ್ಕೆ ಆಗಮಿಸಿದ್ದ ದೇಶದ ಗೃಹಮಂತ್ರಿಗಳಾದ ಅಮಿತ್ ಶಾ, 1970ರಲ್ಲಿ ಕೇರಳ ಮೂಲದ ವರ್ಗೀಸ್_ಕುರಿಯನ್ ಗುಜರಾತಿನಲ್ಲಿ ಯಾವುದೇ ಜಾತಿ ಮತ ಪಂಥಗಳ ಯಾವದೇ ರಾಗ ದ್ವೇಷವಿರದೇ ಅಮೂಲ್ ಎಂಬ ಸಹಕಾರಿ ಸಂಘದ ಮೂಲಕ ಗುಜರಾತ್ ನಲ್ಲಿ ಕಳೆದ ಐದು ದಶಕಗಳಿಂದಲೂ ಈ ದೇಶದಲ್ಲಿ ಕ್ಷೀತ್ರಕ್ರಾಂತಿಯನ್ನುಂಟು ಮಾಡಿದ್ದನ್ನು ಹೊಗಳುತ್ತಾ, ಅದೇ ರೀತಿ ದೇಶದಲ್ಲಿ ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ KMF ನಂದಿನಿ ಎರಡೂ ಸಹಾ ಪರಸ್ಪರ ಸಹಯೋಗದೊಂದಿಗೆ ಹೋದಲ್ಲಿ ಈ ದೇಶದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಇನ್ನೂ ಹೆಚ್ಚಿನ ಲಾಭವಾಗುತ್ತದೆ ಎಂದರೆ ಹೋರತೂ, ಎಲ್ಲಿಯೂ ಸಹಾ ನಂದಿನಿ ಮತ್ತು ಅಮೂಲ್ ವಿಲೀನದ ಬಗ್ಗೆ ಮಾತನಾಡಲೇ ಇಲ್ಲಾ.

amul2ಚುನಾವಣಾ ಸಮಯದಲ್ಲಿ ತಮ್ಮ ರಾಜಕೀಯ ಲಾಭಕ್ಕೆ ಇಂತಹ ವಿಷಯಗಳಿಗೆ ಕಾಯುತ್ತಿರುವ ಕಾಂಗ್ರೇಸ್ ಮತ್ತು ಜೆಡಿಎಸ್, ಕನ್ನಡಿಗರ ಅಸ್ಮಿತೆಯಾದ ನಂದಿನಿಯನ್ನು ಗುಜರಾತ್ ಮೂಲದ ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡಲು ಆಡಳಿತ ಪಕ್ಷ ಬಿಕೆಪಿ ಸಂಚು ನಡೆಸುತ್ತಿದೆ ಎಂಬ ಸುಳ್ಳನ್ನು ಪ್ರಚಾರ ಮಾಡಲು ಮುಂದಾದರೆ, ಹೆಸರಿಗೆ ಕನ್ನಡ ಸಂಘಟನೆಗಳಾದರೂ, ಸರಿಯಾಗಿ ಕನ್ನಡವನ್ನು ಬರೆಯುವುದು ಬಿಡಿ ಎರಡು ಸಾಲು ಸ್ಪಷ್ಟವಾಗಿ ಮಾತನಾಡಲೂ ಬಾರದ, ತಮ್ಮ ಹೊಟ್ಟೆಯ ಮಾಡಿಗೆ ಹೆಗಲು ಮೇಲೆ ಹಳದಿ ಕೆಂಪು ಬಣ್ಣದ ಶಾಲುವನ್ನು ಹಾಕಿಕೊಂಡರೂ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಬಾಲಬಡುಕವಾಗಿರುವ ಕೆಲವು ಕನ್ನಡ ಪರ ಸಂಘಟನೆಗಳ ಹೋರಾಟಗಾರರೂ ಇದೇ ಸುಳ್ಳನ್ನು ವೈಭವೀಕರಿಸಲು ಮುಂದಾಗಿರುವುದು ವಿವಿಧ ರಾಜ್ಯಗಳ ಒಕ್ಕೂಟ ದೇಶದ ಭಾವೈಕ್ಯತೆಗೆ ಮಾರಕವೇ ಸರಿ.

WhatsApp Image 2023-04-08 at 12.00.10ಕಳೆದ ಹತ್ತಾರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ನಂದಿನಿ ಹಾಲಿಗೆ ಸರಿಸಮನಾಗಿ ತಮಿಳುನಾಡಿನ ಆರೋಕ್ಯ, ತಿರುಮಲ, ಮಿಲ್ಕಿಮಿಸ್ಟ್, ಹಟ್ಸನ್ ಅಲ್ಲದೇ, ಆಂದ್ರದ ಹೆರಿಟೇಜ್ ಮತ್ತು ತೆಲಂಗಾಣದ ದೊಡ್ಲಾ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದೆ. ಅದೇ ವಿವಿಧ ರಾಜ್ಯಗಳ ಬೆಣ್ಣೆ ಮತ್ತು ತುಪ್ಪಗಳೂ ಸಹಾ ನಮ್ಮ ರಾಜ್ಯದಲ್ಲಿ ನಂದಿನಿಯೊಂದಿಗೆ ಪೈಪೋಟಿನಡೆಸುತ್ತಿದೆ. ಅದೇ ರೀತಿಯಲ್ಲಿ ಹಾಲು ಮತ್ತು ಮೊದರಿನ ಹೊರತಾಗಿ ಅಮೂಲ್ ಸಂಸ್ಥೆಯ ಹಾಲಿನ ಬೆಣ್ಣೆ, ಪನ್ನೀರ್, ಐಸ್ ಕ್ರೀಮ್ (ನಂದಿಯವರೇ ಅಮೂಲ್ ಹೆಸರಿನಲ್ಲಿ ತಯಾರಿಸಿಕೊಡುತ್ತಾರೆ) ಈಗಾಗಲೇ ನಮ್ಮ ಕರ್ನಾಟಕದ ಮೂಲೆ ಮೂಲೆಯನ್ನೂ ತಲುಪಿದ್ದರೂ, ಕನ್ನಡಿಗರು ಕಡಿಮೆ ಬೆಲೆಯ ಮತ್ತು ಉತ್ತಮ ಗುಣಮಟ್ಟದ ನಂದಿನಿ ಉತ್ಪನ್ನಗಳಿಗೇ ಒಲವನ್ನು ತೋರಿ ನಂದಿನಯನ್ನೇ ನಂಬರ್ ಒನ್ ಮಾಡಿರುವಾಗ ಇವರೆಲ್ಲರ ಈ ಪರಿಯ ಗೋಳಾಟ ಕೇವಲ ಚುನಾವಣಾ ಗಿಮಿಕ್ ಎಂಬುದು ಸ್ಪಷ್ಟವಾಗಿ ಪ್ರತಿಯೊಬ್ಬ ಕನ್ನಡಿಗರಿಗೂ ಅರಿವಾಗುತ್ತಿದೆ.

WhatsApp Image 2023-04-08 at 12.07.32ನಿಜ ಹೇಳಬೇಕೆಂದರೆ, ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಆನ್ ಲೈನ್ ಇ-ಕಾರ್ಮಸ್ ಮೂಲಕ ಅಮುಲ್, ತನ್ನ ಹಾಲು, ಮೊಸರು ಸರಬರಾಜು ಮಾಡಲು ಮುಂದಾಗಿದ್ದು ರೀಟೈಲ್ ಮಾರಾಟ ಮಾಡುತ್ತಿಲ್ಲ. ತಮ್ಮ ಉತ್ಮನ್ನಗಳು ನಂದಿನಿ ಅಥವಾ ಕರ್ನಾಟಕ ಹಾಲು ಉತ್ಪಾದಕರ ಜತೆ ಪೈಪೋಟಿ ನಡೆಸುವುದಿಲ್ಲ ಎಂದು ಅಮುಲ್ ಕಂಪನಿ ಎಂಡಿ ಜಯನ್ ಮೆಹ್ತಾ ಸ್ಪಷ್ಟವಾಗಿ ತಿಳಿದಿದ್ದಾರೆ. ಇನ್ನು ನಂದಿನಿ ರೀತಿ ಬೂತ್, ಮಳಿಗೆ ತೆರೆಯುವುದಿಲ್ಲ ಎಂದಿದ್ದರೆ, ಇನ್ನು KMF ಅಧಿಕಾರಿಗಳೂ ಸಹಾ ಅಮೂಲ್ ಹಾಲು ಮತ್ತು ಮೊಸರಿನ ಬೆಲೆ ನಮ್ಮ ನಂದಿನಿಗಿಂತ ಹೆಚ್ಚಿನ ಬೆಲೆಯಾಗಿರುವ ಕಾರಣ ನಮ್ಮ ಕರ್ನಾಟಕದಲ್ಲಿ ಇದರಿಂದ ಯಾವುದೇ ತೊಂದರೆ ಇಲ್ಲಾ ಎಂದು ತಿಳಿಸಿದ್ದರೂ, ಚುನಾವಣಾ ಸಮಯದಲ್ಲಿ ಜನರನ್ನು ದಿಕ್ಕು ತಪ್ಪಿಸಲು ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಮುಂದಾಗಿದ್ದಾರೆ. ಕನ್ನಡ ಪರ ಹೋರಾಟಗಾರರು ಎಂದರೆ ಬಹುತೇಕರು ರೋಲ್ ಕಾಲ್ ಹೋರಾಟಗಾರರು ಎಂದೇ ಕನ್ನಡಿಗರು ಭಾವಿಸಿರುವುದಕ್ಕೆ ತಕ್ಕಂತೆ ನಂವೆಂಬರ್ ಕನ್ನಡ ಹೋರಾಟಗಾರರು ಈ ರಾಜಕೀಯ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದು ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತಂತೆ ಎನ್ನುವ ಗಾದೆ ಮಾತಿಗೆ ಪುಷ್ಟಿ ಕೊಡುವಂತಿದೆ.

ಇನ್ನು ಕಾಂಗ್ರೇಸ್ ಪಕ್ಷದ ಸಮರ್ಥಕರು ನಂದಿನಿಗೆ ವಿಷವುಣಿಸಲೆಂದೇ ಗುಜರಾತ್ ನ ಅಮುಲ್ ಹಾಲನ್ನು ಬಿಜೆಪಿಯವರು ಇಲ್ಲಿಗೆ ತರುತ್ತಿದ್ದಾರೆ ಎಂದು ಹೇಳುವ ಜೋತೆಗೆ ಇನ್ನೂ ಸ್ವಲ್ಪ ದಿನಗಳಲ್ಲೇ, ಕರ್ನಾಟಕ ಮೂಲದ ಬ್ಯಾಂಕುಗಳನ್ನು ಇತರೇ ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ವಿಲೀನ ಗೊಳಿಐದ ಹಾಗೆ ಅಮುಲ್ ನೊಂದಿಗೆ ನಂದಿನಿಯನ್ನು ವಿಲೀನ ಗೋಳಿಸುತ್ತಾರೆ ಎಂಬ ಸುಳ್ಳು ಸುದ್ದಿಯನ್ನು ಹರಡುಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ, ೬೦ರ ದಶಕದಲ್ಲಿ ಅಬಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳಾಗಿ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಆರಂಭಗೊಂಡಾಗ ಖಂಡಿತವಾಗಿಯೂ ಅವೆಲ್ಲವೂ ಕನ್ನಡಿಗರ ಮಾಲಿಕತ್ವದ್ದೇ ಆಗಿತ್ತು. ಆದರೆ 1969 ರಲ್ಲಿ ಅಂದಿನ ಕಾಂಗ್ರೇಸ್ ಪಕ್ಷದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಈ ಎಲ್ಲಾ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ಕೂಡಲೇ ಅವೆಲ್ಲಾ ಬ್ಯಾಂಕುಗಳು ತಮ್ಮ ಪ್ರಾದೇಶಿಕ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಳೆದುಕೊಂಡು ರಾಷ್ಟ್ರೀಕೃತಗೊಂಡು, ಬ್ಯಾಂಕುಗಳಲ್ಲಿ ಕೆಲಸಗಳು ಕೇವಲ ಕನ್ನಡಿಗಷ್ಟೇ ಸೀಮಿತವಾಗಿಲಲ್ದೇ ದೇಶದ ಎಲ್ಲಾ ಭಾಗದ ಜನರು ಸಹಾ ಬ್ಯಾಂಕಿಕ್ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿ ಉದ್ಯೋಗ ಗಿಟ್ಟಿಸಿಕೊಂಡ ನಂತರ ಈ ಎಲ್ಲಾ ಬ್ಯಾಂಕುಗಳು ದೇಶದ ಬ್ಯಾಂಕುಗಳಾಗಿ ಹೋದವು. ಅದೇ ರೀತಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ, ವಿಶ್ವೇಶ್ವರಯ್ಯನವರು ಸ್ಥಾಪಿಸಿದ್ದ SBM ಸಹಾ ರಾಷ್ಟ್ರೀಕೃತ ಗೊಂಡು ಕೆಲ ವರ್ಷಗಳ ಹಿಂದೆ ಉಳಿದ ರಾಜ್ಯಗಳ ಸ್ಟೇಟ್ ಬ್ಯಾಂಗ್ ನೊಂದಿಗೆ SBI ಬ್ಯಾಂಕಿನೊಂದಿಗೆ ವಿಲೀನವಾಗಿದೆ.

ಹಾಗಾಗಿಯೇ ಈ ಬ್ಯಾಂಕುಗಳ ಚಲನ್ ಪ್ರತಿಯಲ್ಲಿ ಇಂಗ್ಲೀಷ್ ಮತ್ತು ಹಿಂದಿಯ ಭಾಷೆ ಇದ್ದು ಸ್ಥಳೀಯ ಭಾಷೆ ಇಲ್ಲ ಮತ್ತು ಅಲ್ಲಿನ ಬ್ಯಾಂಕುಗಳಲ್ಲಿ ಕನ್ನಡ ಗೊತ್ತಿರದ ಅಧಿಕಾರಿಗಳೇ ಇರುತ್ತಾರೆ ಎಂದು ಇದೇ ಹೋರಾಟಗಾರರೇ ಹಲವು ದಶಕಗಳಿಂದಲೂ ಹೋರಾಟ ಮಾಡುತ್ತಿರುವುದನ್ನು ಮರೆತು ಈಗ ಅಮೂಲ್ ಹಾಲಿನ ಮಾರಾಟದೊಂದಿಗೆ ಈ ವಿಷಯವನ್ನು ತಳುಕು ಹಾಕುವುದು ಎಷ್ಟು ಸರಿ? ಹೀಗೆ ಹತ್ತು ಹಲವಾರು ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನ ಗೊಳಿಸಿ ಐದಾರು ಬ್ಯಾಂಕುಗಳನ್ನು ಮಾಡಿದ ಕಾರಣ ನಮ್ಮ ಸರ್ಕಾರಕ್ಕೆ ಹಣಕಾಸಿನ ವಹಿವಾಟಿನ ಲೆಕ್ಕಾಚಾರಗಳು ಸುಲಭವಾಗಿ ಸಿಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಬ್ಯಾಂಕುಗಳು ಅಧಿಕವಾದ ಲಾಭವನ್ನು ಗಳಿಸುತ್ತಿವೆ. ಕಳೆದ ವರ್ಷ ₹70 ಇದ್ದ ಈ ಬ್ಯಾಂಕುಗಳ ಷೇರು ಬೆಲೆ ₹160ಕ್ಕೂ ಜಿಗಿದು ಈಗ ₹130 ಆಸುಪಾಸಿನಲ್ಲಿರುವುದನ್ನು ಏಕೆ ಹೇಳುವುದಿಲ್ಲ. ಅದೇ ರೀತಿಯಲ್ಲಿ ಚಲನ್ ಗಳಲ್ಲಿ ಕನ್ನಡ ಇಲ್ಲಾ ಎಂದು ದೂರುವವರು ಎಷ್ಟು ಮಂದಿ ಕನ್ನಡಲ್ಲಿ ಚಲನ್ ತುಂಬುತ್ತಾಋಎ ಮತ್ತು ಎಷ್ಟು ಜನರ ಅಧಿಕೃತ ಸಹಿ ಕನ್ನಡದಲ್ಲಿದೆ ಎಂಬುದನ್ನೂ ಸಹಾ ವಿವರಿಸಿದಲ್ಲಿ ಅವರ ಕನ್ನಡದ ಪ್ರೇಮ ಜನರಿಗೆ ಗೊತ್ತಾಗುತ್ತದೆ.

WhatsApp Image 2023-04-08 at 17.07.01ಇನ್ನು ಇಂದು ನಂದಿನಿ ಬಗ್ಗೆ ಗಂಟಲು ಹರಿದುಕೊಳ್ಳುತ್ತಿರುವವರೇ ತಾವು ಅಧಿಕಾರಕ್ಕೆ ಬಂದರೆ ಗೋಹತ್ಯಾ ನಿಷೇಧದ ಕಾನೂನನ್ನು ಬದಲಿಸುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳುತ್ತಿರುವಾಗ, ಗೋವು ಮತ್ತು ಗೋ ಉತ್ಮನ್ನಗಳ ಬಗ್ಗೆ ಅವರ ಕಾಳಜಿ ಅರ್ಥವಾಗುತ್ತದೆ. ಇನ್ನು ಉತ್ತರ ಭಾರತ ಎಂದು ಉರಿದು ಕೊಳ್ಳುವ ಉತ್ತರ ಕುಮಾರರು ರಾಜಕೀಯ ಪಕ್ಷಗಳ ಎಂಜಿಲು ಬೀದಿಗಿಳಿಯುವುದನ್ನು ಬಿಟ್ಟು ಎಲ್ಲಿಯಾದರೂ ತಮ್ಮ ಸಂಘಟನೆಯಿಂದ ಒಂದು ಗೋಶಾಲೆಯನ್ನು ಆರಂಭಿಸುವುದಾಗಲೀ, ಮಕ್ಕಳಿಲ್ಲ ಎಂದು ಮುಚ್ಚುತ್ತಿರುವ ಕನ್ನಡಶಾಲೆಗಳನ್ನು ದತ್ತು ತೆಗೆದುಕೊಂಡು ಅದನ್ನು ಉದ್ಧಾರ ಮಾಡುವುದಾಗಲೀ, ಶಿಥಿಲವಾಗಿರುವ ಕನ್ನಡ ಶಾಲೆಗಳನ್ನು ದುರಸ್ತಿ ಮಾಡುವ ಕೆಲವನ್ನು ಮಾಡಿದ್ದಾರೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಬಲ್ಕ್ ಬ್ಲಾಸ್ಟ್ ಆದದ್ದಕ್ಕೇ ಕುಳಿತಲ್ಲಿಯೇ ..ಚ್ಚೆ ಮಾಡಿಕೊಂಡ ಓಲಾಟಗಾರ, ಬಹಿರಂಗವಾಗಿಯೇ ತನ್ನ ಮಕ್ಕಳು ಇಂಗ್ಲೀಷ್ ಶಾಲೆಯಲ್ಲಿಯೇ ಓದಿಸುತ್ತಿದ್ದೇನೆ ಎಂದರೆ, ಇನ್ನು ಅ ಕಾರ ಹಕಾರ ಬಾರದ ನಾಯಿಗೆ ಹಾಕುವ ಚೈನಿನಂತೆ ಕುತ್ತಿಗೆ, ಕೈ ಮೈ ತುಂಬಾ ಚೆನ್ನವನ್ನು ಧರಿಸುವ ಮತ್ತೊಬ ಉಟ್ಟು ಖಣ್ಣಢ ಓಲಾಟಗಾರರು ತಮ್ಮ ಮೇಲಿರುವ ಕ್ರಿಮಿನಲ್ ಆರೋಪಗಳಿಂದಾಗಿ ವಿದೇಶದಲ್ಲಿ ಓದುತ್ತಿರುವ ತಮ್ಮ ಮಗಳನ್ನು ನೋಡಲು ಸಕಾರ ವೀಸಾ ಕೊಡುತ್ತಿಲ್ಲಾ ಎಂದು ಅವಲತ್ತು ಮಾಡಿಕೊಂಡಿರುವುದನ್ನು ನೋಡಿದಾಗಲೇ ಇವರ ಕನ್ನಡ ಪ್ರೇಮ, ಪನ್ನಡದ ಅಸ್ತಿತ್ವ ಮತ್ತು ಕನ್ನಡ ಅಸ್ಮಿತೆ ಎಲ್ಲವೂ ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಭಾವಿ ನೋಡುವಂತಿದೆ ಎನ್ನುವುದು ಸ್ಪಷ್ಟವಾಗುತ್ತದೆ.

WhatsApp Image 2023-04-08 at 17.40.53ಕರ್ನಾಟಕದಲ್ಲಿ ನಂದಿನಿಯ ಜೊತೆ ಅನೇಕ ವರ್ಷಗಳಿಂದ ಈಗಾಗಲೇ ತಿಳಿಸಿರುವಂತೆ ವಿವಿಧ ರಾಜ್ಯದ ಆರೋಕ್ಯ, ತಿರುಮಲ, ಹಟ್ಸನ್, ಹೆರಿಟೇಜ್ ಮುಂತಾದ ಹಾಲುಗಳು ಇದ್ದರೆ ಇನ್ನು ಉತ್ತರ ಕರ್ನಾಟಕದಲ್ಲಿ ಮಹಾರಾಷ್ಟ್ರದ ಗೌಳಿಗಳು ಮತ್ತು ಅವರ ಬ್ರಾಂಡ್ ಗಳದ್ದೇ ಕಾರೋಬಾರು. ಅದೇ ರೀತಿ 2014ರಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದಾಗ ನಮ್ಮ KMF ಉತ್ಪನ್ನಗಳು ದೇಶದ ವಿವಿಧ ರಾಜ್ಯಗಳಿಗೆ ವಿಸ್ತಾರ ಮಾಡುವ ಸಲುವಾಗಿ ಅಪರವಾದ ಹಣ ಕೊಟ್ಟು ತಮಿಳು ನಟಿ ಶ್ರೀಯ ಶರಣ್ ಅವರನ್ನು ದಕ್ಷಿಣ ಭಾರತದ ರಾಜ್ಯಗಳಿಗೆ KMF ರಾಯಭಾರಿಯನ್ನಾಗಿ ಮಾಡಿದಾಗ ಅಲ್ಲಿನ ಜನರು ಇದೇ ರೀತಿ ಕೂಗು ಹಾಕಿದ್ದರೇ? ಇಂದಿಗೂ ಸಹಾ ತಿರುಪತಿಯ ಲಾಡುಗಳನ್ನು ತಯಾರಿಸಲು ನಂದಿನ ತುಪ್ಪವನ್ನೇ ಬಳುಸುತ್ತಾರೆ. ಆಂಧ್ರದ ಅಂಗನವಾಡಿ ಮಕ್ಕಳು ನಂದಿನಿ ಹಾಲನ್ನೇ ಕುಡಿಯುತ್ತಾರೆ. ಕಾಶ್ಮೀರದಲ್ಲಿ ಗಡಿಯನ್ನು ಕಾಯುತ್ತಿರುವ ನಮ್ಮ ಯೋಧರುಸಹಾ ನಂದಿನ ಹಾಲನ್ನೇ ಸೇವಿಸುತ್ತಾರೆ. ಹೀಗೆ ದೇಶಾದ್ಯಂತ ನಮ್ಮ ಕನ್ನಡಿಗರ ಅಸ್ಮಿತೆಯಾದ KMF ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೊಂಡಿರುವಾಗ, ಕೇವಲ ಕನ್ನಡಿಗರಿಗೆ ಮಾತ್ರ ಅದು ಸೀಮಿತವಾಗಿರಬೇಕೆಂದು ಹೋರಾಟ ನೆಡೆಸುವುದು ಆ ರೀತಿಯ ಹೋರಾಟಗಾರರ ಸಂಕುಚಿತ ಮನೋಭಾವನೆಯನ್ನು ತೋರಿಸುತ್ತದೆ ಅಲ್ಲವೇ? ನಮ್ಮ ನಂದಿನಿ ಉತ್ಪನ್ನಗಳ ವಿರುದ್ದ ಬೇರೇ ರಾಜ್ಯದವರು ಯಾವುದೇ ರೀತಿಯ ಹೋರಾಟಗಳನ್ನು ನಡೆಸಿಲ್ಲದಿರುವಾಗ ಈ ರೀತಿಯ ಕೂಗು ಚುನಾವಣಾ ಗಿಮಿಕ್ ಅಲ್ಲದೇ ಮತ್ತೇನು?

WhatsApp Image 2023-04-09 at 13.32.32ವ್ಯಾಪಾರದಲ್ಲಿ ಮಾರುಕಟ್ಟೆಯ ವಿಸ್ತರಣೆ ವ್ಯವಹಾರಗಳ ಒಂದು ಭಾಗ. ಹಾಗೆ ಎಲ್ಲಾ ಉತ್ಪನ್ನಗಳು ಒಂದೆಡೆಯಲ್ಲಿ ಸಿಗುವಂತಾದಾಗ ಗ್ರಾಹಕರು ತಮಗೆ ಯಾವುದು ಇಷ್ಟವೋ ಅದನ್ನು ಕೊಳ್ಳು ಕೊಳ್ಳುತ್ತಾರೆ. ಈ ಲೇಖನವನ್ನೂ ನಂದಿನ್ ಬಟರ್ ಸ್ಕಾಚ್ ಐಸ್ ಕ್ರೀಂ ಕೊಂಡು ತಂದು ಅದನ್ನು ಸವಿಯುತ್ತಲೇ ಬರೆಯುತ್ತಿದ್ದೇನೆ. ಈ ರೀತಿಯಾಗಿ ಗ್ರಾಹಕರ ಮನಸ್ಥಿತಿಯನ್ನು ಅದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? ಈ ವಿಚಾರದಲ್ಲಿ ಅನಗತ್ಯವಾಗಿ ಅಸಹ್ಯಕರ ಕೀಳು ಮಟ್ಟದ ರಾಜಕೀಯ ಮಾಡಿದಷ್ಟೂ ಅದೇ ರಾಜಕೀಯ ಪಕ್ಷಗಳು ಮತ್ತು ಓಲಾಟಗಾರು ಜನರಿಂದ ಹೆಚ್ಚಿನ ಮಟ್ಟದಲ್ಲಿ ಧಿಕ್ಕರಿಸಲ್ಪಡುತ್ತಾರೆ ಎನ್ನುವುದು ಕಠು ಸತ್ಯ.

ಈ ಹಿಂದೆ ಪರಭಾಷಾ ಚಿತ್ರಗಳಿಂದಾಗಿ ಕನ್ನಡ ಚಿತ್ರರಂಗ ಹಾಳಾಗುತ್ತಿದೆ ಎಂದು ಇದೇ ರೀತಿ ಬಾಯಿ ಬಡಿದು ಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಕನ್ನಡದ ಚಿತ್ರರಂಗಕ್ಕೂ ಹೊಸಾ ಹೊಸಾ ಪ್ರತಿಭೆಗಳು ಬಂದು ತಮ್ಮ ಪ್ರತಿಭೆಯ ಮೂಲಕ ಕೇವಲ ಕರ್ನಾಟಕ ಮತ್ತು ದೇಶವಲ್ಲದೇ, ಇಡೀ ಪ್ರಪಂಚವೇ ಮೆಚ್ಚುವಂತಹ ಸಿನಿಮಾಗಳನ್ನು ನಿರ್ಮಿಸಿ ಕರ್ನಾಟಕ ಮತ್ತು ಕನ್ನಡಿಗರ ಘನತೆಯನ್ನು ವಿಶ್ವಮಟ್ಟಕ್ಕೆ ಏರಿಸಿದ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇರುವಾಗ, ಅಮೂಲ್ ಆಗಲಿ ಆರೋಕ್ಯ, ದೊಡ್ಲಾ, ಹೆರೆಟೇಜ್, ಹಟ್ಸನ್ ಇನ್ನೂ ಹತ್ತಾರು ಬ್ರಾಂಡ್ ಗಳು ಬಂದರೂ ಗುಣ ಮಟ್ಟ ಉತೃಷ್ಟವಾಗಿದ್ದು ಬೆಲೆ ಗ್ರಾಹಕರ ಕೈಗೆ ಎಟುಕುವಂತಿದ್ದರೆ, ನಂದಿನಿ ಉತ್ಪನ್ನಗಳನ್ನು ಯಾರೂ ಸಹಾ ಅಲುಗಿಸಲಾಗದು ಅಲ್ವೇ? ಚುನಾವಣೆ ಐದು ವರ್ಷಕ್ಕೊಮ್ಮೆ ಬರುತ್ತದೆ ಹೋಗುತ್ತದೆ. ಅದಕ್ಕಾಗಿ ವರ್ಷದ 365 ದಿನವೂ ಉಪಯೋಗಿಸುವ ಹಾಲಿನ ವಿಷಯದಲ್ಲಿ ರಾಜ್ಯದ ಜನರಿಗೆ ಹಾಲಾಹಲವನ್ನು ಉಣಿಸುವುದು ಅಕ್ಷಮ್ಯ ಅಪರಾಧ. ಅಂತಹವರಿಗೆ ಧಿಕ್ಕಾರವಿರಲಿ.

ಏನಂತೀರಿ?
ನಿಮ್ಮವನೇ ಉಮಾಸುತ

2 thoughts on “ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

  1. ಕಾಂಗ್ರೆಸ್ ನ ನೀಚ ರಾಜಕಾರಣವೇ ಹೀಗೆ. ಜನರಿಗೆ ದಿಕ್ಕು ತಪ್ಪಿಸಿ ಹಣ, ಹೆಂಡ, ತೋಳುಬಲ ಮತ್ತೆ ಕೆಲವು ಹೊಲಸು ಮಾರ್ಗಗಳಲ್ಲಿ ಅಧಿಕಾರ ಹಿಡಿಯುವ ಈ ಭ್ರಷ್ಟರು ಉಳಿಯುವುದೇ ಅಲ್ಪ ಸಂಖ್ಯಾತರ ಮತಗಳಿಂದ. ವಿದ್ಯಾವಂತರ, ಮೇಲ್ಜಾತಿಯವರ ಮತಗಳನ್ನು ದಶಕಗಳ ಹಿಂದೆಯೇ ಕಳೆದುಕೊಂಡಿರುವ ಕಾಂಗ್ರೆಸ್ ಕಂಗಲಾಗಿದ್ದು ಅಧಿಕಾರ ಹಿಡಿಯಲು ಏನು ಬೇಕಾದರೂ ಮಾಡುವ ಹಂತ ತಲುಪಿದೆ. ಅಮುಲ್ ನಮ್ಮ ದೇಶದಲ್ಲಿ 4-5 ದಶಕಗಳಿಂದ ಮನೆಮಾತಾಗಿದ್ದು ಬೇಡವಂದು ಬೊಗಳುವ ಇವರು ತಮ್ಮ ಮಕ್ಕಳಿಗೆ ಅಮುಲ್ ಉತ್ಪನ್ನ ಗಳನ್ನು ನೀಡಿಲ್ಲವೇ? ಅಮುಲ್ ಬೇಡ ಎನ್ನುವ ಈ ನೀಚರು ತಮಿಳು ನಾಡಿನಿಂದ ಬರುವ ಬಿಳಿಯ ವಿಷ ಬೇಡವೆಂದು ಬೀದಿಗಿಳಿದಿದ್ದಾರೆಯೇ? ಅಂಬಾನಿ, ಅದಾನಿ ಬೇಡವೆನ್ನುವ ಈ ನೀಚರಿಗೆ ನೆಸ್ಲೆ ಕಾಣುವುದಿಲ್ಲವೇ? ನಾವು ಪ್ರತಿದಿನ ಉಪಯೋಗಿಸುವ ಪೇಸ್ಟ್, ಸೋಪ್, ಶೇವಿಂಗ್ ಕ್ರೀಮ್, ಬ್ಲೇಡ್, ಆರೋಗ್ಯ ಉಪಕರಣಗಳಿಂದಾಗಿ ಅದೆಷ್ಟು ವಿದೇಶಿ ವಿನಿಮಯ ಹಣ ಹೊರಹೋಗುವುದೆಮ್ಬ ಕಲ್ಪನೆ ಈ ಅಲ್ಪ ವಿದ್ಯಾವಂತ ಚಿಲ್ಲರೆ ಗಳಿಗೆ ಇದೆಯೇ? ದಿನಕ್ಕೊಂದು ವಿಷಯ ಎತ್ತಿಕೊಂಡು ಮಾತಾಡ್ತಾರೆ ಅಷ್ಟೆ. ಹಿಂದೇಲಿ ಆನೆ ಬೀದೀಲಿ ಹೋದರೆ ಸಾವಿರ ನಾಯಿ ಬೊಗಳ್ತಾವೆ ಅಂತ. ಆ ಸಮಾಚಾರ ಅಷ್ಟೇ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s